ಭಾಗ

. ಬೋಧನಾ ಮತ್ತು ಕಲಿಕಾ ಸಾಮಗ್ರಿಗಳು

ಬೋಧನಾ ಮತ್ತು ಕಲಿಕೆಯ ಸಾಮಗ್ರಿಗಳು ಶಿಕ್ಷಣದ ಗುಣಾತ್ಮಕ ಪ್ರಗತಿಗೆ ಅವಶ್ಯಕವಾಗಿ ಬೇಕು. ಇವುಗಳ ಕೊರತೆ ಮತ್ತು ದಾಸ್ತಾನು ಬಹಳ ಶಾಲೆಗಳಲ್ಲಿ ಇದೆ ಎಂಬುದು ಸಾಮಾನ್ಯ ಅಭಿಪ್ರಾಯ. ಇದು ಸ್ವಲ್ಪಮಟ್ಟಿಗೆ ವಾಸ್ತವವು ಹೌದು. ಬೋಧನಾ ಮತ್ತು ಕಲಿಕಾ ಸಾಮಗ್ರಿಗಳು ಸಾಕಾಗುವಷ್ಟು ಪ್ರಮಾಣದಲ್ಲಿ ಎಲ್ಲಾ ಶಾಲೆಗಳಲ್ಲಿ ದೊರಕದೆ ಇರಬಹುದು. ಆದರೆ ಎಲ್ಲಾ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದೊರಕುವ ಬೋಧನೆಯ ಉಪಕರಣವೆಂದರೆ ಕೋಲು ಅಥವಾ ಮಕ್ಕಳಿಗೆ ಒಡೆಯುವ ಕೋಲು. ವಿಶೇಷವೆಂದರೆ ನಾವು ಅಧ್ಯಯನ ನಡೆಸಿದ ಮೂರು ಶಾಲೆಗಳಲ್ಲಿ ವಿಜ್ಞಾನ ಕೀಟ್‌ಗಳು, ಗ್ಲೋಬ್ ಭೂಪಟ, ನಕ್ಷೆ ಇತ್ಯಾದಿ ಬೋಧನಾ ಮತ್ತು ಕಲಿಕಾ ಸಾಮಗ್ರಿಗಳ ಕೊರತೆಯು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರಲಿಲ್ಲ (ಪ್ರಯೋಗ ಸಾಮಗ್ರಿ). ಆದರೆ ಶಾಲೆಯಲ್ಲಿ ಈಗಾಗಲೇ ಇರು ಬೋಧನಾ ಸಾಮಗ್ರಿಗಳನ್ನು ಬಹಳ ಮಟ್ಟಿಗೆ ಉಪಯೋಗಿಸದೆ ಇರುವ ಸ್ಥಿತಿಯನ್ನು ಕಾಣಬಹುದು. ಅವು ಮಕ್ಕಳಿಗೆ ಸಿಗದೆ ಹಾಗೆ ಜೋಪಾನವಾಗಿ, ಬೀಗ ಹಾಕಿ ಕಪಾಟುಗಳಲ್ಲಿ ಇಡಲಾಗಿದೆ. ಈ ಸ್ಥಿತಿ ಏಕೆ ಎಂದು ಶಿಕ್ಷಕರನ್ನು ಕೇಳಿದಾಗ, ಪ್ರಾಥಮಿಕ ಹಂತದಲ್ಲಿ ಇವುಗಳನ್ನು (ಬೋಧನಾ ಮತ್ತು ಕಲಿಕಾ ಸಾಮಗ್ರಿ) ಉಪಯೋಗಿಸುವುದು ಬಹಳ ಕಷ್ಟ. ಮಕ್ಕಳಿಗೆ ಉಪಯೋಗಿಸಲು ಬರುವುದಿಲ್ಲ. ಅವುಗಳನ್ನು ಹಾಳು ಮಾಡುತ್ತಾರೆ. ಬಧನಾ ಸಾಮಗ್ರಿಗಳನ್ನು ಬಳಸಿ ಬೋಧನೆ ಮಾಡಿದರೂ ಮಕ್ಕಳಿಗೆ ಅxಲ್ವಾಗುವುದಿಲ್ಲ. ಹೀಗಾಗಿ ಅವುಗಳನ್ನು ಮಾಧ್ಯಮಿಕ ಹಂತದಲ್ಲಿ ಬೋಧನೆ ಮತ್ತು ಕಲಿಕೆಗಾಗಿ ಆಗಾಗ ಉಪಯೋಗಿಸುತ್ತೇವೆ ಎಂದು ಶಿಕ್ಷಕರು ಹೇಳುತ್ತಾರೆ. ನಾವು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಬುನಾದಿ ಹಾಕಬೇಕಾಗಿರುವುದು ಪ್ರಾಥಮಿಕ ಹಂತದಲ್ಲಿ. ಈ ಹಂತದಲ್ಲಿ ಬುನಾದಿಯನ್ನು ಕ್ರಮಬದ್ಧವಾಗಿ ಹಾಕದೇ, ಮಾಧ್ಯಮಿಕ ಹಂತದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಯತ್ನಿಸುವುದು ಎಷ್ಟರಮಟ್ಟಿಗೆ ಸರಿ. ಇನ್ನಾದರೂ ಈಗಾಗಲೇ ಇರುವ ಬೋಧನಾ ಮತ್ತು ಕಲಿಕಾ ಉಪಕರಣಗಳ ಸಮರ್ಪಕ ಬಳಕೆ ಸರಿಯಾದ ರೀತಿಯಲ್ಲಿ ನಡೆಯಲಿ ಎಂಬುದು ಈ ಅಧ್ಯಯನದ ಆಶಯ.

ನಾವು ಅಧ್ಯಯನ ನಡೆಸಿದ್ದು ಪ್ರಾಥಮಿಕ ಶಾಲೆಗಳಲ್ಲಿ ಇರುವ ಅತ್ಯಂತ ಗಂಭೀರವಾದ ಸಮಸ್ಯೆ ಎಂದರೆ ಇರುವ ಸೌಲಭ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಮತ್ತು ಉಪಯೋಗಿಸದಿರುವುದು. ಕೊರತೆ ಇರುವ ಸೌಲಭ್ಯಗಳನ್ನು ನೀಡಿದರೆ, ಅವುಗಳನ್ನು ಕ್ರಮಬದ್ಧವಾಗಿ ನಿರ್ವಹಣೆ ಮಾಡುವ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸುವ ನಂಬಿಕೆಯು ಸಹ ಇರಬೇಕು. ಗ್ರಾಮದ ಜನರು ಶಿಕ್ಷಕರ ಜೊತೆ ಸ್ವಲ್ಪ ಪ್ರಯತ್ನ ಪಟ್ಟರೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಅಲ್ಲದೆ ಸ್ಥಳೀಯವಾಗಿ ಇರುವ ಸವಲತ್ತುಗಳನ್ನು ಪಡೆದು ಶಾಲೆಗಳಲ್ಲಿ ಕಲಿಕೆಯ ಅವಕಾಶಗಳನ್ನು ವಾಸ್ತವಿಕ ನೆಲೆಯಲ್ಲಿ ಹುಟ್ಟುಹಾಕುವ ಮೂಲಕ ಬೋಧನೆ ಮತ್ತು ಕಲಿಕೆಗೆ ಹಿತಕರ ಶಾಲಾ ಪರಿಸರವನ್ನು ಕಟ್ಟಬಹುದು ಎಂಬುದಕ್ಕೆ ಕೆಲವು ಉದಾಹರಣೆಗಳಿವೆ.

ಅನೇಕ ಶಾಲೆಗಳ ಸುತ್ತಲಿನ ಆವರಣವು ಆಕರ್ಷಕವಾಗಿಲ್ಲದೆ ಇದ್ದರೆ, ಕೆಲವು ವಾಸ್ತವಿಕವಾಗಿ ಅಸಹ್ಯಕರವಾಗಿವೆ. ತರಗತಿಗಳು ನಡೆಯುವ ಕೆಲವು ಕೊಠಡಿಗಳಂತೂ ಸಹಜವಲ್ಲದ ರೂಪ ಹೊಂದಿವೆ. ಅವುಗಳು ಸ್ವಲ್ಪಮಟ್ಟಿಗೆ ಉಗ್ರಾಣಗಳಂತೆ ಕಡುಬರುತ್ತವೆ. ಈ ಸ್ಥಿತಿ ಮಕ್ಕಳ ಕಲಿಕೆಗೆ ಉತ್ತೇಜನಕಾರಿಯಾಗಿಲ್ಲ.ಸ್ವಲ್ಪ ಹೆಚ್ಚುಕಡಿಮೆ ಎಲ್ಲಾ ಶಾಲೆಗಳ ಹೊರಭಾಗದ ಆವರಣ ಕಸ ಕಡ್ಡಿಗಳಿಂದ ತುಂಬಿ ಅಸಹಜ ವಾತಾವರಣದಿಂದ ಕೂಡಿವೆ.

ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಇರುವ ಕೊಠಡಿಗಳನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸದೆ ಇರುವುದು ಇದೆ. ಕೆಲವು ಶಾಲೆಗಳಲ್ಲಿ ತರಗತಿಯನ್ನು ನಡೆಸಲು ಬೇಕಾಗುವ ಸಂಖ್ಯೆಯಲ್ಲಿ ಕೊಠಡಿಗಳು ಇದ್ದರೂ ಇಬ್ಬರು ಮೂವರು ಶಿಕ್ಷಕರು ಒಂದೇ ದಿನ ರಜೆ ಹಾಕಿದ ಸಂದರ್ಭಗಳಲ್ಲಿ ೨-೩ನೆಯ ತರಗತಿಗಳನ್ನು ಒಟ್ಟಿಗೆ ಕೂಡಿಸಿ ಕೊಂಡಿರುವ ಸ್ಥಿತಿಯೂ ಇದೆ. ಈ ಪರಿಸ್ಥಿತಿಯೂ ಕೃಷ್ಣನಗರ ಉರ್ದು ಪ್ರಾಥಮಿಕ ಶಾಲೆಯಲ್ಲಿ ಇರುವುದನ್ನು ನಾವು ಆ ಶಾಲೆಗೆ ಭೇಟಿ ನೀಡಿದ ಸಮಯದಲ್ಲಿ ಗುರುತಿಸಿದ್ದೇವೆ.

ಮಕ್ಕಳ ಬೋಧನೆಗೆ ಒದಗದೆ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಕಲಿಕಾ ಸಾಮಗ್ರಿ

ಮಕ್ಕಳ ಬೋಧನೆಗೆ ಒದಗದೆ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಕಲಿಕಾ ಸಾಮಗ್ರಿ

ಶಾಲೆಗಳಲ್ಲಿ ಬೋಧನಾ ಕಲಿಕಾ ಸಾಮಗ್ರಿಗಳು ದೊರೆಯುತ್ತವೆ. ಇವುಗಳನ್ನು ಕಪ್ಪುಹಲಗೆ ಕಾರ್ಯಕ್ರಮ, ಡಿ.ಪಿ.ಇ.ಪಿ. ಕಾರ್ಯಕ್ರಮ, ಇನ್ನೂ ಮುಂತಾದ ಕಾರ್ಯಕ್ರಮಗಳಲ್ಲಿ ಪೂರೈಸಲಾಗಿದೆ.ಆದರೆ ಇವು ಉಪಯೋಗಿಸಿದ ಮಾದರಿಯಲ್ಲಿ ಇರುವುದು ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಸಾಮಾನ್ಯ. ಅದೇನೆಂದರೆ ಈಗಾಗಲೇ ಇರುವ ಬೋಧನಾ ಕಲಿಕಾ ಸಾಮಗ್ರಿಗಳನ್ನು ಪೆಟ್ಟಿಗೆಯಲ್ಲಿ ಬೀಗ ಹಾಕಿ ಮಕ್ಕಳಿಗೆ ಸಿಗದಂತೆ ಎತ್ತರವಾದ ಸ್ಥಳದಲ್ಲಿ ಇಡಲಾಗಿದೆ. ಸಾಮಗ್ರಿಗಳು ಕಳೆದು ಹೋಗುವ ಅಥವಾ ಒಡೆದು ಹೋಗುವ ಭಯ ಶಿಕ್ಷಕರಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವು ಸಾಮಗ್ರಿಗಳು ಶಾಲೆಯ ದಾಸ್ತಾನಿನಲ್ಲಿ ಮಾತ್ರ ಇವೆ. ಕೆಲವು ಶಿಕ್ಷಕರ ಮನೆಯಲ್ಲಿ ಇರುವ ಪರಿಸ್ಥಿತಿಯೂ ಕಂಡುಬರುತ್ತದೆ. ಹೀಗೆ ಬೋಧನಾ ಮತ್ತು ಕಲಿಕಾ ಸಾಮಗ್ರಿಗಳ ಕೊರತೆಯು ಶಾಲೆಗಳಲ್ಲಿ ಇರುವುದಕ್ಕೆ ಅನೇಕ ಕಾರಣಗಳು ಇವೆ. ಇದರ ಜೊತೆಗೆ ಕೆಲವು ಶಿಕ್ಷಕರು ಬೋಧನಾ ಕಲಿಕಾ ಸಾಮಗ್ರಿಗಳನ್ನು ತರಗತಿಗಳಲ್ಲಿ ಉಪಯೋಗಿಸಲು ಅಸಹಾಯಕರಾಗಿದ್ದಾರೆ. ನಮ್ಮ ಅಧ್ಯಯನ ಸಂದರ್ಭದಲ್ಲಿ ಶೇಕಡ ೫೦ಕ್ಕಿಂತಲೂ ಕಡಿಮೆ ಶಿಕ್ಷಕರು ಬೋಧನಾ ಕಲಿಕಾ ಸಾಮಗ್ರಿಗಳನ್ನು ಉಪಯೋಗಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಇತ್ತೀಚೆಗೆ ದಿನಗಳಲ್ಲಿ ಅನೇಕ ತೊಡಕುಗಳಿಂದ ಬೋಧನಾ ಕಲಿಕೆಯ ಉಪಕರಣಗಳ ಬಳಕೆ ಮತ್ತು ನಿರ್ವಹಣೆಯಲ್ಲಿನ ಪರಿಣಾಮ ಶೂನ್ಯವಾಗಿದೆ. ಶಾಲಾ ಪರಿಸರವನ್ನು ಉತ್ತಮಗೊಳಿಸಲು ಕುರ್ಚಿ, ಮೇಜು, ಕಲಿಕಾ ಸಾಮಗ್ರಿಗಳು ಮತ್ತು ಇತ್ಯಾದಿ ಉಪಕರಣಗಳ ಪೂರೈಕೆಯಿಂದ ಮಾತ್ರ ಎಂಬುದು ಹುಸಿಯಾಗಿದೆ. ನಮ್ಮ ಅನುಭವಗಳು ನಮಗೆ ತಿಳಿಸುವಂತೆ ಬಹಳ ವಿಸ್ತೃತವಾದ ಇಂತಹ ಉಪಕರಣಗಳು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಇವುಗಳ ಪರಿಣಾಮ ಶೂನ್ಯವಾಗಿರುವುದು ತಿಳಿಯುತ್ತದೆ.

ಬೌದ್ಧಿಕ ಉಪಕರಣಗಳಿಗಿಂತ ಹೆಚ್ಚಾಗಿ, ಸ್ಥಳೀಯವಾಗಿ ದೊರಕುವ ಸಂಪನ್ಮೂಲಗಳ ಬಳಕೆಯಿಂದ ಕಲಿಕೆಗೆ ಹಿತಕರ ಮತ್ತು ಆಕರ್ಷಕವಾದ ಪರಿಸರವನ್ನು ಶಾಲಾ ಆವರಣದಲ್ಲಿ ಹುಟ್ಟುಹಾಕಲು ವಿಫಲವಾಗಿದೆ. ಹೆಚ್ಚಿನ ವ್ಯವಹಾರಿಕ ಶಾಲೆಗಳ (ಖಾಸಗಿ) ರಚನಾತ್ಮಕ ಕಾರ್ಯಕ್ರಮಗಳನ್ನೂ ರೂಪಿಸಿ ಸರಳ ಕಲಿಕಾ ಶಾಲಾ ಪರಿಸರವನ್ನೂ ಉತ್ತಮ ಭೌತಿಕ ಪರಿಸವಾಗಿ ಪರವರ್ತಿಸುವಲ್ಲಿ ಸ್ವಲ್ಪಮಟ್ಟಿಗೆ ಸಫಲವಾಗಿವೆ. ಅವುಗಳೆಂದರೆ ಶಾಲಾ ಆವರಣವನ್ನು ಸ್ವಚ್ಚವಾಗಿಡುವುದು, ಮಾದರಿಗಳನ್ನು ಮಕ್ಕಳ ಮೂಲಕ ಮಾಡಿಸುವುದು, ಬಣ್ಣ ಬಣ್ಣದ ಆಕರ್ಷಕ ಚಿತ್ರಗಳನ್ನು, ನಕ್ಷೆಗಳನ್ನು ತರಗತಿಗಳ ಗೋಡೆಗೆ ನೇತು ಹಾಕಿರುವುದು, ಚಿಕ್ಕ ಪ್ರಮಾಣದ ಕೈತೋಟ ಮಾಡಿಸುವುದು, ಪೋಷಕರ ಜೊತೆಗಿನ ಸಭೆಗಳು ಇತ್ಯಾದಿ. ಈ ಮಾದಿರಿಯು ಅಧ್ಯಯನ ನಡೆಸಿದ ಪರಿಸರದಲ್ಲಿ ಇಲ್ಲದಿರುವುದು ವಿಷಾದ ಸಂಗತಿ.

. ಶಿಕ್ಷಕರುಸಂಪನ್ಮೂಲ

ಶಾಲಾ ಸೌಲಭ್ಯಗಳ ಕೊರತೆಯಲ್ಲಿ ಪ್ರಮುಖವಾದುದು ಮಾನವ ಸಂಪನ್ಮೂಲದ ಕೊರತೆ. ಇಲ್ಲಿಶಿಕ್ಷಕರ ಕೊರತೆ ಮತ್ತು ಬೋಧನಾ ಸಮಸ್ಯೆ ಹೆಚ್ಚಿನ ಗಮನ ಸೆಳೆಯುವಂತಹದು.

ಮಕ್ಕಳು : ಶಿಕ್ಷಕರ ಪರಿಮಾಣ

ಪ್ರಸ್ತುತ ಸಂದರ್ಭದಲ್ಲಿ ಭಾರತದ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಮತ್ತು ಶಿಕ್ಷಕರ ಪರಿಮಾಣವು ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣದ ಔಪಚಾರಿಕ ಗುರಿಗಿಂತಲೂ ಬಹಳ ವಿಶಾಲವಾದದ್ದು. ಮಕ್ಕಳು ಶಿಕ್ಷಕರ ಪರಿಮಾಣವನ್ನು ಸರಕಾರಿ ಶಾಲೆಗಳಲ್ಲಿ ವ್ಯಾಖ್ಯಾನಿಸುವುದು ಹೀಗೆ. ಶಾಲೆಗೆ ಮಕ್ಕಳ ದಾಖಲಾತಿ ಪ್ರಮಾಣ ಮತ್ತು ನಿರ್ದಿಷ್ಟ ಪ್ರಾಥಮಿಕ ಶಾಲೆಗೆ ನೇಮಕಗೊಂಡಿರುವ ಶಿಕ್ಷಕರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಮಕ್ಕಳು ಶಿಕ್ಷಕರನ್ನು, ಮತ್ತೊಂದು ಅಭಿಪ್ರಾಯದಲ್ಲಿಯೂ ವ್ಯಾಖ್ಯಾನಿಸಬಹುದು. ೬ ರಿಂದ ೧೪ ವರ್ಷ ವಯೋಮಾನದ ಮಕ್ಕಳ ಒಟ್ಟು ಸಂಖ್ಯೆಯನ್ನು, ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ನೇಮಕವಾಗಿರುವ ಶಿಕ್ಷಕರ ಸಂಖ್ಯೆಯಿಂದ ಭಾಗಿಸುವ ಮೂಲಕವೂ ಇದನ್ನು ಕಂಡುಕೊಳ್ಳಬಹುದು.

ಶಿಕ್ಷಣ ಇಲಾಖೆಯ ಮಾನದಂಡದ ಪ್ರಕಾರ ಕನಿಷ್ಠ (೧:೧೦) ಒಬ್ಬ ಶಿಕ್ಷಕರಿಗೆ ೪೦ ಜನ ವಿದ್ಯಾರ್ಥಿಗಳ ಪರಿಮಾಣದಲ್ಲಿ ಇರಬೇಕು ಎಂಬುದು ನೀತಿ. ಆದರೆ ರಾಜ್ಯದ ವಿವಿಧ ಪ್ರದೇಶ ಮತ್ತು ಜಿಲ್ಲೆಗಳ ಶಿಕ್ಷಕ ಮಕ್ಕಳ ಪರಿಮಾಣದಲ್ಲಿ ಬಹಳ ವ್ಯತ್ಯಾಸಗಳಿವೆ. ಕರ್ನಾಟಕ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ಸರಾಸರಿ ಶಿಕ್ಷಕ ಮಕ್ಕಳ ಪರಿಮಾಣ, ಒಬ್ಬ ಶಿಕ್ಷಕರಿಗೆ ೧: ೩೪ ವಿದ್ಯಾರ್ಥಿಗಳು. ಉತ್ತರ ಕರ್ನಾಟಕ ಪ್ರದೇಶದಲ್ಲಿ ಈ ಪರಿಮಾಣವು ೧: ೩೮ ಇದ್ದರೆ, ಗುಲಬರ್ಗಾ ವಿಭಾಗದಲ್ಲಿ ಸರಾಸರಿ ಶಿಕ್ಷಕ ಮಕ್ಕಳ ಪರಿಮಾಣವು ೧:೪೨ ಮತ್ತು ಬೆಳಗಾವಿ ವಿಭಾಗದಲ್ಲಿ ಸರಾಸರಿ ೧:೪೦ ಇದೆ. ಬಾಗಲಕೋಟೆ ಜಿಲ್ಲೆಯ ಶಿಕ್ಷಕ ಮಕ್ಕಳ ಪರಿಮಾಣ ೧: ೩೬ ಇದ್ದರೆ, ಹುನಗುಂದ ತಾಲ್ಲೂಕಿನಲ್ಲಿ ೧:೩೧ ರಷ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಪರಿಮಾಣವು ೧:೪೫ ಇದ್ದರೆ, ಯಲಬುರ್ಗಾ ತಾಲ್ಲೂಕಿನಲ್ಲಿ ಈ ಪರಿಮಾಣವು ೧:೪೨ರಷ್ಟು ಇದೆ. ನಾವು ಅಧ್ಯಯನ ನಡೆಸಿದ ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಸರಾಸರಿ ಶಿಕ್ಷಕ ವಿದ್ಯಾರ್ಥಿಗಳ ಪರಿಮಾಣವು ೧:೪೪ ಆಗಿದೆ. ಇದನ್ನು ಶಾಲೆಯ ಮಟ್ಟಕ್ಕೆ ವಿಸ್ತರಿಸಿದರೆ ಇದು ಸ್ವಲ್ಪ ಹೆಚ್ಚು ಕಡಿಮೆಯಾಗುತ್ತದೆ.

ಕೋಷ್ಟಕ ೫.೩ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆಜ್‌ಯಮಟ್ಟದಿಂದ, ಪ್ರದೇಶ, ವಿಭಾಗ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಪಂಚಾಯತಿ ಮಟ್ಟದವರಿಗೆ ಕ್ರಮವಾಗಿ ವಿದ್ಯಾರ್ಥಿಗಳ ಸಂಕ್ಯೆಯು ಹೆಚ್ಚಾಗುತ್ತಾ ಬರುತ್ತದೆ. ವಿಶೇಷವೆಂದರೆ ಕೊಪ್ಪಳ ಜಿಲ್ಲೆ ಮತ್ತು ತಾಲ್ಲೂಕಿಗಿಂತ ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದು ೧: ೪೪ (ಹೆಚ್ಚಿನ ವಿವರಗಳಿಗೆ ನೋಡಿ ಕೋಷ್ಟಕ ಸಂಖ್ಯೆ ೫.೭) ಪ್ರಾಥಮಿಕ ಶಿಕ್ಷಣದ ಗುರಿಯಾದ ಒಬ್ಬ ಶಿಕ್ಷಕರಿಗೆ ೪೦ ಜನ ವಿದ್ಯಾರ್ಥಿಗಳು ಎಂಬ ಪರಿಮಾಣವು ಕೇವಲ ಕೆಲವು ಪ್ರದೇಶ, ಜಿಲ್ಲೆ ಹಾಗೂ ವಿಭಾಗಗಳಿಗೆ ಮಾತ್ರ ಸೀಮಿತಗೊಂಡಿದೆ. ಈ ಸಮಸ್ಯೆ ನಿಧಾನವಾಗಿ ಮುಂದೆ ಪರಿಹಾರವಾಗಬಹುದಾದರೂ ಗ್ರಾಮೀಣ ಪ್ರದೇಶದಲ್ಲಿ ಎಷ್ಟರ ಮಟ್ಟಿಗೆ ಪರಿಹಾರವಾಗುತ್ತದೆ ಎಂಬುದು ಪ್ರಶ್ನೆ.

ನಮ್ಮ ಅಧ್ಯಯನಕ್ಕೆ ಒಳಪಡಿಸಿದ ಶಾಲೆಗಳಲ್ಲಿ ಇರುವ ಶಿಕ್ಷಕ – ಮಕ್ಕಳ ಪರಿಮಾಣವನ್ನು ಕೋಷ್ಟಕದಲ್ಲಿ ಸೂಚಿಸಲಾಗಿದೆ. ಇದನ್ನು ಪ್ರತಿಶಾಲೆಯಲ್ಲಿ ಇರುವ ಒಟ್ಟು ಮಕ್ಕಳ ಸಂಖ್ಯೆಯಿಂದ, ಆ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆಯಿಂದ ಭಾಗಿಸಿ ಪಡೆದುಕೊಳ್ಳಲಾಗಿದೆ. ಬೂದಿಹಾಳ ಎಸ್.ಕೆ. ಗ್ರಾಮದಲ್ಲಿ ಇರುವ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೨೦೦ ಮಕ್ಕಳಿದ್ದಾರೆ. ಇದರಲ್ಲಿ ಬಾಲಕ ಸಂಖ್ಯೆ ೧೦೯ ಮತ್ತು ಬಾಲಕಿಯರ ಸಂಖ್ಯೆ ೯೧ ಇದೆ. ಈ ಶಾಲೆಯಲ್ಲಿ ಒಟ್ಟು ಐದು ಜನ ಶಿಕ್ಷಕರಿದ್ದಾರೆ. ಇದರಲ್ಲಿ ಒಬ್ಬರು ಮಹಿಳಾ ಶಿಕ್ಷಕರಾಗಿದ್ದಾರೆ ಉಳಿದ ನಾಲ್ಕು ಮಂದಿ ಪುರುಷಕರಾಗಿದ್ದಾರೆ. ಬೂದಿಹಾಳ ಎಸ್.ಕೆ. ಗ್ರಾಮದ ಶಾಲೆಯ ಶಿಕ್ಷಕ ಮಕ್ಕಳ ಪರಿಮಾಣವು ಒಬ್ಬ ಶಿಕ್ಷಕರಿಗೆ ೪೦ ಮಕ್ಕಳು (೧: ೪೦) ಇರುತ್ತಾರೆ. ಬೆನಕನದೋಣಿ ಗ್ರಾಮದ ಶಾಲೆಯಲ್ಲಿ ಒಟ್ಟು ೧೪೦ ಮಕ್ಕಳಿದ್ದಾರೆ. ಇಲ್ಲಿ ೭೧ ಜನ ಬಾಲಕಿಯರು ಮತ್ತು ೬೯ ಜನ ಬಾಲಕರು ಇದ್ದಾರೆ. ಈ ಶಾಲೆಯಲ್ಲಿ ಒಬ್ಬರು ಮಹಿಳಾ ಶಿಕ್ಷಕರು ಮತ್ತು ನಾಲ್ಕು ಮಂದಿ ಪುರುಷ ಶಿಕ್ಷಕರು, ಒಟ್ಟು ಐದು ಮಂದಿ ಶಿಕ್ಷಕರಿದ್ದಾರೆ. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ಒಬ್ಬ ಶಿಕ್ಷಕರಿಗೆ ೨೮ ಮಕ್ಕಳು (೧: ೨೮) ಇರುತ್ತದೆ. ನಿಡಸನೂರು ಗ್ರಾಮದ ಶಾಲೆಯಲ್ಲಿ ಒಟ್ಟು ೬೮ ಮಕ್ಕಳು ಇದ್ದಾರೆ. ಇದರಲ್ಲಿ ಬಾಲಕರ ಸಂಖ್ಯೆ ೩೧ ಇದ್ದರೆ ಬಾಲಕಿಯರ ಸಂಖ್ಯೆ ೩೭ ಇದೆ. ಈ ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರು ಪುರುಷರು. ಇಲ್ಲಿ ಶಿಕ್ಷ ಮಕ್ಕಳ ಪರಿಮಾಣ ಒಬ್ಬ ಶಿಕ್ಷಕರಿಗೆ ೩೪ ಮಕ್ಕಳು (೧:೩೮) ಇರುತ್ತಾರೆ. ತೂರಮರಿ ಗ್ರಾಮದ ಶಾಲೆಯಲ್ಲಿ ಒಟ್ಟು ೪೪ ಮಕ್ಕಳು ಇದ್ದಾರೆ. ಇವರಲ್ಲಿ ೨೧ ಜನ ಬಾಲಕರು ಮತ್ತು ೨೩ ಜನ ಬಾಲಕಿಯರಿದ್ದಾರೆ. ಈ ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರು ಮಹಿಳೆಯರಾಗಿದ್ದಾರೆ. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ೧: ೨೨ ರಷ್ಟಿದೆ. ತಾರಿವಾಳ ಗ್ರಾಮದ ಶಾಲೆಯಲ್ಲಿ ಒಟ್ಟು ೮೬ ಮಕ್ಕಳು ಇದ್ದಾರೆ. ಇವರಲ್ಲಿ ಬಾಲಯಕಿಯರ ಸಂಖ್ಯೆ ೪೬ ಮತ್ತು ಬಾಲಕರ ಸಂಖ್ಯೆ ೪೦. ಈ ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರು ಪುರುಷಕರು. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ಒಬ್ಬ ಶಿಕ್ಷಕರಿಗೆ ೩೪ ಮಕ್ಕಳು (೧:೩೮) ತೂರಮರಿ ಗ್ರಾಮದ ಶಾಲೆಯಲ್ಲಿ ಒಟ್ಟು ೪೪ ಮಕ್ಕಲು ಇದ್ದಾರೆ. ಇವರಲ್ಲಿ ೨೧ ಜನ ಬಾಲಕರು ಮತ್ತು ೨೩ ಜನ ಬಾಲಕಿಯರಾಗಿದ್ದಾರೆ. ಈ ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರು ಮಹಿಳೆಯರಾಗಿದ್ದಾರ. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ೧:೨೨ರಷ್ಟಿದೆ. ತಾರಿವಾಳ ಗ್ರಾಮದ ಶಾಲೆಯಲ್ಲಿ ಒಟ್ಟು ೮೬ ಮಕ್ಕಳು ಇದ್ದಾರೆ. ಇವರಲ್ಲಿ ಬಾಲಕಿಯರ ಸಂಖ್ಯೆ ೪೬ ಮತ್ತು ಬಾಲಕರ ಸಂಖ್ಯೆ ೪೦. ಈ ಶಾಲೆಯಲ್ಲಿ ಇರುವ ಮೂರು ಜನ ಶಿಕ್ಷಕರು ಪುರುಷರಾಗಿದ್ದಾರೆ. ಇಲ್ಲಿ ಶಿಕ್ಷಕ ವಿದ್ಯಾರ್ಥಿ ಪರಿಮಾಣ ೧:೨೯ ರಷ್ಟಿದೆ. ಕೊಣ್ಣೂರು ಗ್ರಾಮದ ಶಾಲೆಯಲಿಲ ಒಟ್ಟು ೩೨ ಮಕ್ಕಳು ಇದ್ದಾರೆ. ಇವರಲ್ಲಿ ೧೭ ಜನ ಬಾಲಕರು ಮತ್ತು ೧೭ ಜನ ಬಾಲಕಿಯರಾಗಿದ್ದಾರೆ. ಈ ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರು ಪುರುಷರರು. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ೧:೧೬ ರಷ್ಟಿದೆ. ಇದು ನಾವು ಅಧ್ಯಯನ ನಡೆಸಿದ ಗ್ರಾಮಗಳಲ್ಲಿ ಅತ್ಯಂತ ಕಡಿಮೆ ಶಿಕ್ಷಕ ಮಕ್ಕಳ ಪರಿಮಾಣವಾಗಿದೆ. ಹೇಮವಾಡಗಿ ಗ್ರಾಮದ ಶಾಲೆಯಲ್ಲಿ ಒಟ್ಟು ೬೬ ಮಕ್ಕಳಿದ್ದಾರೆ. ಇವರಲ್ಲಿ ೨೮ ಜನ ಬಾಲಕಿಯರು ಮತ್ತು ೩೮ ಜನ ಬಾಲಕರು. ಈ ಶಾಲೆಯಲ್ಲಿ ಒಬ್ಬರು ಮಹಿಳಾ ಶಿಕ್ಷಕಿ ಮತ್ತೊಬ್ಬರು ಪುರುಷ ಶಿಕ್ಷಕರು ಒಟ್ಟು ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ೧:೩೩       ರಷ್ಟಿದೆ. ಮನ್ಮಥನಾಳ ಗ್ರಾಮದ ಶಾಲೆಯಲ್ಲಿ ಒಟ್ಟು ೭೫ ಮಕ್ಕಳಿದ್ದಾರೆ. ಇವರಲ್ಲಿ ೩೨ ಜನ ಬಾಲಕರಿದ್ದರೆ, ೪೩ ಜನ ಬಾಲಕಿಯರು. ಈ ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರು ಪುರುಷರು. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ೧:೩೮ರಷ್ಟಿದೆ. ಪಾಲಥಿ ಗ್ರಾಮದಲ್ಲಿ ಇರುವ ಶಾಲೆಯಲ್ಲಿ ಒಟ್ಟು ೮೪ ಮಕ್ಕಳಿದ್ದಾರೆ. ಇವರಲ್ಲಿ ೪೦ ಜನ ಬಾಲಕರು ಮತ್ತು ೪೪ ಜನ ಬಾಲಕಿಯರು ಇದ್ದಾರೆ. ಈ ಶಾಲೆಯಲ್ಲಿ ಒಟ್ಟು ಮೂರು ಜನ ಶಿಕ್ಷಕರಿದ್ದಾರೆ. ಇವರಲ್ಲಿ ಒಬ್ಬರು ಮಹಿಳಾ ಶಿಕ್ಷಕರು, ಇಬ್ಬರು ಪುರುಷ ಶಿಕ್ಷಕರಾಗಿದ್ದಾರೆ. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ೧:೨೮ರಷ್ಟಿದೆ. ಒಟ್ಟಾರೆ ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯಲ್ಲಿ ಇರುವ ೯ ಶಾಲೆಗಳಲ್ಲಿ ಒಟ್ಟು ೭೯೫ಜನ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಬಾಲಕರ ಸಂಖ್ಯೆ ೩೯೭ ಮತ್ತು ಬಾಲಕಿಯರ ಸಂಖ್ಯೆ ೩೯೮. ಈ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೨೬ ಶಿಕ್ಷಕರಿದ್ದಾರೆ. ಇವರಲ್ಲಿ ಆರು ಜನ ಮಹಿಳಾ ಶಿಕ್ಷಕಿಯರು. ಉಳಿದ ೨೦ ಜನ ಪುರುಷ ಶಿಕ್ಷಕರು. ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯಲ್ಲಿ ಶಿಕ್ಷಕ ಮಕ್ಕಳ ಪಿರಮಾಣ ೧:೩೧ರಷ್ಟಿದೆ. ಇದು ರಾಜ್ಯದ ಸರಾಸರಿ ಶಿಕ್ಷಕ ಮಕ್ಕಳ ಪರಿಮಾಣಕ್ಕಿಂತಲೂ ಕಡಿಮೆ. ಅಲ್ಲದೇ ಪ್ರದೇಶ, ವಿಭಾಗ, ಜಿಲ್ಲೆ, ತಾಲ್ಲೂಕಿನ ಶಿಕ್ಷಕ ಮಕ್ಕಳ ಸರಾಸರಿ ಪರಿಮಾಣಕ್ಕಿಂತ ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯ ಶಿಕ್ಷಕ ಮಕ್ಕಳ ಪರಿಮಾಣ ಕಡಿಮೆ ಇದೆ (ನೋಡಿ. ಕೋಷ್ಟಕ ೫.೫ ಮತ್ತು ೫.೬)

ಯರೇಹಂಚಿನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೪೭೮ ವಿದ್ಯಾರ್ಥಿಗಳಿದ್ದು ಹತ್ತು ಮಂದಿ ಶಿಕ್ಷಕರುಗಳು ಇದ್ದಾರೆ. ಇದರಲ್ಲಿ ಐದು ಮಂದಿ ಪುರುಷಕರು ಮತ್ತು ಐದು ಮಂದಿ ಮಹಿಳಾ ಶಿಕ್ಷಕರು. ೪೭೮ ಮಕ್ಕಳ ಒಟ್ಟು ಸಂಖ್ಯೆಯಲ್ಲಿ ಬಾಲಕರ ಸಂಖ್ಯೆ ೨೫೮. ಮತ್ತು ಬಾಲಕಿಯರ ಸಂಖ್ಯೆ ೨೨೦ ಆಗಿರುತ್ತದೆ. ಭಿನ್ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ನೇಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೩೬೫ ವಿದ್ಯಾರ್ಥಿಗಳಿದ್ದು ಇದರಲ್ಲಿ ೨೦೬ ಗಂಡು ಮಕ್ಕಳಾಗಿದ್ದರೆ, ೧೫೯ ಹೆಣ್ಣು ಮಕ್ಕಳಿರುತ್ತಾರೆ. ಭಿನ್ನಾಳ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೮ ಮಂದಿ ಶಿಕ್ಷಕರಿದ್ದಾರೆ. ಇದರಲ್ಲಿ ೬ ಮಂದಿ ಪುರುಷರು ಮತ್ತು ಇಬ್ಬರು ಮಹಿಳಾ ಶಿಕ್ಷಕರಿದ್ದಾರೆ. ಇಲ್ಲಿನ ಶಿಕ್ಷಕ ಮಕ್ಕಳ ಪರಿಮಾಣ ೧:೪೬ ಆಗಿರುತ್ತದೆ. ಇನ್ನೂ ಸಿದ್ನೇಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೨೧೪ ಮಕ್ಕಳಿದ್ದಾರೆ. ಈ ಶಾಲೆಯ ಬಾಲಕರ ಸಂಖ್ಯೆ ೧೧೧ ಮತ್ತು ಬಾಲಕಿಯರ ಸಂಖ್ಯೆ ೨೧೪ ಇರುತ್ತದೆ. ಸಿದ್ನೇಕೊಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕ ಮಕ್ಕಳ ಪರಿಮಾಣವು ೧:೩೬ ಇರುವುದು ವಿಶೇಷ. ಈ ಶಾಲೆಯ ನಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಗುರಿಗಿಂತ ಕಡಿಮೆ ವಿದ್ಯಾರ್ಥಿಗಳು ಇದ್ದರೆ ಒಬ್ಬ ಶಿಕ್ಷಕರಿಗೆ ೩೬ ಜನ ವಿಜ್ಯಾರ್ಥಿಗಳು ಇದ್ದಾರೆ. ಆದರೂ ಈ ಶಾಲೆಗೆ ನಾವು ಭೇಟಿ ನೀಡಿದಾಗ ಒಬ್ಬರು ಅಥವಾ ಇಬ್ಬರು ಶಿಕ್ಷಕರು ರಜೆಯಲ್ಲಿದುದರಿಂದ ಒಂದನೆಯ ಮತ್ತು ಎರಡನೆಯ ತರಗತಿಯನ್ನು ಒಂದೇ ಕೊಠಡಿಯಲ್ಲಿ ನಡೆಸುತ್ತಿದದ್ದು ತಿಳಿದುಬಂದಿದೆ. ಮೂರು ಶಾಲೆಗಳಿಂದ ೨೪ ಮಂದಿ ಶಿಕ್ಷಕರಿದ್ದಾರೆ. ಪುರುಷ ಶಿಕ್ಷಕರ ಸಂಖ್ಯೆ ೧೭ ಮತ್ತು ಮಹಿಳಾ ಶಿಕ್ಷಕರ ಸಂಖ್ಯೆ ಕೇವಲ ೭ ಆಗಿರುತ್ತದೆ. ಒಟ್ಟು ಯರೇಹಂಚಿನಾಳ ಗ್ರಾಮಪಂಚಾಯತಿಯ ಶಿಕ್ಷಕ ಮಕ್ಕಳ ಪರಿಮಾಣವು. ೧ :೪೪ ಆಗಿದೆ. ಇದು ನಮ್ಮ ಶೈಕ್ಷಣಿಕ ನೀತಿಯ ಮಾನದಂಡಕ್ಕೆ ಬಹಳ ಹತ್ತಿರವಾಗಿದೆ. ಶಿಕ್ಷಣ ಇಲಾಖೆಯ ಪ್ರಕಾರ ೪೦ ಮಂದಿ ವಿದ್ಯಾರ್ಥಿಗಲಿಗೆ ಒಬ್ಬ ಶಿಕ್ಷಕ ಇರಬೇಕು ಎಂಬುದು ನೀತಿ. ಆದರೆ ನಾವು ಅಧ್ಯಯನ ನಡೆಸಿದ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಮೂರು ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕ ಮಕ್ಕಳ ಪರಿಮಾಣವು ಈ ರೀತಿ ಇದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕ ಮಕ್ಕಳ ಪರಿಮಾಣವು ಈ ರೀತಿ ಇದೆ. ಸರ್ಕಾರಿ ಪ್ರಾಥಮಿಕ ಶಾಲೆ ಯರೇಹಂಚಿನಾಳ ೧:೪೭. ಸರ್ಕಾರಿ ಪ್ರಾಥಮಿಕ ಶಾಲೆ ಭಿನ್ನಾಳ ೧:೪೬. ಸರ್ಕಾರಿ ಪ್ರಾಥಮಿಕ ಶಾಲೆ ಸಿದ್ನೇಕೊಪ್ಪ ೧:೩೬. ಒಟ್ಟು ಗ್ರಾಮಪಂಚಾಯತಿ ೧:೪೪ ಇದ್ದೆ. ಇದು ಎಲ್ಲಾ ಶಿಕ್ಷಕರು ರಜೆ ಹಾಕದೆ ಶಾಲೆಗೆ ಸರಿಯಾಗಿ ಪ್ರತಿದಿನ ತಪ್ಪದೇ ಬಂದರೆ ಮಾತ್ರ. ಒಬ್ಬ ಶಿಕ್ಷಕ ಮೇಲಿನ ರೀತಿ ಸರಾಸರಿ ೪೭, ೪೬, ೩೬ ವಿದ್ಯಾರ್ಥಿಗಳಿಗೆ ಬೋಧನೆ ಕಲಿಕೆಯನ್ನು ಹೇಳಿಕೊಡಬಹುದು. ಈ ರೀತಿಯ ಶಿಕ್ಷಕ ಮಕ್ಕಳ ಪರಿಮಾಣ ಹೊಂದಿರುವ ಶಾಲೆಗಳಲ್ಲಿ ಕಲಿಕೆಯ ಪ್ರಮಾಣವು ಸ್ವಲ್ಪಮಟ್ಟಿಗೆ ಉತ್ತಮವಾಗಿತ್ತದೆ ಎಂಬುದು ಶಿಕ್ಷಣ ಇಲಾಖೆಯ ಮತ್ತು ಶಿಕ್ಷಣ ತಜ್ಞರ ನಂಬಿಕೆ. ಈ ಅಂಶವು ಶಿಕ್ಷಕರು ಉತ್ತಮ ಗುಣಮಟ್ಟದ ಬೋಧನೆಯನ್ನು ಕಾಪಾಡಿಕೊಂಡು ಬರಲು ಸಹಕಾರಿಯಾಗಿದೆ.

ಕಬ್ಬರಗಿ ಗ್ರಾಮದ ಶಾಲೆಯಲ್ಲಿ ಒಟ್ಟು ೪೯೨ ಮಕ್ಕಳಿದ್ದಾರೆ. ಇವರಲ್ಲಿ ೨೧೦ ಜನ ಬಾಲಕಿಯರು ಮತ್ತು ೨೮೨ ಜನ ಬಾಲಕರು ಇದ್ದಾರೆ. ಈ ಶಾಲೆಯಲ್ಲಿ ಒಬ್ಬರು ಮಹಿಳಾ ಶಿಕ್ಷಕಿ ಮತ್ತು ಎಂಟು ಮಂದಿ ಪುರುಷ ಶಿಕ್ಷಕರು ಒಟ್ಟು ಒಂಬತ್ತು ಮಂದಿ ಶಿಕ್ಷಕರಿದ್ದಾರೆ. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ೧:೫೫ ರಷ್ಟಿದೆ. ಇದು ಕಬ್ಬರಗಿ ಗ್ರಾಮಪಂಚಾಯತಿ ವ್ಯಾಪ್ತಿಯ ಶಾಲೆಗಳಲ್ಲೇ ಅಧಿಕ. ಸೇಬಿನಕಟ್ಟೆ ಗ್ರಾಮದ ಶಾಲೆಯಲ್ಲಿ ಒಟ್ಟು ೨೪೮ ಮಕ್ಕಳಿದ್ದಾರೆ. ಇವರಲ್ಲಿ ೧೧೬ ಜನ ಬಾಲಕಿಯರು ಮತ್ತು ೧೩೨ ಜನ ಬಾಲಕರು ಇದ್ದಾರೆ. ಈ ಶಾಲೆಯಲ್ಲಿ ಒಟ್ಟು ಐದು ಜನ ಶಿಕ್ಷಕರು ಇದ್ದಾರೆ. ಇವರಲ್ಲಿ ಐದು ಜನ ಪುರುಷಕರು, ಇಬ್ಬರು ಮಹಿಳಾ ಶಿಕ್ಷಕಿಯಾಗಿದ್ದಾರೆ. ಇಲ್ಲಿ ಶಿಕ್ಷಕ-ಮಕ್ಕಳ ಪರಿಮಾಣ ೧:೩೬ರಷ್ಟಿದೆ. ಮನ್ನೇರಾಳ ಗ್ರಾಮದಲ್ಲಿನ ಶಾಲೆಯಲ್ಲಿ ಒಟ್ಟು ೩೪೨ ಮಕ್ಕಳು ಇದ್ದಾರೆ. ಇವರಲ್ಲಿ ಬಾಲಕರ ಸಂಖ್ಯೆ ೨೦೧ ಮತ್ತು ಬಾಲಕಿಯರ ಸಂಖ್ಯೆ ೧೪೧ ಇದೆ. ಈ ಶಾಲೆಯಲ್ಲಿ ಒಟ್ಟು ೧೭೧ ಮಕ್ಕಳಿದ್ದಾರೆ. ಇವರಲ್ಲಿ ೮೦ ಜನ ಬಾಲಕರು ಮತ್ತು ೯೧ ಜನ ಬಾಲಕಿಯರು ಇದ್ದಾರೆ. ಈ ಶಾಲೆಯಲ್ಲಿ ಇರುವ ಐದುಜನ ಶಿಕ್ಷಕರು ಪುರುಷರಾಗಿದ್ದಾರೆ. ಇಲ್ಲಿ ಶಿಕ್ಷಕ ಮಕ್ಕಳ ಪರಿಮಾಣ ೧:೩೫ರಷ್ಟಿದೆ. ಒಟ್ಟಾರೆ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ನಾಲ್ಕು ಶಾಲೆಗಳಿಂದ ಒಟ್ಟು ೧೨೫೩ ಮಕ್ಕಳು ಇದ್ದಾರೆ. ಇವರಲ್ಲಿ ಬಾಲಕರ ಸಂಖ್ಯೆ ೬೯೫ ಮತ್ತು ಬಾಲಕಿಯರ ಸಂಖ್ಯೆ ೫೫೮ ಇದೆ. ಈ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಶಾಲೆಗಳು ಸೇರಿ ಒಟ್ಟು ೨೯ ಜನ ಶಿಕ್ಷಕರಿದ್ದಾರೆ. ಇವರಲ್ಲಿ ನಾಲ್ಕು ಜನ ಮಹಿಳಾ ಶಿಕ್ಷಕಿಯರಿದ್ದರೆ ಉಳಿದ ೨೫ ಜನ ಶಿಕ್ಷಕರು ಪುರುಷರಾಗಿದ್ದಾರೆ. ಒಟ್ಟು ಕಬ್ಬರಗಿ ಪಂಚಾಯತಿಯ ಶಿಕ್ಷಕ ಮಕ್ಕಳ ಪರಿಮಾಣ ೧:೪೪ ಇದೆ. ಇದು ರಾಜ್ಯದ ಶಿಕ್ಷಕ ಮಕ್ಕಳ ಪರಿಮಾಣಕ್ಕಿಂತ ಸ್ವಲ್ಪ ಹೆಚ್ಚು ಅನಿಸಿದ್ದರೂ ಕೊಪ್ಪಳ ಜಿಲ್ಲೆಯ ಶಿಕ್ಷಕ ಮಕ್ಕಳ ಪರಿಮಾಣಕ್ಕಿಂತ ಕಡಿಮೆ ಇರುವುದು ಆಶಾದಾಯಕ.

ಕೋಷ್ಟಕ . – ಶಿಕ್ಷಕ ಮಕ್ಕಳ ಸರಾಸರಿ ಪರಿಮಾಣ ರಾಜ್ಯಮಟ್ಟದಿಂದ ತಾಲ್ಲೂಕು ಮಟ್ಟದವರೆಗೆ

ಕ್ರ.ಸಂ.

ವಿವರಣೆ

ಶಿಕ್ಷಣ ಮಕ್ಕಳ ಸರಾಸರಿ ಪರಿಮಾಣ

೧. ರಾಜ್ಯದ ಸರಾಸರಿ

೧:೩೪

೨. ಉತ್ತರ ಕರ್ನಾಟಕದ ಸರಾಸರಿ

೧:೩೪

೩. ಗುಲಬರ್ಗಾ ವಿಭಾಗದ ಸರಾಸರಿ

೧:೪೨

೪. ಬಳ್ಳಾರಿ ಜಿಲ್ಲೆಯ ಸರಾಸರಿ

೧:೪೨

೫. ಸಂಡೂರು ತಾಲ್ಲೂಕು ಸರಾಸರಿ

೧:೪೬

೬. ಕೃಷ್ಣನಗರ ಗ್ರಾ. ಪಂ. ಸರಾಸರಿ

೧:೭೪

ಮೂಲ: ಕ್ಷೇತ್ರಕಾರ್ಯದ ಮಾಹಿತಿ

ಕೃಷ್ಣನಗರ ಗ್ರಾಮಪಂಚಾಯತಿಯಲ್ಲಿ ಇರುವ ನಾಲ್ಕು ಶಾಲೆಗಳಲ್ಲಿ ಇರುವ ಶಿಕ್ಷಕ ಮಕ್ಕಳ ಪರಿಮಾಣವನ್ನು ಕೋಷ್ಟಕ ೫.೩ ಮತ್ತು ೫.೪ರಲ್ಲಿ ಸೂಚಿಸಲಾಗಿದೆ. ದೌಲತ್‌ಪುರ ಕಿರಯ ಪ್ರಾಥಮಿಕ ಶಾಲೆ (ಕನ್ನಡ)ಯಲ್ಲಿ ಒಟ್ಟು ೨೦೮ ವಿದ್ಯಾರ್ಥಿಗಳಿದ್ದು, ನಾಲ್ಕು ಮಂದಿ ಶಿಕ್ಷಕರು ಇದ್ದಾರೆ. ಇದರಲ್ಲಿ ಎರಡು ಮಂದಿ ಪುರುಷರು ಮತ್ತು ಒಬ್ಬರು ಮಹಿಳಾ ಶಿಕ್ಷಕರು. ಈ ಶಾಲೆಯ ಶಿಕ್ಷಕ ಮಕ್ಕಳ ಪರಿಮಾಣವು ೧:೫೨ ಆಗಿದೆ. ಅದೇ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ (ಉರ್ದು) ಯಲ್ಲಿ ಒಟ್ಟು ೧೯೫ಮಂದಿ ವಿದ್ಯಾರ್ಥಿಗಳು ಇದ್ದರೆ, ಐದು ಮಂದಿ ಶಿಕ್ಷಕರಿದ್ದಾರೆ. ಇವರಲ್ಲಿ ಮೂರು ಮಂದಿ ಪುರುಷ ಶಿಕ್ಷಕರು ಎರಡು ಮಂದಿ ಮಹಿಳಾ ಶಿಕ್ಷಕರು ಇದ್ದಾರೆ. ಈ ಶಾಲೆಯ ಶಿಕ್ಷಕ ಮಕ್ಕಳ ಪರಿಮಾಣವು ೧:೪೦ ಆಗಿದೆ. ಇದು ಕೃಷ್ಣನಗರ ಗ್ರಾಮಪಂಚಾಯತಿಯಲ್ಲಿ ಅತ್ಯಂತ ಕಡಿಮೆ ಶಿಕ್ಷಕ ಮಕ್ಕಳ ಪರಿಮಾಣವಾಗಿದೆ.

ಕೋಷ್ಟಕ . -ಶಾಲಾವಾರು ಮಕ್ಕಳ ಮತ್ತು ಶಿಕ್ಷಕರ ಸಂಖ್ಯೆ ಹಾಗೂ ಪರಿಮಾಣ

ಶಾಲೆಯ ಹೆಸರು ಮತ್ತು ಮಾಧ್ಯಮ

ಮಕ್ಕಳ ಸಂಖ್ಯೆ

ಶಿಕ್ಷಕರ ಸಂಖ್ಯೆ

ಪರಿಮಾಣ

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಶಿಕ್ಷಕ: ಮಕ್ಕಳು

ದೌಲತ್ಪುರ (ಕನ್ನಡ)

೧೩೯

೬೯

೨೦೮

೦೩

೦೧

೦೪

೧:೫೨

ದೌಲತ್‌ಪುರ (ಉರ್ದು)

೬೦

೧೩೮

೧೯೮

೦೩

೦೨

೦೫

೧:೪೦

ಕೃಷ್ಣನಗರ (ಕನ್ನಡ)

೩೯೫

೨೮೩

೬೭೮

೦೨

೦೩

೦೫

೧:೮೫

ಕೃಷ್ಣನಗರ (ಉರ್ದು)

೪೪

೧೧೯

೧೬೩

೦೧

೦೨

೦೩

೧:೫೪

ಒಟ್ಟು ಗ್ರಾಮ ಪಂಚಾಯತಿ

೬೩೮

೬೦೯

೧೨೪೪

೦೯

೦೮

೧೭

೧:೭೪

ಮೂಲ: ಕ್ಷೇತ್ರಕಾರ್ಯದ ಮಾಹಿತಿ

ಕೃಷ್ಣನಗರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ (ಕನ್ನಡ)ಯಲ್ಲಿ ಒಟ್ಟು ೬೭೮ ವಿದ್ಯಾರ್ಥಿಗಳು ಇದ್ದಾರೆ. ಆ ಶಾಲೆಯಲ್ಲಿ ಇರುವ ಒಟ್ಟು ಶಿಕ್ಷಕರ ಸಂಖ್ಯೆ ಐದು, ಇದರಲ್ಲಿ ಎರಡು ಮಂದಿ ಪುರುಷ ಶಿಕ್ಷಕರು, ಮೂರು ಮಂದಿ ಮಹಿಳಾ ಶಿಕ್ಷಕರು. ಈ ಶಾಲೆಯ ಶಿಕ್ಷಕ ಮಕ್ಕಳ ಪರಿಮಾಣವು ೧:೮೫ ಇದೆ. ಇದು ಇಡೀ ಗ್ರಾಮಪಂಚಾಯತಿಯ ವ್ಯಾಪ್ತಿಯ ಶಾಲೆಗಳಲ್ಲಿ ಮಾತ್ರ ಅತ್ಯಂತ ಅಧಿಕ ಎಂದು ಕಂಡುಬರುತ್ತದೆ. ಈ ಸಂಖ್ಯೆಯು ಗಾಬರಿಯನ್ನು ಹುಟ್ಟಿಸುತ್ತದೆ. ಇದನ್ನು ಶಿಕ್ಷಣ ಇಲಾಖೆ ಇನ್ನೂ ಕಂಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇರುವ ಶೈಕ್ಷಣಿಕ ಸೌಲಭ್ಯಗಳಿಗೆ ಹಿಡಿದ ಕನ್ನಡಿಯಂತಿದೆ. ಇಂತಹ ಶಾಲೆಗಲು ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಾಮೀಣ ಪ್ರದೇಶಗಳಲ್ಲಿ ಸಿಗಬಹುದು. ಕೃಷ್ಣನಗರ ಕಿರಿಯ ಪ್ರಾಥಮಿಕ ಶಾಲೆ (ಉರ್ದು) ಯಲ್ಲಿ ಒಟ್ಟು ಮಕ್ಕಳ ಸಂಖ್ಯೆ ೧೬೩. ಶಿಕ್ಷಕರ ಸಂಖ್ಯೆ ಮೂರು, ಇದರಲ್ಲಿ ಒಬ್ಬರು ಪುರುಷ ಶಿಕ್ಷಕರಿದ್ದರೆ ಇಬ್ಬರು ಮಹಿಳಾ ಶಿಕ್ಷಕರು. ಈ ಶಾಲೆಯ ಶಿಕ್ಷಕ ಮಕ್ಕಳ ಸರಾಸರಿ ಪ್ರಿಮಾಣ ೧:೫೪ ಆಗಿದೆ. ಈ ಗ್ರಾಮಪಂಚಾಯತಿಯ ಒಟ್ಟು ನಾಲ್ಕು ಶಾಲೆಗಳಲ್ಲಿ ಇರುವ ಒಟ್ಟು ಮಕ್ಕಳ ಸಂಖ್ಯೆ ೧೨೪೪. ಶಿಕ್ಷಕರ ಸಂಖ್ಯೆ ೧೭. ಇದರಲ್ಲಿ ಪುರುಷ ಶಿಕ್ಷಕರು ೯ ಮಂದಿ, ಮಹಿಳಾ ಶಿಕ್ಷಕರು ೮ ಮಂದಿ. ಇಲ್ಲಿ ಪುರುಷ ಹಾಗೂ ಮಹಿಳಾ ಶಿಕ್ಷಕರ ಸಂಖ್ಯೆಯು ಹೆಚ್ಚು ಕಡಿಮೆ ಸಮನಾಗಿದೆ. ಈ ಗ್ರಾಮಪಂಚಾಯತಿಯಲ್ಲಿ ಶಿಕ್ಷಕ-ಮಕ್ಕಳ ಸರಾಸರಿ ಪಿರಮಾಣವು ೧:೭೪ ಆಗಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಕರ್ನಾಟಕದ ಗ್ರಾಮೀಣ ಪ್ರೇದಶಗಳಲ್ಲಿ ಒಬ್ಬ ಶಿಕ್ಷಕರಿಗೆ ೬೦ ಮಂದಿ ಮಕ್ಕಳು ಇದ್ದಾರೆ (೧:೬೦) ಎಂದು ಇದೆ. ಆದರೆ ನಮ್ಮ ಅಧ್ಯಯನದಲ್ಲಿ ಎರಡು ಗ್ರಾಮದ ಒಟ್ಟು ನಾಲ್ಕು ಶಾಲೆಗಳಲ್ಲಿ ಸರಾಸರಿ ಶಿಕ್ಷಕ ಮಕ್ಕಳ ಪರಿಮಾಣವು ಒಬ್ಬ ಶಿಕ್ಷಕನಿಗೆ ೭೪ ಮಕ್ಕಳಿದ್ದಾರೆ. ಈ ಸಮಸ್ಯೆಯನ್ನು ಇನ್ನಾದರೂ ಸಂಬಂಧಪಟ್ಟ ಇಲಾಖೆಯು ಪರಿಹರಿಸಲಿ ಎಂದು ಈ ಅಧ್ಯಯನ ಆಶಿಸುತ್ತದೆ.

ಕೋಷ್ಟಕ . – ರಾಜ್ಯದಿಂದ ಗ್ರಾಮಪಂಚಾಯತಿ ಮಟ್ಟದವರೆಗೆ ಶಿಕ್ಷಕ : ಮಕ್ಕಳ ಪರಿಮಾಣ

ಕ್ರ.ಸಂ

ವಿವರಣೆ

ಶಿಕ್ಷಕ ಮಕ್ಕಳ ಸರಾಸರಿ ಪರಿಮಾಣ

೧. ರಾಜ್ಯದ ಸರಾಸರಿ

೧:೩೪

೨. ಉತ್ತರ ಕರ್ನಾಟಕದ ಸರಾಸರಿ

೧:೩೪

೩. ಬೆಳಗಾಂ ವಿಭಾಗದ ಸರಾಸರಿ

೧:೪೦

೪. ಬಾಗಲಕೋಟೆ ಜಿಲ್ಲೆಯ ಸರಾಸರಿ

೧:೩೬

೫. ಹುನಗುಂದ ತಾಲ್ಲೂಕಿನ ಸರಾಸರಿ

೧:೩೪

೬. ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿ ಸರಾಸರಿ

೧:೩೧

ಮೂಲ: ಕ್ಷೇತ್ರಕಾರ್ಯದ ಮಾಹಿತಿ

ಆದರೆ ನಾವು ಅಧ್ಯಯನ ನಡೆಸಿದ ಶಾಲೆಗಳಲ್ಲಿ ಯಾವ ಶಿಕ್ಷಕರು ರಜೆ ಹಾಕದೆ ಇರುವ ಪರಿಸ್ಥಿತಿ ನಮಗೆ ನೋಡಲು ಸಹ ಸಿಗಲಿಲ್ಲ. ಉದಾಹರಣೆಗೆ ಯರೇಹಂಚಿನಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಮಹಿಳಾ ಶಿಕ್ಷಕರು ಅನಾರೋಗ್ಯದ ಕಾರಣದೀರ್ಘಾವಧಿ ರಜೆಯಲ್ಲಿ ಹೋಗಿರುತ್ತಾರೆ. ಭಿನ್ನಾಳ ಮತ್ತು ಸಿದ್ನೇಕೊಪ್ಪ ಎರಡು ಗ್ರಾಮದ ಶಾಲೆಗಳಲ್ಲಿ ತರಬೇತಿಗೆಂದು ಪ್ರಿತಿ ಶಾಲೆಯಿಂದ ಒಬ್ಬರು ಶಿಕ್ಷಕರು ಹೋಗಿರುತ್ತಾರೆ. ಒಂದು ಅಧ್ಯಯನದ ಪ್ರಕಾರ ಪ್ರತಿವರ್ಷದಲ್ಲಿ ಶಿಕ್ಷಕರ ಸಂಭವನೀಯ ಹಾಜರಾತಿ ೨೨೦ ದಿನಗಳು ಮಾತ್ರ (ನೋಡಿ. ಹೆಚ್ಚಿನ ವಿವರಕ್ಕೆ ಪರಿಣಾಮಕಾರಿ ಬೋಧನಾ ಸಮಯ) ಇದಲ್ಲದೆ ಸುಮಾರು ೩೦ಕ್ಕೂ ಹೆಚ್ಚಿನ ದಿನಗಳು ಅಥವಾ ಕೆಲ ವಿಶೇಷ ಸಮಯಗಳಲ್ಲಿ ಇದರ ಹೆಚ್ಚಿನ ರಜೆದಿನಗಳು ಶಿಕ್ಷಕರಿಗೆ ಔಪಚಾರಿಕವಾಗಿ ದೊರೆಯುವ ರಜೆಗಳಾಗಿರುತ್ತವೆ. ಹೀಗಾಗಿ ನಾವು ಶಾಲೆಗೆ ಭೇಟಿ ನೀಡಿದ ಸಂದರ್ಭಗಳಲ್ಲಿ, ಒಂದನೆಯ ಕೊಠಡಿಯಲ್ಲಿ ಎರಡು ತರಗತಿಗಳು ನಡೆಯುತ್ತಿದ್ದು ಸಾಮಾನ್ಯವಾಗಿತ್ತು. ಹೀಗಾಗಿ ಶಾಲೆಯಲ್ಲಿ ದೊರೆಯುವ ಶಿಕ್ಷಕ ವಿದ್ಯಾರ್ಥಿಗಳ ಪರಿಮಾಣ ಕೇವಲ ಔಪಚಾರಿಕ. ಹೆಚ್ಚಿನ ಸಂದರ್ಭಗಳಲ್ಲಿ ಒಬ್ಬ ಶಿಕ್ಷಕರು ೪೫ ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಬೋಧನೆ ಕಲಿಕೆಯನ್ನು ಹೇಳಿಕೊಡುತ್ತಿದ್ದುದು ಕಂಡುಬರುತ್ತದೆ. ಇದು ಉತ್ತಮ ಗುಣಟ್ಟದ ಬೋಧನೆಯನ್ನು ಕಾಪಾಡಿಕೊಂಡು ಬರಲು ಸಹಕಾರಿಯಾಗುವುದಿಲ್ಲ. ಇನ್ನಾದರೂ ಈ ಸಮಸ್ಯೆ ಪರಿಹರಿಸಲು ಹೆಚ್ಚಿನ ಆದ್ಯತೆ ನೀಡಲಿ ಎಂದು ಈ ಅಧ್ಯಯನ ಆಶಿಸುತ್ತದೆ.

ಕೋಷ್ಟಕ . – ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯಲ್ಲಿ ಗ್ರಾಮವಾರು ಶಿಕ್ಷಕ ಮಕ್ಕಳ : ಪರಿಮಾಣ

ಕ್ರ. ಸಂ

ಗ್ರಾಮದ ಹೆಸರು

ಮಕ್ಕಳ ಸಂಖ್ಯೆ

ಶಿಕ್ಷಕರ ಸಂಖ್ಯೆ

ಪರಿಮಾಣ

ಬಾಲಕ

ಬಾಲಕಿ

ಒಟ್ಟು

ಪುರುಷ

ಮಹಿಳೆಯರು

ಒಟ್ಟು

ಶಿಕ್ಷಕರು

ಮಕ್ಕಳು

೦೧ ಬೂದಿಹಾಳ ಎಸ್.ಕೆ.

೧೦೯

೯೧

೨೦೦

೪೦

೦೨ ಬೆನಕನದೋಣಿ

೫೯

೭೧

೧೪೦

೨೮

೦೩ ನಿಡಸನೂರು

೩೧

೩೭

೬೮

೩೪

೦೪ ತೂರಮುರಿ

೨೧

೨೩

೪೪

೨೨

೦೫ ತಾರಿವಾಳ

೪೦

೪೬

೮೬

೨೯

೦೬ ಕೊಣ್ಣೂರು

೧೭

೧೫

೩೨

೧೬

೦೭ ಹೇಮವಾಡಗಿ

೩೮

೨೮

೬೬

೩೩

೦೮ ಮನ್ಮಥನಾಳ

೩೨

೪೩

೭೫

೩೮

೦೯ ಪಾಲಥಿ

೪೦

೪೪

೮೪

೨೮

ಒಟ್ಟು ಗ್ರಾಮಪಂಚಾಯತಿ

೩೯೭

೩೯೮

೭೯೫

೨೦

೦೬

೨೬

೩೧

ಮೂಲ : ಕ್ಷೇತ್ರ ಕಾರ್ಯದ ಮಾಹಿತಿ

ಏಕ ಶಿಕ್ಷಕ ಶಾಲೆಗಳನ್ನು ಶಿಕ್ಷಣ ಇಲಾಖೆಯು ದಾಖಲೆಗಳಲ್ಲಿ ಔಪಚಾರಿಕವಾಗಿ ನಿಷೇಧಿಸಿದೆ. ಆದರೆ ರಾಷ್ಟ್ರದಲ್ಲಿ ಶೇಕಡ ೧೧ಕ್ಕಿಂತಲೂ ಹೆಚ್ಚಿನ ಪ್ರಾಥಮಿಕ ಶಾಲೆಗಳು ಏಕ ಶಿಕ್ಷಕ ಶಾಲೆಗಳಾಗಿವೆ ಎಂದು ಕೆಲವು ಸಮೀಕ್ಷಗಳಿಂದ ತಿಳಿಯುತ್ತದೆ. (ಪ್ರೋಬ್, ೧೯೯೯). ನಾವು ಅಧ್ಯಯನ ಸಮಯದಲ್ಲಿ ಒಂದು ಶಾಲೆಯ ಎಲ್ಲಾ ತರಗತಿಗಳನ್ನು ಒಬ್ಬರೇ ಶಿಕ್ಷಕರು ನಡೆಸುತ್ತಿರುವ ಶಾಲೆಯನ್ನು ನಾವು ನೋಡಲಿಲ್ಲ. ಆದರೆ ಒಬ್ಬರೆ ಶಿಕ್ಷಕರು ಎರಡು ತರಗತಿಗಳನ್ನು ಅಥವಾ ಮೂರು ತರಗತಿಗಳನ್ನು ಒಂದೇ ಕೊಠಡಿಯಲ್ಲಿ ಬೋಧನೆ ಕಲಿಕೆ ಪ್ರಕ್ರಿಯೆಯನ್ನು ನಿರ್ವಹಿಸುತ್ತಿರುವ ಪರಿಸ್ಥಿತಿಯನ್ನು ಗುರುತಿಸಿದ್ದೇವೆ. ಇಲ್ಲಿ ಸ್ಪಷ್ಟವಾಗುವ ಅಂಶವೆಂದರೆ, ವಿವಿಧ ವಯೋಮಾನದ ಗುಂಪುಗಳಿಗೆ ಮತ್ತು ಅಧಿಕ ಸಂಖ್ಯೆಯ ಮಕ್ಕಳಿಗೆ ಒಬ್ಬರೇ ಶಿಕ್ಷಕರು ಬೋಧನೆ ಕಲಿಕೆಯ ಕಾರ್ಯದಲ್ಲಿ ತೊಡಗಿದಾಗ ಈ ಚಟುವಟಿಕೆಯ ಗುಣಮಟ್ಟದ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆಗಳು ಹೆಚ್ಚು. ಇದು ಕೇವಲ ವಿದ್ಯಾರ್ಥಿಗಳ ಕಲಿಕೆಯ ಮಟ್ಟದ ಮೇಲೆ ಮಾತ್ರ ನಕರಾತ್ಮಕ ಪರಿಣಾಮ ಬೀರುವುದಿಲ್ಲ. ಶಿಕ್ಷಕರ ನೈತಿಕ ಮತ್ತು ಬೋಧನಾ ಸ್ಥಿತಿಯ ಮೇಲು ಪರಿಣಾಮ ಬೀರುತ್ತದೆ. ಈ ಸಮಸ್ಯೆಯ ಪರಿಣಾಮವು ಮಕ್ಕಳಿಂದ, ಮಕ್ಕಳಿಗೆ ಮತ್ತು ಶಿಕ್ಷಕರ ನಡುವೆ ಭಿನ್ನವಾಗಿರಬಹುದು. ಆದರೆ ಏಕಕಾಲದಲ್ಲಿ ಬಹು ತರಗತಿಗಳಿಗೆ ಬೋಧನಾ ಸ್ಥಿತಿಯು ಶೇಕಡ ೫೦ ರಷ್ಟು ಶಾಲೆಗಳಲ್ಲಿ ಕಂಡುಬರುವುದು ಸಾಮಾನ್ಯ. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಂದು ತರಗತಿಗೆ ಒಬ್ಬ ಶಿಕ್ಷಕ ಅಥವಾ ಒಂದು ವಿಷಯಕ್ಕೆ ಒಬ್ಬರೇ ಶಿಕ್ಷಕರು ಇರುವುದು ಕೇವಲ ಕೆಲವೇ ಸರಕಾರಿ ಶಾಲೆಗಳಲ್ಲಿ. ಇಂತಹ ಸ್ಥಿತಿ ಬಹಳ ಮಟ್ಟಿಗೆ ನಗರ ಅಥವಾ ಪಟ್ಟಣ ಪ್ರದೇಶದ ಶಾಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.