ಭಾಗ

.. ಪ್ರಾಥಮಿಕ ಶಿಕ್ಷಣಕ್ಕೆ ತಗಲುವ ಖಾಸಗಿ ವೆಚ್ಚ

ಪ್ರಾಥಮಿಕ ಶಿಕ್ಷಣ ಎಲ್ಲರಿಗೂ ಉಚಿತವಾಗಿ ನೀಡಬೇಕು ಎಂಬುದು ಸಂವಿಧಾನದ ಹಕ್ಕು ಎಂಬ ನಂಬಿಕೆ ಇದೆ. ಇದು ಉಚಿತವಾಗಿರಬಹುದು ಅಥವಾ ಉಚಿತಕ್ಕೆ ಸ್ವಲ್ಪ ಹತ್ತಿರವಿರಬಹುದು. ನಿಯಮಾನುಸಾರ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಸರಾಸರಿ ಪ್ರತಿ ವಿದ್ಯಾರ್ಥಿಗೆ ೧೫ ರೂ.ಗಳಾಗಿದೆ. ಇದು ಅತ್ಯಂತ ಕಡಿಮೆಯಾಗಿದೆ. ಆದರೆ ಇದರ ನಿರ್ದಿಷ್ಟ ಅರ್ಥ ಶಿಕ್ಷಣ ಉಚಿತ ಎಂದಲ್ಲ. ಇದು ಪೋಷಕರ ಖಾಸಗಿ ಶಾಲಾ ಖರ್ಚು ವೆಚ್ಚಗಳನ್ನು ಸೇರಿಸಿಕೊಂಡಿಲ್ಲ. ಇತ್ತೀಚಿನ ಸಮೀಕ್ಷೆಗಳು ಸೂಚಿಸುವಂತೆ ಶಿಕ್ಷಣಕ್ಕೆ ಮಾಡುವ ಖಾಸಗಿ ನಗದು ಖರ್ಚು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳು ಶಾಲೆಗೆ ಬರದಂತೆ ಎದೆಗುಂದಿಸುತ್ತದೆ. ಉತ್ತಮ ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ದೊರಕದೆ ಇದ್ದಾಗ ಈ ಅಂಶ ಎದ್ದುಕಾಣುತ್ತದೆ.

ಸರ್ಕಾರಿ ಪ್ರಥಾಮಿಕ ಶಾಲೆಗೆ ಕಳುಹಿಸಲು ಪೋಷಕರಿಗೆ ಪ್ರತಿ ವರ್ಷಕ್ಕೆ ಒಂದು ಮಗುವಿಗೆ ಎಷ್ಟು ಖರ್ಚು ಬರುತ್ತದೆ ಎಂಬುದನ್ನು ಎನ್.ಎಸ್.ಎಸ್ (೧೮೬-೮೭), ಎನ್.ಸಿ.ಎ. ಇ.ಆರ್ (೧೯೯೪) ಸಂಸ್ಥೆಗಳು ಹಾಗೂ ಪ್ರೋಬ್ ತಂಡ ಸಮೀಕ್ಷೆ (೧೯೯೯) ನಡೆಸಿವೆ. ಈ ಸಮೀಕ್ಷೆಗಳು ಒಂದು ಮಗುವಿಗೆ ಕ್ರಮವಾಗಿ ೨೧೨ರೂಪಾಯಿಗಳು, ೪೭೮ ರೂಪಾಯಿಗಳು ಮತ್ತು ೩೧೮ ರೂಪಾಯಿಗಳಷ್ಟು ಖಾಸಗಿ ಖರ್ಚು ಬರುತ್ತದೆ ಎಂದು ಅಂದಾಜು ಮಾಡಿವೆ. ಈ ಖರ್ಚು ವೆಚ್ಚಗಳು ಮುಖ್ಯವಾಗಿ ಫೀ, ಸ್ಲೇಟ್, ನೋಟ್‌ಬುಕ್, ಸೀಸದ ಕಡ್ಡಿ, ಪೆನ್, ಬಳಪ, ಮನೆಪಾಠ, ಶಾಲಾ ಸಾಂಸ್ಕೃತಿಕ ಚಟುವಟಿಕೆಗಳು ಇತ್ಯಾದಿ ಒಳಗೊಂಡಿವೆ. ಪ್ರಸ್ತುತ ಅಧ್ಯಯನದಲ್ಲಿಯೂ ಇದೇ ಮಾದರಿಯಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಒಂದು ವರ್ಷಕ್ಕೆ ಎಷ್ಟು ಖರ್ಚುಬರುತ್ತದೆ ಎಂಬುದನ್ನು ಅಂದಾಜು ಮಾಡಲು ಪ್ರಯತ್ನಿಸಿದೆ (ತಿಲಕ್, ೧೯೯೬, ೨೦೦೦ಎ, ೨೦೦೦ಬಿ).

ಪ್ರಾಥಮಿಕ ಶಿಕ್ಷಣಕ್ಕಾಗಿ ಒಂದು ವರ್ಷಕ್ಕೆ ಒಂದು ಮಗುವಿಗೆ ವಾರ್ಷಿಖ ಖರ್ಚು ಎಷ್ಟು ಎಂಬ ಪ್ರಶ್ನೆಗೆ ನಮ್ಮ ಅದ್ಯಯನದಲ್ಲಿ ಸಮೀಕ್ಷೆ ಒಳಪಡಿಸಿದ ಕುಟುಂಬಗಳ ಉತ್ತರವನ್ನು ಮುಂದೆ ವಿವರಿಸಲಾಗಿದೆ. ಒಟ್ಟು ೪೨೪ ಕುಟುಂಬಗಳಲ್ಲಿ ಶೇಕಡ ೪೨.೨೧ರಷ್ಟು (೧೭೯) ಕುಟುಂಬಗಳು ಒಂದು ಮಗುವನ್ನು ಪ್ರಾಥಮಿಕ ಶಾಲೆಗೆ ಕಳುಹಿಸಲು ಕನಿಷ್ಠ ೫೦೦ ರೂಪಾಯಿಗಳಿಂದ ೧೦೦೦ ರೂಪಾಯಿಗಳವರೆಗೆ ಖಾಸ್ಗಿ ಖರ್ಚು ಬರುತ್ತದೆ ಎಂದು ಹೇಳಿವೆ. ಶೇಕಡ ೩೩.೨೫ರಷ್ಟು (೧೪೧) ಕುಟುಂಬಗಳು ೧೦೦೦ ರೂಪಾಯಿಗಳಿಂದ ೧೫೦೦ ರಾಪೂಯಿಗಳಷ್ಟು ವೆಚ್ಚವಾಗುತ್ತದೆ ಎಂದು, ಶೇಕಡ ೧೨.೯೭ರಷ್ಟು (೫೫) ಕುಟುಂಬಗಳು ೧೫೦೦ ರೂಪಾಯಿಗಳಿಂದ ೨೦೦೦ ರೂಪಾಯಿಗಳಷ್ಟು ವೆಚ್ಚವಾಗುತ್ತದೆ ಎಂದು ಉತ್ತರಿಸಿವೆ. ವಿಶೇಷವೆಂದರೆ ಶೇಕಡ ೧೧.೫೫ರಷ್ಟು (೪೯) ಕುಟುಂಬಗಳು ಈ ವೆಚ್ಚ ಎಷ್ಟಾಗುತ್ತದೆ ಎಂದು ಗೊತ್ತಾಗೊಲ್ಲ ಎಂದು ಹೇಳಿವೆ. ಹೀಗೆ ನಮ್ಮ ಅಧ್ಯಯನ ಸಂದರ್ಭದಲ್ಲಿ ಸ್ವಲ್ಪಕಡಿಮೆ ಅರ್ಧದಷ್ಟು ಕುಟುಂಬಗಳು ಕನಿಷ್ಠ ೧೦೦೦ ರೂಪಾಯಿಗಳು ಪ್ರತಿ ಮಗುವಿನ ಒಂದು ವರ್ಷದ ಪ್ರಾಥಮಿಕ ಶಿಕ್ಷಣಕ್ಕೆ ಖರ್ಚು ಮಾಡುತ್ತಿರುವುದು ತಿಳಿದುಬರುತ್ತದೆ.

ಕೋಷ್ಟಕ . – ಪ್ರಾಥಮಿಕ ಶಿಕ್ಷಣಕ್ಕೆ ಪ್ರತಿ ಮಗುವಿಗೆ ತಗುಲಬಹುದಾದ ಶಾಲಾ ವೆಚ್ಚ ರೂಪಾಯಿಗಳಲ್ಲಿ

ಕ್ರಸಂ.

ಅಂದಾಜು ಮೊತ್ತ ರೂಪಾಯಿಗಳಲ್ಲಿ

ಕುಟುಂಬಗಳ ಸಂಖ್ಯೆ

ಶೇಕಡವಾರು
ಪ್ರಮಾಣ

೧. ೫೦೦-೧೦೦೦ ರೂಪಾಯಿಗಳು

೧೭೯

೪೨.೨೧

೨. ೧೦೦೧-೧೫೦೦ ರೂಪಾಯಿಗಳು

೧೪೧

೩೩.೨೫

೩. ೧೫೦೧-೨೦೦೦ ರೂಪಾಯಿಗಳು

೫೫

೧೨.೯೭

೪. ಗೊತ್ತಾಗಿಲ್ಲ

೪೯

೧೧.೫೫

೫. ಒಟ್ಟು

೪೨೪

೧೦೦

ಮೂಲ: ಕ್ಷೇತ್ರಕಾರ್ಯದ ಮಾಹಿತಿ

ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಿಗೆ ಯಾವ ಬೆಗಯ ಖರ್ಚು ಬರುತ್ತದೆ ಎಂಬುದಕ್ಕೆ ಅವರ ಅಭಿಪ್ರಾಯ ಹೀಗಿದೆ. ಸರ್ಕಾರದಿಂದ ಪುಸ್ತಕ ಮಾತ್ರ ಉಚಿತವೆನಿಸುತ್ತದೆ. ಶಾಲಾ ಬಟ್ಟೆಯನ್ನು (ಸಮವಸ್ತ್ರ) ಒಂದು ಜೊತೆ ವರ ಸರಕಾರ ನೀಡುತ್ತದೆ. ಆ ಬಟ್ಟೆ ಹೆಚ್ಚಿನ ಮಟ್ಟಿಗೆ ಉದ್ದ ಅಥವಾ ತುಂಡಾಗಿರುತ್ತದೆ. ಅದನ್ನು ಮರು ಹೋಲಿಗೆ ಮಾಡದೆ ನೇರವಾಗಿ ತೊಡಲು ಬರುವದಿಲ್ಲ. ಅಲ್ಲದೆ ಪ್ರತಿದಿನ ಶಾಲೆಗೆ ಹೋಗುವ ಮಕ್ಕಳಿಗೆ ಒಂದೇ ಜೊತೆ ಬಟ್ಟೆ ಸಾಕಾಗುವುದಿಲ್ಲ. ಅಲ್ಲದೆ ಪ್ರತಿದಿನ ಶಾಲೆಗೆ ಹೋಗುವ ಮಕ್ಕಳಿಗೆ ಒಂದೇ ಜೊತೆ ಬಟ್ಟೆ ಸಾಕಾಗುವುದಿಲ್ಲ. ಆದುದರಿಂದ ನಮ್ಮ ಹಣದಿಂದ ಮಕ್ಕಳಿಗೆ ಕನಿಷ್ಠ ಎರಡು ಜೊತೆ ಹೊಸ ಬಟ್ಟೆಯನ್ನಾದರೂ ಖರೀದಿಸಬೇಕು. ಇದಕ್ಕೆ ಕನಿಷ್ಠ ೨೦೦ ರೂಪಾಯಿಗಳಿಂದ ೪೫೦ ರೂಪಾಯಿಗಳಾಗುತ್ತವೆ. ಸ್ಲೇಟ್, ಪುಸ್ತಕ, ನೋಟ್ ಬುಕ್, ಇತ್ಯಾದಿಗಳನ್ನು ಶಾಲೆಗೆ ತೆಗೆದುಕೊಂಡು ಹೋಗಲು ಮಕ್ಕಳಿಗೆ ಕನಿಷ್ಟ ಎರಡು ಜತೆ ಹೊಸ ಬಟ್ಟೆಯನ್ನಾದರೂ ಖರೀದಿಸಬೇಕು. ಇದಕ್ಕೆ ಕನಿಷ್ಠ ೨೦೦ ರೂಪಾಯಿಗಳಿಂದ ೪೫೦ ರೂಪಾಯಿಗಳಾಗುತ್ತವೆ. ಸ್ಲೇಟ್, ಪುಸ್ತಕ, ನೋಟ್ಬುಕ್, ಇತ್ಯಾದಿಗಳನ್ನು ಶಾಲೆಗೆ ತೆಗೆದುಕೊಂಡು ಹೋಗಲು ಮಕ್ಕಳಿಗೆ ವರ್ಷಕ್ಕೆ ಕನಿಷ್ಟ ಎರಡು ಶಾಲಾ ಬ್ಯಾಗ್ ಬೇಕಾಗುತ್ತದೆ.ಇದಕ್ಕೆ ವಾರ್ಷಿಕವಾಗಿ ಕನಿಷ್ಠ ೧೦೦ ರೂಪಾಯಿ ಬೇಕಾಗುತ್ತದೆ. ಪುಸ್ತಕ ಕಳೆದು ಹೋದಾಗ, ಅಥವಾ ಹರಿದಾಗ ಹೊಸ ಪುಸ್ತಕ, ನೋಟ್ ಬುಕ್, ಕಾಫಿ ಬರವಣಿಗೆಯ ಪುಸ್ತಕ, ಪೆನ್, ಸೀಸದಕಡ್ಡಿ, ಬಳಪ ಇತ್ಯಾದಿ ದಿನನಿತ್ಯದ ಶಾಲಾ ಅವಶ್ಯಕತೆಗಳಿಗೆ ೩೦೦ ರೂಪಾಯಿಗಳು ವಾರ್ಷಿಕವಾಗಿ ಬೇಕು. ರಾಷ್ಟ್ರೀಯಬ್‌ಬ ಮತ್ತು ಸಾಂಸ್ಕೃತಿಕ ಆಚರಣೆಗಳ ಸಂದರ್ಭದಲ್ಲಿ ಮಕ್ಕಳಿಗೆ ಕನಿಷ್ಟ ೫೦ ರಿಂದ ೧೦೦ ರೂಪಾಯಿಗಳ ವರೆಗೆ ನೀಡಬೇಕು. ಕೆಲವರು ಮನೆಯಲ್ಲಿ ಮಕ್ಕಳಿಗೆ ಓದು ಹೇಳಿಕೊಡಲು ನಮಗೆ ಸಾಧ್ಯವಿಲ್ಲ. ಹೀಗಾಗಿ ಮಕ್ಕಲನ್ನು ಮನೆ ಪಾಠಕ್ಕೆ ಕಳುಹಿಸುತ್ತೇವೆ. ಅದಕ್ಕಾಗಿ ವಾರ್ಷಿಕ ೨೦೦ ರೂಪಾಯಿಗಳಿಂದ ೩೫೦-೪೦೦ ರೂಪಾಯಿಗಳು ಬೇಕಾಗುತ್ತದೆ.ಹೀಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಗಲಬಹುದಾಗ ಖರ್ಚು ವೆಚ್ಚಗಳ ಪಟ್ಟಿಯನ್ನು ನೀಡುತ್ತಾರೆ. ಈ ಅಂಕಿ-ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಂದು ಮಗುವನ್ನು ಪ್ರಾಥಮಿಕ ಶಾಲೆಗೆ ಕಳುಹಿಸಲು ಕನಿಷ್ಠ ೧೦೦೦ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನ ಹಣ ಬೇಕಾಗುತ್ತದೆ ಎಂಬ ನಿರ್ಧಾರಕ್ಕೆ ನಾವು ಬರಬಹುದು. ಹೀಗಾಗಿ ಉಚಿತ ಶಿಕ್ಷಣ ಎಲ್ಲಿದೆ ಎಂದು ಸಂಶೋಧಿಸಬೇಕಾಗಿದೆ. ನಗರ ಪ್ರದೇಶದ ಶಾಲಾ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಎಂದು ನಾವು ಭಾವಿಸಿದ್ದರೂ ಇದು ವಿಶೇಷವಾಗಿ ಬಡತನದ ರೇಖೆಯಲ್ಲಿ ಮತ್ತು ಆ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಿಗೆ ಪ್ರಮುಖ ಹಣಕಾಸಿನ ಹೊರೆಯಾಗುತ್ತದೆ.

ಈ ಎಲ್ಲಾ ಖರ್ಚುಗಳು ಮಾಡಿದರೂ ಮಕ್ಕಳು ಶಾಲೆಗೆ ಬರುವ ರೀತಿ ಮಾತ್ರ ಬದಲಾವಣೆಯಾಗಿಲ್ಲ. ಅಧ್ಯಯನ ನಡೆಸಿದ ೨೦ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಬರುವಾಗ ಕೊಳೆತ ಬಟ್ಟೆ, ಹರಿದ ಬ್ಯಾಗ್, ಹರಿದ ಪುಸ್ತಕ ಮತ್ತು ನೋಟ್ ಬುಕ್, ಒಡೆದ ಸ್ಲೇಟ್, ಮುರಿದ ಬಳಪ ಅಥವಾ ಸೀಸದಕಡ್ಡಿ ಹಾಗೂ ಕನಿಷ್ಠ ಮಟ್ಟದ ಶುಚಿತ್ವ ಇಲ್ಲದಿರುವುದನ್ನು ನಾವು ಅಧ್ಯಯನ ನಡೆಸಿದ ಶಾಲೆಯಲ್ಲಿ ನೋಡಿದ್ದೇವೆ.

. ಶಾಲೆಯಿಂದ ಹೊರಗಿರುವ ಮಕ್ಕಳು ದುಡಿಯುತ್ತಿದ್ದಾರೆಯೇ?

ಶಾಲೆಯಿಂದ ಹೊರಗೆ ಇರುವ ಮಕ್ಕಳು ಶಿಕ್ಷಣ ಪಡೆಯುವುದು ಕಷ್ಟ.ಏಕೆಂದರೆ ಅವರು ಕೆಲಸ ಮಾಡುತ್ತಾರೆ ಎಂಬ ಸಾಮಾನ್ಯ ಅಭಿಪ್ರಾಯ ಇದೆ. ಈ ನಂಬಿಕೆಗೆ ಉತ್ತೇಜನಕಾರಿಯಾಗಿ ಬಾಲಕಾರ್ಮಿಕರು ನಿರ್ದಿಷ್ಟ ಪ್ರದೇಶ ಮತ್ತು ವೃತ್ತಿಗಳಲ್ಲಿ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುತ್ತಿರುವುದು ಆಶ್ಚರ್ಯಕರ. ಅವೆಂದರೆ ಬೆಂಗಳೂರಿನಂತಹ ನಗರಗಳಲ್ಲಿ, ಹೋಟೆಲ್ ಕೆಲಸ, ಮೀಟರ್ ರೀಪೇರಿ ಶಾಪ್‌ಗಳಲ್ಲಿ ಸಹಾಯಕರಾಗಿ ದುಡಿಯುವುದು, ಬಡಗಿ ಕೆಲಸ, ಬಳೆ ಮಾಡುವ ಕೆಲಸ, ಪಾಟಾಕಿ ಕಾರ್ಖಾನೆಗಳಲ್ಲಿ ಕೆಲಸ, ಇನ್ನೂ ಮುಂತಾದ ಕೆಲಸಗಳು. ಇಂತಹ ಸಂಘಟನೆಗನ್ಲ್ಲಿ ಸುಮಾರು ೬೫ ಮಿಲಿಂiಗೂ ಹೆಚ್ಚಿನ ಮಕ್ಕಳು ದಿನದಲ್ಲಿ ೮ ಗಂಟೆಗಳ ಕಾಲ ಅಥವಾ ಇನ್ನೂ ಹೆಚ್ಚಿನ ಕಾಲ ದುಡಿಯುತ್ತಿದ್ದಾರೆ (ಬೊರ್ರ‍ಾ ನೇಹ್ರಾ, ೧೯೯೫, ಕಂಬರ್ಗಿ, ೧೯೯೧, ವೇನರ್, ೧೯೯೧, ಕಬೀರ್ ನೈಲ, ೨೦೦೧, ದೊರೆಸ್ವಾಮಿ ಮಾಲತಿ, ೨೦೦೦, ಲಿಕ್ಲಾರ್ಕ್ ಫನ್‌ಕೊಸ್ಸ್, ೨೦೦೧ ಎ, ೨೦೦೧ ಬಿ). ಈ ಹಿನ್ನೆಲೆಯಲ್ಲಿ ಕಾಡುವ ಪ್ರಶ್ನೆ ಎಂದರೆ ೬೫ ಮಿಲಿಯನ್ ಹೆಚ್ಚು ಮಕ್ಕಳು ಪೂರ್ಣ ಪ್ರಮಾಣದ ಬಾಲಕಾರ್ಮಿಕರಾಗಿ ದುಡಿಯುತ್ತಿರುವಾಗ ರಾಷ್ಟ್ರದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸುವುದು ಹೇಗೆ? (ಪ್ರಜಾವಾಣಿ, ೨ ಜನವರಿ, ೧೯೯೭).

18_23_EKPSMS-KUH

ಕಲಿಯುವ ವಯಸು ದುಡಿಮೆಯ ಹೊತ್ತು 

ಕನಿಷ್ಠ ಸೌಲಭ್ಯಗಳು ಇಲ್ಲದ ವ್ಯವಸ್ಥೆಯಲ್ಲಿ ಪೂರ್ಣಪ್ರಮಾಣದ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಸಂದರ್ಭದಲ್ಲಿ ಮತ್ತು ಮೇಲಿನ ಹೇಳಿಕೆಯು ಗಂಭೀರವಾದ ಆಸಕ್ತಿಯನ್ನು ಈ ಕ್ಷೇತ್ರದಲ್ಲಿ ಹುಟ್ಟಿಸುತ್ತದೆ. ಅದೇನೆ ಇದ್ದರೂ ಬಾಲಕಾರ್ಮಿಕ ಸಮಸ್ಯೆಯ ವಾಸ್ತವಿಕ ವಿಶ್ಲೇಷಣೆ ಮತ್ತು ಶಾಲೆಯ ಪರಿಸರದ ಸಂಬಂಧವು ಮೇಲಿನ ಹೇಳಿಕೆಯನ್ನು ಮೂರು ರೀತಿಯಲ್ಲಿ ತಪ್ಪು ಅಭಿಪ್ರಾಯವನ್ನು ಹುಟ್ಟಿಸುತ್ತದೆ.

ಮೊದಲನೆಯದು, ಈ ಸಮಸ್ಯೆಯ ಬಾಹುಳ್ಯತೆಯನ್ನು ತುಂಬಾ ವಿಸೃತವಾಗಿ ಉತ್ಪ್ರೇಕ್ಷಿಸುವುದು. ಕಾರ್ಮಿಕ ಶಕ್ತಿಯಾಗಿ ಭಾಗವಹಿಸುತ್ತಿರುವುದರ ಬಗ್ಗೆ ದೊರಕುವ ಅಂಕಿ ಅಂಶ ಹಾಗೂ ಮಹಾತಿಗಳಿಂದ ಜನಗಣತಿಗಳು, ರಾಷ್ಟ್ರಮಟ್ಟದ ಸಮೀಕ್ಷೆ ಹಾಗೂ ಅಧ್ಯಯನಗಳು ಸೂಚಿಸತವಾಗುವ ಅಂಶ, ಚಿಕ್ಕ ಪ್ರಮಾಣದಲ್ಲಿ ಮಕ್ಕಳು ಭಾರತದಲ್ಲಿ ಪೂರ್ಣ ಪ್ರಮಾಣದ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂಬುದು. ಎರಡನೆಯದು, ಇಂತಹ ಹೇಳಿಕೆಗಳು ಬಾಲಕಾರ್ಮಿಕರು ಮಾಡುತ್ತಿರುವ ಕೆಲಸದ ಸ್ವರೂಪವನ್ನು ತಪ್ಪಾಗಿ ಗ್ರಹಿಸುವುದು. ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮನೆ ಕೆಲಸ ಅಥವಾ ಹೊಲದ ಕೆಲಸಗಳಲ್ಲಿ ಪೋಷಕರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಕೂಲಿ ಕೆಲಸವನ್ನಲ್ಲ. ಈ ವ್ಯತ್ಯಾಸವು ಬಾಲ ಕಾರ್ಮಿಕರು ಮತ್ತು ಶಾಲೆಗಳ ನಡುವೆ ಪರಸ್ಪರ ಸಂಬಂಧ ಹೊಂದಿರುವುದನ್ನು ಸೂಚಿಸುತ್ತದೆ. ಉದಾಹರಣೆಗೆ ಕೆಲಸದ ಸಮಯದಲ್ಲಿ ಕುಟುಂಬದ ಸದಸ್ಯರಿಗಿಂತ, ಕೂಲಿ ಕೆಲಸಗಾರರಿಗೆ ಹೆಚ್ಚಿನ ಕೆಲಸ ಮಾಡಬೇಕಾದ ಒತ್ತಡವಿರುತ್ತದೆ. ಮೂರನೆಯದಾಗಿ, ಮೇಲಿನ ಹೇಳಿಕೆಗಳು ಬಾಲಕಾರ್ಮಿಖರ ಸಮಸ್ಯೆಗೆ ಕಾರಣವನ್ನು ಮತ್ತು ಶೈಕ್ಷಣಿಕ ಕ್ಷೇತ್ರದ ಸ್ಥಿತಿ ಸ್ಥಾಪಕತೆಯನ್ನು ತುಂಬಾ ಸರಳೀಕರಿಸುತ್ತವೆ. ಪೂರ್ಣಪ್ರಮಾಣದಲ್ಲಿ ಕೆಲಸ ಮಡುತ್ತಿರುವ ಬಾಲಕಾರ್ಮಿಕರು ಶಾಲೆಗಳಿಗೆ ಹೋಗಲು ಸಾಧ್ಯವಿಲ್ಲ, ಏಕೆಂದರೆ ಅವರು ದುಡಿಮೆಯಲ್ಲಿ ತೊಡಗಬೇಕು ಎಂದು ಮೇಲಿನ ಹೇಳಿಕೆ ಮಾಡುವವರು ನಿರ್ದಿಷ್ಟವಾಗಿ ಹೇಳುತ್ತಾರೆ. ಇದಕ್ಕೆ ವಿರುದ್ಧವಾಗಿ ಮಕ್ಕಳು ಕೆಲಸ ಮಾಡುವುದು ಏಕೆಂದರೆ ಅವರು ಶಾಲೆಯನ್ನು ಮಧ್ಯದಲ್ಲಿ ಬಿಟ್ಟಿದ್ದಾರೆ. ಆದರೆ ವಾಸ್ತವಿಕ ಆಚರಣೆಯಲ್ಲಿ ಈ ಎರಡು ಮಾದರಿಗಳು ಸಾಧ್ಯ.

ನಮ್ಮ ಅಧ್ಯಯನವು ನಾಲ್ಕು ಗ್ರಾಮ ಪಂಚಾಯತಿಗಳಲ್ಲಿ ಹದಿನೈದು ಗ್ರಾಮಗಳ ಇಪ್ಪತ್ತು ಶಾಲೆಗಳಲ್ಲಿ ಶಾಲೆಯಿಂದ ಹೊರಗಿರುವರನ್ನು ಗುರುತಿಸಿದೆ. ಅಂಥ ಮಕ್ಕಳ ಪ್ರಮಾಣ ಈ ರೀತಿ ಇದೆ. ಬೂದಿಹಾಳ್ ಎಸ್.ಕೆ. ಗ್ರಾಮಪಂಚಾಯತಿಯಲ್ಲಿ ೧೯೯೯-೨೦೦೦ರ ಮಧ್ಯದಲ್ಲಿ ಶಾಲೆ ಬಿಟ್ಟ ಮಕ್ಕಳು, ಸರಾಸರಿ ಒಟ್ಟು ಪ್ರಮಾಣ ಶೇಕಡ ೬.೬೧ರಷ್ಟಿದ್ದರೆ ಇದೇ ಅವಧಿಯಲ್ಲಿ ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಶೇಕಡ ೩೦.೧೫ರಷ್ಟು ಮಕ್ಕಳು ಶಾಲೆಯನ್ನು ಮಧ್ಯದಲ್ಲಿ ಬಿಟ್ಟಿದ್ದಾರೆ. ಕಬ್ಬರಗಿ ಗ್ರಾಮಪಂಚಾಯತಿಯಲ್ಲಿ ಶೇಕಡ ೫೫.೮೨ರಷ್ಟು ಮಕ್ಕಳು ಮತ್ತು ಕೃಷ್ಣನಗರ ಪಂಚಾಯತಿಯಲ್ಲಿ ಶೇಕಡ ೪೩.೪೭ರಷ್ಟು ಮಕ್ಕಳು ಶಾಲೆಯನ್ನು ಮಧ್ಯದಲ್ಲಿ ಬಿಟ್ಟಿದ್ದಾರೆ. ೨೦೦೩-೦೪ನೇ ಶೈಕ್ಷಣಿಕ ವರ್ಷಕ್ಕೆ ಬೂದಿಹಾಳ್ ಎಸ್.ಕೆ. ಗ್ರಾಮಪಂಚಾಯತಿಯಲ್ಲಿ ಶೇಕಡ ೨೩.೬೦ರಷ್ಟು ಮಕ್ಕಳು, ಇದೇ ಅವಧಿಯಲ್ಲಿ ಯರೇಹಂಚಿನಾಳ ಪಂಚಾಯತಿಯಲ್ಲಿ ಶೇಕಡ ೨೫.೬೧ರಷ್ಟು ಮಕ್ಕಳು ಮಧ್ಯದಲ್ಲಿ ಶಾಲೆಯನ್ನು ಬಿಟ್ಟಿದ್ದಾರೆ. ೨೦೦೩-೦೪ನೇ ಕಬ್ಬರಗಿ ಪಂಚಾಯತಿಯಲ್ಲಿ ಶೇಕಡ ೪೮.೪೭ರಷ್ಟು ಮಕ್ಕಳು ಮತ್ತು ಕೃಷ್ಣನಗರ ಗ್ರಾಮಪಂಚಾಯತಿಯಲ್ಲಿ ಶೇಕಡ ೩೨.೪೧ರಷ್ಟು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಅಧಯನಕ್ಕೆ ಒಳಪಡಿಸಿದ ಒಟ್ಟು ೪೨೪ ಕುಟುಂಬಗಳಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳ ತಂದೆ ತಾಯಿಗಳು ಏಕೆ ನಿಮ್ಮ ಮಗ ಮಗಳು ಶಾಲೆಯನ್ನು ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರೆ ಅವರು ನೀಡುವ ಉತ್ತರ ಪಟ್ಟಿ ಈ ರೀತಿ ಇದೆ. ಮನೆಯ ಕೆಲಸ, ನಾವು ಕೆಲಸಕ್ಕೆ ಹೋಗುತ್ತೇವೆ, ಮನೆಯಲ್ಲಿ ಚಿಕ್ಕಮಕ್ಕಳನ್ನು ನೋಡಿಕೊಳ್ಳುವವರು ಇಲ್ಲ. ಹೀಗಾಗಿ ಮಗಳನ್ನು ಬಿಡಿಸಿದ್ದೇವೆ. ಎಷ್ಟು ಸಲ ಹೇಳಿದರೂ ನಮ್ಮ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಶಾಲೆಗೆ ಹೋಗಲು ಕಳುಹಿಸಿದರೆ ಬೇರೆ ಎಲ್ಲಿಯೊ ಆಟವಾಡಲು ಹೋಗುತ್ತಾನೆ. ಶಾಲೆಗೆ ನಮ್ಮ ಮಕ್ಕಳು ಹೋಗುತ್ತಿದ್ದರೂ ಓದಲು ಬರೆಯಲು ಬರುತ್ತಿರಲಿಲ್ಲ. ಗುಣಾತ್ಮಕ ಶಿಕ್ಷಣದ ಬೋಧನೆ ಕೊರತೆ, ಇನ್ನೂ ಮುಂತಾದ ಕಾರಣಗಳನ್ನು ನೀಡುವವರೆ ಹೆಚ್ಚು. ಇದರ ಅರ್ಥ, ಸಂಪಾದನೆಗಾಗಿ ಮಕ್ಕಳನ್ನು ಶಾಲೆ ಬಿಡಿಸಿರುವವರು ಇಲ್ಲ ಎಂದಲ್ಲ. ಇಂತಹ ಕುಟುಂಬಗಳು ಇವೆ ಆದರೆ ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು.

ಇದನ್ನು ಯಾವುದೇ ಕಾರಣದಿಂದಲೂ ತಳ್ಳಿಹಾಕುವಂತಿಲ್ಲ. ಪೂರ್ಣ ಪ್ರಮಾಣದಲ್ಲಿ ಬಾಲಕರ್ಮಿಕರ ಸ್ವಭಾವಗಳು ನಕಾರಾತ್ಮಕ ಅಂಶಗಳನ್ನು ಒಳಗೊಂಡಿವೆ. ಆದರೆ ಮನೆಯ ಕೆಲಸಗಳಲ್ಲಿ ಅರೆಕಾಲಿಕ ಕೆಲಸ ಮಾಡುವ ಬಾಲ ಕೆಲಸಗಾರರು ಶಾಲಾ ವ್ಯವಸ್ಥೆಯ ಅಥವಾ ಪರಿಸರದ ಜೊತೆ ಯಾವಾಗಲೂ ಅನುರೂಪವಾದ ಸಂಬಂಧವನ್ನು ಹೊಂದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೃಷಿಯಲ್ಲಿ ಹೆಚ್ಚಿನ ಚಟುವಟಿಕೆಗಳು ಇದ್ದ ಸಮಯದಲ್ಲಿ, ಬಡತನದ ರೇಖೆಗಿಂತ ಕೆಳಗಿರುವ ಅಥವಾ ಬಡತನದಲ್ಲಿ ಇರುವ ಕುಟುಂಬಗಳು ಹೆಚ್ಚು ಆರ್ಥಿಕ ಒತ್ತಡದಿಂದಾಗಿ ಮಕ್ಕಳನ್ನು ಪೂರ್ಣ ಪ್ರಮಾಣದ ಕೆಲಸಕ್ಕೆ ತಳ್ಳುತ್ತವೆ. ಇದರಿಂದ ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ಶಾಲೆಯಿಂದ ಹೊರಗೆ ಇರಬೇಕಾಗುತ್ತದೆ. ಒಟ್ಟಾರೆ ಈ ಅಂಶಗಳು ಮಕ್ಕಳು ಶಾಲೆಯನ್ನು ಬಹಿಷ್ಕರಿಸುವಂತೆ ಮಾಡುತ್ತವೆ. ಮಕ್ಕಳಿಗೆ ವಯೋಮಾನ ಹೆಚ್ಚಿದಂತೆ ಈ ಸಮಸ್ಯೆಯು ಬಹಳ ಕಠಿಣವಾಗುತ್ತಿದೆ.

. ಶಾಲೆಗಳು ಎಲ್ಲರಿಗೂ ದೊರಕುತ್ತಿವೆಯೇ?

ಸ್ವಾತಂತ್ರ್ಯ ನಂತರ ಶಾಲಾ ವ್ಯವಸ್ಥೆಯನ್ನು ಸುಧಾರಿಸಲು ಅನೇಕ ಪ್ರಗತಿಪರ ಯೋಜನೆಗಳು ರೂಪಿತವಾಗಿವೆ. ಉದಾಹರಣೆಗೆ ಪ್ರಾಥಮಿಕ ಶಾಲೆಗಳ ಒಟ್ಟು ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ೧೯೯೩ರಲ್ಲಿ ಶೇಕಡ ೯೪ರಷ್ಟು ಗ್ರಾಮೀಣ ಜನರು ೧ ಕಿ.ಮೀ. ಒಳಗೆ ಪ್ರಾಥಮಿಕ ಶಾಲೆಗಳು ಇರುವಲ್ಲಿ ವಾಸಿಸುತ್ತಿದ್ದಾರೆ. ಶಾಲೆ ಮತ್ತು ಮನೆಯ ನಡುವಿನ ಬೌದ್ಧಿಕ ಅಂತರದ ಸಮಸ್ಯೆಗಳು ಕಡಿಮೆಯಾಗಿದೆ ಎಂಬುದು ಇಲ್ಲಿ ಸ್ಪಷ್ಟ ಹೀಗಾಗಿ ಪ್ರಾಥಮಿಕ ಶಾಲೆಗೆ ಬಹಳ ದೂರದವರೆಗೆ ಕ್ರಮಿಸಬೇಕಾದ ಪ್ರಸಂಗ ಬಹಳ ಮಟ್ಟಿಗೆ ಇಂದು ಪರಿಹಾರಗೊಂಡಿದೆ. ೧೯೯೭-೯೮ರ ಶಿಕ್ಷಣ ಇಲಾಖೆಯ ವರದಿ ಪ್ರಕಾರ ಶಾಲಾ ಸೌಲಭ್ಯ ದೌರೆಯುವುದು ಮುಖ್ಯ ಸಮಸ್ಯೆಯಲ್ಲ. ಆದರೆ ಅನೇಕ ಕಾರಣಗಳಿಂದ ಇದು ಅಷ್ಟು ಸರಳವಾಗಿಲ್ಲ.

ಮೊದಲನೆಯದಾಗಿ, ಶಾಲೆಯ ದೊರೆಯುವಿಕೆಯನ್ನು ಕೇವಲ ಬೌದ್ಧಿಕ ಅಂತರದಿಂದ ಪರಿಗಣಿಸದೇ, ಸಾಮಾಜಿಕ ಅಂತರದಿಂದ ಕೂಡ ಪರಿಗಣಿಸಬೇಕು. ಸ್ಥಳೀಯ ಶಾಲೆಗೆ ಮಕ್ಕಳು ಹೋಗುವಾಗ ಇರಬಹುದಾದ ಅನೇಕ ಅಡೆತಡೆಗಳನ್ನು ಪರಿಗಣನೆ ಮಾಡಬೇಕಾಗುತ್ತದೆ. ಅನೇಕ ಪ್ರದೇಶಗಳಲ್ಲಿ ಹಳ್ಳಿಗಳು ಬಹಳ ಮಟ್ಟಿಗೆ ಬೇರೆ ಬೇರೆ ಜನವಸತಿಗಳಾಗಿ ವಿಂಗಡಣೆಯಾಗಿರುತ್ತವೆ (ಇದು ಜಾತಿ ಆಧಾರಿತವಾಗಿಯು ಇರಬಹುದು). ಮತ್ತು ಒಂದು ಜನವಸತಿಯಲ್ಲಿ ಮಕ್ಕಳು ಮತ್ತೊಂದು ಜನವಸತಿಯಲ್ಲಿರುವ ಶಾಲೆಗೆ ಜಾತಿ ಒತ್ತಡಗಳಿಂದಾಗಿ ಹೋಗಲು ಸಾಧ್ಯವಾಗದಿರಬಹುದು.

ಭಾರತದ ಒಟ್ಟು ಜನವಸತಿ ನೆಲೆಗಳಲ್ಲಿ ಶೇಕಡ ೫೦.೦೦ ಕ್ಕಿಂತಲೂ ಹೆಚ್ಚಿನ ಜನವಸತಿ ನೆಲೆಗಳು ಪ್ರಾಥಮಿಕ ಶಾಲೆಯನ್ನು ಹೊಂದಿವೆ. ಕರ್ನಾಟಕದಲ್ಲಿ ಈ ನಮೂನೆಯಲ್ಲಿನ ಹಾಗೆಯೇ ಕಬ್ಬರಗಿ ಮತ್ತು ಬೂದಿಹಾಳ್ ಎಸ್.ಕೆ. ಗ್ರಾಮಪಂಚಾಯತಿಯಲ್ಲಿ ಪ್ರೌಢಶಾಲೆ ಇಲ್ಲ. ಈ ಗ್ರಾಮಗಳ ಮಕ್ಕಳ ಪ್ರೌಢಶಾಲೆಗೆ ಹೋಗಬೇಕಾದರೆ, ಕನಿಷ್ಟ ೫ ರಿಂದ ೧೦ ಕಿ.ಮೀ. ದೂರ ಕ್ರಮಿಸಬೇಕು. ಜನವಸತಿ ಶಾಲೆಗಳು ಶೇಕಡ ೩೫ಕ್ಕೂ ಹೆಚ್ಚು ಇವೆ. ಉತ್ತರ ಕರ್ನಾಟಕದಲ್ಲಿ ಹಾಗೂ ಕರಾವಳಿ ಕರ್ನಾಟಕದ ಗುಡ್ಡಗಾಡುಗಳಲ್ಲಿ ಇಂತಹ ಜನವಸತಿ ನೆಲೆಗಳು ಅರ್ಧಕ್ಕಿಂತ ಹೆಚ್ಚಾಗಿವೆ. ಹೆಣ್ಣುಮಕ್ಕಳಿಗೆ ಶೈಕ್ಷಣಿಕ ಸ್ವಾತಂತ್ರ್ಯ ಚಾಲನೆಯಲ್ಲಿ ಹೆಚ್ಚಿನ ಅವಕಾಶ ಇಲ್ಲದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಹೆಚ್ಚಾಗಿ ಕಂಡುಬರುತ್ತದೆ. ಇದು ಸಾಮಾಜಿಕ ಅಂತರದಲ್ಲಿ ಇರುವ ಒಂದು ಮೂಲ ಸಮಸ್ಯೆಯೇ ಸರಿ. ನಮ್ಮ ಅಧ್ಯಯನದ ಒಂದು ಗ್ರಾಮವಾದ ಕೃಷ್ಣನಗರದಲ್ಲಿ ಇದೇ ರೀತಿಯ ಉದಾಹರಣೆ ಸಿಗುತ್ತದೆ. ಆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ (ಕನ್ನಡ) ಯು ಗ್ರಾಮದ ಮುಂದೆ ಅಥವಾ ಕೋಟೆಯ ಪಕ್ಕದಲ್ಲಿದೆ. ಈ ಶಾಲೆಯ ಸುತ್ತಮುತ್ತ ಇರುವ ಮುಖ್ಯ ಸಮುದಾಯ ಲಿಂಗಾಯತ. ಈ ಸಮುದಾಯವು ಈ ಪ್ರದೇಶದಲ್ಲಿ ಭೂ ಹಿಡುವಳಿಯನ್ನು ಹೊಂದಿರುವ ಪ್ರಮುಖ ಕೃಷಿಕ ಸಮುದಾಯವಾಗಿದೆ. ಇದನ್ನು ಕೃಷ್ಣನಗರ ಗ್ರಾಮದಲ್ಲಿಯೂ ಕಾಣಬಹುದು. ಈ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯ ಪ್ರಬಲತೆಯನ್ನು ಸಹ ಹೊಂದಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಶಾಲೆಯಿಂದ ದೂರದಲ್ಲಿ, ಕೋಟೆಗೆ ಹೊಂದಿಕೊಂಡಂತೆ ನೆಲೆಸಿರುವ ಸಮುದಾಯಗಳು ಹಿಂದುಳಿದ ಜಾತಿ-ವರ್ಗಕ್ಕೆ ಸೇರಿದ್ದು ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿದ್ದಾರೆ.

ಅಲ್ಲದೆ ಇವರು ಆ ಗ್ರಾಮದಲ್ಲಿ ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವವರು. ಇವರಿಗೆ ಶಾಲೆಯು ಬೌದ್ಧಿಕವಾಗಿ ದೊರೆತರೂ ಶಾಲಾ ವ್ಯವಸ್ಥೆಯು ಸರಳವಾಗಿ ದೊರಕುವುದು ಕಷ್ಟ ಸಾಧ್ಯ. ಇದೇ ರೀತಿಯ ಮತ್ತೊಂದು ಉದಾಹರಣೆ ಕೃಷ್ಣನಗರದ ಕೋಟೆಯ ಹೊರಭಾಗದಲ್ಲಿ ಪರಿಶಿಷ್ಟ ಜನರ ವಸತಿ ನೆಲೆಯೊಂದಿದೆ. ಅಲ್ಲಿನ ಸಮುದಾಯ ಭವನದಲ್ಲಿ (ಪೂರ್ವ ಪ್ರಾಥಮಿಕ) ಅಂಗನವಾಡಿ ಇದೆ. ಅದೇ ಕಟ್ಟಡದಲ್ಲಿ ೨೦೦೦-೦೧ನೇ ಶೈಕ್ಷಣಿಕ ಸಾಲಿನಲ್ಲಿ ಒಬ್ಬ ಶಿಕ್ಷಕರನ್ನು ಪ್ರತಿನಿಯೋಜನೆಯಲ್ಲಿ ನೇಮಿಸಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾಗಿದೆ. ಆ ಶಾಲೆಗೆ ಅಧಿಕೃತ ಕಟ್ಟಡವಿದ್ದರೂ ಶಿಕ್ಷಕನಾಗಲೀ, ಮೂಲಸೌಲಭ್ಯಗಳಾಗಲೀ ಮಂಜೂರು ಮಾಡದಿರುವುದು, ನಮ್ಮ ಗ್ರಾಮೀಣ ಪರಿಸರದಲ್ಲಿ ಶೈಕ್ಷಣಿಕ ಸೌಲಭ್ಯಗಳಿದ್ದರೂ ಅವುಗಳು ಸಾಮಾಜಿಕವಾಗಿ ದೊರಕದೆ ಇರುವುದನ್ನು ತಿಳಿಸುತ್ತದೆ.

ಎರಡನೆಯದಾಗಿ, ಸಂವಿಧಾನ ನಿರ್ದೇಶಕ ತತ್ವವಾದ ಎಲ್ಲರಿಗೂ ೧೪ ವರ್ಷದವರೆಗೆ ಶಿಕ್ಷಣ ನೀಡಬೇಕೆಂಬ ನಿರ್ಣಂದ ಹಿನ್ನೆಲೆಯಲ್ಲಿ ಶಾಲಾ ಸೌಲಭ್ಯಗಲು ದೊರಕುವ ಭೌತಿಕ ಅಂತರ ವಿಶ್ಲೇಷಿಸಬೇಕಾದ ಅಂಶವಾಗಿದೆ. ಶಾಲಾ ಸೌಲಭ್ಯಗಳ ದೊರಕುವಿಕೆಯು ಕೇವಲ ಪ್ರಾಥಮಿಕ ಶಾಲೆಗಳಿಗೆ ಮಾತ್ರ ಸೀಮಿತವಾಗದೆ, ಮಾಧ್ಯಮಿಕ ಶಾಲೆಗಳಿಗೂ ಕೂಡ ಅನ್ವಯವಾಗುವುದು ಕಂಡುಬರುತ್ತದೆ. ಪ್ರಾಥಮಿಕ ಶಾಲಾ ವ್ಯವಸ್ಥೆಯಿಂದ ಮಾಧ್ಯಮಿಕ ಮತ್ತು ಪ್ರೌಢಶಾಲಾ ವ್ಯವಸ್ಥೆಯ ಕಡೆ ಒಂದು ಬಾರಿ ಗಮನವನ್ನು ಸೂಕ್ಷ್ಮವಾಗಿ ಬದಲಿಸಿದರೆ, ಶಾಲಾ ಮೂಲಭೂತ ಸೌಲಭ್ಯ ಸಾಕಾಗದಿರುವುದು ಬಹಳ ದೊಡ್ಡ ಸಮಸ್ಯೆಯಾಗಿರುವುದು ಕಾಣುತ್ತದೆ. ಅಧ್ಯಯನ ಗ್ರಾಮವಾದ ಕೃಷ್ಣನಗರ ಉರ್ದು ಪ್ರಾಥಮಿಕ ಶಾಲೆಯಲ್ಲಿ ಕೇವಲ ೫ ತರಗತಿಯವರೆಗೆ ಮಾತ್ರ ಇದೆ. ನಂತರದ ತರಗತಿಗಳಿಗೆ ಮಕ್ಕಳು ದೌಲತ್‌ಪುರ, ಹೊಸಪೇಟೆ ಅಥವಾ ಬಳ್ಳಾರಿಗೆ ಹೋಗಬೇಕಾಗುತ್ತದೆ. ಅಲ್ಲದೆ ಉರ್ದು ಪ್ರೌಢಶಾಲೆಗೆ ಮಕ್ಕಳು ಹೊಸಪೇಟೆ ಅಥವಾ ಬಳ್ಳಾರಿಗೆ ಹೋಗಬೇಕಾದ ಪರಿಸ್ಥಿತಿ ಈ ಗ್ರಾಮಗಳಲ್ಲಿದೆ. ಈ ಪರಿಸ್ಥಿತಿಗೆ ಪ್ರಮುಖವಾಗಿ ಬಲಿಯಾಗುವರು ಹೆಣ್ಣುಮಕ್ಕಳು. ಏಕೆಂದರೆ ಹೆಚ್ಚಿನ ಸಂಖ್ಯೆಯ ಪೋಷಕರು ವಿಶೇಷವಾಗಿ ಮುಸ್ಲಿಂರಲ್ಲಿ ತಮ್ಮ ಹೆಣ್ಣುಮಕ್ಕಳನ್ನು ಮತ್ತೊಂದು ಗ್ರಾಮಗಳಲ್ಲಿದೆ. ಈ ಪರಿಸ್ಥಿತಿಗೆ ಪ್ರಮುಖವಾಗಿ ಬಲಿಯಾಗುವರು ಹೆಣ್ಣುಮಕ್ಕಳು. ಏಕೆಂದರೆ ಹೆಚ್ಚಿನ ಸಂಖ್ಯೆಯ ಪೋಷಕರು ವಿಶೇಷವಾಗಿ ಮುಸ್ಲಿಂರಲ್ಲಿ ತಮ್ಮ ಹೆಣ್ಣುಮಕ್ಕಳನ್ನು ಮತ್ತೊಂದು ಗ್ರಾಮದ ಶಾಲೆಗೆ ಹೋಗಲು ಆಸಕ್ತಿ ತೋರಿಸದಿರುವುದು ಅಥವಾ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುವುದು ಕಂಡುಬರುತ್ತದೆ (ಈ ಕುರಿತು ಹೆಚ್ಚಿನ ವಿವರಣೆಯನ್ನು ಈ ಅಧ್ಯಾಯದಲ್ಲಿ ಮೊದಲ ಭಾಗದಲ್ಲಿ ಚರ್ಚಿಸಲಾಗಿದೆ). ಇದಕ್ಕೆ ಉದಾಹರಣೆ ಎಂದರೆ ಉರ್ದು ಪ್ರಾಥಮಿಕ ಶಾಲೆಯ ೧ನೇ ತರಗತಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಎರಡು ಉದು ಶಾಲೆಗಲು ಸೇರಿ ೮೮ ಇದ್ದರೆ, ೫ನೇ ತರಗತಿಯಲ್ಲಿ ೨೫ ಮಂದಿ ಮತ್ತು ೭ನೇ ತರಗತಿಯಲ್ಲಿ ಕೇವಲ ೧೧ ಮಂದಿ ಹೆಣ್ಣುಮಕ್ಕಲು ಇರುತ್ತಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಇನ್ನೂ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಎಂದು ಹೇಳಬಹುದು.

ಮೂರನೆಯದಾಗಿ, ಮೂಲಸಮಸ್ಯೆಯಾದ ಭೌತಿಕ ಮತ್ತು ಸಾಮಾಜಿಕ ಅಂತರವು ಹೆಚ್ಚಿನ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುಟುಂಬದ ಮಕ್ಕಳನ್ನು ಪ್ರಾಥಮಿಕ ಶಾಲೆಯಿಂದ ಶಾಶ್ವತವಾಗಿ ದೂರವಿರಿಸಿದೆ. ಇದೇ ರೀತಿ ಅನೇಕ ಗ್ರಾಮ ಮತ್ತು ಜನವಸತಿ ನೆಲೆಗಳಲ್ಲಿ ಶಾಲಾ ವ್ಯವಸ್ಥೆ ಇದ್ದರೂ ವಾಸ್ತವಿಕವಾಗಿ ಇಲ್ಲವಾಗಿದೆ. ಇದರ ಜೊತೆಗೆ ಪ್ರತಿಕೂಲ ಭೌಗೋಳಿಕ ಪರಿಸರವು ಕೂಡ ಪ್ರಮುಖ ಸಮಸ್ಯೆಯಾಗಿದೆ, ವಿಶೇಷವಾಗಿ ಚಿಕ್ಕಮಕ್ಕಳಿಗೆ ಗ್ರಾಮದಲ್ಲಿ ಶಾಲೆಯು ಇದ್ದರೂ ಕೂಡ ಗುಡ್ಡಗಾಡು ಪ್ರದೇಶದಲ್ಲಿ ಪ್ರತ್ಯೇಕ ಜನವಸತಿ ನೆಲೆಗಳಿಂದ ಚಿಕ್ಕಮಕ್ಕಲು ಗುಡ್ಡ ಹತ್ತಿ ಇಳಿದೂ, ತೊರೆಹಳ್ಳಗಳನ್ನು ದಾಟಿ ಗ್ರಾಮದಲ್ಲಿರುವ ಶಾಲೆಯನ್ನು ಸೇರಬೇಕಾಗುತ್ತದೆ. ರಸ್ತೆಗಳೇ ಇಲ್ಲದ ಜನವಸತಿ ನೆಲೆಗಳು ಮತ್ತು ಗ್ರಾಮಗಳಿಂದ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಬರುವುದು ಸಾಹಸದ ಕೆಲಸವಾಗಿದೆ. ಇದೇ ಪರಿಸ್ಥಿತಿ ದೌಲತ್‌ಪುರ, ತೂರಮರಿ, ಬೂದಿಹಾಳ ಎಸ್.ಕೆ. ಗ್ರಾಮದಲ್ಲಿದೆ. ಮಳೆಗಾಲದಲ್ಲಿ ರಸ್ತೆ ನೀರು ಹರಿಯುವುದರಿಂದ ಚರಂಡಿಗಳೇ ಇಲ್ಲದ ಈ ಗ್ರಾಮದಲ್ಲಿ ಜನರು ನಡೆದಾಡುವುದು ಬಹಳ ಕಷ್ಟ. ಅಲ್ಲದೆ ಈ ಗ್ರಾಮವು ತಗ್ಗು ಪ್ರದೇಶದಲ್ಲಿ ಇರುವುದರಿಂದ ಹಾಗೂ ಕೃಷಿ ಮಣ್ಣಿನ ಲಕ್ಷಣವಿರುವುದರಿಂದ ಮಳೆಗಾಲದಲ್ಲಿ ಜೋಗು ಹರಿಯುತ್ತದೆ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಲಿಕ್ಕೆ ಪೂರಕವಾಗುತ್ತದೆ. ಈ ಎಲ್ಲಾ ಅಡೆತಡೆಗಳು ಸಾಧಾರಣವೆನಿಸಿದರೂ ವಿಶೇಷವಾಗಿ ಚಿಕ್ಕಮಕ್ಕಳು ಮತ್ತು ಹೆಣ್ಣುಮಕ್ಕಳು ಮಳೆಯಲ್ಲಿ ಮತ್ತು ಈಶಾನ್ಯ ಕರ್ನಾಟಕದ ಬಿರುಬೇಸಿಗೆಯಲ್ಲಿ ಶಾಲೆಗೆ ಬರುವುದು ಬಹಳ ಕಷ್ಟ. ಶಾಲಾ ವ್ಯವಸ್ಥೆಯನ್ನು ಪಡೆದುಕೊಳ್ಳುವುದು ಎಲ್ಲಾ ನಾಗರಿಕರ ಮೂಲಭೂತಹಕ್ಕು. ಈ ಎಲ್ಲಾ ಅಡೆತಡೆಗಳು ಸಾಧಾರಣವೆನಿಸಿದರೂ ವಿಶೇಷವಾಗಿ ಚಿಕ್ಕಮಕ್ಕಳು ಮತ್ತು ಹೆಣ್ಣುಮಕ್ಕಳು ಮಳೆಯಲ್ಲಿ ಮತ್ತು ಈಶಾನ್ಯ ಕರ್ನಾಟಕದ ಬಿರು ಬೇಸಿಗೆಯಲ್ಲಿ ಶಾಲೆಗೆ ಬರುವುದು ಬಹಳ ಕಷ್ಟ. ಶಾಲಾ ವ್ಯವಸ್ಥೆಯನ್ನು ಪೆಡದುಕೊಳ್ಳುವುದು ಎಲ್ಲಾ ನಾಗರಿಕರ ಮೂಲಭೂತಹಕ್ಕು. ಈ ಕ್ಷೇತ್ರದಲ್ಲಿ ಎದ್ದು ಕಾಣುವ ಅನೇಕ ಸಮಸ್ಯೆಗಳ ಬಗೆಹರಿಸುವ ಬಗ್ಗೆ ಸಂಕಲ್ಪ ಮಾಡಬೇಕಾದ ಅಗತ್ಯವಿದೆ.

ಶಾಲಾ ವ್ಯವಸ್ಥೆಯು ಉಪಯೋಗವಾಗುವ ಅಂತರದಲ್ಲಿ ದೊರೆತರೂ ಅವು ಗುಣಾತ್ಮಕವಾಗಿ ಮತ್ತು ಪ್ರಮಾಣಾತ್ಮವಾಗಿ ಅನೇಕ ಕೊರತೆಗಳನ್ನು ಹೊಂದಿದೆ ಎಂಬ ಮತ್ತೊಂದು ಹೆಚ್ಚಿನ ಮಟ್ಟದಲ್ಲಿ ಕನಿಷ್ಠ ವಿದ್ಯಾರ್ಥಿಗಳನ್ನು ಹೊಂದಿದೆಯೇ, ಶಾಲೆಯ ಮೂಲಭೂತ ಸೌಲಭ್ಯಗಳನ್ನು ಹೊಂದಿದೆಯೇ ಮುಂತಾದವನ್ನು ಪರಿಶೀಲಿಸಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ನಮ್ಮ ಅಧ್ಯಯನದ ಗ್ರಾಮಗಳ ಶಾಲೆಗಳಲ್ಲಿ ನಾವು ಗಮನಿಸಿರುವ ಅಥವಾ ನೋಡಿರುವಂತೆ, ಮೇಲಿನ ಎಲ್ಲಾ ಅಂಶಗಳನ್ನು ಸಾಮಾನ್ಯಕ್ಕಿಂತ ಬಹಳ ಭಿನ್ನವಾಗಿರುವ ಪರಿಸ್ಥಿತಿಯಲ್ಲಿ ಗುರುತಿಸಿದ್ದೇವೆ. ಇದನಾನು ಮುಂದಿನ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ.

.೧೦ ಉಪಸಂಹಾರ

ನಮ್ಮ ಅಧ್ಯಯನದಿಂದ ಆಡಳಿತಶಾಹಿ ವರ್ಗಷ ಅಧಿಕಾರದಲ್ಲಿ ಇರುವ ವರ್ಗ ಮತ್ತು ಯೋಜನಾಕಾರ ನಂಬಿಕೆಗೆ ವಿರುದ್ಧವಾದ ಅಂಶವು ಸ್ಪಷ್ಟವಾಗಿ ಕಂಡುಬರುತ್ತದೆ. ಅಂದರೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಆಧುನಿಕ ಸಮಾಜದಲ್ಲಿ ಯಾರೂ ಶಿಕ್ಷಣವನ್ನು ಕಡೆಗಣಿಸಲಾಗುವುದಿಲ್ಲ ಎಂಬು ಬಹುತೇಕ ಪೋಷಕರು ಸ್ಪಷ್ಟಪಡಿಸುತ್ತಾರೆ. ಈ ರೀತಿಯಲ್ಲಿ ಮನೋಭಾವನೆಯಲ್ಲಿ ವಿವಿಧ ಸಾಮಾಜಿಕ ಆರ್ಥಿಕ ಗುಂಪಿನ ಪೋಷಕರ ನಡುವೆ ಅಷ್ಟೇನೂ ವ್ಯತ್ಯಾಸಗಳು ಕಂಡುಬರುವುದಿಲ್ಲ. ಆದರೆ ಬಾಲಕ ಬಾಲಕಿಯರಿಗೆ ಶಿಕ್ಷಣ ನೀಡುವಾಗ ವ್ಯತ್ಯಾಸಗಳು ಕಂಡುಬಂದಿವೆ. ಬಹುತೇಕ ಪೋಷಕರು ಗಂಡು ಮಗುವಿಗೆ ಶಿಕ್ಷಣ ನೀಡಲು ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಅದೇ ಆಸಕ್ತಿಯನ್ನು ಹೆಣ್ಣು ಮಗುವಿನ ಶಿಕ್ಷಣದ ಬಗ್ಗೆ ಹೊಂದಿಲ್ಲ. ಇದರ ಅರ್ಥ ಪೋಷಕರು ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಣವನ್ನು ವರಮಾನ ವೃದ್ಧಿಸುವ ಸಾಧನವಾಗಿ, ಅಂದರೆ ಶಿಕ್ಷಣಕ್ಕೆ ಇರುವ ಆರ್ಥಿಕ ಮೌಲ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಅದನ್ನು ಉಪಕರಣವಾದಿ ನೆಲೆಯಲ್ಲಿ ನೋಡುತ್ತಿದ್ದಾರೆ.

ಆ ಹಿನ್ನೆಲೆಯಲ್ಲಿಯೇ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಹಣದ ವ್ಯಯ ಎಂದು ಬಹುತೇಕರು ಭಾವಿಸಿದ್ದಾರೆ. ಇದಕ್ಕೆ ಪೋಷಕರು ನೀಡುವ ಬಹುತೇಕ ಕಾರಣಗಳು ಸಾಮಾಜಿಕವಾದವು. ಅವುಗಳಲ್ಲಿ ಪ್ರಮುಖವಾದದ್ದು ಅವಳ ಶಿಕ್ಷಣವನ್ನು ಅವಳಮದುವೆಯ ದೃಷ್ಟಿಯಿಂದ ನೋಡುವುದು ಅಥವಾ ಜಾತಿಯ ದೃಷ್ಟಿಯಿಂದ ನೋಡುವು ಅಥವಾ ಅವಳ ರಕ್ಷಣೆಯ ದೃಷ್ಟಿಯಿಂದ ನೋಡುವುದು. ಮತ್ತೊಂದು ಬಹಳ ಸಂಕೀರ್ಣವಾದ ವಿಷಯವೆಂದರೆ ಪುರುಷರಿಗಿಂತ ಮಹಿಳೆಯರಿಗೆ ಉದ್ಯೋಗ ಅವಕಾಶಗಳು ಬಹಳ ಸೀಮಿತವಾಗಿರುವುದು ಎಂದು ಬಹುತೇಕರು ಭಾವಿಸಿರುವುದು ಇತ್ಯಾದಿ. ಈ ಬಗೆಯ ಸಾಮಾಜಿಕ ಒಪ್ಪಂದಗಳಲ್ಲಿ ಅನೇಕ ಬದಲಾವಣೆಗಳಾಗಿದ್ದರೂ, ಇನ್ನೂ ಬಹುತೇಕರು ಸಾಮಾಜಿಕ ಒಪ್ಪಂದಗಳಿಂದ ಮುಂದಕ್ಕೆ ಹೆಣ್ಣುಮಕ್ಕಳ ಶಿಕ್ಷಣವನ್ನ ನೋಡಬೇಕಾದ ಅಗತ್ಯವಿದೆ. ನಮ್ಮ ಅಧ್ಯಯನದ ಸಂದರ್ಭದಲ್ಲಿ ಬೆರಳೆಣಿಕೆ ಪ್ರಮಾಣದ ಪೋಷಕರು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿದ್ದಾರೆ. ಇಲ್ಲಿ ನಮಗೆ ಸ್ಪಷ್ಟವಾಗುವ ಅಂಶವೆಂದರೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇರುವ ವಿರೋಧಗಳು, ಕೇವಲ ಪೋ,ಕರಿಂದಲೇ ಹುಟ್ಟಿಕೊಂಡಿರುವಂತವುಗಳಲ್ಲ. ಇದು ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕವಾದದ್ದು. ಅಂದರೆ ಒಪ್ಪಿತ ಸಾಂಸ್ಕೃತಿಕ ನಡವಳಿಕೆಗಳು ಹೆಣ್ಣುಮಕ್ಕಳ ಶಿಕ್ಷಣದ ಬೆಳವಣಿಗೆಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿದೆ ಎಂಬುದು ಇಲ್ಲಿ ಸ್ಪಷ್ಟ. ಹೀಗಾಗಿ ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಇರುವ ಸಕಾರಾತ್ಮಕ ಮನೋಭಾವನೆಯು ಕೇವಲ ವೈಯಕ್ತಿಕ ಮಟ್ಟದಲ್ಲಿ ಹೆಚ್ಚಳವಾದಿರೆ ಸಾಲದು, ಸಾಂಸ್ಥಿಕ ಹಾಗೂ ಸಾಮಾಜಿಕ ಮಟ್ಟದಲ್ಲಿಯು ಬದಲಾಗಬೇಕಾದ ಅಗತ್ಯವಿದೆ. ಈ ದಿಕ್ಕಿನೆಡೆಗೆ ನಾವೆಲ್ಲರು ಚಿಂತಿಸಬೇಕಾಗಿದೆ.

ಶಾಲಾವ್ಯವಸ್ಥೆ ಮತ್ತು ಶೈಕ್ಷಣಿಕ ಭರವಸೆಗಳಿಗೆ ಸಂಬಂಧಿಸಿದಂತೆ ಗುಣಮಟ್ಟದ ಶಿಕ್ಷಣ ಪರಿಕಲ್ಪನೆಯನ್ನು ಸಮಾಜೋರ್ಥಿಕ ಅಂಶಗಳು ಪ್ರಬಾವಿಸುತ್ತಿವೆ ಎಂಬುದನ್ನು ನಮ್ಮ ಅಧ್ಯಯನ ಸ್ಪಷ್ಟವಾಗಿ ಗುರುತಿಸಿದೆ. ಆದರೆ ಪೋಷಕರು ಶಿಕ್ಷಣದ ಬಗ್ಗೆ ಹೊಂದಿರುವ ಮನೋಭಾವದ ಪ್ರಮಾಣವು ಪೋಷಕರಿಂದ ಪೋಷಕರಿಗೆ ವ್ಯತ್ಯಾಸವಾಗುತ್ತದೆ. ಶಿಕ್ಷಣ ಮತ್ತು ಶಾಲಾವ್ಯವಸ್ಥೆಯನ್ನು ಕುರಿತ ಪೋಷಕರ ಆರೋಪಗಳು ಒಂದು ರೀತಿಯಲ್ಲಿ ಮುಗಿಯದ ಕಥೆ ಎಂದು ಭಾವಿಸಿದರೂ ಶಾಲಾ ವ್ಯವಸ್ಥೆಯಲ್ಲಿ ಇರುವ ನಿಷ್ಫಲತೆ ಇದಕ್ಕೆ ಪ್ರಮುಖ ಕಾರಣ ಎಂಬುದು ಸ್ಪಷ್ಟ.

ಇನ್ನೂ ಶಿಕ್ಷಣ ಶಾಲಾ ವ್ಯವಸ್ಥೆಯಲ್ಲಿನ ನಿರುತ್ಸಹ ಅಂಶವು ಪೋಷಕರ ಮೇಲೆ ಅಥವಾ ಮಕ್ಕಳ ಮೇಲೆ ತನ್ನ ಪ್ರಭಾವವನ್ನು ಬೀರಿದರೂ ಇದರ ಪರಿಣಾಮ ಹೆಚ್ಚಾಗಿ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಳ್ಲಿ ಕಂಡುಬರುವುದು. ಅದರಲ್ಲಿಯೂ ನಿರ್ದಿಷ್ಟವಾಗಿ ಹೇಳುವುದಾದರೆ ಶಾಲಾ ಚಟುವಟಿಕೆಯಲ್ಲಿ ನಿರ್ದಿಷ್ಟ ಪ್ರಮಾಣದ ಕಲಿಕೆ ನಡೆಯದೇ ಇರುವ ಶಾಲೆಗಳಿರುವ ಪ್ರದೇಶ ಅಥವಾ ಗ್ರಾಮಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಒಂದು ಅಂಶವನ್ನು ನಾವು ಇಲ್ಲಿ ಸ್ಪಷ್ಟಪಡಿಸಿಕೊಳ್ಳಬೇಕು. ಅದೇನೆಂದರೆ ಪೋಷಕರ ನಿರುತ್ಸಾಹದ ಮಾತುಗಳು ಸಾಮಾನ್ಯವಾಗಿ ತಳಜಾತಿ ವರ್ಗಧ ಜನರನ್ನು ಹೆಚ್ಚು ಘಾಸಿಗೊಳಿಸುತ್ತಿದೆ. ಹೀಗಾಗಿ ಅನಕ್ಷರಸ್ಥ ಪೋಷಕರು ತಮ್ಮನ್ನು ತಾವೇ ಆಗಿದ್ದಾಂಗೆ ದೂಷಿಸಿಕೊಳ್ಳುವ ಮೂಲಕ ಶಾಲಾ ವ್ಯವಸ್ಥೆಯಲ್ಲಿ ಇರುವ ನೂನ್ಯತೆಗಳನ್ನು ಗುರುತಿಸುತ್ತಿದ್ದಾರೆ. ಹೀಗೆ ಸ್ಥಳೀಯ ಜನರೇ ಗುರುತಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಇನ್ನಷ್ಟು ಸಂಶೋಧನೆಗಳು ಗ್ರಾಮ ವಲಯ ಮಟ್ಟದಲ್ಲಿ ನಡೆದು, ಜನರಿಗೆ ಕಲಿಕೆಯ ಮೂಲಕ ಗಳಿಕೆಯ ದಾರಿಯನ್ನು ತೋರಿಸುವಂತಹ ಶಿಕ್ಷಣ ಮುಂದಾದರೂ ದೊರೆಯುವಂತಾಗಬೇಕು ಎಂಬುದು ಈ ಅಧ್ಯಯನದ ಆಶಯವಾಗದೆ.

ಒಂದು ಮಗುವನ್ನು ಪ್ರಥಾಮಿಕ ಶಾಲೆಗೆ ಕಳುಹಿಸಲು ಕನಿಷ್ಠ ಒಂದು ಸಾವಿರ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನ ಹಣ ಬೇಕಾಗುತ್ತದೆ ಎಂಬ ನಿರ್ಧಾರಕ್ಕೆ ನಮ್ಮ ಅಧ್ಯಯನದಲ್ಲಿ ಬರಲಾಗಿದೆ. ಖಾಸಗಿ ಖರ್ಚುಗಳನ್ನು ಮಾಡಿದ್ದರೂ ಮಕ್ಕಳು ಶಾಲೆಗೆ ಬರುವಾಗ, ಕೊಳೆತ ಬಟ್ಟೆ, ಹರಿದ ಬ್ಯಾಗ್, ಹರಿದ ಪುಸ್ತಕ ಮತ್ತು ನೋಟ್‌ಬುಕ್, ಒಡೆದ ಸ್ಲೇಟ್, ಮುರಿದ ಬಳಪ ಅಥವಾ ಸೀಸದಕಡ್ಡಿ ಹಾಗೂ ಕನಿಷ್ಟ ಮಟ್ಟದ ಶುಚಿತ್ವ ಇಲ್ಲದಿರುವುದನ್ನು ನಮ್ಮ ಅಧ್ಯಯನಗುರುತಿಸಿದೆ. ಖಾಸಾಗಿ ಖರ್ಚುಗಳನ್ನು ಹೇಗೆ ಕಡಿಮೆಗೊಳಿಸಬೇಕು ಮತ್ತು ಮಕ್ಕಳು ಶಾಲೆಗೆ ಬರುವಾಗ ಹೇಗೆ ಬರಬೇಕು ಎಂಬುದನ್ನು ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ. ಇದೇ ಸಂದರ್ಭದಲ್ಲಿ ಪೋಷಕರು ಹಾಗೂ ಸಮುದಾಯದ ಜವಾಬ್ದಾರಿಯನ್ನು ಸ್ಥರ್ಳಯರಿಗೆ ತಿಳಿಸುವ ಪ್ರಯತ್ನ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ.

ಶಾಲೆಯಿಂದ ಹೊರಗಿರುವ ಮಕ್ಕಳು ಶಾಲೆಗೆ ಬರುವಂತೆ ಮಾಡಲು ಅನೇಕ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳನ್ನು ರೂಪಿಸಿ ಪ್ರಯೋಗವನ್ನು ಈಗಾಗಲೇ ನಡೆಸಲಾಗಿದೆ. ಕೆಲವು ಕಾರ್ಯಕ್ರಮಗಳು ಸ್ವಲ್ಪಮಟ್ಟಿಗೆ ಮಕ್ಕಳನ್ನು ಮರಳಿ ಶಾಲೆಗೆ ತರುವಲ್ಲಿ ಯಶಸ್ವಿಯಾದರೆ, ಬಹುತೇಕ ಕಾರ್ಯಕ್ರಮಗಳು ವಿಫಲವಾಗಿದೆ. ಇದಕ್ಕೆ ಒಂದು ಪ್ರಮುಖ ಕಾರಣ ಸ್ಥಳೀಯ ಮಟ್ಟದಲ್ಲಿ ಇರುವ ತೊಡಕುಗಳನ್ನು ಅರ್ಥ ಮಾಡಿಕೊಳ್ಳದೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಆಚರಣೆಗೆ ತರುತ್ತಿರುವುದು. ಸ್ಥಳೀಯ ಮಟ್ಟದಲ್ಲಿ ಯೋಜನೆಗಳನ್ನು ಅಂದರೆ ಜನರ ಯೋಜನೆಯನ್ನು ಇನ್ನೂ ರೂಪಿಸಲು ಸಾಧ್ಯವಾಗದಿರುವುದು. ಶಾಲೆಯಿಂದ ಹೊರಗಿರುವ ಮಕ್ಕಳಿಗೆ ಸಂಬಂಧಿಸಿದ ಸ್ಥಳೀಯರ ಸಹಭಾಗಿತ್ವದ ಮೂಲಕ ೦೬-೧೪ ವಯೋಮಾನದ ಮಕ್ಕಳು ನಿಗದಿತ ಅವಧಿಯಲ್ಲಿ ಶಾಲೆಯಲ್ಲಿ ಕಲಿಯುವಂತೆ ಮಾಡುವ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ. ಇದು ಒಂದು ಸಾಮಾಜಿಕ ಹೊಣೆಗಾರಿಕೆ, ಇದರಿಂದ ಯಾರೊಬ್ಬರೂ ಹೊರತಾಗುವಂತಿಲ್ಲ. ಇದರಲ್ಲಿ ಸರ್ಕಾರ ಪಾತ್ರ ಎಷ್ಟು ಪ್ರಮುಖವೋ, ಅಷ್ಟೇ ಪ್ರಮುಖವಾದ ಪಾತ್ರಗಳನ್ನು ಸ್ಥಳೀಯ ಜನ ಸಮುದಾಯ ವಹಿಸಿಕೊಂಡರೆ ಮಾತ್ರ ಒಟ್ಟಾರೇ ಶೈಕ್ಷಣಿಕ ಪ್ರಗತಿ ಸಾಧ್ಯ (ನೋಡಿ. ಅಧ್ಯಾಯ ೭).

ಶಾಲೆಗಳು ಎಲ್ಲರಿಗೂ ದೊರಕುತ್ತವೆ ಎಂಬುದಕ್ಕೆ ಸರಕಾರಿ ಅಂಕಿ ಅಂಶಗಳು, ಶೈಕ್ಷಣಿಕ ಸಮೀಕ್ಷೆಗಳು, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ಅಧ್ಯಯನಗಳು ಆಧಾರ ಒದಗಿಸುತ್ತವೆ. ಇವುಗಳ ಪ್ರಕಾರ ಗ್ರಾಮೀಣ ಪ್ರದೇಶದ ಹೆಚ್ಚಿನ ಕುಟುಂಬಗಳಿಗೆ ಅನುಕೂಲವಾದ ಅಂತರದಲ್ಲಿ ಪ್ರಾಥಮಿಕ ಶಾಲೆಗಳು ದೊರಕುತ್ತಿವೆ. ಆದರೆ ರಾಷ್ಟ್ರಮಟ್ಟದಲ್ಲಿ ಶೇಕಡ ೭೧ ಗ್ರಾಮಗಳಲ್ಲಿ ಮಾಧ್ಯಮಿಕ ಶಾಲೆಗಳು ಇಲ್ಲವಾಗಿವೆ. ಇದು ಅತ್ಯಂತ ಗಂಭೀರವಾದ ಸಮಸ್ಯೆ. ಗ್ರಾಮೀಣ ಪ್ರದೇಶಧ ಪೋಷಕರು ವಿಶೇಷವಾಗಿ ಹೆಣ್ಣುಮಕ್ಕಳನ್ನು ಪಕ್ಕದ ಅಥವಾ ಬೇರೊಂದು ಗ್ರಾಮಕ್ಕೆ ಶಾಲೆಗೆ ಕಳುಹಿಸಲು ಹೆಚ್ಚಿನ ಆಸಕ್ತಿವಹಿಸುವುದಿಲ್ಲ. ಹೀಗಾಗಿ ೫, ೬ ಮತ್ತು ೭ನೇ ತರಗತಿಯ ನಂತರ ಗ್ರಾಮೀಣಪ್ರದೇಶದ ಹೆಚ್ಚಿನ ಹೆಣ್ಣುಮಕ್ಕಳು ಶಾಲೆಗೆ ಹೋಗಬೇಕು ಎಂಬ ಆಸಕ್ತಿ ಹೊಂದಿದ್ದರೂ, ಪೋಷಕರಿಗೆ ವಿರುದ್ಧವಾಗಿ ಶಾಲೆಗೆ ಹೋಗಲಾರದ ಸ್ಥಿತಿ ಇದೆ. ಈ ಅಧ್ಯಯನವು ಗ್ರಾಮಗಳಲ್ಲಿ ಮುಸ್ಲಿಂ ಮತ್ತು ಪರಿಶಿಷ್ಟ ಪಂಗಡ ಹಾಗೂ ತಳಜಾತಿಯ ಕೆಲವು ಪೋಷಕರಲ್ಲಿ ಈ ಮನೋಭಾವನೆಯು ಹೆಚ್ಚಾಗಿರುವುದನ್ನು ಕಂಡುಕೊಂಡಿದೆ. ಇಂತಹ ಮನೋ ಭಾವನೆಯು ಮುಂಬರುವ ದಿನಗಳಲ್ಲಿ ಬದಲಾಗಬಹುದಾದ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ.