೩.೯. ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿ ಸಾಕ್ಷರತೆ

ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿ ವ್ಯಾಪ್ತಿಗೆ ಬೂದಿಹಾಳವು ಸೇರಿದಂತೆ ಒಟ್ಟು ೯ ಗ್ರಾಮಗಳು ಸೇರುತ್ತವೆ. ಅವೆಂದರೆ ಬೂದಿಹಾಳ ಎಸ್. ಕೆ. ಬೆನಕನದೋಣಿ, ನಿಡಸನೂರ, ತೂರಮರಿ, ತಾರಿವಾಳ, ಕೊಣ್ಣುರು, ಹೇಮವಾಡಗಿ, ಮನ್ಮಥನಾಳ ಮತ್ತು ಪಾಲಥಿ, ಈ ಗ್ರಾಮಗಳ ಸಾಕ್ಷರತೆಯನ್ನು ತಾಳೆ ನೋಡುವುದರಿಂದ ಗ್ರಾಮಪಂಚಾಯತಿ ಒಳಗೆ ಇರುವ ಭಿನ್ನತೆ ವ್ಯತ್ಯಾಸಗಳನ್ನು ಕಂಡುಕೊಳ್ಳಬಹುದಾಗಿದೆ. ಬೂದಿಹಾಳ ಎಸ್. ಕೆ. ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೯.೩೧ ರಷ್ಟಿದೆ. ಇದು ಜಿಲ್ಲೆಯ ಹಾಗೂ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೭.೩೧ ಅಂಶಗಳಷ್ಟು ಮತ್ತು ಶೇಕಡ ೦.೨೫ ಅಂಶಗಳಷ್ಟು ಅಧಿಕ. ಹಾಗೆಯೇ ಒಟ್ಟು ಗ್ರಾಮಪಂಚಾಯತಿ ಸಾಕ್ಷರತೆಗಿಂತ ಶೇಕಡ ೧.೧ ಅಂಶಗಳಷ್ಟು ಹೆಚ್ಚಾಗಿದೆ. ಈ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೭೬.೫೫ ರಷ್ಟಿದೆ. ಇದು ಒಟ್ಟು ಗ್ರಾಮಪಂಚಾಯತಿಯ ಪುರುಷರ ಸಾಕ್ಷರತೆಗಿಂತ ಶೇಕಡ ೩.೦೪ ಅಂಶಗಳಷ್ಟು ಕಡಿಮೆ. ಆದರೆ ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೯.೮೪ ಅಂಶಗಳಷ್ಟು ಮತ್ತು ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೨.೫೪ ಅಂಶಗಳಷ್ಟು ಬೂದಿಹಾಳ ಎಸ್. ಕೆ. ಗ್ರಾಮದ ಪುರುಷರ ಸಾಕ್ಷರತೆ ಅಧಿಕವಾಗಿದೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೪೧.೮೩ ರಷ್ಟಿದೆ. ಒಟ್ಟು ಗ್ರಾಮಪಂಚಾಯತಿಯ ಮಹಿಳೆಯರ ಸಾಕ್ಷರತೆಗಿಂತ ಬೂದಿಹಾಳ ಎಸ್.ಕೆ. ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೫.೩೧ ಅಂಶಗಳಷ್ಟು ಅಧಿಕವಾಗಿದೆ. ಬೂದಿಹಾಳ ಎಸ್. ಕೆ. ಗ್ರಾಮದ ಮಹಿಳೆಯರ ಸಾಕ್ಷರತೆ ಬಾಗಲಕೋಟೆ ಜಿಲ್ಲೆ ಹಾಗೂ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೪.೨೭ ಅಂಶಗಳಷ್ಟು ಹಾಗೂ ಶೇಕಡ ೩.೮ ಅಂಶಗಳಷ್ಟು ಅಧಿಕವಾಗಿದೆ.

08_23_EKPSMS-KUH

ಬೆನಕನದೋಣಿ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೬.೯೨ ರಷ್ಟಿದೆ. ಇದು ಗ್ರಾಮಪಂಚಾಯತಿ ಒಟ್ಟು ಸಾಕ್ಷರತೆಗಿಂತ ಶೇಕಡ ೧.೨೯ ಅಂಶಗಳಷ್ಟು ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೨.೧೪ ಅಂಶಗಳಷ್ಟು ಕಡಿಮೆ ಇದೆ. ಆದರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೪.೯೨ ಅಂಶಗಳಷ್ಟು ಅಧಿಕವಾಗಿದೆ. ಈ ಗ್ರಾಮದ ಮಹಿಳೆಯರ ಒಟ್ಟು ಸಾಕ್ಷರತೆ ಶೇಕಡ ೩೮.೬೨ ರಷ್ಟಿದೆ. ಇದು ಗ್ರಾಮಪಂಚಾಯತಿ ಒಟ್ಟು ಮಹಿಳೆಯರ ಸಾಕ್ಷರತೆಗಿಂತ ಶೇಕಡ ೨.೦೫ ಅಂಶಗಳಷ್ಟು ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧.೫೧ ಅಂಶಗಳಷ್ಟು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೦.೫೯ ಅಂಶಗಳಷ್ಟು ಅಧಿಕವಾಗಿದೆ. ಬೆನಕನದೋಣಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೭೬.೫೫ ರಷ್ಟಿದೆ. ಇದು ಒಟ್ಟು ಗ್ರಾಮಪಂಚಾಯತಿ ಪುರುಷರ ಸಾಕ್ಷರತೆಗಿಂತ ಶೇಕಡ ೩.೦೪ ಅಂಶಗಳಷ್ಟು ಕಡಿಮೆ. ಆದರೆ ಈ ಗ್ರಾಮದ ಪುರುಷರ ಸಾಕ್ಷರತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೯.೮೪ ಅಂಶಗಳಷ್ಟು ಮತ್ತು ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೨.೫೧ ಅಂಶಗಳಷ್ಟು ಹೆಚ್ಚಾಗಿದೆ.

ನಿಡಸನೂರು ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೮.೨೬ರಷ್ಟಿದೆ. ಇದು ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಸ್ವಲ್ಪ ಹೆಚ್ಚಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ ಒಟ್ಟು ಸಾಕ್ಷರತೆಗಿಂತ ನಿಡಸನೂರು ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೬.೨೬ ಅಂಶಗಳಷ್ಟು ಹೆಚ್ಚಾಗಿದ್ದರೆ, ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೦.೮ ಅಂಶಗಳಷ್ಟು ಕಡಿಮೆ ಇದೆ. ನಿಡಸನೂರು ಗ್ರಾಮದ ಮಹಿಳೆಯರ ಸಾಕ್ಷರತೆಯು ೩೪.೮೦ರಷ್ಟಿದೆ. ಇದು ಒಟ್ಟು ಗ್ರಾಮಪಂಚಾಯತಿ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧.೭೭ ಅಂಶಗಳಷ್ಟು ಕಡಿಮೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಜಿಲ್ಲೆಯ ಹಾಗೂ ತಾಲ್ಲೂಕಿನ ಗ್ರಾಮೀನ ಮಹಿಳೆಯರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೨.೩೧ ಅಂಶಗಳಷ್ಟು ಮತ್ತು ಶೇಕಡ ೩.೨೩ ಅಂಶಗಳಷ್ಟು ಕಡಿಮೆ ಇದೆ. ನಿಡಸನೂರು ಗ್ರಾಮದ ಪುರುಷರ ಒಟ್ಟು ಸಾಕ್ಷರತಾ ಪ್ರಮಾಣ ಶೇಕಡ ೭೮.೩೦ ರಷ್ಟಿದೆ. ಇದು ಗ್ರಾಮಪಂಚಾಯತಿಯ ಒಟ್ಟು ಪುರುಷರ ಸಾಕ್ಷರತೆಗಿಂತ ೧.೨೯ ಅಂಶಗಳಷ್ಟು ಕಡಿಮೆ. ಆದರೆ ನಿಡಸನೂರು ಗ್ರಾಮದ ಪುರುಷರ ಸಾಕ್ಷರತೆ ಬಾಗಲಕೋಟೆ ಜಿಲ್ಲೆಯ ಮತ್ತು ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೧೧.೫೯ ಅಂಶಗಳಷ್ಟು ಮತ್ತು ಶೇಕಡ ೪.೨೯ ಅಂಶಗಳಷ್ಟು ಅಧಿಕವಾಗಿದೆ.

ಕೋಷ್ಟಕ ೩.೫ – ಬಾಗಲಕೋಟೆ ಜಿಲ್ಲಯೆ ತಾಲ್ಲೂಕುವಾರು ಅಕ್ಷರಸ್ಥರು ಮತ್ತು ಸಾಕ್ಷರತೆ

ಜಿಲ್ಲೆ / ತಾಲ್ಲೂಕು

ಒಟ್ಟು / ಗ್ರಾಮೀಣ / ನಗರ

ಜಿಲ್ಲೆ / ತಾಲ್ಲೂಕಿನ ಒಟ್ಟು ಜನಸಂಖ್ಯೆ

ಅಕ್ಷರಸ್ಥರು

ಸಾಕ್ಷರತೆ

ಒಟ್ಟು

ಪುರುಷರು

ಮಹಿಳೆಯರು

ಒಟ್ಟು

ಪುರುಷರು

ಮಹಿಳೆಯರು

ಬಾಗಲಕೋಟೆ ಜಿಲ್ಲೆ ಒಟ್ಟು

೧೬೫೨೨೩೨

೮೦೮೦೬೯

೫೦೨೩೦೮

೩೦೫೭೬೧

೫೭.೮೧

೭೧.೩೧

೪೪.೧೦

ಗ್ರಾಮೀಣ

೧೧೭೩೦೫೮

೫೧೧೪೦೨

೩೩೦೦೪೦

೧೮೧೩೬೨

೫೨.೦೦

೬೬.೭೧

೩೭.೧೧

ನಗರ

೪೭೯೧೭೪

೨೯೬೬೬೭

೧೭೨೨೬೮

೧೨೪೩೯೯

೭೧.೬೨

೮೨.೧೫

೬೦.೮೨

ಜಮಖಂಡಿ ಒಟ್ಟು

೪೦೮೪೩೬

೧೯೬೧೩೫

೧೧೯೦೭೭

೭೭೦೫೮

೫೬.೬೮

೬೭.೭೨

೪೫.೨೮

ಗ್ರಾಮೀಣ

೨೫೬೬೬೫

೧೦೭೯೮೮

೬೭೯೮೮

೪೦೦೦೦

೫೦.೨೧

೬೧.೯೮

೩೭.೯೬

ನಗರ

೧೫೧೭೭೧

೮೮೧೪೭

೫೧೦೮೯

೩೭೦೫೮

೬೭.೩೦

೭೭.೨೪

೫೭.೧೭

ಬಿಳಗಿ ಒಟ್ಟು

೧೪೧೮೪೩

೬೧೬೭೭

೩೯೦೦೪

೨೨೬೭೩

೫೧.೮೨

೬೫.೫೫

೩೮.೦೯

ಗ್ರಾಮೀಣ

೧೨೬೩೭೯

೫೨೭೪೫

೩೩೮೨೮

೧೮೯೧೭

೪೯.೭೫

೬೩.೮೫

೩೫.೬೬

ನಗರ

೧೫೪೬೪

೮೯೩೨

೫೧೭೬

೩೭೫೬

೬೮.೬೫

೭೯.೩೯

೫೭.೮೬

ಮುಧೋಳ ಒಟ್ಟು

೨೪೪೨೩೦

೧೧೧೫೨೬

೬೮೭೮೬

೪೨೭೪೦

೫೪.೧೧

೬೬.೦೬

೪೧.೯೨

ಗ್ರಾಮೀಣ

೨೦೧೭೮೭

೮೬೬೧೫

೫೪೪೩೪

೩೨೧೮೧

೫೦.೯೫

೬೩.೩೩

೩೮.೨೯

ನಗರ

೪೨೪೪೩

೨೪೯೧೧

೧೪೩೫೨

೧೦೫೫೯

೬೮.೯೯

೭೮.೯೫

೫೮.೯೦

ಬಾದಾಮಿ ಒಟ್ಟು

೨೯೧೧೯

೧೪೦೦೩೫

೮೮೮೬೨

೫೧೧೭೩

೫೬.೮೮

೭೨.೧೪

೪೧.೬೦

ಗ್ರಾಮೀಣ

೨೧೪೮೭೧

೯೦೮೭೬

೯೫೯೮೧

೩೦೫೯೫

೫೦.೬೯

೬೭.೦೩

೩೪.೪೧

ನಗರ

೭೭೦೪೮

೪೯೧೫೯

೨೮೮೮೧

೨೦೨೭೮

೭೩.೪೪

೮೫.೭೧

೬೧.೦೧

ಬಾಗಲಕೋಟೆ ಒಟ್ಟು

೨೪೭೮೭೦

೧೩೪೮೩೪

೮೨೬೭೫

೫೨೧೫೯

೬೩.೮೦

೭೭.೫೧

೪೯.೮೩

ಗ್ರಾಮೀಣ

೧೫೬೨೭೪

೭೧೧೧೭

೪೬೨೮೫

೨೪೮೩೨

೫೪.೨೪

೩೦.೭೭

೩೭.೭೯

ನಗರ

೯೧೫೯೬

೬೩೭೧೭

೩೬೩೯೦

೨೭೩೨೭

೭೯.೪೨

೮೮.೧೯

೭೦.೧೩

ಹುನಗುಂದ ಒಟ್ಟು

೨೮೭೦೭೩

೧೪೫೯೪೯

೯೩೩೪೮

೫೨೬೦೧

೬೦.೧೫

೭೬.೬೨

೪೩.೫೩

ಗ್ರಾಮೀಣ

೨೧೭೦೮೨

೧೦೨೦೬೧

೬೭೫೨೪

೩೪೫೩೭

೫೬.೦೬

೭೪.೦೧

೩೮.೦೩

ನಗರ

೬೯೯೯೧

೪೩೮೮೮

೨೫೮೨೪

೧೮೦೬೪

೭೨.೪೨

೮೪.೪೩

೬೦.೧೭

ಮೂಲ: ಸೆನ್ಸಸ್‌೨೦೦೧ ಮತ್ತು ಅಭಿವೃದ್ಧಿ ಅಧ್ಯಯನ ೨೦೦೩.

ತೂರಮರಿ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೬೭.೯೧ ರಷ್ಟಿದೆ. ಇದು ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಶೇಕಡ ೯.೭೦ ಅಂಶಗಳಷ್ಟು ಅಧಿಕವಾಗಿದೆ. ಬಾಗಲಕೋಟೆ ಜಿಲ್ಲೆ ಹಾಗೂ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೧೫.೯೨ ಅಂಶಗಳಷ್ಟು ಮತ್ತು ಶೇಕಡ ೮.೮೫ ಅಂಶಗಳಷ್ಟು ಅಧಿಕವಾಗಿದೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೪೩.೯೧ ರಷ್ಟಿದೆ. ಇದು ಒಟ್ಟು ಗ್ರಾಮಪಂಚಾಯತಿಯ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೭.೩೪ ಅಂಶಗಳಷ್ಟು ಹೆಚ್ಚಾಗಿದೆ. ಜಿಲ್ಲೆಯ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಒಟ್ಟು ಸಾಕ್ಷರತೆಗಿಂತ ತೂರಮರಿ ಗ್ರಾಮದ ಮಹಿಳೆಯರ ಸಾಕ್ಷರತೆ ಕ್ರಮವಾಗಿ ಶೇಕಡ ೬.೮ ಅಂಶಗಳಷ್ಟು ಮತ್ತು ಶೇಕಡ ೫.೮೮ ಅಂಶಗಳಷ್ಟು ಹೆಚ್ಚಾಗಿದೆ. ತೂರಮರಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೯೨.೪೩ ರಷ್ಟಿದೆ. ಇದು ಅಧ್ಯಯನ ನಡೆಸಿದ ಇತರ ಎಲ್ಲಾ ಗ್ರಾಮಗಳಿಗಿಂತ ಪುರುಷರ ಅತ್ಯಧಿಕ ಸಾಕ್ಷರತೆಯಾಗಿದೆ. ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯ ಒಟ್ಟು ಪುರುಷರ ಸಾಕ್ಷರತೆಗಿಂತ ತೂರಮರಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೧೨.೮೪ ಅಂಶಗಳಷ್ಟು ಅಧಿಕವಾಗಿದೆ. ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಭಾಗದ ಪುರುಷರ ಒಟ್ಟು ಸಾಕ್ಷರತೆಗಿಂತ ತೂರಮರಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೨೫.೭೨ ಅಂಶಗಳಷ್ಟು ಅಧಿಕವಾಗಿದೆ. ಹಾಗೆಯೇ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ತೂರಮರಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೧೮.೪೨ ಅಂಶಗಳಷ್ಟು ಹೆಚ್ಚಾಗಿದೆ.

ತಾರಿವಾಳ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೬೧.೬೬ ರಷ್ಟಿದೆ. ಇದು ಒಟ್ಟು ಗ್ರಾಮಪಂಚಾಯತಿ ಸಾಕ್ಷರತೆಗಿಂತ ಶೇಕಡ ೩.೪೫ ಅಂಶಗಳಷ್ಟು ಜಿಲ್ಲೆಯ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೯.೬೬ ಅಂಶಗಳಷ್ಟು ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೨.೬ ಅಂಶಗಳಷ್ಟು ಅಧಿಕವಾಗಿದೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೩೬.೫೯ ರಷ್ಟಿದೆ. ಗ್ರಾಮಪಂಚಾಯತಿಯ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೦.೦೨ ಅಂಶಗಳಷ್ಟು ಅಧಿಕವಾಗಿದ್ದರೆ, ಜಿಲ್ಲೆಯ ಗ್ರಾಮೀಣ ಪ್ರದೇಶ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೦.೫೨ ಅಂಶಗಳಷ್ಟು ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧.೪೪ ಅಂಶಗಳಷ್ಟು ಕಡಿಮೆ ಇದೆ. ತಾರಿವಾಳ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೮೬.೬೪ ರಷ್ಟಿದೆ. ಇದು ಗ್ರಾಮಪಂಚಾಯತಿಯ ಪುರುಷರ ಒಟ್ಟು ಸಾಕ್ಷರತೆಗಿಂತ ಶೇಕಡ ೭.೦೫ ಅಂಶಗಳಷ್ಟು ಅಧಿಕವಾಗಿದೆ. ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ತಾರಿವಾಳ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೧೯.೯೩ ಅಂಶಗಳಷ್ಟು ಹಾಗೂ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ತಾರಿವಾಳ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೧೨.೬೩ ಅಂಶಗಳಷ್ಟು ಹೆಚ್ಚಾಗಿದೆ.

09_23_EKPSMS-KUH

ಕೊಣ್ಣೂರು ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೬೨.೬೩ ರಷ್ಟಿದೆ. ಇದು ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಶೇಕಡ ೪.೪೧ ಅಂಶಗಳಷ್ಟು ಅಧಿಕವಾಗಿದೆ. ಕೊಣ್ಣೂರು ಗ್ರಾಮ ಒಟ್ಟು ಸಾಕ್ಷರತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೧೦.೬೨ ಅಂಶಗಳಷ್ಟು ಮತ್ತು ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೩.೫೬ ಅಂಶಗಳಷ್ಟು ಹೆಚ್ಚಾಗಿದೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೨೯.೬೭ ರಷ್ಟಿದೆ. ಇದು ಒಟ್ಟು ಗ್ರಾಮಪಂಚಾಯತಿ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೬.೯ ಅಂಶಗಳಷ್ಟು, ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೭.೪೪ ಅಂಶಗಳಷ್ಟು ಮತ್ತು ತಾಲ್ಲೂಕಿನ ಗ್ರಾಮೀಣ ಭಾಗದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೮.೩೬ ಅಂಶಗಳಷ್ಟು ಕಡಿಮೆ ಇದೆ. ಆದರೆ ಕೊಣ್ಣೂರು ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೯೦.೬೫ ರಷ್ಟಿದೆ. ಇದು ಅಧ್ಯಯನಕ್ಕೆ ಒಳಪಡಿಸಿದ ಗ್ರಾಮಗಳಲ್ಲಿಯೇ ಪುರುಷರ ಸಾಕ್ಷರತೆಯಲ್ಲಿ ಎರಡನೆಯ ಸ್ಥಾನ ಪಡೆದಿರುವ ಗ್ರಾಮವಾಗಿದೆ. ಈ ಗ್ರಾಮದ ಪುರುಷರ ಸಾಕ್ಷರತೆಯು ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯ ಒಟ್ಟು ಪುರುಷರ ಸಾಕ್ಷರತೆಗಿಂತ ಶೇಕಡ ೧೧.೦೬ ಅಂಶಗಳಷ್ಟು ಅಧಿಕವಾಗಿದೆ. ಹಾಗೆಯೇ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಒಟ್ಟು ಸಾಕ್ಷರತೆಗಿಂತ ಶೇಕಡ ೨೩.೯೪ ಅಂಶಗಳಷ್ಟು ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೧೬.೬೪ ಅಂಶಗಳಷ್ಟು ಕೊಣ್ಣೂರು ಗ್ರಾಮದ ಪುರುಷರ ಸಾಕ್ಷರತೆ ಹೆಚ್ಚಾಗಿದೆ.

ಹೇಮವಾಡಗಿ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೬.೯೮ ರಷ್ಟಿದೆ. ಇದು ಒಟ್ಟು ಗ್ರಾಮಪಂಚಾಯತಿ ಸಾಕ್ಷರತೆಗಿಂತ ಶೇಕಡ ೧.೨೩ ಅಂಶಗಳಷ್ಟು ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗದ ಸಾಕ್ಷರತೆಗಿಂತ ಶೇಕಡ ೨.೦೮ ಅಂಶಗಳಷ್ಟು ಕಡಿಮೆ ಇದ್ದರೆ, ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೪.೯೮ ಅಂಶಗಳಷ್ಟು ಅಧಿಕವಾಗಿದೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೩೫.೪೨ ರಷ್ಟಿದೆ. ಇದು ಗ್ರಾಮಪಂಚಾಯತಿಯ ಒಟ್ಟು ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧.೧೫ ಅಂಶಗಳಷ್ಟು, ಜಿಲ್ಲೆ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೧.೬೯ ಅಂಶಗಳಷ್ಟು ಮತ್ತು ಶೇಕಡ ೨.೬೧ ಅಂಶಗಳಷ್ಟು ಕಡಿಮೆ ಇದೆ. ಹೇಮವಾಡಗಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೭೬.೮೪ ರಷ್ಟಿದೆ. ಇದು ಒಟ್ಟು ಬೂದಿಹಾಳ ಎಸ್. ಕೆ. ಗ್ರಾಮ ಪಂಚಾಯತಿಯ ಪುರುಷರ ಸಾಕ್ಷರತೆಗಿಂತ ಶೇಕಡ ೨.೭೫ ಅಂಶಗಳಷ್ಟು ಕಡಿಮೆ. ಆದರೆ ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೧೦.೧೩ ಅಂಶಗಳಷ್ಟು ಹೆಚ್ಚಾಗಿದ್ದರೆ, ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಹೇಮವಾಡಗಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೨.೮೩ ಅಂಶಗಳಷ್ಟು ಅಧಿಕವಾಗಿದೆ.

ಮನ್ಮಥನಾಳ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೨.೮೫ ರಷ್ಟಿದೆ. ಇದು ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಶೇಕಡ ೫.೩೬ ಅಂಶಗಳಷ್ಟು ಕಡಿಮೆ ಇದ್ದರೆ, ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೬.೨೧ ಕಡಿಮೆ ಇದೆ. ಆದರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೦.೮೫ ಅಂಶಗಳಷ್ಟು ಅಧಿಕವಾಗಿದೆ. ಮನ್ಮಥನಾಳ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೨೭.೮೮ ರಷ್ಟಿದೆ. ಇದು ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯಲ್ಲಿಯೇ ಮನ್ಮಥನಾಳ ಗ್ರಾಮದ ಮಹಿಳೆಯರ ಸಾಕ್ಷರತೆ ಅತಿ ಕಡಿಮೆ. ಇದು ಒಟ್ಟು ಪಂಚಾಯತಿಯ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೮.೬೯ ಅಂಶಗಳಷ್ಟು ಕಡಿಮೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೯.೨೩ ಅಂಶಗಳಷ್ಟು ಕಡಿಮೆ ಇದ್ದರೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯ ಸಾಕ್ಷರತೆಗಿಂತ ಶೇಕಡ ೧೦.೧೫ ಅಂಶಗಳಷ್ಟು ಕಡಿಮೆ ಇದೆ. ಮನ್ಮಥನಾಳ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೭೭.೩೫ ರಷ್ಟಿದೆ. ಇದು ಗ್ರಾಮ ಪಂಚಾಯತಿಯ ಒಟ್ಟು ಪುರುಷರ ಸಾಕ್ಷರತೆಗಿಂತ ಶೇಕಡ ೨.೨೪ ಅಂಶಗಳಷ್ಟು ಕಡಿಮೆ. ಆದರೆ ಮನ್ಮಥನಾಳ ಗ್ರಾಮದ ಪುರುಷರ ಸಾಕ್ಷರತೆ ಜಿಲ್ಲೆಯ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೧೦.೬೪ ಅಂಶಗಳಷ್ಟು ಮತ್ತು ಶೇಕಡ ೩.೩೪ ಅಂಶಗಳಷ್ಟು ಹೆಚ್ಚಾಗಿದೆ.

ಪಾಲಥಿ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೧.೯೪ ರಷ್ಟಿದೆ. ಈ ಗ್ರಾಮ ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯಲ್ಲಿ ಅತಿಕಡಿಮೆ ಅಕ್ಷರಸ್ಥರನ್ನು ಹೊಂದಿರುವ ಗ್ರಾಮವಾಗಿದೆ. ಪಾಲಥಿ ಗ್ರಾಮದ ಒಟ್ಟು ಸಾಕ್ಷರತೆಯು ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಶೇಕಡ ೬.೨೯ ಅಂಶಗಳಷ್ಟು ಕಡಿಮೆ. ಹಾಗೆಯೇ ಈ ಗ್ರಾಮದ ಸಾಕ್ಷರತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೦.೦೮ ಅಂಶಗಳಷ್ಟು ಕಡಿಮೆ ಇದ್ದರೆ, ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೭.೧೪ ಅಂಶಗಳಷ್ಟು ಕಡಿಮೆ ಇದೆ. ಪಾಲಥಿ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೩೧.೬೦ ರಷ್ಟಿದೆ. ಇದು ಗ್ರಾಮಪಂಚಾಯತಿಯ ಒಟ್ಟು ಮಹಿಳೆಯರ ಸಾಕ್ಷರತೆಗಿಂತ ಶೇಕಡ ೪.೯೭ ಅಂಶಗಳಷ್ಟು, ಜಿಲ್ಲೆಯ ಒಟ್ಟು ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೫.೫೧ ಅಂಶಗಳಷ್ಟು ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಒಟ್ಟು ಸಾಕ್ಷರತೆಗಿಂತ ಶೇಕಡ ೬.೪೩ ಅಂಶಗಳಷ್ಟು ಕಡಿಮೆ. ಪಾಲಥಿ ಗ್ರಾಮದ ಪುರುಷರ ಒಟ್ಟು ಸಾಕ್ಷರತೆ ಶೇಕಡ ೭೪.೨೨ ರಷ್ಟಿದೆ. ಇದು ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯಲ್ಲೇ ಅತಿಕಡಿಮೆ ಪುರುಷರ ಸಾಕ್ಷರತೆ ಹೊಂದಿರುವ ಗ್ರಾಮವಾಗಿದೆ. ಗ್ರಾಮಪಂಚಾಯತಿ ಒಟ್ಟು ಸಾಕ್ಷರತೆಗಿಂತ ಪಾಲಥಿ ಗ್ರಾಮದ ಸಾಕ್ಷರತೆ ಶೇಕಡ ೫.೩೭ ಅಂಶಗಳಷ್ಟು ಕಡಿಮೆ. ಪಾಲಥಿ ಗ್ರಾಮದ ಪುರುಷರ ಸಾಕ್ಷರತೆ ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೭.೫೧ ಅಂಶಗಳಷ್ಟು ಹೆಚ್ಚಾಗಿದ್ದರೆ, ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೦.೨೧ ಅಂಶಗಳಷ್ಟು ಮಾತ್ರ ಹೆಚ್ಚಾಗಿದೆ.

ಮೇಲಿನ ವಿಶ್ಲೇಷಣೆಯಿಂದ ಸ್ಪಷ್ಟವಾಗುವ ಅಂಶವೆಂದರೆ ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿ ಒಟ್ಟಾರೆ ಸಾಕ್ಷರತೆಯು ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಹೆಚ್ಚಾಗಿದೆ. ಆದರೆ ಹುನಗುಂದ ತಾಲ್ಲೂಕಿನ ಗ್ರಾಮೀಣ ಪ್ರದೇಶ ಸಾಕ್ಷರತೆಗೆ ಸ್ವಲ್ಪ ಹೆಚ್ಚು ಕಡಿಮೆ. ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯ ಸಾಕ್ಷರತೆ ಸಮನಾಗಿದೆ. ಈ ಪಂಚಾಯತಿಯಲ್ಲಿ ತೂರಮರಿ ಗ್ರಾಮ ಸಾಕ್ಷರತೆ ದೃಷ್ಟಿಯಿಂದ ಉತ್ತಮ ಸಾಧನೆ ತೋರಿ ಮೊದಲನೆಯ ಸ್ಥಾನದಲ್ಲಿದ್ದರೆ, ಪಾಲಥಿ ಮತ್ತು ಮನ್ಮಥನಾಳ ಗ್ರಾಮಗಳು ಸ್ವಲ್ಪ ಹೆಚ್ಚು ಕಡಿಮೆ ಕೊನೆಯ ಸ್ಥಾನದಲ್ಲಿ ನಿಲ್ಲುತ್ತವೆ. ಬೂದಿಹಾಳ ಎಸ್. ಕೆ. ಪಂಚಾಯತಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಅತ್ಯಧಿಕ ಸಾಕ್ಷರತಾ ಪ್ರಮಾಣ ಶೇಕಡ ೪೩.೯೧ ರಷ್ಟು ತೂರಮರಿ ಗ್ರಾಮದಲ್ಲಿದ್ದರೆ ಮಹಿಳೆಯರ ಅತ್ಯಂಥ ಕಡಿಮೆ ಸಾಕ್ಷರತೆ ಶೇಕಡ ೨೭.೮೮ ಮನ್ಮಥನಾಳದಲ್ಲಿದೆ. ಇವೆರಡರ ಎರಡರ ನಡುವಿನ ಅಂತರ ಶೇಕಡ ೧೬.೦೩ ಅಂಶಗಳಷ್ಟಿದೆ. ಹಾಗೆಯೇ ಪುರುಷರ ಅತ್ಯಧಿಕ ಸಾಕ್ಷರತೆ ಶೇಕಡ ೯೨.೪೩ ರಷ್ಟು ತೂರಮರಿ ಗ್ರಾಮದಲ್ಲಿದ್ದರೆ, ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೭೪.೨೨ ರಷ್ಟು ಪಾಲಥಿ ಗ್ರಾಮದಲ್ಲಿದೆ. ಇವೆರಡರ ನಡುವಿನ ಅಂತರ ಶೇಕಡ ೧೮.೨೧ ಅಂಶಗಳಷ್ಟಿದೆ. ಮಹಿಳೆಯರ ಅತ್ಯಧಿಕ ಸಾಕ್ಷರತೆ ಶೇಕಡ ೪೩.೯೧ ರಷ್ಟು ತೂರಮರಿ ಗ್ರಾಮದಲ್ಲಿದ್ದರೆ, ಪುರುಷರ ಅತ್ಯಧಿಕ ಸಾಕ್ಷರತೆ ಶೇಕಡ ೯೨.೪೩ ರಷ್ಟು ಅದೇ ಗ್ರಾಮದಲ್ಲಿದೆ. ಇಲ್ಲಿ ಸಾಕ್ಷರತೆಯಲ್ಲಿ ಲಿಂಗತಾರತಮ್ಯ ಶೇಕಡ ೪೮.೫೨ ಅಂಶಗಳಷ್ಟಿದೆ. ಹಾಗೆಯೇ ಮಹಿಳೆಯರ ಅತಿಕಡಿಮೆ ಸಾಕ್ಷರತೆ ಶೇಕಡ ೨೭.೮೮ ರಷ್ಟು ಮನ್ಮಥನಾಳ ಗ್ರಾಮದಲ್ಲಿದ್ದರೆ ಪುರುಷರ ಅಡಿಕಡಿಮೆ ಸಾಕ್ಷರತಾ ಪ್ರಮಾಣ ಶೇಕಡ ೭೪.೨೨ ರಷ್ಟು ಪಾಲಥಿ ಗ್ರಾಮದಲ್ಲಿದೆ. ಇಲ್ಲಿ ಸಾಕ್ಷರತೆಯ ಲಿಂಗತಾರತಮ್ಯ ಶೇಕಡ ೪೬.೩೪ ಅಂಶಗಳಷ್ಟಿದೆ.

ಕೊಪ್ಪಳ ಜಿಲ್ಲೆ : ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಜನಸಂಖ್ಯೆ ಶೇಕಡ ೨.೨೬ ರಷ್ಟು ಪಾಲು ಪಡೆದಿದೆ. ರಾಜ್ಯದ ಅಕ್ಷರಸ್ಥರಲ್ಲಿ ಈ ಜಿಲ್ಲೆಯ ಪಾಲು ಶೇಕಡ ೧.೭೭ ರಷ್ಟಿದ್ದರೆ, ಅನಕ್ಷರಸ್ಥರಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇಕಡ ೨.೯೬ ರಷ್ಟಿದೆ. ಕೊಪ್ಪಳ ಜಿಲ್ಲೆಯ ಒಟ್ಟು ಸಾಕ್ಷರತೆ ಶೇಕಡ ೫೫.೦೨ ರಷ್ಟಿದೆ. ಈ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆ ಶೇಕಡ ೫೧.೯೮ ರಷ್ಟಿದ್ದರೆ, ನಗರ ಪ್ರದೇಶದ ಒಟ್ಟು ಸಾಕ್ಷರತಾ ಪ್ರಮಾಣವು ಶೇಕಡ ೬೯.೭೯ ರಷ್ಟಿದೆ. ಇಲ್ಲಿ ನಗರ ಗ್ರಾಮೀಣ ಪ್ರದೇಶಗಳ ನಡುವಿನ ತಾರತಮ್ಯ ಶೇಕಡ ೧೭.೮೧ ಅಂಶಗಳಷ್ಟಿದೆ. ಜಿಲ್ಲೆಯ ಪುರುಷರ ಸಾಕ್ಷರತೆ ಶೇಕಡ ೬೯.೧೫ ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೬೬.೮೮ ಮತ್ತು ನಗರ ಪ್ರದೇಶದ ಪುರುಷರ ಸಾಕ್ಷರತೆ ೮೦.೦೯ ರಷ್ಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಪುರುಷರ ಸಾಕ್ಷರತೆ ನಡುವಿನ ತಾರತಮ್ಯ ಶೇಕಡ ೧೩.೨೧ ಅಂಶಗಳಷ್ಟಿದೆ.

ಕೊಪ್ಪಳ ಜಿಲ್ಲೆಯ ಒಟ್ಟು ಮಹಿಳೆಯರ ಸಾಕ್ಷರತೆ ಶೇಕಡ ೪೦.೭೬ ಅಂಶಗಳಷ್ಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರ ಸಾಕ್ಷರತಾ ಪ್ರಮಾಣ ಕ್ರಮವಾಗಿ ಶೇಕಡ ೩೭.೦೨ ಮತ್ತು ಶೇಕಡ ೫೯.೧೫ ಅಂಶಗಳಷ್ಟಿದೆ. ಇವೆರಡರ ನಡುವಿನ ತಾರತಮ್ಯ ಶೇಕಡ ೨೨.೧೬ ಅಂಶಗಳಷ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಅತ್ಯಧಿಕ ಸಾಕ್ಷರತೆ ಶೇಕಡ ೭೩.೩೭ ರಷ್ಟು, ಕೊಪ್ಪಳ ತಾಲ್ಲೂಕಿನ ನಗರ ಪ್ರದೇಶದಲ್ಲಿದೆ. ಅತಿ ಕಡಿಮೆ ಸಾಕ್ಷರತೆ ಶೇಕಡ ೪೯.೨೯ ರಷ್ಟು ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇವೆರಡರ ನಡುವಿನ ಅಂತರ ಶೇಕಡ ೨೪.೦೮ ಅಂಶಗಳಷ್ಟಿದೆ. ಪುರುಷರ ಅತ್ಯಧಿಕ ಸಾಕ್ಷರತೆ ಶೇಕಡ ೮೨.೦೭ ಕೊಪ್ಪಳ ತಾಲ್ಲೂಕಿನ ನಗರ ಪ್ರದೇಶದಲ್ಲಿದ್ದರೆ, ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೬೩.೪೭ ರಷ್ಟು ಗಂಗಾವತಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇವೆರಡರ ನಡುವಿನ ಅಂತರ ಶೇಕಡ ೧೭.೭೬ ಅಂಶಗಳಷ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಅತ್ಯಧಿಕ ಮಹಿಳೆಯರ ಸಾಕ್ಷರತೆ ಶೇಕಡ ೬೪.೩೧ ರಷ್ಟು ಕೊಪ್ಪಳ ತಾಲ್ಲೂಕಿನ ನಗರ ಪ್ರದೇಶದಲ್ಲಿದ್ದರೆ ಅತಿ ಕಡಿಮೆ ಸಾಕ್ಷರತೆ, ಶೇಕಡ ೩೨.೦೨ರಷ್ಟು, ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇವೆರಡರ ನಡುವಿನ ಅಂತರ ಶೇಕಡ ೩೨.೨೯ ಅಂಶಗಳಷ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೬೩.೪೭ ಗಂಗಾವತಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದ್ದರೆ, ಮಹಿಳೆಯರ ಅತಿಕಡಿಮೆ ಸಾಕ್ಷರತೆ ಶೇಕಡ ೩೨.೦೨ ರಷ್ಟು ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇಲ್ಲಿ ಸಾಕ್ಷರತೆಯಲ್ಲಿ ಲಿಂಗತಾರತಮ್ಯ ಶೇಕಡ ೩೧.೪೫ ಅಂಶಗಳಷ್ಟಿದೆ. ರಾಜ್ಯದ ಸಾಕ್ಷರತಾ ಪ್ರಮಾಣದಲ್ಲಿ ಕಂಡುಬರುವ ಲಕ್ಷಣಗಳನ್ನೇ ಕೊಪ್ಪಳ ಜಿಲ್ಲೆಯ ಸಾಕ್ಷರತೆಯು ತೋರಿಸುತ್ತದೆ.

ಕೋಷ್ಟಕ ೩.೬ – ಕೊಪ್ಪಳ ಜಿಲ್ಲೆಯ ಜನಸಂಖ್ಯೆ ಅಕ್ಷರಸ್ಥರು ಮತ್ತು ಅನಕ್ಷರಸ್ಥರು, ಸಾಕ್ಷರತೆ

ಕ್ರ. ಸ.

ವಿರಗಳು

ರಾಜ್ಯ

ಕೊಪ್ಪಳ ಜಿಲ್ಲೆ

ಯಲಬುರ್ಗಾ ತಾಲ್ಲೂಕು

ರಾಜ್ಯದಲ್ಲಿ ಜಿಲ್ಲೆಯ ಪಾಲು

೧. ಜನಸಂಖ್ಯೆ

೫೨೭೩೩೯೫೮

೧೧೯೩೪೯೬

೨೩೫೨೯೬

೨.೨೬

೨. ಅಕ್ಷರಸ್ಥರು

೩೦೭೭೪೯೮೮

೫೪೭೩೪೫

೧೦೯೭೬೦

೧.೭೭

೩. ಅನಕ್ಷರಸ್ಥರು

೧೫೧೩೨೨೮೦೨

೪೪೭೫೩೬

೨.೯೬

೪. ಸಾಕ್ಷರತೆ

೬೭.೦೪

೫೫.೦೨

೫೫.೬೩

೫. ಅನಕ್ಷರತೆ

೩೨.೯೬

೪೪.೯೮

೪೪.೩೭

ಮೂಲ : ಸೆನ್ಸಸ್ ೨೦೦೧

ಕೋಷ್ಟಕ ೩.೭ – ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆ

ಕ್ರ. ಸಂ.

ವಿವರಗಳು

ಸಾಕ್ಷರತೆ

ಒಟ್ಟು

ಪುರುಷರು

ಮಹಿಳೆಯರು

೧. ಕೊಪ್ಪಳ ಜಿಲ್ಲೆ

೫೧.೯೮

೬೬.೮೮

೩೭.೦೨

೨. ಯಲಬುರ್ಗಾ

೫೪.೯೯

೬೯.೩೪

೪೦.೫೯

೩. ಕುಷ್ಟಗಿ

೫೧.೬೨

೬೮.೦೬

೩೪.೯೩

೪. ಯರೇಹಂಚಿನಾಳ ಗ್ರಾ.ಪಂ.

೫೬.೯೧

೭೪.೧೬

೩೮.೩೬

೫. ಕಬ್ಬರಗಿ ಗ್ರಾಪಂ.

೪೫.೦೦

೬೪.೮೬

೨೫.೨೧

ಮೂಲ: ಸೆನ್ಸಸ್ ೨೦೦೧ ಮತ್ತು ಕ್ಷೇತ್ರಕಾರ್ಯ ಮಾಹಿತಿ

ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತಾ ಪ್ರಮಾಣವು, ರಾಜ್ಯದ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೭.೭ ಅಂಶಗಳಷ್ಟು ಕಡಿಮೆ. ಈ ಜಿಲ್ಲೆಯ ಗ್ರಾಮೀಣ ಮಹಿಳೆಯರ ಸಾಕ್ಷರತೆಯು ರಾಜ್ಯದ ಗ್ರಾಮೀಣ ಮಹಿಳೆಯ ಒಟ್ಟು ಸಾಕ್ಷರತೆಗಿಂತ ಶೇಕಡ ೧೧.೪೮ ಅಂಶಗಳಷ್ಟು ಕಡಿಮೆ ಇದ್ದರೆ, ಪುರುಷರ ಸಾಕ್ಷರತೆ ಶೇಕಡ ೩.೭೫ ಅಂಶಗಳಷ್ಟು ಕಡಿಮೆ ಇದೆ. ವಿಶೇಷವೆಂದರೆ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಯಲಬರ್ಗಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆ ಶೇಕಡ ೩.೦೦ ಅಂಶಗಳಷ್ಟು ಹೆಚ್ಚಾಗಿರುವುದು. ಕೊಪ್ಪಳ ಜಿಲ್ಲೆಯ ಗ್ರಾಮಿಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಕುಷ್ಟಗಿ ತಾಲ್ಲೂಕಿನ ಒಟ್ಟು ಸಾಕ್ಷರತೆಯು ಶೇಕಡ ೨.೬೯ ಅಂಶಗಳಷ್ಟು ಕಡಿಮೆಯಿದ್ದರೆ, ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೦.೫೧ ಅಂಶಗಳಷ್ಟು ಮತ್ತು ಗ್ರಾಮೀಣ ಮಹಿಳೆಯರ ಸಾಕ್ಷರತೆ ಶೇಕಡ ೫.೦೦ ಅಂಶಗಳಷ್ಟು ಕಡಿಮೆ ಇದೆ.

10_23_EKPSMS-KUH

೩.೧೦. ಯರೇಹಂಚಿನಾಳ ಗ್ರಾಮಪಂಚಾಯತಿ ಸಾಕ್ಷರತೆ

ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಒಟ್ಟು ಸಾಕ್ಷರತೆ ಶೇಕಡ ೫೬.೯೧ ರಷ್ಟಿದೆ. ಇಲ್ಲಿ ಮಹಿಳೆಯರ ಸಾಕ್ಷರತೆ ಶೇಕಡ ೩೮.೩೯ ರಷ್ಟಿದ್ದರೆ, ಪುರಷರ ಸಾಕ್ಷರತಾ ಪ್ರಮಾಣ ಶೇಕಡ ೭೪.೧೬ ರಷ್ಟಿದೆ. ಯರೇಹಂಚಿನಾಳ ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಯು ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶ ಒಟ್ಟು ಸಾಕ್ಷರತೆಗಿಂತ ಶೇಕಡ ೪.೯೩ ಅಂಶಗಳಷ್ಟು ಅಧಿಕವಾಗಿದೆ. ಯಲಬುರ್ಗಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಯರೇಹಂಚಿನಾಳ ಗ್ರಾಮಪಂಚಾಯತಿಯ ಸಾಕ್ಷರತೆ ಶೇಕಡ ೧.೬೩ ಅಂಶಗಳಷ್ಟು ಅಧಿಕವಾಗಿದೆ. ಯರೇಹಂಚಿನಾಳ ಗ್ರಾಮಪಂಚಾಯತಿಯ ಮಹಿಳೆಯರ ಸಾಕ್ಷರತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧.೩೭ ಅಂಶಗಳಷ್ಟು ಅಧಿಕವಾಗಿದೆ. ಆದರೆ ಯಲಬುರ್ಗಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೨.೨ ಅಂಶಗಳಷ್ಟು ಕಡಿಮೆ. ರಾಜ್ಯದ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಯರೇಹಂಚಿನಾಳ ಗ್ರಾಮಪಂಚಾಯತಿ ಮಹಿಳೆಯರ ಸಾಕ್ಷರತೆಯು ಶೇಕಡ ೧೦.೧೧ ಅಂಶಗಳಷ್ಟು ಕಡಿಮೆ. ಆದರೆ ಯರೇಹಂಚಿನಾಳ ಗ್ರಾಮಪಂಚಾಯತಿ ಪುರುಷರ ಸಾಕ್ಷರತೆ ರಾಜ್ಯದ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೩.೫೩ ಅಂಶಗಳಷ್ಟು, ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರಿಗಿಂತ ಶೇಕಡ ೭.೨೮ ಅಂಶಗಳಷ್ಟು ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೪.೭೮ ಅಂಶಗಳಷ್ಟು ಹೆಚ್ಚಾಗಿದೆ.

ಯರೇಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೂರು ಗ್ರಾಮಗಳಾದ ಯರೇಹಂಚಿನಾಳ, ಭಿನ್ನಾಳ ಮತ್ತು ಸಿದ್ನೇಕೊಪ್ಪಗಳಲ್ಲಿ ಸಾಕ್ಷರತೆಯನ್ನು ತಾಳೆ ನೋಡುವುದರಿಂದ ಗ್ರಾಮಪಂಚಾಯತಿ ಒಳಗೆ ಇರುವ ಭಿನ್ನತೆಗಳನ್ನು ಕಂಡುಕೊಳ್ಳಬಹುದಾಗಿದೆ. ಯರೇಹಂಚಿನಾಳ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೯.೦೯ ರಷ್ಟಿದೆ. ಇದು ಜಿಲ್ಲೆಯ ಒಟ್ಟು ಗ್ರಾಮೀಣ ಸಾಕ್ಷರತೆಗಿಂತ ಶೇಕಡ ೭.೧೧ ಅಂಶಗಳಷ್ಟು, ತಾಲ್ಲೂಕಿನ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೩.೧೦ ಅಂಶಗಳಷ್ಟು ಅಧಿಕವಾಗಿದೆ. ಆದರೆ ಒಟ್ಟು ಗ್ರಾಮಪಂಚಾಯತಿಯ ಸಾಕ್ಷರತೆಗಿಂತ ಶೇಕಡ ೦.೮೨ ಅಂಶಗಳಷ್ಟು ಕಡಿಮೆ. ಈ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೭೬.೨೬ ರಷ್ಟಿದೆ. ಇದು ಗ್ರಾಮಪಂಚಾಯತಿಯಲ್ಲಿಯೇ ಅತ್ಯಧಿಕ ಸಾಕ್ಷರತಾ ಪ್ರಮಾಣವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರಷರ ಸಾಕ್ಷರತೆಗಿಂತ ಶೇಕಡ ೯.೩೮ ಅಂಶಗಳಷ್ಟು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೬.೯೨ ಅಂಶಗಳಷ್ಟು ಅಧಿಕವಾಗಿದೆ. ಯರೇಹಂಚಿನಾಳ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೪೦.೩೭ ರಷ್ಟಿದೆ. ಇದು ಗ್ರಾಮ ಪಂಚಾಯತಿಯಲ್ಲಿ ಬರುವ ಇತರ ಗ್ರಾಮಗಳಿಗಿಂತ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೩.೩೫ ಅಂಶಗಳಷ್ಟು ಅಧಿಕವಾಗಿದ್ದರೆ, ಯಲಬುರ್ಗಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೦.೨೨ ಅಂಶಗಳಷ್ಟು ಕಡಿಮೆ ಇದೆ.

ಕೋಷ್ಟಕ ೩.೮ – ಕೊಪ್ಪಳ ತಾಲ್ಲೂಕುವಾರು ಅಕ್ಷರಸ್ಥರು ಮತ್ತು ಸಾಕ್ಷರತೆ

ಜಿಲ್ಲೆ / ತಾಲ್ಲೂಕು

ಒಟ್ಟು / ಗ್ರಾಮೀಣ / ನಗರ

ಜಿಲ್ಲೆ / ತಾಲ್ಲೂಕಿನ ಒಟ್ಟು ಜನಸಂಖ್ಯೆ

ಅಕ್ಷರಸ್ಥರು

ಸಾಕ್ಷರತೆ

ಒಟ್ಟು

ಪುರುಷರು

ಮಹಿಳೆಯರು

ಒಟ್ಟು

ಪುರುಷರು

ಮಹಿಳೆಯರು

ಕೊಪ್ಪಳ ಜಿಲ್ಲೆ ಒಟ್ಟು

೧೧೯೩೪೯೬

೫೪೭೩೪೫

೩೪೫೪೫೭

೨೦೧೮೮೮

೫೫.೦೨

೬೯.೧೫

೪೦.೭೬

ಗ್ರಾಮೀಣ

೯೯೫೨೨೪

೪೨೮೯೨೦

೨೭೬೫೩೧

೧೫೨೩೮೯

೫೧.೯೮

೬೬.೮೮

೩೭.೦೨

ನಗರ

೧೯೮೨೭೨

೧೧೮೪೨೫

೬೮೯೨೬

೪೯೪೯೯

೬೯.೭೯

೮೦.೦೯

೫೯.೧೮

ಯಲಬುರ್ಗಾ ಒಟ್ಟು

೨೩೫೨೬೩

೧೦೯೭೬೦

೬೯೧೨೨

೪೦೬೩೮

೫೫.೬೩

೬೯.೯೩

೪೧.೨೮

ಗ್ರಾಮೀಣ

೨೨೩೮೨೬

೧೦೩೧೨೮

೬೫೧೪೬

೩೭೯೮೨

೫೪.೯೯

೬೯.೩೪

೪೦.೫೯

ನಗರ

೧೧೪೩೭

೬೬೩೧

೩೯೭೬

೨೬೫೬

೬೭.೮೭

೮೧.೧೪

೫೪.೫೯

ಕುಷ್ಠಗಿ ಒಟ್ಟು

೨೩೯೨೫೯

೧೦೧೮೨೩

೬೭೬೨೧

೩೪೨೦೨

೫೧.೬೨

೬೮.೦೬

೩೪.೯೩

ಗ್ರಾಮೀಣ

೨೧೮೦೭೯

೮೮೩೦೭

೫೯೭೮೭

೨೮೫೨೦

೪೯.೨೯

೬೬.೩೭

೩೨.೦೨

ನಗರ

೨೧೧೮೦

೧೩೫೧೬

೭೮೩೪

೫೬೮೨

೭೪.೫೪

೮೪.೪೬

೬೪.೧೫

ಗಂಗಾವತಿ ಒಟ್ಟು

೪೦೫೦೭೬

೧೮೨೮೮೯

೧೧೩೫೪೪

೬೯೩೪೫

೫೩.೯೩

೬೭.೧೭

೪೦.೭೮

ಗ್ರಾಮೀಣ

೩೦೩೬೭೯

೧೨೫೧೬೬

೭೯೫೬೪

೪೫೬೦೨

೪೯.೫೫

೬೩.೪೭

೩೫.೮೪

ನಗರ

೧೦೧೩೯೭

೫೭೭೨೩

೩೩೯೮೦

೨೩೭೪೩

೬೬.೭೨

೭೭.೭೮

೫೫.೪೩

ಕೊಪ್ಪಳ ಒಟ್ಟು

೩೧೩೮೯೮

೧೫೨೮೭೩

೯೫೧೭೦

೫೭೭೦೩

೫೮.೫೩

೭೧.೯೪

೪೪.೭೬

ಗ್ರಾಮೀಣ

೨೪೯೬೪೦

೧೧೨೩೧೯

೭೨೦೩೪

೪೦೨೮೫

೫೪.೫೪

೬೯.೨೦

೩೯.೭೬

ನಗರ

೮೮೧೭೨೬

೬೨೫೨೨೭

೩೪೬೯೧೬

೨೭೮೩೧೧

೭೩.೩೭

೮೨.೦೭

೬೪.೩೧

ಮೂಲ: ಸೆನ್ಸಸ್‌೨೦೦೧ ಮತ್ತು ಅಭಿವೃದ್ಧಿ ಅಧ್ಯಯನ ೨೦೦೩.

ಭಿನ್ನಾಳ ಗ್ರಾಮದ ಒಟ್ಟು ಸಾಕ್ಷರತೆ ೫೪.೦೭ ರಷ್ಟಿದೆ. ಇದು ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಶೇಕಡ ೨.೮೪ ಅಂಶಗಳಷ್ಟು ಯಲಬುರ್ಗಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೦.೯೨ ಅಂಶಗಳಷ್ಟು ಕಡಿಮೆ. ಆದರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೨.೦೯ ಅಂಶಗಳಷ್ಟು ಭಿನ್ನಾಳ ಗ್ರಾಮದ ಸಾಕ್ಷರತೆ ಅಧಿಕವಾಗಿದೆ. ಈ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೭೦.೬೭ ರಷ್ಟಿದೆ. ಗ್ರಾಮಪಂಚಾಯತಿಯ ಪುರುಷರ ಸಾಕ್ಷರತೆಗಿಂತ ಶೇಕಡ ೨.೪೯ ಅಂಶಗಳಷ್ಟು ಕಡಿಮೆ. ಆದರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೪.೭೯ ಅಂಶಗಳಷ್ಟು ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೨.೩೩ ಅಂಶಗಳಷ್ಟು ಅಧಿಕವಾಗಿದೆ. ಭಿನ್ನಾಳ ಗ್ರಾಮದ ಮಹಿಳೆಯರ ಸಾಕ್ಷರತೆ ಒಟ್ಟು ಗ್ರಾಮಪಂಚಾಯತಿಯ ಸಾಕ್ಷರತೆಗಿಂತ ಶೇಕಡ ೨.೩೭ ಅಂಶಗಳಷ್ಟು ಜಿಲ್ಲೆಯ ಗ್ರಾಮೀಣ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧.೦೦ ಅಂಶಗಳಷ್ಟು ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೪.೫೭ ಅಂಶಗಳಷ್ಟು ಕಡಿಮೆ ಇದೆ.

ಸಿದ್ನೇಕೊಪ್ಪ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೭.೦೭ ರಷ್ಟಿದೆ. ಇದು ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಶೇಕಡ ೦೦.೧೧ ಅಂಶಗಳಷ್ಟು ಹೆಚ್ಚಾಗಿದೆ. ಈ ಗ್ರಾಮದ ಸಾಕ್ಷರತೆ ಕೊಪ್ಪಳ ಜಿಲ್ಲೆಯ ಹಾಗೂ ಯಲಬುರ್ಗಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೫.೦೪ ಅಂಶಗಳಷ್ಟು ಮತ್ತು ಶೇಕಡ ೨.೦೩ ಅಂಶಗಳಷ್ಟು ಅಧಿಕವಾಗಿದೆ. ಸಿದ್ನೇಕೊಪ್ಪ ಗ್ರಾಮದ ಪುರುಷರ ಸಾಕ್ಷರತೆ ಗ್ರಾಮಪಂಚಾಯತಿಯ ಒಟ್ಟು ಪುರುಷರ ಸಾಕ್ಷರತೆಗಿಂತ ಶೇಕಡ ೦.೮೯ ಅಂಶಗಳಷ್ಟು ಕಡಿಮೆ. ಇದು ಜಿಲ್ಲೆ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೬.೩೯ ಅಂಶಗಳಷ್ಟು ಮತ್ತು ಶೇಕಡ ೩.೯೩ ಅಂಶಗಳಷ್ಟು ಅಧಿಕವಾಗಿದೆ. ಸಿದ್ನೇಕೊಪ್ಪ ಗ್ರಾಮದ ಮಹಿಳೆಯರ ಸಾಕ್ಷರತೆ ಗ್ರಾಮಪಂಚಾಯತಿ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧.೯೯ ಅಂಶಗಳಷ್ಟು ಅಧಿಕವಾಗಿದೆ. ಕೊಪ್ಪಳ ಜಿಲ್ಲೆ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೩.೩೨ ಅಂಶಗಳಷ್ಟು ಹೆಚ್ಚಾಗಿದ್ದರೆ, ಯಲಬುರ್ಗಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೦.೨೫ ಅಂಶಗಳಷ್ಟು ಕಡಿಮೆ ಇದೆ.

ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಪುರುಷರ ಸಾಕ್ಷರತೆ ಮಹಿಳೆಯರ ಸಾಕ್ಷರತೆಗಿಂತ ಅತ್ಯಧಿಕವಾಗಿದೆ. ಈ ಪಂಚಾಯತಿಯಲ್ಲಿ ಪುರುಷರ ಅತ್ಯಧಿಕ ಸಾಕ್ಷರತೆ ಶೇಕಡ ೭೬.೨೬ ರಷ್ಟು ಯರೇಹಂಚಿನಾಳ ಗ್ರಾಮದಲ್ಲಿ ಇದ್ದರೆ, ಮಹಿಳೆಯರ ಅತ್ಯಧಿಕ ಸಾಕ್ಷರತೆ ಶೇಕಡ ೪೦.೩೭ ರಷ್ಟು ಅದೇ ಗ್ರಾಮದಲ್ಲಿದೆ. ಇಲ್ಲಿ ಸಾಕ್ಷರತೆಯ ಲಿಂಗತಾರತಮ್ಯ ಶೇಕಡ ೩೫.೮೯ ಅಂಶಗಳಷ್ಟಿದೆ. ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೭೧.೬೭ ಭಿನ್ನಾಳ ಗ್ರಾಮದಲ್ಲಿದ್ದರೆ, ಮಹಿಳೆಯರ ಅತಿಕಡಿಮೆ ಸಾಕ್ಷರತೆ ಶೇಕಡ ೩೬.೦೨ರಷ್ಟು ಭಿನ್ನಾಳ ಗ್ರಾಮದಲ್ಲಿಯೇ ಇದೆ. ಇಲ್ಲಿ ಸಾಕ್ಷರತೆಯ ಲಿಂಗತಾರತಮ್ಯ ಶೇಕಡ ೩೫.೬೫ ಅಂಶಗಳಷ್ಟಿದೆ. ಒಟ್ಟಾರೆ ಯರೇಹಂಚಿನಾಳ ಗ್ರಾಮವು ಸಾಕ್ಷರತೆಯಲ್ಲಿ ಉತ್ತಮ ಸಾಧನೆ ತೋರಿದರೆ, ಸಿದ್ನೇಕೊಪ್ಪ ಗ್ರಾಮವು ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಮಧ್ಯಗತಿಯಲ್ಲಿದ್ದರೆ, ಸಾಕ್ಷರತೆ ದೃಷ್ಟಿಯಿಂದ ಭಿನ್ನಾಳ ಗ್ರಾಮ ಕೊನೆಯ ಸ್ಥಾನ ಪಡೆದಿದೆ.