ಪುಷ್ಪದಂತ ಪುರಾಣಂ (ಸಂಖ್ಯೆಗಳ ಆಶ್ವಾಸ ಮತ್ತು ಪದ್ಯವನ್ನು ಸೂಚಿಸುತ್ತವೆ)
ಅಂಚಳ ೫ – ೩ – ೨ ಬಟ್ಟೆ
ಅಂತಿಕ ೩ – ೬೪ ಸಮೀಪ
ಅಂಬುಗಂಡಿ ೨ – ೬೧ ನೀರಿನ ದಾರಿ
ಅಗಿ ೮ – ೪೬ ಹೆದರು
ಅಗುಂತಿ ೯ – ೧೦೯ ಹೆಚ್ಚಳ
ಅಗುಂದಲೆ ೨ – ೨೩ ಅತಿಶಯ
ಅಗ್ಗ ೨ – ೭೭ ಶ್ರೇಷ್ಠ
ಅಗ್ಗಳಿಸು ೨ – ೪೩ ಹೆಚ್ಚಿಸು
ಅಗ್ರಿಮ ೮ – ೪೫ ಮೊದಲಿಗ
ಅಜಾಕೃಪಣೀಯ ೧ – ೭೮ ಆಡಿನ ಮೊಲೆ
ಅಣಿ ೫ – ೧೨ ಸೈನ್ಯ
ಅಣ್ಕೆ ೩ – ೧೧೮ ಬಣ್ಣ ಹಾಕುವುದು
ಅತ್ತಳ ೭ – ೭೫ ಹೆಚ್ಚಳ
ಅದುಗುಂತಿ ೮ – ೫೪ ಅದಿರ್ಗಂತಿ, ಒಂದು ಜಾತಿಯ ಹೂವು
ಅದಟ ೮ – ೧೩ ಪರಾಕ್ರಮ
ಅಧರಿಸು ೧೦ – ೫೧ ಕೀಳು ಮಾಡು
ಅನುಷ್ಣ ೯ – ೪೭ ಚಂದ್ರ
ಅಪಚಯ ೨ – ೫೦ ಬಿಡಿಸುವುದು
ಅಮರಧನು ೫ – ೧೦ ಕಾಮನ ಬಿಲ್ಲು
ಅಮರರಾಜೋರ್ವೀಜ ೧ – ೮೧ ಕಲ್ಪವೃಕ್ಷ
ಅಮ್ಮಾವು ೩ – ೧೨೭ವ ಕಾಡುಹಸು
ಅವಚಱು ೧೩ – ೬೧ ಮುಖ ತಿರುಗಿಸು
ಅವಟಯ್ಸು ೮ – ೪೭ವ ಒಪ್ಪಿಸು
ಅಷ್ಟ ಶೋಭೆ ೮ – ೪೯ವ ಸುಣ್ಣ ಹೊಡೆಯುವುದು, ಕಾರಣೆ ತೆಗೆಸುವುದು ಮುಂತಾದ ಎಂಟು ಮಂಗಳ ಕಾರ್ಯಗಳು
ಅಳುಂಬ ೨ – ೮೭ ಅತಿಶಯ
ಅಳುಂಬ ೩ – ೧೧೪ವ ಮನೋಹರ
ಅೞ್ಕಮೆ ೮ – ೧೭ ಪರಾಕ್ರಮ
ಆಂದೋಳ ೮ – ೨೮ವ ಉಯ್ಯಾಲೆ, ಪಲ್ಲಕ್ಕಿ
ಆಕೃಷ್ಟಿ ೫ – ೭೪ ಆಕರ್ಷಣೆ
ಆಚ್ಛಾದನ ೩ – ೧೦೯ ಮುಚ್ಚುವುದು
ಆತಪ ೮ – ೧೦೪ ಬಿಸಿಲು
ಆನ್೫ – ೩೭ ಮೇಲೆಬೀಳು
ಆರ್ದಕ ೨ – ೪೭ ಹಸಿ ಶುಂಠಿ
ಆಱಡಿ ೧೩ – ೨ ಹಿಂಸೆ
ಆಲೇಹನಂಗೈ ೩ – ೭೬ವ ನೆಕ್ಕು
ಆವೇದಿಸು ೮ – ೨೧ ಹೇಳು
ಇಂಡೆಯಾಟ ೧೨ – ೨೧ ಚೆಂಡಾಟ
ಇಕ್ಕೆದಾಣ ೨ – ೪೬ ಆಶ್ರಯ
ಇಕ್ಷುಯಂತ್ರ ೨ – ೪೯ ಆಶ್ರಯ
ಇಕ್ಷುಯಂತ್ರ ೨ – ೪೯ ಕಬ್ಬಿಣ ಗಾಣ
ಇಱುಂಬುಗೊಳ್೫ – ೫೫ ಸಂದು ಸಂದುಗಳಲ್ಲಿ ಹೋಗಿಸೇರು.
ಇಸುವೆಸ ೯ – ೬೦ ಸೇವಾವೃತ್ತಿ
ಇಳಿಪು ೨ – ೫೨ ಲೇವಡಿ ಮಾಡು
ಈನ್೩ – ೧೨೬ ಕರು ಹಾಕು
ಈಷತ್೩ – ೮೪ ಸ್ವಲ್ಪ
ಉಂಡಿಗೆ ೪ – ೨೯ ಮುದ್ರೆ
ಉಚ್ಚಲಿತ ೬ – ೪೩ ಮೇಲಕ್ಕೆ ಚಿಮ್ಮುವ
ಉಜ್ಜುಗ ೫ – ೧ವ ಉದ್ಯೋಗ, ಕೆಲಸ
ಉಡುಪ ೧೩ – ೮ ಚಂದ್ರ
ಉತ್ತಮಾಂಗ ೩ – ೧೩೦ವ ತಲೆ
ಉದಂತ ೧ – ೩೨ ಸಮುದ್ರದ ವರೆಗೆ
ಉದಂತ ೩ – ೧೦೨ ಹೇಳಿಕೆ, ವಿಚಾರ
ಉದೀಚಿ ೬ – ೩೬ ಉತ್ತರ ದಿಕ್ಕು
ಉನ್ನಿದ್ರೆ ೧೨ – ೬ ನಿದ್ರೆಯಿಂದ ಏಳುವುದು
ಉಪಕಂಟ ೬ – ೯ ಸಮೀಪ
ಉಪಶಲ್ಯಕ ೨ – ೫೧ ಊರಿನ ಸಮೀಪವಿರುವ ಮಾಳ
ಉಪಾಯನ ೬ – ೩೧ವ ಬಾಗಿನ, ಉಡುಗೊರೆ
ಉಪೋಷಿತೆ ೩ – ೧೧೩ ಉಪವಾಸ ಇರುವವಳು
ಉಷ್ಟ್ರ ೭ – ೧೯ ಒಂಟೆ
ಉಳಿಕೆ ೧೨ – ೨೭ ವಾದ್ಯ ವಿಶೇಷ
ಋಕ್ಷ ೮ – ೯ ಕರಡಿ
ಎಗ್ಗು ೧೩ – ೬೯ ಸಂಕೋಚ
ಎಚ್ಚು ೧೧ – ೬೩ ಹಚ್ಚು
ಎಡ್ಡ ೩ – ೩೬ ಸುಂದರ
ಎರೆ ೩ – ೧೨ ಬೇಡು
ಎಳಕುೞಿಯಾಡು ೨ – ೨೪ ಹೀಯಾಳಿಸು
ಎಳತೆ ೫ – ೨೪ ನೇತಾಡುವಿಕೆ
ಎಳಸು ೯ – ೧೪ ಬಯಸು
ಏವ ೩ – ೨೩ ಕೋಪ
ಏವಯ್ಸು ೮ – ೧೧೪ವ ಕೋಪಗೊಳ್ಳು
ಐಕಿಲ್೬ – ೩೫ ಹಿಮ
ಓವರಿ ೬ – ೫೩ ಕೊಠಡಿ
ಓಳಿ ೭ – ೬೯ವ ರಾಶಿ
ಕಂಕರಿ ೧೨ – ೨೭ ವಾದ್ಯ ವಿಶೇಷ
ಕಂಪಣ ೮ – ೧೮ವ ಆಯುಧ ವಿಶೇಷ
ಕಟಕ ೮ – ೩೧ ಕಡಗ
ಕಟಿಸೂತ್ರ ೧೧ – ೬೩ ಉಡಿದಾರ
ಕಡುಪು ೩ – ೧೨೭ ಉಗ್ರತೆ
ಕಡೆ ೧೨ – ೧೦೨ ರಂಗೋಲಿ
ಕಣಯ ೮ – ೨೮ವ ಆಯುಧ ವಿಶೇಷ
ಕಣ್ಚಲ್ಲ ೮ – ೧೧೫ ಕಣ್ಣಿನ ಸನ್ನೆ
ಕನಕ ೩ – ೨೧ ಉಮ್ಮತ್ತ
ಕನ್ನಡಿಸು ೮ – ೪೧ ಪ್ರತಿಫಲಿಸು
ಕಬರಿ ೫ – ೬೯ ಕೂದಲು
ಕರಣೀಯ ೭ – ೪೯ ಒಪ್ಪಿಗೆ
ಕರವಳರು ೮ – ೪೨ ಕತ್ತಿ ಹಿಡಿದವರು
ಕರು ೨ – ೭೨ ಗೋಡೆ
ಕರ್ಣತಾಳ ೩ – ೫೯ವ ಆನೆಯ ಕಿವಿಯ ಬಡಿತ
ಕರ್ದಮ ೮ – ೪೭ವ ಕೆಸರು
ಕಲುಂಬು ೮ – ೩ ಕಲಕು
ಕಳ ೫ – ೮೦ ಯುದ್ಧಭೂಮಿ
ಕಾಂಚೀಲತೆ ೫ – ೨೯ ಒಡ್ಯಾಣ
ಕಾರಂಡೆ ೨ – ೩೯ ಒಂದು ಬಗೆಯ ಹಕ್ಕಿ
ಕಾಶ್ಮೀರ ೧೨ – ೧೦೨ ಕಸ್ತೂರಿ
ಕಿತ್ತಡಿ ೩ – ೨೯ ಪಾದ
ಕಿಣಭ್ರಾಜತ್೮ – ೪೩ ಜಡ್ಡುಗಟ್ಟಿದ
ಕಿಱುಗೇಣ್೩ – ೩೬ ಚಿಕ್ಕ ಕತ್ತಿ
ಕಿಸು ೫ – ೬೨ ಕೆಂಪು
ಕೀರ್ಣ ೨ – ೬೯ ತುಂಬಿದ
ಕೀಲಾರ ೬ – ೨೨ ಹಾಲು ಕರೆಯುವ ಜಾಗ
ಕುಪಿಜ ೪ – ೮೮ ಬೆಟ್ಟದಾವರೆ
ಕುನುಂಗು ೫ – ೭೪ ಬಗ್ಗು
ಕುಪ್ಪಿಗೆ ೩ – ೨೮ ಭರಣಿ
ಕುರವಕ ೨ – ೩೯ ಒಂದು ಜಾತಿಯ ಹಕ್ಕಿ
ಕೂಂಕು ೩ – ೭೬ವ ಕುರಿತು
ಕೂರಿಸು ೯ – ೨೧ ಪ್ರೀತಿಸು
ಕೂರ್ಪು ೩ – ೧೬ ಪ್ರೀತಿ
ಕೂವ ೫ – ೯೭ ಬಾವಿ, ಕೂಪ
ಕೃಷ್ಣಾಗರು ೧೦ – ೯೧ ಒಂದು ಜಾತಿಯ ಸುಗಂಧದ ಮರ
ಕೆಯ್ಪಱೆ ೫ – ೯೮ ಚಪ್ಪಾಳೆ
ಕೆಯ್ನೀರ್೮ – ೬೦ ಧಾರೆ
ಕೆಯ್ಗೆಯ್೨ – ೪೮ ಅಲಂಕರಿಸು
ಕೈತವ ೩ – ೧೯ ಮೋಸ
ಕೊಂಡುಕೊನೆ ೧ – ೬೭ ಹೊಗಳು
ಕೊಟ್ಟಿಗೆ ೩ – ೧೨೯ವ ಎತ್ತಿನ ಮೇಲೆ ಸಾಮಾನು ಸಾಗಿಸುವುದು
ಕೊಣಸು ೩ – ೪೬ವ ಜಿಂಕೆಯ ಮರಿ
ಕೊನರು ೨ – ೪೫ ಚಿಗುರು
ಕೊಱಚಾಡು ೨ – ೪೪ ಪೀಡಿಸು
ಕೊಲ್ಲಿನೋಟ ೫ – ೯೦ ಕಡೆಗಣ್ಣ ನೋಟ
ಕೋ ೮ – ೫೦ ಪೋಣಿಸು
ಕೊಟ್ಟಾಗಾರ ೬ – ೨೨ ಕೋಷ್ಠಾಗಾರ, ಕಣಜ
ಕ್ರಕಚ ೭ – ೧೭ ಗರಗಸ
ಗಗನಾಪಗೆ ೭ – ೬೬ ಗಂಗೆ
ಗವ್ಯೂತಿ ೬ – ೧೭ವ ದೂರದ ಒಂದು ಅಲತೆ
ಗೞಿಸು ೯ – ೬೯ ಒಂದುಗೂಡಿಸು
ಗಹನ ೫ – ೬೩ವ ಕಾಡು
ಗಾಡಿ ೨ – ೪೪ ಸೌಂದರ್ಯ
ಗಾತ್ರಕ್ಷೇತ್ರ ೩ – ೧೦೭ ದೇಹ
ಗಾವರಿಸು ೫ – ೧೫ ಧ್ವನಿ ಮಾಡು
ಗುಂಜಿ ೮ – ೧೧೯ ಗುಲಗಂಜಿ
ಗುಣ ೯ – ೧೧೧ ಬಿಲ್ಲಿನದಾರ
ಗುವಿ ೮ – ೨೮ವ ಕಬ್ಬಿಣದ ತುಂಡು
ಗೆಂಟು ೨ – ೮೨ ಹತ್ತಿರ
ಗೊಂದಳ ೩ – ೧೨೭ ಗುಂಪುಗೂಡು
ಗೋತ್ರ ೫ – ೪೭ವ ಬೆಟ್ಟ
ಚಂದ್ರಿಕೆ ೮ – ೧೦೬ ವ ಬೆಳದಿಂಗಳು
ಚಟ್ಟ ೨ – ೬೧ ಶಿಷ್ಯ
ಚಳಿಸು ೫ – ೯೨ ಕುಟ್ಟು
ಚಾಗ ೨ – ೪೪ ತ್ಯಾಗ
ಚಾಳಿಸು ೮ – ೩೬ ಚಲಿಸು
ಚಾಳಿಸು ೧೦ – ೬೮ ಹೀಯಾಳಿಸು
ಚೀನ ೨ – ೬೨ ರೇಷ್ಮೆ ಬಟ್ಟೆ
ಚೀರ ಘಟ್ಟಿ ೨ – ೬೨ ಬ್ರಹ್ಮ (?)
ಚುನ್ನ ೧೩ – ೬೬ ಹಾಸ್ಯ
ಚೂಡಾಕರಣ ೪ – ೫೧ ಚವಲ
ಚೂಳಿಕೆ ೧ – ೯೪ ಬೆಟ್ಟ, ಮರ ಮುಂತಾದವುಗಳ ತುದಿ
ಜಂಪತಿ ೧೨ – ೧೦ ದಂಪತಿ
ಜಗುೞು ೩ – ೪ ಜಾರು
ಜಡ ೩ – ೩ ನೀರು
ಜಲಕ್ಕನೆ ೩ – ೧೨೧ ಕೊಡಲೆ, ತಕ್ಷಣ
ಜಾಗ ೧೨ – ೧೦೦ ಕೆಂಪುಕಲ್ಲು
ಜೀವಣ ಶಾಲೆ ೨ – ೫೦ ಊಟದ ಮನೆ
ಝಂಪಾಣ ೫ – ೨೦ ಮುಸುಕು
ಝಷ ೫ – ೨೦ ಮೀನು
ಝಂಕಟ ೧೨ – ೨೭ ವಾದ್ಯ ವಿಶೇಷ
ಟಂಕಿತ ೨ – ೭೫ವ ಮುದ್ರಿಸಿದ
ಡಕ್ಕೆ ೧೨ – ೨೭ ವಾದ್ಯ ವಿಶೇಷ
ತಕ್ಕು ೩ – ೯೨ ಠಕ್ಕು, ಮೋಸ
ತಗುಳ್೨ – ೩೦ವ ತಾಗು, ತಗಲು
ತಟಂಕಷ ೧ – ೩೪ ಕೂಲಂಕಷ
ತನುತ್ರ ೬ – ೩೪ ರಕ್ಷಾ ಕವಚ
ತರವಾರಿ ೬ – ೩೪ವ ಕತ್ತಿ
ತಱುಂಬು ೨ – ೭೭ ದೂಡು, ತಳ್ಳು
ತವೆ ೩ – ೧೨ ತೀರು
ತಳಕು ೮ – ೧೮ ಹೋಗು
ತಳವಾರೆ ೧೦ – ೭೧ ತುದಿಯ ವರೆಗು
ತೞೆ ೫ – ೧೯ ಛತ್ರಿ
ತಿಂಗಣಿ ೮ – ೫೦ವ ಗೊಂಡೆ
ತಿಂಬು ೨ – ೪೪ ತುಂಬಿಸು
ತಿಗ್ಮರೋಚಿ ೩ – ೧೨೦ ಸೂರ್ಯ
ತಿಱಿ ೨ – ೪೫ ಸಂಗ್ರಹಿಸು
ತೀರಮೆ ೨ – ೪೬ ಮುಕ್ತಾಯ
ತುಷಾರ ೩ – ೮೪ವ ಬೆಳದಿಂಗಳು
ತೂಳ ೫ – ೮೫ ಹತ್ತಿ
ತೆಂಬೆಲರ್ ೪ – ೨೩ ತೆಂಕಣ ಗಾಳಿ
ತೆನೆ ೨ – ೬೧ ಗೋಪುರ
ತಲ್ಲಂಟಿ ೧೨ – ೧೦೯ ಉಡುಗೊರೆ
ತೇಂಕು ೫ – ೩೪ವ ತೇಗು
ತೇರಯ್ಸು ೨ – ೪೪ ಹಿಮ್ಮೆಟ್ಟು
ತೋಡು ೩ – ೪೦ ಸಮಾನ
ತೋಣಿ ೨ – ೬೭ ಸಮ
ತೋಮರ ೮ – ೨೮ ಆಯುಧ ವಿಶೇಷ
ತೋಮೆ ೩ – ೧೨೭ವ ಗುಂಪು
Leave A Comment