ಹಾಯಲಿಂಗಮ್ಮನ ವೃತ್ತಾಂತ

ಶಿವನೆ ನಮ್ಮಯಾ ದ್ಯಾವರು ಬಂದರ ಬನ್ನೀರೆ
ಸ್ವಾಮಿ ನಮ್ಮಯ ದ್ಯಾವರು ಬಂದಾರು ಬನ್ನೀರೆ
ಮಾರಗ ಮಾರಗಂದಾರ ಯಾವಲಿ ಇರುವುತಾವೇನ
ಏನಮ್ಮ ದೇವರ ಮಾರಗ ಎಕಚಿಂತಿಯಾ ಊರಾಗ
ಎಕಚಿಂತಿಯಾ ಊರಾಗೆ ಹತ್ತುರಿಗೆಂಬ ಅರಮನೆ
ಹತ್ತರಗಿ ಎಂಬೋ ಅರಮನೆ ಹೈಯಳೆಂಬ ಗುರುಮನೆ
ಹಾಯಲಿಂಗಮ್ಮನಲ್ಲೇಳ ಎಕಚಿಂತಿಯ ದೇಸಾಯನ
ಎಕಚಿಂತಿಯ ದೇಸಾಯನ ಮನಿಗಿ ಹಾಯಲಿಂಗಮ್ಮನ ಕೊಟ್ಟಾರ
ನಾಗರಪಂಚಮಿ ಮುಂದೇನೆ ದೇಸಾಯಿ ತಯ್ಯಾರಾದನ
ದೇಸಾಯಿ ತಯ್ಯಾರಾದನೆ ಹೊತ್ತೇರಿ ಮುಂಜಾಳಿ ಎದ್ದಾರ
ಜಾಮ ಜಳಕವ ಮಾಡ್ಯಾನೆ ನೇಮ ನಿಗತಿ ಮಾಡ್ಯಾನ
ಸಣ್ಣನೆ ಸುರದುಟ್ಟಾನೆ ಬಣ್ಣನೆ ಬಿಗಿದುಟ್ಟಾನ
ಉಂಡಾನೆ ಬಾಳುಟ್ಟಾನೆ ಬಾಯಿಲಿ ಸೀತಾಳ ಉಗಳ್ಯಾನ
ನಂದಿನ ಬಯಲಿಗ ಕಟ್ಯಾನೆ ಮಗ್ಗಿಯಮುಟ್ಟ ಬಿಗದಾನ
ಗೆಜ್ಜಿಲ್ಯಾವಳಿ ಕಟ್ಟ್ಯಾನೆ ಮೂಗಿಗ ಮುಗದಾಣಿ ಹಾಕ್ಯಾನ
ಎಕಚಿಂತಿಯ ದೇಸಾಯಿನ ಮನಿಯಾಗ ಬುತ್ತಿ ಕಟ್ಟುತಾರೇನ
ಬುತ್ತಿ ತರವುತಾರೇನೆ ಎತ್ತಿನ ಮ್ಯಾಲ ಹಾಕ್ಯಾರ
ಅಲ್ಯಾನ ಇಲ್ಯಾನೇನೆ ಊರ ಧಾಟಿ ಬಂದಾನ
ಊರ ಧಾಟಿ ಬಂದಾನೆ ಎತ್ತಿನ ಮ್ಯಾಲ ಹಾಯ್ದನ
ಕೋಳೂರ ಮ್ಯಾಲ ಹಾಯ್ದನೆ ಶಹಾಪೂರ ಮ್ಯಾಲೆ ಬಂದಾನ
ಮರ್ತ್ಯದ ಮೇಲ ಹಾಯ್ದನೆ ಮಾವನೂರ ಮ್ಯಾಲೆ ಹಾಯ್ದನ
ಎಕಚಿಂತಿ ದೇಸಾಯನೆ ಮರ್ತ್ಯಕ ಹೋಗುತಾನೇನ
ಸೊನ್ನದ ಭೂಮ್ಯಾಗ ವೈದಾರೆ ಹಂಗುರಗಿ ಎಂಬ ಅರಮನೆ
ಹಂಗುರಗಿ ಎಂಬ ಅರಮನೆ ಗೌಡರ ಮನಿಗ ಬಂದಾನ
ಹಂಗುರಗಿ ಗೌಡರ ಮನಿಯಾಗ ಅಂಗಳದೊಳಗ ನಿಂತಾನ
ಎತ್ತು ಕಟ್ಟುತಾರೇನೆ ಬುತ್ತಿ ಇಳುವುತಾರೇನ
ಮಗ್ಗಿಯ ಮುಟ್ಟ ಬಿಚ್ಯಾರ ಗೆಜ್ಜಿಯಲ್ಯಾವಳಿ ತಗದಾರ
ಹಾಯಲಿಂಗಮ್ಮನು ಬಂದಾಳೆ ಗಿಂಡೀಲಿ ನೀರ ಹಿಡದಾಳ
ಗಿಂಡಲಿ ನೀರ ಹಿಡದಾಳ ಮಾವಗ ನೀರ ಕೊಟ್ಟಾಳ
ಎಕಚಿಂತಿ ದೇಸಾಯರು ಲ್ಯಾಯದ ಪಡಸಾಲಿ ಒಳಗೇನ
ಲ್ಯಾಯದ ಪಡಸಾಲಿ ಒಳಗೇನ ಕುಂದಲ ಹಚ್ಚಿದ ಚೌಕೇನ
ಕುಂದಲ ಹಚ್ಚಿದ ಚೌಕಿಯ ಮ್ಯಾಲ ತಾವಂದು ಮೂರತಿ ಆದಾನ
ಏನಮ್ಮ ಗುರುವಿನ ಮಾರಗ ಎಕಚಿಂತಿ ದೇಸಾಯನೆ
ಎಕಚಿಂತೆ  ದೇಸಾಯನೆ ಹೊತ್ತಾನೆ ಗಮನಾದವ
ಉಂಡಾರೆ ಬಾಳುಟ್ಟಾರೆ ಮಲ್ಲನಮನಗೂತಾರೇನ
ಹಾಯಲಿಂಗಮ್ಮನಲ್ಲೇಳ ಅಣ್ಣದೇರು ತಮ್ಮದೇರ ಹೇಳ್ಯಾರ
ತಾಯಿ ತಂದಿ ಹೇಳ್ಯಾರ ನಾಳಿಗ ಹೋಗಲಿಬೇಕವ್ವ
ಬುತ್ತಿ ತಂದಾರಂದಾನೆ ಎತ್ತ ಬಂದಾವಂದಾರ
ಹಂಗುರಿಗಿ ಗೌಡರಮಗಳ ಸಿಂಗಾರ ಮಾಡುತಾರೇನಯ್ಯ
ಹೊತ್ತೇರಿ ಮುಂಜಾನಿ ಎದ್ದಾರೆ ಹಾಯಲಿಂಗಮ್ಮಗ ಹೇಳ್ಯಾರ
ಬಾರ ಬಾರ ನಿಂಗಮ್ಮ ಮಂಡಿ ಎರಿತೇವಂದಾರ
ಮಂಡಿ ಎರಿತೇವಂದಾರ ಜಳಕ ಮಾಡಲೀಬೇಕವ್ವ
ಜಳಕ ಮಾಡುತಾಳೇನೆ ಗಚ್ಚಿನ ಬಚ್ಚಲಕ ಹೋಗ್ಯಾಳ
ಹೆಚ್ಚಿನ ಜಳಕ ಮಾಡ್ಯಾಳೆ ಮಡಿ ಕಳದ ಮಡಿ ಉಟ್ಟಾಳ
ಮಡಿ ಕಳದ ಮಡಿ ಉಟ್ಟಾಳೆ ಹಣಿಯಲಿ ಕಂಕುಮವಿಟ್ಟಾಳ
ಹಲ್ಲಿಗ ಜಾಚೇಲಿ ಹಚ್ಚ್ಯಾಳೆ ಉಂಡಾಳೆ ಬಾಳುಟ್ಟಾಳ
ಎಕಚಿಂತಿ ದೇಸಾಯರು ತಯ್ಯಾರಾಗುತಾರೇನ
ನಂದಿ ಬಯಲಿಗ ಹಿಡದಾರ ಮಗ್ಗಿಮುಟ್ಟ ಬಿಗದಾರ
ಮಗ್ಗಿಮುಟ್ಟ ಬಿಗದಾರೆ ಕುತನಿಜೂಲ ಹಾಕ್ಯಾರ
ಗೆಜ್ಜಿಲ್ಯಾವಳಿ ಕಟ್ಯಾರೆ ಕೊಂಬಿಗ ಕೊಂಬಣಸ ಹಾಕ್ಯಾರ
ಕಾಲಿಗ ಲಿಂಗ ಕಟ್ಯಾರ ಕೋಡಿಗ ಲಿಂಗ ಕಟ್ಯಾರ
ಕೋಡಿಗ ಲಿಂಗ ಕಟ್ಯಾರೆ ಬುತ್ತಿಯ ತಂದು ಹೇರ‍್ಯಾರ
ಎಕಚಿಂತಿಯ ದೇಸಾಯಿನೆ ಎತ್ತು ಬಯಲಿಗೆ ಬಿಟ್ಟಾರ
ಹಂಗುರಗಿಯ ಗೌಡನ ಮಗಳು ಹಾಯಲಿಂಗಮ್ಮನ ನಮ್ಮಯ್ಯಾ
ಉಡಿಯಕ್ಕಿ ಹಾಕುತಾರೇನ ದೇವರ ಜಗುಲಿಗ ಹೋಗ್ಯಾಳ
ದೇವರ ಜಗುಲಿಗ ಹೋಗ್ಯಾಳೆ ಹಿರಿಯರಿಗೆ ಹ್ಯಾಂಗ ನಡಸೀಗೆ
ಹಿರಿಯರಿಗ ಹ್ಯಾಂಗ ನಡಸೀಗೆ ಕಿರಿಯರಿಗ ಹಾಂಗ ನಡಸಯ್ಯಾ
ತಾಯಿ ಪಾದಕ ಎರಗ್ಯಾಳ ತಂದಿಯ ಪಾದಕ ಎರಗ್ಯಾಳ
ಮಂಡಿಲಿ ಹಸ್ತ ಇಟ್ಟಾರೆ ಹೋಗಿ ಬಾರಂತ ಹೇಳ್ಯಾರ
ಆಶೀರ್ವಾದ ಕೊಟ್ಟಾರೆ ಆಶೀರೋಜನ ಮಾಡ್ಯಾರ
ಅತ್ತಿನಾದುನಿದೇರಪ್ಪ ಕಾಲಿಗಿ ಬೀಳುತಾರೇನ
ಅತ್ತಿಯ ಮನಿಯ ಸೊಸ್ತೇರ ತೌರಮನಿಯ ಹೆಣ್ಣುಮಕ್ಕಾಳ
ತೌರಮನಿಯ ಹೆಣ್ಣಮಕ್ಕಳ ಉಡಿಯಕ್ಕಿ ಹಾಕುತಾರೇನ
ಹಾಯನಿಂಗಮ್ಮಗಲ್ಲೇಳ ಉಡಿಯಕ್ಕಿ ತುಂಬುತಾರೇನ
ಅತ್ತಿಯ ಮನಿಯ ಸೊಸ್ತೇರ ತೌರಮನಿಯ ಹೆಣ್ಣುಮಕ್ಕಾಳ
ರೈತರಾಣೆರ ಮಕ್ಕಾಳೇ ಅಕ್ಕಾನ ಕಳವುತ ಬಂದಾರ
ಹಂಗುರಗಿಯ ಗೌಡರ ಮಗಳು ಹಾಯನಿಂಗಮ್ಮನಂದರ
ಹಾಯ ನಿಂಗಮ್ಮನಲ್ಲೇಳ ಬೆನ್ನತ್ತಿ ಬರುತಾರೇನ
ಬೆನ್ನತ್ತಿ ಬರುತಾರೇನ ಅಗಸಿಯ ಒಳಗೇ ನಿಂತಾರ
ಊರ ಸುತ್ತಿವನ ಬಾಲೇನ ಊರ ಮುಂದಿನವನ ಪಾದೇನ
ಊರ ಮುಂದಿವರ ಪಾದೇನ ಬಾಲಹಣಮನ ಗುಡಿಯೇನ
ಬಾಲ ಹಣವನ ಗುಡಿಯಾಗೆ ಹಾಯಲಿಂಗಮ್ಮ ಹೋದಾಳ
ಹಾಯಲಿಂಗಮ್ಮ ಹೋದರೆ ಪಾದಕ ಹೊಂದುತಾರೇನ
ಹಿರಿಯರಿಗೆ ಹ್ಯಾಂಗ ನಡಸೀಗ ಕಿರಿಯರಿಗೆ ಹಂಗೆ ನಡಸಯ್ಯ
ಹಾಯಲಿಂಗಮ್ಮನಲ್ಲೇಳ ಹೊಂದುಸಿ ಕೈಯ ಮುಗದಾಳ
ಹೊಂದಿಸಿ ಕೈಯ ಮುಗದಾಳೆ ಹಿಂದ ಸರದ ಇಳದಾಳ
ಅಗಸೀಯ ಒಳಗ ನಿಂತಾಳ ರೈತರಾಣ್ಯಾರ ಮಕ್ಕಾಳ
ಅಣ್ಣನ ಮಡದಿ ಬಂದಾಳೆ ತಮ್ಮನ ಮಡದಿ ಬಂದಾಳ
ಅತ್ತಿಯ ಮನಿಯ ಸೊಸ್ತೆರ ತೌರಮನಿಯ ಹೆಣ್ಣಮಕ್ಕಳ
ರೈತರಾಣ್ಯಾರ ಮಕ್ಕಳೆ ವಾರಗಿ ವಾರಿಗಿ ಗೆಳೆತೇರ
ಸರ್ವರು ಎಲ್ಲರೂ ಕೂಡ್ಯಾರೆ ಲಿಂಗಮ್ಮನ ಪಾದ ತೊಳದಾರ
ಲಿಂಗಮ್ಮನ ಪಾದ ತೊಳದಾರೆ ಪಾದಕ ಹೊಂದುತಾರೇನ
ಹಾಯಲಿಂಗಮ್ಮನಲ್ಲೇಳ ಮಂಡೀಲಿ ಹಸ್ತ ಇಟ್ಟಾಳ
ಹಿರಿಯರಿಗ ಹ್ಯಾಂಗ ನಡಸೀಗೆ ಕಿರಿಯರಿಗೆ ಹಂಗೆ ನಡಸಯ್ಯ
ಎಕಚಿಂತಿಯ ದೇಸಾಯರೋ ಎತ್ತಾ ಹೊಡಿಯುತ್ತಿದ್ದಾರ
ಹಾಯಲಿಂಗಮ್ಮನಲ್ಲೇಳ ಅಗಸಿಯ ಹೊರಗೆ ಬಂದಾಳ
ಊರ ಮುಂದ ಧಾರೇನೆ ರಾಯಿಮಾರಗ ಹಿಡದಾಳ
ರಾಯಿಮಾರಗ ಹಿಡಿದಾಳೆ ನಿಂಬಿಯ ಭಾಂಯಿ ಮುಂದೇನ
ನಿಂಬಿಯ ಭಾಂಯಿ ಮುಂದೇನೆ ಹೊಂದಿಸಿ ಕೈಯ ಮುಗದಾಳ
ಅರಿಯದವರಿಗಲ್ಲೇನ ಕರಿಯಾಕಲ್ಲನಾದೇನ
ನಮ್ಮಗೊರವಿನ ಕಲ್ಲೇನೆ ಭಂಡಾರ ಹಚ್ಚಿದ ಕಲ್ಲೇನ
ಭಂಡಾರ ಹಚ್ಚಿದ ಕಲ್ಲೇನ ಎಣ್ಣಿ ಮದ್ದಣ ಕಲ್ಲೇನ
ನಿಂಬಿಯ ಬಾಂಯಿ ಮುಂದೇನೆ ಹೊಂದಿಸಿ ಕೈಯ ಮುಗದಾಳ
ಹಿರಿಯರಿಗೆ ಹ್ಯಾಂಗ ನಡೆಸೀಗೆ ಕಿರಿಯರಿಗೆ ಹಂಗೇ ನಡಸಯ್ಯ
ನಿಂಬಿಯಾ ಭಾಂಯನ ಲಿಂಗಣ್ಣ ನಿಪ್ಯಾದಕಲ್ಲ ಆದೆಣ್ಣ
ನಿಪ್ಯಾದಕಲ್ಲ ಆದೇನೆ ಲಿಂಬಿಯ ಭಾಂಯಿಗ ನಿಜವಣ್ಣ
ನಿಂಬಿಯ ಬಾಂಯಿಗ ನಿಜವಣ್ಣ ಹಂಗುರಿಗಿ ನಿಂಗಮ್ಮ ನಿಜವಣ್ಣಾ
ಹಂಗುರಗಿ ನಿಂಗಮ್ಮ ನಿಜವಣ್ಣ ಜಗುಲಿ ಗುಡ್ಡದೊಳಗೇನೆ
ಜಗುಲಿ ಗುಡ್ಡದೊಳಗೇನೆ ಅಕ್ಕಮ್ಮಾಯಿ ತಮ್ಮನ
ಅಕ್ಕಮ್ಮಾಯಿ ತಮ್ಮನೆ ಚಿಕ್ಕ ಬೀರಣ ದೇವರ
ಹಿರಿಯರಿಗ ಹ್ಯಾಂಗ ನಡೆಸೀಗ ಕಿರಿಯರಿಗೆ ಹಂಗೆ ನಡಸಯ್ಯಾ
ಹೊಂದುಸಿ ಕೈಯ ಮುಗದಾಳೆ ಮಂದಕ ಹೋಗುತಾಳೇನ
ಊರ ಧಾಟಿ ಬಂದಾಳೆ ಎಕಚಿಂತಿ ದೇಸಾಯರ
ಏಕಚಿಂತಿಯ ದೇಸಾಯರೆ ಎತ್ತ ಹಿಡಿಯುತಾರೇನ
ಹಾಯಲಿಂಗಮ್ಮ ಬಂದಾಳೆ ಎತ್ತಿನ ಮ್ಯಾಲ ಕುಂತಾಳ
ಎಕಚಿಂತಿಯ ದೇಸಾಯನೆ ಎತ್ತು ಹೊಡಿಯುತ್ತಿದ್ದಾನೆ
ಹೋಗುತ ಹೊಗುತಾಲೇಳ ಎಲ್ಲಿಗ ಬರುವುತಾರೇನ
ಮಾವನೂರ ಭೂಮಿಗೆ ಎತ್ತ ಬರುವುತಾವೇನ
ಊರ ಬಂದಾವಂದಾಳೆ ಎತ್ತ ಇಳಿಯುತಾಳೇನ
ಎತ್ತ ಇಳಿಯುತಾಳೇನ ಎಕಚಿಂತಿ ದೇಸಾಯರ
ಎಕಚಿಂತಿಯ ದೇಸಾಯರೆ ಎತ್ತಾ ಹೊಡಿಯುತ್ತಿದ್ದಾನ
ಹಾಯನಿಂಗಮ್ಮ ಇಳದಾಳ ಉಡಿಯಾ ಜಗ್ಗುತಾವೇನ
ಉಡಿಯಾ ಜಗ್ತುತಾವೇನ ಹಿಂದಕಾಗುತಾಳೇನ
ಹಿಂದಕಾಗುತಾಳೇನ ಉಡಿಯಾಗ ಕೈಯ ಹಾಕ್ಯಾಳ
ಭಂಡಾರ ಹಚ್ಚಿದ ಕಲ್ಲೇನೆ ಎಣ್ಣಿ ಬಣ್ಣದ ಕಲ್ಲೇನ
ಮೂರು ಕಣ್ಣೀನ ಹುತ್ತಿಗೆ ಲಿಂಗಮ್ಮ ಬರವುತಾಳೇನ
ಲಿಂಗಮ್ಮ ಬರವುತಾಳೇನ ಅಲ್ಲೇ ಕುಂದ್ರುತಾಳೇನ
ಉಡಿಯಕ ಕೈಯ್ಯ ಇಟ್ಟಳೇ ಭಂಡಾರ ಹಚ್ಚಿದ ಕಲ್ಲೇನ
ಅರಿಯದವರಿಗಲ್ಲಪ್ಪ ಕರಿಯಾಕಲ್ಲ ಆದಿಗೆ
ನನ್ನಗ ಬಾರೋ ತಮ್ಮಯ್ಯ ವರವಿನ ಕಲ್ಲನಾದಿಗೆ
ಭಂಡಾರ ಹಚ್ಚಿದ ಕಲ್ಲೇನ ಹುತ್ತಿನಗಡ್ಡಿ ಒಳಗೇನ
ಹುತ್ತಿನಗಡ್ಡಿ ಒಳಗೇನ ಇಲ್ಲೇ ಇರಬೇಕಂದಾಳ
ಮಾವನೂರ ಭೂಮ್ಯಾಗ ಧರ್ಮರಾಯ ಆಗಯ್ಯ
ಧರ್ಮರಾಯ ಆಗಪ್ಪ ಇಲ್ಲೇ ಇರವಲಿಬೇಕಪ್ಪ
ಹೊಂದಿಸಿ ಕೈಯ ಮುಗದಾಳೆ ರಾಯಿಮಾರಗ ಹಿಡದಾಳ
ಊರ ದಾಟಿ ಬಂದಾಳೆ ರಾಯಿಮಾರಗ ಹಿಡದಾಳ
ಎಕಚಿಂತಿಯ ದೇಸಾಯರೆ ಎತ್ತ ಹೊಡಿಯುತ್ತಿದ್ದಾರ
ಊರ ಧಾಟಿ ಬಂದಾಳೆ ಎತ್ತ ನಿಲ್ಕಿ ಮಾಡ್ಯಾರ
ಹಾಯಲಿಂಗಮ್ಮನಲ್ಲೇಳ ಎತ್ತಿನ ಮ್ಯಾಲೆ ಕುಂತಾಳ
ಎತ್ತಿನ ಮ್ಯಾಲೆ ಕುಂತಾಳೆ ಎಕಚಿಂತಿ ದೇಸಾಯರ
ಎಕಚಿಂತಿ ದೇಸಾಯರ ಎತ್ತ ಹೊಡಿಯುತ್ತಿದ್ದಾನ
ಎತ್ತ ಹೊಡಿಯುತ್ತಿದ್ದಾನೆ ರಾಯಿಮಾರಗ ಹಿಡದಾರ
ಹೋಗುತ ಹೋಗುತಲ್ಲೇಳ ಎಲ್ಲಿಗ ಬರುವುತಾರೇನ
ಅಲ್ಲ್ಯಾರ ಇಲ್ಲ್ಯಾರೇನ ಏಳವೂರ ಭೂಮಿಗ
ಏಳವೂರ ಭೂಮಿಗೆ ಎತ್ತ ಬರುವುತಾವೇನ
ಊರ ಬಂದಾವಂದಾಳೆ ಎತ್ತು ಇಳದಾಳೇನಯ್ಯ
ಎತ್ತ ಇಳಿಯುತಾಳೇನ ಎಕಚಿಂತಿಯ ದೇಸಾಯರ
ಎಕಚಿಂತಿಯ ದೇಸಾಯರೆ ಎತ್ತು ಹೊಡಿಯತ್ತಿದ್ದಾನ
ಎತ್ತು ಹೊಡಿಯುತ್ತಿದ್ದಾರೆ ಹಾಯಲಿಂಗಮ್ಮ ಇಳದಾಳ
ಹಾಯಲಿಂಗಮ್ಮ ಇಳದಾರೆ ಉಡಿಯಾ ಜಗ್ಗುತಾವೇನ
ಉಡಿಯಾ ಜಗ್ಗುತಾವೇನ ಉಡಿಯಾಗ ಕೈಯಾ ಹಾಕ್ಯಾಳ
ಎಣ್ಣಿ ಬಣ್ಣದ ಕಲ್ಲೇನ ಭಂಡಾರ ಹತ್ತಿದ ಕಲ್ಲೇನ
ಭಂಡಾರ ಹತ್ತಿದ ಕಲ್ಲೇನ ಅರಿದವರಿಗಂದಾಳ
ಅರಿಯದವರಿಗಂದಾಳೆ ಕರಿಯಾ ಕಲ್ಲನಾದಿಗೆ
ಬಾರೋ ಬಾರೋ ನನ್ನಪ್ಪ ನನ್ನ ಭಂಡಾರ ಕಲ್ಲೇನ
ಬಾರೋ ಬಾರೋ ನನ್ನಯ್ಯ ನನ್ನಗ ವರವಿನ ಕಲ್ಲೇನ
ನನ್ನಗ ವರವಿನ ಕಲ್ಲೇನ ಮೂರ ಕಲ್ಲಿನ ಹುತ್ತಿಗೆ
ಲಿಂಗಮ್ಮ ಹಿಂದಕಾದಳೆ ಹುತ್ತಿನ ಗಡ್ಡಿಗ ಬಂದಾಳ
ಹುತ್ತಿನ ಗಡ್ಡಿಗ ಬಂದಾಳೆ ಅಲ್ಲೇ ಕುಂದ್ರುತಾಳೇನ
ಅಲ್ಲೆ ಕುಂದ್ರುತಾಳೇನ ಉಡಿಯಾಗ ಕೈಯ ಹಾಕ್ಯಾಳೆ
ಉಡಿಯಾಗ ಕೈಯ ಹಾಕ್ಯಾಳೆ ಭಂಡಾರಚ್ಚಿದ ಕಲ್ಲೇನ
ನನ್ನಗ ವರವಿನ ಕಲ್ಲೇನ ಕೈಯಾಗ ಕಲ್ಲ ಹಿಡದಾಳ
ಏಳವೂರದೊಳಗೇನೆ ಸಿದ್ದರಾಯಿ ಆಗಲೀಬೇಕಯ್ಯ
ಸಿದ್ದರಾಯಿ ಆಗಲಿಬೇಕಪ್ಪ ಇಲ್ಲೇ ಇರಬೇಕಂದಾಳ
ಇಲ್ಲೇ ಇರಬೇಕಂದಾಳೆ ಹುತ್ತಿನಗಡ್ಡಿ ಒಳಗೇನ
ಹುತ್ತಿನಗಡ್ಡಿಗ ಬಂದಾಳೆ ಅಲ್ಲೇ ಕುಂದ್ರುತಾಳೇನ
ಅಲ್ಲೆ ಕುಂದ್ರುತಾಳೇನ ಉಡಿಯಾಗ ಕೈಯ ಹಾಕ್ಯಾಳ
ಉಡಿಯಾಗ ಕೈಯ ಹಾಕ್ಯಾಳೆ ಭಂಡಾರಚ್ಚಿದ ಕಲ್ಲೇನ
ನನ್ನಗ ವರವಿನ ಕಲ್ಲೇನ ಕೈಯಾಗ ಕಲ್ಲ ಹಿಡದಾಳ
ಏಳಂಪೂರದೊಳಗೇನೆ ಸಿದ್ದರಾಯಿ ಆಗಲಿಬೇಕಯ್ಯ
ಸಿದ್ದರಾಯಿ ಆಗಲಿಬೇಕಪ್ಪ ಇಲ್ಲೇ ಇರಬೇಕಂದಾಳ
ಇಲ್ಲೇ ಇರಬೇಕಂದಾಳೆ ಹುತ್ತಿನಗಡ್ಡಿ ಒಳಗೇನ
ಹುತ್ತಿನಗಡ್ಡಿಗ ಬಂದಾಳೆ ಅಲ್ಲೇ ಕುಂದ್ರುತಾಳೇನ
ಅಲ್ಲೆ ಕುಂದ್ರುತಾಳೇನ ಉಡಿಯಾಗ ಕೈಯ ಹಾಕ್ಯಾಳ
ಉಡಿಯಾಗ ಕೈಯ ಹಾಕ್ಯಾಳೆ ಭಂಡಾರಚ್ಚಿದ ಕಲ್ಲೇನ
ನನ್ನಗ ವರವಿನ ಕಲ್ಲೇನ ಕೈಯಾಗ ಕಲ್ಲ ಹಿಡದಾಳ
ಏಳಂಪೂರದೊಳಗೇನೆ ಸಿದ್ದರಾಯಿ ಆಗಲಿಬೇಕಯ್ಯ
ಸಿದ್ದರಾಯಿ ಅಗಲಿಬೇಕಪ್ಪ ಇಲ್ಲೇ ಇರಬೇಕಂದಾಳ
ಇಲ್ಲೇ ಇರಬೇಕಂದಾಳೆ ಹುತ್ತಿನಗಡ್ಡಿ ಒಳಗೇನ
ಹುತ್ತಿನಗಡ್ಡಿ ಒಳಗೇನ ಭಂಡಾರ ಹತ್ತಿದ ಕಲ್ಲೇನ
ಭಂಡಾರ ಹತ್ತಿದ ಕಲ್ಲೇನ ಎಣ್ಣಿ ಬಣ್ಣದ ಕಲ್ಲೇನ
ಅರಿಯದವರಿಗಲ್ಲೇಳ ಕರಿಯಾಕಲ್ಲ ಬಿಟ್ಟಾಳ
ಸಿದ್ದರಾಯನಾಗಪ್ಪ ಇಲ್ಲೇ ಇರುವಲಿಬೇಕಪ್ಪ
ಇಲ್ಲೇ ಇರಬಲಿಬೇಕಪ್ಪ ಹೊಂದಿಸಿ ಕೈಯ ಮುಗದಾಳ
ಹೊಂದಿಸಿ ಕೈಯ ಮುಗದಾಳ ರಾಯಿಮಾರಗ ಹಿಡದಾಳ
ಊರ ಧಾಟಿ ಬಂದಾಳೆ ಎತ್ತಿನ ಮ್ಯಾಲ ಕುಂತಾಳ
ಕೊಡಚಿಗ ವನ ಭೂಮ್ಯಾಗ ಎಕಚಿಂತಿ ದೇಸಾಯ್ಯನ
ಎಕಚಿಂತಿಯ ದೇಸಾಯರ ಎತ್ತ ಹೊಡಿಯುತ್ತಿದ್ದಾರ
ಹಾಯಲಿಂಗಮ್ಮನಲ್ಲೇಳ ಉಡಿಯಾ ಜಗ್ಗುತಾವೇನ
ಉಡಿಯಾಗ ಕೈಯ ಹಾಕ್ಯಾಳೆ ಎಣ್ಣಿ ಬಣ್ಣದ ಕಲ್ಲೇನ
ಅರಿಯದವರಿಗ ಕರಿಯಕಲ್ಲ ಭಂಡಾರ ಹಚ್ಚಿದಕಲ್ಲೇನ
ನನ್ನ ವರವಿನ ಕಲ್ಲೇನ ಎಣ್ಣಿ ಬಣ್ಣದ ಕಲ್ಲೇನ
ಮೂರ ಕಣ್ಣಿನ ಹುತ್ತಿಗೆ ಲಿಂಗಮ್ಮ ಬರುವುತಾಳೇನ
ಭಂಡಾರ ಹಚ್ಚಿದ ಕಲ್ಲೇನ ಊಡಿಯಾಗ ತಗದಾಳೇನಯ್ಯ
ಮೂರ ಕಣ್ಣಿನ ಹುತ್ತಿನೊಳಗ ಭೂತಾಳಿಸಿದ್ದನಾಗಯ್ಯ
ಕೊಡಚಿಗ ವನಭೂಮ್ಯಾಗೆ ಭೂತಾಳಿಸಿದ್ದನಾಗಯ್ಯ
ಭೂತಾಳಿಸಿದ್ದನಾಗಪ್ಪ ಇಲ್ಲೇ ಇರಬೇಕಂದಾಳ
ರಾಯಿಮಾರಗ ಹಿಡದಾಳೆ ರವ್ವಣಿ ಮಾಡುತಾಳೇನ
ಊರ ಧಾಟಿ ಬಂದಾಳೆ ಎತ್ತಿನ ಮ್ಯಾಲ ಕುಂತಾಳ
ಎಕಚಿಂತಿಯ ದೇಸಾಯನೆ ಎತ್ತ ಹೊಡಿಯುತ್ತಿದ್ದನ
ಹೋಗುತ ಹೋಗುತಲ್ಲೇಳ ಎಲ್ಲಿಗ ಹೋಗುತಾವೇನ
ಊರಬಂದಾವಂದಾಳ ಲಿಂಗಮ್ಮ ಎತ್ತ ಇಳದಾಳೇನ
ಎಕಚಿಂತಿಯ ದೇಸಾಯನ ಎತ್ತ ಹೊಡಿಯುತ್ತಿದ್ದಾನ
ಹಾಯಲಿಂಗಮ್ಮನ ಉಡಿಯಾಗೆ ಭಂಡಾರ ಹಚ್ಚಿದ ಕಲ್ಲೇನ
ಎಣ್ಣಿ ಬಣ್ಣದ ಕಲ್ಲೇನ ಅರಿಯದವರಿಗಲ್ಲೇನ
ಅರಿಯದವರಿಗಿ ಕರಿಯಾಕಲ್ಲ ನನ್ನಗ ವರವಿನ ಕಲ್ಲಯ್ಯ
ಮೂರ ಕಣ್ಣಿನ ಹುತ್ತಿಗೆ ಲಿಂಗಮ್ಮ ಬರುವುತಾಳೇನ
ಉಡಿಯಾಗ ಕೈಯಾ ಇಟ್ಟಾಳೆ ಎಣ್ಣಿ ಬಣ್ಣದ ಕಲ್ಲೇನ
ಎಣ್ಣಿ ಬಣ್ಣದ ಕಲ್ಲೇನೆ ಕೈಯಾಗ ಹಿಡದಾಳೇನಯ್ಯ
ಮದ್ದರಕಿ ವನ ಭೂಮ್ಯಾಗೆ ಬಸವಣ್ಣಪ್ಪನಂತಾಳ
ಬಸವಣ್ಣನಾಗೆಪ್ಪ ಇಲ್ಲೇ ಇರುವಲಿಬೇಕಯ್ಯ
ಹಂಗುರಗಿ ಗೌಡರ ಮಗಳ ಹೊಂದಿಸಿ ಕೈಯ ಮುಗದಾಳ
ಹಿರಿಯರಿಗ ಹ್ಯಾಂಗ ನಡಸಿಗೆ ಕಿರಿಯರಿಗೆ ಹಂಗೇ ನಡಸಯ್ಯ
ಹೊಂದಿಸಿ ಕೈಯ ಮುಗದಾಳೆ ರಾಯಿಮಾರಗ ಹಿಡದಾಳ
ಊರ ಧಾಟಿ ಬಂದಾಳೆ ಎತ್ತಿನ ಮ್ಯಾಲ ಕುಂತಾಳ
ಏಕಚಿಂತಿಯ ದೇಸಾಯರೆ ಎತ್ತ ಹೊಡಿಯುತ್ತಿದ್ದಾರ
ಅಲ್ಲ್ಯಾರ ಇಲ್ಲ್ಯಾರೇನ ಎಲ್ಲಿಗ ಬರುವುತಾರೇನ
ಎಲ್ಲಿಗ ಬರುವುತಾರೇನೆ ಶಿವಪುರ ಮ್ಯಾಲ ಹಾಯ್ದರ
ಶಿವಪುರ ಮ್ಯಾಲ ಹಾಯ್ದರ ಶಹಾಪುರ ಮ್ಯಾಲ ಬಂದಾರ
ಶಹಾಪುರ ಮ್ಯಾಲ ಧಾಟ್ಯಾರೆ ಕನ್ಯಾಕೋಳೂರ ಮ್ಯಾಲೇನ
ರಾಯಿಮಾರಗ ಹಿಡದಾರ ಎಲ್ಲಿಗ ಬರುವುತಾರೇನ
ಹೊನ್ನ ಹೈಯಾಳ ಭೂಮ್ಯಾಗ ಊರ ಬಂದಾವಂದಾಳ
ಊರ ಬಂದಾವಂದಾಳ ಲಿಂಗಮ್ಮ ಎತ್ತಾ ಇಳದಾಳೇನಯ್ಯ
ಎತ್ತ ಇಳಿಯುತಾಳೇನೆ ಉಡಿಯಾ ಜಗ್ಗುತಾವೇನ
ಎಕಚಿಂತಿಯ ದೇಸಾಯರೆ ಎತ್ತ ಹೊಡಿಯುತ್ತಿದ್ದಾರ
ಉಡಿಯಾಗ ಕೈಯ ಹಾಕ್ಯಾಳ ಭಂಡಾರ ಹಚ್ಚಿದ ಕಲ್ಲೇನ
ಎಣ್ಣಿ ಬಣ್ಣದ ಕಲ್ಲೇನ ಕರಿಯಾ ಕಲ್ಲನಾದವ
ಅರಿಯಾದವರಿಗಿ ಕರಿಯಾ ಕಲ್ಲ ನನ್ನಗ ವರವಿನ ಕಲ್ಲೇನ
ಮೂರಕಣ್ಣಿನ ಹುತ್ತಿಗೆ ಲಿಂಗಮ್ಮ ಬರುವುತಾಳೇನ
ಲಿಂಗಮ್ಮ ಬರುವುತಾಳೇನ ಹುತ್ತಿನ ಗಡ್ಡಿಗಿ ಕೈಯಯಿಟ್ಟಾಳ
ಭಂಡಾರ ಹಚ್ಚಿದ ಕಲ್ಲೇನ ಎಣ್ಣಿ ಬಣ್ಣದ ಕಲ್ಲೇನ
ಎಣ್ಣಿ ಬಣ್ಣದ ಕಲ್ಲೇನ ಹುತ್ತಿನ ಗಡ್ಡಿ ಒಳಗೇನ
ಹುತ್ತಿನ ಗಡ್ಡಿ ಒಳಗೇನೆ ಭಂಡಾರ ಹಚ್ಚಿದ ಕಲ್ಲೇನ
ಸಗರಗಡ್ಡಿ ಬಾ ಸಣ್ಣಳ್ಳಿ ಮುತ್ತು ನನ್ನ ವಾರಿದುರಬಿನ ಹೈಯಾಳೆ
ವಾರಿದುರಬಿನ ಹೈಯಾಳೆ ಗಜ್ಜ ಎಳದ ಲಿಂಗನೇ
ಗಜ್ಜ ಎಳದ ಲಿಂಗೇನೆ ಇಲ್ಲೇ ಇರಬೇಕಂದಾಳ
ಹೊಂದುಸಿ ಕೈಯ ಮುಗದಾಳೆ ಹಿರಿಯರಿಗ ಹ್ಯಾಂಗ ನಡಸೀಗೆ
ಹಿರಿಯರಿಗ ಹ್ಯಾಂಗ ನಡಸೀಗೆ ಕಿರಿಯರಿಗೆ ಹಂಗೇ ನಡಸಯ್ಯ
ಹೊಂದುಸಿ ಕೈಯ ಮುಗದಾಳ ರಾಯಿಮಾರಗ ಹಿಡದಾಳ
ಮುಂದಕ ಬರುವುತಾಳೇನೆ ಎತ್ತಿನ ಮ್ಯಾಲ ಕುಂತಾಳ
ಎಕಚಿಂತಿಯ ದೇಸಾಯರೆ ಎತ್ತ ಹೊಡಿಯುತ್ತಿದ್ದಾರ

ಎತ್ತ ಹೊಡಿಯುತಾನೇನೆ ರಾಯಿಮಾರಗ ಹಿಡದಾನ
ರಾಯಿಮಾರಗ ಹಿಡಿದಾನೆ ಹರಿಯಾ ಹಳ್ಳ ಬಂದಾವ
ಹರಿಯಾ ಹಳ್ಳ ಬಂದಾವೆ ಊರ ಬಂದಾವೇನಯ್ಯ
ರಾಯರ ಓಣಿಲಿ ಹಾಯ್ದರ ರಡ್ಡೇರ ಮನಿಯ ಮುಂದೇನ
ಚಂದನ ಚೌಡಿಲಿ ಹಾಯ್ದರೆ ಮಂದನ ಮಳಗೀಲಿ ಬಂದಾರ
ಎಕಚಿಂತಿ ದೇಸಾಯರೆ ಮನಿಗೆ ಬರುವುತಾರೇನ
ಮನಿಗಿ ಬರುವುತಾರೇನ ಗಿಂಡಿಲಿ ನೀರ ಕೊಟ್ಟಾರ
ಗಿಂಡಿಲಿ ನೀರ ಕೊಟ್ಟಾರೆ ಸೀತಾಳ ಮಕಮಜ್ಜನ
ಸೀತಾಳ ಶಿವಮಜ್ಜಲೆ ನೀರಿಲೆ ಮಕಮಜ್ಜನ
ಸೀತಾಳ ಶಿವಮಜ್ಜಲೆ ನೀರಿಲೆ ಶಿವಮಜ್ಜಲ
ಎತ್ತು ಕಟ್ಟುತಾರೇನೆ ಮಗ್ಗಿಯಮುಟ್ಟ ಬಿಚ್ಯಾರ
ಕುತನಿಯ ಜೂಲ ತಗದಾರೆ ಎತ್ತಿಗ ಪತ್ತರಿ ಹಾಕ್ತಾರ
ಲ್ಯಾಯದ ಪಡಸಾಲಿ ಒಳಗೇನೆ ತಾವಂದು ಮೂರತಿ ಆದರ
ತಾವಂದು ಮೂರುತಿ ಆದರೆ ಕಟ್ಟಿದ ಬುತ್ತಿ ಬಿಚ್ಯಾರ
ಉಂಡಾರೆ ಭಾಳುಟ್ಟಾರ ಬಾಯಲಿ ಸೀತಾಳ ಉಗಳ್ಯಾರ
ಬಾಯಿಲಿ ಸೀತಾಳ ಉಗಳ್ಯಾರೆ ಲ್ಯಾಯದ ಪಡಸಾಲಿ ಒಳಗೇನ
ಹಾಯಲಿಂಗಮ್ಮನ ಪುರುಷನ ಹೊಲದಾಗಿರತಾನೇನಯ್ಯ
ಅತ್ತಿಗಿ ನಾದಿನಿದೇರ ಸಂಗಟ ಕೂಡೂತಾಳೇನ
ಉಂಡಾರೆ ಬಾಳುಟ್ಟಾರೆ ಮಲ್ಲನಮನಗೂತಾಳೇನ
ಮೀಸಲ ನಿದ್ದಿ ನಡದಾವೆ ಹಬ್ಬನೆ ಹವರಾತರೆ
ಹಬ್ಬನೆ ಹವರಾತರೆ ಸಬ್ಬನೆ ಸರಹೊತ್ತೇನೆ
ಸಬ್ಬನ ಸರಹೊತ್ತಿನಾಗ ಗಜ್ಜ ಎಳದ ಲಿಂಗನ
ಗಜ್ಜ ಎಳದ ಲಿಂಗನೆ ಹಾಯಲಿಂಗಮ್ಮನ ಉಡಿಯಾಗ
ಹಾಯಲಿಂಗಮ್ಮನಲ್ಲೇಳ ನುಡದಾಳೆ ಮಾತಾಡ್ಯಾಳ

ಯಾರು ಏಳದುಕಿಂತೇನ ಕೋಳಿ ಕೂಗದ ಮೊದಲೇನ
ಕೋಳಿ ಕೂಗದ ಮೊದಲೇನೆ ಮನವಂದು ಮೀಸಲ ಮಾಡವ್ವ
ಮನವಂದು ಮೀಸಲ ಮಾಡವ್ವ ಕಾಯ ವಜ್ಜರ ಮಾಡವ್ವ
ಗಚ್ಚಿನ ಬಚ್ಚಲದೊಳಗವ್ವ ಹೆಚ್ಚಿನ ಜಳಕ ಮಾಡವ್ವ
ಕರಗೋಳುಬಿಡಬೇಕಂದಾನೆ ಹಾಲ ಹಿಂಡಲಿಬೇಕವ್ವ
ಚರಗಿ ನೀರ ತರಬೇಕಾ ಹಾಲು ಸಕ್ಕರಿ ತರಬೇಕವ್ವ
ಹಳ್ಳುಲೋಭನ ತರಬೇಕಾ ಹಾಲು ಸಕ್ಕರಿ ತರಬೇಕವ್ವ
ಹಳ್ಳುಲೋಭನ ತರಬೇಕಾ ಗಜ್ಜ ಎಳದ ಲಿಂಗನ
ಹಾಯಲಿಂಗಮ್ಮನಲ್ಲೇಳ ಕುಂತ ಕೇಳುತಾಳೇನ
ಹೈಯ್ಯಾಳದಪ್ಪನಲ್ಲೇಳ ಗದ್ದ ಹಿಡದು ಹೇಳ್ಯಾನ
ಗದ್ದ ಹಿಡದು ಹೇಳ್ಯಾನ ತುಟಿಯಾ ಹಿಡದು ಹೇಳ್ಯಾನ
ನೀನೆ ಬರಬೇಕಂದಾನೆ ಭಕ್ತಿ ಮಾಡಬೇಕಂದಾನ
ಹಂಗುರಗಿ ನಿಂಗಮ್ಮನ ಒಳ್ಳೆದು ಒಳ್ಳೆದಂದಾಳ
ಒಳ್ಳೆದು ಒಳ್ಳೆದಂದಾಳ ನಾನೇ ಬರತೀನಿ ಅಂದಾಳ
ಗಜ್ಜ ಎಳದ ಲಿಂಗನೇ ಹೊರಳಿ ಹೋಗುತಾನೇನ
ಯಾರು ಏಳದುಕಿಂತೇನ ಕೋಳಿ ಕೂಗದು ಮೊದಲೇನ
ಬೆಜ್ಜರ ಹೊಡದು ಎದ್ದಾಳೇ ಗಚ್ಚಿನ ಬಚ್ಚಲಕ ಹೋಗ್ಯಾಳ
ಮಿನದಾಳ ಮಡಿ ಉಟ್ಟಾಳೆ ಕರಗೋಳು ಬಿಡುವುತಾಳೇನ
ಚರಗಿ ಹಾಲ ಹಿಡದಾಳ ಮೀಸಲ ಸೀತಾಳ ಹಿಡದಾಳ
ಹಾಲು ಸಕ್ಕರಿ ಹಿಡದಾಳೆ ಲ್ಯಾಯದ ಪಡಸಾಲಿ ಇಳದಾಳ
ಅಗಳಿಯ ದಬ್ಬುತಾಳೇನ ಬಾಕಲ ತೆರದು ಹೋದಳ
ಊರ ಒಳಗನಲ್ಲಪ್ಪ ಚಂದರ ಸಾಲಿಲಿ ಹಾಯ್ದಳ
ರೈತರಾಣ್ಯಾರ ಓಣ್ಯಾಗೆ ಚಂದರಸಾಲಿ ಒಳಗೇನ
ಊರ ಹೊರಗೆ ಬಂದಾಳೆ ರಾಯಿಮಾರಗ ಹಿಡದಾಳ
ಹಳ್ಳ ಧಾಟುತಾಳೇನ ಮಾರಗ ಹಿಡಿಯುತಾಳೇನ
ಎಕಚಿಂತಿಯ ಊರಿಗೆ ಗಜ್ಜಯಿ ಎಳದ ಲಿಂಗೇನ
ಗಜ್ಜಯಿ ಎಳದ ಲಿಂಗನೇ ಒಂದ ಹರದಾರಿ ಆದವ
ಹಂಗುರಿಗಿಯ ಗೌಡರ ಮಗಳು ಹಾಯಿಲಿಂಗಮ್ಮನಂದರ
ಕರಿವಂದು ಕಂಟಿ ಒಳಗೇನ ಸಿಗರಿನ ಕಂಟಿ ಒಳಗೇನ
ಕಾಡರುದ್ದರ ಭೂಮ್ಯಾಗ ಮೂರ ಕಣ್ಣಿನ ಹುತ್ತಿಗೆ
ಮೂರ ಕಣ್ಣಿನ ಹುತ್ತಿಗೆ ಲಿಂಗಮ್ಮ ಬರುವುತಾಳೇನ
ಲಿಂಗಮ್ಮ ಬರುವುತಾಳೇನ ಚರಗಿ ನೀರ ಸುರುವ್ಯಾಳ
ಚರಗಿ ನೀರ ಸುರವ್ಯಾಳೆ ಕುಂಕುಮ ಹಚ್ಚುತಾಳೇನ
ಕುಂಕಮ ಹಚ್ಚುತಾಳೇನ ಭಂಡಾರ ಹಚ್ಚುತಾಳೇನ
ಭಂಡಾರ ಹಚ್ಚುತಾಳೇನ ಹಳ್ಳುಲೋಭನ ಹಾಕ್ಯಾಳ
ಹಳ್ಳುಲೋಭನ ಹಾಕ್ಯಾಳೆ ಪೂಜೆ ಮಾಡುತಾಳೇನ
ಹಾಲು ಸಕ್ಕರಿ ಅಲ್ಲಪ್ಪ ಚರಗಿ ತುಂಬಿ ಇಟ್ಟಾಳ
ಕೈಯ್ಯಾನ ಲಿಂಗನಲ್ಲೇಳ ಹಾಲ ಸವಿದಾನೇನಯ್ಯ
ಹಾಲ ಸವಿದಾನಲ್ಲಪ್ಪ ಚರಗೀಯ ಬಟ್ಟಲ ಹಿಡದಾಳ
ಚರಗಿ ಬಟ್ಟಲ ಹಿಡದಾಳ ರವ್ವಣಿ ಮಾಡುತಾಳೇನ
ರವ್ವಣಿ ಮಾಡುತಾರೇನ ಊರಾಗ ಬರುವುತಾರೇನ
ಬಾಕಲದೊಳಗೆ ಹೋಗ್ಯಾಳೆ ಅಗುಳಿ ಹಾಕುತಾಳೇನ
ಅಗುಳಿ ಹಾಕುತಾಳೇನ ಲ್ಯಾಯದ ಪಡಸಾಲಿ ಒಳಗೇನ
ಲ್ಯಾಯದ ಪಡಸಾಲಿ ಒಳಗೇನ ಮಲ್ಲನ ಮನಗೂತಾಳೇನ
ಮಲ್ಲನ ಮಲಗೂತಾಳೇನೆ ಹೊತ್ತೇರಿ ಮುಂಜಾನಿ ಎದ್ದಾರ