ರಾಜುಗೆ ಸಪ್ನ ಬಿತ್ತು. ಮೂರ್ ಜನ ಹುಡ್ಗರು. ಮೂರ್ ಜನಕ್ಕೂ ಹೇಳಿ ” ಯಾರು ತರತೀರೋ ತಂದು ತೋರಿದವರಿಗೆ ಅರ್ಧ ರಾಜ್ಯ ಕೊಡುವೆ. ಉಳಿದರ್ಧ ಬೇರೆಯವರಿಗೆ” ಅಂದ. ಹಿರಿಯವ ಸಾವ್ರರೂಪ್ಯಾ ಕೊಡು ನಾತತ್ತೆ ಅಂದ. ಎರಡನೇಯವ “ಸಾವ್ರರೂ. ಕೊಡು, ನಾತತ್ತೆ” ಅಂದ. ಇಬ್ಬರೂ ಹೊರಟರು.

ಕಂಚಗಾರರ ಮನೆಲಿ ಹಿರಿಯವ ಉಳಿದ. ತಿಂಗಳಿಗೆ ೧ ಚಾರ, ದಿನಕ್ಕೊಂದೂಟ. ಯೆರ‍್ಡನೇಯವ ತಿಂಗಳಿಗೊಂದು ವಸ್ತ್ರ, ದಿನಕ್ಕೊಂದೂಟ; ಮಡಿವಾಳನ ಮನೆಲಿ ಉಳಿದ. ಮೂರನೆಯವ ಹೇಳದೆ ಕುದ್ರೆ ಹತ್ತಿ ನಡೆದ. ಕೆರೆ ಕಟ್ಟೆ ಇತ್ತು. ಸಂಜಾಗೋಯ್ತು. ದಾರಿ ಗೊತ್ತಿಲ್ಲ. ಹೇಳಿ ಮನಿಗೆ ಬಿಟ್ಟ. ಮಾಶೇಶ ಮರನ ಮೇನೆ ಮರಿ ಹಾಕ್ಕಂಡಿತ್ತು. ಯೇಳ್ ಹೆಡೆ. ಹದ್ದು ದಿನಾಕು ಗೂಡ ಮಾಡಿದ ಹಾಗೆ ಒದ್ದಕೊಂಡ್ ಹೋತದೆ. ಸಂಜೆ ಮನಿಕಂಡಲ್ಲಿ ಹೇಳ್ತದೆ ಮರಿಗೆ “ನನ್ ಕಣ್ ಮುಂದೆ ಒಂದೂ ಇರುದಿಲ್ಲ. ನಿನಗೂ ನಾಳಿಕೆ ಮರಣವೋ ನಾಡದೋ” ಅಂತದೆ ಮಾಶೇಶ.

“ಯಾವ ಪುಣ್ಯವಂತನಾದರೂ ಹದ್ದ ಕೊಂದ್ ಬಿಟ್ಟರೆ ಬೇಡಿದ್ದ ಕೊಡುವೆ” ಅಂತದೆ. ಎಚ್ಚರಾಗಿತ್ತು. ಎಲ್ಲ ಆಲಿಸಿಕೊಂಡ. ಹಸಿವಗಲಿ, ಆಸರಾಗಲಿ ಅಂದಿ ಹಗಲಿಡೀ ಕಟ್ಟಿಮೇಲೆ ಕೂತ್ಕಂಡೇ ಬಿಟ್ಟ. ಯೆರಡು ತಾಸು ಹೊತ್ತಿನ ಕೂಡೆ ಹದ್ದು ಬಂತು. ಆಯಾರ ಹುಡ್ಕುಕೆ ಮಾಶೇಶ ಹೋದಾಗ ಬಂತು. ಪಟ್ಟದಾಗೆ ಕೊಳ್ಳ್ ಕತ್ತರಿಸಿಬಿಟ್ಟ ಆ ಹದ್ದ. ಹನ್ನೈಯ್ದ ಗಂಟೆಗೆ ಮಾಶೇಶ ಬಂತು.

ಅದು ಮರಿ ಅಬ್ಬಿಕೈಲಿ ಹೇಳಿತು ” ನೀ ತಂದ ಆಯಾರ ನಾ ಮುಟ್ಟುದಿಲ್ಲ. ಈ ಕಟ್ಟೀಲಿ ಮನಶ ಮನಗನೆ. ಅವನ ಕೆಲಸ ನೀ ಮಾಡಿದ ಹೊರತು ಆಯಾರ ತಿನ್ನೂದಿಲ್ಲ” ಅಂತು.

ಅದು ಕೇಳಿತು ಹುಡುಗನ ಹತ್ರ “ಏನು ಬಂದಿದ್ಯಪ್ಪ ?” ” ಏನಾಗಬೇಕಪ್ಪ?” ಹೇಳಿ. ನಾನು ತಂದೆ ಸಪ್ನದಾಗ ರತ್ನದ ಕಟ್ಟಿ, ಮುತ್ತಿನ ಜಲ್ಲಿ, ನವರತ್ನದ ಕೋಳಿ, ಮುತ್ತಿನ ಹೆಕ್ಕಿ ತಿಂತದೆ ಹೇಳಿ ಅದನ್ನು ತರಬೇಕು ಹೇಳಿ ಬಂದೆ. ಎಲ್ಲಿದೆ ಕೇಳಿದ. ಮಾಶೇಶ ಯೇನಂತು ಅವನ ಹತ್ರೆ? ” ನನ್ನ ಮೊಮ್ಮಕ್ಕಳ ಮನಿಲೇ ಅದೆ.” ಅಂತು. “ನಾನಜ್ಜ, ಅವರು ನನ್ನ ಮೊಮ್ಮಕ್ಕಳು” ಅಂತು. ಆಗ ಹಾಗಾದರೆ ಹೋಗು ಯತ್ನ ಹೇಗೆ ಕೇಳಿದ. ನೀ ನನ್ನ  ಹೆಡಿಮೇನೆ ಕುಂತ್ಕ. ಅವರ ಮನಿದ್ದಲೆ ತಕಹೋಗಿ ನಿನ್ನ ಇಳಿಸ್ತೆ ಅಂತು. ಅವ ಮೊಮ್ಮಕ್ಕಳ ಕೈಲಿ ಯೇನ ಹೇಳ್ತ ಬತ್ತನೆ ಮಾಶೇಶ? ನಿಮಗೆ ಚಲೋ ಗಂಡನ ಆರಿಸಿಕೊಂಡ ಬತ್ತನೆ”. ಹೆರಿಹುಡಗಿ ಮನಿಗೆ ಹೋದ ಅವ. ಅದೇನ್ ಮಾಡ್ತು? ತನಗೆ ಯೋಗ್ಯ ಸುಂದರ ಪುರುಷ ಬಂದ ಅಂದ ಬಂಗಾರದ ಹರಿವಣದಾಗೆ ಆರತಿ ಎತ್ತಿತು ಅವಗೆ ” ನೀ ನನ್ನ ನಗ್ನಾಗು ಬೇಡಿದ್ದ ಕೊಡತೆ” ಅಂತು ” ರತ್ನ ಕಟ್ಟಿದೆ, ರತ್ನದ ಕಟ್ಟಿ ಬೇಕು” ಅಂದ ನಾಕೊಡ್ತೆ ಅಂತು.

ನಗ್ನಾದ ಅವ ವಂದ್ ರಾತ್ರಿ ಉಳಕೊಂಡ. ಮರುದಿವ ಯೆರಡನೆ ತಂಗಿ ಮನೆಗೆ ಹೋದ. ಅದೂ ಹಾಗೇ ಹೇಳಿತು. ತನಗೆ ಸರಿಯಾದ ಪುರುಷ ಗಂಡ ಹೇಳಿ ಅದೂ ಆರತಿ ಮಾಡಿತು. “ತನ್ನ ನಗ್ನಾಗು ಹೇಳ್ತು. “ನಗ್ನಾಗುಕಡ್ಡಿಲ್ಲ”. ನಾನು ಬಂದ ಕೆಲಸ ನಿರ್ವಹಿಸಿ ಕೊಡುದಾರೆ ನಗ್ನಾಗ್ತೆ ಅಂದ ಅದರ ಕೈಲಿ ಮುತ್ತಿನ ಜಲ್ಲಿತ್ತು. ” ಕೊಡ್ತೆ” ಅಂದಿ ನಗ್ನಾಯ್ತು. ಅಲ್ಲೊಂದ್ ರಾತ್ರಿ ಉಲಕಂಡು ಮರುದಿವಸ ಕಿರಿತಂಗಿ ಮನಿಗೋದ.ಅದರ ಕೈಲೂ ಹಾಗೇ ಹೇಳೀ ಅದೂ ನಗ್ನಾಯ್ತು. ಮುತ್ತ ಹೆಕ್ಕಲೆಂಬೂ ನವರತ್ನದ ಕೋಳಿಯಿದೆ.ಅದರ ಕೈಲಿ ಅದರಗೊಂದು ಬೆತ್ತದ ಮೂರಗೇಣಿನ ನಗುಬೆತ್ತ, ಕೋಳಿಕಟ್ರೆ, ಮುತ್ತಿನ ಜಲ್ಲಿ ಎಲ್ಲ ತಕಂಡಿ ಮಾಶೇಶನ ಹೆಡಿಮೇನೆ ಇಚೆ ದಾಟಿದ ಮೂರು ಜನ ಹೆಂಡ್ರು ತಂದ ಒಡವೆ ಕಟ್ಟಿ ಮೇಲಿಟ್ಟು ಅಣ್ಣದಿರ ಅರಸುತ ಹೋದ.ಹಿರೀ ಅಣ್ಣನಿದ್ದಲ್ಲಿ ಹೋದ. ಆ ಅಣ್ಣನ್ನ ಕರಕೊಂಡ ಬಂದ.ಮನಿಗೋಗ್ವ ಬಾ ಅಂದ ಮರಿದಿವಸ ಎರಡನೆ ಅಣ್ಣನ ಕರೂಕೆ ಹೋದ ಮುರುಜನ ಒಟ್ಟಾದರು. ಮೂರ ಜನ ಹೆಂಗಸರು ಬೆತ್ತ ಹೀಗೆ ನಿಲ್ಲಿಸಿದ ಕೋಡಲೆ ಸಣ್ಣ ಹುಡುಗರು ಮನಗಿದ ಕೊಡಲೆ ಅಚ್ಚಕನ್ನೆ ದೇವಕನ್ನೆ ಅಂತಾರೆ. ಅಣ್ಣಂದಿರ ಕಣ್ಣಿಗೆ ಬೀಳಲಿಲ್ಲ. ಮನಿಗೆ ಹೀಗೆ ನಿಲ್ಲಿಸಿಬಿಟ್ಟಿತು ಮೂರ್ ಜನ ಹೆಂಗಸರು ಆದರು.

ಇವರಿಗೆ ತಲೆ ಕೆಟ್ಟಿತು. ” ನಂಗೊಂದಾಯ್ತು, ನಿಂಗೋಂದಾಯ್ತು, ತಂಗೊಂದಾಯ್ತು” ಹೇಳೀ ಅವರಿಗೆ ದುರಾಲೋಚನೆ ಹುಟ್ಟಿತು.ಹೋತೆ ಹೋತೇ ಉಳಿಬೇಕಾರೇಯ ರಸ್ತಿ ಮೇನೆ ಅವನ ಹಾಳಬಾವಿಲಿ ದೂಡಿ ಹಾಕಿಬಿಟ್ಟರು ಹೀಗೆ ನಿಲ್ಲಿಸಿದ ಬಾವಿಲಿ.ಶಮಾ ರಸ್ತೆಯ ಹಾಗೇ ಆಯ್ತು ಬಾವಿ. ಅವ ಹಿಂದೆ ಹೋದ ಬೆತ್ತ ತಕಂಡಿ ಮನಿ ಶನೀಪ ಹೋಗತ್ನೆ ಅಡ್ಡ ಮಾಡಿಬಿಟ್ಟ ಬೆತ್ತ. ಮೂರ್ ಜನ ಸನ್ಣ ಹುಡಗರಾಗಿ ಹೋದರು ಹೆಂಗಸರು. ಅಣ್ಣ-ತಮ್ಂ ಇವ್ರು ದರ್ಡ ಕೊಡ್ವರಲ್ಲ ಅಂದಿ ಮೂರ ಹುಡುಗಿರನ್ನು ಬಿಟ್ಟರು. ಮನಿಗೆ ಹೋದರು.

ಇವ ಹಿಂದಿನಿಂದ ಹೋದ. ಬೆತ್ತ ಮತ್ತೆ ನಿಲ್ಲಿಸಿದ. ಮೂರ್ ಜನರೂ ಹೆಂಗಸರೇ ಆದರು. ಆಗ ಇವರೆಲ್ಲ ಮುಂದೆ ಹೋದರು. “ಯಾರ್ ತಂದರಪ್ಪ ನವರತ್ನದ ಕಟ್ಟೆ ಮುತ್‌ಇನ ಜಲ್ಲಿ, ನವರತ್ನದ ಕೋಳಿ” ಕೇಳಿದ. ” ನಾ ತಂದನೆ” ಹೇಳತಾರೆ. ತಕಹೋದು ಏನಿಲ್ಲ.ಹಿಂದಿದ್ದೆ ಕಿರಿಹುಡುಗ ಹೋದ. ಅವನ ಹತ್ರೂ ಕೇಳಿದ ತಂದೆ. ನಾ ತಂದೆ ಹೇಳಿದ. ತೋರಿಸು ಅಂದ ತಂದೆ. ಹಾಗೆ ತೋರಿಸೂಕೆ ಬರೂದಿಲ್ಲ. ದೊಟ್ಟ ಸಾವ್ಕಾರರಿಕ್ಕೂ ಅರಸಾದಕ್ಕೂ ಎಲ್ಲಾ ಸೇರಿಸಿ ಸಣ್ಣ ಪೀಠ ಕಟ್ಟಿಸು. ವಾದ್ಯ ಎಲ್ಲ ಮಾಡಿಸು, ತೋರಿಸುತೆ ಅಂದ. ಹಿರಿ ಹುಡಗಿ ತಟ್ಟೆ ಹೀಗೆ ಮುರಿತು. ರತ್ನದ ಕಟ್ಟೆಯಾಯಿತು. ಆಗ ಯೆರಡನೆಯ ಹುಡುಗಿ ಹಿಡಿತು. ಕಟ್ಟಿಸುತ್ತ ಮುತ್ತಿನ ಜಲ್ಲಿ ಆಯ್ತು. ಕಡಿಗೆ ಕಿರಿ ಹುಡಗಿ ಹಿಡಿತು. ನವರ‍್ನದ ಕೋಳಿ, ಮುತ್ತಿನ ಜಲ್ಲಿ ಮುತ್ತೆಲ್ಲ ಹೆಕೆ ಹೆಕ್ ಹೆಕ್ ಹೆಕ ತಿಂತು.

ಕಡಿಗೆ ಕಿರಿಮಗನೇ ತಂದ ಹೇಳಿ ತಿಳಿತೋ ಇಲ್ವೋ? ಅವಗೆ ಅರ್ಧರಾಜ್ಯ ಬರಕೊಟ್ಟ ತಂದೆ, ಅರ್ಧರಾಜ್ಯ ಮೂರ್ ಜನ ಬೇರೆ ಮಗದಿರಿಗೆ ಬರಕೊಟ್ಟ.

ಮೂರ್ ಜನ ಬೇರೆ ಬೇರೆ ಮನೆ ಕಟ್ಟಿಸಿ ಇರಸತಾನೆ.

ಹೇಳಿದವರು

ದಿ. ಕನ್ನೆ ಕೋಂ ಗೋವಿಂದ ಪಟಗಾರ ಮಾಸೂರ