ದಂಗುಂತಿ ೨ – ೭೭ ಅತಿಶಯ

ದಟ್ಟಡಿ ೩ – ೯೬ ಪುಟ್ಟ ಮಕ್ಕಳು ಹಾಕುವ ತಪ್ಪು ಹೆಜ್ಜೆ

ದಡ್ಡಿ ೬ – ೫೩ ಮನೆಯ ಮಾಳಿಗೆ

ದಶನ ೬ – ೧೫ ಹಲ್ಲು

ದಾನ ೪ – ೨೪ ಮದೋದಕ

ದಾಸವರ್ಣ ೫ – ೬೨ ದಾಸವಾಳ

ದೇವ ಮಾತೃಕ ೨ – ೧೪ವ ಮಳೆ ನೀರಿನಿಂದ ವ್ಯವಸಾಯ

ದೇವಾಂಗ ೮ – ೮೭ವ ಬಟ್ಟೆ

ದೀರ್ಘಿಕೆ ೨ – ೫೪ ಬಾವಿ

ದೋಹಳ ೬ – ೩೪ ಬಯಕೆ

ದ್ರವಿಣ ೪ – ೭೩ ಸಂಪತ್ತು

ದ್ರೋಣಿ ೨ – ೪೪ ದೋಣಿ

ದ್ವಿರದ ೪ – ೫೪ ಆನೆ

ಧರಾಮರ ೧೨ – ೧ ಬ್ರಾಹ್ಮಣ

ನದೀ ಮಾತೃಕ ೨ – ೧೪ವ ನದಿಯ ನೀರಿನಿಂದ ವ್ಯವಸಾಯ

ನಮೆ ೮ – ೧೭ ಕೃಶವಾಗು

ನಾಗವೇದಿಕೆ ೮ – ೫೦ ನಾಗಂದಿಗೆ

ನಿಕ್ಕುವಂ ೧ – ೭೮ ನಿಶ್ಚಯ

ನಿತ್ತಱಿಸು ೧ – ೯೪ ತಾಳು, ಸಹಿಸು

ನಿಳಿಂದ ೧೨ – ೬ ದೇವತೆ

ನೀಡ ೨ – ೭೪ ಮನೆ

ನೀಡುಂ ೩ – ೧೦೬ ವಿಶೇಷವಾಗಿ

ನೀಳ ೮ – ೫೪ ನೀಲ, ನವರತ್ನಗಳಲ್ಲಿ ಒಂದು

ನುಗುೞು ೨ – ೬೪ ನುಸುಳು

ನೆಗಪು ೧೧ – ೬೦ವ ಮಾಡು

ನೆಮ್ಮು ೮ – ೧೦೯ವ ಆಶ್ರಯಿಸು

ನೇರ್ಪಡು ೪ – ೮೭ ನೆಟ್ಟಗೆ ಮಾಡು

ನೆಲಮುಕ್ಕು ೬ – ೪೮ ವಿಷದ ಹಾವು

ನೈಷಂಗ ೧ – ೮೨ ಬತ್ತಳಿಕೆ

ಪಂಡಿತವಕ್ಕಿ ೨ – ೭೭ ಗಿಳಿ

ಪಂದಲೆ ೭ – ೨೨ ಆಗತಾನೆ ಕತ್ತರಿಸಿದ ತಲೆ

ಪಜ್ಜತಿ ೧೨ – ೫೬ ಪದ್ಧತಿ

ಪಟ ೧೨ – ೧೬ ವಸ್ತ್ರ

ಪಟವಾಸ ಚೂರ್ಣ ೧೨ – ೧೭ ಸುವಾಸನೆ ಪುಡಿ

ಪಟ್ಟ ೨ – ೮೬ ಚೌಕ, ಜಾಗ

ಪಡಿಚಂದ ೨ – ೯೨ ಸಮಾನ

ಪಡು ೮ – ೬ವ ಮಲಗು, ಮುಳುಗು

ಪದಿಱು ೫ – ೧೩ ಸುಳ್ಳು, ಸಟೆ

ಪದುಳಿಕೆ ೧ – ೨೯ ಕ್ಷೇಮದಿಂದಿರುವುದು

ಪನೆ ೧೨ – ೬೩ ಕೆನ್ನೆಯ ಕೂದಲು

ಪರಿಕಾಲ್‌೪ – ೮ ಹರಿಯುವ ಕಾಲುವೆ

ಪರ್ಚುಗೊಳ್ ೩ – ೬೫ ಹಂಚಿಕೊಳ್ಳುವುದು

ಪರ್ವ ೨ – ೪೮ ಕಬ್ಬಿನ ಗಿಣ್ಣು

ಪಱೆ ೫ – ೧೩ ತಮ್ಮಟೆ

ಪಲ್ಲಣ ೫ – ೧೦ ಜೇನು

ಪಲ್ಮೊರೆ ೫ – ೧೦ ಹಲ್ಲು ಕಡಿಯುವುದು

ಪಸ ೧೩ – ೨ ಬರ

ಪಸದನ ೬ – ೭೨ ಅಲಂಕಾರ

ಪಸಲೆ ೩ – ೭೬ ಹುಲ್ಲುಗಾವಲು

ಪಸಾಯಿತ ೮ – ೨೦ ಸಾಮಂತ ರಾಜ

ಪೞುಯಿಗೆ ೬ – ೨೮ ಬಾವುಟ

ಪೞನ ೧೨ – ೨೭ ವಾದ್ಯ ವಿಶೇಷ

ಪೞಂಬಾಗ ೮ – ೮೧ ಕೆಟ್ಟ ಮನಸ್ಸು

ಪಾಂಡು ೬ – ೩೮ ಬಿಳಿ

ಪಾಂಶು ಕೇಳಿ ೧೨ – ೬೫ ಧೂಳಾಟ

ಪಾಂಸು ೫ – ೪೦ ಧೂಳು

ಪಾಗಲ್‌೮ – ೪೭ ಗೋಡೆ

ಪಾಟಿ ೭ – ೫೭ ಸಮ

ಪಾಲ್ಯ ೧೨ – ೬೭ ಬೀಡು, ಪಾಲನೆ

ಪಾವಕ ದಿಕ್ಕು ೨ – ೫೩ ಅಗ್ನಿದಿಕ್ಕು, ಆಗ್ನೇಯ

ಪಿಂಡು ೩ – ೮೨ ಹೆಣ್ಣಾನೆ

ಪುಂಸವನ ೩ – ೮೮ ಗರ್ಭಿಣಿಯರಿಗೆ ಮಾಡುವ ಶಾಸ್ತ್ರ

ಪುಟ್ಟಿಗೆ ೪ – ೪೩ ಬಟ್ಟೆ

ಪುಣುಂಬು ೩ – ೨೭ ಬಾಣ

ಪುದು ೮ – ೨೬ ಹೊಸ

ಪುರುಡು ೧೦ – ೭೦ ಸ್ಪರ್ಧೆ

ಪುರುಳು ೨ – ೪೪ ಸಂಪತ್ತು

ಪುಷ್ಕರ ೧೨ – ೧೦೭ ಸೊಂಡಿಲು

ಪುಷ್ಪಾತಿಶಯ ೩ – ೮೫ ಹೆಣ್ಣಿನ ಮಾಸಿಕ ಅವಸ್ಥೆ

ಪೆಂಟೆ ೨ – ೮೨ ಪಿಂಡಿ, ಕಟ್ಟು

ಪೆಕ್ಕಣ ೪ – ೨೫ ನೋಟ

ಪೆಱೆ ೧ – ೯೨ ಚಂದ್ರ

ಪೊಂಪುೞಿ ೨ – ೮೬ ಆಧಿಕ್ಯ, ಹೆಚ್ಚಳ

ಪೊಗಸು ೩ – ೬೭ ಬೆಳಗು

ಪೊದೞಿ ೫ – ೩೯ ವ್ಯಾಪಿಸು

ಪೊಸವಾಣಿತಿವುಲ್ಲೆ ೩ – ೭೬ವ ಹೊಸಬಾಣಂತಿ ಹುಲ್ಲೆ

ಪೊಳಕು ೯ – ೧೦೮

ಪೋತ ೫ – ೮೩ ಮರಿ

ಪ್ಲವ ೧೨ – ೩ ಪ್ರವಾಹ

ಫೇನ ೬ – ೧೫ ನೊರೆ

ಬಗರಗೆ ೨ – ೪೪ ಕುಳಿ

ಬಚಿಯಿಸು ೮ – ೫೭ ಕೊಡಿಸು

ಬರ್ಚಿಸು ೩ – ೩೦ ಬಣ್ಣ ಬಳಿ

ಬರ್ದುಗಾರ್ತಿ ೨ – ೭೭ವ ವೇಶ್ಯೆ

ಬರ್ದೆ ೮ – ೧೯ವ ಮುಗ್ಧೆ

ಬಱುಗಂಪಲ್‌೫ – ೪೬ ಬತ್ತು

ಬಳ್ವಲ್‌೪ – ೮೧ವ ಬೆಳೆದ (?)

ಬಳ್ಳ ೧ – ೯೦ ಒಂದು ಬಗೆಯ ಅಳತೆ

ಬಾಯ್ದೆಱೆ ೩ – ೪೫ ತುಟಿ

ಬಾೞಿ ೩ – ೩೯ ಕತ್ತಿ

ಬಿಡಲರಿಯದಂಗೆ ೯ – ೭ ಬಿಡಲಾಗದವನಿಗೆ

ಬಿಡಾಲ ೨ – ೭೨ ಬೆಕ್ಕು

ಬಿನ್ನ ೧೨ – ೨ ಖಾಲಿ

ಬಿಯ ೨ – ೪೪ ವ್ಯಯ

ಬಿಸಲತೆ ೮ – ೫೭ ತಾವರೆಯ ನಾಳ

ಬಿಸುಗೆ ೬ – ೨೯ ಅಂಬಾರಿ

ಬೀಜಪೂರ ೯ – ೧೫ ದೊಡ್ಡೀಳೆ

ಬೆಟ್ಟು ೫ – ೩೭ ಸೇರು

ಬೆಳ್ಳ ೮ – ೧೦೬ ನೀರು

ಬೇಡಬಟ್ಟು ೫ – ೫೫ ಬೇಡಪಡೆ

ಬೊಂದಿಗೆ ೫ – ೮೯ ಹಗ್ಗ

ಬೊಂಬುೞಿ ೧೨ – ೨೭ ವಾದ್ಯ ವಿಶೇಷ

ಭಲ ೫ – ೭೨ ತೋಳ

ಭೃಂಗಾರ ೪ – ೭೯ ಚಿನ್ನದ ಕಲಶ

ಭಾರತಿಕ ವೃಂದ ೭ – ೩೪ ನರ್ತಕರ ಸಮೂಹ

ಮಂಡವಿಗೆ ೬ – ೨೨ ಗುಡಾರ

ಮಂದ ೨ – ೫೬ ಆನೆಯ ಒಂದು ಜಾತಿ

ಮಂದುರ ೨ – ೬೧ವ ಲಾಯ

ಮಕರತೋರಣ ೨ – ೯೧ ಮೊಸಳೆಯಾಕಾರದ ತೋರಣ

ಮಡಲು ೧೩ – ೩೩ ತುದಿ

ಮದಿಲ್ ೨ – ೯೦ ಗೋಡೆ

ಮರಿಚ ೫ – ೬೯ ಮೆಣಸು

ಮಸೂರಿಕ ೧೨ – ೭೮ ಕಡಲೆ

ಮಾತುಳಾನಿ ೮ – ೪೯ವ ತಾಯಂದಿರು

ಮಾರುತ ಭುಕ್‌೧೩ – ೩೫ ಹಾವು

ಮಾರುತ ವೀಥಿ ೮ – ೨೭ವ ಆಕಾಶ

ಮಾರ್ಗಣ ೧ – ೬೦ ಬಾಣ

ಮಿತ್ರ ೬ – ೪೦ ಸೂರ್ಯ, ಗೆಳೆಯ

ಮಿಳಿರು ೫ – ೩೪ವ ಅಲುಗಾಡು

ಮುಂಡಾಡು ೪ – ೭೨ ಅಪ್ಪು

ಮುಂಬು ೩ – ೮೪ ಮೊದಲು

ಮುಕರು ೧೨ – ೨೩ ಮುತ್ತು

ಮುಡಿಪು ೯ – ೯ವ ಸಾಯುವುದು

ಮುಹುರ್‌ಮುಹುರ್‌೩ – ೭೭ವ ಮತ್ತೆ ಮತ್ತೆ

ಮೂಗುವಡು ೬ – ೧೪ ನಿಶ್ಯಬ್ದವಾಗು

ಮೂವಡಿ ೧ – ೯೪ ಮೂರು ಸಲ

ಮೃಗಧರ ೮ – ೪೭ವ ಚಂದ್ರ

ಮೃಗಭೂ ೩ – ೫೮ ಕಸ್ತೂರಿ

ಮೃಗಮದ ೮ – ೫೪ ಕಸ್ತೂರಿ

ಮೆಯ್ಗರೆ ೧೩ – ೧೯ವ ಮರೆಯಾಗು

ಮೇಚಕರುಚಿ ೧ – ೪೮ ಹಳದಿ ಬಣ್ಣ

ಮೇಳಯ ೭ – ೬೯ವ ಗೋನಾಳಿ, ಕೂಡಿಸು

ಮೊಗಸು ೮ – ೭ ಹಬ್ಬು

ಮೊಗಸು ೧೦ – ೩೦ ಅಪೇಕ್ಷ

ಮೊಗ್ಗು ೮ – ೪೩ ಸಾಧ್ಯತೆ

ಮೊಱ ೨ – ೫೪ ಜಲಾಶಯ

ಮೊೞ್ಗು ೩ – ೯೮ ಬಾಗು, ನಮಸ್ಕರಿಸು

ಯಾವಕ ೯ – ೭೪ ಗೋರಂಟಿ

ರೆಕ್ಕೆ ೫ – ೮೦ ರಕ್ಷೆ

ರಯ್ಯ ೨ – ೪೧ ಮನೋಹರ

ರವಿನಂದನ ೮ – ೬೮ ಕರ್ಣ

ರಸಾತಳ ೨ – ೫೩ ಪಾತಾಳ

ರಸಾಳ ೧ – ೪೦ ಮಾವು

ರಸಿತ ೧೨ – ೨೨ ಝೇಂಕಾರ

ರಹಟಘಟೀಯಂತ್ರ ೨ – ೫೧ ರಾಟೆ

ರಾಸಭ ೬ – ೨೧ ಕತ್ತೆ

ರುಂದ್ರ ೪ – ೯೨ ವಿಶಾಲವಾದ

ರುಚಿ ೮ – ೫೨ ಕಾಂತಿ

ಱೊಪ್ಪು ೫ – ೭೪ ಪ್ರಾಣಿಗಳನ್ನು ಕೂಡುವದೊಡ್ಡಿ ಆಶ್ರಯ ಸ್ಥಾನ

ಱೋಡಾಡು ೨ – ೪೪ ಹೀಯಾಳಿಸು

ಲಕ್ಷ್ಮ ೩ – ೭೬ ಗುರುತು

ಲಪನ ೭ – ೪೧ ಮುಖ

ಲಾಜ ೮ – ೪೭ವ ಬತ್ತದ ಅರಳು

ಲೆಪ್ಪ ೫ – ೨೨ ಮೇಣ

ಲೋಕೈಕಮಿತ್ರ ೫ – ೪೧ ಸೂರ್ಯ

ವನಮಾಲೆ ೩ – ೨೨ ತುಳಸೀ ಹಾರ

ವನ್ಯಲುಲಾಯ ೮ – ೭೭ ಕಾಡುನಾಯಿ

ವರುಣವಾಹನ ೨ – ೯೧ ಮೊಸಳೆ

ವಾರಕರ್‌೭ – ೩೫ ಪಾಲುದಾರರು

ವಾರುಣಿ ೮ – ೯೭ ಮದ್ಯ

ವಾಹಳೀ ೩ – ೧೩೦ ವೈಹಾಳಿ

ವಿಂದ ೨ – ೯೫ ವೃಂದ, ಸಮೂಹ

ವಿಕೀರ್ಯಮಾಣ ೮ – ೪೭ ಇರುವ

ವಿತಾನ ೪ – ೭೮ ಬಾವುಟ

ವಿಪಣಿ ವೀಥಿ ೨ – ೭೭ ಪೇಟೆ ಬಿದಿ

ವೇತ್ರ ೭ – ೩೭ ಬೆತ್ತ

ವೇಸರಿ ೩ – ೫೫ ವೈಹಾಳಿ, ಆನೆಯ ಒಂದು ಜಾತಿ

ವೊಕ್ಕರಣೆ ೨ – ೫೪ ಹೊಕ್ಕರಣೆ, ಪುಷ್ಕರಣೆ ಕೊಳ

ಶತಮುಖ ದಿಕ್ಕು ೯ – ೧೦೬ ಪೂರ್ವದಿಕ್ಕು

ಶಿಖಂಡಿ ೬ – ೯ ನವಿಲು

ಶಿಬಿಕೆ ೮ – ೨೮ವ ಪಲ್ಲಕ್ಕಿ

ಶುದ್ಧಕ್ಷರ ೨ – ೩೯ವ ಮೂಲಾಕ್ಷರ

ಶೇಖರ ೭ – ೩೩ ತಲೆಯಲ್ಲಿ ಧರಿಸುವ ಆಭರಣ

ಶ್ರೀಕಾಂತೆ ೮ – ೬೪ ಲಕ್ಷ್ಮಿ

ಶ್ವಾಪದ ೫ – ೬೦ ಕ್ರೂರ ಪ್ರಾಣಿ, ಹುಲಿ

ಸಂಕಲೆ ೫ – ೨೯ ಕಂದಿ ಹೋಗುವುದು

ಸಂಕೀರ್ಣ ೨ – ೫೬ ಆನೆಯ ಒಂದು ಜಾತಿ

ಸಂಗಡ ೩ – ೧೨೭ ತಾಗುವುದು, ಘರ್ಷಣೆ

ಸಂದಷ್ಟ ೫ – ೨೮ ಕಡಿಯಲ್ಪಟ್ಟ

ಸಪತ್ನಿ ೩ – ೫೬ ಸವತಿ

ಸಮಯ ೧ – ೮೦ ಧರ್ಮ

ಸಮೆ ೮ – ೪೯ ಸಿದ್ಧಪಡಿಸು

ಸರಿ ೧೨ – ೧೪ ಮಳೆ

ಸಸಿನಂ ೫ – ೩೧ ನಟ್ಟಗೆ

ಸಾಂದು ೨ – ೮೩ ಸಾದು

ಸಾಂಯತ್ರಿಕ ೨ – ೭೪ ಸಮುದ್ರವ್ಯಾಪಾರಿ

ಸಾಹಣ ವೆಗ್ಗಡೆ ೮ – ೨೮ವ ಕುದುರೆಗಳನ್ನು ಪಳಗಿಸುವವ

ಸಿವಿಱು ೧೨ – ೨೭ ವಾದ್ಯ ವಿಶೇಷ

ಸೀಮಂತ ೩ – ೫೫ ಬೈತಲೆ

ಸೀಯಬಾರ ೬ – ೨೩ ಹೆಬ್ಬಾಗಿಲು

ಸುಟ್ಟಿದೋಱು ೮ – ೮೪ ಬೆರಳೆತ್ತಿ ತೋರಿಸು

ಸುಟ್ಟುರೆ ೩ – ೧೨೭ ಬಿರುಗಾಳಿ

ಸುದ್ದಗೆ ೪ – ೫೬ ಅಕ್ಷರ

ಸುರಭಿ ೩ – ೧೦೯ ಹಾಲು

ಸುರ್ವು ೨ – ೪೮ ಸೊರೆಯುವುದು

ಸೂಕ್ತಿಸತಿ ೮ – ೬೪ ಸರಸ್ವತಿ

ಸೂಲಿಸು ೫ – ೮೨ ಹೆರಿಗೆ ಮಾಡು

ಸಗಳಿಗೆ ೬ – ೫೩ ಬಿಸಿ, ಕಾವು

ಸೆಡೆ ೧ – ೯೪ ಹೆದರು

ಸೈಪು ೩ – ೮೭ ಪುಣ್ಯ

ಸೈರಿಭ ೬ – ೨೧ ಕೋಣ

ಸೊಡರ್ವರ್ಕು ೩ – ೯೧ ಹಣತೆಯ ದೀಪದ ಮಸಿ

ಸೋವು ೯ – ೧೪ ಓಡಿಸು

ಸ್ಕಂದ ೫ – ೨೨ ರೆಂಬೆ

ಸ್ಥ್ರೈಣ ೬ – ೩ ಹೆಣ್ಣುತನ

ಹರಿದ್ರ ೨ – ೪೭ ಅರಿಶಿನ

ಹರಿ ೮ – ೬ ಸೂರ್ಯ

ಹಾರೀತ ೨ – ೩೯ ಕಪೋತ

ಹಾಱಿ ೩ – ೧೨೭ ಓಡು, ಜಿಗಿತ

 

ಸಹಾಯಕ ಸಾಹಿತ್ಯ

ಪುಷ್ಟದಂತ ಪುರಾಣಂ

೧. ಪುಷ್ಟದಂತ ಪುರಾಣಂ : ಇಮ್ಮಡಿ ಗುಣವರ್ಮ, (ಸಂ.) ಎ. ವೆಂಕಟರಾವ್, ಹೆಚ್. ಶೇಷಯ್ಯಂಗಾರ್, ಮದ್ರಾಸು, ೧೯೩೩.

೨. ಕರ್ನಾಟಕ ಕವಿಚರಿತೆ (ಸಂಪುಟ ೧, ೨, ೩) (ಸಂ.) ಆರ್. ನರಸಿಂಹಾಚಾರ್, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೩, ೧೯೭೪.

೩. ಆದಿಪುರಾಣಂ : ಪಂಪ, (ಸಂ.) ಕೆ.ಜಿ. ಕುಂದಣಗಾರ, ಎ.ಪಿ. ಚೌಗುಲೆ, ಮದ್ರಾಸ್, ೧೯೫೩

೪. ಪಂಪಭಾರತಂ ಎಂಬ ವಿಕ್ರಮಾರ್ಜುನ ವಿಜಯಂ : ಪಂಪ, (ಸಂ.), ಬೆಳ್ಳಾವೆ ವೆಂಕಟನಾರಣಪ್ಪ, ಮೈಸೂರು, ೧೯೩೧.

೫. ಚಂದ್ರಪ್ರಭ ಪುರಾಣ : ಅಗ್ಗಳ, (ಸಂ.) ಎಸ್‌.ಜಿ. ನರಸಿಂಹಾಚಾರ್, ಮಂ.ಅ ರಮಾನುಜಯ್ಯಂಗಾರ್, ಕರ್ನಾಟಕ ಕಾವ್ಯ ಕಲಾನಿಧಿ, ಮೈಸೂರು, ೧೯೦೧.

೬. ಚಾವುಂಡರಾಯ ಪುರಾಣ : ಚಾಮುಂಡರಾಯ, (ಸಂ.) ಕಮಲ ಹಂಪನಾ, ಕೆ. ಆರ್. ಶೇಷಗಿರಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೩.

೭. ಮಹಾಪುರಾಣ : (ಭಾಗ ೧, ೨) ಎ. ಶಾಂತಿರಾಜಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೧.

೮. ಕೆಲವು ಕನ್ನಡ ಕವಿಗಳ ಜೀವನ ವಿಚಾರ : ಎ. ವೆಂಕಟಸುಬ್ಬಯ್ಯ, ಬೆಂಗಳೂರು, ೧೯೨೭.

೯. ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ : ನಾಲ್ಕನೆಯ ಸಂಪುಟ; ಡಾ ಹಾ.ಮಾ.ನಾಯಕ, ಪ್ರಧಾನ ಸಂಪಾದಕ, ಡಾ. ಟಿ.ವಿ ವೆಂಕಟಾಚಲ ಶಾಸ್ತ್ರೀ ಸಂಪಾದಕ, ೧೯೭೭.

೧೦. ಇಮ್ಮಡಿ ಗುಣವರ್ಮ : ಲೇ ಬಿ.ಎ. ವೀವೇಕ ರೈ. ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್‌ಉ ಚರಿತ್ರೆ, ನಾಲ್ಕನೆಯ ಸಂಪುಟ, ಡಾ.ಹಾ.ಮಾನಾಯಕ ಪ್ರಧಾನ ಸಂಪಾದಕ ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ ಸಂಪಾದಕ, ೧೯೭೭.

೧೧. ಸೂಕ್ತಿ ಸುಧಾರ್ಣವಂ: ಮಲ್ಲಿಕಾರ್ಜುನ, (ಸಂ.) ಎನ್. ಅನಂತ ರಂಗಾಚರ್ , ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೭೩.

೧೨. ಪೀಠಿಕೆಗಳು ಲೇಖನಗಳು : ಡಿ.ಎಲ್‌. ನರಸಿಂಚಾರ್‌, ಡಿ.ವಿ.ಕೆ. ಮೂರ್ತಿ ಕೃಷ್ಣಮೂರ್ತಿಪುರಂ, ಮೈಸೂರು, ೧೯೭೧.

೧೩. ಕಾವ್ಯ ಸಾರಂ : ಮಲ್ಲಕವಿ, (ಸಂ.) ಎನ್‌. ಅನಂತ ರಂಗಾಚರ್‌, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೩.

೧೪. ಕಾವ್ಯ ಸಾರ : ಅಭಿನವವಾದಿ ವಿದ್ಯಾನಂ, (ಸಂ.) ಎಸ್‌.ಜಿ ನರಸಿಂಹಾಚಾರ್‌, ಮಂ.ಆ. ರಾಮಾನುಜಯ್ಯಂಗಾರ್, ಕನ್ನಡ ಕಾವ್ಯ ಮಂಜರಿ, ಮೈಸೂರು, ೧೮೯೮.