Categories
ಮಾಧ್ಯಮ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಇಂದೂಧರ ಹೊನ್ನಾಪುರ

ಪತ್ರಿಕಾ ಶಿಕ್ಷಣ ಪಡೆದು ಪ್ರಜಾವಾಣಿ ಪತ್ರಿಕೆಯ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದ ಇಂದೂಧರ ಹೊನ್ನಾಪುರ ಅವರು ತಮ್ಮ ತನಿಖಾ ವರದಿಗಳ ಮೂಲಕ ಹೆಸರು ಮಾಡಿದವರು. ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರರಲ್ಲೊಬ್ಬರಾಗಿದ್ದು ಹಲವಾರು ತನಿಖಾ ಹಾಗೂ ಮಾನವೀಯ ವರದಿಗಳನ್ನು ಸಿದ್ದಪಡಿಸಿದ ಹೆಗ್ಗಳಿಕೆ ಇವರದು.
ಮುಂಗಾರು ದೈನಿಕದ ಸಂಪಾದಕರಾಗಿದ್ದು, ನಂತರ ಸುದ್ದಿ ಸಂಗಾತಿ ವಾರಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಇಂದೂಧರ ಹೊನ್ನಾಪುರ ಅವರು ಪ್ರಸ್ತುತ
ಸಂವಾದ ಮಾಸಿಕದ ಸಂಪಾದಕರು.
ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿರುವ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.