ಸಾಕ್ಷರತಾ ಪ್ರಮಾಣವನ್ನು ಇಡಿಯಾಗಿ ನೋಡದೆ ಪ್ರದೇಶ ಮತ್ತು ವಿಭಾಗವಾರು ಬಿಡಿ ಬಿಡಿಯಾಗಿ ನೋಡಿದಾಗ ಅನೇಕ ಭಿನ್ನತೆಗಳು ಕಾಣಸಿಗುತ್ತವೆ. ಬೆಂಗಳೂರು ವಿಭಾಗದ ಒಟ್ಟು ಸಾಕ್ಷರತಾ ಪ್ರಮಾಣ ಶೇಕಡ ೭೨.೯೧ ರಷ್ಟಿದೆ. ಪುರುಷರ ಸಾಕ್ಷರತೆ ಶೇಕಡ ೮೦.೫೬ ಮತ್ತು ಮಹಿಳೆಯರ ಸಾಕ್ಷರತೆ ಶೇಕಡ ೬೪.೭೮ ರಷ್ಟಿದೆ. ಇದು ಇತರ ಮೂರು ವಿಭಾಗಗಳಿಗಿಂತ ಹೆಚ್ಚಾಗಿದೆ. ಬೆಳಗಾವಿ ಕಂದಾಯ ವಿಭಾಗದ ಒಟ್ಟು ಸಾಕ್ಷರತೆ ಶೇಕಡ ೬೫.೪೦ರಷ್ಟು ಈ ವಿಭಾಗದಲ್ಲಿ ಪುರುಷರ ಸಾಕ್ಷರತೆ ಶೇಕಡ ೭೬.೩೦ ರಷ್ಟು ಮತ್ತು ಮಹಿಳಾ ಸಾಕ್ಷರತೆ ಶೇಕಡ ೫೪.೦೬ ರಷ್ಟಿದೆ. ಗುಲಬರ್ಗಾ ವಿಭಾಗದ ಒಟ್ಟು ಸಾಕ್ಷರತೆ ಶೇಕಡ ೫೪.೪೦ ರಷ್ಟಿದೆ. ಇಲ್ಲಿ ರಾಜ್ಯದ ಒಟ್ಟು ಸರಾಸರಿ ಸಾಕ್ಷರತೆಗಿಂತ ಶೇಕಡ ೧೨.೬೪ ಅಂಶಗಳಷ್ಟು ಅಂತರವನ್ನು ಗುರುತಿಸಬಹುದು. ಗುಲಬರ್ಗಾ ವಿಭಾಗ ಪುರುಷರ ಸಾಕ್ಷರತಾ ಪ್ರಮಾಣ ಶೇಕಡ ೬೬.೫೧ರಷ್ಟು ಮತ್ತು ಮಹಿಳಾ ಸಾಕ್ಷರತಾ ಪ್ರಮಾಣ ೪೧.೯೨ರಷ್ಟಿದೆ. ಇಲ್ಲಿ ರಾಜ್ಯದ ಒಟ್ಟು ಪುರುಷರ ಮತ್ತು ಮಹಿಳೆಯರ ಸಾಕ್ಷರತೆಗಿಂತ ಗುಲಬರ್ಗಾ ವಿಭಾಗ ಪುರುಷರ ಮತ್ತು ಮಹಿಳೆಯರ ಸಾಕ್ಷರತೆಯಲ್ಲಿ ಕ್ರಮವಾಗಿ ಶೇಕಡ ೯.೭೫ ಅಂಶಗಳಷ್ಟು ಮತ್ತು ೧೫.೫೩ ಅಂಶಗಳಷ್ಟು ಅಂತರವಿದೆ. ಮೈಸೂರು ವಿಭಾಗವು ಸಾಕ್ಷರತೆಯ ದೃಷ್ಟಿಯಿಂದ ಎರಡನೆಯ ಸ್ಥಾನ ಪಡೆದಿರುವ ವಿಭಾಗ ಈ ವಿಭಾಗದ ಒಟ್ಟು ಸಾಕ್ಷರತೆ ೬೯.೩೦ರಷ್ಟಿದ್ದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇಕಡ ೭೭.೦೨ರಷ್ಟು ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣ ಶೇಕಡ ೬೧.೬೪ ರಷ್ಟಿದೆ. ಈ ವಿಭಾಗದ ಸಾಕ್ಷರತೆಯು ಎಲ್ಲಾ ದೃಷ್ಟಿಯಿಂದ ರಾಜ್ಯದ ಒಟ್ಟು ಸರಾಸರಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ್ದಾಗಿದೆ. ಉತ್ತರ ಕರ್ನಾಟಕ ಪ್ರದೇಶದ ಒಟ್ಟು ಸಾಕ್ಷರತೆಯು ೬೦.೮೨ ರಷ್ಟಿದೆ. ಇಲ್ಲಿ ರಾಜ್ಯದ ಒಟ್ಟು ಸಾಕ್ಷರತೆ ಶೇಕಡ ೬೭.೦೪ ಮತ್ತು ಉತ್ತರ ಕರ್ನಾಟಕ ಪ್ರದೇಶ ಸಾಕ್ಷರತೆಯ ನಡುವಿನ ಅಂತರ ಶೇಕಡ ೬.೨೨ ಅಂಶಗಳಷ್ಟಿದೆ. ಹಾಗೆಯೇ ಉತ್ತರ ಕರ್ನಾಟಕ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೭೨.೨೪ ಮತ್ತು ರಾಜ್ಯದ ಒಟ್ಟು ಪುರುಷರ ಸಾಕ್ಷರತೆ ಶೇಕಡ ೭೬.೨೬ ರಷ್ಟಾಗಿದೆ. ಇಲ್ಲಿ ಈ ಎರಡರ ನಡುವಿನ ಅಂತರ ಶೇಕಡ ೪.೦೨ ಅಂಶಗಳಷ್ಟಿದೆ. ಉತ್ತರ ಕರ್ನಾಟಕ ಪ್ರದೇಶ ಮಹಿಳೆಯರ ಸಾಕ್ಷರತೆ ಶೇಕಡ ೪೮.೯೯ರಷ್ಟು ಮತ್ತು ರಾಜ್ಯದ ಮಹಿಳೆಯ ಸಾಕ್ಷರತೆ ಶೇಕಡ ೫೭.೪೫ರಷ್ಟು. ಇಲ್ಲಿ ಈ ಎರಡರ ನಡುವಿನ ಅಂತರ ಶೇಕಡ ೮.೪೬ ಅಂಶಗಳಷ್ಟಿದೆ (ನೋಡಿ : ಕೋಷ್ಟಕ ೩.೩)

ದಕ್ಷಿಣ ಕರ್ನಾಟಕ ಪ್ರದೇಶದ ಒಟ್ಟು ಸಾಕ್ಷರತೆಯು ಉತ್ತರ ಕರ್ನಾಟಕ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೧೦.೭೨ ಅಂಶಗಳಷ್ಟು. ಇದು ರಾಜ್ಯ ಒಟ್ಟು ಸಾಕ್ಷರತೆಗಿಂತ ಶೇಕಡ ೪.೪೬ ಅಂಶಗಳಷ್ಟು ಹೆಚ್ಚಾಗಿದೆ. ದಕ್ಷಿಣ ಕರ್ನಾಟಕ ಪ್ರದೇಶದ ಪುರುಷರ ಸಾಕ್ಷರತೆಯು, ಉತ್ತರ ಕರ್ನಾಟಕ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೩.೦೪ ಅಂಶಗಳಷ್ಟು ಮತ್ತು ರಾಜ್ಯದ ಒಟ್ಟು ಪುರುಷರ ಸಾಕ್ಷರತೆಗಿಂತ ಶೇಕಡ ೭.೦೬ ಅಂಶಗಳಷ್ಟು ಕಡಿಮೆ ಇದೆ. ಆದರೆ ದಕ್ಷಿಣ ಕರ್ನಾಟಕ ಪ್ರದೇಶದ ಮಹಿಳಾ ಸಾಕ್ಷರತೆಯು ಉತ್ತರ ಕರ್ನಾಟಕ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧೪.೫೩ ಅಂಶಗಳಷ್ಟು ಮತ್ತು ಕರ್ನಾಟಕ ಒಟ್ಟು ಮಹಿಳೆಯರ ಸಾಕ್ಷರತೆಗಿಂತ ಶೇಕಡ ೬.೦೭ ಅಂಶಗಳಷ್ಟು ಹೆಚ್ಚಾಗಿದೆ. ಮೇಲಿನ ವಿವರಣೆಯಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಒಂದು ಉತ್ತರ ಕರ್ನಾಟಕ ಪ್ರದೇಶವು ಒಟ್ಟು ಸಾಕ್ಷರತೆಯಲ್ಲಿ ದಕ್ಷಿಣ ಕರ್ನಾಟಕ ಪ್ರದೇಶಕ್ಕಿಂತ ಶೇಕಡ ೧೦.೭೨ ಅಂಶಗಳಷ್ಟು ಹಿಂದುಳಿದಿರುವುದು. ಸಾಕ್ಷರತೆಯಲ್ಲಿ ಬೆಳಗಾಂ ಮತ್ತು ಗುಲಬರ್ಗಾ ವಿಭಾಗಗಳು ಬೆಂಗಳೂರು ವಿಭಾಗಕ್ಕಿಂತ ಕ್ರಮವಾಗಿ ಶೇಕಡ ೭.೫೧ ಅಂಶಗಳಷ್ಟು ಮತ್ತು ೧೮.೫೧ ಅಂಶಗಳಷ್ಟು ಹಿಂದುಳಿದಿದೆ. ಹಾಗೆಯೇ ಬೆಳಗಾಂ ಮತ್ತು ಗುಲಬರ್ಗಾ ವಿಭಾಗಗಳು ಮೈಸೂರು ವಿಭಾಗಕ್ಕಿಂತ ಕ್ರಮವಾಗಿ ಶೇಕಡ ೩.೯೦ ಅಂಶಗಳಷ್ಟು ಮತ್ತು ಶೇಕಡ ೧೪.೯೦ ಅಂಶಗಳಷ್ಟು ಕಡಿಮೆಯಿದೆ. ಎರಡು ಉತ್ತರ ಕರ್ನಾಟಕ ಪ್ರದೇಶದಲ್ಲಿ ಬರುವ ಬಿಜಾಪುರ, ಬೀದರ, ಬಳ್ಳಾರಿ, ಬಾಗಲಕೋಟೆ, ಕೊಪ್ಪಳ, ಗುಲಬರ್ಗಾ ಮತ್ತು ರಾಯಚೂರು ಇವುಗಳನ್ನು ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳೆಂದು ಗುರುತಿಸಬಹುದು. ಇದು ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ೧೯೯೯ ಮತ್ತು ಜನಗಣತಿ ವರದಿಗಳಲ್ಲೂ ಸ್ಪಷ್ಟವಾಗಿ ಕಂಡುಬರುತ್ತದೆ. ಇತ್ತೀಚಿನ ಡಿ.ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮಾನತೆ ಅಧ್ಯಯನ ನಡೆಸಿದ (ಎಚ್.ಪಿ.ಸಿ.ಎಫ್.ಆರ್.ಆರ್.ಐ., ೨೦೦೨) ವರದಿಯಲ್ಲಿಯು ಇದು ಕಂಡುಬರುತ್ತದೆ. ಸಾಕ್ಷರತೆಯ ನೆಲೆಯಿಂದ ನೋಡಿದರೆ ಸದರಿ ಏಳು ಜಿಲ್ಲೆಗಳ ಸ್ಥಾನ ಉಳಿದ ಜಿಲ್ಲೆಗಳಿಗಿಂತ ಕೆಳಮಟ್ಟದಲ್ಲಿರುವುದು ಸ್ಪಷ್ಟವಾಗುತ್ತದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ ೨೪.೪೭ ರಷ್ಟು ಪಾಲು ಪಡೆದಿರುವ ಹಿಂದುಳಿದ ಏಳು ಜಿಲ್ಲೆಗಳು ರಾಜ್ಯದ ಅಕ್ಷರಸ್ಥರಲ್ಲಿ ಶೇಕಡ ೧೯.೬೦ ರಷ್ಟು ಪಾಲು ಪಡೆದಿವೆ. ಕರ್ನಾಟಕ ರಾಜ್ಯದ ಸಾಕ್ಷರತಾ ಪ್ರಮಾಣಕ್ಕಿಂತ ಸದರಿ ಏಳು ಜಿಲ್ಲೆಗಳ ಸಾಕ್ಷರತಾ ಪ್ರಮಾಣ ಕೆಳಮಟ್ಟದಲ್ಲಿದೆ. ೨೦೦೧ರ ಜನಗಣತಿ ಪ್ರಕಾರ ಹಿಂದುಳಿದ ಜಿಲ್ಲೆಗಳ ಸಾಕ್ಷರತಾ ಪ್ರಮಾಣವು ರಾಜ್ಯದ ಸರಾಸರಿಗಿಂತ ಶೇಕಡ ೧೧.೭೭ ಅಂಶಗಳಷ್ಟು ಕಡಿಮೆಯಿದ್ದರೆ, ಉಳಿದ ೨೦ ಜಿಲ್ಲೆಗಳ ಸಾಕ್ಷರತಾ ಪ್ರಮಾಣವು ರಾಜ್ಯದ ಸರಾಸರಿಗಿಂತ ಶೇಕಡ ೩.೬೭ರಷ್ಟು ಅಂಶಗಳಷ್ಟು ಅಧಿಕವಾಗಿದೆ (ನೋಡಿ : ರೇಖಾಚಿತ್ರ ಸಂಖ್ಯೆ ೧ ರಿಂದ ೭).

ಕೋಷ್ಟಕ . – ವಿಭಾಗ ಮತ್ತು ಪ್ರದೇಶವಾರು ಸಾಕ್ಷರತೆಯ ಪ್ರಮಾಣ

ಕ್ರ. ಸಂ

ವಿಭಾಗ / ಪ್ರದೇಶ / ರಾಜ್ಯ

ಸಾಕ್ಷರತೆ

ಒಟ್ಟು

ಪುರುಷರು

ಮಹಿಳೆಯರು

೧. ಬೆಂಗಳೂರು ವಿಭಾಗ ೭೨.೯೧ ೮೦.೫೬ ೬೪.೭೮
೨. ಬೆಳಗಾವಿ ವಿಭಾಗ ೬೫.೪೦ ೭೬.೩೦ ೫೪.೦೬
೩. ಗುಲಬರ್ಗಾ ವಿಭಾಗ ೫೪.೪೦ ೬೬.೫೧ ೪೧.೯೨
೪. ಮೈಸೂರು ವಿಭಾಗ ೬೯.೩೦ ೭೭.೦೨ ೬೧.೬೪
೫. ಉತ್ತರ ಕರ್ನಾಟಕ ೬೦.೮೨ ೭೨.೨೪ ೪೮.೯೯
೬. ದಕ್ಷಿಣ ಕರ್ನಾಟಕ ೭೦.೫೦ ೬೯.೨೦ ೬೩.೫೨
೭. ಕರ್ನಾಟಕ ೬೭.೦೪ ೭೬.೨೬ ೫೭.೪೫

ಮೂಲ: ಸೆನ್ಸಸ್ ೨೦೦೧ ಮತ್ತು ಅಭಿವೃದ್ಧಿ ಅಧ್ಯಯನ ೨೦೦೩

.. ಗ್ರಾಮೀಣ ನಗರ ಸಾಕ್ಷರತೆಯಲ್ಲಿ ಅಂತರ

ಸಾಕ್ಷರತೆಯಲ್ಲಿ ಇರಬಹುದಾದ ಅಂತರವನ್ನು ಗ್ರಾಮೀಣ ನಗರ ಪ್ರದೇಶವಾರು ನೋಡಬಹುದಾಗಿದೆ. ಪ್ರಸ್ತುತ ಅಧ್ಯಯನವು ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿರುವುದರಿಂದ ಗ್ರಾಮ ನಗರ ಪ್ರದೇಶದ ವ್ಯತ್ಯಾಸವನ್ನು ಕಂಡುಕೊಳ್ಳುವುದು ಉಪಯುಕ್ತ. ಅಲ್ಲದೆ ಗ್ರಾಮೀಣ ಪ್ರದೇಶದ ಸಾಕ್ಷರತೆಯ ಜೊತೆ ನಗರ ಪ್ರದೇಶದ ಸಾಕ್ಷರತೆಯನ್ನು ತಾಳೆ ನೋಡುವುದು ಕ್ರಮವಲ್ಲ. ಏಕೆಂದರೆ, ನಗರ ಪ್ರದೇಶದಲ್ಲಿ ಇರುವ ಶೈಕ್ಷಣಿಕ ಸೌಲಭ್ಯಗಳು ಮತ್ತು ಸಮಸ್ಯೆಗಳೇ ಬೇರೆ, ಬೇರೆ. ಇವೆರಡನ್ನು ಒಟ್ಟಿಗೆ ನೋಡುವುದರಿಂದ ಅಧ್ಯಯನಕ್ಕೆ ನಿರ್ದಿಷ್ಟ ರೂಪಬರುವುದಿಲ್ಲ. ಹೀಗಾಗಿ ಕರ್ನಾಟಕದ ಗ್ರಾಮೀಣ ಪ್ರದೇಶದ ಸಾಕ್ಷರತೆಯನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ಜಿಲ್ಲೆ ಹಾಗೂ ತಾಲ್ಲೂಕುಗಳ ಗ್ರಾಮೀಣ ಸಾಕ್ಷರತೆಯನ್ನು ಇಟ್ಟುಕೊಂಡು ಗ್ರಾಮಪಂಚಾಯತಿ ಹಾಗೂ ಗ್ರಾಮಮಟ್ಟದ ಸಾಕ್ಷರತೆಯನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಕರ್ನಾಟಕದಲ್ಲಿ ಒಟ್ಟು ಸರಾಸರಿ ಸಾಕ್ಷರತೆ ಶೇಕಡ ೬೭.೦೪ ರಷ್ಟಿದೆ. ಗ್ರಾಮೀಣ ಪ್ರದೇಶದ ಇಲ್ಲಿ ಸಾಕ್ಷರತೆ ಶೇಕಡ ೫೯.೬೮ರಷ್ಟಿದೆ. ಇವೆರಡರ ನಡುವಿನ ಅಂತರ ಶೇಕಡ ೭.೩೬ ಅಂಶಗಳಷ್ಟಿದೆ. ಕರ್ನಾಟಕದ ಒಟ್ಟು ಮಹಿಳೆಯರ ಸಾಕ್ಷರತೆ ಶೇಕಡ ೫೭.೪೬ ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ೪೮.೫೦ರಷ್ಟಿದೆ. ಇವೆರಡರ ನಡುವಿನ ಅಂತರ ಶೇಕಡ ೮.೯೬ ಅಂಶಗಳಷ್ಟಿದೆ. ಹಾಗೆಯೇ ಕರ್ನಾಟಕದ ಒಟ್ಟು ಪುರುಷರ ಸಾಕ್ಷರತೆ ಶೇಕಡ ೭೬.೨೬ ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೭೦.೬೩ರಷ್ಟಿದೆ. ಇಲ್ಲಿ ಇವೆರಡರ ನಡುವಿನ ಅಂತರ ಶೇಕಡ ೫.೬೩ ಅಂಶಗಳಾಗಿದೆ. ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ಅತ್ಯಧಿಕ ಸಾಕ್ಷರತಾ ಪ್ರಮಾಣವನ್ನು ಶೇಕಡ ೭೯.೬೩ ರಷ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೆ, ಗ್ರಾಮೀಣ ಪ್ರದೇಶದ ಅತ್ಯಂತ ಕಡಿಮೆ ಸಾಕ್ಷರತೆ ಶೇಕಡ ೪೨.೭೩ ರಷ್ಟು ಗುಲಬರ್ಗಾ ಜಿಲ್ಲೆಯಲ್ಲಿದೆ. ಇಲ್ಲಿ ಇವೆರಡರ ನಡುವಿನ ಅಂತರ ಶೇಕಡ ೩೭.೨ ಅಂಶಗಳಷ್ಟಿದೆ. ಈ ಎರಡು ಜಿಲ್ಲೆಗಳ ನಡುವಿನ ಅಂತರ ಮತ್ತೊಂದು ರೀತಿ ಗುರುತಿಸಬಹುದು. ಅತ್ಯಧಿಕ ಒಟ್ಟು ಸಾಕ್ಷರತಾ ಪ್ರಮಾಣ ಶೇಕಡ ೮೭.೨೯ರಷ್ಟು. ಮಂಗಳೂರು ತಾಲ್ಲೂಕಿನಲ್ಲಿದ್ದರೆ, ಅತ್ಯಂತ ಕಡಿಮೆ ಸಾಕ್ಷರತೆ ಶೇಕಡ ೩೭.೪೩ರಷ್ಟು ಯಾದಗಿರಿ ತಾಲ್ಲೂಕಿನಲ್ಲಿದೆ. ಇವೆರಡರ ನಡುವಿನ ಅಂತರ ಶೇಕಡ ೪೯.೮೬ ಅಂಶಗಳಷ್ಟಿದೆ. ಮಹಿಳೆಯರ ಮತ್ತು ಪುರುಷರ ಅತ್ಯಧಿಕ ಸಾಕ್ಷರತೆ ಸಹ ಕ್ರಮವಾಗಿ ಶೇಕಡ ೮೨.೨೪ ರಷ್ಟು ಮತ್ತು ಶೇಕಡ ೯೨.೫೧ರಷ್ಟು ಮಂಗಳೂರು ತಾಲ್ಲೂಕಿನಲ್ಲಿದೆ. ಮಹಿಳೆಯರ ಸಾಕ್ಷರತೆಯಲ್ಲಿ ಅತಿ ಕಡಿಮೆ ಶೇಕಡ ೨೬.೯೭ ರಷ್ಟು ಶಹಾಪುರ ತಾಲ್ಲೂಕಿನಲ್ಲಿದೆ. ಇಲ್ಲಿ ಇವೆರಡರ ನಡುವಿನ ಅಂತರ ಕ್ರಮವಾಗಿ ಶೇಕಡ ೫೫.೨೭ರಷ್ಟು ಮತ್ತು ಶೇಕಡ ೪೭.೭೭ ಅಂಶಗಳಷ್ಟಿದೆ.

ಗ್ರಾಮೀಣ ಪ್ರದೇಶದ ಸಾಕ್ಷರತೆಯಲ್ಲಿ ಕಡಿಮೆ ಪ್ರಮಾಣ ಹೊಂದಿರುವ ಎರಡನೆಯ ಜಿಲ್ಲೆ ರಾಯಚೂರು. ಈ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆ ಶೇಕಡ ೪೩.೧೫ ರಷ್ಟಿದೆ. ಪುರುಷರ ಸಾಕ್ಷರತಾ ಪ್ರಮಾಣ ಶೇಕಡ ೫೬.೮೭ ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣ ಶೇಕಡ ೨೯.೩೮ ರಷ್ಟಿದೆ. ಕರ್ನಾಟಕ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆ ಮತ್ತು ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆಯ ನಡುವಿನ ಅಂತರ ಶೇಕಡ ೧೬.೪೮ ಅಂಶಗಳಷ್ಟಿದೆ. ಕರ್ನಾಟಕದ ಒಟ್ಟು ಗ್ರಾಮೀಣ ಪ್ರದೇಶದ ಪುರುಷರ ಮತ್ತು ಮಹಿಳೆಯರ ಸಾಕ್ಷರತೆಗಿಂತ ರಾಯಚೂರು ಜಿಲ್ಲೆ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ನಡುವಿನ ಅಂತರ ಕ್ರಮವಾಗಿ ಶೇಕಡ ೧೩.೭೮ ರಷ್ಟು ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ನಡುವಿನ ಅಂತರ ಶೇಖಡ ೧೯.೧೨ ಅಂಶಗಳಷ್ಟಿದೆ. ಚಾಮರಾಜನಗರ ಜಿಲ್ಲೆಯು ಅತಿಕಡಿಮೆ ಗ್ರಾಮೀಣ ಪ್ರದೇಶದ ಸಾಕ್ಷರತೆ ಹೊಂದಿರುವ ಮೂರನೆಯ ಜಿಲ್ಲೆಯಾಗಿದೆ. ಈ ಜಿಲ್ಲೆಯ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆ ಶೇಕಡ ೪೭.೫೮ ರಷ್ಟಿದ್ದರೆ, ಪುರುಷರ ಮತ್ತು ಮಹಿಳೆಯರ ಸಾಕ್ಷರತೆಯು ಕ್ರಮವಾಗಿ ಶೇಕಡ ೫೫.೮೨ ಮತ್ತು ಶೇಕಡ ೩೯.೦೦ ರಷ್ಟಿದೆ. ರಾಜ್ಯದ ಗ್ರಾಮೀಣ ಪ್ರದೇಶದ ಸಾಕ್ಷರತೆ ಹಾಗೂ ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆ ನಡುವಿನ ಅಂತರ ಶೇಕಡ ೧೨.೧೦ ಅಂಶಗಳಷ್ಟಿದೆ. ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ನಡುವಿನ ಅಂತರ ಶೇಕಡ ೧೪.೮೧ ಅಂಶಗಳಷ್ಟಿದ್ದರೆ, ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ನಡುವಿನ ಅಂತರ ಶೇಕಡ ೯.೪೦ ಅಂಶಗಳಷ್ಟಿದೆ.

ಪ್ರಸ್ತುತ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ಬಳ್ಳಾರಿ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳು ಅತಿಕಡಿಮೆ ಗ್ರಾಮೀಣ ಪ್ರದೇಶದ ಸಾಕ್ಷರತೆಯನ್ನು ಹೊಂದಿರುವ ಜಿಲ್ಲೆಗಳಲ್ಲಿ ಕ್ರಮವಾಗಿ ನಾಲ್ಕನೆಯ, ಐದನೆಯ ಮತ್ತು ಆರನೆಯ ಸ್ಥಾನ ಪಡೆದುಕೊಂಡಿವೆ. ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆ ಶೇಕಡ ೫೦.೮೬ ರಷ್ಟಿದೆ. ಈ ಪ್ರದೇಶದ ಪುರುಷರ ಸಾಕ್ಷರತೆಯು ಶೇಕಡ ೬೪.೦೪ ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ೩೭.೪೫ ರಷ್ಟಿದೆ. ರಾಜ್ಯದ ಗ್ರಾಮೀಣ ಪ್ರದೇಶದ ಸಾಕ್ಷರತೆ ಹಾಗೂ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆಯ ನಡುವಿನ ಅಂತರ ಶೇಕಡ ೮.೮೨ ಅಂಶಗಳಷ್ಟಿದೆ. ರಾಜ್ಯದ ಗ್ರಾಮೀಣ ಪುರುಷರ ಸಾಕ್ಷರತೆ ಹಾಗೂ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ನಡುವಿನ ಅಂತರ ಶೇಕಡ ೬.೫೯ ಅಂಶಗಳಷ್ಟಿದೆ. ರಾಜ್ಯದ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ಮತ್ತು ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ನಡುವಿನ ಅಂತರ ಶೇಕಡ ೧೧.೦೫ ಅಂಶಗಳಷ್ಟಿದೆ.

ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆ ಶೇಕಡ ೫೧.೯೮ ರಷ್ಟಿದೆ. ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೬೬.೮೮ ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ೩೭.೦೨ ರಷ್ಟಿದೆ. ರಾಜ್ಯದ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆ ಹಾಗೂ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆ ನಡುವಿನ ಅಂತರ ಶೇಕಡ ೭.೭ ರಷ್ಟಿದೆ. ರಾಜ್ಯ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ನಡುವಿನ ಅಂತರ ಶೇಕಡ ೩.೭೫ ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ನಡುವಿನ ಅಂತರ ಶೇಕಡ ೧೧.೪೮ ಅಂಶಗಳಷ್ಟಿದೆ. ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆ ಶೇಕಡ ೫೨.೦೦ ರಷ್ಟಿದೆ. ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೬೬.೭೧ ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಶೇಕಡ ೩೭.೧೧ ರಷ್ಟಿದೆ. ರಾಜ್ಯ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆಯ ಅಂತರ ಶೇಕಡ ೭.೬೮ ಅಂಶಗಳಷ್ಟಿದೆ. ರಾಜ್ಯ ಹಾಗೂ ಜಿಲ್ಲೆಯ ಪುರುಷರ ಸಾಕ್ಷರತೆ ನಡುವಿನ ಅಂತರ ಶೇಕಡ ೩.೯೨ ಅಂಶಗಳಷ್ಟಿದ್ದರೆ, ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ನಡುವಿನ ಅಂತರ ಶೇಕಡ ೧೧.೩೯ ಅಂಶಗಳಷ್ಟಿದೆ.

ಈ ಮೇಲಿನ ವಿವರಣೆಗಳಿಂದ ಮತ್ತು ಕೋಷ್ಟಕ ಸಂಖ್ಯೆ ೩.೩; ೩.೪ ಮತ್ತು ೩.೫ ನೀಡಿರುವ ಅಂಕಿ ಸಂಖ್ಯೆಗಳಿಂದ ಹಾಗೂ ರೇಖಾಚಿತ್ರ ಸಂಖ್ಯೆ ೧ ರಿಂದ ೭ ನೀಡುವ ಮಾಹಿತಿಯಿಂದ ಮೂರು ಅಂಶಗಳು ಸ್ಪಷ್ಟವಾಗುತ್ತವೆ. ಒಂದು ಪುರುಷರ ಸಾಕ್ಷರತಾ ಪ್ರಮಾಣವು ಗ್ರಾಮೀಣ ನಗರ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಅಧಿಕವಾಗಿರುವುದು. ಮಹಿಳೆಯರ ಅತ್ಯಧಿಕ ಸಾಕ್ಷರತೆ ಶೇಕಡ ೮೨.೨೪ ರಷ್ಟಿದ್ದರೆ ಪುರುಷರ ಅತ್ಯಧಿಕ ಸಾಕ್ಷರತೆ ಶೇಕಡ ೯೨.೫೪ ರಷ್ಟು. ಇಲ್ಲಿ ಸಾಕ್ಷರತೆಯಲ್ಲಿ ಲಿಂಗ ತಾರತಮ್ಯ ಶೇಕಡ ೧೦.೦೩ ಅಂಶಗಳಷ್ಟಿದೆ. ಮಹಿಳೆಯರ ಅತಿಕಡಿಮೆ ಸಾಕ್ಷರತೆ ಶೇಕಡ ೨೯.೯೭ ರಷ್ಟಿದ್ದರೆ, ಪುರುಷರ ಕನಿಷ್ಟ ಸಾಕ್ಷರತೆ ಶೇಕಡ ೪೭.೭೧ ರಷ್ಟಿದೆ. ಇಲ್ಲಿ ಸಾಕ್ಷರತೆಯಲ್ಲಿ ಲಿಂಗತಾರತಮ್ಯ ಶೇಕಡ ೨೦.೭೪ ಅಂಶಗಳಷ್ಟಿದೆ. ಇದರಿಂದ ನಮಗೆ ಸಾಕ್ಷರತಾ ಪ್ರಮಾಣ ಅತ್ಯಧಿಕ ಮಟ್ಟದಲ್ಲಿದ್ದರೆ ಲಿಂಗತಾರತಮ್ಯವು ಕಡಿಮೆ ಇರುತ್ತದೆ ಮತ್ತು ಅದು ಕೆಳಮಟ್ಟದಲ್ಲಿದ್ದರೆ ಲಿಂಗತಾರತಮ್ಯವು ತೀವ್ರವಾಗಿರುತ್ತದೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ.

01_23_EKPSMS-KUH

02_23_EKPSMS-KUH

03_23_EKPSMS-KUH

04_23_EKPSMS-KUH

05_23_EKPSMS-KUH

06_23_EKPSMS-KUH

07_23_EKPSMS-KUH

ಎರಡು ರಾಜ್ಯದ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆ ಮತ್ತು ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ನಡುವಿನ ಅಂತರ ಕಡಿಮೆ ಪ್ರಮಾಣದ್ದಾಗಿದ್ದರೆ, ರಾಜ್ಯದ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ನಡುವಿನ (ಚಾಮರಾಜನಗರ ಜಿಲ್ಲೆ ಹೊರತುಪಡಿಸಿ) ಅಂತರ ಬಹಳ ಹೆಚ್ಚಾಗಿದೆ.

ಮೂರು, ಕರ್ನಾಟಕವನ್ನು ಉತ್ತರ ದಕ್ಷಿಣ ಪ್ರದೇಶ ಎಂದು ವಿಭಾಗಿಸಿ ನೋಡುವುದಕ್ಕೆ ಬದಲಾಗಿ, ಪೂರ್ವ ಪಶ್ಚಿಮ ಪ್ರದೇಶಗಳಾಗಿ ವಿಭಾಗಿಸಿ ನೋಡಿದರೆ ಸಾಕ್ಷರತೆಯ ಕೆಲವು ವಿಭಿನ್ನ ನೋಟಗಳು ಕಾಣಸಿಗುತ್ತವೆ. ಹೀಗಾಗಿ ನಾವು ಕರ್ನಾಟಕವನ್ನು ಪೂರ್ವ ಪಶ್ಚಿಮವಾಗಿ ವಿಭಾಗಿಸಿ ನೋಡಲು ಇಲ್ಲಿ ಪ್ರಯತ್ನಿಸಲಾಗಿದೆ. ಕರ್ನಾಟಕದ ಪೂರ್ವ ಪ್ರದೇಶಕ್ಕೆ ಬರುವ ಜಿಲ್ಲೆಗಳಾದ ಬೀದರ್, ಬಿಜಾಪುರ, ಬಾಗಲಕೋಟೆ, ಗುಲಬರ್ಗಾ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದ ಸಾಕ್ಷರತೆ (ಸ್ವಲ್ಪಮಟ್ಟಿಗೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಹೊರತುಪಡಿಸಿ) ಶೇಕಡ ೬೦.೦೦ನ್ನು ದಾಟಿಲ್ಲ. ಆದರೆ ಕರ್ನಾಟಕದ ಪಶ್ಚಿಮ ಭಾಗದಲ್ಲಿ ಬರುವ (ಬೆಳಗಾಂ ಜಿಲ್ಲೆ ಹೊರತುಪಡಿಸಿ) ಬಹುತೇಕ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಸಾಕ್ಷರತೆಯು ಶೇಕಡ ೬೦.೦೦ಕ್ಕಿಂತ ಹೆಚ್ಚಾಗಿದೆ. ಕೇವಲ ಗ್ರಾಮೀಣ ಪ್ರದೇಶದ ಸಾಕ್ಷರತಾ ಪ್ರಮಾಣದಲ್ಲಿ ಮಾತ್ರ ಪಶ್ಚಿಮದ ಜಿಲ್ಲೆಗಳು ಮುಂದಿರದೆ, ಒಟ್ಟಾರೆ ಸಾಕ್ಷರತೆಯ ದೃಷ್ಟಿಯಿಂದಲೂ ಈ ಭಾಗದ ಜಿಲ್ಲೆಗಳು ಅತ್ಯಂತ ಮುಂದುವರಿದ ಜಿಲ್ಲೆಗಳಾಗಿವೆ. ಪೂರ್ವ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಬರುವ ಜಿಲ್ಲೆಗಳ ನಡುವೆ ಇರಬಹುದಾದ ವ್ಯತ್ಯಾಸಗಳನ್ನು ಎಲ್ಲಾ ದೃಷ್ಟಿಯಿಂದಲೂ ನೋಡುವ ಅವಶ್ಯಕತೆ ಇದೆ. ಈ ಕುರಿತು ಹೆಚ್ಚಿನ ಅಧ್ಯಯನಗಳನ್ನು ಎದುರು ನೋಡಬೇಕಾಗಿದೆ.

ಭಾಗ

.. ಅಧ್ಯಯನ ಕ್ಷೇತ್ರದಲ್ಲಿ ಸಾಕ್ಷರತೆ

ಬಾಗಲಕೋಟೆ: ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜನಸಂಖ್ಯೆ ಶೇಕಡ ೩.೧೩ ಪಾಲ ಪಡೆದಿದೆ. ಕರ್ನಾಟಕ ರಾಜ್ಯದ ಅಕ್ಷರಸ್ಥರಲ್ಲಿ ಈ ಜಿಲ್ಲೆಯ ಪಾಲು ಶೇಕಡ ೨.೬೨ ರಷ್ಟಿದ್ದರೆ, ರಾಜ್ಯದ ಅನಕ್ಷರಸ್ಥರಲ್ಲಿ ಬಾಗಲಕೋಟೆ ಜಿಲ್ಲೆಯ ಪಾಲು ಶೇಕಡ ೩.೯೦ ರಷ್ಟಿದೆ. ಬಾಲಗಕೋಟೆ ಜಿಲ್ಲೆಯ ಒಟ್ಟು ಸಾಕ್ಷರತೆ ಶೇಕಡ ೫೭.೮೧ ರಷ್ಟಿದೆ. ಈ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆ ಶೇಕಡ ೫೨.೦೦ ರಷ್ಟಿದೆ. ನಗರ ಪ್ರದೇಶ ಒಟ್ಟು ಸಾಕ್ಷರತೆ ಶೇಕಡ ೭೧.೬೨ ರಷ್ಟಿದೆ. ಇಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ತಾರತಮ್ಯ ಶೇಕಡ ೧೯.೬೨ ಅಂಶಗಳಷ್ಟಿದೆ. ಬಾಗಲಕೋಟೆ ಜಿಲ್ಲೆಯ ಪುರುಷರ ಒಟ್ಟು ಸಾಕ್ಷರತೆ ಶೇಕಡ ೭೧.೩೧ ರಷ್ಟಿದೆ. ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೬೬.೭೧ ರಷ್ಟಿದ್ದರೆ. ನಗರ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೮೨.೧೫ ರಷ್ಟಿದೆ. ಇಲ್ಲಿ ಈ ಎರಡರ ನಡುವಿನ ತಾರತಮ್ಯ ಶೇಕಡ ೧೫.೧೪ ಅಂಶಗಳಷ್ಟಿದೆ. ಬಾಗಲಕೋಟೆ ಜಿಲ್ಲೆಯ ಮಹಿಳೆಯರ ಒಟ್ಟು ಸಾಕ್ಷರತೆ ೪೪.೧೦ ರಷ್ಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರ ಸಾಕ್ಷರತಾ ಪ್ರಮಾಣ ಕ್ರಮವಾಗಿ ಶೇಕಡ ೩೭.೧೧ ಮತ್ತು ಶೇಕಡ ೬೦.೮೨ ರಷ್ಟಿದೆ. ಇವೆರಡರ ನಡುವಿನ ತಾರತಮ್ಯ ಶೇಕಡ ೨೩.೮೧ ಅಂಶಗಳಷ್ಟಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತ್ಯಧಿಕ ಸಾಕ್ಷರತೆ ಶೇಕಡ ೭೯.೪೨ ರಷ್ಟು ಬಾಗಲಕೋಟೆ ತಾಲ್ಲೂಕಿನ ನಗರ ಪ್ರದೇಶದಲ್ಲಿದ್ದರೆ, ಅತಿಕಡಿಮೆ ಸಾಕ್ಷರತೆ ಶೇಕಡ ೪೯.೭೫ ರಷ್ಟು ಬೀಳಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇಲ್ಲಿ ಇವೆರಡರ ನಡುವಿನ ಅಂತರ ಶೇಕಡ ೨೯.೬೭ ಅಂಶಗಳಷ್ಟಿದೆ. ಪುರುಷರ ಅತ್ಯಧಿಕ ಸಾಕ್ಷರತೆ ಶೇಕಡ ೮೮.೧೯ ರಷ್ಟು ಬಾಗಲಕೋಟೆ ತಾಲ್ಲೂಕಿನ ನಗರ ಪ್ರದೇಶದಲ್ಲಿದ್ದರೆ, ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೬೧.೯೮ರಷ್ಟು ಜಮಖಂಡಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇಲ್ಲಿ ಈ ಎರಡರ ನಡುವಿನ ಅಂತರ ಶೇಕಡ ೨೬.೨೧ ಅಂಶಗಳಷ್ಟಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಮಹಿಳೆಯರ ಅತ್ಯಧಿಕ ಸಾಕ್ಷರತೆ ಶೇಕಡ ೭೦.೧೩ ರಷ್ಟು ಬಾಗಲಕೋಟೆ ತಾಲ್ಲೂಕಿನ ನಗರ ಪ್ರದೇಶದಲ್ಲಿದ್ದರೆ, ಮಹಿಳೆಯರ ಅತಿಕಡಿಮೆ ಸಾಕ್ಷರತೆ ಶೇಕಡ ೩೪.೪೧ ಬಾದಾಮಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇಲ್ಲಿ ಈ ಎರಡರ ನಡುವಿನ ಅಂತರ ಶೇಕಡ ೩೫.೭೨ ಅಂಶಗಳಷ್ಟಿದೆ. ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೬೧.೯೮ರಷ್ಟು ಜಮಖಂಡಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದ್ದರೆ, ಮಹಿಳೆಯರ ಅತಿಕಡಿಮೆ ಸಾಕ್ಷರತೆ ಶೇಕಡ ೩೪.೪೧ರಷ್ಟು ಬಾದಾಮಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇಲ್ಲಿ ಸಾಕ್ಷರತೆಯಲ್ಲಿ ಲಿಂಗತಾರತಮ್ಯ ಶೇಕಡ ೨೭.೫೭ ಅಂಶಗಳಷ್ಟಿದೆ. ಬಾಗಲಕೋಟೆ ಜಿಲ್ಲೆಯು ಸಾಕ್ಷರತೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ರಾಜ್ಯದ ಗುಣಲಕ್ಷಣವನ್ನು ತೋರಿಸುತ್ತದೆ. ಪುರುಷರ ಮತ್ತು ಮಹಿಳೆಯರ ಸಾಕ್ಷರತೆಗಳ ನಡುವಿನ ಅಂತರ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಿನ ಅಂತರ ಬಹಳ ದೊಡ್ಡದಾಗಿರುತ್ತದೆ (ನೋಡಿ : ಕೋಷ್ಟಕ ೩.೪ ಮತ್ತು ೩.೫)

ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತಾ ಪ್ರಮಾಣವು, ರಾಜ್ಯದ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೭.೬೮ ಅಂಶಗಳಷ್ಟು ಕಡಿಮೆ. ಈ ಜಿಲ್ಲೆಯ ಗ್ರಾಮೀಣ ಮಹಿಳೆಯರ ಸಾಕ್ಷರತೆಯು ರಾಜ್ಯದ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧೧.೩೯ ಅಂಶಗಳಷ್ಟು ಕಡಿಮೆ. ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಯು ರಾಜ್ಯದ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೩.೯೨ ಅಂಶಗಳಷ್ಟು ಕಡಿಮೆ ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಬಾಗಲಕೋಟೆ ತಾಲ್ಲೂಕು ಸಾಕ್ಷರತೆ ದೃಷ್ಟಿಯಿಂದ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೆಯ ಸ್ಥಾನವನ್ನು ಹುನಗುಂದ ತಾಲ್ಲೂಕು ಪಡೆದುಕೊಂಡಿದೆ. ಸಾಕ್ಷರತೆಯಲ್ಲಿ ಸ್ವಲ್ಪ ಹಿಂದುಳಿದ ತಾಲ್ಲೂಕುಗಳೆಂದರೆ ಬೀಳಗಿ ಮತ್ತು ಮುಧೋಳ. ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆ ಶೇಕಡ ೪.೦೬ ಅಂಶಗಳಷ್ಟು ಅಧಿಕವಾಗಿದೆ. ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ಜಿಲ್ಲೆಯ ಗ್ರಾಮೀಣ ಪುರುಷರ ಸಾಕ್ಷರತೆಗಿಂತ ಶೇಕಡ ೭.೩ ಅಂಶಗಳಷ್ಟು ಅಧಿಕವಾಗಿದೆ. ಹಾಗೆಯೇ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ಶೇಕಡ ೦.೯೨ ಅಂಶಗಳಷ್ಟು ಹೆಚ್ಚಾಗಿದೆ. ವಿಶೇಷವೆಂದರೆ ಬಾಗಲಕೋಟೆ ಜಿಲ್ಲೆಯಲ್ಲಿ ಸಾಕ್ಷರತೆಯ ದೃಷ್ಟಿಯಿಂದ ಬಾಗಲಕೋಟೆ ತಾಲ್ಲೂಕು ಮೊದಲನೆಯ ಸ್ಥಾನದಲ್ಲಿದ್ದರೂ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆ, ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆಯು ಸೇರಿದಂತೆ ಜಿಲ್ಲೆಯ ಇತರ ತಾಲ್ಲೂಕುಗಳ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೩.೦೦ ಅಂಶಗಳಷ್ಟು ಅಧಿಕವಾಗಿದೆ. ಹೀಗಾಗಿ ಹುನಗುಂದ ತಾಲ್ಲೂಕು ಸಾಕ್ಷರತೆ ದೃಷ್ಟಿಯಿಂದ ಸಾಪೇಕ್ಷವಾಗಿ ಮುಂದುವರಿದ ತಾಲ್ಲೂಕು ಎಂದು ಗುರುತಿಸಬಹುದು. ಆದರೆ ಶೈಕ್ಷಣಿಕವಾಗಿ ಹಿಂದುಳಿದಿರುವ ರಾಜ್ಯ ಏಳು ಜಿಲ್ಲೆಗಳಲ್ಲಿ ಬಾಗಲಕೋಟೆ ಜಿಲ್ಲೆಯು ಒಂದು. ಇದು ಇತ್ತೀಚೆಗೆ ಪ್ರಾದೇಶಿಕ ಅಸಮಾನತೆ ಅಧ್ಯಯನ ನಡೆಸಿದ (ಎಚ್.ಪಿ.ಸಿ.ಎಫ್.ಆರ್.ಆರ್.ಐ.೨೦೦೨) ವರದಿಯಲ್ಲಿಯೂ ಕಂಡುಬರುತ್ತದೆ.

ಕೋಷ್ಟಕ . – ಬಾಗಲಕೋಟೆ ಜಿಲ್ಲೆಯಲ್ಲಿ ಜನಸಂಖ್ಯೆ ಅಕ್ಷರಸ್ಥರು ಮತ್ತು ಅನಕ್ಷರಸ್ಥರು, ಸಾಕ್ಷರತೆ

ಕ್ರ.
ಸಂ.

ವಿವರಗಳು

ರಾಜ್ಯ

ಬಾಗಲಕೋಟೆ ಜಿಲ್ಲೆ

ಹುನಗುಂದ ತಾಲ್ಲೂಕು

ರಾಜ್ಯದಲ್ಲಿ ಬಾಗಾಲಕೋಟೆ ಜಿಲ್ಲೆಯ ಪಾಲು

೧. ಜನಸಂಖ್ಯೆ

೫೨೭೩೩೯೫೮

೧೬೫೨೩೨೩

೨೮೭೦೭೩

೩.೧೩

೨. ಅಕ್ಷರಸ್ಥರು

೩೦೭೭೪೯೮೮

೮೦೮೦೬೯

೧೪೫೯೪೯

೨.೬೨

೩. ಅನಕ್ಷರಸ್ಥರು

೧೫೧೩೨೮೦೨

೫೮೯೬೮೪

೩.೯೦

೪. ಸಾಕ್ಷರತೆ

೬೭.೦೪

೫೭.೮೧

೬೦೫೧

೫. ಅನಕ್ಷರತೆ

೩೨.೯೬

೪೨.೧೯

೩೯.೮೫

ಮೂಲ: ಸೆನ್ಸಸ್ ೨೦೦೧

ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆ

ಕ್ರ.ಸಂ.

ವಿವರಗಳು

ಸಾಕ್ಷರತಾ ಪ್ರಮಾಣ

ಒಟ್ಟು

ಪುರುಷರು

ಮಹಿಳೆಯರು

೧. ಬಾಗಲಕೋಟೆ ಜಿಲ್ಲೆ

೫೨.೦೦

೬೬.೭೧

೩೭.೧೧

೨. ಹುನಗುಂದ ತಾಲ್ಲೂಕು

೫೯.೦೬

೭೪.೦೧

೩೮.೦೩

೩. ಬೂದಿಹಾಳ ಎಸ್.ಕೆ.

೫೮.೨೧

೭೫.೫೯

೩೬.೩೭

ಮೂಲ ಸೆನ್ಸಸ್ ೨೦೦೧ ಮತ್ತು ಕ್ಷೇತ್ರಕಾರ್ಯ

ಹುನಗುಂದ ತಾಲ್ಲೂಕಿನಲ್ಲಿ ನಾವು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ಬೂದಿಹಾಳ ಎಸ್. ಕೆ. ಗ್ರಾಮ ಪಂಚಾಯತಿಯು ಒಟ್ಟು ಸಾಕ್ಷರತೆ ಶೇಕಡ ೫೮.೨೧ ರಷ್ಟಿದೆ. ಇಲ್ಲಿ ಮಹಿಳೆಯರ ಸಾಕ್ಷರತೆ ಶೇಕಡ ೩೬.೫೭ ರಷ್ಟಿದ್ದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇಕಡ ೭೯.೫೯ ರಷ್ಟಿದೆ. ಈ ಪಂಚಾಯತಿಯ ಒಟ್ಟು ಸಾಕ್ಷರತೆ ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೬.೨೧ ಅಂಶಗಳಷ್ಟು ಅಧಿಕವಾಗಿದೆ. ಆದರೆ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೦.೮೫ ಅಂಶಗಳಷ್ಟು ಕಡಿಮೆ. ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯ ಮಹಿಳೆಯರ ಸಾಕ್ಷರತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಹಾಗೂ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೦.೫೪ ಅಂಶಗಳಷ್ಟು ಮತ್ತು ಶೇಕಡ ೧.೪೬ ಅಂಶಗಳಷ್ಟು ಕಡಿಮೆ. ಆದರೆ ಬೂದಿಹಾಳ ಎಸ್. ಕೆ. ಪಂಚಾಯತಿಯ ಪುರುಷರ ಸಾಕ್ಷರತೆ ಜಿಲ್ಲೆಯ ಗ್ರಾಮೀಣ ಪ್ರದೇಶ ಪುರುಷರ ಸಾಕ್ಷರತೆಗಿಂತ ಶೇಕಡ ೧೨.೮೮ ಅಂಶಗಳಷ್ಟು ಮತ್ತು ಹುನಗುಂದ ತಾಲ್ಲೂಕಿನ ಗ್ರಾಮೀಣ ಪುರುಷರ ಸಾಕ್ಷರತೆ ಶೇಕಡ ೫.೫೮ ಅಂಶಗಳಷ್ಟು ಅಧಿಕವಾಗಿದೆ.