ಇಕ್ಕಲಾರದ ಕೈ ಎಂಜಲು
ಚಿಕ್ಕ ಮಕ್ಕಳು ಅಳುತಾವೇ
ಹೋಗೋ ದಾಸಯ್ಯ |
ಮನೆಯ ತಾರಿಸುತ್ತೀನಿ ಮಡಕೆಯ ತೊಳೆಯುತೀನಿ
ಮನೆಯೊಳಗೆ ಯಾರಿಲ್ಲ ಹೇಗೋ ದಾಸಯ್ಯ
ತೊಡೆಯ ಮೇಗಳ ಕೂಸು ಮಲೆಯನ್ನುಣ್ಣು
ತಲಿದೆ ಬಹಳ ಕಟಪಟೆ ಮಾಡಬೇಡ
ಹೋಗೋ ದಾಸಯ್ಯ
ಆಟದ ಮೇಗಳ ಅಕ್ಕಿ ತೆಗೆಯಲು ಬೇಕು
ಹೊಟ್ಟೆ ನೋಯುತ್ತಲಿದೆ ಹೋಗೋ ದಾಸಯ್ಯ
ಈಶದ ಕಾಶಿಗೆ ದವಸದ ನಾ ತಂದೆ
ಕೂಸಿಗೆ ಸಾಲದು ಹೋಗೋ ದಾಸಯ್ಯ |
ಆಸೆಕಾರಳು ನಾನು ಭಾಷೆಕಾರರು ನೀವು
ಶೇಷಾದ್ರಿ ಪುರಂದರ ವಿಠಲನೇ ಕಾಯುವ
ಹೋಗೋ ದಾಸಯ್ಯ || ಇಕ್ಕಲಾರದ ಕೈ ಎಂಜಲು ||
Leave A Comment