ಪ್ರೀತಿ-ಕರುಣೆ-ಸ್ನೇಹ-ಮರುಕ
ಇವೇ ನಮ್ಮ ದೇವರು
ಕಂಬನಿಯೇ ಇಲ್ಲಿ ತೀರ್ಥ
ನಿಟ್ಟುಸಿರೇ ಧೂಪವು
ತಾನು ತನ್ನದೆನ್ನುವುದನು
ಕೊಡುವುದೆ ನೈವೇದ್ಯವು
ಬೇಡ ಬೇರೆ ದೇಗುಲ
ಇಲ್ಲಿ ಎಲ್ಲ ನಿರ್ಮಲ
ಇದು ಬೆಳಕಿನ ವರ್ತುಲ.

ಪ್ರೀತಿ-ಕರುಣೆ-ಸ್ನೇಹ-ಮರುಕ
ಇವೇ ನಮ್ಮ ದೇವರು
ಇಲ್ಲಿ ಇಲ್ಲ ಜಾತಿ-ಗೀತಿ
ಇಲ್ಲಿ ಇರುವುದೊಂದೆ ಪ್ರೀತಿ
ಅಳೆಯಲಾರದಿದನು ನೀತಿ
ಇಲ್ಲಿ ನೀತಿಯೊಂದೆ ಪ್ರೀತಿ
ಅದೇ ಇಲ್ಲಿ ನಿಯತಿಯು
ಅದಕಧೀನ ನಮ್ಮ ಬದುಕು
ತಾರೆ-ಚಂದ್ರ-ಗ್ರಹಗಳೂ.