. ರೋಜಾದ ಹಬ

 

ರೋಜಾದ ಹಬ್ಬಾ ಬಂತರಿ ತಿಥಿಯಾದಿನಾ
ತಯಾರಾಗಿ ನಿಂತಾರೋ ಎಲ್ಲಾ ಜನಾ ಶಿವನ ಕುತುಬಿ ದಿನಾ
ನಮಾಜಿಗೆ ಹೊಂಟಾರೋ ಎಲ್ಲಾ ಜನಾ ಶಿವನ ಸದರಿನ ದಿನಾ

. ಕುರ್ಬಾನಿ ಜಾಹೀರಾದ ಪದಾ

ಕುಂತಿರು ದೈವಕ ತಿಳಿಸುವೆ ಕೇಳರಿ ಇಟ್ಟ ಖ್ಯಾಲಾ
ಶಾಸ್ತರ ಸಂದ ತಿಳಿಸುವೆ ಇಂದ ಕೂಡಿರು ಸಭೇಕ ನಾ ||
ಮಾಡಿ ರಿವಾಯಿತ ಅಂತೇನಿ ಜನದಾಗ ನಾನಾ
ಮಕ್ಕೇದ ಪಾಯಾ ಹಾಕ್ಯಾರೋ ಶರಣಾ
ಕಟ್ಟಿದಾಂಗ ಬೀಳೂದು ನಿತ್ಯನಾ ಶರಣರ ಚಿಂತಿ ಪೂರ್ಣಾ || ೧ ||

ಕನಸಿನಲ್ಲಿ ತಿಳಿಸ್ಯಾರಲ್ಲಾ ಶಿವನ ಲೀಲಾ
ಮಗನ ಶಿರನಾ ಕೊಯ್ಯಬೇಕೋ ತೀವ್ರನಾ
ಇಬ್ರಾಹಿಮ ಕಲಿಲುಲ್ಲಾ ನೆನೆದಾರೋ ಶಿವನಾ
ಇಸ್ಮಾಯೀಲ ಮಗನನ್ನ ಕರದಾರಲ್ಲಾ
ಉಣಿಸ್ಯಾರೋ ತಿನಸ್ಯಾರೋ ಪ್ರೇಮಲಿಂದನಾ || ೨ ||

ಮಗನ ಶಿರಾ ಕೊಯ್ವರ ನಿಲ್ಲೂದು ಇಮಲಾ
ಅಲ್ಲಾನ ಹುಕುಮ ಆದೀತೋ ಪೂರ್ಣಾ
ಸುಂದರ ಮಗನ ಚಂದ್ರನ ಕಿರಣ ಗಟ್ಟಿ ಮನಸ ಮಾಡಿ ಶರಣಾ
ಭಕ್ತಿಲಿಂದ ಥರದ ಮೇಲೆ ಕೊಯ್ದಾರೋ ಶರಣಾ
ಜಾಹಿರಾತೋ ಜಗದೊಳು ಕಲಿಲುಲ್ಲಾ ಇಬ್ರಾಹಿಮ ಶರಣರು ಸೇಲನಾ || ೩ ||

ದುಂಬಾ ಬಿದ್ದಿತೋ ಥರದ ಮ್ಯಾಲಾ
ಕಡೆಗಿದ್ರೋ ಇಸ್ಮಾಯಿಲಾ ತಂತ್ರ ಯಾರಿಗೆ ತಿಳಿಲಿಲ್ಲಾ
ಆಮ್ಯಾಲೆ ನಿಂತಿತೋ ಮಕ್ಕಾ ಇಮಲಾ ಸಂಬನ ಧ್ಯಾನಾ ಮಾಡ್ಯಾರೋ ಶರಣಾ
ವರ್ಷಕ್ಕೊಮ್ಮೆ ದುಂಬಾ ಕೊಡುವ ನಿಯಮಾ
ಬಕರೀದ ಹಬ್ಬನಾ ಅಂತೇನಿ ಉಳದೀತೋ ಮಜಕೂರ ನೇಮನಾ || ೪ ||

ಮಾಡಿ ಹೇಳಿನಿ ಸ್ವಲ್ಪ ಕವನಾ ಕೆರ ಊರ ಶಾಹೀರ ಮೇಲನಾ
ಇಮಾಮ ಶಾಹೀರ ಮಾಡುವರೊ ಕವಿನಾ
ಗೈಬಿ ಅಜಮೀರ ಗುರುಸ್ಥಲನಾ ಕಲ್ಗಿಗೆ ಮಾಡುರೋ ಮರ್ದನಾ || ೫ ||