ಆಳು ತೋಟಕ ನೀರು ಎತ್ತಿದ ರಟ್ಟೆಯು ಬೀಳು
ಬಿದ್ದಂತಾಯಿತು ಕುರಿಯೆ
ನೀ ಕೊಳು ಹೋಗದ ಮುನ್ನ ದಾಳಿಗೆ ಸಿಲುಕಿದ
ಮಳಿಗೆ ಮನೆ ಸೇರೋ ಕುರಿಯೇ || ಗುರುವಿನ ||

ಬಲ್ಲ ಸದ್ಗುರು ಕೂಡಿ ಬಾವ್ಲಾತ ನೀನಾಗಿ ಸಲ್ಲುವೇ
ಮೋಕ್ಷಕ್ಕೆ ಕುರಿಯೇ
ನೀ ಬಲ್ಲಿ ತಾನಲ್ಲದೆ ಬರಿಯ ಮಾತುಗಳಾಡಿ
ಕಲ್ಲು ಆಯ್ದಂತಾಯಿತು ಕುರಿಯೇ || ಗುರುವಿನ ||

ಇಲ್ಲದಂಗಡಿಯೊಳು ಯಾತರವ್ಯಾಪರ
ನಮ್ಮ ಪುಲ್ಲಾಲೋಚನಾ ಜಗದಾದಿ
ಕೇಶವ ನೆಂಗ್ರಿ ನಿಲ್ಲದೆ ನೀ ಪಾಡೊ ಕುರಿಯೇ || ಗುರುವಿನ ||