ಪಾರ್ಶ್ವನಾಥ ಪುರಾಣಂ
(ಸಂಖ್ಯೆಗಳು ಆಶ್ವಾಸ ಮತ್ತು ಪದ್ಯವನ್ನು ಸೂಚಿಸುತ್ತವೆ)

ಅಂಕ ೯ – ೧೩ ಶೂರ

ಅಂಗಚಿತ್ತ ೭ – ೭೮ ಉಡುಗೊರೆ

ಅಂತಿಕ ೯ – ೬೨ ಸಮೀಪ, ಹತ್ತಿರ

ಅಂಶು ೧೬ – ೨೭ ಕಾಂತಿ

ಅಂಶುಕ ೭ – ೩೦ ಸೀರೆ

ಅಗ್ಗ ೨ – ೫೧ ಶ್ರೇಷ್ಠ

ಅಡಕಿಲು ೫ – ೬೮ ಒಂದರ ಮೇಲೆ ಒಂದು ಇಡುವುದು

ಅಣಿ ೩ – ೧೩೭ ಸೈನ್ಯ

ಅತ್ತಳಗ ೪ – ೬೪ ಅಸಾಧ್ಯ

ಅದವಳಲು ೩ – ೮೬ ದುಃಖ

ಅಧಿಷ್ಠಾನ ೫ – ೬೮ ತಳಹದಿ

ಅಧ್ವ ೩ – ೪೫ ದಾರಿ

ಅನುವರ ೧೦ – ೧೧೪ ಯುದ್ಧ

ಅಪವರ್ಗ ೪೧ – ೧೪೬ ಮೋಕ್ಷ

ಅಭಿಜಾತ ೬ – ೬೮ವ ಹೊಸ, ನವ

ಅಭಿಲಕ್ಷಿತ ೧೬ – ೫೮ ಬಯಸಿದ

ಅಮ್ಮ ೪ – ೧೫೪ ತಂದೆ

ಅಯಃಪುತ್ರಿಕೆ ೬ – ೮೯ ಕಬ್ಬಿಣದ ಗೊಂಬೆ

ಅಱುನೀರ್‌೬ – ೪೯ಬತ್ತಿದ ನೀರು

ಅಲರ್ವಾಸು ೯ – ೩೧ ಹೂವಿನ ಹಾಸಿಗೆ

ಅವಕರ್ಣಂಗೆಯ್‌೪ – ೧೫೪ ಕಿವಿಯ ಮೇಲೆ ಹಾಕಿಕೊಳ್ಳದಿರುವುದು

ಅವಚಱು ೪ – ೭೧ ಅಸಹ್ಯಪಡು

ಅವುಡಲ ೩ – ೧೩೧ ಹರಳುಗಿಡ

ಆಟಿಸು ೩ – ೧೦೧ ಆಸೆಪಡು

ಆತಪ ೩ – ೩೨ ವ ಸೂರ್ಯ

ಆದಂ ೬ – ೧೨ ವಿಶೇಷ

ಆದವೆ ೩ – ೧೦೪ ವಿಶೇಷವಾಗಿ

ಆಮೋದ ೮ – ೧೦೩ ಸುವಾಸನೆ

ಆಯುತ್ತರು ೨ – ೪೫ ಸ್ನೇಹಿತರು

ಆಸು ೧೨ – ೫೮ ಆಚದ ಮರ

ಆಸುರ ೩ – ೧೨೨ ಭಯಂಕರ

ಆಸೆ ೧೧ – ೯೩ ದಿಕ್ಕು

ಇಡುವು ೪ – ೧೨೪ ಸಂದಿ

ಈಶಿತೆ ೫ – ೧೧೧ ಸಾಮರ್ಥ್ಯ

ಉಂಡಿಗೆ ೮ – ೩೪ವ ಮುದ್ರೆ

ಉಕ್ಕೆವ ೨ – ೩೮ ಮೋಸ

ಉಗೆಮಿಗು ೯ – ೬೮ ವಿಶೇಷವಾಗಿ

ಉಜ್ಜುಗ ೨ – ೪೫ ಉದ್ಯೋಗ

ಉಡು ೮ – ೮ ನಕ್ಷತ್ರ

ಉತ್ತರಿಸು ೬ – ೫೫ ದಾಟು

ಉತ್ಸವ ೩ – ೩೩ ಉತ್ಸಾಹ

ಉದಯರಾಗ ೩ – ೩೪ ಬೆಳಗಿನ ಕೆಂಪು

ಉದ್ದ ಮುರಿಸು ೩ – ೯೯ ವ ಉದ್ದೀಪಿಸು

ಉದ್ಘ ೮ – ೧೦೩ಸುಖ

ಉಪಶಮ ೫ – ೪೭ ಇಂದ್ರಿಯ ನಿಗ್ರಹ

ಉಮ್ಮಚ್ಚ ೧೦ – ೧೧೪ ಕೋಪ

ಉವಿ ೧೫ – ೧೭ ಹೊಟ್ಟು

ಋಜ್ವಾಗತ ೧೫ – ೯೬ ನೆಟ್ಟಗೆ ನಿಲ್ಲುವುದು

ಎಕ್ಕಲಾವಣಂ ೧೨ – ೮೦ ಅಸದೃಶ

ಎಡಪು ೨ – ೪೯ ತಪ್ಪು ಮಾಡು

ಎರೆ ೬ – ೧೦೮ವ ಆಹಾರ

ಎಱೆನೆಟ್ಟು ೫ – ೮೭ ಆಶ್ರಯ

ಏಡಿಸು ೧೫ – ೧೧೨ ಹಾಸ್ಯಮಾಡು

ಏಱು ೩ – ೧೦೦ ಗಾಯ

ಏವ ೧೦ – ೮ ಹೊಟ್ಟೆಕಿಚ್ಚು

ಏೞಗ ೭ – ೯೪ ಆಡು, ಟಗರು

ಏೞಿದ ೪ – ೬೩ ಅವಮಾನ, ತಿಸ್ಕಾರ

ಐನ ೧೫ – ೭೧ ಪಾಪ

ಒಣರ್‌೨ – ೭೬ ಹೇಳು

ಓಜೆ ೩ – ೩೬ ಕ್ರಮ

ಕಂಠೀರವ ೫ – ೪೯ ಸಿಂಹ

ಕಂಡೂತಿ ೨ – ೨೧ ತುರಿಕೆ

ಕಂಬು ೭ – ೩೩ವ ಶಂಖ

ಕಂಭೆಯ೧೪ – ೬೬ಒಂದು ರೀತಿಯ ಬಟ್ಟೆ

ಕಟುತ್ರಯ ೨ – ೪೦ ಶುಂಠಿ, ಮೆಣಸು, ಹಿಪ್ಪಲಿಗಳ ಮಿಶ್ರಣ

ಕಟ್ಟಳೆ ೩ – ೧೩೪ ತೂಕದ ಬಟ್ಟು

ಕಡ ೯ – ೧೦ ಸಾಲ

ಕಡವ ೮ – ೧೭ ಒಂದು ಜಾತಿಯ ಮರ

ಕಣಿಯ ೬ – ೧೦ ಸೀರೆಯ ನಿರಿ

ಕಣಿಶ ೭ – ೨೧ ತೆನೆ

ಕತಕ ೫ – ೪೦ ನೀರು ಶುದ್ಧಿ ಮಾಡುವ ಬೀಜ

ಕಪೋಳ ಪತ್ರ ೨ – ೧೭ ಅಲಂಕಾರಕ್ಕಾಗಿ

ಕೆನ್ನೆಯ ಮೇಲೆ ಬರೆಯುವ ರೇಖಾ ವಿನ್ಯಾಸ, ಮಕರಿಕಾಪತ್ರ

ಕರಡಿಗೆ ೫ – ೮೧ ಕರಂಡಿಕೆ, ಪೆಟ್ಟಿಗೆ

ಕರವಳಯ ೨ – ೫೨ವ ಬಳೆ

ಕರುಮಾಡ ೫ – ೬೮ ಮಹಡಿ ಮನೆ

ಕವಣೆ ೩ – ೧೪೦ ಕಲ್ಲಿನಿಂದ ಬೀಸಿಹೊಡೆಯಲು ಮಾಡಿದ ಸಾಧನ

ಕವಳ ೩ – ೧೦೦ ಎಲೆಯಡಿಕೆ

ಕಳವೆ ೭ – ೨೩ವ ಬತ್ತ

ಕಳ ೧೪ – ೩೧ ಕಲರವ

ಕಳಾವಿದುರ ೧೬ – ೮ ಕಲಾವಿದ

ಕಾಕಳಿ ೧೬ – ೪೪ ಕಲಕಲಧ್ವನಿ

ಕಾರ್ತಸ್ವರ ೮ – ೧೦೦ ಚಿನ್ನ

ಕಾಳು ೬ – ೯೧ ವ್ಯರ್ಥ

ಕಿನಿಸು ೧೦ – ೫೬ ಕೋಪಿಸು

ಕುಂಜರ ೪ – ೧೦೯ ಆನೆ

ಕುಂಥು ೬ – ೭೦ ಸಣ್ಣ ದೇಹವುಳ್ಳ ಪ್ರಾಣಿಗಳಲ್ಲಿ ಕೊನೆಯದು

ಕುಡ್ಯ ೧೬ – ೧೬೮ ಗೋಡೆ

ಕುಱುಂಬುಗೊಳಿಸು ೧೦ – ೮೯ ಚಿಕ್ಕದಾಗಿ ಅಡಗಿಸು

ಕುಱುವ ೮ – ೧೭ ನಡುಗಡ್ಡೆ

ಕುಲಿಂಗಿ ೧೫ – ೨೧ ಮತಭ್ರಷ್ಟ

ಕುಳಿಸ ೫ – ೪೨ ವಜ್ರ

ಕುೞುಂಪೆಯ ಜಲ ೧೦ – ೧೦೮ ಮೊಣಕಾಲಿನಷ್ಟು ನೀರು

ಕೊಂಟಿ ೧೦ – ೭೧ವ ಪರಿಹಾಸ್ಯ

ಕೆಯ್ಪಿಡಿ ೯ – ೨೭ ಕೈಗನ್ನಡಿ

ಕೇಕರ ೭ – ೩೯ ಕಡೆಗಣ್ಣ ನೋಟ, ಕಾಂತಿ

ಕೇದಾರ ೬ – ೧೦೩ ಗದ್ದೆ, ಭೂಮಿ

ಕೊಂಡುಕೊನೆ ೯ – ೬೦ವ ಹೊಗಳು

ಕೋಡಗಗಟ್ಟು ೨ – ೧೮ ಬಿಗಿಯಾದ ಬಂಧನ

ಕ್ಷಾಯಿಕ ೫ – ೪೭ ಸಮ್ಯಕ್ತ್ಯದ ಒಂದು ಭೇದ

ಖನಿತ್ರ ೫ – ೩೫ ಗುದ್ದಲಿ

ಖೞ್ಗಿ ೧೧ – ೪೯ ಖಡ್ಗಮೃಗ

ಖೇಟ ೨ – ೫೧ವ ಖೇಡ, ಹಳ್ಳಿ

ಖೇಡಕುೞಿ ೭ – ೮೯ ಉದ್ಯಾನದಲ್ಲಿ ಮಾಡಿಕೊಂಡಿರುವ ವಿಹಾರದ ಕೊಳ

ಗಂಪಲು ೫ – ೬೧ ಕೆಸರು

ಗದಿತ ೪ – ೯ ಹೇಳಿದ

ಗಿಡಿಗ ೩ – ೧೪೨ ಒಂದು ಆಯುಧ

ಗಿರಿವ ೩ – ೪೧ ನುಂಗುವ

ಗುಡಿ ೨ – ೭೫ ಬಾವುಟ

ಗುಣ್ಪು ೩ – ೧೪೧ವ ಆಳ

ಗುಮ್ಮ ೩ – ೧೪೧ ಒಂದು ಉಪಕರಣ

ಗೃಹಮತ್ತರ ೨ – ೯೮ವ ಅರಮನೆಯ ಆಡಳಿತದ ಮುಖ್ಯಾಧಿಕಾರಿ, ಮನೆವೆಗ್ಗಡೆ

ಗೆಂಟು ೭ – ೮ ದೂರ

ಗೆಡೆ ೧೨ – ೬೯ ಸಂಬಂಧ

ಗೋರಿ ೧೫ – ೪೪ ಬೇಡರ ಹಾಡಿನ ಇಂಪು

ಘಟ್ಟಿ ೭ – ೪೨ ಗಂಧ ತೇಯುವವನು

ಘರ್ಮಜಳ ೮ – ೧೦೩ ಬೆವರು

ಚಣ ೬ – ೯೧ ಚೀರ್ಣ, ಇಕ್ಕಳ

ಚತುರ್ಥಕಾಲ ೭ – ೧೧ ಸುಷಮಕಾಲ

ಚಳಕಿಗೆ ೯ – ೭೪ ಒಂದು ಆಭರಣ, ಜಡೆಬಿಲ್ಲೆ

ಚಾರಣ ೩ – ೩೬ ಹೊಗಳುವಿಕೆ

ಚೊಕ್ಕಳಂ ೪ – ೯೧ ಸದಾಚಾರ ಉಳ್ಳವನು

ಚೌತ ೯ – ೧೨ ಪೊಗದಿ, ಕಪ್ಪ

ಜಯನ ಶಾಲೆ ೭ – ೩೮ ಮನ್ಮಥನ ಆಯುಧಶಾಲೆ

ಜರಗು ೪ – ೯೪ ಅಕ್ಕಸಾಲಿಗರ ಅಗ್ಗಿಷ್ಟಿಕೆಯ ಬೂದಿ

ಜರಿಯಿಸು ೩ – ೧೪೧ ಬೀಳಿಸು

ಜವನಿಕೆ ೧೪ – ೧೨೩ ತೆರೆ

ಜಾಂಗಳ ವಿದ್ಯೆ ೮ – ೪೯ವ ವಿಷಪರೀಕ್ಷೆಯ ವಿದ್ಯೆ

ಜಾತರೂಪಧರ ೪ – ೧೪೮ ದಿಗಂಬರ

ಜಾಱು ೫ – ೧೦೨ ಸಂಶಯ

ಜೊತ್ತಿಸು ೩ – ೫೭ ಜೊತೆಗೂಡಿಸು

ಡಾಣೆ ೨ – ೬೩ ದೊಣ್ಣೆ

ಡೆಂಕಣಿ ೩ – ೧೩೬ ಕೋಟೆಯ ಮೇಲಿನ ಬುರುಜು

ಡೊಕ್ಕರಿ ೧೬ – ೧೦ವ ಹಳ್ಳ, ಡೊಗರು

ತಂಬುಲ ೩ – ೧೦೦ ವೀಳೆಯವನ್ನು ಜಗಿದ ಎಂಜಲು

ತಱಿಸಲ್‌೧೫ – ೭೧ ಸಿದ್ಧನಾಗು

ತವಂಗ ೭ – ೩೭ ಅಟ್ಟಣೆ

ತೞ್ಕೈಸು ೩ – ೭ ಅಪ್ಪು

ತಾತ ೧೪ – ೧೧೭ ತಂದೆ

ತಾಳಂಗುಟ್ಟು ೩ – ೧೧೯ವ ತಾಳಬಾರಿಸು

ತಿಳಕ ೯ – ೩೨ ಒಂದು ಜಾತಿಯ ಮರ

ತೀನ್‌೧೫ – ೧೦೦ ಕಡಿತ, ತೀಟೆ

ತುಡುಗುಣಿ ನಾಯ್‌೩ – ೬೦ ಕಳ್ಳನಾಯಿ

ತೊದಳು ೫ – ೭೭ ಸುಳ್ಳು

ತೋರ ೧೬ – ೫ ದಪ್ಪ

ತೋರಗುಂಡು ೩ – ೧೩೧ ದಪ್ಪಕಲ್ಲು

ದಂಭೋಳಿ ೮ – ೧೬ ಸಿಡಿಲು

ದಡ್ಡಿ ೮ – ೯೪ ತಡಿಕೆ

ದಬ್ಬುಕ ೧೫ – ೧೫೮ ಹಾರೆ

ದಶವಿಧದಶೆ ೪ – ೧೦೯ ಅನೆಗೆ ಪೋತ, ವಿಕ್ಕ, ಕಲಭ, ಜವನ, ರೂಪ, ಕಲ್ಯಾಣ, ಯೋದ, ಯೋದತರ, ಸ್ಥವಿರ, ವೃದ್ಧ ಎಂದು ಅವುಗಳ ವಯಸ್ಸಿಗೆ ಅನುಗುಣವಾಗಿ ಹತ್ತು ಅವಸ್ಥೆಗಳು.

ದಳಿಂಬ ೯ – ೩೧ ಒರಗುದಿಂಬು

ದೀಂಟೆ ೪ – ೨೦ ದಿಣ್ಣೆ

ದೂಳಿಗೋಂಟೆ ೩ – ೧೩೧ವ ಲಗ್ಗೆಹತ್ತಿ ಕೋಟೆಯನ್ನು ಪುಡಿ ಮಾಡುವುದು

ದೇಹಾರ ೩ – ೩೦ವ ದೇವರ ಮನೆ

ದ್ವಿಜಿಹ್ವ ೬ – ೬೬ ಹಾವು

ದ್ವಿಪ ೪ – ೧೨೦ ಆನೆ

ನಖಪದ ೩ – ೭೫ ನಖಹತಿ, ಉಗುರ ಹೊಡೆತ ನಯನೀಯ ೧೪ – ೧೧೪ವ ನೋಡಲು ತಕ್ಕುದಾದ

ನಾಂದು ೩ – ೪೫ ನಾದು, ಹೊಸೆ

ನಾಗಪತಿ ೪ – ೧೫೦ ಆನೆ

ನಿಕಷಾಶ್ಮ ೬ – ೨೭ ಒರೆಗಲ್ಲು

ನಿಜ್ಜವಣೆ ೧೨ – ೨೮ಅಂಗನ್ಯಾಸ

ನಿದಾಘ ೧೧ – ೮ ಬೇಸಿಗೆ

ನಿಧಾನ ೪ – ೭೫ ಗುಪ್ತಧನ

ನಿರಯ ೬ – ೭೫ ನರಕ

ನಿರ್ವಂದ ೩ – ೧೨೮ ಒಂದರ ಮೇಲೆ ಒಂದು ಬೀಳುವಂತೆ

ನಿರ್ವೃತಿ ೭ – ೧೪ ಮೋಕ್ಷ

ನೆಲಗನ್ನ ೩ – ೧೪೧ ವ ನೆಲದಲ್ಲಿ ಹಾಕುವ ಕನ್ನ

ನೇಣ್ಕಾರ್ತಿ ೧೨ – ೭೭ ಮೋಸಗಾತಿ

ನೇರಾಣಿಯ ಪೊಂಗಳು ೮ – ೯೩ ಅಪ್ಪಟ ಚಿನ್ನ

ನೋನು ೫ – ೫೩ ವ್ರತವನ್ನು ಹಿಡಿ

ಪಂಕ ೩ – ೩೨ ಕೆಸರು

ಪಂಕಿಳ ೩ – ೩೨ವ ಕೆಸರಿನಿಂದ ಕೂಡಿದ

ಪಂಗು ೧೬ – ೮೫ ಕುಂಟು

ಪಕ್ಕುಮಾಡು ೧೪ – ೩೬ವ ಪಕ್ಕಕ್ಕೆ ತರುವುದು

ಪಕ್ಷ ೫ – ೪೨ ರೆಕ್ಕೆ

ಪಟವಾಸ ೧೪ – ೧೧೩ ಸುಗಂಧದಪುಡಿ

ಪಡಣ ೪ – ೪೩ ಕೇಡು

ಪಡಲಿಗೆ ೩ – ೩೩ವ ಪಾತ್ರೆ

ಪಡಿಯಱವಕ್ಕಿ ೯ – ೨೮ವ ಗಿಳಿ

ಪಡೆವಳ ೩ – ೨ ಸೇನಾಪತಿ

ಪಣ್ಣು ೩ – ೩೫ವ ಹೂಡು, ಒಡ್ಡು

ಪಣ್ಣು ೮ – ೩೨ವ ಸಜ್ಜಾಗು

ಪಯ ೧೪ – ೧೪೪ ಪಾದ

ಪರಿಕಲಿಸು ೧೦ – ೧ವ ವ್ಯಾಪಿಸು

ಪರಿಖೆ ೭ – ೩೪ ಅಗಳು

ಪರಿಯಣ ೧೦ – ೧ವ ತಟ್ಟೆ

ಪವಣಿಸು ೩ – ೪೬ ಅಣಿಗೊಳಿಸು

ಪಸ ೫ – ೪ ಬರ, ಕ್ಷಾಮ

ಪಸಾಯ ೨ – ೪೫ ಉಡುಗೊರೆ

ಪಸು ೧೩ – ೬೬ ಹಂಚು

ಪಳಕ ೭ – ೩೮ ಫಲಕ, ಹಲಗೆ

ಪೞಯಿಗೆ ೩ – ೪೨ ಬಾವುಟ

ಪಾಗುಡ ೧೫ – ೩೧ವ ಉಡುಗೊರೆ

ಪಾಣಿಯವಾಸ ೯ – ೫ ಸುವಾಸನೆಗಟ್ಟಿದ ನೀರನ್ನು ಕೊಡುವ ಅರವಟ್ಟಿಗೆ

ಪಾರದರ ೩ – ೭೩ ವ್ಯಭಿಚಾರ

ಪಾಸಟಿ ೭ – ೭ ಸುಮ

ಪಾಳಂಬಡು ೪ – ೪೪ ದೇವತೆಗೆ ಮಾಡಿಕೊಳ್ಳುವ ಹರಕೆ

ಪಿಂತಿಲ್‌೭ – ೪೧ ಹಿತ್ತಿಲು

ಪಿಡಿ ೯ – ೨೭ ಆನೆ

ಪಣಿಲ್ ೪ – ೧೩೯ ಹಿಣಿಲು, ಡುಬ್ಬ

ಪಿೞ್ಕು ೯ – ೧೩೫ ಆಯುಧಗಳ ಹಿಡಿ

ಪೂವಲಿ ೧೪ – ೧೨೫ ರಂಗವಲ್ಲಿ

ಪೆಳಱು ೧೦ – ೧೦೯ ಬಿರುಕುಬಿಡು

ಪೊಂಕ ೯ – ೧೩ ವರ್ಗ

ಪೋರ್ಕುಳಿ ೨ – ೨೭ ಹೋರಾಟ

ಪೋೞಲ್‌೬ – ೧೦೭ ಪೊಟರೆ

ಪೈತಿಗ ೯ – ೧೬ ಪಿತ್ತವಿಕಾರಗೊಂಡ

ಬಗೆ ೬ – ೨ವ ಮನಸ್ಸು

ಬಟ್ಟೆಗಳ್ವ ಕಳ್ಳ ೩ – ೯೯ ದಾರಿಕಾಯುವ ಕಳ್ಳ

ಬಡವಾನಳ ೭ – ೩೩ ಸಮುದ್ರದೊಳಗಿನ ಬೆಂಕಿ

ಬರ್ಕೆ ೯ – ೯ ಬಕ್ಕೆ ಹಲಸು

ಬಾಯ್ದೆಱೆ ೯ – ೬೫ ತುಟಿ

ಬಾವರಿ ೧೫ – ೮೨ ಚರಿಗೆ

ಬಾಸಣಿಸು ೧೨ – ೧೫ ಮುಚ್ಚು

ಬಾಸಿಗ ೫ – ೯೪ ಬಾಸಿಂಗ, ಹೂವಿನ ಅಲಂಕಾರ

ಬಾಸೆ ೭ – ೧೬ ನಾಭಿಯ ಮೇಲಿನ ಕೂದಲು

ಬಾೞ್ತಿಗೆಯ್‌‌೩ – ೧೧೨ ವ ಲೆಕ್ಕಿಸು

ಬಿಡಾಳ ೩ – ೧೧೨ ಬೆಕ್ಕು

ಬಿಣ್ಗುಂಡು ೭ – ೪೦ ಲಂಗರು

ಬಿದು ೩ – ೧೨೪ ಕುಂಭಸ್ಥಳ

ಬಿಸುಗೆ ೩ – ೧೨೪ ಅಂಬಾರಿ, ಬೆಸುಗೆ

ಬುಗುಟು ೪ – ೨೬ ಹಣೆ ಮೋದಲಾದೆಡೆಗಳಲ್ಲಿ ಏಟು ತಗುಲಿದರೆ ಏಳುವ ಗುಳ್ಳೆ

ಬೆಗಡು ೩ – ೮೬ವ ಆಶ್ಚರ್ಯ

ಬೆಳ್ಳ ೧೨ – ೫೯ ನೀರು

ಬೆಳ್ಳಾಲಂ ೧೨ – ೭೫ ದೊಡ್ಡಬಲೆ

ಬೆಳ್ಮಿಗ ೬ – ೯೯ವ ಜಿಂಕೆ ಮೊದಲಾದ ಸಾಧು ಮೃಗಗಳು

ಬೈಸಿಕೆ ೧೧ – ೩೪ ಕುಳಿತು ನಿಂತು ಮಾಡುವುದು

ಭದ್ರಜಾತಿ ೪ – ೧೪೮ ಭದ್ರಜಾತಿಯ ಆನೆ

ಭೂಭೃತ್ಪತಿ ೭ – ೩೩ವ ಬೆಟ್ಟಗಳ ಒಡೆಯ, ಮೇರುಪರ್ವತ

ಮಂಚಿಗೆ ೩ – ೧೩೩ ಎತ್ತರದ ಅಟ್ಟು

ಮಂಡನ ೬ – ೬೪ ಅಲಂಕಾರ

ಮಂತಣಂ ೨ – ೨೨ ಮಂತ್ರಾಲೋಚನೆ

ಮತಂಗದಾನ ೪ – ೧೨೩ ಮದಜಲ

ಮದ ೩ – ೩೯ ಆನೆಯ ಮದ

ಮದಾಳಿ ೭ – ೩೨ ದುಂಬಿ

ಮಲಂಗು ೯ – ೩೧ ದಿಂಬು

ಮಲರ್‌೭ – ೬೦ ಹೂವು

ಮಾಸರ ೧೧ – ೧೧೫ ಮನೋಹರ

ಮುಖರಿಗಾಣ ೧೨ – ೧೬ವ ಕೊಳಲು ಬಾರಿಸುವವ

ಮುಮ್ಮೞಿ ೩ – ೧೨೨ ನುಜ್ಜುಗುಜ್ಜು

ಮೃಗತೃಷ್ಣಿಕೆ ೬ – ೫೧ ಬಿಸಿಲ್ಗುದುರೆ

ಮೆಯ್ಗರೆ ೩ – ೧೫೮ ಮರೆಯಾಗು

ಮೆಚಕಿತ ೧೧ – ೬೯ ಮುಚ್ಚು, ಆವರಿಸು

ಮೊಗಸೇಡುಗೊಳ್ ೧೧ – ೮೩ವ ಮುಖ ಕೆಡುವಂತೆ

ಮೊಘೆ ೧೧ – ೯೦ ಮಣ್ಣಿನ ಗಡಿಗೆ

ಮೊದಲು ೧೬ – ೪೬ ಬುಡ

ಯಾನಪಾತ್ರ ೪ – ೭೬ ದೋಣಿ

ರಂಭ ೫ – ೯೧ ವ ಬಾಳೆ

ರಯ್ಯ ೭ – ೨೭ ರಮ್ಯ, ಸುಂದರ

ರಶನಾ ೬ – ೧೩ ಗೆಜ್ಜೆಯ ಡಾಬು

ರಸೆ ೭ – ೭೬ ಭೂಮಿ

ರುತಿ ೨ – ೧೦೦ ಧ್ವನಿ

ರುವತ್ ೯ – ೯೫ ಧ್ವನಿ

ಱುಂಜೆ ೧೨ – ೭೪ ಒಂದು ಬಗೆಯ ವಾದ್ಯ

ಱೋಡಿಸು ೧೫ – ೧೧೨ ಅಣಕಿಸು

ಲಂಜಿಕೆ ೮ – ೪೪ ವೇಶ್ಯೆ

ಲಂಪಳ೯ – ೩ ಲಂಪಟ

ಲಂಬಣ ೧೬೪೭ ಹಾರ

ಲತಾಂತಶರ ೩ – ೭೮ ಮನ್ಮಥ, ಬಳ್ಳಿಯ ತುದಿಯಲ್ಲಿರುವ ಹೂವನ್ನು ಬಾಣವಾಗಿ ಮಾಡಿಕೊಂಡವನು

ಲವ ೬ – ೧೦೮ ಸ್ವಲ್ಪ

ಲಾಂತ ೧೧ – ೮೪ ಸ್ವರ್ಗ

ಲೊವೆ ೯ – ೨೯ ಲೋವೆ, ಇಳಿಜಾರಾದ ಸೂರು

ಲೋವಿಸರ ೩ – ೧೨೨ ಲೋಳೆಸರ

ವಪ್ರಭೆ ೭ – ೪೦ ಚಿನ್ನದ ಕಾಂತಿ

ವಲ್ಲಕ್ಕಿ ೬ – ೧೩ ವೀಣೆ

ವಸು ೬ – ೨೫ ವ ಚಿನ್ನ

ವಾಂಶಿಕ ೧೨ – ೨೨ವ ಕೊಳಲು ಬಾರಿಸುವವ

ವಾರಣ ೪ – ೧೩೧ ಆನೆ

ವಾಸ ೧೫ – ೭೪ ಬಟ್ಟೆ

ವಿಗುರ್ವಣೆ ೧೧ – ೮೭ವ ಮಾಯೆಯಿಂದ ಸೃಷ್ಟಿಸುವುದು

ವಿಪಣಿಮಾರ್ಗ ೨ – ೫೧ ಅಂಗಡಿ ಬೀದಿ

ವಿಷಧಿ ೧೩ – ೭೫ ಸಮುದ್ರ

ವಿಷಯ ೭ – ೧೪ ದೇಶ

ವೇದಕ ೫ – ೪೩ ಸಮ್ಯಕ್ತ್ವ

ವೈಹಾಳಿ ೩ – ೩ ಕುದುರೆ ಸವಾರಿ

ಶಂಫಳಿ ೧೩ – ೫೪ ತಲೆಹಿಡುಕಿ

ಶಕುಂತ ೩ – ೧೫೪ ಒಂದು ಹಕ್ಕಿ

ಶಕ್ರಚಾಪ ೧೬ – ೨೭ ಇಂದ್ರನ ಧನುಸ್ಸು

ಶಾರದೇಂದು ೩ – ೩೨ವ ಶರತ್ಕಾಲದ ಚಂದ್ರ

ಶೋಫ ೨ – ೪೨ ಬಾವು, ಊತ

ಶ್ಮಶ್ರು ೬ – ೨೭ ಮೀಸೆ

ಶ್ರೀಫಳ ೬ – ೫೯ ವ ಬಿಲ್ವಪತ್ರೆಕಾಯಿ

ಸಂಚುಕರ ೩ – ೩೩ ಚಂಚಕಾರ, ಮೊದಲು ಕೊಡುವ ಹಣ

ಸಂಧಿವಿಗ್ರಹಿ ೨ – ೪೨ ನಿಯೋಗಿ

ಸಣ್ಣಿಗೆ ೬ – ೯೩ ಅರೆಯುವ ಕಲ್ಲು

ಸಪ್ರಚ್ಛದ ೮ – ೧೦೩ ಏಳಲೆ ಬಾಳೆ

ಸಬಳ ೩ – ೧೩೬ ಈಟಿ

ಸಬ್ಬ ೩ – ೧೩೫ ವ ಸರ್ವ

ಸರವಳಿಗೆ ೮ – ೫೦ ಶ್ಯಾವಿಗೆ

ಸಲ್ಲಕ್ಕೀ ೪ – ೫೫ ಜೊಂಡು

ಸವ ೧೬ – ೬೨ ಸಮ

ಸವಾರಿಗಳ್ ೩ – ೩೮ ಸವಾರರು

ಸಹಕಾರ ೯ – ೨೯ ವ ಮಾವು

ಸಾಧ್ವಸ ೧೬ – ೮೪ ನಿದ್ರೆ

ಸಾರ್ಥಪತಿ ೪ – ೧೩೫ವ ವ್ಯಾಪಾರಿಗಳ ಯಜಮಾನ

ಸಿತಾತಪತ್ರ ೧೬ – ೭೯ ಬಿಳಿಯ ಕೊಡೆ

ಸಿಪ್ಪು ೧೪ – ೧೨೧ ಚಿಪ್ಪು

ಸುಟ್ಟುರೆ ೩ – ೧೨೬ ಪ್ರವಾಹ

ಸುಮನೋವರ್ಷ ೫ – ೮೮ ಹೂವಳೆ

ಸೂನಗೆ ೩ – ೧೨೨ ಬಾಣ

ಸೂರ್ಯಜ ೩ – ೩೮ ಸೂರ್ಯನ ಮಗ ರೇವಂತ

ಸೆಡೆ ೩ – ೧೧೩ ಉಬ್ಬು

ಸೈಗೋಲರ್ ೩ – ೧೧೭ ನಿಪುಣರಾದ ಬಿಲ್ಲಾಳುಗಳು

ಸೊದೆ ೮ – ೪೯ ಸುಣ್ಣ

ಸೊನೆ ೯ – ೪೮ ಸುವಾಸನೆಯಿಂದ ಕೂಡಿದ ರಸ

ಸ್ವಾತಿ ೧೨ – ೩೫ ಸ್ವಾತಿಮಳೆ

ಹುತಾಶನ ೪ – ೫೨ ಬೆಂಕಿ

ಹಟ್ಟಿ ಕಾಳೆಗ ೧೩ – ೭೩ ಮನೆಜಗಳ

ಹರಿ ೩ – ೩೯ ಇಂದ್ರ

ಹರಿ ೩ – ೪೦ ಕುದುರೆ