.೧೧. ಕಬ್ಬರಗಿ ಗ್ರಾಮಪಂಚಾಯತಿ ಸಾಕ್ಷರತೆ

ಕೊಪ್ಪಳ ಜಿಲ್ಲೆಯಲ್ಲಿ ಇರುವ ನಾಲ್ಕು ತಾಲ್ಲೂಕುಗಳ ಪೈಕಿ, ಕುಷ್ಟಗಿ ತಾಲ್ಲೂಕು ಸಾಕ್ಷರತೆ ದೃಷ್ಟಿಯಿಂದ ಅತ್ಯಂತ ಹಿಂದುಳಿದ ತಾಲ್ಲೂಕು ಎಂದು ಈಗಾಗಲೇ ತಿಳಿದಿದೆ. ಈ ತಾಲ್ಲೂಕಿನಲ್ಲಿ ಬರುವ ಕಬ್ಬರಗಿ ಗ್ರಾಮ ಪಂಚಾಯತಿಯ ಒಟ್ಟು ಸಾಕ್ಷರತೆ ಶೇಕಡ ೪೫.೦೦ ರಷ್ಟಿದೆ. ಇಲ್ಲಿ ಮಹಿಳೆಯರ ಸಾಕ್ಷರತೆ ೨೫.೨೧ ರಷ್ಟಿದೆ. ಇದು ಅಧ್ಯಯನಕ್ಕೆ ಒಳಪಡಿಸಿದ ಗ್ರಾಮಪಂಚಾಯತಿಗಳಲ್ಲಿಯೇ ಮಹಿಳೆಯರ ಸಾಕ್ಷರತೆ ಅತಿಕಡಿಮೆ ಇರುವ ಪಂಚಾಯತಿಯಾಗಿದೆ. ಈ ಪಂಚಾಯತಿಯಲ್ಲಿ ಪುರುಷರ ಸಾಕ್ಷರತೆ ಶೇಕಡ ೬೪.೮೬ ರಷ್ಟಿದೆ. ಕಬ್ಬರಗಿ ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆ ಕೊಪ್ಪಳ ಜಿಲ್ಲೆ ಮತ್ತು ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೬.೯೮ ರಷ್ಟು ಮತ್ತು ಶೇಕಡ ೬.೬೨ ಅಂಶಗಳಷ್ಟು ಕಡಿಮೆ. ಈ ಗ್ರಾಮಪಂಚಾಯತಿ ಪುರುಷರ ಒಟ್ಟು ಸಾಕ್ಷರತೆಯು ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೨.೦೨ ರಷ್ಟು ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೩.೧೭ ಅಂಶಗಳಷ್ಟು ಕಡಿಮೆ. ಕಬ್ಬರಗಿ ಗ್ರಾಮಪಂಚಾಯತಿ ಮಹಿಳೆಯರ ಸಾಕ್ಷರತೆ ಕೊಪ್ಪಳ ಜಿಲ್ಲೆಯ ಹಾಗೂ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೧೧.೮೧ ಮತ್ತು ಶೇಕಡ ೯.೨೭ ಅಂಶಗಳಷ್ಟು ಕಡಿಮೆ. ರಾಜ್ಯದ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಕಬ್ಬರಗಿ ಗ್ರಾಮಪಂಚಾಯತಿಯ ಮಹಿಳೆಯರ ಸಾಕ್ಷರತೆ ಶೇಕಡ ೨೩.೨೨ ಅಂಶಗಳಷ್ಟು ಕಡಿಮೆ. ರಾಜ್ಯದ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಕಬ್ಬರಗಿ ಪಂಚಾಯತಿಯ ಪುರುಷರ ಸಾಕ್ಷರತೆ ಶೇಕಡ ೫.೭೭ ಅಂಶಗಳಷ್ಟು ಕಡಿಮೆ ಇದೆ.

ಕಬ್ಬರಗಿ ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ನಾಲ್ಕು ಗ್ರಾಮಗಳಾದ ಕಬ್ಬರಗಿ, ಸೇಬಿನಕಟ್ಟೆ, ಮನ್ನೇರಾಳ ಮತ್ತು ಬೀಳಗಿ. ಇವುಗಳಲ್ಲಿ ಇರುವ ಸಾಕ್ಷರತೆಯನ್ನು ತಾಳೆ ನೋಡಲು ಇಲ್ಲಿ ಪ್ರಯತ್ನಿಸಲಾಗಿದೆ. ಕಬ್ಬರಗಿ ಗ್ರಾಮದ ಒಟ್ಟು ಸಾಕ್ಷರತೆ ೩೮.೯೪ ರಷ್ಟಿದೆ. ಇದು ಜಿಲ್ಲೆಯ ಹಾಗೂ ಕುಷ್ಟಗಿ ತಾಲ್ಲೂಕಿನ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೧೩.೦೪ ಅಂಶಗಳಷ್ಟು ಮತ್ತು ಶೇಕಡ ೧೨.೬೮ ಅಂಶಗಳಷ್ಟು ಕಡಿಮೆ. ಅಲ್ಲದೇ ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಶೇಕಡ ೬.೦೬ ಅಂಶಗಳಷ್ಟು ಕಡಿಮೆ. ಕಬ್ಬರಗಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೫೬.೮೨ ರಷ್ಟಿದೆ. ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಕಬ್ಬರಗಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೧೦.೦೬ ಅಂಶಗಳಷ್ಟು ಕಡಿಮೆ. ಹಾಗೆಯೇ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಕಬ್ಬರಗಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೧೧.೨೪ ಅಂಶಗಳಷ್ಟು ಕಡಿಮೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೨೦.೭೫ ರಷ್ಟಿದೆ. ಕೊಪ್ಪಳ ಜಿಲ್ಲೆಯ ಹಾಗೂ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಕಬ್ಬರಗಿ ಗ್ರಾಮದ ಮಹಿಳೆಯರ ಸಾಕ್ಷರತೆ ಕ್ರಮವಾಗಿ ಶೇಕಡ ೧೬.೧೭ ಅಂಶಗಳಷ್ಟು ಮತ್ತು ಶೇಕಡ ೧೪.೬೮ ಅಂಶಗಳಷ್ಟು ಕಡಿಮೆ. ಗ್ರಾಮಪಂಚಾಯತಿಯ ಒಟ್ಟು ಮಹಿಳೆಯರ ಸಾಕ್ಷರತೆಗಿಂತಲೂ ಕಬ್ಬರಗಿ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೪.೪೬ ಅಂಶಗಳಷ್ಟು ಕಡಿಮೆ ಇದೆ.

ಸೇಬಿನಕಟ್ಟೆ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೩೭.೩೭ ರಷ್ಟಿದೆ. ಕಬ್ಬರಗಿ ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆಗಿಂತ ಸೇಬಿನಕಟ್ಟೆ ಗ್ರಾಮದ ಸಾಕ್ಷರತೆ ಶೇಕಡ ೭.೬೩ ಅಂಶಗಳಷ್ಟು ಕಡಿಮೆ. ಈ ಗ್ರಾಮದ ಸಾಕ್ಷರತೆ ಕೊಪ್ಪಳ ಜಿಲ್ಲೆ ಹಾಗೂ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೧೪.೬೧ ಅಂಶಗಳಷ್ಟು ಮತ್ತು ಶೇಕಡ ೧೪.೨೫ ಅಂಶಗಳಷ್ಟು ಕಡಿಮೆ. ಸೇಬಿನಕಟ್ಟೆ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೫೫.೬೫ ರಷ್ಟಿದೆ. ಇದು ಒಟ್ಟು ಗ್ರಾಮಪಂಚಾಯತಿಯ ಪುರುಷರ ಸಾಕ್ಷರತೆಗಿಂತ ಶೇಕಡ ೯.೨೧ ಅಂಶಗಳಷ್ಟು ಕಡಿಮೆ. ಕೊಪ್ಪಳ ಜಿಲ್ಲೆಯ ಹಾಗೂ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಸೇಬಿನಕಟ್ಟೆ ಗ್ರಾಮದ ಪುರುಷರ ಸಾಕ್ಷರತೆ ಕ್ರಮವಾಗಿ ಶೇಕಡ ೧೧.೨೩ ಅಂಶಗಳಷ್ಟು ಮತ್ತು ಶೇಕಡ ೧೨.೧೧ ಅಂಶಗಳಷ್ಟು ಕಡಿಮೆ ಇದೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೧೯.೯೧ ರಷ್ಟಿದೆ. ಇದು ಗ್ರಾಮಪಂಚಾಯತಿ ಒಟ್ಟು ಮಹಿಳೆಯರ ಸಾಕ್ಷರತೆಗಿಂತ ಶೇಕಡ ೫.೩ ಅಂಶಗಳಷ್ಟು ಕಡಿಮೆ. ಸೇಬಿನಕಟ್ಟೆ ಮಹಿಳೆಯರ ಸಾಕ್ಷರತೆ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧೭.೧೧ ಅಂಶಗಳಷ್ಟು ಕಡಿಮೆ ಇದೆ. ಹಾಗೆಯೇ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧೫.೦೨ ಅಂಶಗಳಷ್ಟು ಕಡಿಮೆ. ಈ ಗ್ರಾಮದ ಮಹಿಳೆಯರ ಸಾಕ್ಷರತೆಯು ನಾವು ಅಧ್ಯಯನ ನಡೆಸಿದ ಇತರ ಎಲ್ಲಾ ಗ್ರಾಮಗಳ ಮಹಿಳೆಯರ ಸಾಕ್ಷರತೆಗಿಂತ ಅತಿ ಕಡಿಮೆ. ಇದು ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಹಿಳೆಯರ ಸಾಕ್ಷರತೆ ಹೊಂದಿರುವ ಶಹಪುರ ತಾಲ್ಲೂಕಿಗಿಂತಲೂ ಬಹಳ ಕಡಿಮೆಯಾಗಿದೆ.

11_23_EKPSMS-KUH

ಮನ್ನೇರಾಳ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೪೯.೩೮ ರಷ್ಟಿದೆ. ಇದು ಕಬ್ಬರಗಿ ಗ್ರಾಮಪಂಚಾಯತಿಗಿಂತ ಶೇಕಡ ೪.೩೮ ಅಂಶಗಳಷ್ಟು ಅಧಿಕವಾಗಿದೆ. ಆದರೆ ಮನ್ನೇರಾಳ ಗ್ರಾಮದ ಸಾಕ್ಷರತೆ ಕೊಪ್ಪಳ ಜಿಲ್ಲೆ ಹಾಗೂ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೨.೬ ಅಂಶಗಳಷ್ಟು ಮತ್ತು ಶೇಕಡ ೨.೨೪ ಅಂಶಗಳಷ್ಟು ಕಡಿಮೆ. ಮನ್ನೇರಾಳ ಗ್ರಾಮದ ಮಹಿಳೆಯರ ಸಾಕ್ಷರತೆ ೨೬.೫೧ ರಷ್ಟಿದೆ. ಕಬ್ಬರಗಿ ಗ್ರಾಮಪಂಚಾಯತಿಯ ಒಟ್ಟು ಮಹಿಳೆಯರ ಸಾಕ್ಷರತೆಗಿಂತ ಮನ್ನೇರಾಳ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೧.೩ ಅಂಶಗಳಷ್ಟು ಹೆಚ್ಚಾಗಿದೆ. ಆದರೆ ಈ ಗ್ರಾಮದ ಮಹಿಳೆಯರ ಸಾಕ್ಷರತೆ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧೦.೫೧ ಅಂಶಗಳಷ್ಟು ಕಡಿಮೆ ಇದ್ದರೆ, ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೮.೪೨ ಅಂಶಗಳಷ್ಟು ಕಡಿಮೆ ಇದೆ. ಮನ್ನೇರಾಳ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೭೩.೦೪ ರಷ್ಟಿದೆ. ಇದು ಕಬ್ಬರಗಿ ಪಂಚಾಯತಿಯ ಒಟ್ಟು ಪುರುಷರ ಸಾಕ್ಷರತೆಗಿಂತ ಶೇಕಡ ೮.೧೮ ಅಂಶಗಳಷ್ಟು ಹೆಚ್ಚಾಗಿದೆ. ಹಾಗೆಯೇ ಈ ಗ್ರಾಮದ ಪುರುಷರ ಸಾಕ್ಷರತೆ ಜಿಲ್ಲೆಯ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೬.೧೬ ಅಂಶಗಳಷ್ಟು ಮತ್ತು ಶೇಕಡ ೪.೯೮ ಅಂಶಗಳಷ್ಟು ಹೆಚ್ಚಾಗಿದೆ.

ಕಬ್ಬರಗಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಇತರ ಮೂರು ಗ್ರಾಮಗಳಿಗಿಂತ ಬೀಳಗಿ ಗ್ರಾಮದ ಸಾಕ್ಷರತೆ ಎಲ್ಲಾ ದೃಷ್ಟಿಯಿಂದಲೂ ಸ್ವಲ್ಪ ಹೆಚ್ಚಾಗಿಯೇ ಇದೆ. ಬೀಳಗಿ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೬೯.೯೨ ರಷ್ಟಿದೆ. ಇದು ಒಟ್ಟು ಗ್ರಾಮ ಪಂಚಾಯತಿಯ ಸಾಕ್ಷರತೆಗಿಂತ ಶೇಕಡ ೨೪.೯೨ ಅಂಶಗಳಷ್ಟು ಹೆಚ್ಚಾಗಿದೆ. ಈ ಗ್ರಾಮದ ಸಾಕ್ಷರತೆ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೧೭.೬೪ ಅಂಶಗಳಷ್ಟು ಹೆಚ್ಚಾಗಿದ್ದರೆ, ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೧೮.೩ ಅಂಶಗಳಷ್ಟು ಅಧಿಕವಾಗಿದೆ. ಬೀಳಗಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೮೯.೨೭ ರಷ್ಟಿದೆ. ಇದು ಈ ಗ್ರಾಮ ಪಂಚಾಯತಿಯಲ್ಲಿಯೇ ಪುರುಷರ ಅತ್ಯಧಿಕ ಸಾಕ್ಷರತೆಯಾಗಿದೆ. ಗ್ರಾಮಪಂಚಾಯತಿಯ ಒಟ್ಟು ಪುರುಷರ ಸಾಕ್ಷರತೆಗಿಂತ ಬೀಳಗಿ ಗ್ರಾಮದ ಪುರುಷರ ಸಾಕ್ಷರತೆ ಶೇಕಡ ೨೪.೪೧ ಅಂಶಗಳಷ್ಟು ಅಧಿಕವಾಗಿದೆ. ಬೀಳಗಿ ಗ್ರಾಮದ ಪುರುಷರ ಸಾಕ್ಷರತೆ ಕೊಪ್ಪಳ ಜಿಲ್ಲೆಯ ಹಾಗೂ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೨೨.೩೯ ಅಂಶಗಳಷ್ಟು ಮತ್ತು ಶೇಕಡ ೨೧.೨೧ ಅಂಶಗಳಷ್ಟು ಅಧಿಕವಾಗಿದೆ. ಬೀಳಗಿ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೪೯.೮೦ ರಷ್ಟಿದೆ. ಇದು ಕಬ್ಬರಗಿ ಗ್ರಾಮಪಂಚಾಯತಿಯಲ್ಲಿಯೇ ಅಧಿಕ ಅಕ್ಷರಸ್ಥ ಮಹಿಳೆಯರನ್ನು ಹೊಂದಿರುವ ಗ್ರಾಮವಾಗಿದೆ. ಗ್ರಾಮಪಂಚಾಯತಿಯ ಒಟ್ಟು ಮಹಿಳೆಯರ ಸಾಕ್ಷರತೆಗಿಂತ ಬೀಳಗಿ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೨೪.೫೯ ಅಂಶಗಳಷ್ಟು ಅಧಿಕವಾಗಿದೆ. ಬೀಳಗಿ ಗ್ರಾಮದ ಮಹಿಳೆಯರ ಸಾಕ್ಷರತೆ ಕೊಪ್ಪಳ ಜಿಲ್ಲೆ ಹಾಗೂ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೧೨.೭೮ ಅಂಶಗಳಷ್ಟು ಮತ್ತು ಶೇಕಡ ೧೪.೮೭ ಅಂಶಗಳಷ್ಟು ಅಧಿಕವಾಗಿದೆ. ವಿಶೇಷವೆಂದರೆ ಅಧ್ಯಯನಕ್ಕೆ ಒಳಪಡಿಸಿದ ಇತರ ೧೭ ಗ್ರಾಮಗಳಿಗಿಂತ ಬೀಳಗಿ ಗ್ರಾಮದ ಮಹಿಳೆಯರ ಸಾಕ್ಷರತೆಯೇ ಅತ್ಯಧಿಕ.

ಕಬ್ಬರಗಿ ಗ್ರಾಮಪಂಚಾಯತಿಯಲ್ಲಿ ಕೂಡ ಪುರುಷರ ಸಾಕ್ಷರತೆ ಮಹಿಳೆಯರ ಸಾಕ್ಷರತೆಗಿಂತ ಅತ್ಯಧಿಕವಾಗಿದೆ. ಈ ಪಂಚಾಯತಿಯಲ್ಲಿ ಪುರುಷರ ಅತ್ಯಧಿಕ ಸಾಕ್ಷರತೆ ಶೇಕಡ ೮೯.೨೭ರಷ್ಟು ಬೀಳಗಿ ಗ್ರಾಮದಲ್ಲಿದ್ದರೆ, ಮಹಿಳೆಯರ ಅತ್ಯಧಿಕ ಸಾಕ್ಷರತೆ ಶೇಕಡ ೪೯.೮ರಷ್ಟು ಅದೇ ಗ್ರಾಮದಲ್ಲಿದೆ. ಇಲ್ಲಿ ಸಾಕ್ಷರತಾ ಪ್ರಮಾಣದ ಲಿಂಗತಾರತಮ್ಯದ ಅಂತರ ಶೇಕಡ ೩೯.೪೭ ಅಂಶಗಳಷ್ಟಿದೆ. ಕಬ್ಬರಗಿ ಪಂಚಾಯತಿಯಲ್ಲಿ ಅತಿಕಡಿಮೆ ಪುರುಷರ ಸಾಕ್ಷರತೆ ಶೇಕಡ ೫೫.೬೫ ರಷ್ಟು ಸೇಬಿನಕಟ್ಟೆ ಗ್ರಾಮದಲ್ಲಿದ್ದರೆ, ಮಹಿಳೆಯರ ಅತಿಕಡಿಮೆ ಸಾಕ್ಷರತೆ ಶೇಕಡ ೧೯.೯೧ರಷ್ಟು ಅದೇ ಸೇಬಿನಕಟ್ಟೆ ಗ್ರಾಮದಲ್ಲಿದೆ. ಇಲ್ಲಿ ಸಾಕ್ಷರತೆಯ ಲಿಂಗತಾರತಮ್ಯದ ಅಂತರ ಶೇಕಡ ೩೫.೭೪ ಅಂಶಗಳಷ್ಟಿದೆ. ಒಟ್ಟಾರೇ ಕಬ್ಬರಗಿ ಗ್ರಾಮಪಂಚಾಯತಿಯಲ್ಲಿ ಬೀಳಗಿ ಗ್ರಾಮವು ಸಾಕ್ಷರತೆ ದೃಷ್ಟಿಯಿಂದ ಉತ್ತಮ ಸಾಧನೆ ತೋರಿ ಮೊದಲಸ್ಥಾನದಲ್ಲಿದ್ದರೆ, ಸೇಬಿನಕಟ್ಟೆ ಗ್ರಾಮ ಸಾಕ್ಷರತೆಯಲ್ಲಿ ಅಂತಿಮ ಸ್ಥಾನ ಪಡೆದಿದೆ. ಸಾಕ್ಷರತೆ ದೃಷ್ಟಿಯಿಂದ ಮನ್ನೇರಾಳ ಗ್ರಾಮ ಎರಡನೆಯ ಸ್ಥಾನದಲ್ಲಿ, ಕಬ್ಬರಗಿ ಮೂರನೆಯ ಸ್ಥಾನದಲ್ಲಿದೆ.

ಬಳ್ಳಾರಿ : ಬಳ್ಳಾರಿ ಜಿಲ್ಲೆಯು ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ ೩.೮೪ರಷ್ಟು ಪಾಲನ್ನು, ರಾಜ್ಯದ ಅಕ್ಷರಸ್ಥರಲ್ಲಿ ಶೇಕಡ ೩.೨೫ ರಷ್ಟು ಪಾಲನ್ನು ಪಡೆದಿದೆ. ರಾಜ್ಯದ ಒಟ್ಟು ಅನಕ್ಷರಸ್ಥರಲ್ಲಿ ಬಳ್ಳಾರಿ ಜಿಲ್ಲೆಯ ಪಾಲು ಶೇಕಡ ೪.೭೮ ರಷ್ಟಿದೆ. ಬಳ್ಳಾರಿ ಜಿಲ್ಲೆಯ ಒಟ್ಟು ಸಾಕ್ಷರತೆ ಶೇಕಡ ೫೮.೦೪ ರಷ್ಟಿದೆ. ಪುರುಷರ ಒಟ್ಟು ಸಾಕ್ಷರತೆ ಶೇಕಡ ೬೯.೫೯ರಷ್ಟು ಇದ್ದರೆ, ಮಹಿಳೆಯರ ಒಟ್ಟು ಸಾಕ್ಷರತೆ ಶೇಕಡ ೪೬.೦೪ ರಷ್ಟಿದೆ. ಇಲ್ಲಿ ಪುರುಷರ ಮತ್ತು ಮಹಿಳೆಯರ ನಡುವಿನ ಸಾಕ್ಷರತೆಯಲ್ಲಿ ಲಿಂಗತಾರತಮ್ಯ ಶೇಕಡ ೨೩.೫೩ ಅಂಶಗಳಷ್ಟಿದೆ. ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗದ ಒಟ್ಟು ಸಾಕ್ಷರತೆ ಶೇಕಡ ೫೦.೮೬ ರಷ್ಟಿದೆ. ಇದು ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೮.೮೫ ಅಂಶಗಳಷ್ಟು ಕಡಿಮೆ. ಈ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಮಹಿಳೆಯರ ಸಾಕ್ಷರತೆ ಶೇಕಡ ೩೭.೪೩ ರಷ್ಟಿದೆ. ಇದು ರಾಜ್ಯದ ಗ್ರಾಮೀಣ ಪ್ರದೇಶದ ಒಟ್ಟು ಮಹಿಳೆಯರ ಸಾಕ್ಷರತೆಗಿಂತ ಶೇಕಡ ೧೧.೦೭ ಅಂಶಗಳಷ್ಟು ಕಡಿಮೆ. ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಪುರುಷರ ಸಾಕ್ಷರತಾ ಪ್ರಮಾಣ ಶೇಕಡ ೬೪.೦೪ ರಷ್ಟಿದೆ. ಇದು ರಾಜ್ಯದ ಗ್ರಾಮೀಣ ಪ್ರದೇಶದ ಒಟ್ಟು ಪುರುಷರ ಸಾಕ್ಷರತೆಗಿಂತ ಶೇಕಡ ೬.೫೯ ಅಂಶಗಳಷ್ಟು ಕಡಿಮೆ. ಬಳ್ಳಾರಿ ಜಿಲ್ಲೆಯಲ್ಲಿ ಅತ್ಯಧಿಕ ಸಾಕ್ಷರತೆ ಶೇಕಡ ೭೪.೬೩ ರಷ್ಟು ಬಳ್ಳಾರಿ ತಾಲ್ಲೂಕಿನ ನಗರ ಪ್ರದೇಶದಲ್ಲಿದ್ದರೆ, ಅತ್ಯಂತ ಕಡಿಮೆ ಸಾಕ್ಷರತೆ ಶೇಕಡ ೪೦.೯೫ ರಷ್ಟು ಸಿರುಗುಪ್ಪ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಇವೆರಡರ ನಡುವಿನ ಅಂತರ ಶೇಕಡ ೩೩.೭೮ ಅಂಶಗಳಷ್ಟಿದೆ. ಪುರುಷರ ಅತ್ಯಧಿಕ ಸಾಕ್ಷರತೆ ಶೇಕಡ ೭೯.೬೬ ರಷ್ಟು ಕೂಡ್ಲಿಗಿ ತಾಲ್ಲೂಕಿನ ನಗರ ಪ್ರದೇಶದಲ್ಲಿದ್ದರೆ, ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೫೪.೯೯ರಷ್ಟು ಸಿರಗುಪ್ಪ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಪುರುಷರ ಅತ್ಯಧಿಕ ಸಾಕ್ಷರತೆ ಮತ್ತು ಮಹಿಳೆಯರ ಅತ್ಯಧಿಕ ಸಾಕ್ಷರತೆಯ ನಡುವಿನ ಸಾಕ್ಷರತೆಯಲ್ಲಿ ಲಿಂಗತಾರತಮ್ಯ ಶೇಕಡ ೬.೮ ಅಂಶಗಳಷ್ಟಿದೆ. ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೫೪.೯೯ ರಷ್ಟು ಸಿರಗುಪ್ಪ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿದ್ದರೆ, ಮಹಿಳೆಯರ ಅತಿಕಡಿಮೆ. ಸಾಕ್ಷರತೆ ಶೇಕಡ ೨೬.೯೧ರಷ್ಟು ಅದೇ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿದೆ. ಇಲ್ಲಿ ಸಾಕ್ಷರತೆಯ ಲಿಂಗತಾರತಮ್ಯ ಶೇಕಡ ೨೮.೦೮ ಅಂಶಗಳಷ್ಟಿದೆ.

ಕೋಷ್ಟಕ . – ಬಳ್ಳಾರಿ ಜಿಲ್ಲೆಯಲ್ಲಿ ಜನಸಂಖ್ಯೆ, ಅಕ್ಷರಸ್ಥರು, ಅನಕ್ಷರಸ್ಥರು ಮತ್ತು ಸಾಕ್ಷರತೆ

 

ವಿವರಗಳು

ರಾಜ್ಯ

ಬಳ್ಳಾರಿ ಜಿಲ್ಲೆ

ಸಂಡೂರು ತಾಲ್ಲೂಕು

ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯ ಪಾಲು

೧. ಜನಸಂಖ್ಯೆ

೫೨೭೩೩೯೫೮

೨೦೨೫೨೪೨

೧೯೧೧೫೯

೩.೮೪

೨. ಅಕ್ಷರಸ್ಥರು

೩೦೭೭೪೯೮೮

೧೦೦೦೬೦೨

೮೬೦೯೨

೩.೨೫

೩. ಅನಕ್ಷರಸ್ಥರು

೧೫೧೩೨೮೦೨

೭೨೩೪೨೩

೪.೭೮

೪. ಸಾಕ್ಷರತೆ

೬೭.೦೪

೫೮.೦೪

೫೮.೦೪

೫. ಅನಕ್ಷರತೆ

೩೨.೯೬

೪೧.೯೬

೪೧.೯೬

ಮೂಲ: ಸೆನ್ಸಸ್ ೨೦೦೧

ಕೋಷ್ಟಕ .೧೦ – ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷರತೆ

ವಿವರಗಳು

ಸಾಕ್ಷರತೆ

ಒಟ್ಟು

ಪುರುಷರು

ಮಹಿಳೆಯರು

೧. ಬಳ್ಳಾರಿ ಜಿಲ್ಲೆ ೫೦.೮೬ ೬೪.೦೪ ೩೭.೪೩
೨. ಸಂಡೂರು ತಾಲ್ಲೂಕು ೪೮.೯೮ ೬೧.೬೯ ೩೫.೩೨
೩. ಕೃಷ್ಣನಗರ ಗ್ರಾ.ಪಂ. ೪೩.೨೦ ೫೪.೧೭ ೩೧.೫೦

ಮೂಲ: ಸೆನ್ಸಸ್ ೨೦೦೧ ಮತ್ತು ಕ್ಷೇತ್ರಕಾರ್ಯ ಮಾಹಿತಿ

ಬಳ್ಳಾರಿ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ತಾಲ್ಲೂಕು ಸಿರುಗುಪ್ಪ ಈ ತಾಲ್ಲೂಕಿನ ಒಟ್ಟು ಸಾಕ್ಷರತೆ ಶೇಕಡ ೪೪.೧೪ ರಷ್ಟಿದೆ. ನಂತರ ಶೈಕ್ಷಣಿಕವಾಗಿ ಸ್ವಲ್ಪ ಹಿಂದುಳಿದಿರುವ ತಾಲ್ಲೂಕು ಸಂಡೂರು ಈ ತಾಲ್ಲೂಕಿನ ಒಟ್ಟು ಸಾಕ್ಷರತೆ ಶೇಕಡ ೫೩.೭೬ ರಷ್ಟಿದೆ. ಸಂಡೂರು ತಾಲ್ಲೂಕಿನಲ್ಲಿ ಒಟ್ಟು ಪುರುಷರ ಸಾಕ್ಷರತೆ ಶೇಕಡ ೬೪.೬೬ ರಷ್ಟಿದ್ದರೆ, ಮಹಿಳೆಯರ ಒಟ್ಟು ಸಾಕ್ಷರತೆ ಶೇಕಡ ೪೨.೨೪ ರಷ್ಟಿದೆ. ವಿಶೇಷವೆಂದರೆ ಸಂಡೂರು ತಾಲ್ಲೂಕಿನ ನಗರ ಪ್ರದೇಶದ ಒಟ್ಟು ಸಾಕ್ಷರತೆ ಶೇಕಡ ೭೪.೫೩ ರಷ್ಟಿದೆ. ಇದು ಬಳ್ಳಾರಿ ತಾಲ್ಲೂಕಿನ ನಗರ ಪ್ರದೇಶದ ಸಾಕ್ಷರತೆಯನ್ನು ಹೊರತುಪಡಿಸಿದರೆ ಬಳ್ಳಾರಿ ಜಿಲ್ಲೆಯ ಇತರ ಭಾಗಗಳಿಗಿಂತ ಅಧಿಕವಾಗಿದೆ. ಈ ತಾಲ್ಲೂಕಿನ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳ ನಡುವಿನ ಸಾಕ್ಷರತೆಯ ಅಂತರ ಶೇಕಡ ೨೫.೫೯ ಅಂಶಗಳಷ್ಟಿದೆ. ಸಂಡೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೬೧.೯೯ ರಷ್ಟಿದ್ದರೆ, ನಗರ ಪ್ರದೇಶದ ಪುರುಷರ ಸಾಕ್ಷರತೆ ಶೇಕಡ ೭೬.೦೬ ರಷ್ಟಿದೆ. ಹಾಗೆಯೇ ಈ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ೭೨.೮೬ ರಷ್ಟಿದೆ. ಇಲ್ಲಿ ಗ್ರಾಮೀಣ ನಗರ ಸಾಕ್ಷರತೆ ನಡುವಿನ ಅಂತರ ಶೇಕಡ ೩೭.೫೪ ಅಂಶಗಳಷ್ಟಿದೆ.

ಸಂಡೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆ ಶೇಕಡ ೪೮.೯೮ರಷ್ಟಿದೆ. ಇದು ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೧.೮೮ ಅಂಶಗಳಷ್ಟು ಹಾಗೂ ರಾಜ್ಯದ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೧೦.೭ ಅಂಶಗಳಷ್ಟು ಕಡಿಮೆ. ಸಂಡೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆ ಶೇಕಡ ೩೫.೩೨ರಷ್ಟಿದೆ. ಇದು ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೨.೧೧ ಅಂಶಗಳಷ್ಟು ಹಾಗೂ ರಾಜ್ಯದ ಗ್ರಾಮೀಣ ಪ್ರದೇಶಧಮಹಿಳೆಯರ ಸಾಕ್ಷರತೆಗಿಂತ ಶೇಕಡ ೧೩.೧೮ ಅಂಶಗಳಷ್ಟು ಕಡಿಮೆ ಇದೆ. ಈ ತಾಲ್ಲೂಕಿನ ಗ್ರಮೀಣ ಭಾಗದ ಪುರುಷರ ಸಾಕ್ಷರತೆ ಶೇಕಡ ೬೧.೯೯ ರಷ್ಟಿದೆ. ಇದು ಜಿಲ್ಲೆಯ ಮತ್ತು ರಾಜ್ಯದ ಗ್ರಾಮೀಣ ಪ್ರದೇಶಧ ಪುರುಷರ ಸಾಕ್ಷರತೆಗಿಂತ ಕ್ರಮವಾಗಿ ಶೇಕಡ ೨.೦೫ ಅಂಶಗಳಷ್ಟು ಹಾಗೂ ಶೇಕಡ ೮.೬೪ ಅಂಶಗಳಷ್ಟು ಕಡಿಮೆ ಇದೆ.

ಕೋಷ್ಟಕ .೧೧ – ಬಳ್ಳಾರಿ ಜಿಲ್ಲೆಯ ತಾಲ್ಲೂಕುವಾರು ಅಕ್ಷರಸ್ಥರು ಮತ್ತು ಸಾಕ್ಷರತೆ

ಜಿಲ್ಲೆ / ತಾಲ್ಲೂಕು

ಒಟ್ಟು / ಗ್ರಾಮೀಣ / ನಗರ

ಜಿಲ್ಲೆ / ತಾಲ್ಲೂಕಿನ ಒಟ್ಟು ಜನಸಂಖ್ಯೆ

ಅಕ್ಷರಸ್ಥರು

ಸಾಕ್ಷರತೆ

ಒಟ್ಟು

ಪುರುಷರು

ಮಹಿಳೆಯರು

ಒಟ್ಟು

ಪುರುಷರು

ಮಹಿಳೆಯರು

ಬಳ್ಳಾರಿ ಜಿಲ್ಲೆ ಒಟ್ಟು

೨೦೨೫೨೪೨

೧೦೦೦೬೦೨

೬೦೮೧೬೫

೩೯೨೪೩೭

೫೮.೦೪

೬೯.೫೯

೪೬.೧೬

ಗ್ರಾಮೀಣ

೧೩೧೯೨೩೯

೫೬೪೦೫೪

೩೫೮೩೫೧

೨೦೫೭೦೩

೫೦.೮೬

೬೪.೦೪

೩೭.೪೫

ನಗರ

೭೦೬೦೦೩

೪೩೬೫೪೮

೨೪೯೮೧೪

೧೮೬೭೩೪

೭೦.೯೭

೭೯.೪೯

೬೨.೦೮

ಹಡಗಲಿ ಒಟ್ಟು

೧೬೮೦೨೦

೮೭೧೯೨

೫೨೩೪೨

೩೪೮೫೦

೬೦.೪೩

೭೧.೬೯

೪೮.೮೯

ಗ್ರಾಮೀಣ

೧೪೪೬೧೬

೭೩೧೯೫

೪೪೪೦೬

೨೮೭೮೯

೫೯.೦೧

೭೦.೮೪

೪೬.೯೨

ನಗರ

೨೩೪೦೪

೧೩೯೯೭

೭೯೩೬

೬೦೬೧

೬೯.೧೪

೭೬.೮೪

೬೧.೧೦

ಹಗರಿಬೊಮ್ಮನಹಳ್ಳಿ ಒಟ್ಟು

೧೫೯೯೦೦

೭೮೯೧೨

೪೮೩೧೩

೩೦೫೯೯

೫೮.೫೮

೭೧.೨೫

೪೫.೭೪

ಗ್ರಾಮೀಣ

೧೫೯೯೦೦

೭೮೯೧೨

೪೮೩೧೩

೩೦೫೯೯

೫೮.೫೮

೭೧.೨೫

೪೫.೭೪

ನಗರ
ಹೊಸಪೇಟೆ ಒಟ್ಟು

೩೭೩೬೬೫

೧೯೭೧೯೫

೧೧೬೫೯೯

೮೦೫೯೬

೬೧.೨೯

೭೧.೬೮

೫೦.೬೭

ಗ್ರಾಮೀಣ

೧೫೩೧೮೪

೬೦೮೯೪

೩೮೫೮೪

೨೨೩೧೦

೪೭.೨೧

೫೯.೬೫

೩೪.೬೯

ನಗರ

೨೨೦೪೮೧

೧೩೬೩೦೧

೭೮೦೧೫

೫೮೩೮೬

೭೦.೩೨

೭೯.೬೧

೬೧.೫೨

ಸಿರುಗುಪ್ಪ ಒಟ್ಟು

೨೩೫೧೭೬

೮೬೪೩೭

೫೬೦೯೯

೩೦೩೩೮

೪೪.೧೪

೫೭.೫೮

೩೦.೮೩

ಗ್ರಾಮೀಣ

೧೬೮೭೩೯

೫೭೨೨೬

೩೮೨೪೪

೧೮೯೮೨

೪೦.೮೫

೫೪.೯೯

೨೬.೯೧

ನಗರ

೬೬೪೪೦

೨೯೨೧೧

೧೭೮೫೫

೧೧೩೫೬

೫೨.೪೦

೬೪.೦೭

೪೦.೭೪

ಬಳ್ಳಾರಿ ಒಟ್ಟು

೬೨೫೪೨೯

೩೨೫೯೧೦

೧೯೬೨೩೫

೧೨೯೬೭೫

೬೦.೬೪

೭೧.೮೬

೪೯.೦೪

ಗ್ರಾಮೀಣ

೩೦೮೪೨೯

೧೧೮೫೬೨

೭೭೮೭೩

೪೦೬೮೯

೪೫.೬೭

೫೯.೭೩

೩೧.೪೮

ನಗರ

೩೧೭೦೦೦

೨೦೭೩೪೮

೧೧೮೩೬೨

೮೮೯೮೬

೭೪.೬೩

೮೨.೯೫

೬೫.೮೩

ಸಂಡೂರು ಒಟ್ಟು

೧೯೧೧೫೯

೮೬೦೯೨

೫೩೨೧೧

೩೨೮೮೧

೫೩.೭೬

೬೪.೬೬

೪೨.೨೪

ಗ್ರಾಮೀಣ

೧೫೭೦೦೩

೬೩೭೫೨

೪೧೩೩೧

೨೨೪೨೧

೪೮.೯೮

೬೧.೯೯

೩೫.೩೨

ನಗರ

೩೪೧೫೬

೨೨೩೪೦

೧೧೮೮೦

೧೦೪೬೦

೭೪.೫೩

೭೬.೦೬

೭೨.೮೬

ಕೂಡ್ಲಿಗಿ ಒಟ್ಟು

೨೭೧೮೯೦

೧೩೮೮೬೪

೮೫೩೬೬

೫೩೪೪೯೮

೬೦.೪೨

೭೨.೫೮

೪೭.೬೭

ಗ್ರಾಮೀಣ

೨೨೭೩೬೮

೧೧೧೫೧೩

೬೯೬೦೦

೪೧೯೧೩

೫೮.೨೯

೭೧.೧೪

೪೪.೮೪

ನಗರ

೪೪೫೨೨

೨೭೩೧೫

೧೫೭೬೬

೧೧೫೮೫

೭೦.೯೭

೭೯.೬೬

೬೧.೭೯

ಮೂಲ : ಸೆನ್ಸಸ್ ೨೦೧೧ ಮತ್ತು ಅಭಿವೃದ್ಧಿ ಅಧ್ಯಯನ ೨೦೦೩

.೧೨ ಕೃಷ್ಣನಗರ ಗ್ರಾಮಪಂಚಾಯತಿ ಸಾಕ್ಷರತೆ

ಕೃಷ್ಣನಗರ ಗ್ರಾಮಪಂಚಾಯತಿಯ ಒಟ್ಟು ಸಾಕ್ಷರತೆ ಶೇಕಡ ೪೩.೨೦ ರಷ್ಟಿದೆ. ಈ ಪಂಚಾಯತಿಯ ಒಟ್ಟು ಸಾಕ್ಷರತೆಯು ಸಂಡೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೫.೭೮ ಅಂಶಗಳಷ್ಟು ಕಡಿಮೆ ಇದ್ದರೆ, ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೭.೬೬ ಅಂಶಗಳಷ್ಟು ಕಡಿಮೆ ಇದೆ. ಕೃಷ್ಣನಗರ ಪಂಚಾಯತಿಯ ಒಟ್ಟು ಮಹಿಳೆಯರ ಸಾಕ್ಷರತೆ ಶೇಕಡ ೩೧.೫೦ ರಷ್ಟಿದೆ. ಜಿಲ್ಲೆಯ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಕೃಷ್ಣನಗರ ಗ್ರಾಮಪಂಚಾಯತಿ ಮಹಿಳೆಯರ ಸಾಕ್ಷರತೆ ಕ್ರಮವಾಗಿ ಶೇಕಡ ೫.೯೩ ಅಂಶಗಳಷ್ಟು ಮತ್ತು ಶೇಕಡ ೩.೮೨ ಅಂಶಗಳಷ್ಟು ಕಡಿಮೆ ಇದೆ. ಕೃಷ್ಣನಗರ ಗ್ರಾಮಪಂಚಾಯತಿಯ ಒಟ್ಟು ಪುರುಷರ ಸಾಕ್ಷರತೆ ಶೇಕಡ ೫೪.೧೭ ರಷ್ಟಿದೆ. ಇದು ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಪುರುಷರ ಸಾಕ್ಷರತೆಗಿಂತ ಶೇಕಡ ೯.೮೭ ಅಂಶಗಳಷ್ಟು ಕಡಿಮೆ ಇದ್ದರೆ, ಸಂಡೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಪುರುಷರ ಸಾಕ್ಷರತೆಗಿಂತ ಶೇಕಡ ೭.೮೨ ಅಂಶಗಳಷ್ಟು ಕಡಿಮೆ ಇದೆ.

 12_23_EKPSMS-KUH

ದೌಲತ್‌ಪುರ ಗ್ರಾಮದ ಒಟ್ಟು ಸಾಕ್ಷರತೆ ಶೇಕಡ ೫೧.೦೭ರಷ್ಟಿದೆ. ಇದು ಒಟ್ಟು ಗ್ರಾಮ ಪಂಚಾಯತಿಯ ಸಾಕ್ಷರತದೆಗಿಂತ ಶೇಕಡ ೭.೮೭ ಅಂಶಗಳಷ್ಟು ಅಧಿಕವಾಗಿದೆ. ಅಲ್ಲದೆ ಸಂಡೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೨.೦೯ ಅಂಶಗಳಷ್ಟು ಮತ್ತು ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಶೇಕಡ ೦.೨೧ ಅಂಶಗಳಷ್ಟು ಅಧಿಕವಾಗಿದೆ. ದೌಲತ್‌ಪುರ ಗ್ರಾಮದ ಮಹಿಳೆಯರ ಸಾಕ್ಷರತೆ ಶೇಕಡ ೬.೨೪ ಅಂಶಗಳಷ್ಟು ಕಡಿಮೆ, ದೌಲತ್‌ಪುರ ಗ್ರಾಮದ ಮಹಿಳೆಯರ ಸಾಕ್ಷರತೆಯು, ಸಂಡೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೨.೪೨ ಅಂಶಗಳಷ್ಟು ಹೆಚ್ಚಾಗಿದ್ದರೆ, ಬಳ್ಳಾರಿ ಜಿಲ್ಲೆಂiರಾಮೀಣ ಪ್ರದೇಶದ ಮಹಿಳೆಯರ ಸಾಕ್ಷರತೆಗಿಂತ ಶೇಕಡ ೦.೩೧ ಅಂಶಗಳಷ್ಟು ಅಧಿಕವಾಗಿದೆ. ಹಾಗೆಯೇ ಈ ಗ್ರಾಮದ ಪುರುಷರ ಸಾಕ್ಷರತೆ ಕೂಡ ಒಟ್ಟು ಗ್ರಾಮಪಂಚಾಯತಿ ಪುರುಷರ ಸಾಕ್ಷರತೆಗಿಂತ ಶೇಕಡ ೮.೪೧ ಅಂಶಗಳಷ್ಟು ಹೆಚ್ಚಾಗಿದ್ದರೆ, ತಾಲ್ಲೂಕಿನ ಗ್ರಾಮೀಣ ಪ್ರದೇಶಧ ಪುರುಷಕರ ಸಾಕ್ಷರತೆಗಿಂತ ಶೇಕಡ ೦.೮೬ ಅಂಶಗಳಷ್ಟು ಅಧಿಕವಾಗಿದೆ. ಆದರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪುರುಷರ ಸಾಕ್ಷರತೆಗಿಂತ ಶೇಕಡ ೧.೧೯ ಅಂಶಗಳಷ್ಟು ದೌಲತ್‌ಪುರ ಗ್ರಾಮದ ಪುರುಷರ ಸಾಕ್ಷರತೆ ಕಡಿಮೆ ಇದೆ.

ಕೃಷ್ಣನಗರ ಗ್ರಾಮಪಂಚಾಯತಿ ಸಾಕ್ಷರತೆಯು ಸಂಡೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಕ್ಷರತೆಗಿಂತ ಶೇಕಡ ೫.೭೮ ಅಂಶಗಳಷ್ಟು ಕಡಿಮೆ ಇದೆ. ಸಾಕ್ಷರತೆಯ ದೃಷ್ಟಿಯಿಂದ ಕೃಷ್ಣನಗರವು ದೌಲತ್ ಪುರಕ್ಕಿಂತ ಶೇಕಡ ೧೩.೬೧ ಅಂಶಗಳಷ್ಟು ಹಿಂದುಳಿದಿದೆ. ಈ ಪಂಚಾಯತಿಯಲ್ಲಿ ಅತ್ಯಧಿಕ ಪುರುಷರ ಸಾಕ್ಷರತೆ ಶೇಕಡ ೬೨.೮೫ ರಷ್ಟು ದೌಲತ್‌ಪುರದಲ್ಲಿದ್ದರೆ, ಮಹಿಳೆಯರ ಅತ್ಯಧಿಕ ಸಾಕ್ಷರತೆ ಕೂಡ ಶೇಕಡ ೩೭.೭೪ ಅದೇ ಗ್ರಾಮದಲ್ಲಿದೆ. ಇಲ್ಲಿ ಸಾಕ್ಷರತೆಯ ಲಿಂಗತಾರತಮ್ಯ ಶೇಕಡ ೨೫.೧೧ ಅಂಶಗಳಷ್ಟಿದೆ. ಹಾಗೆಯೇ ಪುರುಷರ ಅತಿಕಡಿಮೆ ಸಾಕ್ಷರತೆ ಶೇಕಡ ೪೯. ೨೪ರಷ್ಟು ಕೃಷ್ಣನಗರದಲ್ಲಿದ್ದರೆ. ಮಹಿಳೆಯರ ಅತಿಕಡಿಮೆ ಸಾಕ್ಷರತೆ ಶೇಕಡ ೨೮.೩೪ ಅದೇ ಗ್ರಾಮದಲ್ಲಿದೆ. ಇಲ್ಲಿ ಸಾಕ್ಷರತೆಯ ಲಿಂಗತಾರತಮ್ಯ ಶೇಕಡ ೨೦.೮೯ ಅಂಶಗಳಷ್ಟಿದೆ. ಒಟ್ಟಾರೆ ಕೃಷ್ಣನಗರ ಗ್ರಾಮಪಂಚಾಯತಿ ಸಾಕ್ಷರತೆ ಅಧ್ಯಯನಕ್ಕೆ ಒಳಪಡಿಸಿದ ಇತರ ಮೂರು ಗ್ರಾಮಪಂಚಾಯತಿಗಳಿಗಿಂತ ಎಲ್ಲಾ ದೃಷ್ಟಿಯಿಂದಲೂ ಕಡಿಮೆ.

.೧೩ ಉಪಸಂಹಾರ

ನಮ್ಮ ಅಧ್ಯಯನ ಸಾಕ್ಷರತೆಯಲ್ಲಿ ಕಂಡುಕೊಂಡಿರುವ ಅಂಶಗಳು ಈ ಕೆಳಕಂಡಂತೆ ಇವೆ. ರಾಷ್ಟ್ರ ವ್‌ತು ರಾಜ್ಯದ ಸಾಕ್ಷರತೆಯ ಲಕ್ಷಣವಾದ ಪುರುಷರ ಮತ್ತು ಮಹಿಳೆಯರ ನಡುವಿನ ಸಾಕ್ಷರತೆಯ ಅಂತರವು ನಾವು ಅಧ್ಯಯನ ನಡೆಸಿದ ಪ್ರದೇಶದಲ್ಲಿಯೂ ಇದೆ. ಆದರೆ ರಾಷ್ಟ್ರ ಮತ್ತು ರಾಜ್ಯದ ಮಟ್ಟದಲ್ಲಿ ಸಾಕ್ಷರತೆಯಲ್ಲಿ ಇರುವ ಲಿಂಗತಾರತಮ್ಯ ಅಂತರ ವಿಶಾಲವಾಗಿದ್ದರೂ, ಗ್ರಾಮ ಮಟ್ಟದಲ್ಲಿ ಈ ತಾರತಮ್ಯ ಅತ್ಯಧಿಕವಾಗಿದೆ ಎಂಬುದನ್ನು ನಮ್ಮ ಅಧ್ಯಯನ ಸಾಬೀತು ಪಡಿಸುತ್ತದೆ. ಇದನ್ನು ಒಂದು ಉದಾಹರಣೆಯ ಮೂಲಕ ಸಾಬೀತು ಪಡಿಸಬಹುದು. ನಾವು ಅಧ್ಯಯನ ನಡೆಸಿದ ಗ್ರಾಮಗಳಲ್ಲಿ ಅತ್ಯಧಿಕ ಪುರುಷರ ಸಾಕ್ಷರತೆ ಶೇಕಡ ೯೨.೪೩ರಷ್ಟು ತೂರಮರಿ ಗ್ರಾಮದಲ್ಲಿದ, ಮಹಿಳೆಯರ ಅತ್ಯಧಿಕ ಸಾಕ್ಷರತೆ ಶೇಕಡ ೪೯.೮೦ರಷ್ಟು ಬೀಳಗಿ ಗ್ರಾಮದಲ್ಲಿದೆ. ಇಲ್ಲಿ ಇವೆರಡರ ನಡುವಿನ ಸಾಕ್ಷರತೆಯಲ್ಲಿ ಲಿಂಗತಾರತಮ್ಯ ಶೇಕಡ ೪೨.೬೩ ಅಂಶಗಳಷ್ಟಿದೆ. ನಾವು ಅಧ್ಯಯನ ನಡೆಸಿದ ಗ್ರಾಮಗಳಲ್ಲಿ ಮತ್ತು ಗ್ರಾಮಪಂಚಾಯತಿಗಳಲ್ಲಿ ಮಹಿಳೆಯರ ಸಾಕ್ಷರತೆ ನಿರುತ್ಸಾಹದಾಯಕವಾಗಿದೆ. ಇದಕ್ಕೆ ಮಹಿಳೆಯರ ಶಿಕ್ಷಣದ ಬಗ್ಗೆ ಸ್ಥರ್ಳಯರು ಗ್ರಾಮಸ್ಥರು ಹೊಂದಿರುವ ದಾಸೀನ್ಯವೇ ಪ್ರಮುಖ ಕಾರಣವಾಗಿದೆ. ಹೀಗಾಗಿ ಮಹಿಳಾ ಶಿಕ್ಷಣದಿಂದ ಉಂಟಾಗುವ ಅನುಕೂಲಗಳನ್ನು ಸ್ಥಳೀಯರಿಗೆ ತಿಳಿಸಿಕೊಡುವ ಪ್ರಯತ್ನಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕಾಗಿದೆ.ಅಲ್ಲದೇ ಗ್ರಾಮ ಮಟ್ಟದಲ್ಲಿ ಮಹಿಳೆಯರ ಶಿಕ್ಷಣಕುರಿತಂತೆ ಸಾಕ್ಷರತೆಯ ಸಾಮಾಜಿಕ ಆಯಾಮ ಕುರಿತು ಇನ್ನೂ ಹೆಚ್ಚಿನ ಅಧ್ಯಯನಗಳನ್ನು ನಾವು ಎದುರು ನೋಡಬೇಕಾಗಿದೆ.

ಕರ್ನಾಟಕದ ಗ್ರಾಮೀಣ ಪ್ರದೇಶದ ಒಟ್ಟು ಸಾಕ್ಷರತೆಗಿಂತ ಸ್ವಲ್ಪ ಹೆಚ್ಚಿನ ಸಾಕ್ಷರತೆ ಸಾಧಿಸಿರುವ ನಾಲ್ಕು ಗ್ರಾಮಗಳು ನಮ್ಮ ಅಧ್ಯಯನದಲ್ಲಿ ಸಿಗುತ್ತವೆ. ಅವಂದರೆ ಕಬ್ಬರಗಿ ಗ್ರಾಮಪಂಚಾಯತಿ ಬೀಳಗಿ, ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯ ತೂರಮರಿ, ತಾರಿವಾಳ ಮತ್ತು ಕೊಣ್ಣೂರು. ಇದಕ್ಕೆ ಈ ಗ್ರಾಮಗಳು ಚಿಕ್ಕದಾಗಿರುವುದು ಕಾರಣವೋ, ಒಂದೇ ಜಾತಿಗೆ ಸೇರಿದ ಕುಟುಂಬಗಳು ಹೆಚ್ಚಾಗಿರುವುದು ಕಾರಣವೋ, ಈ ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಕಡಿಮೆ ಇರುವುದು ಕಾರಣವೋ, ಎಂಬುದನ್ನು ನಮ್ಮ ಅಧ್ಯಯನ ನಿಖರವಾಗಿ ಗುರುತಿಸದೇ ಇದ್ದರೂ ಮೇಲೆ ತಿಳಿಸಿದ ನಾಲ್ಕು ಗ್ರಾಮಗಳಲ್ಲಿ ಕೃಷಿ ಸಂಬಂಧಿಸಿದ ಚಟುವಟಿಕೆ ಹೆಚ್ಚು ಪ್ರಬಲವಾಗಿರುವುದು, ಜೊತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿರುವರ ಜನಸಮುದಾಯ ಹೆಚ್ಚಾಗಿರುವುದರಿಂದ ಈ ಗ್ರಾಮಗಳ ಸಾಕ್ಷರತಾ ಪರಿಸರ ಉತ್ತಮವಾಗಿರುವುದಕ್ಕೆ ಕಾರಣವಾಗಿದೆ ಎಂಬುದನ್ನು ಹೇಳಬಹುದು. ಇದನ್ನು ಈ ರೀತಿಯೂ ನೋಡಬಹುದು. ರಾಜ್ಯದ ಹಾಗೂ ಆಯಾ ಜಿಲ್ಲೆಯ ಗ್ರಾಮೀಣ ಸಾಕ್ಷರತೆಗಿಂತ ಅತಿ ಕಡಿಮೆ ಸಾಕ್ಷರತೆ ಹೊಂದಿರುವ ಕಬ್ಬರಗಿ ಗ್ರಾಮಪಂಚಾಯತಿಯ ಕಬ್ಬರಗಿ, ಸೇಬಿನಕಟ್ಟೆ, ಮನ್ನೇರಾಳ ಗ್ರಾಮಗಳು ಹಾಗೂ ಕೃಷ್ಣನಗರ ಮತ್ತು ದೌಲತ್‌ಪುರ ಈ ಗ್ರಾಮಗಳಲ್ಲಿ ಒಟ್ಟು ಸಾಕ್ಷರತೆ ಶೇಕಡ ೫೦.೦೦ ಕ್ಕಿಂತಲೂ ಕಡಿಮೆ ಇದೆ. ಈ ಗ್ರಾಮಗಳಲ್ಲಿ ಬಹುತೇಕ ಜನರು ಕೃಷಿಯ ಜೊತೆಗೆ ಇತರ ಕೌಶಲ್ಯರಹಿತ ದುಡಿಮೆಯನ್ನು ಅವಲಂಬಿಸಿದ್ದಾರೆ. ಅವೆಂದರೆ ಕೂಲಿ, ಡ್ರೈವರ್, ಮ್ಯೆಕಾನಿಕ್, ವಾಚ್‌ಮ್ಯಾನ್ ಇತ್ಯಾದಿ. ಅಲ್ಲದೆ ಈ ಗ್ರಾಮಗಳಲ್ಲಿ ಹೆಚ್ಚಿನ ಕುಟುಂಬಗಳು ಭೂರಹಿತ ಕುಟುಂಬಗಳು. ಮೇಲೆ ತಿಳಿಸಿದ ಐದು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ, ಇತರ ಹಿಂದುಳಿದ ಜಾತಿಗೆ ಹಾಗೂ ಅಲ್ಪಸಂಖ್ಯಾತರ ಕುಟುಂಬಗಳ ಸಂಖ್ಯೆ ಮತ್ತು ಜನಸಂಖ್ಯೆ ಹೆಚ್ಚಾಗಿದೆ. ಇವುಗಳಲ್ಲಿ ಯಾವ ಅಂಶ ಆ ಗ್ರಾಮಗಳು ಸಾಕ್ಷರತೆಯಲ್ಲಿ ಹಿಂದುಳಿಯಲು ಕಾರಣ ಎಂಬುದನ್ನು ನಿರ್ದಿಷ್ಟವಾಗಿ ಹೇಳುನವುದು ಕಷ್ಟ. ಆದರೆ ಭೂ-ರಹಿತ, ಕೃಷಿಯೇತರ, ಕುಶಲ ರಹಿತ ದುಡಿಮೆ ಹಾಗೂ ಕೆಲವು ಸಾಮಾಜಿಕ ಅಂಶಗಳು ತಮ್ಮದೇ ಪ್ರಭಾವ ಮತ್ತು ಪರಿಣಾಮಗಳನ್ನು ಈ ಗ್ರಾಮಗಳ ಸಾಕ್ಷರತೆ ಬೆಳವಣಿಗೆಯ ಮೇಲೆ ಬೀರಿರುವ ಸಾಧ್ಯತೆ ಇದೆ. ಹೀಗಾಗಿ ಈ ವಿಷಯ ಕುರಿತು ಗ್ರಾಮಮಟ್ಟದಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳನ್ನು ನಾವು ಎದುರು ನೋಡಬೇಕಾಗಿದೆ. ಆದರೆ ಸಾಕ್ಷರತೆಯಲ್ಲಿ ಅತಿ ಹಿಂದುಳಿದಿರುವ ಗ್ರಾಮಗಳ, ಅದರಲ್ಲಿಯೂ ಮಹಿಳೆಯರ ಸಾಕ್ಷರತಾ ಅಭಿವೃದ್ಧಿ, ಗ್ರಾಮ ಮಟ್ಟದಲ್ಲಿ ತುರ್ತುಕ್ರಮಗಳನ್ನು ಸ್ಥಳೀಯರ ಜೊತೆ ಜಾರಿಗೊಳಿಸಬೇಕಾಗಿದೆ.