೧. ನೇಕಾರನ ಹೆಂಡತಿ ಬತ್ತಲೆ

೨. ಒಂದು ಅಣಿ ತಪ್ಪಿದರೆ ಸಾವಿರ ಅಣಿ ತಪ್ಪುತ್ತವೆ.

೩. ಜಾಡನ್ನs ಬಿಟ್ಟು ನೋಡು ಮಂಗನ್ನ ಕಟ್ಟಿ ನೋಡು

೪. ಜಾಡ ದೈವ ಅಲ್ಲ ಕೋಣ ಬಸವಣ್ಣನಲ್ಲ.

೫. ಲಾಳಿ ಮೇಲೆ ಲಾಳಿ ಒಗೆದರೆ ಬ್ಯಾಳಿ ರೊಟ್ಟಿಗೆ ಚಿಂತೆ ಇಲ್ಲ

೬. ನೇಯ್ದದ್ದೇ ಸೀರೆ ಉಳಿದದ್ದೇ ಕರಿ.

೭. ನೇಯ್ದರೆ ಬಟ್ಟೆ, ಕಟ್ಟಿದರೆ ಮಟ್ಟಿ

೮. ನೇಯ್ಗೆ ನೇಯ್ದತೆ ಕೂಡಿತ್ತಲ್ಲದೆ ನೆಗೆದರೆ ಕೂಡೀತೆ?

೯. ನೇಯ್ಗೆ ನಯವಿದ್ದರೆ ನಾಣ್ಯ ಸಿಕ್ಕೀತು.

೧೦. ನೇಯುವವನ ಕೈ ಓದುವವನ ಬಾಯಿ ಚುರುಕಾಗಿರಬೇಕು.

೧೧. ನೇಯ್ಗೆವನ ಮಟ್ಟ ಕಟ್ಟುವವ ಬಲ್ಲ.

೧೨. ನೇಯ್ಗೆವನಿಗೆ ಯಾಕೆ ಕೋತಿಮರಿ?

೧೩. ನೇಯುವವನಿಗೆ ಲಾಳಿ ನಗಕ್ಕೆ ಗಾಳಿ.

೧೪. ನೂತದ್ದೆಲ್ಲಾ ಹಂಜಿ ಕಲಿತದ್ದೆಲ್ಲಾ ಗಂಜಿ

೧೫.  ನೂಲಿಗೆ ತಕ್ಕ ಸೀರೆ ಸಾಲಿಗೆ ತಕ್ಕ ಎಡೆ.

೧೬. ನೂಲು ಹಿಡಿದು ಜೋಲುವವನ ಕಾಲು ಹಿಡಿದು ನೇತಾಡಿದ.

೧೭. ನೂಲೊ ಹೆಂಡತಿ ಬಿಟ್ಟು ಹೇಲೊ ಮಾಳಿಯ ತಂದ.

೧೮. ಕುಣಿಯಲ್ಲಿ ಕೂತವ ಹೆಣ ಅಲ್ಲ ಬಟ್ಟೆ ಹರಿಯುವವ ಹುಚ್ಚನಲ್ಲ.

೧೯. ತಾಯಿಯಂತೆ ಮಗಳು ನೂಲಿನಂತೆ ಸೀರೆ.

೨೦. ಅಜ್ಜಿ ನೂತದ್ದು ಮೊಮ್ಮಗನ ಉಡದಾರಕ್ಕೆ.