ಒಂದೂರಲ್ಲಿ ಗಂಡ ಹೆಂಡ್ತಿ, ಅರಸು ಅರಸು ಹೆಂಡ್ತಿ ಇದ್ರು, ಅವರ್ಗೆ ಹುಡುಗರೆಲ್ಲಾಗಿತ್ತು. ಅವ್ರು ದೇವಸ್ತಾನದಲ್ಲಿ ನಮ್ಗೆ ಹುಡ್ಗರಾದ್ರೆ ರತ್ನಜಲ್ಲಿ, ಮುತ್ತಿನ ಕಟ್ಟೆ, ಚಿನ್ನದ ಗಿಡ ಮಾಡ್ಸ್ ಹಾಕಿ ಕೊಡ್ತೆ ಹೇಳಿರು.

ಯೆಯ್ಡ ಜನ ಗಂಡ್ ಹುಡುಗ್ರು ಹುಟ್ರು ಅರಸೂಗೆ ಕಡಿಗೆ. ಹುಟ್ಗ ಲಗ್ನಕೆ ನೆರದ. ನೆರವರಿಗೆ ಸೋದರವ ಹೆಣ್ ಕೇಳೂಕೆ ಹೋದ್ರು. ಹರಕಿ ಮಾಡ್ಕಂಡದ್ದು ನೆನಪೇ ಇಲ್ಲ. ಕುಲದೇವ್ರ ಬಂಡಿ, ಸಂಜಿಲಿ ಸಪ್ನದಲ್ಲಿ ” ಹುಡ್ಗರಾದರೆಹರಕಿ ಮಾಡ್ಕಂಡಿದ್ದೆ. ಹರಕಿ ಕೊಡದೇಯ ಲಗ್ನಕೆ ತಯಾರಿ ಮಾಡ್ದೆಯೋ?” ಕೇಳ್ತು ದೇವ್ರು. ಕಡಿಗೆ ಕೇಳ್ವರಿಗೆ ನಗ್ನಕೆ ತಯಾರ್ ಮಾಡೂದೆ ಬಿಟ್ರು. ಪೂಜಿಕೆ ತಯಾರ್ ಮಾಡ್ರು. ರತ್ನಜಲ್ಲಿ, ಮುತ್ತಿಕಟ್ಟಿ, ಚಿನ್ನ್ದ ಗಿಡ ತಯಾರ್ ಮಾಡುತ್ನೂವ, ಅಣ್ಣ ಯೇನೆ ಹೇಳ್ದ ತಂದಿ ಕೈಲಿ? ” ನಂಗೆ ವಂದ್ ಗಾಡಿ ಮಾಡಿಕೊಂಡು, ಮತ್ತು ವಂದಾಳ್ ಮಾಡ್ ಕೊಡು” ಹೇಳ್ದ.

ಅಣ್ಣ ತಯಾರಾಗಿ ಯೆದ್ದ ಹೊಗೂಕೆ. ತನ್ನ ಬೆನ್ಗೆ ಅಳ್ಕಂತಿ ಹೋಗೂಕೆ ತಯಾರ ಮಾಡ್ದ. ” ನೀನು ರತ್ನಜಲ್ಲಿ, ಮುತ್ತನಕಟ್ಟೆ, ಚಿನ್ನದ ಗಿಡ ತರೂಕೆ ಹೋಗೂದ್ ಬೇಡ, ಸಾಲೀಗೆ ಹೋಗು ತಮ್ಮಾ” ಅಂದ ಹೇಳ್ದ ಅಣ್ಣ.

ಅವ ಸಾಲಿಗೆ ಹೋದ. ಅಣ್ಣ ಗಾಡಿ ಹೊಡ್ಕಂಡೆ ಬಂದ. ಸಾಲಿಗೆ ಹೋಗಿ, ಅಲ್ಲಿ ಯೆಂತಾ ಅಂದಿ ಬರೀತನೆ ರತ್ನದ ಜಲ್ಲಿ, ಮುತ್ತನ ಕಡ್ಡಿ, ಚಿನ್ನದ ಗಿಡ ಅಂದಿ ಬರೀತನೆ. ಬೇರೆ ಅಕ್ಸರನೇ ಬರೂದಿಲ್ಲ ಅವ್ಗೆ. ಓಡೋಡಿ, ಅಣ್ಣನ ಬೆನ್ ಹಿಡೂಕೆ ಬಂದ ವಂದಕ್ಕೆ ಬಿಟ್ಟಾಗೆ.

ಬರೂವರಗೆ, ಅಣ್ಣ ಗಾಡಿ ನಿಲ್ಸಿದ. ” ನೀನು ತಮ್ಮ ಬರುದ್ ಬೇಡ” ಅಂದೆ ಹೇಳಿ ಅವ್ನ ತಲಿಗೆ ಹೊಡ್ದ. ಅವ್ನ ಅಂಗಳದಲ್ಲಿ ಕೆಡಗ್ದ. ಗಾಡಿ ಬಿಟ್ಕಂಡ ಬಂದ ಅಣ್ಣ.

ಬರುವರಿಗೆ ತಮ್ಮ ಈ ಆಣ್ಣ ಗಾಲೀ ಮಳೇ ಬಂದಿ ಅಲ್ಲೇ ಜೀವ ಬಂತು. ಜೀವ ಬರೂವರಿಗೆ ಮತ್ತೂ ಅಣ್ಣ ಸಂತಿಗೇ ಬರಬೇಕು ಹೇಳಿ ಮಾರ್ಗದವರಿಗೆ ಬಂದ. ಮಾರ್ಗ ಹಿಡ್ದ ಬಂದಿ, ಅಣ್ಣ ಕಟ್ಟಿ ಮೇನೆ ಗಾಡಿ ನಿಲ್ಸೆಕಂಡಿ ಕುಂತನೆ. ತಮ್ ಬಂದಿ ಅಸ್ವಂತೆಳ್ಳಿ ಮರನ ವಟ್ಯಲ್ಲ ಹೊಕ್ಕು ಕುಂತನೆ. ಕುಂತಕಂಡಿ ಅಲ್ ವಂದ್ ಗಮಡ್ ಹಕ್ಕಿ, ಹೆಣ್ ಹಕ್ಕಿ ಇತ್ತು.

ಹೆಣ್ ಹಕ್ಕಿ ಗಂಡ್ ಹಕ್ಕಿ ಕಲ್ ಯೇನಂತು? ” ಅವ್ರು ಬಂದ ಕಾರಣ ಹೇಳು.” ಅಂತು ” ಅವ್ರು ಬಂದ್ದು ನಿನಗೇಕೆ? ಅವ್ರು ಬಂದ್ದು ನಿನಗೇಕೆ? ಅವ್ರು ಬಂದು ಕುಂತಿರು. ನಿನ್ಗೆ ಅವ್ರ್ ಸುದ್ದಿಬೇಡ”. ಅಂತು. ಹೆಣ್ ಹಕ್ಕಿ “ಯೆಲ್ಲ; ಹೇಳ್ಲೇ ಬೇಕು, ಹೇಳದೆಗಿದ್ದರೆ ನಾ ನ್ಯೇಲ್ಗಿ ಹುಸ್ಕಂಡಿ, ಪುರಾಣ ಕೊಡ್ತೆ” ಹೇಳ್ತು ಹೆನ್ ಹಕ್ಕಿ.

ಗಂಡ್ ಹಕ್ಕಿ “ಅವ ಅಣ್ಣ ರತ್ನ ಜಲ್ಲಿ ಮುತ್ನಕಟ್ಟಿ, ಚಿನ್ನದ ಗಿಡ ತರೂಕೆ ಬಂದವ. ತಮ್ನೂ ಬಂದನೆ ಅವನ ಸಂಗಡೇವ. ತಮ್ಮ ಯಾವ ದಾರೀಲಿ ಹೋಗಬೇಕು.?” ವಂದಿವ್ಸ ಕಲ್ ಹಾದಿ, ವಂದಿವ್ಸ ಮುಳ್ ಹಾದಿ. ದಾಟಿ ಹೋಗಬೇಕು ತರೂಕೆ.”

ವಂದಿವ್ಸ ಕಯ್ಡಿ ಹಾದಿ, ವಂದಿವ್ಸ್ ಹುಲಿ ಹಾದಿ,ವಂದಿವ್ಸ ಹಾವ್ನ ಹಾದಿ, ಅಲ್ ಮುಂದೆ ಹೋದಕುಳ್ಳೆ ವಂದ್ ರುಸಿ ಶಿಕ್ತಾನೆ. ರುಸಿ ಕಂಡು, ಮುಂದೆ ಹೋದ ಕೂಡ್ಲೆ ಮತ್ತಂದ್ ದಡ್ ರುಸಿ ಸಿಕ್ತಾನೆ. ಅವಟ್ ಮಾತ ಆಲ್ಸಕಂಡ ಗಿಳಿರಾಮ ಹೇಳದ್ದ. ತಮ್ಮ ಆಲ್ಸ ಕಂಡಿ, ಬೆಳಗಾಗಿ ಮೋರಿ ತೊಳ್ಕಂಡಿ, ದಾರಿ ಹಿಡ್ದ ತಮ್ಮ. ವಂದಿವ್ಸ್ ಕಲ್ ಹಾದಿ, ವಂದಿವ್ಸ ಮುಳ್ ಹಾದಿಗಳ್ದ. ವಂದಿವ್ಸ್ ಕಯ್ಡಿ ಹಾದಿ, ವಂದಿವ್ಸ್ ಹುಲಿಹಾದಿ, ವಂದಿವ್ಸ್ ಸರ್ಪನ ಹಾದಿಗಳ್ದ, ” ನೀನು ಬಿರಾಮಣಿ ಹುಡ್ಗ. ನಿನ್ಗೆನೂ ಮಾಡೂದಿಲ್ಲ” ಹೇಳಿ ಗಿಳಿರಾಮ ಹೇಳಿದ್ದ.

ಹೋಗ್ವರಿಗೆ ಅಲ್ಲೊಂದು ರುಸಿ ಕುತ್ಕಂಡಿ ತನ್ನ ಹನ್ನೆಯ್ಡು ವರ್ಸದ ಜಪ ಮಾಡ್ಕಂತಿ, ಚಿನ್ನದ ಕಲ್ಲಿ ನೆಗಿತ ಉಳಿತ. ಕಡಿಗೆ ಅವ ಬಿಸ್ಲ ಕಾಣಲಿಲ್ಲ. ಯಂತದೂ ಕಾಣಲಿಲ್ಲ. ಬಾಗಿಲಿಗೆ ಹೋದ.

ಅವ “ಮಗನೇ, ನೀ ಯೆಲ್ಲಿಂದ ಬಂದೆ? ಇಲ್ಲಿ ನರಜನ ಬಂದರೇ ಯೆಲ್ಲಾಗಿತ್ತು. ನೀ ಯಂತರದಿಂದ ಬಂದೆ ಮಗನೇ? ಕೇಳ್ದ ರುಸಿ ” ನೀನು ಇಲ್ಲೆ ಉಳಿ ಮಗನೇ, ನಿನಗೆ ರತ್ನದ ಜಿಲ್ಲಿ ಮುತ್ನ ಕಟ್ಟಿ, ಚಿನ್ನದ ಗಿಡ ಸಿಕ್ಕುದೆಲ್ಲಾ. ಅದು ಅಚಕನ್ ದೇವಕನ್ನಿರತ್ರ ಅದೆ. ನೀನು ಹೋಬೇಡ. ನನಗೆ ಹಣ್ಣು ಹಾಲು (ಹಾಲು ಹಣ್ಣು ಎಂದಿರಬೇಕು) ಕೊಯ್ ಕೊಟ್ಕಂಡ್ ತಂದ್ ಕೊಡ್ತೇ ಉಳಿ” ಅಂದ ರುಸಿ ಹುಡುಗನ ಕಲಿ. ಯಲ್ಲ ಅಜ್ಜ, ನಾನು ಹೋಗಲೇಬೇಕು. ತರಲೇ ಬೇಕು ಯೆಲ್ಲೆಗಿದ್ರೆ ನನ್ ಜೀವ ಊಳುದೆಲ್ಲಾ. ನಾ ತರಲೇಬೇಕು ಅಂದ ಹುಡುಗ.

ಕಡಿಗೆ ಬೆಳಿಗ್ಗೆ ಮತ್ತೆ ಹಾದಿ ಹಿಡಿದ. ಅಲ್ಲೊಂದ ಕಯಡಿ ಸಿಕ್ತದೆ. ಕಯಡಿ ಯೇನೇನೂ ಮಾಡುದೆಲ್ಲ. ಅಲ್ಲಿ ಮತ್ತೊಂದು ರುಸಿ ಹದ್ನಾಕೆ ವರ್ಸನ ಜಪ ಮಾಡ್ಕಂತಿ ಅಗಸಿ ಪಾತ್ರ ಹೊಳಿಕಂತ ಇರ್ತ (ಮಾಡ್ತನೆ) ಇವ ಅಲಿ ಬಾಗ್ಲದಲಿ ಹೋಗಿ ನಿಂತ.ಅವಂಗೆ ಕಂಡ್ತು ರುಸಿಗೆ ಆರಾನದ ಅಡವೀಲಿ ಬಂದೋರಿಲ್ಲ. ಹೋದೋರಿಲ್ಲ ನೀ ಬಂದ ಕಾರಣ್ಯೇನು? ಕೇಳ್ದ ರುಸಿ. ರತ್ನಜಲ್ಲಿ. ಮುತ್ನಕಟ್ಟೆ, ಚಿನ್ನದ ಗಿಡ ತರುಕೆ ಬಂದೆ ಅಂದ.

“ಹಣ್ಣು ಹಾಲು ಕೊಟ್ಕಂತಿ ಇಲ್ಲೇ ನನ್ದಲೇ ಉಳಿ ಮೊಮ್ಮಗ್ನೇ. ನಿನ್ಗೆ ಸಿಕ್ವ ಹಾಂಗೇ ಇಲ್ಲ ಅದು” ಹೇಳ್ದ. ಯೆಲ್ಲ ಅಜ್ಜ, ನಾ ಹೋಗ್ಲೆ ಬೇಕು. ಯೆಲ್ದೆಗಿದ್ರೆ ನನ ಜೀವನೇ ನಿಲ್ಲೂದೆಲ್ಲ. ಅಲ್ ಹೋಗುದಾರ ವಂದ್ ದಾರಿ ತೋರ್ ಕೊಡು ಹೇಳ್ದ ಹುಡ್ಗ.

“ಹಿಂಗೆ ಹೋಗಬೇಕು. ಅಲ್ಲೊಂದ ಮರ ಶಿಗ್ತದೆ.” ಅಲ್ ವಂದ ಕೆರದೆ. ಅಚ್ಕನ ದೇವ್ಕನ್ಯರ ಮೀವ್ ಕರೆ. ನೀ ಹೋಗೆ ಮರನದಲ್ಲಿ ಕೂತ್ಕಂಬೇಕು. ಅವರಗೆ ನಪಳ ಅಗ್ದಿದೆ ಹಾಂಗ್ ಇಳಬೇಕು. ಇಳ್ದಿ ಅವ್ರು ಮೀಯತಾರೆ. ಕರಿಕನ್ನಿಯ ಮಾನ ಬಿಲ್ಸಕಂಡ್ ಇಟ್ಟು ಮೀಯ್ತದೆ ಕೆರಿಲಿ. ಕಿರಿಕನ್ನಿಯ ಮಾನದ ಮೇಲೆ ಹೋಗೆ ನಿಲಬೇಕು. ಅಂದ್ ಹೇಳ ಹೇಳ್ದ.

ಇವ ಬಂದ, ಸಾವಕಾಶ ಇಳ್ದಿ ಬಂದ.ಅವರು ಬಂದ್ ಮೀವ್ಕೆ ನಿತ್ತಿರು. ಆರತಾಸಿನಲ್ಲಿ ಹಗಲು. ಮಾನದ ಮೇನೆ ಬಂದೆ ನಿಂತ. ನಿಲ್ವರಿಗೆ ” ನನ್ನ ಮಾನ ಕೊಡು ಮಾನ ಕೊಡು” ಅಂದೆ ಹೇಳ್ತು.ಕಿರೀಕನ್ ಮಾನದ ಮೇನೆ ನೊಂತ್ಕಬಟ್ಟನೆ ಹೇಳ್ರು. ಕಡಿಗೆ ಅವ ಬಿಟ್ಟ. ಅದು ಸೀರೆ ಉಟ್ಕಂಡ್ತು. ಕಿರಿಕನ್ನಿ ಅವ ಅವ್ರ ನೋಡ್ದ ಕೂಡ್ಲೆ ಅವಗೆ ಯೆಚ್ಚರ ತಪ್ ಹೋಯ್ತು. ಬಿದ್ ಬಿಟ್ಟ ಕೆರಿಲಿ. ಅವರು ಮುಳ್ಕಿ ಅವ್ನ ಯೇಳ್ಸಕಂಡ್ ಬಂದ್ರು. ಎಚ್ರ್ ತರ್ತರು ಐದು ಜನಾವ, ಮೇನೆ ತೆಗ್ದ ಹಾಕಿ ಬಿಟ್ರು.

“ನಿಂಗೆ ಯಾವೂರಾಯ್ತು? ಯೇನ್ತನ? ಯೆಂತದಕೆ ಬಂದಿದೆ?” ಅಂದ್ ಹೆರಿಕನ್ ಕೇಳ್ತು ಹುಡ್ಗನ ಕಲ್ಲಿ. ನಾನು ಯೆಂತದ್ಕೂ ಇಲ್ಲ, ನಾನು ಹುಟ್ ಬೇಕಾರೆ ನನ್ ತಾಯಿ ತಂದೆ ರತ್ನದ ಜಲ್ಲಿ, ಮುತ್ನ ಕಟ್ಟಿ, ಚಿನ್ನದ ಗಿಡ್ ಮಾಡ್ ಕೊಡ್ತೆ ಹೇಳ್ಕಂಡಿರಂತೆ. ಅವರ ಉಸ್ರಾಗೇ ತಾ ಬಂದೆ ಅಂದ.

ಕೊಟ್ ಕೂಡ್ಲೆ “ನಿನ್ಗೆ ನಾ ಮದಿಯಾತೆ” ಅಂದಿತ್ತು. ಅವ್ರ್ ನಿನು ನಾಕ್ ನಾಕ್ ಮನಿಲಿ ನಾಲ್ಕ್ ನಾಲ್ಕ್ ದಿವಸ ಉಳಿಬೇಕು. ಕಡೀಗೆ ಕಿರಿಕನ್ನಿ ಮನಿಲಿ ಉಳಿಬೇಕು. ” ಅದು ನಿನ್ನೇ ನಗ್ನಾತದೆ” ಅಂದೆ ಹೇಳ್ತದೆ. ಅಂತನೂವ”ಅಡ್ಡಿಲ್ಲ; ನಗ್ನಾಗ್ಲಿ ಕಡ್ಡೆಲ್ಲ; ರತ್ನದ ಜಲ್ಲಿ ಮುತ್ನ ಕಟ್ಟಿ, ಚಿನ್ನದ ಗಿಡ ತಂದ್ ಕೊಡಬೇಕು” ಹೇಳ್ತ.

ಅವರ ಮಲ್ಗಿ ಯೆಲ್ಲರ ಮಲ್ಲೂ ನಾಲ್ಕ ನಾಲ್ಕ ದಿವಸ ಉಳಿದ, ಕಡಿಗೆ ಇದ್ರ ಮನ್ಗೆ ಹೋದ. ಹಾಲೂ ಹಣ್ಣು ಅವರು ತಿಂಬ ತಿಯಾರ ಕೊಟ್ರು. ಅವಗೆ ತಿಂದ್ಕಂಡಿ, ನಾ ಬೆಳಿಗ್ಗೆ ಹೋಬೇಕು, ನಾ ಬಂದಿ ವರ್ಸಾಗೂಕೆ ಬಂತು ಹೇಳ್ದ ಹುಡ್ಗ. ಹೆರೀ ಅಕ್ಕ ಹೇಳ್ತು ” ನಾನು ಯೀಗ ಕೊಡುದೆಲ್ಲ ಲಗ್ನಮಾಡ್ ಕೊಡೂದೆಲ್ಲ ತಂಗಿಯ ಯಾವಾಗ ನೆನಕಂತೆ ಆವಾಗ ನೆನಿ. ನಾವೆ ಐದ ಜನ್ರೂವ ಬತ್ರು”. ಹೇಳ್ತು ರತ್ನದ ಜಲ್ಲಿ, ಮುತ್ನಕಟ್ಟಿ, ಚಿನ್ನದ ಗಿಡ ತಕಂಡಿ ಬಂದೆ.(ಅಚ್ಚಕನ್ನೆದೇವ ಕನ್ನೆಯರು ಮೂರು ಕಲ್ಲೂಹ ರೆಕ್ಕೆ ಮಂತ್ರಿಸಿ ಕೊಟ್ಟದಲ್ಲು ಇಲ್ಲಿ ತಿಳಿಸಲಿಲ್ಲ. ಮುಂದೆ ಆ ಮಾತು ಬಂದಿದೆ)

ದಡ್ಡ ರುಸಿದ್ದಲ್ ಬಂದ ದಡ್ ರುಸಿ ಕಲೆ “ಅಗಸಿಪಾತ್ರ ನನ್ಗೆ ಕೊಡು ಅಜ್ಜಯ್ಯ”, ಅಂದ. ” ಅಚ್ಚಕನ ದೇವಕನ್ನೆರೆ,” ಅಂದು ಅವರು ಐದ್ ಜನರೂ ಬಂದೆನಿಂದ್ರು, ನನ್ಗೆ ವಂದ್ ಹೆಣ ಕೊಡ್ವ ಅಂದ ದಡ್ರುಸಿ ಅವಗೆ ವಂದ ಹೆಣ್ ಕೊಟ್ಟ. ಅಗಸಿ ಪಾತ್ರ ತಕಂಡ ಹಿಂತಿರಗಿ ಬಂದ ಅಗಸಿ ಪಾತ್ರ ತಕಂಡಿ.

ಅವರೆ ಮಾಯಾಗೆ ಹೋದ್ರು. ಅವನದಲ್ಲ ಇದೆ ಹೆಣ್ನೂ ಮಾಯಾಗೆ ಹೀಯ್ತು. “ಯೇ ಹುಡಗಾ, ನಿನ್ ಹೆಣ್ ಇಲ್ಲೆಲ್ಲ ನನ್ ಅಗಸಿಪಾತ್ರ ಕೊಟ್ ಹೋಗಲ್ಲೊ, ನಿನ್ ಹೆಣ್ನಿಲ್ಲ” ಹೇಳ್ದ. ” ಕುಟಗೋಲು, ಹೋಗ್ ಕುಟ್ಟು ಹೊಯ್ ದೊಣ್ಣಿ ಹೋಗೆ ಹೊಯ್ಯಿ” ಹೇಳದ ಅವ.

ಕುಟ್ಟು ದೊಣ್ಣಿ ಹೋಗೆ ಕುಟ್ತು. ಹೊಯ್ ದೊಣ್ಣಿ ಹೋಗೆ ಹೊಡಿತು. ರುಸಿಗೆ; “ಯೇನಿನ್ ಕುಟದೊಣ್ಣಿ ಕರಯಲ್ಲೋ ನನ್ಗೆ ಪಾತ್ರನೂ ಬೇಡ ನಿನ್ ಹೊಯ್ದಾಣ್ಣಿ ತಕ ಹೊಗು” ಹೇಳ್ದ ಕಡಿಗೆ ಚಿನ್ನದ ಕಲ್ಲಿ ನೆನ್ವನದಲಿ ಬಂದ. ಅವ್ನಕಲಿ ಇವಲ್ಲಿ ನಿಂತ್ಕಂಡಿ, ” ಅಚಕನೆ ದೇವಕನ್ನಿರೇ” ಅಂದ. ಅವ್ರು ಹುಡ್ಗನದಲಿ ಬಂದೆ ನಿಂತ್ರು. ಕಡಿಗೆ ” ಹುಡ್ಗಾ, ನಿನ್ಗೆ ವಂದೆ ಹೆನ್ಣ ಕೊಟ್ಕೆ ಹೋಗು” ಅಂದ.

ಇವ ವಂದೆ ಹೆಣ್ ನಡ್ಗನಳ ಕೊಟ್ಟ. ಕೊಡ್ವರಿಗೆ, ” ಇನ್ನ ಚಿನ್ನದ ಕಲ್ಲಿ ನನ್ಗೆ ಕೊಡೂ ಅಜ್ಜಯ್ಯಾ”, ಹೇಳ್ದ ಚಿನ್ನದ ಕಲ್ಲಿ ಕೊಟ್ಟ; ಹೆಣಿ ತಕಮಡ.

ಇವ ಚಿನ್ನದ ಕಲ್ಲಿ ತಕಂಡಿ ಬಂದ. ಬರುವರಿಗೆ ಅವಕೊಟ್ಟ ಹೆಣ್ಣು ಮಾಯಾಗೆ ಹೋಯ್ತು. ಕೇಳ್ದ ಹುಡ್ಗನ ಕೈಲಿ ಹೊಯ್ ದೊಣಿ ಹೋಗೆ ಹೊಯ್ಯಿ. ಕುಟ್ ದೊಣ್ಣಿ ಹೋಗೆ ಕುಟ್ಟು. ಹೇಳ್ದ ಹುಡ್ಗ ಯೇ ಹುಡ್ಗ ” ನಿನ್ ಕುಟಿ ದೊಣ್ಣಿ ಕರಯಲ್ಲೆ ಹೊಯ್ ದೊಣ್ಣಿಕರಯಲ್ಲೇ ನನ್ ಚಿನ್ನದ ಕಲ್ಲಿ ಕೊಟ್ಟ ಹೋದ್ರೂ ಇಲ್ಲ” ಅಂದ.

ಅವ್ ಕುಟಿ ದೊಣ್ಣಿ ಕರ‍್ದ. ಹೊಯ್ ದೊಣ್ಣಿ ಕರದ.ಚಿನ್ನದ ಕಲ್ಲಿ ಅವಗೆ ಸಿಕ್ತು. ಅವಗೆ ಪತ್ರಿನೂ ಸಿಕ್ತು. ಮುಂದೆ, ಅಣ್ಣನದಲ್ಲೇ ಬಂದ. ಅಣ್ಣ ಬಂದ ವರ್ಸದ ವರಿಗೂ ಅಲ್ಲೇ ಕೂತ. ತಂದ ಬೀಯ ಖರ್ಚಾಗದೆ ಖರ್ಚಾಗತನೂವ ಅಣ್ಣನ ಗುರ್ತ ಸಿಕ್ತು ತಮ್ಮಗೆ ತಮ್ಮನ ಗುರತ ಅಣ್ಣಗೆ ಸಿಕಲೆಲ್ಲ.

ಕಡಿಗೇಯ ಮನಿಗೆ ಬಂದ ಅಣ್ಣನ ಮಾತಾಡ್ಸಲೆಲ್ಲ. ” ತಾಯಿ ನಾವು ಜನಿಸಬೇಕಾರೆ ಹೆಳ್ಕಂಡೆ ಹರಕಿ ತಯಾರ್ ಮಾಡುವಾ, ತಂದನೆ ತಾಯೀ ದಡ್ಡ ಕಾರ್ಯವ ಯೇಳ್ಲಬೇಕು” ಹೇಳ್ದ ತಾಯಿಕಲಿ ಅವ್ರ್ ಬಡುವರು, ರಾಜನಾದರೂ ಬಡತ್ತನ ಬಂದ್ ಹೋಯ್ತು. ತಂಗಿನೂ ಕರಯ ಬೇಕು.ಅಂದ ಕೇಳದಿದ್ ಊರಗ ಪತ್ರ ಬರದ ಕೇಳೂ ಊರಗೆ ಡಂಗಲ ಸಾರಸ್‌ದ ಅವರೆಲ್ಲಾ ಬಂದ್ರು.

ಅಣ್ಣನೂ ಕರಸದ್ರು. ಕರಸಿ, ಮತ್ತೆ ಆ ದೇಸ್ತನದ ತನಕ ನಾಕ ಜನರು ಹೋಗಿ ತಾಯಿ ತಂದೆ, ಅಣ್ಣ, ತಮ್ಮಂದಿರು ಹೋಗಿ ಪೂಜಿ ಕೊಟ್ಕಂಡೆ ಬಂದ್ರು. ಬರುವರಿಗೆ ಅಡ್ಗಿ ಮಾಡೂಕೆ ಪತ್ರೆಲ್ಲ. ಅಕ್ಕಿಯೆಲ್ಲ ತಾಯಿಕಲಿ, ತಂದಿ ಕಲಿ, ಯಂತಾ ಅಂದೆ ಕೇಳ್ದ.

ಇಲಿ ಯಂತದೂ ಇಲ್ಲ. ” ವಂದೆ ಸರಿ ಅಕ್ಕಿ ತಂದ ಕೊಡು ಹೇಳ್ದ. ಅಗಸಿ ಪಾತ್ರದ ಕೊಪ್ಪರಕಿಯೆತ್ತೂ  ವಲಿವೇನೆ ಯೆದ್ದು ಯೆತ್ತಿ ಸರಕ್ಕಿ ಹಾಯ್ಕಂಡಿ, ಇದಕ್ಕೂ ದರಕ್ಸಿ (ದ್ರಾಕ್ಷಿ) ಆಗ್ಲಿ ಹೇಳೀ ವಂದ ಹಳ್ಳ ಹೊಡ್ಡ. ಅಚಕನ್ನೆದೇವ ಕನ್ನೆ ಕೊಟ್ಟಿದ್ದು.

ದರಕ್ಸಿಯಾಯ್ತು. ಬಂದಂತಾ ಜನಗಳಿಗ್ಯೆಲ್ಲಾ ಬಡ್ಸರು; ಕಡಿಗೆ ಊಟದ ಕೂಡ್ಲೆ ಯೆಂತಾಂದ ತಮ್ಮ? ನಂದೊಂದುಕ ಅದೆ. ಅದು ಅದ ಕೊಡ್ಲೆ ಯೆಲ್ಲರೂ ನಿಮ್ ನಿಮ್ ಮನಿಗೆ ಹಿಗೂಕಡ್ಡಿಲ್ಲ ಹೇಳ್ದ. ತಂದಿ ಬಲಕೆ ಕುಳ್ಸೆಕಂಡಿ ಅಣ್ಣನ ನೆಡಮದ್ದಿಲ್ಲ ಕುಳ್ಸ ನಡೆದ್ದು ಎಲ್ಲ ಹೇಳ್ದ.

“ನಾನು ಅಣ್ಣನ ಸಂತಿಗೆ ಹೋತೆ ಹೇಳಿ ತೀಡ್ ಸಾಲಿಗೆ ಹೋದ. ಸಾಲಿಗೋಗಿ ಅಲ್ಲಿ ಯಂತಾ ಅಕ್ಸರನೂ ಬರಿಲಿಲ್ಲ. ರತ್ನದ ಜಲ್ಲಿ. ಮುತ್ನಕಟ್ಟಿ, ಚಿನ್ನದ ಗಿಡ ಅಂದಿ ಬರ‍್ಗೆ ಬರುವರಿಗೆ ಮಾಸ್ತರರು ನನಗ್ಗೆ ಹೊಡೆದರು; ಹೊಡೂವರಿಗೆ ನಾನು (ಹಿಂದಿನ ಎಲ್ಲಾ ನಡೆದ ಕತೆ ಹೇಳಿದ)

ಯೆಲ್ಲ ಗಳದ ಹೋಗಿಇಂತಾ ವಸ್ತ ತಂದೆ. ಅಣ್ಣ ನನ್ಗೆ ಹೊಡ್ದನೆ. ಯೇನ್ ಅಣ್ಣನ ಜೀವಾನ ತೆಗೀಬೇಕು ಹೇಳ್ದ ತಮ್ಮ ತಾಯಿ ತಂದೆ”ಬೇಡ” ಹೇಳಿದ್ರು ತಾಯಿ ಅಣ್ಣನ ಮಗಳ ಅಣ್ಣನ ಮಗಳ ಅಣ್ಣನ ಲಗ್ನ ಮಾಡ್ಸಕಂಡೆ ಬಂದ್ರು. ಮೊದುಲೆ ಅವನಿಗೇ ಕೇಳದ್ದು.

ತಮ್ಮಾ ಯಂತಾ ಹೇಳ್ದ? ಆಚೆ ಕನ್ನಿ ದೇವಕನ್ನಿರ ನೆನದ ; ಐದ್ ಜನ್ರೂ ಬಂದ್ರು. “ಯೇನ ಬೇಕಾರ ಕಿರಿತಂಗಿ, ಕಿರಿಕನ್ನಿಯ ಕೊಡಬೇಕು. ಹೇಳ್ದ ಅವ್ರು ನಾಕ್ ಜನ್ರು” ಬೆಟ್ಟಕೆ ಕಳ್ಸೂಕಾಗ, ನೀರಿಗೆ ಕಳ್ಸೂಕಾಗ, ಹಾಲು, ತುಪ್ಪ, ಹಣ್ಣು, ಕೊಟ್ಟಿ ಸಲಗಬೇಕು. ಕೆಲಸಕ್ ಕಳ್ಸೂಕಾಗ, ನಾವು ಹೋತ್ರು ಹೇಳಿದ್ರು. ಕಡಿಗವ್ರು ಅಕ್ಕಂದಿರು ಹೋದ್ರು. ಇದು ಇಲ್ಲೇ ಉಳೀತು. ಚೆಂದದಲ್ ಉಳಿದರು.

ಹೇಳಿದವರು

ಕಸಾಂತಿ ತಂದೆ ಕಟ್ಟಿ ಪಟಗಾರ ಮರ್ಜಾನ ತಕ್ಕೊಂಡ
ದಿನಾಂಕ ೨೭. ೯. ೭೦