ವಂದಲ್ಲ ವಂದೂರಗೆ ವಂದ್ ಹಬ್ಬದ ಡಕಲ, ವಂದ್ ಬೋರಿಗುಡಕಲ, ಅಣ್ಣ ತಮ್ಮಂದಿರಿದ್ರು. ಆವಾಗ ವಂದಜವ್ವಿ ಅವರಗೆ ಅಡಗಿ ಮಾಡ್ಕ ಇತ್ತು. ಕೆಲವೆ ದಿವ್ಸದ ಮೇಲೆ ಅಣ್ಣ ತಮ್ಮ ಇಬ್ಬರೂ ಮದುವಿಯಾದರು. ಆಮೇಲೆ ” ಈ ಅಜ್ಜಿಯನ್ನು ಯಾಕೆ ಸಾಕಬೇಕು ನಾವು? ” ಎಂಬ ಕಾರಣಕ್ಕಾಗಿ ಅಜ್ಜಿಯನ್ನು ಬೇರೆ ಹಾಕಿದರು. ಕೆಲವೇ ರೊಕ್ಕವನ್ನು ಅಜ್ಜಿಗೆ ಕೊಟ್ಟರು. ” ನೀನೊಬ್ಬಳೆ ಉಳಿಯಬೇಕು” ಮತ್ತು ಒಂದು ಯೆತ್ತಿನ ಕರವನ್ನು ಅದಕ್ಕೆ ಕೊಟ್ಟರು.

ಅಜ್ಜಿ ಕೊಟ್ಟ ದುಡ್ಡಿನಿಂದ ಒಂದು ಮೊಮ್ಮಗನನ್ನು ತರಬೇಕಂತ ಹೋದಳು. ಈ ಸುದ್ದಿ ಹಬ್ಬದ ಡಕಲ ಬೋರಿಗುಡಕಲ ಅಣ್ಣ ತಮ್ಮರಿಗೆ ಗೊತ್ತಾಯ್ತು. ಅವರೆನೂ ಮಾಡಿದರು. ಅಂದರೆ ಬೆಟ್ಟದಿಂದ ಒಂದು ಕೋಡನನ್ನು ಹಿಡಿದು ತಂದರು ಕೋಡನಿಗೆ ಚೀಲದಲ್ಲಿ ಹಾಕಿ ಕಟ್ಟಿಟ್ಟು ಬಿಟ್ಟರು. ಇದೋ ನೋಡಿ “ಬೇರೆ ವೇಷವನ್ನು ಧಾರಣ ಮಾಡಿಕೊಂಡು ಅಜ್ಜಿ,, ಎಲ್ಲಿಗೆ ಹೋರಟೆ?” ಎಂದು ಕೇಳಿದರು. ಅಜ್ಜಿ ಹೇಳಿದಳು. ” ನನಗೊಂದು ಮೊಮ್ಮಗ ಬೇಕು ಅದಕ್ಕಾಗಿ ಹೋರಟಿದ್ದೇನೆ.”

“ಇಲ್ಲಿ ನಿನಗೆ ಬೇಕಾದಂತ ಮೊಮ್ಮಗನನ್ನು ಚೀಲದೊಳಗಿಟ್ಟಿದ್ದೇವೆ ಬಿಚ್ಚಿ ನೋಡುವ ಹಾಂಗಿಲ್ಲ ತೀಡಲು ಸುರುಮಾಡುವ ಮನೆಗೆ ಕರೆದುಕೋಮಡು ಹೋಗಿ ಊಟಕ್ಕೆ ಸಿದ್ದ ಮಾಡಿ ಆಮೇಲೆ ಚೀಲವನ್ನು ಬಿಡ್ಸು.” ಅದು ಅವರಿಗೆ ದುಡ್ಡು ಕೊಟ್ಟೆ ಚೀಲವನ್ನು ಮನೆಗೆ ತಂದಳು ಅಡಿಗೆ ಮಾಡಿ ಬಿಚ್ಚಿದ ಕೋಡ ಹಾರಿ ಮರದ ಮೇಲೆ ಹತ್ತಿ ಕುತಿತು. ಆಮೇಲೆ ಅಜ್ಜಿ ಬಹಳ ದುಃಖ ಮಾಡಿದಳು ನೀನು ಹೇದರಬೇಡ ನಾನಿದ್ದೇನೆ ಅಂತ ಕೋಡ ಅಜ್ಜಿಗೆ ಹೇಳಿತು.

ಆ ಮಾತನ್ನು ಕೇಳಿದ ಅಜ್ಜಿ ತೀಡುತ್ತ ತನ್ನ ಗುಡಿಸಲು ಒಳಗೆ ಮಲಗಿಕೊಂಡಳು.

ಅಜ್ಜಿ ಪಾಲಿಗೆ ಒಂದು ಆಕಳ ಕರುವನ್ನು ಅಜ್ಜಿಗೆ ಕೊಟ್ಟದ್ದರು. ಆಕಸ್ಮಾತ್ತಾಗಿ ರೋಗ ಬಂದು ಸತ್ತು ಹೋಯಿತು. ಅಜ್ಜಿ ಕೊಟ್ಟಗೆಯಿಂದ ತೆಗೆದು ಹಾಕಲಿಕ್ಕೆ ಮಂಗಣ್ಣನನ್ನು ಕರೆದಳು. ” ಕೋಡ ಮೊಮ್ಮಗನೆ  ಕೆಳಗೆ ಬಾ” ಅಂದಿತು. ಕೋಡ ಕೆಳಗೆ ಬಂದಿತು. ಬಂದ ಕೂಡಲೆ ಅಜ್ಜಿ ಹೇಳಿತು. ” ಕೋಡಣ್ಣಾ ಆಕಳ ಕರುವನ್ನು ಕೊಟ್ಟಿಯಿಂದ ಒಡೆದು ಗುಡ್ಡದ ಮೇಲೆ ಹಾಕು.”

ಆಗ ರಾತ್ರಿಯಾಗಿತ್ತು. ಕೋಡ ಸೊಂಟಿಗೆ ಬಲ್ಳಿ ಕಟ್ಟಿಕೊಂಡು “ಈ ಹೋ ಯಾ, ಈ ಹೋಯಾ ” ಎಂದು ಸದ್ದು ಮಾಡುತ್ತ ಎಳೆದುಕೊಂಡು ಹೋದ ಕೋಡ.

ಆ ಕಾಲದಲ್ಲಿ ಕಳ್ಳರು ಕಳ್ಳತನವನ್ನು ಮಾಡಿ ಈ ಕೋಡನ ಹೋಗುವ ದಾರಿಯಲ್ಲಯೆ ದುಡ್ಡ ಲೆಕ್ಕ ಮಾಡುತ್ತಿದ್ದರು. ಆ ಕಳ್ಳರಿಗೆ ಕೋಡ ಹೇಳಿದ ಮಾತು ಯಾರವರು? ಹೇಳಿದ ಹಾಗೆ ಯಾರೋರೋ? ಹೇಳಿದ ಹಾಗೆ ಕೇಳಿತು. ಕದ್ದು ತಂದ ದುಡ್ಡನ್ನು ಲೆಕ್ಕ ಮಾಡುತ್ತಿದ್ದ ಕಳ್ಳರು ದುಡ್ಡನ್ನು ಬಿಟ್ಟು ಹೋದರು. ಕೋಡ ರೊಕ್ಕವನ್ನು ತನ್ನ ಸಾಮರ್ಥ್ಯದಿಂದ ಮನೆಗೆ ತಂದಿತು. ಕಂಕಳದಲ್ಲಿಟ್ಟು, ಬಾಯಿಲ್ಲಿಟ್ಟುಕೊಂಡು ಕಿವಿಯಲ್ಲಿ ಹಾಕಿಕೊಂಡು ಅಜ್ಜವ್ವನ ಗುಡಿಸಲಿಗೆ ತಂದಿತು.

“ಅಜ್ಜವ್ವ ಅಜ್ಜವ್ವ” ಎಂದು ಕೂಗಿದ ಕೋಡಣ್ಣ ಅಜ್ಜವ್ವ ಎದ್ದು ನೋಡುತ್ತಾಳೆ. ರೊಕ್ಕವೆಲ್ಲ ಜಗಲಿಯ ಮೇಲೆ ಕಮಡ ಅಜ್ಜವ್ವ ” ಮಗನೇ ಇದೆಲ್ಲಿದು?” ಯೆಲ್ಲಿದೂ ಇರಲಿ ಈಗದರ ಅಳತೆ ಮಾಡು.

ಆ ಕಾಲದಲ್ಲಿ ಕೊಳಗದಿಂದ ಅಳೆಯುವ ರೂಢಿ ಅಜ್ಜಿಯ ಹತ್ತಿರ ಕೊಳಗವಿಲ್ಲ, ಪಕ್ಕದ ಮನೆಯಲ್ಲಿದ್ದ ಹಬ್ಬದ ಡಕಲ, ಬೋರಿಗ ಡಕಲ ಅವರಿಂದ ಕೊಳಗೆ ತಕ್ಕಂಡು ಬಂತು. ಅಳತೆ ಮಾಡಿದ ಯೆರಡು ಕೊಳಗ ರೊಕ್ಕವಾಯಿತು. ಕೊಳಗಕ್ಕೆ ಗಂಟು ಹಾಕಿ ಕೊಟ್ಟದ್ದರು. ಕೊಳಗವ ಅಜ್ಜಯೆ ಅಳದಿ ಕೊಳಗ ತಕ್ಕಹೋಗಿ ಹಬ್ಬದಡಕಲಿಗೆ ಬೋರಿಗಡಕಲಿಗೆ ಮುಟ್ಸಿ ಹಾಕಿ ಬಂತು. ಆಮೇಲೆ ಅಜ್ಜಯನ್ನು ಕೇಳಿದ ಹಬ್ಬದಡಕಲು ” ನಿನ್ನ ಕೊಡ ಮೊಮ್ಮಗ ಇದನ್ನು ಯೆಲ್ಲಿಂದ ತಂದ್ಯಾ?” ಅಜ್ಜಿ ಹೇಳಿತು. ” ಅವನನ್ನೆ ಕೇಳಿದರೆ ಗೊತ್ತಾಗುತ್ತದೆ ನನಗೆ ಗೋತ್ತಿಲ್ಲ” ಎಂದು ಹೇಳಿತು.

ಉಳಿದ ದುಡ್ಡನ್ನು ಅಜ್ಜಿಗೆ ತೆಲೆದಿಂಬನ ವಳಗೆ ಹಾಕಿ ಕೋಡಣ್ಣ ಮರ ಹತ್ತಿದ್ದ ಅವರು ಕೋಡಣ್ಮನ್ನು ಕೇಳುಕೆ ಹೊರಟರು ಕೋಡಣ್ಣ ಹೇಳಿದ ” ಏನು ಹೇಳಲಿ ಮಾರಾಯರೆ ನಿಮ್ಮಂತಾ ಆ ಜನಗಳಿದ್ದರೆ ಚೀಲಗಟ್ಲೆ ರೊಕ್ಕ ಸಿಕ್ಕಿತ್ತಿತ್ತು”. ನನ್ನ ಹತ್ತಿರ ಸಣ್ಣ ಕರ ಇತ್ತು ಇಷ್ಟೇ ಹೇಳಿತು. ಆವಾಗ ದುರಾಲೋಚನೆ ಮಾಡಿ ಕೋಡನನ್ನೆ ಕೊಂದಬೇಕು ಅಂತ ಹೊಂಚಿ ಹಾಕುತ್ತಿದ್ದರು.

ಮರುದಿವಸ ಕೋಡನ ಹತ್ತಿರ ಪ್ರೀತಿ ಬೆಳಸಿ ” ನೀನು ಇಷ್ಟೆಲ್ಲಾ ರೊಕ್ಕ ತಂದಿ ಎಲ್ಲಿಟ್ಟಿದ್ದೆ ?” ಕೇಳಿದರು. ” ನಮ್ಮಜ್ಜಿಯ ಮನೆಯೊಳಗುಂಟು” ಅಂದ ಕೊಡನ್ನ ಅಜ್ಜಿ ಮನೆಗೆ ಉರಿ ಹಚ್ಚಿದರು. ಕೋಡ ಮರದಿಂದ  ಕೆಳಗಿಳಿದು ಅಜ್ಜಿಯನ್ನೂ ದುಡ್ಡಿನ ತಲೆದಿಂಬನ್ನು ತಪ್ಪಿಸಿದ.

ಮರುದಿವಸ ಕೋಡ ಮನೆಯ ಬೂದಿಯೆಲ್ಲವನ್ನೂ ಚೀಲದಲ್ಲಿ ತುಂಬಿದ ಅಜ್ಜಿಯ ಪಾಲಿಗೆ ಒಂದು ಎತ್ತಿನ ಜೋಡಿಯನ್ನು ಕೊಟ್ಟದ್ದರು. (ಚಕ್ಕಡಿ ಗಾಡಿಯನ್ನೂ ಕೊಟ್ಟಿದ್ದ ಸಂಗತಿಯನ್ನು ನಿರೂಪಕ ಹೇಳಿರಲಿಲ್ಲ) ಗಾಡಿಯ ಮೇಲೆ ಬೂದಿಯ ಚೀಲವನ್ನು ತುಂಬಿಕೊಂಡು ಕೋಡನ ಗಾಡಿ ಎದುರಿಗೆ ಬಂತು. ದುಡ್ಡಿನ ಚೀಲ ಇದ್ದ ಗಾಡಿ ಚಾಲಕ ” ಎನೋ ಕೋಡಣ್ಣ?” ಗಾಡೀ ಹೋಡೀತೀಯಲ್ಲ ಆದರೆ ನನ್ನ ಗಾಡಿ,  ನಿನ್ನ ಗಾಡಿ ಎಂತ ಗಾಡೀ” ಕೇಳಿದ ನನ್ನನ್ನು ವಿಚಾರಿಸುವ ನೀನು ನನ್ನ ಗಾಡೀಗೇನಾದರೂ ದಕ್ಕೆ ಬಂದರೆ ಬಿಟ್ಟು ಹೋಗಲಿಕಿಲ್ಲ ನಿನ್ನನ್ನು ಅಂದ.

ರೊಕ್ಕದ ಗಾಡಿಯವ “ನಿನ್ನ ಗಾಡಿ ದಕ್ಕೆಯಾದರೆ ನನ್ನ ಗಾಡಿಯನ್ನೇ ನಿನಗೆ ಕೊಟ್ಟು ಬಿಡುತ್ತೇನೆ.” ಆಮೇಲೆ ಕೋಡಣ್ಣ ತನ್ನ ಗಾಡಿಯನ್ನೇ ನಿನಗೆ ಕೊಟ್ಟು ಬಿಡುತ್ತೇನೆ.” ಆಮೇಲೆ ಕೋಡಣ್ಣ ತನ್ನ ಗಾಡಿಯನ್ನು ರೊಕ್ಕದ ಗಾಡಿಗೆ ಢಿಕ್ಕಿ ಮಾಡಿ ರೊಕ್ಕದ ಗಾಡಿ ಮೇಲೆ ಕೂತುಬಿಟ್ಟ. ಆಡಿದ ಮಾತಿನಂತೇ ಗಾಡಿ ಬಿಟ್ಟು ಮನೆಗೆ ಹೋದ (ರೊಕ್ಕದ ಗಾಡಿಯುವ) ಕೋಡಣ್ಣ ಬೂದಿ ಚೀಲ ವಗದ ಹಾಕಿದ. ದುಡ್ಡಿನ ಚೀಲ ತನ್ನ ಗಾಡಿ ಮೇಲೆ ಹಾಕಿಕೊಂಡು ಅಜ್ಜಿ ಮನೆಗೆ ತಂದ. ಇವನ ಬೂದಿ ಗಾಡಿ ಅವ ತಕಂಡ ಹೋದ. ಬರೀ ಗಾಡಿ ತಕಂಡು ಹೋದ.

ಮನೆಗೆ ಬಂದು ಅಜ್ಜಿಯನ್ನು ಎಬ್ಬಿಸಿದ. ಕೋಳೊ ಕೂಗು ಸಮಯವಾಗಿತ್ತು. ಆಗ “ಅಜ್ಜವ್ವಾ, ಅಜ್ಜವ್ವಾ” ಅಂತ ಕೂಗಿದ ಕೋಡ. ಕೋಳಿ ಕೂಗುವ ಸಮಯವಾಗಿತ್ತು. ಆಗ ಕೋಲಿ ಮಾತ್ರ ಕೂಗಿದೆ ಯಾಕೆ ಕರೆದೆ ಅಂತ ಅಜ್ಜವ್ವಾ ಕೇಳಿದಳು.

ಅಜ್ಜವ್ವನ ಸಮೀಪಕ್ಕೆ ಬಂದು ಕೋಡ ಮೊಮ್ಮಗ ಹೇಳಿದ ಹಬ್ಬದಡಕಲನ ಮನೆಗೆ ಹೋಗಿ ಕೊಳಗವನ್ನು ತಕ್ಕೊಂಡು ಬರಬೇಕು. ಅಜ್ಜಿ ಹಬ್ಬದಡಕನಲ ಮನೆಗೆ ಹೋಗಿ ” ಕೊಳಗ ಕೊಡು” ಅಂದಿತು ಯಾಕೆ ನಿನ್ನ ಮೊಮ್ಮಗನಿಗೆ ಈಗ ಕೊಳಗ? ” ಯಾಕೆ ಅಂತ ಅವನನ್ನೇ ಕೇಳಿ, ಕೇಳಿ ನೀವು ನನ್ನನ್ನು ಕೇಳಬೇಡಿ” ಅಂತ ಅಜ್ಜಿಯು ಹೇಳಿದಳು. ಕೊಳಗ ಕೊಡಬೇಕಾದರೆ ಯೆರಡ ಕೊಳಗ ದುಡ್ಡ, ಹಬ್ಬದಡಕಲಗೆ ಮತ್ತು ಬೋರಿಗುಡಕಲಗೆ ವಂದು ಕೊಳಗ ದುಡ್ಡನ್ನು ಕೊಟ್ಟ.

ಅವರು ಕೋಡಣ್ಣನನ್ನು ” ಇದೆಲ್ಲಿ ದುಡ್ಡು?” ಹೇಳಿ ಕೇಳಿದರು. ಕೋಡಣ್ಣ ಯೇನ ಹೇಳ್ತಾ ಅಂದರೆ “ನಮ್ಮ ಮನೆ ಸನ್ಣ ಮನೆಯಾಗಿತ್ತು. ನಿಮ್ಮ ಮನೆಯ ಹಾಗೆ ದೊಡ್ಡ ಮನೆಯಾದರೆ ಬಹಳ ರೊಕ್ಕ ತರಬಹುದಾಗಿತ್ತು. ನನ್ನ ಅಜ್ಜಿ ಮನೆ ಉರಿ ಬಿದ್ದು ಬೂದಿಯಾಗಿತ್ತು. ಪೇಟೆಗೆ ಹೋದರೆ ಬೂದಿ ಚೀಲದಷ್ಟೇ ದುಟ್ಟು ನನಗೆ ಕೊಟ್ಟರು”. ಅಂತಾ ಕೋಡ ಹೇಳಿದ ಅದನ್ನು ತಿಳಿದ ಹಬ್ಬದಡಕಲ, ಬೋರಿಗುಡಕಲ ತಮ್ಮ ಮನೆಗೆ ಬೆಂಕಿ ಹಚ್ಚಿಕೊಂಡರು. ಆವಾಗ ಬೂದಿ ತುಂಗಿ ತುಂಬಿಕೊಂಡು ಪೇಟೆಗೆ ಹೋದರು.

ಎಲ್ಲಾ ಕಡೆಗೂ ಎಲ್ಲಿ ಹೋದರೂ “ಬೂದಿಗಾಡಿ ಇಲ್ಯಾಕೆ ಬಂತು? ಅಂಗಡಿಯಲ್ಲಿ ಬೂದಿ ಬೀಳ್ತದೆ ನಿಮ್ಮ ಗಾಡಿ ಹೋರಗೆ ಹೋಗಲಿ” ಎಂತ ಹೊಡೆಯಲಿಕ್ಕೆ ಪ್ರಾರಂಭ ಮಾಡಿದರು. ಬೂದಿ ಅಲ್ಲೇ ಚಿಲ್ಲೆ ಮನೆಗೆ ಬಂದ ಇಬ್ಬರೂ ಮಲಗಿಕೊಂಡು ದುರಾಲೋಚನೆ ಮಾಡಿದರು.

“ಹಳ್ಳಕ್ಕೆ ಹೋಗಿ ಮೀಸಾಡುವಾ” ಅಂತ “ಕೋಡಣ್ಣಾ ಅಂತ ಕೋಡಣ್ಣನಿದ್ದಲ್ಲಿಗೆ ಬಂದರು. ಮರದ ಮೇಲಿದ್ದ ಕೋಡ ಕೆಳಗೆ ಬಂತು. ಇಲ್ಲೇ ಸಮೀಪದಲ್ಲೇ ನೀರಿನ ಹಳ್ಳವಿದೆ. ನೀರಿನಲ್ಲಿ ಸ್ವಲ್ಪ ಮೀಸಾಡುವಾ” ಅಂತ ಕೋಡನಿಗೆ ಹೇಳಿದರು.

ಆವಾಗ ಕೋಡ ಕೆಳಿತು ” ಯೆಷ್ಟು ದೂರ ಹಳ್ಳ ಕೇಳೀತು.?” ಒಂದು ಮೈಲು ದೂರ ಇದೆ. “ಹಾಗಾದರೆ ನಾನು ನಡೆಯಲು ಸಾಧ್ಯವಿಲ್ಲ.” ಚೀಲದೊಳಗೆ ಹೊಕ್ಕು, ನಿನ್ನನ್ನು ಹೊತ್ತುಕೊಂಡು ಹೋಗಿ ಹಳ್ಳದಲ್ಲಿ ಇಳಿಸುತ್ತೇವೆ” ಅಂತ ಚೀಲದಲ್ಲಿ ಹಾಕಿ ಕೊಂಡು ಬಾಯಿಕಟ್ಟಿದ ಚೀಲ (ಹೊತ್ತುಕೊಂಡು ಹೋದರು) ಇಲ್ಲಿಗೆ ಬಂದೆ ಅಂತ ಕೋಡಗೆ ಗೊತ್ತಾಲಿಲ್ಲ. “ಚೀಲದಲ್ಲಿ ಕಟ್ಟಿಟ್ಟ ಕೋಡ ಇಲ್ಲೇ ಸಾಯಲಿ” ಎಂದು ಆಲೋಚಿಸುತ್ತ ಮನೆಗೆ ಬಂದರು (ಇಬ್ಬರೂ ಚೀಲ ಅಲ್ಲಿಟ್ಟು ಸಂಡಾಸಿಗೆ ಹೋಗಿದ್ದರು ಎಂದು ಆ ಮೇಲೆ ನರರೂಪಕ ತಿಳಿಸಿದ.)

ಚೀಲವನ್ನು ದನಕಾಯುವ ಒಂದು ಹುಡುಗ ನೋಡಿದಾ “ಇದ್ಯೇನಿದು?” ಅಂತ ತನ್ನ ಕಾಲಿನಿಂದ ಒದ್ದು ಯಾರಪ್ಪ ನೀನು? ಚೀಲದೊಳಗೆ ಹೊಕ್ಕಿದ್ದೆ? ಅಂತ ದನ ಕಾಯುವವ ಕೇಳಿದ ಆವಾಗ ಕೋಡಣ್ಣ ಹೇಳಿದ ನಾನು ಲಗವವಾಗುವುದಿಲ್ಲ ಅಂತ ಹೇಳಿದೆ ನಾನು ಆದರೂ ನ್ನ ತಂದೆ ತಾಯಿ ಚೀಲದೊಳಗೆ ಹಾಕಿ ತಂದರು. ದನಕಯುವ ಹುಡುಗನಿಗೆ ನಾನು ಮದುವೆ ಆಗುತ್ತಿದ್ದೆ. ಅಂತ ದನ ಕಯುವವ ಚೀಲದಿಂದ ಕೋಡವನ್ನು ಬಿಡಿಸಿದ ಚೀಲದೊಳಗೆ ದನಕಾಯುವವನನ್ನು ಕೂಡ್ರಿಸಿ ಕೋಡಣ್ಣ ಚೀಲ ಬಾಯಿ ಕಟ್ಟಿ ಮರದ ಮೇಲೆ ಹೋಗಿ ಕೂತ (ಸಂಡಾಸಿಗೆ) ಹೋದವರು ಬಂದರು ಚೀಲ ಹೊತ್ತುಕೊಂಡು ಹೋಗಿ ಹೊಳೆಯಲ್ಲಿ ಒಗೆದು ಮನೆಗೆ ಬಂದರು.

ಹಬ್ಬದಡಕಲ ಬೋರಿಗುಡಕಲ ಮನೆಗೆ ಬಂದು ಮುಟ್ಟಿದರು. “ರಾತ್ರಿ ಕಾಲದಲ್ಲಿ ಅಜ್ಜಿ ವಿನೇ ಕೊಂದು ಬಿಟ್ಟರೆ ಕೋಡಣ್ಣ ಗಳಿಸಿಟ್ಟ ದುಡ್ಡು ನಮಗೆ ಸಿಕ್ಕುತ್ತದೆ” ಅಂತ ತಿಳಿದು ಮನಿಗೆ ಬಂದು ಮುಟ್ಟುತ್ತಾರೆ ಅಂಬುರೊಳಗೆ ಸಮೀಪಕ್ಕೆ ಬರುತ್ತಿರುವಾಗ ಕೋಡಣ್ಣ ದನಕಾಯುವವನ ದನಗಳ ಗೋಲೆ ತಕಂಬಂದ. ಸ್ವಲ್ಪ ತಡೆದ ಮೇಲೆ ಅಜ್ಜಿ ಕೊಲ್ಲುದಕ್ಕೆ. ತಯಾರಿ ಮಾಡುವದರೊಳಗೆ ಕೋಡಣ್ಣ ಬಂದು ಬಿಟ್ಟ. ಕೋಡಣ್ಣನ ಹತ್ತಿರ”ಇದೆಲ್ಲಿ ದನ?” ಹೇಳಿ ಕೇಳಿದರು.

ಆವಾಗ ನಾನು ಹೊಳೆಯಲ್ಲಿ ಮುಳುಗಿ ಇಟ್ಟಿದಿರಲ್ಲಾ? ರಾಶಿ ಅದೆ ದನ ನಾನು ಹರಾಮಿ ದನಯೆಲ್ಲ ಬಿಟ್ಟುಕೊಟ್ಟು ಕೈಲಾಗದ ದನ ಬಡೆದನ ತಂದೆ. ನಿಮ್ಮ ಹಾಗೆ ಯೆರಡೂ ಮಂದಿಯಾಗಿದ್ದರೆ ಬಹಳ ದನ ತರುತ್ತದ್ದೆ. ಯೇನು ಮಾಡಲಿ ಉಪಾಯವಿಲ್ಲ ಅಂದ.

ಆವಾಗ ಇವರು ಮತ್ತೆ ದುರಾಲೋಚನೆ ಮಾಡಿದರು. “ಇವನ ತೆಗಿಬೇಕಾಯ್ತಲ್ಲ? ತೆಗಿದಿದ್ದರೆ ಅಜ್ಜಿ ಕೊಲ್ಲುಕೆ ಯೆಲ್ಲಿ ಕೊಡ್ತ ಇವೆ.?”

ಮಾರನೆ ದಿವಸ “ಹಳ್ಳದ ವರೆಗೆ ನಮ್ಮಿಬ್ಬರನ್ನು ವಂದೇ ಚೀಲದಲ್ಲಿ ಹಾಕಿ, ಕೋಡಣ್ಣ ಹಳ್ಳಕೆ ತಕಹೋಗಿ ಹಾಕು” ಅಂದರು. ನಾನು ಹೊಲಾರೆ ನೀವು ಹಳ್ಳದ ವರೆಗೆ ಹೋಗಿ ಚೀಲದಲ್ಲಿ ಹಾಕಿ, ಆವಾಗ ನಾನು ಇಬ್ಬರನ್ನೂ ಹಳ್ಳಕ್ಕೆ ಹಾಕಿದರು ಅವರು ಮುಳುಗಿ ಸತ್ತು ಹೋದರು.

ಅಜ್ಜವ್ವಿಉ ಮನೆಗೆ ಬಂದ ಕುಡಲೆ ಅವರಿಬ್ಬರ ಹೆಂಡಿರು ಕೋಡಣ್ಣನನ್ನು ಕೆಳಿದರು. :ನಮ್ಮ ಯಜಮಾನರು ನಿನ್ನ ಸಂಗಡ ಹೋಗಿದ್ದರಲ್ಲಿ ಅವರೆಲ್ಲಿ ಹೋದರು.?” ಕೇಳಿದರು, ಕೋಡಣ್ಣ ಹೆಳಿದ ಅವರು “ಅವರು ಇವತ್ತೇ, ನಾಲೇ ಬಂದಾರೆಂತ ತಿಳಿದುಕೊಳ್ಳಬೇಡಿ ಬಹಳ ದಿವಸವಾಗಬೇಕು ದನಗಳನ್ನು ಬಹಳವಾಗಿ ತರುತ್ತಾರೆ” ಹೇಳಿ ಸಮಾದಾನ ಮಾಡಿದ.

ಆಮೇಲೆ ಅಜ್ಜಿ, ಕೋಡಣ್ಣ ಸುಖ ಸಂತೋಷದಿಂದ ಇದ್ದರು.

ಹೇಳಿದವರು

ಶ್ರೀ ಧಾಕು ಮಾರು ಪಟಗಾರ ಮಸಳೆನಲು ಅಫನಾಶಿನಿ .. ವರ್ಷ ೭೫ ಓದುಬರಹ ಕಲಿಯಲಿಲ್ಲ.
ಕಥೆ ತಕ್ಕೊಂಡ ದಿ. ೨೫. ೯.  ೯೯