ಸೂಚನೆ||
ತನಯರೊಳ್ ಕಾದಿ ಮೂರ್ಛಿತನಾದ ರಾಮನಂ |
ಮುನಿಮೌಳಿ ವಾಲ್ಮೀಕಿ ಸಂತೈಸಲ್ಕೆ |
ವಿನುತಾಶ್ವ ಮೇಧಮಂ ಪೂರೈಸಿ ಸೀತೆಸಹಿತವನಿಯಂ ಪಾಲಿಸಿದನು ||

ಅರಸ ಕೇಳ್ ಜಾಹ್ನವಿಯ ತೀರದೊಳ್ ದೀಕ್ಷೆಗೊಂ |
ಡಿರುತಿರ್ದ ರಾಘವಂ ಚಿತ್ತದನುತಾಪದಿಂ |
ಭರತನಂ ಕರೆದು ಶತ್ರುಘ್ನನೇಗೈದನೆಂಬುದನುಸಿರ‍್ವರಾರುಮೆನಗೆ ||
ತರಳರಂ ಪಿಡಿದಪನೊ ಕೊಂದಪನೊ ಲಕ್ಷ್ಮಣಂ |
ಧುರದೊಳ್ ಬಳಲ್ದಪನೊ ಗೆಲ್ದಪನೊ ಸೋಲ್ದಪನೊ |
ತುರಗಮಂ ಬಿಡಿಸಿ ತಂದಪನೊ ನಾನರಿಯೆನೆಂದಸುರಾರಿ ಚಿಂತಿಸಿದನು ||೧||

ಕನಸಿನೊಳ್ ಸೋಲ್ದುದಿಲ್ಲಾರ್ಗೆಯುಂ ಲಕ್ಷ್ಮಣಂ |
ವನಚಾರಿ ಬಾಲಕರ ಪಾಡಾವುದೀಗ ಮುಳಿ |
ದನುವರದೊಳಿರ್ವರಂ ಘಾತಿಸದೆ ಸಮ್ಮೋಹನಾಸ್ತ್ರದೊಳ್ ಮರವೆಗೊಳಿಸಿ ||
ತನಗೆ ತಂದೊಪ್ಪಿಸುವ ತೆರದೊಳತಿಬಲ ಚರರ |
ನನುಜನೆಡೆಗಟ್ಟೆಂದು ರಾಘವಂ ಭರತನೊಡ |
ನೆನಲವಂ ದೂತರಂ ಕಳುಹಲವರರಿದು ಬಂದವನಿತಿಗಿಂತೆಂದರು ||೨||

ದೇವ ಬಿಡು ದೀಕ್ಷೆಯಂ ಕಾದು ನಡೆ ಕುಶನೊಳ್ ಮ |
ಹಾವೀರನಾತನಾ ಲವನಿಂದೆ ಬಲ್ಲಿದಂ |
ಜೀವಸಂದೇಹಮಾಗಿರ್ಪುದೈ ಶತ್ರುಘ್ನ ಲಕ್ಷ್ಮಣರ‍್ಗಖಿಳಸೇನೆ ||
ಭಾವಿಸೆ ತವಾಕೃತಿಯ ಬಾಲಕರ ದೆಸೆಯಿಂದೆ ||
ಗೋವರ್ಧನಂಗೆ ಮೊಲೆಗೊಟ್ಟು ಪೂತನಿವೊಲಾ |
ಯ್ತೇವೆಳ್ವೆವೆಂದು ದೂತರ್ ನುಡಿಯೆ ರಾಘವಂ ಕೇಳೀ ಮೂರ್ಛಿತನಾದನು ||೩||

ಬಳಿಕ ಶೈತ್ಯೋಪಚಾರಂಗಳಿಂ ಭರತನಿನ |
ಕುಲಸಾರ್ವಭೌಮನಂ ಸಂತೈಸುತಿರೆ ಮೂರ್ಛೆ |
ತಿಳಿದೆದ್ದು ಲಕ್ಷ್ಮಣನದಾವಡೆಯೊಳೆನ್ನ ಸೊಲ್ಸಲಿಸುವನದಾವಡೆಯೊಳು ||
ಹಳುವಿನೊಳ್ ತನಗಾಗಿ ನವೆದನುಜನಾವೆಡೆಯೊ |
ಳಳಿದನೇ ಸೌಮಿತ್ರಿ ಹಾ ತಮ್ಮ ಹಾ ಯೆನುತೆ |
ಹಳವಳಿಸಿ ಬಿಸುಸುಯ್ದಳಲ್ದು ಮರುಗಿದನಂದು ರಾಘವಂ ಶೋಕದಿಂದೆ ||೪||

ಜಾನಕಿಯನಂದು ಪೊರಮಡಿಸಿದನ್ಯಾಯದಿಂ |
ಭಾನುಕುಲ ಸಂಭವಂಗಾದವಿಂತೀತೆರದ |
ಹಾನಿಯಿದು ಸೌಮಿತ್ರಿ ಶತ್ರುಘ್ನರಂ ಜಯಿಸುವಗ್ಗಳೆಯರಾರ್ ಜಗದೊಳು ||
ಕಾನನದ ಮುನಿಸುತರ್ಗದಟೆತ್ತಣದು ರಾಮ |
ಸೂನುಗಳ್ ತಪ್ಪದಾಕೃತಿಗಳಂ ನೋಡಲನು |
ಮಾನಮೇಕೆಂದು ಮೊರೆಯಿಟ್ಟುದೆಲ್ಲಾ ಜನಂ ರಾಘವಂ ಕೇಳುವಂತೆ ||೫||

ಸೀತಾವದನಚಿಹ್ನೆಮೆನ್ನಂಗದಾಕಾರ |
ಮಾ ತಾಪಸಾರ್ಭಕರೊಳಿರ್ದಪುದು ಗಡ ಪಡೆದ |
ಮಾತೆಯಿಲ್ಲಿರ್ದಪಳೊ ಕುದುರೆಯಂ ಕಟ್ಟುವದಟೆತ್ತಣದಿವರ್ಗೆಂಬುದ ||
ದೂತರಂ ಕರೆ ಕೇಳ್ವೆವಿನ್ನೊಮ್ಮೆ ಶಿಶುಗಳಂ |
ಘಾತಿಸದೆ ದಯೆಗೈದು ತಾನೇರ್ವಡೆದೆನೊ ಮೇ |
ಣಾತರಳತಿಬಲರೊ ಸೌಮಿತ್ರಿಬಿದ್ದನೇಕೆಂದು ರಘುಪತಿ ಸುಯ್ದನು ||೬||

ಇಂತಿಂತಳಲ್ದಾಗ ಬಿಸುಸುಯ್ದೊಡನೆ ರಾಘ |
ವಂ ತನ್ನ ಸಹಜರ ಗುಣಂಗಳಂ ನೆನೆನೆನೆದು |
ಚಿಂತಿಸುತಿರೆ ಮತ್ತೆ ಕುಶನ ಶರಘಾತಿಯಿಂದುರೆ ನೊಂದು ಭೀತಿಗೊಂಡು ||
ಸಂತಪ್ತರಾಗಿ ಪರಿತಂದು ಲಕ್ಷ್ಮಣನೊಡಲೊ |
ಳಂತರಿದಲರಿಯದಸು ಮಡಿದುದು ಸಕಲಸೈನ್ಯ |
ಮೆಂತಿಹನೊ ಶತ್ರುಘ್ನನೇಕೆ ದೀಕ್ಷೆಯಿದೆಂದು ಚರರೈದೆ ಮೊರೆಯಿಟ್ಟರು ||೭||

ಮೊರೆವೇಳ್ದ ದೂತರಂ ಗರ್ಜಿಸುತೆ ರಾಘವಂ |
ಗೆರಗಿ ಕೈಮುಗಿದು ಭಯವಿಹ್ವಲರ್ ಚಾರರಿವ |
ರರಿದಪರೆ ಸೌಮಿತ್ರಿ ಶತ್ರುಘ್ನರಾಹವಶ್ರಮದಿಂದೆ ತನು ಮನವನು ||
ಮರೆದರಲ್ಲದೆ ಮರಣವೆತ್ತಣದು ಸಾಕಿನ್ನು |
ಬರಿದೆ ಚಿಂತಿಸಬೇಡ ನಾಂ ಪೋಗಿ ಬಾಲಕರ |
ಮರುಕಮಂ ಬಿಡಿಸಿ ತಹೆನಶ್ವಮಂ ಕಳುಹೆನ್ನನೆಂದು ಭರತಂ ನುಡಿದನು ||೮||

ಬಳಿಕ ಜಾಂಬವ ಸುಷೇನಾಂಗದ ಹನೂಮಂತ |
ನಳ ನೀಲ ಕುಮುದ ಶತಬಲಿ ಗವಯರೆಂಬ ಕಪಿ |
ಗಳ ಪಡೆಯನರಲ್ಲಮಂ ಬಲದೊಳುಳಿದಖಿಳ ಚತುರಂಗಮಂ ಕೂಡಿಕೊಟ್ಟು |
ಕಳುಹಲಿನಕುಲ ಸಾರ್ವಭೌಮನಂ ಬೀಳ್ಕೊಂಡು |
ತಳೆದು ಸುರನದಿಯ ತೀರದೊಳಾಂಜನೇಯನಂ |
ಕೊಳಗುಳದ ವೃತ್ತಾಂತಮಂ ಕಂಡು ಬಂದೊರೆವುದೆಂದು ಭರತಂ ಪೇಳ್ದನು ||೯||

ಧಿಂಕಿಟ್ಟನಲ್ಲಿಂದ ಕಲಿಹನುಮ ನಾರಣದೊ |
ಳಂಕಿತದ ಕುಶನ ಬಾಣಂಗಳಿಂ ಮಡಿದ ಬಲ |
ಸಂಕುಲವನಿಕ್ಷ್ವಾಕುನಂದನಂ ನಿನ್ನ ಸುತೆ ಸೀತೆಯಂ ಬಿಟ್ಟನೆಂದು ||
ಕೊಂಕದಿರು ಸೈರಿಸುವೆದೆಂದೈದೆ ಭೂದೇವಿ |
ಯಂ ಕೋಪಮಂ ಮಾಣಿಸಲ್ ಬೇಡಿಕೊಳ್ವ ತರ |
ದಿಂ ಕೆಡೆದು ಮೈಮರೆದು ಮಲಗಿರ್ದ ಸೌಮಿತ್ರಿ ಶತ್ರುಘ್ನರಂ ಕಂಡನು |೧೦||

ಕಂಡು ಕಪಿವೀರನವರೀರ್ವರಂ ತೆಗೆದೆತ್ತಿ |
ಕೊಂಡು ಭರತನ ಪೊರಗೆ ತರಲವಂ ಬಳಿಕ ಮಣಿ |
ಮಂಡಿತ ವರೂಥದೊಳವರ್ಗಳಂ ಪಟ್ಟಿರಿಸಿ ಹಯಮಂ ಕದಳಿಗೆ ಕಟ್ಟಿ ||
ಚಂಡ ಶರ ಚಾಪ ಪಾಣಿಗಳಾಗಿ ತೊಳಗುವು |
ದ್ದಂಡ ಕುಶ ಲವರಿರ್ವರಿರ್ಪುದಂ ಕೇಳ್ದು ಕೋ |
ದಂಡಮಂ ಜೇಗೈದು ಪಡೆವೆರಸಿ ನೂಕಿದಂ ಮುಳಿದು ಬಾಲಕರ ಮೇಲೆ ||೧೧||

ಅಣ್ಣತಮ್ಮಂದಿರೀರ್ವರು ಮರಿಚತುರ್ಬಲಂ |
ಪಣ್ಣಿ ಬಗೆ ಕಂಡು ಬಿಲ್ಗೊಂಡೆದ್ದು ಕೋಪದಿಂ |
ದಣ್ಣೆಕಲ್ಲಾಡಿದರ್ ಪಟುಭಟರ ತಲೆಗಳಂ ಬಾಣಪ್ರಯೋಗದಿಂದೆ ||
ಬಣ್ಣಿಸಲ್ ಪವಣಿ ಯೋಜನದಗಲಮೆಲ್ಲಿಯುಂ |
ಕಣ್ಣಿವೆಯಲುಗುವನಿತರೊಳ್ ಸರಲ್ಮಯಮಾಗೆ |
ಚಿಣ್ಣರಂಗದ ಮೇಲೆ ಮೆಚ್ಚಿ ಪೂಮಳೆಗಳಂ ಕರೆದಮರರ್ ಪೊಗಳ್ದು ||೧೨||

ಚಾಪ ಟಂಕಾರಂ ಜಗತ್ತ್ರಯದೊಳೆಲ್ಲಿಯುಂ |
ವ್ಯಾಪಿಸಲ್ ಕಿವುಡಾದುವಷ್ಟದಿಗ್ಧಂತಿಗ |
ಳ್ ಭೂಪಯೋಧೆಗಳೊಡೆವೆರಸಿದುವು ಕುಲಾದ್ರಿಗಳ್ ಜರಿದು ವಹಿ ಕಂಪಿಸಿದನು ||
ತಾಪದಿಂ ಪೊಡೆಮರಳ್ದ ಕೂರ್ಮನಾ ರವಿಯ |
ರೂಪಡಗಿತೆಸುವ ಬಾಣಾಂಧಕಾರದೊಳಂದು |
ದೀಪಮಿಲ್ಲದ ಮನೆವೊಲಾದುದು ರಣಾಂಗಣಂ ಕಾದುವರದೆಂತೊ ಭಟರು ||೧೩||

ಕೋಲ್ಗರೆಯಲಾನೆಗಳ ಸುಂಡಿಲ್ಗಳುಂ ಹಯದ |
ಕಾಲ್ಗಳುಂ ರಾವುತರ ಜೋದರ ಶಿರಂಗಳುಂ |
ಮೇಳ್ಗೈಯ ರಥಿಕರ ಧನುರ್ದಂಡಮಂ ಕೈದುವಿಡಿದ ಪಾಣೀಗಳುಮಿಳೆಗೆ ||
ಸಾಲ್ಗೊಂಡುರುಳ್ದುವೊದಗಿದ ಕಪಿಗಳಂದೊಳ್ |
ಕೀಲ್ಗಳಂ ಬಲಿದಂತೆ ನಾಂಟಿದುವು ಪರಬಲಂ |
ಸೋಲ್ಗು ಮಲ್ಲದೆ ಕುಶ ಲವರ ಮುಂದೆ ಗೆಲ್ವ ಭಟರಂ ಕಾಣೆನಾಹವದೊಳು ||೧೪||

ಸೇನೆಯಂ ನಿಮಿಷದೊಳ್ ತಡೆಗಡಿಯೆ ಕಂಡು ಪವ |
ಮಾನಜಂ ನಡೆತಂದು ಬಾಲಕರ ವಿಗ್ರಹಂ |
ಭಾನುಕುಲತಿಲಕನಾಕೃತಿವೊಲಿದೆ ನೋಡೆಂದು ಭರತಂಗೆ ತೋರಿಸಲ್ಕೆ ||
ಸಾನುರಾಗದೊಳತುಲ ಚಾಪಮಂ ಪಿಡಿದು ರಾ |
ಮಾನುಜಂ ಕುಶನ ಸನ್ಮುಖಕೈದಿ ನುಡಿಸಿದಂ |
ಸೂನುಗಳ ಮೊಗಂ ನಿರೀಕ್ಷಿಸಿ ಘನಸ್ನೇಹದಿಂದ ಪುಳಕಂ ಪೊಣ್ಮಲು ||೧೫||

ವತ್ಸ ನೀನಾರವಂ ನಿನಗೀತನೇನಹಂ |
ಮತ್ಸಹೋದರರನುರೆ ಗಾತಿಸಿದಿರೆಮ್ಮೆಯ ಮ |
ಹತ್ಸೈನ್ಯಮಂ ಕೊಂದಿರಿನ್ನಾದೊಡಂ ಕುದುರೆಯಂ ಬಿಟ್ಟು ಪೋಗಿ ಬರಿದೆ ||
ಮತ್ಸರಿಸಬೇಡ ನಿಮ್ಮಂ ಪಡೆದ ತಾಯ ಬಳಿ |
ಗುತ್ಸವದೊಳೈದಿ ಸುಖಮಿಹುದೆಂದು ಭರತನೆನ |
ಲುತ್ಸಕದೊಳಾ ಕುಶಂ ನಸುನಗುತೆ ನುಡಿದನಿಂತಾ ರಾಘವಾನುಜಂಗೆ ||೧೬||

ಕಟ್ಟಿದ ತುರಂಗಮಂ ಬಿಡುವನಲ್ಲೀತನೊಡ |
ಹುಟ್ಟಿದಂ ತನಗೆ ವಾಲ್ಮೀಕಿಮುನಿವರನವರ್ |
ನೆಟ್ಟನೆ ರಣಾಗ್ರದೊಳ್ ನಿನ್ನನುಂ  ನಿನ್ನನುಜರಂತೆ ಘಾತಿಸಿದ ಬಳಿಕ ||
ಮುಟ್ಟಿದುತ್ಸವದಿಂದ ತಾಯ ಬಳಿಗೈದಿ ಪೊಡ |
ಮಟ್ಟಲ್ಲಿ ಸುಖದೊಳಿರ್ದಪೆನೆಂದು ಕಣೆಗಳಂ |
ತೊಟ್ಟು ತಾನೀಗ ಕುಶನರಿದುಕೊಳ್ಳೆನುತೆಚ್ಚನಾ ಭರತನಂ ಧುರದೊಳು ||೧೭||

ಭರತನಂ ಗಣಿಸದಿನುತಿರೆ ಕಂಡು ಮತ್ತೆ ಕರಿ |
ತುರಗ ರಥ ಪಾಯದಳ ಮೊತ್ತಿದುದು ಕೂಡೆ ವಾ |
ನರ ಸಿಂಗಳೀಕ ಮುಸು ಕರಡಿಯ ಬಲಂ ಮುತ್ತಿದುದು ಬಳಿಕ ನಸುಗುತೆ ಕುಶನು ||
ಕರೆದು ಕುದುರೆಯ ಬಳಿಗೆ ತಮ್ಮನಂ ಕಳುಹಿ ಬಿ |
ಲ್ದಿರುವಿಂದುಗಳ್ಚಿದಂ ಕಣೆಗಳಿಂ ವೈರಿ ಮೋ |
ಹರದ ತಲೆವಣೆಗಳಂ ಪಗೆಗಳೆರ್ದೆವಣಿಗಳಂ ರವಿಗೆಣೆಗಳಂ ಕ್ಷಣದೊಳ್ ||೧೮||

ಹತ್ತು ಭರತನ ಮೇಲೆ ನಳನ ಮೇಲೆಂಟು ಮೂ |
ವತ್ತು ಹನುಮನಮೇಲೆ ಜಾಂಬವನಮೇಲೆ ನಾ |
ಲ್ವತ್ತಂಗದನಮೇಲೆ ತೊಂಬತ್ತು ನೀಲ ಕುಮುದರ ಮೇಲೆ ನೂರುನೂರು ||
ಉತ್ತುಂಗ ಗವಯ ಶತಬಲಿ ಸುಷೇಣರಮೇಲೆ |
ಹತ್ತುಹತ್ತಂಬೊಡಲ್ವುಗಲೆಚ್ಚನನಿಬರಂ |
ಮತ್ತೆ ಘಾತಿಸಿ ಕೂಡೆ ರಾಮಾನುಜದ ಮೇಲೆ ಕೂರ್ಗಣೆಗಳಂ ಕರೆದನು ||೧೯||

ಎಲ್ಲಿ ಕುಶನಂಬು ಸೋಂಕಿದುವಲ್ಲಿ ಮೂರ್ಛೆ ಮೃತಿ |
ಯಲ್ಲದುಳಿವಿಲ್ಲ ಪಡೆಯೆಲ್ಲಮಂ ತಲ್ಲಣಿಸಿ |
ಚೆಲ್ಲಿದುದು ದೆಸೆದೆಸೆಗೆ ಬಲ್ಲಿದ ಕಪೀಶ್ವರರ್ ಕೈಗೆಟ್ಟು ಮೈಮರೆದರು ||
ನಿಲ್ಲಸೋಡಿತು ದೊದ್ದೆಘಲ್ಲಣಿಯನಾಂತು ನಿಂ |
ದಲ್ಲಿ ಸಾರಥಿ ಕುದುರೆಗಳ್ ಮಡಿದು ತೇರ್ಮುರಿದು |
ಬಿಲ್ಲುಡಿದು ಭರತನಂಗೋಪಾಂಗದಲ್ಲಿ ನಾಂಟಿದುವು ಪೊಸ ಮಸೆಗಣೆಗಳು ||೨೦||

ಜಗದೊಳ್ ಕುಶಾಸ್ತ್ರ ನಿಕರಕ್ಕೆ ಮೈಗೊಟ್ಟವಂ |
ಮಿಗೆ ಪತಿತನಾಗದಿರ್ದಪನೆ ಪೇಳೆಂಬಿನಂ |
ವಿಗತ ಚೇತನಾಗಿ ಭರತಂ ಮಹೀತಳಕ್ಕೆ ಬಿದ್ದು ಮೂರ್ಛೆಯೊಳಿರಲ್ಕೆ ||
ವಿಗಡ ಹನುಮಂ ಕಂಡು ಕಿತ್ತು ಪೆರ್ಬೆಟ್ಟಮಂ |
ನೆಗಪಿ ತಂದರ್ಭಕನ ಮೇಲಿಡಲ್ಕಣುವೆಂದು |
ಬಗೆಯದೆ ವಿಭಾಡಿಸಿದನಾತನಂ ಕಣೆಯೆಚ್ಚು ನಗುತೆ ಜಾನಕಿಯ ಸೂನು ||೨೧||

ಕಡೆಯ ಮಾತೇನಖಿಳ ಸೇನೆಯಂ ಭರತನಂ |
ಕೆಡಹಿ ಕುಶನಲ್ಲಿಂದೆ ತುರಗಮಿರ್ದೆಡೆಗೆ ಬಂ |
ದೊಡಹುಟ್ಟಿದಂ ವೆರಸಿ ನಿಲ್ವಿನಂ ದೂತರೀತೆರನಂ ರಘೂದ್ವಹಂಗೆ ||
ಕಡುವೇಗದಿಂದೆ ಪೋಗಿ ಬಿನ್ನೈಸೆ ಕೇಳ್ದಳ |
ಲ್ವಿಡಿದು ಪರಿತಾಪದಿಂದುರೆನೊಂದು ವಿಸ್ಮಯಂ |
ಬಡುತೆದ್ದು ಸುಗ್ರೀವ ವರವಿಭೀಷನರೆಡಬಲದೊಳೈದೆ ಪೊರಮಟ್ಟನು ||೨೨||

ಬಂದಂ ರತಾರೂಢನಾಗಿ ರಣರಂಗದೊಳ್ |
ನಿಂದು ಮೈಮರೆದೊರಗಿದನುಜರಂ ಮಡಿದ ಬಲ |
ವೃಂದಮಂ ಕುದುರೆಯಂ ಕಟ್ಟಿಕೊಂಡಿದಿರಾಗಿ ಬಿಲ್ವಿಡಿದು ಕಾಳೆಗಕ್ಕೆ ||
ನಿಂದಿರ್ದ ಯಮಳರಂ ಕಂಡು ಬೆರಗಾಗಿ ರಘು |
ನಂದನಂ ವಿನಯದಿಂ ತಾನೆ ಬೆಸಗೊಂಡನಿಂ |
ತೆಂದು ಘನ ಗಂಭೀರವಾಕ್ಯದಿಂದತಿಮನೋಹರಮಾದ ಸುಸ್ವರದೊಳು ||೨೩||

ಎಲೆ ಪಸುಳೆಗಳಿರ ನಿಮಗೀ ಧನುರ್ವೇದಮಂ |
ಕಲಿಸಿದವನಾವನಾವುದು ನಿವಾಸಸ್ಥಳಂ |
ಸಲಹಿದವನಾವನಾವಂ ತಂದೆ ತಾಯಾವಳಸ್ವಮಂ ಕಟ್ಟುವಿನಿತು ||
ಚಲಮಿದೇತಕೆ ನಮ್ಮ ಸೇನೆಯಂ ಜಯಿಸುವೀ |
ಬಲಮೇತರಿಂದಾದುದೆಂದು ನಯದಿಂದೆ ರಘು |
ಕುಲ ಲಲಾಮಂ ಕೇಳ್ದೊಡಾಕುಶಂ ನಸುನಗುತೆ ಮಾರುತ್ತರಂಗೊಟ್ಟನು ||೨೪||

ರಾಜೇಂದ್ರ ನೀನೆಮ್ಮೊಳಾಹವಕೆ ಬಿಲ್ಗೊಂಡು |
ವಾಜಿಯಂ ಬಿಡಿಸಿಕೊಳ್ಳಲ್ಲದೊಡೆ ಮರುಳಪ್ರ ||
ಯೋಜಕದ ಮಾತಿದೇತಕೆ ನಿರುಪಮ ಕ್ಷಾತ್ರಪೌರುಷವನುಳಿದು ಬರಿದೆ ||
ಸೋಜಿಗದೊಳೆಮ್ಮ ಜನನಸ್ಥಿತಿಗಳಂ ಕೇಳ್ದೊ |
ಡೀಜಗಂ ಮೆಚ್ಚದೆಚ್ಚಾಡಿ ನೋಡೆನುತೆ ಕುಶ |
ನಾಜಲಜ ಮಿತ್ರಕುಳ ತಿಲಕನಂ ಬಗೆಯದೆ ನುಡಿದೊಡಾತನಿಂತೆಂದನು ||೨೫||

ಶಿಶುಗಳಾಗಿಹ ನಿಮ್ಮೊಳೆನಗೆ ಕಾಳಗವೆ ಪರ |
ವಶರಾಗಿ ಬಿದ್ದನುಜರಂ ಕಂಡು ಖತಿಯೊಳಾಂ |
ವಿಶಿಖಮಂ ತೊಡುವೆನೆಂದೊಡೆ ಮನವೊಡಂಬಡದು ನಿಮ್ಮ ಜನನಸ್ಥಿತಿಗಳ ||
ವಿಶದ ವಿಸ್ತರವ ನೊರೆದೊಡೆ ನೋಡಿಕೊಳ್ವೆನೆನೆ |
ಕುಶನೆಂದನಿಂತು ಲೋಕಾನಂದಕರಮಾದ |
ನಿಶಿತವಾಕ್ಯಂಗಳಂ ಜನಮೇಜಯ ಕ್ಷಿತಿಪ ಕೇಳಾ ರಘೂದ್ವಹಂಗೆ ||೨೬||

ಈ ತಪೋವನದೊಳೆಮ್ಮಿರ್ವರನವಳಿಯಾಗಿ |
ಸೀತೆಯೊರ್ವಳೆ ಪಡೆದಳನುದಿನದೊಳಾರೈದು |
ಜಾತೋಪನಯನಾದಿ ಕರ್ಮಗಳಂ ಮಾಡಿ ನಿಗಮಾಗಮ ಸ್ಮ*ತಿಗಳ ||
ವ್ರಾತಮಂ ಬರಿಸಿ ಕಾರ್ಮುಕವೇದಮಂ ಕಲಿಸಿ |
ನೀತಿಗಳನರುಹಿ ರಾಮಾಯಣವನೋದಿಸಿ ಮ |
ಹಾತಿಬಲರೆನಿಸಿದಂ ವಾಲ್ಮೀಕಿ ಮುನಿಪನೆಂದೊರೆದು ಮಗುಳಿಂತೆಂದನು ||೨೭||

ರಾಮಚರಿತ್ರ ಪಠನಾಭ್ಯಾಸ ಯೋಗದಿಂ |
ಕ್ಷೇಮ ಸುಪುಷ್ಟಿ ನಿಶ್ಚಲಮತಿ ನಿರಾಲಸ್ಯ |
ವಿಮಹಾಸೈನ್ಯಂ ಗೆಲ್ವದಟು ತಮಗಾದುದೆಂದು ಕುಶನುಸಿರೆ ಕೇಳ್ದು ||
ಪ್ರೇಮದಿಂ ತನ್ನ ಸುತರೆಂದರಿದು ಸೀತೆಯಂ |
ಬೀಮಾತು ಕಿವಿದಾಗಿದೊಡೆ ಬಿದ್ದು ಮೂರ್ಛೆವೆ |
ತ್ತಾ  ಮಹೀಶಂ ಕೂಡೆ ಚೇತನಂ ಬಡೆದು ಸುಗ್ರೀವನೊಡನಿಂತೆಂದನು ||೨೮||

ಕಪಿರಾಜ ಕೇಳೈ ಕುಮಾರಕರ ನುಡಿಗಳಂ |
ನಿಪುಣರಿವರಾವ ಪುರುಷಂಗೆ ಸಂಭವಿಸಿದರ್ |
ವಿಪಿನಚಾರಿಗಳ ನ ಇನ್ನೊಮ್ಮೆ ನೀಂ ಬೆಸಗೊಳೆನೆ ನಸುನಗುತೆ ಸುಗ್ರೀವನು ||
ತಪನಕುಲ ಜಾತರ್ ಪುರಾಣ ಪುರುಷೋತ್ತಮನ |
ವಿಪುಲ ಸಂತತಿಗಳಿವರೀಕ್ಷಿಪೊಡೆ ದೇವ ನಿ |
ನ್ನುಪ ರೂಪಮಾಗಿರ್ಪುದಲ್ಲದೊಡವರ್ಗಿನಿತು ಸತ್ವಮೆತ್ತಣದೆಂದನು ||೨೯||

ಸುಗ್ರೀವ ರಾಘವರ್ ಮಾತಾಡುವನಿತರೊಳ್ |
ನಿಗ್ರಹಿಸಿಕೊಂಡಿರ್ದ ಕುದುರೆಯಂ ಬಿಡುವೊಡ |
ಭ್ಯಗ್ರಮುಳ್ಳವನಾಗಿ ನೀಲನೈತರೆ ಕುಶಂ ಕೋಪದಿಂದಾ ಕಪಿಗಳ ||
ಅಗ್ರಣಿಯನೆಚ್ಚು ಕೆಡಪಿದೊಡವನ ರುಧಿರದಿಂ |
ದುಗ್ರರೂಪದೊಳೆದ್ದುವಾ ನೀಲಕೋಟಿಗಳ್ |
ವಗ್ರಹಕ್ಕೆ ಕಡುಮುಳಿದು ಮರಗೊಂಬೆಬೆಟ್ಟ ಕಲ್ಗುಂಡೆಲ್ಲೆಡೆಯೊಳು ||೩೦||

ನೀಲ ವಾನರಸೈನ್ಯದೊತ್ತಾಯಮಂ ಕಂಡು |
ಮೇಲೆಸೆವ ರವಿಯನಾರಾಧಿಸಿ ಕುಶಂ ಮಹಾ |
ಸ್ಥೂಲಕಾಯದ ಕಪಿಗಳಂ ಗೆಲಲ್ಕೊಂದುವರೆ ಯೋಜನದಳತೆಯಗಲದ ||
ಕೋಲಗಾಯದ ನೆತ್ತರೊಸರಲೀಯದವೋಲು |
ಬಾಲಕಂ ತುಡುವೊಡಳವಡುವ ತೆರನಾದ ರಿಪು |
ಜಾಲಕಸದಳಮಾದ ಪೊಡಲ ಕ್ಷಯವಾದ ಬಾಣಂಗಳಂ ಪಡೆದನು ||೩೧||

ಆ ಮಹಾಬಾಣಂಗಳಂ ಪೂಡಿ ತೆಗೆದೆಚ್ಚು |
ಭೀಮ ವಿಕ್ರಮ ಕುಶಂ ಕೆಡಹಿದನಸಿತ ಕಪಿ |
ಸ್ತೋಮಮಂ ಬಳಿಕುರುಳ್ಚಿದನಾದಿ ನೀಲನಂ ಸುಗ್ರೀವ ಮುಖ್ಯರಾದ ||
ಕಾಮರೂಪದ ಸಕಲ ವಾನರ ಚಮೂಪರಂ |
ಭೂಮಿಯೊಳ್ ಮೂರ್ಛೆಗೆಯ್ದೊರಗಿಸಿ ವಿಭೀಷಣನ |
ಸಾಮರ್ಥ್ಯಮಂ ನಿಲಿಸಿ ಮತ್ತವನ ಬಲಮಂ ಪೊರಳ್ಚಿದಂ ಸಂಗರದೊಳು ||೩೨||

ನರ ವಾಜಿ ದಂತಿ ಮುಸು ಕರಡಿ ಸಿಂಗಳಿಕ ವಾ |
ನರ ದಾನವರೊಳಿಡಿದ ಸೇನೆಯೊಳ್ ನೋಡಲೊ |
ರ್ವರುಮಿಲ್ಲದೆಲ್ಲರುಂ ಬಿದ್ದು ತಾನೇಕಾಕಿಯಪ್ಪಯದುಂ ಖಾತಿಗೊಂಡು ||
ಸರಳನರ್ಭಕರ ಮೇಲೆಚ್ಚಂ ರಘೂದ್ವಹಂ |
ಧರೆಯೊಳೀ ಕ್ಷತ್ರಿಯರ ಮನವಾಸಿಗಳದೆಂತೊ |
ತರಹರಿಸಬಾರದಿಹ ರಾಮಬಾಣಂಗಳೈದಿದುವು ಕಾಲಾಗ್ನಿಯಂತೆ ||೩೩||

ಬಚ್ಚೆವೋಗದ ರಾಮಬಾಣಂಗಳಂ ನಡುವೆ |
ನುಚ್ಚುನೂರಾಗೆ ಕತ್ತರಿಸೆ ರಘುನಾಥನಂ |
ಮುಚ್ಚಿದರ್ ಕಣೆಗಳಿಂ ಮತ್ತೆ ಕಾಕುತ್ಥ್ಸ ಕೆರಳ್ದು ಕುಶ ಲವರ ಮೇಲೆ ||
ಎಚ್ಚೊಡಾ ಕೋಲ್ಗಳಂ ಬಾಲಕರ್ ಮಧೈದೊಳ್ |
ಕೊಚ್ಚಿ ರಾವಣ ರಿಪುವಿನಂಗಮಂ ನೋಯಿಸಿದ |
ರಚ್ಚರಿಯ ಕಾಳೆಗಂ ತಂದೆಮಕ್ಕಳ್ಗೆ ನಡೆದುದು ಸುರರ್ ಬೆರಗಾಗಲು ||೩೪||

ಕಕ್ಕಸದೊಳಂದು ರಾವಣ ಕುಂಭಕರ್ಣಾದಿ |
ರಕ್ಕಸದ ತಲೆಗಳನರಿದು ತಿರುಗಿಬಹ ಕಣೆಗ |
ಳಿಕ್ಕಡಿಗಳಾಗಿ ಬಿದ್ದುವು ಧರೆಗೆ ಕೂಡೆ ಬಾಲಕರಿಸುಗೆ ತನ್ನಿಸುಗೆಗೆ ||
ಮಿಕ್ಕುಬರೆ ಬೆರಗಾಗಿ ರಾಘವಂ ಸುಮ್ಮನಿರೆ |
ಪೊಕ್ಕುವಂಬುಗಳೊಡಲೊಳಾತ್ಮಜರ ಮೇಲೆ ತನ |
ಗಕ್ಕರುಂಟಿಲ್ಲೆಂಬುದಂ ನೋಳ್ಪೆವೆಂಬವೊಲ್ ಭೂಪ ಕೇಳ್ ಕೌತುಕವನು ||೩೫||

ಪಲ್ಲವಿತ ನವ ಚೂತತರು ಬೇಸಗೆಯ ಝಳಕೆ |
ನಿಲ್ಲದಸವಳಿದು ಜೋಲ್ವಂತೆ ಕೋಮಲಕಾಯ |
ದೆಲ್ಲೆಡೆಯೊಳಂ ನಾಂಟಿದಂಬುಗಳ ರುಧಿರ ಪ್ರವಾಹದಿಂದುರೆ ಬಳಲ್ದು ||
ಮೆಲ್ಲನೆ ವರೂಥದೊಳ್ ಸಾರಥಿವೆರಸಿ ಧರಾ |
ವಲ್ಲಭಂ ಮೈಮರೆದು ಪವಡಿಸಿದನನಿಮಿಷರ್ |
ಚೆಲ್ಲಿದರ್ ಪೂಮಳೆಗಳಂ ಮೊಳಗಿದುವು ದೇವ ದುಂದುಭಿಗಳಂಬರದೊಳು ||೩೭||

ಆ ಕುಮಾರರ್ ಬಳಿಕ ಶರಹತಿಗೆ ಮೈಮರೆದ |
ಕಾಕುತ್ಥ್ಸನಲ್ಲಿಗೈತಂದು ರಾಜೇಂದ್ರನ ಶು |
ಭಾಕಾರಮಂ ನೋಡಿ ಸಿರಿಮೊಗದ ಮಣಿ ಕುಡಲಂಗಳಂ ಕಂಬುಗಳದ ||
ಏಕಾವಳಿಯ ಹಾರಮಂ ತೆಗೆದುಕೊಂಡೂರ್ಮಿ |
ಳಾಕಾಂತ ಭರತ ಶತ್ರುಘ್ನರ ವಿಭೂಷಣಾ |
ನೀಕಮಂ ಕಳೆದೊಂದು ಬಸನದೊಳ್ ಕಟ್ಟಿ ಕುಶನೊಡನೆ ಲವನಿಂತೆಂದನು ||೩೭||

ಅಗ್ರಭವ ಕೇಳಿವರೊಳೆಂದು ರಥಮಂ ಪತ್ತಿ |
ವಿಗ್ರಹದೊಳೆಚ್ಚರಾಗಿರ್ದ ವೀರರ್ಕಳ ಕ |
ಚ ಗ್ರಹಣಮಂ ಮಾಡಿಕೊಂಡು ಬಹೆನೆನುತೆ ಲಕ್ಷ್ಮಣನ ಪೊಂದೇರ್ಗಡರ್ದು ||
ವ್ಯಗ್ರದಿಂ ಲವನೈತರಲ್ ಕುಶನ ಶರಹತಿಯೆ |
ನಿಗ್ರಹಕ್ಕೊಳಗಾಗಿ ಮೂರ್ಛೆಯಿಲ್ಲದೆ ಕಪಿಗ |
ಳಗ್ರಣಿಗಳುಳಿದಿರ್ದರಿರ್ವರದರೊಳ್ ಜಾಂಬವನೊಳೆಂದನಾ ||೩೮||

ಕಂಡಿರೇ ಜಾಂಬವರೆ ರಾಮಾದಿ ವೀರರಂ |
ದಿಂಡುಗೆಡಹಿದಬಳಿಕ ಗಣದೊಳುಸಿರಿರ್ದರಂ |
ಮಂಡೆವಿಡಿದೆಳೆದುಯ್ವೆನೆಂದು ಸೀತಾಸುತಂ ಬಂದಪಂ ನಾವಿವನೋಳು ||
ದಂಡಿಗಾರೆವು ನಮ್ಮನೀ ಬಾಲಕಂಪಿಡಿದು |
ಕೊಂಡು ಪೋಗಲಿ ಜಾನಕಿಯ ಪೊರೆಗೆ ದೇವಿ ಕೃಪೆ |
ಯಿಂ ಡಿಂಗರಿಗರೆಂದು ಪಾಲಿಸಲಿ ಮೇಣುಳಿಯಲೆಂದನಾ ಹನುಮಂತನು ||೩೯||

ಕೆಡದಿರ್ದರೆಲ್ಲರಂ ನೋಡಿ ರಣಗಂಗದೊಳ್ |
ಮಿಡಿಕಿ ಮಾತಾಡುವಿವರಂ ಕಂಡು ಲೀಲೆಯಿಂ |
ಪಿಡಿದು ಲವನೆಳೆತಂದು ಕೌತುಕದ ಕಪಿಗಳೆಂದಣ್ಣಂಗೆ ತೋರಿಸಲ್ಕೆ ||
ಕಡು ಮೆಚ್ಚಿ ತಮ್ಮನಂ ಕುಶನಪ್ಪಿದಂ ಬಳಿಕ |
ಪಡೆದ ತಾಯಂ ಕಾಣಲಾ ಪ್ಲವಗ ಪತಿಗಳಂ |
ಬಿಡದನಿಬರಾ ಭರಣಮನಿತುಮಂ ಕೊಂಡಿರ್ವರುಂ ಬಂದರಾಶ್ರಮಕ್ಕೆ ||೪೦||

ಏನಾದರೋ ತನಯರೆಂದು ಚಿಂತಿಸುತಿರ್ಪ |
ಜಾನಕಿಗೆ ರಾಮಾದಿಗಳ ಭೂಷಣಂಗಳಂ |
ಕಾನನದ ಬೇಂಟೆಯೊಳ್ ಸಿಕ್ಕಿ ಸೀಕರಿಗೊಂಬ ಮೃಗಪೋತಕಂಗಳಂತೆ ||
ಮೌನದಿಂ ಮೈಯುಡುಗಿ ನೊಂದೆಳೆತಟಕೆ ಬಿದ್ದ |
ವಾನರಶ್ರೇಷ್ಠರಂ ತಂದಿತ್ತು ಚರಣದೊಳ್ |
ಸೂನುಗಳ್ ಪೊಡಮಡಲ್ಕಾ ಸೀತೆ ನಡುನಡುಗಿ ನಂದನರ್ಗಿಂತೆಂದಳು ||೪೧||

ಆರುಮರಿಯದವೋಲೀ ಕಾನನದೊಳಿರ್ದೆನಾಂ |
ಧಾರಣೀಶರ ಭೂಷಣಂಗಳೇತಕೆ ನಮಗೆ |
ವೀರ ಕಪಿವರರಿವರ್ ಜಗದೊಳಭಿಮಾನಿಗಳ್ ಭಂಗಮೇಕಿಂತಿವರ್ಗೆ ||
ಘೋರಕರ್ಮಂಗಳಂ ಮಾಡಿದಿರಿ ಮಕ್ಕಳೀರ |
ದಾರಿತಪ್ಪಿದಿರಿನ್ನು ವಾಲ್ಮೀಕಿಮುನಿವರಂ |
ಬಾರದಿರನೀಗಳೆ ರಣದೊಳಿವರನಿರಿಸಿ ಬಹುದೆಂದಳವನಿಜೆ ಲವಂಗೆ ||೪೨||

ವೈದೇಹಿ ನುಡಿದುದಂ ಕೈಕೊಂಡು ಲವನವರ |
ನುಯ್ದು ರಣಗಂಗದೊಳ್ ಮಗುಳಿರಿಸಿ ಬಂದ ನಿರ |
ದೈದೆ ನಾರದನಿಂದ ಕೇಳ್ದು ವಾಲ್ಮೀಕಿಮುನಿ ಪಾತಾಳಲೋಕದಿಂದೆ ||
ಮೈದೋರಲಾಶ್ರಮದ್ವಾರದೊಳ್ ಕಂಡು ಮೇ |
ಲ್ವಾಯ್ದುಕ್ಕುವಾನಂದರಸದಿಂದೆ ವಂದನಂ |
ಗೈದಳವನಿಜೆ ಮಣಿದರೆಲ್ಲರುಂ ಜಾನಕಿಯ ಸುತರೆರಗಿದರ್ ಪದದೊಳು ||೪೩||

ಶರ ವೇದಮೂರ್ತಿಗಳ ತೆರದಿಂದೆ ರಾಜಿಸುವ |
ತರಳರಂ ಮಣಿದೆತ್ತಿ ಮಕ್ಕಳಿರ ನಿಮಗೆ ರಘು |
ವರನ ಸೇನೆಯೊಳಾಯ್ತು ಗಡ ಕಲಹಮೇಕೆ ತೊಡಗಿತು ತೋಟಿ ನಿಮ್ಮ ಕೂಡೆ ||
ಧುರಕೆ ಬಂದೆಚ್ಚಾಡಿ ಬಿದ್ದರಾರ್ ಮೆಯ್ಯೊ |
ಳರಿಗಳಂಬಿನ ಗಾಯ ಮಲ್ಲದೆತ್ತಣ ಬಲೋ |
ತ್ಕರದೇಳ್ಗೆ ಪೇಳ್ವುದೆನೆ ವಾಲ್ಮೀಕಿಮುನಿಪುಂಗವಂಗೆ ಕುಶನಿಂತೆಂದನು ||೪೪||

ತಂದೆ ನೀವಿರಲೆಮಗೆ ಸುಕ್ಷೇಮಕರಮಪ್ಪು |
ದೆಂದೆಂದುಮಿದು ನಿಜಂ ನಿಮ್ಮಡಿಗಳುಪ್ರದೆಶ |
ದಿಂದರಿಗಳಂ ಗೆಲ್ದೆವೀನಿಮ್ಮ ಪುಣ್ಯಾಶ್ರಮದೊಳಾಯ್ತು ಭೂತ ಹಿಂಸೆ ||
ಬಂದುದೊಂದಶವಮದನೀ ಲವಂ ಕಟ್ಟಿದಂ |
ಮಂದಿ ಕವಿದುದು ಮೇಲೆ ಶತ್ರುಘ್ನನುರುಬಿದಂ |
ಸಂಧಿಸಿದೆ ನಾಂ ಬಳಿಕ ಸೌಮಿತ್ರಿ ಭರತ ರಾಮಾದಿಗಳ್ ನಡೆತಂದರು ||೪೫||

ಕಡೆಯ ಮಾತೇನಿನ್ನು ದೊರೆದೊರೆಗಳೆಲ್ಲರಂ |
ಪಡೆಯೊಳ್ ನಿಶಾಟ ಕಪಿ ನರ ಚಾತುರಂಗಮಂ |
ಕೆಡಹಿದೆವೆನಲ್ ಕುಶನ ನುಡಿಗೆ ಸೈವೆರೆಗಾಗಿ ವಾಲ್ಮೀಕಿಮುನಿ ಮನದೊಳು ||
ಕಡುನೊಂದನಕಟಕಟ ತಪ್ಪಾದುದೆನುತೆ ನಡು |
ನಡುಗುತಿಹ ಸೀತೆಯಂ ಸಂತೈಸಿ ವಹಿಲದಿಂ |
ನಡೆತಂದನೊಡನಿರ್ದ ತಾಪನ ವಿತತಿ ಸಹಿತ ಸಂಗ್ರಾಮ ಭೂಮಿತಗಾಗಿ ||೪೬||

ಶರಧಿಯಂ ಕಟ್ಟುವಂದಾ ರಾಘವೇಶ್ವರಂ |
ಧರೆಯೊಳಿಟ್ಟಣಿಸಿರ್ದ ಬೆಟ್ಟಂಗಳೆಲ್ಲಮಂ |
ತರಿಸಿದಂ ಭೂಮಿಗಾಧಾರಮಿಲ್ಲದೆ ಪೋಪುದೆಂದವನ ತನುಜಾತರು ||
ಗಿರಿಗಳಂ ಪ್ರತಿಯಾಗಿ ತಂದಿಳೆಯಮೇಲಿನ್ನು |
ಪರಪಿದರೊ ಪೇಳೆನಲ್ ಪೊಡೆಗೆಡೆದು ಬಿದ್ದಿರ್ದ |
ಕರಿಘಟೆಗಳಟ್ಟೆಗಳ್ ಕಾಣಿಸಿದುವಾ ರಣದೊಳಾ ತಪೋನಿಧಿಯ ಕಣ್ಗೆ ||೪೭||

ತಟ್ಟುಗೆಡದಿಹ ವಾಜ ವಾರಣ ವರೂಥದಿಂ |
ದಿಟ್ಟಣಿಸಿ ಬಿದ್ದ ರಾಕ್ಷಸ ಮನುಜ ಕಪಿಗಳಿಂ |
ದೆಟ್ಟಡಿದಗಲಕೆ ಚೆಲ್ಲಿದ ಛತ್ರ ಚಾಮರ ಪತಾಕೆಗಳ ಮೆದೆಗಳಿಂದೆ ||
ಒಟ್ಟೊಟ್ಟಿಲಾಗಿ ಸೂಸಿದ ಪಲವು ಕೈದುಗಳ |
ಬೆಟ್ಟಂಗಳಿಂ ಮಿದುಳ್ ನೆಣ ವಸೆ ಕರುಳ್ಗಳಿಂ |
ಕಟ್ಟುಗ್ರಮಾದ ರಣರಂಗದೊಳ್ ವಾಲ್ಮೀಕಿಮುನಿ ರಾಮನಂ ಕಂಡನು ||೪೮||

ಅಂದು ಪುರಹೂತವೈರಿಯ ಸರ್ಪಶರದಿಂದೆ |
ಪೊಂದಿದ ಸಮಸ್ತ ಬಲ ಸಹಿತ ಬಿದ್ದೆಚ್ಚರಳಿ |
ದಂದದಿಂ ನಸು ಮಸುಳ್ದಾನನದ ನಿಶೆಯ ತಾವರೆವೊಲಾಗಿದ ಕಣ್ಗಳ ||
ಕಂದಿದವಯವದ ಕಾಂತಿಗಳ ಕರ ಪಂಕರುಹ |
ದಿಂದೆ ಕೆಲಕೋಸರಿಸೆ ಬಿದ್ದ ಬಿಲ್ಲಂಬುಗಳ |
ನೊಂದ ಗಾಯದ ನೆತ್ತರೊರತೆಗಳ ರಾಮನಂ ಕಂಡು ಮುನಿ ಬೆರಗಾದನು ||೪೯||

ಈಕ್ಷಸಿ ಕಮಂಡಲೋದಕದಿಂದೆ ಮುನಿವರಂ |
ಪ್ರೋಕ್ಷಿಸಿದೊಡುರಗ ತಲ್ಪದೊಳುಪ್ಪಡಿಸುವ |
ಬ್ಜಾಕ್ಷನೀತಂ ತಪ್ಪದೆಂಬಂತೆ ಕಣ್ದೆರದು ವಾಲ್ಮೀಕಿಗಭಿನಮಿಸಲು ||
ಸಾಕ್ಷಾಜ್ಜಗನ್ನಾಥ ಸರ್ವಕಾರಣ ಸಕಲ |
ರಾಕ್ಷಸಾಂತಕ ಭಕ್ತವತ್ಸಲ ಕೃಪಾಲು ನಿರ |
ಪೇಕ್ಷ ರಾಘವ ರಾಮ ಚಿತ್ತಾವಧಾನಮೆಂದಾ ಮುನಿ ಪೊಗಳುತಿರ್ದನು ||೫೦||

ಬಳಿಕ ರಾಘವನ ಸಿರಿಮುಡಿಗೆ ನಭದಿಂದೆ ಪೂ |
ಮಳೆ ಕರೆದುದತ್ಸವದೊಳಮರ ದುಂದುಭಿಗಳುರೆ |
ಮೊಳಗಿದವು ಋಷಿಮಂತ್ರಪೂತ ಜಲದಿಂದ ಭರತಾದಿಗಳ್ ಜೀವಿಸಿದರು ||
ತಳೆದರನಿಮಿಷರಮೃತಮಂ ಬಿದ್ದ ಪಡೆಯ ಮೇ |
ಲುಳಿಯದೆ ಸಮಸ್ತಸೈನಿಕಮೆದ್ದುದಾಗ ಪೆರೆ |
ಗಳೆದ ಪಣಿ ಕುಲದಂತೆ ನಲಿದು ಚತುರ್ಬಲಂ ಪೇಳಲೇನಚ್ಚರಿಯನು ||೫೧||

ಬರಿಸಿದಂ ನೆನೆದು ಸುರಧೇನುವಂ ವಾಲ್ಮೀಕಿ |
ಪರಮ ಸಂಪ್ರೀತಿಯಿಂ ಬೇಡಿದ ಪದಾರ್ಥಮಂ |
ತರಿಸಿದಂ ದುಗ್ಧಾಭೀಷೇಕಮಂ ಮಾಡಿಸಿದನಾ ರಾಘವೇಶ್ವರಂಗೆ ||
ಭರತಾದಿಗಳ್ವೆರಸಿ ಕುಳ್ಳಿರ್ದ ಬಳಿಕ ಪತಿ |
ಕರಿಸಿ ಕಾಕುತ್ಸ್ಥನಂ ಕೊಂಡಾಡಿ ನೇಮದಿಂ |
ಕರಿಸಿ ಕುಶಲವರಂ ಪದಾಬ್ಜದೊಳ್ ಕೆಡಹಿ ಮುನಿವರನೊಯ್ಯನಿಂತೆಂದನು ||೫೨||

ರಾಜೇಂದ್ರ ಕೋಪಮಂ ಮಾಡದಿರ್ ನಿನ್ನಂ ಕೃ |
ಪಾಜಲಧಿಯೆಂದು ಮರೆವೊಕ್ಕರಂ ಕಾವನೆಂ |
ದೀಜಗಂ ಬಣ್ಣಿಪುದು ನಿನ್ನ ತನುಸಂಭವರ್ ಜಾನಕಿಯ ಮಕ್ಕಳಿವರು ||
ಓಜೆತಪ್ಪಿದರಾಶ್ರಮದೊಳಿದ್ದುದಿಲ್ಲ ಮಖ |
ಯಾಜನಕೆ ವರುಣಂ ಕರೆಸಲಾಗಿ ಪೋದೆನೀ |
ವ್ಯಾಜಮಂ ತಾನರಿಯೆನಪರಾಧಮೆನಿತುಳ್ಳೊಡಂ ಸೈರಿಸುವುದೆಂದನು ||೫೩||

ಜಾತಂ ವಿನೀತನಾಗಲಿ ಧೂರ್ತನಾಗಿರಲಿ |
ತಾತಂಗೆ ವಿರಹಿತವೆ ನೋಡದಿರ್ ಬಾಲಕರ |
ತೀತಮಂ ಕ್ಷಮಿಸೆಂದು ವಾಲ್ಮೀಕಿ ನುಡಿಯೆ ರಾಘವ ನೂರ್ಮಿಳಾಪತಿಯನು ||
ಸೀತೆ ಸುತರಂ ಪಡೆದಳೆಂತೆನೆ ತವಾಜ್ಞೆಯಿಂ |
ಶ್ವೇತನದಿಯಂ ದಾಂಟಿ ಪೂರ್ಣಗರ್ಭೀಣಿಯಾದ |
ಭೂ ತನುಜೆಯಂ ಕಾನನದೊಳಿರಿಸಿ ಬಂದೆನಲ್ಲದೆ ಮುಂದರಿಯೆನೆಂದನು ||೫೪||

ಇಂತೆಂದು ಲಕ್ಷ್ಮಣಂ ನುಡಿಯೆ ವಾಲ್ಮೀಕಿ ಸಮ |
ನಂತರದೊಳೇಕಾಕಿಯಾಗಿ ಜಾನಕಿ ವಿರಹ |
ಸಂತಾಪದಿಂದಡವಿಯೊಳ್ ತೊಳಲುತಿರ್ದುದಂ ಕಂಡು ತನ್ನಾಶ್ರಮಕ್ಕೆ ||
ಸಂತೈಸಿ ಕೂಡೆ ಕೊಂಡೊಯ್ದಯದಂ ಬಳಿಕಲ್ಲಿ |
ಸಂತತಿಗಳಾದುದಂ ತಾನವರ್ಗಿಲ್ಲಿ ಪ |
ರ‍್ಯಂತರಂ ಮಾಡಿಸಿದ ಕೃತ್ಯಂಗಳೆಲ್ಲಮಂ ಪೇಳ್ದಂ ರಘೂದ್ವಹಂಗೆ ||೫೫||

ಬಳಿಕ ವಾಲ್ಮೀಕಿ ನಿಜಶಿಷ್ಯರಂ ಸದನಕ್ಕೆ |
ಕಳುಹಿ ತರಿಸಿದನಮಲ ವಲ್ಲಕಿಗಳಂ ತನ್ನ |
ಬಳಿಯೊಳಭ್ಯಾಸಮಂ ಮಾಡಿಸಿದ ರಾಮಚಾರಿತ್ರಮಂ ತುದಿಮೊದಲ್ಗೆ ||
ಲಲಿತ ಸಾಳಂಗ ಸಾವೇರಿ ಗುಜ್ಜರಿ ಗೌಳ |
ಪಳಮಂಜಠಿಗಳೆಂಬ ವಿವಿಧ ರಾಗಂಗಳಂ |
ಬಳಸಿ ಪಾಟಿಸಿದ ನೆರಡನೆಯ ತುಂಬುರು ನಾರದರ ತೆರದಿ ಕುಶ ಲವರನು ||೫೬||

ವೀಣೆಯಂ ಕೈಗಿತ್ತು ಬಲಕರ ವದನದೊಳ್ |
ವಾಣಿ ತಾಂ ನೆಲಸಿದಳೊ ಗಾನದೇವತೆಯ ಮೈ |
ಗಾಣಿಕೆಯೊ ಮೋಹನದ ತನಿರಸವೊ ಸೊಗಯಿಸುವ ಕರ್ಣಾಮೃತವೋ ಪೇಳೆನೆ ||
ಜಾಣುಣ್ಮೆ ಜೋಕೆಯಿಂ ಜತಿ ರೀತಿ ತಾಳ ಪ್ರ |
ಮಾಣ ಕಂಪಿತ ಮೂರ್ಛೆ ರಸ ಪಾಡು ಬೆಡಗು ಬಿ |
ನ್ನಾಣ ಲಯ ಮಾಹತ ಪ್ರತ್ಯಾಹತ ವ್ಯಾಪ್ತಿಯರಿದು ಕೇಳಿಸಿದರವರು ||೫೭||

ಸ್ಥಾಯಿ ಸಂಚಾರಿಗಳ ಸರಿಗಮ ಪಧನಿಯ ಸರ |
ದಾಯತದ ಶುದ್ಧ ಸಂಕೀರ್ಣ ಸಾಳಗದ ಪೂ |
ರಾಯತ ಸುತಾನಂಗಳಂ ತಾರ ಮಧ್ಯ ಮಂದ್ರಗಳಿಂದೆ ಸೊಗಸುಗೊಳಿಸಿ ||
ಗೇಯ ರಸಮೊಸರೆ ಪಾಡಿದರವರ್ ವಿನುತ ರಾ |
ಮಾಯಣದ ಸುಶ್ಲೋಕಮಾಲೆಯಂ ಕೇಳ್ದು ರಘು |
ರಾಯನುರೆ ಮೆಚ್ಚಿಕೊಂಡಾಡಿ ನಸುನಗೆಯಿಂದೆ ಸೌಮಿತ್ರಿಗಿಂತೆಂದನು ||೫೮||

ಭಾವಿಸಲೆ ಸೌಮಿತ್ರಿ ಬಾಲಕರ್ ಸುಲಲಿತ ವ |
ಚೋ ವಿಲಾಸಂಗಳಿಂ ಸ್ವರದಿಂದೆ ರೂಪಿಂದೆ |
ಲಾವಣ್ಯದಿಂದೆ ಗತಿಯಿಂದೆ ಚೇಷ್ಟೆಗಳಿಂದೆ ಸೀತೆಯಂ ನೆನೆಯಿಸುವರು ||
ದೇವಿಯನಗಲ್ದ ವಿರಹಾಗ್ನಿ ಸುತ ದರ್ಶನದ |
ಜೀವನದೊಳುರೆ ನಂದಿತಾದುದಿನಕುಲದೇಳ್ಗೆ |
ಭೂವಲಯದೊಳ್ ತನ್ನ ಬಾಣಮಂ ಬಂಜೆಗೈದಪರೆ ಪೊರಬಿಗರೆಂದನು ||೫೯||

ರಾಯನಾಡಿನ ನುಡಿಗೆ ನಸುನಗುತೆ ಲಕ್ಷ್ಮಣಂ |
ಜೀಯ ನಿನ್ನಂಬುಗಳ್ ಮೋಘಮಾದುಪುವೆ ಪರ |
ಸಾಯಕದೊಳೀತಗಳ್ ನಿನ್ನಸುತರದರಿಂದೆ ನೆಲೆಗೊಂಡುದಾತ್ಮ ಶಕ್ತಿ ||
ಈ ಯಮಳರಂ ಪರಿಗ್ರಹಿಸೆಂದೊಡಾ ಕೌಸ |
ಲೇಯನತಿ ಧನ್ಯರಾವೆಂದು ವಾಲ್ಮೀಕಿಯಂ |
ಪ್ರೀಯೋಕ್ತಿಯಿಂದೆ ಕೊಂಡಾಡಿ ಸುಕುಮಾರರಂ ಕರೆದಾಗಳಿಂತೆಂದನು ||೬೦||

ಅರ ತನುಜಾತರೆಲೆ ಮಕ್ಕಳಿರ ನಿಮಗಿನಿತು |
ವೀರತ್ವಮೆತ್ತಣದು ಪೇಳ್ವದೆಂದಾತ್ಮಜರ |
ನಾರಾಘವಂ ಕೇಳ್ವುಡವರಾವು ಜಾನಕಿಯ ಗರ್ಭಸಂಭವರೆಮ್ಮನು ||
ಆರೈದು ವಾಲ್ಮೀಕಿಮುನಿ ಸಲಹಿ ಸಕಲವಿ |
ದ್ಯಾರಾಜಿಯಂ ಕಲಿಸಿದಂ ದೇವ ನಿನ್ನ ಪದ |
ವಾರಿಜಿಕೆ ದ್ರೋಹಮಂ ಮಾಡಿದೆವು ಸೈರಿಸುವೆದೆಂದೆರಗಿದರ್ ಪದದೊಳು ||೬೧||

ತನಯರಂ ತೆಗೆದೊಡನೆ ಮುಂಡಾಡಿ ಬಿಗಿಯಪ್ಪಿ |
ಘನತರಸ್ನೇಹದಿಂ ಶಿರವನಾಘ್ರಾಣಿಸಿ ವ |
ದನವ ನೊಡನೊಡನೆ ಚುಂಬಿಸಿ ಮತ್ತೆಮತ್ತೆ ವಾಲ್ಮೀಕಿಯಂ ಮಿಗೆ ಪೊಗಳುತೆ ||
ಅನುಜರಿಂದೊಡಗೂಡಿ ರಘುವರಂ ಸಂತೋಷ |
ವನಧಿಯೊಳ್ ಮುಳುಗಿದಂ ಸುಕುಮಾರರಂ ಕೊಂಡು |
ಕೊನರಿತು ಸಮಸ್ತ ಪರಿವಾರಮುತ್ಸವದಿಂದೆ ಮೊಳಗಿದುವು ವಾದ್ಯಂಗಳಂ ||೬೨||

ಬಳಿಕ ವಾಲ್ಮೀಕಿಯಂ ಸತ್ಕರಿಸಿ ಸೀತೆ ಭೂ |
ತಳವರಿಯೆ ಪರಿಶುದ್ಧೆ ಲೋಕಾಪವಾದಕ್ಕೆ |
ಕಳೆದೆನೆಂತಾದೊದಂ ಪುತ್ರರಂ ಪಡೆದಳಿನ್ನರವರಿಸದೆನ್ನ ಬಳಿಗೆ ||
ಕಳೂಹೆಂದು ಬೀಳ್ಕೊಂಡು ಸುತ ಸಹೋದರರೊಡನೆ |
ದಳಸಹಿತ ಹಯವರಂ ವೆರಸಿ ನಿಜಪುರಕೆ ಬಂ |
ದುಳಿದಿರ್ದ ಯಜ್ಞಮಂ ನಡೆಸಿದಂ ಮೂಜಗಂ ಪೊಗಳಲ್ಕೆ ರಘುನಾಥನು ||೬೩||

ಇತ್ತ ನಿಜತನುಜರಂ ಕಳುಹಿ ವಾಲ್ಮೀಕಿಮುನಿ |
ಪೋತ್ತಮಂ ಬರಲಾಶ್ರಮ ದ್ವಾರದೊಳ್ ಕಂಡು |
ಚಿತ್ತದೊಳ್ ಮರುಗುತೇನಾದರೆಲೆ ತಾತ ಕುಶ ಲವರೊಡಲ್ವಿಡಿವೆನೆಂತೂ ||
ಪೆತ್ತಂದು ಮೊದಲಾಗಿ ಪತಿವಿರಹಮಂ ಮರೆದು |
ಪೊತ್ತಿರ್ದೆನೀದೇಹಮಂ ತನ್ನ ಸುತರನಾ |
ರ್ಗಿತ್ತು ನೀನೈತಂದೆ ಹೇಳೆಂದು ಜಾನಕಿ ಬಿದ್ದಳಂಘ್ರಿಗಳ್ಗೆ ||೬೪||

ಮಣಿದೆತ್ತಿ ಸೀತೆಯಂ ಸಂತಯಸಿ ಮಗಳೆ ನಿ |
ನ್ನಣುಗರಂ ತಮ್ಮ ತಾತಂ ಕೂಡಿ ಕೊಂಡೊಯ್ದ |
ನೆಣಿಕೆಬೇಡಿದಕಿನ್ನು ನಿನ್ನುಮಂ ಕಾಂತನಲ್ಲಿಗೆ ಕಳುಹಿ ಬರ್ಪೆನೆಂದು ||
ಗುಣದಿಂದೊಡಂಬಡಿಸಿ ವಾಲ್ಮೀಕಿ ಮುನಿವರಂ |
ಮಣಿರಥವನೇರಿಸಿ ಸಮಸ್ತ ವೈಭವದಿಂ ಧ |
ರಣಿಜೆಯಂ ತಂದಯೋಧಾಪುರದೊಳಿರಿಸಿ ರಘುನಾಥನಂ ಕಾಣಿಸಿದನು ||೬೫||

ಮೇಲೆ ಜಾನಕಿ ಸಹಿತ ರಾಘವಂ ಸಾಮ್ರಾಜ್ಯ |
ಲೋಲನಾಗಿರ್ದನೆಲೆ ಜನಮೇಜಯಾವನೀ |
ಪಾಲ ಕೇಳ್ದೈ ಕುಶಲವ ರಾಮಂಗೆ ಬಂದ ಕದನದ ಕಥೆಯನು ||
ಮೂಲೋಕಕಿದು ಪುಣ್ಯವತಿರಮ್ಯಮಾಗಿರ್ಪು |
ದಾಲಿಪರ್ಗಾಯುರಾರೋಗ್ಯವೈಶ್ವರ‍್ಯಂ ವಿ |
ಶಾಲ ಮತಿ ಸತ್ಕೀರ್ತಿ ವಿಮಲಸಂತತಿ ಸುಗತಿ ದೊರೆಕೊಂಬುದಿಪರದೊಳು ||೬೬||

ಅರಸ ನೀಂ ಬೆಸಗೊಳಲ್ ಪೇಳ್ದೆನಾಂ ಕುಶ ರಾಘ |
ವರ ಯುದ್ಧಮಂ ಸುರಪ ಫಲುಗುಣನ ಕಾಳಗನ |
ನೊರೆಯಲೇಕಿನ್ನು ಕೇಳ್ದರಿವಲೈ ಬಭ್ರುವಾಹನ ಪಾರ್ಥರಾಹವವನು ||
ವಿರಚಿಸುವೆನೊಲಿದಾಲಿಸೆಂದು ಜೈಮಿನಿ ಮುನೀ |
ಶ್ವರನಿಂದು ಕುಲತಿಲಕ ಜನಮೇಜಯಂಗೆ ವಿ |
ಸ್ತರಿಸಿದಂ ದೇವಪುರ ನಿಲಯ ಲಕ್ಷ್ಮೀಶನಂ ಚಿತ್ತದೊಳ್ ಧ್ಯಾನಿಸುತ್ತೆ ||೬೨||

ಸ್ತರಿಸಿದಂ ದೇವಪುರ ನಿಲಯ ಲಕ್ಷ್ಮೀಶನಂ ಚಿತ್ತದೊಳ್ ಧ್ಯಾನಿಸುತ್ತೆ ||೬೭||