ಎಂತಾಥ ಗುರುನಾಥನೊ ನಮ್ಮ ಗುರು
ಬಹಳಂತಾ ಕರುಣುಳ್ಳಾತನೋ ಕಾಂತೆ ನೀ ಬಾರೆಂದು
ಏಕಾಂತ ಕರೆದೊಯ್ದು ಎಂಥಾಮಾತೇಳೋದನೋ
ಆರುಗುಣವ ಅಳಿಯನೆಂದನೊ ನಮ್ಮಗುರು ಮೂರು
ಗುಣವ ತಿಳಿಯೊಂದನೊ ಅಷ್ಟವೇದಗಳಿಂದ
ಕುಟ್ಟುಟ್ಟಿ ದೊಳ್ಳಾಡಿ ಗಾಳಿಗೆ ತೂರೆಂದನೋ
ಶರಣವ ಮಾಡೆಂದನೊ ಎನ್ನ ಶಿರದಲಿಕರವಿಟ್ಟು
ಕರಣ ಮೂರಲ್ ಕೂಡಿ ಕಳಸವ ತುಂಬಿಟ್ಟು
ಶರಣರಿಗೆ ಬೆಳಗೆಂದನೊ
ಸಾಧುವರ ನೆನೆಯೆಂದನೊ ಅವರ ಪಾದಕ್ಕೆ ಎರೆಗೆಂದನೊ
ಸಾಧು ಸತ್ಪುರುಷರ ಭೋದವ ತಿಳಿದರೆ ಭಾದೆ
ನಿಮಗಿಲ್ಲೆಂದನೊ ಆಸೆಯ ಬಿಡೆಂದನೊ
ನಿರಾಶೆಯೊಳ ಕೊಡೆಂದನೊ ಆಶಾಪಾಶಗಳೆಲ್ಲಾ
ನಾಶಮಾಡುವಂಥ ಈಶನ ನೆನೆಯೆಂದನೊ
ಆರ‍್ಗುಣವ ಅಳಿಯೆಂದನೊ ಇವು ಮೂರ‍್ಗುಣುವ
ಬಿಡೆಂದನೊ ಆರು ಮೂರು ಇವುಕಳಸವ ತುಂಬಿಟ್ಟು
ಶರಣರಿಗೆ ಬೆಳಗೆಂದನೊ ಸಂಶಯ ಬಿಡೆಂದನೊ
ನಿಸ್ಸಂಶಯದೊಳ್ ಕೂಡೆಂದನೊ
ಸಂಶಯ ಸಂಕಲ್ಪಗಳೆಲ್ಲ ಧ್ವಂಸವ ಮಾಡುವಂತ
ಶಿವಶರಣರಿವರೆಂದನೊ ||

ಪರಿ ಪರಿ ಬೋದವನು ಕರುಣದೊಳ್
ಭೋದಿಸಿ ಪೇಳಿದನು
ಅಂತಾರೆ ಗುರುಮಂತ್ರ ಮರೆತಾರೆ ಜನ್ಮ ಮರಣ
ವ್ಯರ್ಥವೇ ನೋಡೆಂದನೊ ಬೈಲಿಗೆ ಬೈಲೆಂದನೊ
ನಿರ್ಬೈಲೊಳ್ ಕಾದೆಂದನೊ ಬೈಲೊಳ್ ನೀರಲ್‌ಕೇರಿ
ಮೇಲಯ್ಯ ಗುರುಪಾದ ಆಲನೀರಲ್ಕೆರಿಯೊಳ್
ಆಡೆಂದನೊ || ಎಂತಾಥ ಗುರುನಾಥನೊ ||