ಗ್ರಾಮಪಂಚಾಯತಿಯ ಮಟ್ಟದಲ್ಲಿ ಶಾಲಾ ದಾಖಲಾತಿಯನ್ನು ಬಿಸಿಯೂಟ ಜಾರಿಗೆ ಬಂದ ವರ್ಷದಿಂದ ಬಿಡಿ ಬಿಡಿಯಾಗಿ ನೋಡಿದಾಗ ಸ್ಥಳೀಯ ವಿಚಿತ್ರಗಳು ನಮಗೆ ತಿಳಿಯುತ್ತವೆ. ಹೀಗಾಗಿ ಪ್ರತಿ ಗ್ರಾಮಪಂಚಾಯತಿಯ (ನಿರ್ದಿಷ್ಟವಾಗಿ ೨೦೦೦-೦೧, ೨೦೦೧-೦೨, ೨೦೦೨-೦೩ ಮತ್ತು ೨೦೦೩-೦೪) ಒಟ್ಟು ನಾಲ್ಕು ಶೈಕ್ಷಣಿಕ ವರ್ಷಗಳ ಶಾಲಾ ದಾಖಲಾತಿಯ ಬೆಳವಣಿಗೆಯನ್ನು ಪ್ರತ್ಯೇಕವಾಗಿ ಮುಂದೆ ವಿವರಿಸಲಾಗಿದೆ.

ಬೂದಿಹಾಳ ಎಸ್.ಕೆ. ಗ್ರಾಮ ಪಂಚಾಯತಿಯಲ್ಲಿ ೨೦೦೦-೦೧ನೆಯ ಶೈಕ್ಷಣಿಕ ಸಾಲಿನಲ್ಲಿ ಸರಾಸರಿ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೬.೩೨ರಷ್ಟಿದೆ. ಇದರಲ್ಲಿ ಬಾಲಕರ ದಾಖಲಾತಿ ಬೆಳವಣಿಗೆ ಪ್ರಮಾಣವು ಶೇಕಡ ೮.೩೩ರಷ್ಟಿದೆ. ೨೦೦೧-೦೨ನೆಯ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣವು ಶೇಕಡ ೧೩.೯೩ ಇದೆ. ಇದರಲ್ಲಿ ಬಾಲಕರ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೧೧.೮೩ರಷ್ಟು ಮತ್ತು ಬಾಲಕಿಯರ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೧೫.೯೫ರಷ್ಟಿದೆ೨೦೦೨-೦೩ನೆಯ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಈ ಸಾಲಿನಲ್ಲಿ ಒಟ್ಟು ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ -೦.೨೫ರಷ್ಟಿದೆ. ಇದರಲ್ಲಿ ಬಾಲಕರ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೦.೫೨ ಮತ್ತು ಬಾಲಕಿಯರ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ -೦.೯೮ರಷ್ಟು. ಇದು ನಮಗೆ ನಕಾರಾತ್ಮಕವಗಿ ಕಂಡರೂ ೨೦೦೩-೦೪ನೆಯ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ ೧.೫೩ ಪ್ರಮಾಣದಲ್ಲಿ ಮತ್ತು ಬಾಲಕರ ಶಾಲಾ ದಾಖಲಾತಿ ಪ್ರಮಾಣವು ಶೇಕಡ ೪.೪೭ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಬಾಲಕಿಯರ ದಾಖಲಾತಿಯಲ್ಲಿ ಶೇಕಡ -೧.೨೪ರಷ್ಟು ನಕಾರಾತ್ಮಕವಾಗಿದೆ.

ಕೋಷ್ಟಕ ೬.೧ – ೧೯೯೫-೯೬ ರಿಂದ ೨೦೦೩-೦೪ರ ವರೆಗೆ ಶಾಲಾ ದಾಖಲಾತಿ ಶೇಕಡವಾರು ಬೆಳವಣಿಗೆಯ ಸರಾಸರಿ ಪ್ರಮಾಣ

ಕ್ರ.ಸಂ.

ಗ್ರಾ. ಪಂ. ಹೆಸರು

ಬಾಲಕ

ಬಾಲಕಿ

ಒಟ್ಟು

೧. ಬೂದಿಹಾಳ ಎಸ್.ಕೆ

೭.೮೮

೫೩.೬೬

೨೬.೭೯

೨. ಯರೇಹಂಚಿನಾಳ

೭.೮೮

೧೬.೫೩

೧೧.೭೦

೩. ಕಬ್ಬರಗಿ

೨೮.೪೬

೮೭.೮೭

೪೯.೫೨

೪. ಕೃಷ್ಣನಗರ

೩೩.೩೩

-೧.೬೭

೧೪.೬೮

ಕೋಷ್ಟಕ ೬.೨ – ೧೯೯೫-೯೬ ರಿಂದ ೨೦೦೦-೦೧ರವರೆಗೆ ಶಾಲಾ ದಾಖಲಾತಿ ಶೇಕಡವಾರು ಬೆಳವಣಿಗೆಯ ಸರಾಸರಿ ಪ್ರಮಾಣ

 

ಕ್ರ.ಸಂ.

ಗ್ರಾ. ಪಂ. ಹೆಸರು

ಬಾಲಕ

ಬಾಲಕಿ

ಒಟ್ಟು

೧. ಬೂದಿಹಾಳ ಎಸ್.ಕೆ

-೮.೧೫

೩೫.೫೨

೯.೮೮

೨. ಯರೇಹಂಚಿನಾಳ

೬.೭೮

-೨.೩೩

೨.೭೭

೩. ಕಬ್ಬರಗಿ

೧೫.೧೫

೧೯.೫೮

೧೬.೮೩

೪. ಕೃಷ್ಣಾನಗರ

೩೩.೩೩

-೧೪.೧೫

೧೫.೧೭

ಮೂಲ : ಕ್ಷೇತ್ರಕಾರ್ಯದ ಮಾಹಿತಿ

ಯರೇಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮೂರು ಶಾಲೆಗಳಲ್ಲಿ ೨೦೦೦-೦೧ನೆಯ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ಸರಾಸರಿ ಶಾಲಾದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೦.೦೯ರಷ್ಟಿದ್ದು, ಅದರಲ್ಲಿ ಬಾಲಕರ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ -೧.೦೨ ಮತ್ತು ಬಾಲಕಿಯರ ದಾಖಲಾತಿ ಬೆಳವಣಿಗೆಯು ಶೇಕಡ ೦.೮೧ ಪ್ರಮಾಣದಾಗಿದೆ. ೨೦೦೧-೦೨ನೆಯ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ ೩.೯೯ ಪ್ರಮಾಣದಲ್ಲಿದ್ದು, ಬಾಲಕರ ದಾಖಲಾತಿ ಬೆಳವಣಿಗೆಯು ಶೇಕಡ ೨.೨೩ ಪ್ರಮಾಣದಲ್ಲಿ ಮತ್ತು ಬಾಲಕಿಯರ ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ ೬.೭೦ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ೨೦೦೨-೦೩ನೆಯ ಶೈಕ್ಷಣಿಕ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ -೬.೫೧ ರಷ್ಟಿದ್ದು, ಬಾಲಕರ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ -೫.೩೭ರಷ್ಟು ಮತ್ತು ಬಾಲಕಿಯರ ದಾಖಲಾತಿ ಬೆಳವಣಿಗೆಯು ಶೇಕಡ -೭.೮೦ರ ಪ್ರಮಾಣದಲ್ಲಿ ನಕಾರಾತ್ಮಕವಾಗಿದೆ. ಆದರೆ ೨೦೦೩-೦೪ನೆಯ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ ೫.೮೨ರ ಪ್ರಮಾಣದಲ್ಲಿ , ಬಾಲಕರ ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ ೪.೯೭ರ ಪ್ರಮಾಣದಲ್ಲಿ ಮತ್ತು ಬಾಲಕಿಯರ ದಾಖಲಾತಿಯು ಶೇಕಡ ೬.೮೧ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ.

ಕೋಷ್ಟಕ ೬.೩ – ೨೦೦೦-೦೧ ರಿಂದ ೨೦೦೩-೦೪ರ ಶಾಲಾ ದಾಖಲಾತಿ ಶೇಕಡವಾರು ಬೆಳವಣಿಗೆಯ ಸರಾಸರಿ ಪ್ರಮಾಣ

ಕ್ರ.ಸಂ.

ಗ್ರಾ. ಪಂ. ಹೆಸರು

ಬಾಲಕ

ಬಾಲಕಿ

ಒಟ್ಟು

೧. ಬೂದಿಹಾಳ ಎಸ್.ಕೆ

೧೭.೪೫

೧೩.೩೯

೧೫.೩೮

೨. ಯರೇಹಂಚಿನಾಳ

೧.೦೩

೧೯.೩೩

೮.೬೯

೩. ಕಬ್ಬರಗಿ

೧೧.೫೫

೮.೭೭

೧೦.೧೦

೪. ಕೃಷ್ಣಾನಗರ

೦.೦೦

೧೪.೫೩

-೦.೪೩

ಮೂಲ : ಕ್ಷೇತ್ರಕಾರ್ಯದ ಮಾಹಿತಿ

ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕು ಶಾಲೆಗಳಲ್ಲಿ ೨೦೦೦-೦೧ನೆಯ ಶೈಕ್ಷಣಿಕ ವರ್ಷದಲ್ಲಿ ಸರಾಸರಿ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೦.೦೮ರಷ್ಟು, ಬಾಲಕರ ದಾಖಲಾತಿ ಬೆಳವಣಿಗೆ ಶೇಕಡ -೨.೧೯ ಮತ್ತು ಬಾಲಕಿಯರ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೩.೦೧ರಷ್ಟು, ೨೦೦೧-೦೨ನೆಯ ಸಾಲಿನಲ್ಲಿ ಒಟ್ಟು ಸರಾಸರಿ ಶಾಲಾ ದಾಖಲಾತಿ ಬೆಳವಣಿಗೆ ಶೇಕಡ ೨.೦೨ರ ಪ್ರಮಾಣದಲ್ಲಿದ್ದು, ಬಾಲಕರ ಶಾಲಾ ದಾಖಲಾತಿ ಬೆಳವಣಿಗೆ ಶೇಕಡ ೦.೬೪ ಪ್ರಮಾಣದಲ್ಲಿ ಮತ್ತು ಬಾಲಕಿಯರ ಶಾಲಾ ದಾಖಲಾತಿ ಬೆಳವಣಿಗೆ ಶೇಕಡ ೩.೭೦ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ೨೦೦೨-೦೩ನೆಯ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣವು ಇತರ ಗ್ರಾಮಪಂಚಾಯತಿಗಳಿಗಿಂತ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. ಒಟ್ಟು ಸರಾಸರಿ ಶಾಲಾ ದಾಖಲಾತಿ ಬೆಳವಣಿಗೆ ಶೇಕಡ ೬.೯೦ ಪ್ರಮಾಣದಲ್ಲಿದ್ದು, ಬಾಲಕ ಶಾಲಾ ದಾಖಲಾತಿ ಶೇಕಡ ೫.೧೦ರ ಪ್ರಮಾಣದಲ್ಲಿ ಮತ್ತು ಬಾಲಕಿಯರ ಶಾಲಾ ದಾಖಲಾತಿ ಶೇಕಡ ೯.೦೨ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ೨೦೦೩-೦೪ನೆಯ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಸರಾಸರಿ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೧.೧೨ರಷ್ಟಿದೆ. ಬಾಲಕರ ದಾಖಲಾತಿಯು ಶೇಕಡ ೫.೪೬ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಆದರೆ ಬಾಲಕಿಯರ ಶಾಲೆ ದಾಖಲಾತಿ ಬೆಳವಣಿಗೆಯು ಶೇಕಡ -೮.೪೪ ಪ್ರಮಾಣದಲ್ಲಿ ನಕಾರಾತ್ಮಕವಾಗಿದೆ.

ಕೃಷ್ಣಾನಾಗರ ಗ್ರಾಮ ಪಂಚಾಯತಿಯಲ್ಲಿ ೨೦೦೦-೦೧ನೆಯ ಶೈಕ್ಷಣಿಕ ವರ್ಷದಲ್ಲಿ ಸರಾಸರಿ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣವು ಶೇಕಡ ೧೧.೮೪ರಷ್ಟು. ಇದರಲ್ಲಿ ಬಾಲಕರ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೧೬.೦೮ರಷ್ಟು ಮತ್ತು ಬಾಲಕಿಯರ ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ-೬.೪೮ ಪ್ರಮಾಣದಲ್ಲಿದೆ. ಇದಕ್ಕೆ ಸ್ವಲ್ಪ ವ್ಯತಿರಿಕ್ತವಾಗಿ ೨೦೦೧-೦೨ನೆಯ ಶೈಕ್ಷಣಿಕ ವರ್ಷಧಲ್ಲಿ ಒಟ್ಟು ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ -೯.೮೧ ಪ್ರಮಾಣದಲ್ಲಿದ್ದು, ಬಾಲಕರ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣವು ಶೇಕಡ -೭.೦೦ರಷ್ಟಿದ್ದರೆ, ಬಾಲಕಿಯರ ದಾಖಲಾತಿ ಬೆಳವಣಿಗೆಯು ಶೇಕಡ ೦.೪೩ರ ಪ್ರಮಾಣದ್ದಾಗಿದೆ. ೨೦೦೨-೦೩ನೆಯ ಶೈಕ್ಷಣಿಕ ಸಾಲಿನಲ್ಲಿ ಸರಾಸರಿ ಒಟ್ಟು ದಾಖಲಾತಿಯು ಶೇಕಡ ೪.೮೭ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಇದರಲ್ಲಿ ಬಾಲಕರ ದಾಖಲಾತಿಯು ಶೇಕಡ ೩.೫೯ ಪ್ರಮಾಣದಲ್ಲಿ ಮತ್ತು ಬಾಲಕಿಯರ ಶಾಲಾ ದಾಖಲಾತಿಯು ಶೇಕಡ ೪.೭೫ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ೨೦೦೩-೦೪ನೆಯ ಸಾಲಿನಲ್ಲಿ ಕೃಷ್ಣಾನಗರ ಗ್ರಾಮಪಂಚಾಯತಿ ವ್ಯಾಪ್ತಿಯ ಶಾಲೆಗಳ ಸರಾಸರಿ ಒಟ್ಟು ಶಾಲಾ ದಾಖಲಾತಿಯು ಶೇಕಡ ೩.೮೦ ಪ್ರಮಾಣದಲ್ಲಿ ಮತ್ತು ಬಾಲಕಿಯರ ಶಾಲಾ ದಾಖಲಾತಿಯು ಶೇಕಡ ೮.೮೬ರಷ್ಟು ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ.

ಈ ಎಲ್ಲಾ ಅಂಕಿ ಸಂಖ್ಯೆಗಳಿಂದ ಕೆಲವು ಶೈಕ್ಷಣಿಕ ವರ್ಷದಲ್ಲಿ ಶಾಲಾ ದಾಖಲಾತಿ ಪ್ರಮಾಣದಲ್ಲಿ ಉತ್ತಮವಾದ ಬೆಳವಣಿಗೆಯಾದರೆ, ಕೆಲವು ಶೈಕ್ಷಣಿಕ ವರ್ಷದಲ್ಲಿ ಇದು ನಕಾರಾತ್ಮಕವಾಗಿದೆ ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಇದರ ಜೊತೆಗೆ ಅಧ್ಯಯನ ನಡೆಸಿದ ಮೂರು ಗ್ರಾಮ ಪಂಚಾಯತಿಗಳಲ್ಲಿ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣವು ಪ್ರಗತಿ ಕಂಡಿದ್ದರೆ, ಒಂದು ಗ್ರಾಮಪಂಚಾಯತಿಯಲ್ಲಿ ಸ್ವಲ್ಪಮಟ್ಟಿಗೆ ನಕಾರಾತ್ಮಕವಾಗಿದೆ. ಬಹುಶಃ ಈ ರೀತಿಯ ವಿಪರೀತವಾದ ಏರುಪೇರುಗಳಿಗೆ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಚಿಕ್ಕ ಪ್ರಮಾಣದ ಮಾದರಿ ಸಮೀಕ್ಷೆ, ಅಧ್ಯಯನ ನಡೆಸುವಾಗ ಪ್ರತಿ ಶಾಲೆಯ ಹಂತದಲ್ಲಿ ದೊರಕುವ ಮಾಹಿತಿಯ ಸಣ್ಣ-ಪುಟ್ಟ ತಪ್ಪುಗಳು ಕಾರಣವಾಗಿದ್ದು, ಇವು ವಿಶ್ಲೇಷಣೆಯಲ್ಲಿ ಅವಶ್ಯಕವಾದುದಕ್ಕಿಂತ ಹೆಚ್ಚಿನ ಅರ್ಥಗಳನ್ನು ನೀಡುತ್ತಿವೆ. ಇವುಗಳ ಜೊತೆಗೆ ಸ್ಥಳೀಯ ಭೌಗೋಳಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಜನಸಂಖ್ಯಾಶಾಸ್ತ್ರದ ಕಾರಣಗಳು ಇರಬಹುದಾಗಿದೆ. ಹೀಗಾಗಿ ಇವುಗಳ ಬಗ್ಗೆ ಹೆಚ್ಚು ಗಂಭೀರವಾದ ಅಧ್ಯಯನಗಳು ತಳಮಟ್ಟದಲ್ಲಿ (ಗ್ರಾಮಮಟ್ಟ) ನಡೆಯಬೇಕಾಗಿದೆ.

ಈ ಚರ್ಚೆಯನ್ನು ಮುಂದುವರಿಸುವುದಕ್ಕೆ ಮೊದಲು ನಮಗೆ ದೊರೆತ ಆನುಷಂಗಿಕ ಮಾಹಿತಿಯ ಔಚಿತ್ಯವನ್ನು ಕಂಡುಕೊಳ್ಳುವುದು ಉಚಿತ. ಮೊದಲಿಗೆ ಶಾಲಾ ದಾಖಲಾತಿಯ ಅಂಕಿ ಸಂಖ್ಯೆಗಳು ನಮಗೆ ದೊರಕುವುದು ಶಾಲೆಯ ದಾಖಲಾತಿ ಮತ್ತು ಹಾಜರಾತಿ ಪುಸ್ತಕದಿಂದ. ಇದರ ಮೇಲೇಯೇ ಸಂಪೂರ್ಣವಾಗಿ ಭರವಸೆ ಇಡುವುದು ಸ್ವಲ್ಪಮಟ್ಟಿಗೆ ಕಷ್ಟ. ಹಾಗೆಯೇ ಈ ಅಂಕಿ-ಸಂಖ್ಯೆಗಳು ಕೃತಕವಾಗಿರಲೂಬಹುದು. ಏಕೆಂದರೆ ಶಾಲೆಯ ವಾರ್ಷಿಕ ದಾಖಲಾತಿಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳು ಉಂಟಾದರೆ ಆ ವರ್ಷ ಶಾಲೆಯ ವಾರ್ಷಿಕ ದಾಖಲಾತಿಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳು ಉಂಟಾದರೆ ಆ ವರ್ಷ ಶಾಲೆಗೆ ದೊರಕುವ ಸೌಲಭ್ಯದಲ್ಲಿಯೂ ವ್ಯತ್ಯಾಸಗಳುಂಟಾಗುತ್ತವೆ. ಹೀಗಾಗಿ ಬಹುತೇಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿಗಳು ಸ್ವಲ್ಪಮಟ್ಟಿನ ಉತ್ಪ್ರೇಕ್ಷೆಗೊಳಪಡುವ ಸಾಧ್ಯತೆ ಇದೆ. ಅದೇನೆ ಇದ್ದರೂ ೨೦೦೦-೦೧, ೨೦೦೧-೦೨, ೨೦೦೨-೦೩ ಮತ್ತು ೨೦೦೩-೦೪ರ ಶೈಕ್ಷಣಿಕ ಅವಧಿಯಲ್ಲಿ ಶಾಲಾ ದಾಖಲಾತಿಯಲ್ಲಿ ಉಂಟಾಗಿರುವ ಬೆಳವಣಿಗೆಯನ್ನು ಮತ್ತು ಸಿ.ಇ.ಎಸ್. ಗುರುತಿಸಿರುವ ಅಭಿಪ್ರಾಯಗಳನ್ನು ಸರಳವಾಗಿ ಹೇಳಲು ಬರುವುದಿಲ್ಲ. ಆದರೆ ಬಹಳ ಹಿಂದಿನಿಂದಲೂ ಶಾಲಾ ದಾಖಲಾತಿಯ ಬೆಳವಣಿಗೆಗೆ ಪೂರಕವಾದ ಅಂಶಗಳು ಸ್ವಲ್ಪ ಹೆಚ್ಚು ಕಡಿಮೆ ಸ್ಥಿರವಾಗಿದೆ. ಶಾಲಾ ದಾಖಲಾತಿಯ ಬೆಳವಣಿಗೆ ಪ್ರಮಾಣ ೨೦೦೧-೦೨, ೨೦೦೨-೦೩ ಮತ್ತು ೨೦೦೩-೦೪ರಲ್ಲಿ ಸ್ವಲ್ಪ ಮಟ್ಟಿಗೆ ಉತ್ಪ್ರೇಕ್ಷೆ ಎನಿಸಿದರೂ ಇದಕ್ಕೆ ಪೂರಕವಾಗಿರುವ ಅಂಶಗಳು ನಿರ್ದಿಷ್ಟವಾಗಿ ಮೇಲೆ ತಿಳಿಸಿದ ವರ್ಷಗಳಲ್ಲಿ ಏಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ದಾಖಲಾತಿ ಹೆಚ್ಚಳವಾಗಿದೆ, ಅದರಲ್ಲಿಯೂ ಬಿಸಿಯೂಟ ಜಾರಿಗೆ ಬಂದ ನಂತರ ಈ ಬೆಳವಣಿಗೆ ಉಂಟಾಗಲು ಇರುವ ನಿರ್ದಿಷ್ಟ ಕಾರಣಗಳು ಯಾವುವು ಎಂಬುದನ್ನು ವಿವರಿಸಲು ಸಾಧ್ಯವಾಗಿಲ್ಲ. ಇದು ನಮ್ಮ ಅಧ್ಯಯನದ ಒಂದು ಮಿತಿಯೂ ಆಗಿದೆ.

ಎರಡನೆಯದಾಗಿ, ೨೦೦೦-೦೧, ೨೦೦೧-೦೨, ೨೦೦೨-೦೩ ಮತ್ತು ೨೦೦೩-೦೪ನೆಯ ಶೈಕ್ಷಣಿಕ ಸಾಲಿನಲ್ಲಿ ಶಾಲಾ ದಾಖಲಾತಿ ಹೆಚ್ಚಳಕ್ಕೆ ಬಹುಮುಖ್ಯ ಅಂಶ ಶಾಲಾ ಬಿಸಿಯೂಟ ಎಂದು ಹೇಳಲು ಬರುವುದಿಲ್ಲ. ಏಕೆಂದರೆ, ಇದಕ್ಕೆ ಇತರ ಅನೇಕ ಪೂರಕವಾದ ಅಂಶಗಳುಕೂಡ ಕಾರಣವಾಗಿವೆ. ರಾಜಸ್ಥಾನದ ಉದಾಹರಣೆಯನ್ನು ನಾವು ತೆಗೆದುಕೊಂಡರೆ, ಅಲ್ಲಿ ಶಾಲಾ ಬಿಸಿಯೂಟ ಜಾರಿಗೆ ಬಂದ ಸಂದರ್ಭದಲ್ಲಿಯೇ ಶಿಕ್ಷಕಾಸ್ ಆಫ್ಕಾ ದಾವರ” (Shikshakas Aapka Dwar) ಎಂಬ ಮತ್ತೊಂದು ಹೊಸ ಕಾರ್ಯಕ್ರಮವನ್ನು ಪ್ರಾಥಮಿಕ ಶಿಕ್ಷಣದ ವಿಸ್ತರಣೆಗಾಗಿ ಜಾರಿಗೆ ತರಲಾಗಿತ್ತು. ಇದೇ ರೀತಿ ಕರ್ನಾಟಕದಲ್ಲಿಯೂ ಶಾಲಾ ಬಿಸಿಯೂಟದ ಜೊತೆ ಜೊತೆಗೆ ಸರ್ವಶಿಕ್ಷಾ ಅಭಿಯಾನ, ಕಲಿಕಾ ಖಾತರಿ ಮತ್ತು ಎಸ್.ಡಿ.ಎಂ.ಸಿ. ಮುಂತಾದ ಕಾರ್ಯಕ್ರಮಗಳನ್ನು ಪ್ರಾಥಮಿಕ ಶಿಕ್ಷಣದ ಹರವು ಮತ್ತು ವಿಸ್ತರಣೆಗಾಗಿ ಜಾರಿಗೆ ತರಲಾಗಿದೆ. ಹೀಗೆ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗಾಗಿ ಒಂದೇ ಸಂದರ್ಭದಲ್ಲಿ ಎರಡು ಮೂರು ಕಾರ್ಯಕ್ರಮಗಳು ಒಟ್ಟಿಗೆ ನಡೆಯುವುದರಿಂದ ಒಂದು ಮತ್ತೊಂದು ಕಾರ್ಯಕ್ರಮದಲ್ಲಿ ಬೆರೆತು ಕೊಂಡಿರುತ್ತವೆ. ಅಲ್ಲದೆ ಒಂದು ಕಾರ್ಯಕ್ರಮವು ಮತ್ತೊಂದು ಪ್ರಬಾವಿಸುವ ಅಥವಾ ಎಲ್ಲಾ ಕಾರ್ಯಕ್ರಮಗಳು ಪ್ರಾಥಮಿಕ ಶಿಕ್ಷಣದ ವಿಸ್ತರಣೆ ಪ್ರಕ್ರಿಯೆಯಲ್ಲಿ ಒಟ್ಟಿಗೆ ಪ್ರಭಾವ ಬೀರುವುದರಲ್ಲಿ ಸಂದೇಹಗಳಿಲ್ಲ.ಹೀಗಾಗಿ ಕೇವಲ ಬಿಸಿಯೂಟ ಕಾರ್ಯಕ್ರಮ ಒಂದರಿಂದಲೇ ಶಾಲಾ ದಾಖಲಾತಿಯಲ್ಲಿ ಹೆಚ್ಚಳವಾಗಿದೆ ಎಂದು ಹೇಳುವುದು ಗೋಜಲುಗಳಿಗೆ ಕಾರಣವಾಗುತ್ತದೆ. ಅಲ್ಲದೆ ೧೯೯೦ರ ದಶಕದಿಂದಲೂ ಪ್ರಾಥಮಿಕ ಶಿಕ್ಷಣದ ಹರವು ಮತ್ತು ವಿಸ್ತರಣೆಗಾಗಿ ಅನೇಕ ಬಗೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರಕಾರಗಳು ರೂಪಿಸುತ್ತಿವೆ. ಬಿಸಿಯೂಟ ಜಾರಿಗೆ ಬಂದ ನಂತರವೆ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಹೆಚ್ಚಳಗೊಂಡಿರುವುದು ಅನಿರೀಕ್ಷಿತ ಅಥವಾ ಕಾಕತಾಳೀಯವೆನಿಸಿದರೂ, ಇತರ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳಿಗಿಂತ, ಶಾಲಾ ದಾಖಲಾತಿಯಲ್ಲಿ ಸಂಪೂರ್ಣವಾಗಿ ಹೆಚ್ಚಳ ಕಾಣುವುದು ಬಿಸಿಯೂಟ ಜಾರಿಗೆ ಬಂದನಂತರ ಎಂದು ಹೇಳಬಹುದು. ಬಿಸಿಯೂಟ ಕಾರ್ಯಕ್ರಮದ ಪರಿಣಾಮವಾಗಿ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣವು ಹೆಚ್ಚಳವಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಬಲ್ಲ ಅಧ್ಯಯನಗಳಿಗಾಗಿ ಎದುರು ನೋಡಬೇಕಾಗಿದೆ.

ಆದರೆ ಬೇಯಿಸಿದ ಆಹಾರವನ್ನು ಶಾಲೆಯಲ್ಲಿ ಮಕ್ಕಳಿಗೆ ನೀಡಲು ಪ್ರಾರಂಭಿಸಿದ ನಂತರ ತಿಳಿದು ಬಂದ ಅಂಶವೆಂದರೆ, ಆಹಾರ ಧಾನ್ಯ (ಬೇಯಿಸದೆ ಇರುವ) ವಿತರಣೆಯು ಮಕ್ಕಳಿಗೆ ನೇರವಾಗಿ ಪ್ರೋತ್ಸಾಹಕವಾಗಿರಲಿಲ್ಲವೆಂಬುದು. ಆದರೂ ಕೂಡ ಆಹಾರ ಧಾನ್ಯದ ವಿತರಣೆಯು ಶಾಲಾ ದಾಖಲಾತಿಯಲ್ಲಿ ಹೆಚ್ಚಿನ ಪರಿಣಾಮವನ್ನು ಉಂಟುಮಾಡಿಲ್ಲ ಎಂದು ನಿರ್ದಿಷ್ಟವಾಗಿ ಹೇಳಲು ದಾಖಲಾತಿಯಲ್ಲಿ ಹೆಚ್ಚಿನ ಪರಿಣಾಮವನ್ನು ಉಂಟುಮಾಡಿಲ್ಲ ಎಂದು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ವಾಸ್ತವಿಕವಾಗಿ ಆರಾರ ಧಾನ್ಯದ ವಿತರಣೆ, ಶಾಲೆಯಲ್ಲಿ ತಯಾರಿಸಿದ ಬಿಸಿಯೂಟದ ಆಹಾರದ ವಿತರಣೆ ಮತ್ತು ಇತರ ಎಲ್ಲಾ ಶಾಲಾ ಪ್ರೋತ್ಸಾಹಕ ಕಾರ್ಯಕ್ರಮಗಳು ಶಾಲಾ ದಾಖಲಾತಿ ಮತ್ತು ಹಾಜರಾತಿಯಲ್ಲಿ ಬದಲಾವಣೆ ಉಂಟಾಗಲೂ ಕಾರಣವಾಗಿವೆ. ಗಮನಾರ್ಹವಾದ ಸಂಗಿತಯೆಂದರೆ, ಸರಳವಾಗಿ ಆಹಾರವನ್ನು ಶಾಲಾ ಆವರಣದಲ್ಲಿ ತಯಾರಿಸಿ, ಶಾಲೆ ನಡೆಯುವ ಸಮಯದಲ್ಲಿ ಶಾಲಾ ಆವರಣದಲ್ಲಿಯೇ ವಿತರಿಸುವ ಕಾರ್ಯಕ್ರಮ, ಮಕ್ಕಳಿಗೆ ಆಹಾರ ಧಾನ್ಯಗಳನ್ನು ಮನೆಗೆ ತೆಗೆದು ಕೊಂಡು ಹೋಗಲು ನೀಡುವುದಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಮಕ್ಕಳ ಶಾಲಾ ಭಾಗವಹಿಸುವಿಕೆಯ ಮೇಲೆ ಉಂಟುಮಾಡಿದೆ.

೬.೫ ಬಿಸಿಯೂಟ-ಹಾಜರಾತಿ

ಶಾಲಾ ದಾಖಲಾತಿ ಮತ್ತು ಹಾಜರಾತಿ ಪ್ರಮಾಣದ ಬೆಳವಣಿಗೆಯಲ್ಲಿ ಬಿಸಿಯೂಟವು ಪರೋಕ್ಷ ಪ್ರಬಾವವನ್ನು ಉಂಟುಮಾಡಿದೆ ಎಂಬುದನ್ನು ಗಮನಿಸಿದೆವು. ಇಲ್ಲಿ ಬಿಸಿಯೂಟದ ಪ್ರಬಾವದಿಂದ ಶಾಲಾ ಹಾಜರಾತಿಯಲ್ಲಿ ಉಂಟಾಗಿರುವ ಬದಲಾವಣೆಯ ಕುರಿತು ಚರ್ಚಿಸಲು ಪ್ರಯತ್ನಿಸಲಾಗುವುದು. ನಾವು ಅಧ್ಯಯನಕ್ಕೆ ಒಳಪಡಿಸಿದ ೨೦ ಶಾಲೆಗಳಲ್ಲಿ ಬಿಸಿಯೂಟ ಆಚರಣೆಗೆ ಬರುವುದಕ್ಕೆ ಮೊದಲಿನ ಹಾಜರಾತಿ ಮತ್ತು ಬಿಸಿಯೂಟ ಕಾರ್ಯಕ್ರಮ ಜಾರಿಗೆ ಬಂದ ನಂತರದ ಶಾಲಾ ಹಾಜರಾತಿ ಇವುಗಳ ಹೋಲಿಕೆ ಮಾಡುವ ಮೂಲಕ ಕಂಡುಕೊಳ್ಳಲಾಗಿದೆ. ಅಂದರೆ ೧೯೯೮-೯೯, ೧೯೯೯-೨೦೦೦ ಮತ್ತು ೨೦೦೧-೦೨ನೇ ಶೈಕ್ಷಣಿಕ ವರ್ಷಗಳ ಸೆಪ್ಟೆಂಬರ್ ತಿಂಗಳ ಹಾಜರಾತಿಯನ್ನು, ೨೦೦೧-೦೨, ೨೦೦೨-೦೩ ಮತ್ತು ೨೦೦೩-೦೪ನೆಯ ಶೈಕ್ಷಣಿಕ ವರ್ಷಗಳ ಸೆಪ್ಟೆಂಬರ್‌ನ ಹಾಜರಾತಿ ಯೊಂದಿಗೆ ಹೋಲಿಕೆ ಮಾಡಿ ಕಂಡುಕೊಳ್ಳಲಾಗಿದೆ.

ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯ ವ್ಯಾಪ್ತಿಯ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮ ಜಾರಿಗೆ ಬರುವುದಕ್ಕೆ ಮೊದಲು, ಅಂದರೆ ೨೦೦೦-೦೧ನೆಯ ಶೈಕ್ಷಣಿಕ ವರ್ಷಕ್ಕೆ ಮೊದಲಿಗೆ ಸರಾಸರಿ ಒಟ್ಟು ಶಾಲಾ ಹಾಜರಾತಿಯು ಶೇಕಡ ೭೧.೬೪ರಷ್ಟಿತ್ತು. ಇದರಲ್ಲಿ ಬಾಲಕರ ಹಾಜರಾತಿ ಪ್ರಮಾಣ ಶೇಕಡ ೭೭.೧೦ ಮತ್ತು ಬಾಲಕಿಯರ ಹಾಜರಾತಿ ಪ್ರಮಾಣ ಶೇಕಡ ೬೪.೮೦ರಷ್ಟು. ಬಿಸಿಯೂಟ ಕಾರ್ಯಕ್ರಮ ಜಾರಿಗೆ ಬಂದ ನಂತರ, ಅಂದರೆ ೨೦೦೧-೦೨ನೆಯ ಶೈಕ್ಷಣಿಕ ವರ್ಷದಿಂದ ೨೦೦೩-೦೪ನೆಯ ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಸರಾಸರಿ ಒಟ್ಟು ಶಾಲಾ ಹಾಜರಾತಿಯು ಶೇಕಡ ೮೮.೧೩ರಷ್ಟು. ಇದರಲ್ಲಿ ಬಾಲಕರ ಹಾಜರಾತಿ ಶೇಕಡ ೯೨.೦೧ರಷ್ಟು ಮತ್ತು ಬಾಲಕಿಯರ ಹಾಜರಾತಿ ಶೇಕಡ ೮೪.೧೩ರಷ್ಟಿದೆ. ಯರೇಹಂಚಿನಾಳ ಗ್ರಾಮ ಪಂಚಾಯತಿಯ ಶಾಲೆಗಳಲ್ಲಿ ಬಿಸಿಯೂಟ ಜಾರಿಗೆ ಬರುವುದಕ್ಕೆ ಮೊದಲಿಗೆ, ಸರಾಸರಿ ಒಟ್ಟು ಶಾಲಾ ಹಾಜರಾತಿ ಶೇಕಡ ೬೯.೦೨ರಷ್ಟಿದೆ. ಇದರಲ್ಲಿ ಬಾಲಕರ ಶಾಲಾ ಹಾಜರಾತಿ ಶೇಕಡ ೭೪.೨೧ರಷ್ಟು ಮತ್ತು ಬಾಲಕಿಯರ ಶಾಲಾಹಾಜರಾತಿಯು ಶೇಕಡ ೬೫.೦೧ರಷ್ಟಿದೆ. ಬಿಸಿಯೂಟ ಕಾರ್ಯಕ್ರಮ ಜಾರಿಗೆಯಾದ ನಂತರ ಸರಾಸರಿ ಒಟ್ಟುಶಾಲಾ ಹಾಜರಾತಿಯು ಶೇಕಡ ೮೪.೧೨ರಷ್ಟು, ಬಾಲಕರ ಶಾಲಾ ಹಾಜರಾತಿ ಶೇಕಡ ೮೭.೩೧ರಷ್ಟು ಮತ್ತು ಬಾಲಕಿಯರ ಶಾಲಾ ಹಾಜರಾತಿಯು ಶೇಕಡ ೭೮.೮೮ ರಷ್ಟಾಗಿದೆ.

ಕಬ್ಬರಗಿ ಗ್ರಾಮ ಪಂಚಾಯತಿಯ ಶಾಲಾಗಳಲ್ಲಿ ಬಿಸಿಯೂಟ ಆಚರಣೆಗೆ ಬರುವುದಕ್ಕೆ ಮೊದಲು ಸರಾಸರಿ ಒಟ್ಟು ಶಾಲಾ ಹಾಜರಾತಿಯು ಶೇಕಡ ೬೨.೨೦ ರಷ್ಟಿದೆ. ಇದರಲ್ಲಿ ಬಾಲಕರ ಹಾಜರಾತಿ ಶೇಕಡ ೭೦.೮೪ರಷ್ಟು ಮತ್ತು ಬಾಲಕಿಯರ ಶಾಲಾಹಾಜರಾತಿ ಶೇಕಡ ೫೪.೦೧ರಷ್ಟಿದೆ.ಬಿಸಿಯೂಟ ಜಾರಿಗೆ ಬಂದನಂತರ ಕಬ್ಬರಗಿ ಗ್ರಾಮ ಪಂಚಾಯತಿಯ ವ್ಯಾಪ್ತಿ ಶಾಲೆಗಳಲ್ಲಿ ಸರಾಸರಿ ಒಟ್ಟು ಶಾಲಾ ಹಾಜರಾತಿಯು ೮೫.೦೪ರಷ್ಟಾಗಿದೆ. ಇzಲ್‌ಲಿ ಬಾಲಕರ ಶಾಲಾ ಹಾಜರಾತಿ ಶೇಕಡ ೮೯.೮೩ ರಷ್ಟು ಮತ್ತು ಬಾಲಕಿಯರ ಶಾಲಾ ಹಾಜರಾತಿ ಶೇಕಡ ೭೯.೦೮ರಷ್ಟಾಗಿದೆ. ಕೃಷ್ಣಾನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗಳಲ್ಲಿ ಶಾಲಾ ಬಿಸಿಯೂಟ ಜಾರಿಗೆ ಬರುವುದಕ್ಕೆ ಮೊದಲು, ಸರಾಸರಿ ಒಟ್ಟು ಶಾಲಾ ಹಾಜರಾತಿಯು ಶೇಕಡ ೫೯.೮೧ರಷ್ಟಿದೆ. ಇದರಲ್ಲಿ ಬಾಲಕರ ಹಾಜರಾತಿ ಶೇಕಡ ೬೮.೪೦ ಇದ್ದರೆ, ಬಾಲಕಿಯರ ಹಾಜರಾತಿ ಶೇಕಡ ೫೧.೪೩ರಷ್ಟಿದೆ. ಬಿಸಿಯೂಟ ಕಾರ್ಯಕ್ರಮ ಜಾರಿಗೆ ಬಂದನಂತರ ಅಂದರೆ ೨೦೦೧-೦೨ನೆ ಶೈಕ್ಷಣಿಕ ವರ್ಷದಿಂದ ೨೦೦೩-೦೪ನೆಯ ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಒಟ್ಟು ಸರಾಸರಿ ಶಾಲಾ ಹಾಜರಾತಿಯು ಶೇಕಡ ೭೬.೮೪ರಷ್ಟಾಗಿದೆ. ಶಾಲಾ ಹಾಜರಾತಿಯು ಶೇಕಡ ೮೧.೦೭ರಷ್ಟು ಹಾಗೂ ಬಾಲಕಿಯರ ಶಾಲಾ ಹಾಜರಾತಿಯು ಶೇಕಡ ೬೯.೭೯ರಷ್ಟಾಗಿದೆ. ಈ ಎಲ್ಲಾ ಅಂಕಿ ಸಂಖ್ಯೆಗಳಿಂದ ಬಿಸಿಯೂಟ ಕಾರ್ಯಕ್ರಮ ಜಾರಿಗೆ ಬಂದನಂತರ ಶಾಲಾ ಹಾಜರಾತಿಯಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಳವಾಗಿರುವುದು ನಮಗೆ ಸ್ಪಷ್ಟವಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಬಾಲಕಿಯರ ಶಾಲಾ ಹಾಜರಾತಿಯಲ್ಲಿ ಉತ್ತಮವಾದ ಬೆಳವಣಿಗೆಯಾಗಿರುವುದನ್ನು ಗುರುತಿಸಿಬಹುದಾಗಿದೆ.

ಹೀಗೆ ಅನೇಕ ಪುರಾವೆಗಳು ಬಿಸಿಯೂಟ ಶಾಲೆಯಲ್ಲಿ ಜಾರಿಗೆ ಬಂದ ನಂತರ ಪ್ರತಿದಿನದ ಶಾಲಾ ಹಾಜರಾತಿ ಮಾತ್ರವಲ್ಲದೇ, ವಾರ್ಷಿಕ ದಾಖಲಾತಿಯಲ್ಲಿಯೂ ಕೂಡ ಪ್ರಗತಿಯಾಗಿದೆ ಎಂದು ಹೇಳುತ್ತವೆ. ಶಾಲೆಯ ದಾಖಲಾತಿ ಮತ್ತು ಹಾಜರಾತಿಯಲ್ಲಿ ವಾಸ್ತವಿಕ ಶಾಲಾ ಹಾಜರಾತಿಗಿಂತ ತುಸು ಹೆಚ್ಚಿನ ಹಾಜರಿ ಇದೆ ಎಂದು ತೋರಿಸುವ ಪ್ರವೃತ್ತಿಯು ಶಿಕ್ಷಕರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅದೇನೆ ಇದ್ದರೂ ಅಂಕಿ ಸಂಖ್ಯೆಗಳು ಶಾಲಾ ಬಿಸಿಯೂಟ ಜಾರಿಗೆ ಬಂದ ನಂತರ ಶಾಲಾ ಹಾಜರಾತಿಯಲ್ಲಿ ಮಹತ್ವದ ಪ್ರಗತಿಯಾಗಿದೆ ಎಂಬುದನ್ನು ತಿಳಿಸುತ್ತವೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಅನೇಕ ಪೋಷಕರು, ಶಾಲೆಯಲ್ಲಿ ಬಿಸಿಯೂಟ ಜಾರಿಗೆ ಬಂದ ನಂತರ ಶಾಲಾ ಹಾಜರಾತಿಯಲ್ಲಿ ಮಹತ್ವದ ಪ್ರಗತಿಯಾಗಿದೆ ಎಂಬುದನ್ನು ತಿಳಿಸುತ್ತವೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಅನೇಕ ಪೋಷಕರು, ಶಾಲೆಯಲ್ಲಿ ಬಿಸಿಯೂಟ ಜಾರಿಗೆ ಬಂದ ನಂತರ ಪ್ರತಿದಿನ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೆಚ್ಚು ಸರಳವಾಗಿದೆ. ಮಕ್ಕಳು ಶಾಲೆಗೆ ಹೋಗುವಂತೆ ಪುಸಲಾಯಿಸುವುದು ಅಥವಾ ಮನವೊಲಿಸುವುದು ಸ್ವಲ್ಪ ಕಡಿಮೆಯಾಗಿದೆ. ಈಗ (ಬಿಸಿಯೂಟ ಜಾರಿಗೆ ಬಂದ ನಂತರ) ಮಕ್ಕಳೇ ಶಾಲೆಗೆ ಹೋಗಲು ಸಿದ್ಧವಾಗುತ್ತಾರೆ ಎಂದು ಹೇಳುತ್ತಾರೆ. ಅನೇಕ ಶಿಕ್ಷಕರು ಕೂಡ ಶಾಲಾ ಬಿಸಿಯೂಟದಿಂದ ಶಾಲೆಯ ಪ್ರತಿದಿನದ ಹಾಜರಾತಿಯಲ್ಲಿ ಹೆಚ್ಚಿನ ಪ್ರಗತಿಯಾಗಿದೆ ಎಂದು ಬೇಳುತ್ತಾರೆ. ಇದು ವಿಶೇ,ವಾಗಿ ಬಿ.ಪಿ.ಎಲ್. ಕುಟುಂಬಗಳಿಂದ ಬಂದ ಮಕ್ಕಳು ಸಂಜೆಯವರೆಗೆ ಶಾಲೆಯಲ್ಲಿ ಇರುವಂತೆ ಮಾಡಿದೆ. ಇದಕ್ಕೆ ಪೂರಕವಾಗಿ ಬಹುತೇಕ ಶಿಕ್ಷಕರು ಶಾಲಾ ಬಿಸಿಯೂಟ ಜಾರಿಗೆ ಬಂದನಂತರ ಮಧ್ಯಾಹ್ನದ ಬಿಡುವಿನ ನಂತರವೂ ಶಾಲೆಯಲ್ಲಿ ಮಕ್ಕಳು ಇರುವುದು ವೃದ್ಧಿಸಿದೆ ಎಂದು ಗುರುತಿಸುತ್ತಾರೆ. ಇದನ್ನು ನಮ್ಮ ಅಧ್ಯಯನವು ಗುರುತಿಸಿದೆ. ಮಧ್ಯಾಹ್ನದ ಊಟಕ್ಕೆ ಮನೆಗೆ ಹೋಗುತ್ತಿದ್ದ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಶಾಲೆಗೆ ಮರಳದ ಸಂದರ್ಭಗಳಿರುತ್ತಿದ್ದವು. ಇದರಿಂದ ಮಧ್ಯಾಹ್ನದ ಸಮಯದಲ್ಲಿ ಶಾಲಾ ಹಾಜರಾತಿಯು ಬೆಳಗಿನ ರೂಪವನ್ನು ಪಡೆಯುತ್ತಿರಲಿಲ್ಲ. ಆದರೆ ಶಾಲಾ ಬಿಸಿಯೂಟ ಜಾರಿಗೆ ಬಂದ ನಂತರ ಮಕ್ಕಳು ಶಾಲೆಯ ಅವಧಿ ಮುಗಿಯುವವರೆಗೆ ಶಾಲಾ ಆವರಣದಲ್ಲಿ ಮತ್ತು ತರಗತಿಗಳಲ್ಲಿ ಇರುತ್ತಾರೆ ಎಂದು ವಿವರಿಸುತ್ತಾರೆ. ಇದು ವಾಸ್ತವವೂ ಹೌದು. ಇದಕ್ಕೆ ವಿರುದ್ಧವಾಗಿ, ಈ ಕಾರ್ಯಕ್ರಮವು ತರಗತಿಯ ಬೋಧನಾ ಚಟುವಟಿಕೆಗೆ ತೊಡಕು ಉಂಟುಮಾಡಿದೆ, ಬೋಧನಾ ಪ್ರಕ್ರಿಯೆಗೆ ಅಡ್ಡಿಯಾಗಿದೆ ಎಂದು ಕೆಲವು ಶಿಕ್ಷಕರು ವಾದಿಸುತ್ತಾರೆ. ಈ ವಿಷಯ ಕುರಿತು ಮುಂದೆ ಚರ್ಚೆ ನಡೆಸಲಾಗಿದೆ.

೬.೬. ಮಕ್ಕಳ ಹಸಿವನ್ನು ಕಡಿಮೆಗೊಳಿಸುತ್ತದೆ

ಶಾಲಾ ಬಿಸಿಯೂಟದಿಂದ ಮಕ್ಕಳಲ್ಲಿ ಉಂಟಾಗಿರುವ ಪೌಷ್ಟಿಕ ಬೆಳವಣಿಗೆಗೆ ಬೆಲೆ ಕಟ್ಟುವುದು ನಮ್ಮ ಅಧ್ಯನಯದ ಸ್ವರೂಪಕ್ಕಿಂತ ಬಹಳ ದೊಡ್ಡದು. ಈ ಕಾರ್ಯಕ್ರಮದ ಪ್ರಾರಂಭಿಕ ಹಂತದಲ್ಲಿ ಆಹಾರ ಸ್ವರೂಪವು ಸರಳವಾಗಿದ್ದರೂ ಪೌಷ್ಟಿಕತೆಯ ದೃಷ್ಟಿಯಿಂದ ಬಹಳ ತೀಕ್ಷವಾದ ಪರಿಣಾಮವನ್ನು ಉಂಟುಮಾಡಿದೆ. ನಮ್ಮ ಅಧ್ಯಯನದ ಸಂದರ್ಭಧಲ್ಲಿ ಪೌಷ್ಟಿಕತೆಗೆ ಸಂಬಂಧಿಸಿದಂತೆ ಎರಡು ಅಂಶಗಳು ಕಂಡುಬಂದಿವೆ.

ಮೊದಲಿಗೆ, ಶಾಲಾ ಬಿಸಿಯೂಟವು ಬಡಕುಟುಂಬಗಳಿಂದ ಬಂದ ಮಕ್ಕಳ ಹಸಿವನ್ನು ಕಡಿಮೆಗೊಳಿಸುವ ಅಥವಾ ಕೊನೆಗಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಅನೇಕ ಮಕ್ಕಳು ಶಾಲೆಗೆ ಬರುವ ಸಮಯದಲ್ಲಿ ಹಸಿವಾಗದಿರುವುದು; ಮತ್ತೊಂದು ಬೆಳಗ್ಗೆ ಪೋಷಕರು ಸಾಮಾನ್ಯವಾಗಿ ಮನೆಯಲ್ಲಿ ವಿವಿಧ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವುದರಿಂದ ಮಕ್ಕಳಿಗೆ ಉಪಹಾರ ಸಿದ್ಧಪಡಿಸಿ ಉಪಚಾರ ಮಾಡಲು ಸಮಯವಿಲ್ಲದಿರುವುದು. ಹೀಗೆ ಮನೆಯಲ್ಲಿ ಆಹಾರ ಸೇವಿಸದೆ ಶಾಲೆಗೆ ಬಂದ ಮಕ್ಕಳಿಗೆ ಹಸಿವು ಉಂಟಾಗುವುದರಿಂದ ಶಾಲೆ ಪ್ರಾರಂಭವಾದ ಕೆಲವು ಗಂಟೆಗಳಾದ ಬಳಿಕ ಕಲಿಯುವ ಏಕಾಗ್ರತೆಯು ಮಕ್ಕಳಲ್ಲಿ ಉಳಿಯುವುದು ಬಹಳಕಷ್ಟ. ನಾವು ಅಧ್ಯಯನ ನಡೆಸಿದ ಶಾಲೆಗಳ ಎಲ್ಲಾ ಮುಖ್ಯ ಶಿಕ್ಷಕರು ಮತ್ತು ಬಹುತೇಕ ಶಿಕ್ಷಕರು ಶಾಲಾ ಬಿಸಿಯೂಟ ಜಾರಿಗೆ ಬಂದ ನಂತರ, ವಿಶೇಷವಾಗಿ ಬಡ ಕುಟುಂಬಗಳಿಂದ ಬಂದ ಮಕ್ಕಳು ಹಸಿವಿನಿಂದ ಕಲಿಕೆಯಲ್ಲಿ ಆಸಕ್ತಿ ಇಲ್ಲದೆ ಶಾಲೆ ನಡೆಯುತ್ತಿದ್ದ ಮಧ್ಯದಲ್ಲಿ ತರಗತಿಯಲ್ಲಿ ನಿದ್ರಿಸುತ್ತಿದ್ದರು. ಈ ಸಮಸ್ಯೆಯು ಬಿಸಿಯೂಟ ಜಾರಿಗೆ ಬಂದ ನಂತರ ಬಹಳ ಮಟ್ಟಿಗೆ ಕರಗಿ ಹೋಗಿದೆ ಎಂದು ಹೇಳುತ್ತಾರೆ.

ಎರಡನೆಯದಾಗಿ, ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಮತ್ತು ದಿನಕ್ಕೆ ಎರಡು ಹೊತ್ತಿನ ಊಟವು ಸಿಗದೆ ಇರುವ ಭಾಗಗಳಲ್ಲಿ, ಅದರಲ್ಲಿಯೂ ಬಿ.ಪಿ.ಎಲ್. ರೇಖೆಗಿಂತ ಕೆಳಗಿರುವ ಕುಟುಂಬಗಳಿಂದ ಬಂದ ಮಕ್ಕಳಿಗೆ ಶಾಲಾ ಬಿಸಿಯೂಟ ಹಸಿವಿನ ವಿರುದ್ಧ ರಕ್ಷಣೆ ನೀಡುತ್ತಿದೆ. ವಿಶೇಷವಾಗಿ ನಾವು ಅಧ್ಯಯನ ನಡೆಸಿದ ಪ್ರದೇಶಗಳು ಕಳೆದ ಮೂರು ವರ್ಷಗಳಿಂದ (೨೦೦೧, ೨೦೦೨, ೨೦೦೩) ಬರಪೀಡಿತವಾಗಿವೆ. ಈ ಪ್ರದೇಶಗಳಲ್ಲಿ ಪೌಷ್ಟಿಕತೆ ಬಹಳ ಕಡಿಮೆ ಇರುವ ಮಕ್ಕಳಿಗೆ ಬಿಸಿಯೂಟ ಪೌಷ್ಟಿಕತೆ ವರ್ಧಿಸುವ ಶಕ್ತಿಯನ್ನು ಹೊಂದಿದೆ. ಇದೇ ರೀತಿಯಲ್ಲಿ ಬಡಕುಟುಂಬಗಳು, ಅವದರಲ್ಲಿಯೂ ಭೂರಹಿತ ಕೃಷಿ ಕೂಲಿ ಕಾರ್ಮಿಕರ ಕುಟುಂಬದ ಮಕ್ಕಳಿಗೆ, ಮುಖ್ಯವಾಗಿ ಇಂತಹ ಹಿನ್ನೆಲೆ ಇರುವ ವಿಧವೆಯರ ಮಕ್ಕಳಿಗೆ ಶಾಲೆಗಳಲ್ಲಿ ಉಚಿತ ಊಟದ ಸೌಲಭ್ಯ ಕಲ್ಪಿಸಿರುವುದು ಹೆಚ್ಚಿನ ಪ್ರಯೋಜನವಾಗಿದೆ. ನಿರ್ದಿಷ್ಟವಾಗಿ ಇದು ಹಸಿವಿನಿಂದ ನರಳುತ್ತಿರುವ ಪ್ರದೇಶದಲ್ಲಿ ಮಕ್ಕಳಿಗೆ ಪೌಷ್ಟಿಕತೆ ಮತ್ತು ಆಹಾರದ ಭರವಸೆಯನ್ನು ನೀಡಿದೆ. ಅದರಲ್ಲಿಯೂ ಅಪೌಷ್ಟಿಕತೆಯಿಂದ ಆಗಾಗ ಮಕ್ಕಳನ್ನು ಬಾಧಿಸುವ ರೋಗಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಈ ಕಾರ್ಯಕ್ರಮ ಹೆಚ್ಚು ಪ್ರಯೋಜನಕಾರಿಯಾಗಿರುವುದರಲ್ಲಿ ಸಂಶಯವಿಲ್ಲ.

೬.೭ ಬಿಸಿಯೂಟ ಸಾಮಾಜೀಕರಣ

ಒಂದು ದೃಷ್ಟಿಯಲ್ಲಿ ಶಾಲಾ ಬಿಸಿಯೂಟವು ಶಾಲಾ ದಾಖಲಾತಿ ಹಾಜರಾತಿ ಮತ್ತು ಮಕ್ಕಳ ಪೌಷ್ಟಿಕತೆಯನ್ನು ಹೆಚ್ಚಳ ಮಾಡಿದರೆ, ಮತ್ತೊಂದು ದೃಷ್ಟಿಯಲ್ಲಿ ಇದು ತನ್ನೊಳಗೆ ಸಾಮಾಜಿಕ ಮೌಲ್ಯವನ್ನು ಹೊಂದಿದೆ. ಶಾಲೆಯಲ್ಲಿ ಎಲ್ಲಾ ಜಾತಿವರ್ಗಕ್ಕೆ ಸೇರಿದ ಮಕ್ಕಳು ಒಟ್ಟಿಗೆ ಕಲಿಯುವುದರ ಜೊತೆಗೆ, ಒಂದೆ ಬಗೆಯ ಆಹಾರವನ್ನು ಹಂಚಿಕೊಂಡು ತಿನ್ನುವುದರಿಂದ, ಜಾತಿ ವ್ಯವಸ್ಥೆಯ ಪೂರ್ವಕಲ್ಪಿತ ಆಚರಣೆಗಳು ಮತ್ತು ವರ್ಗ ಅಸಮಾನತೆಯ ಮನೋಭಾವ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ ಶಾಲಾ ಬಿಸಿಯೂಟವು ಸಾಮಾಜಿಕ ಅಸಮಾನತೆಗಳನ್ನು ಪೋಷಿಸಬಲ್ಲಂತಹ ಸಾಧ್ಯತೆಗಳನ್ನು ಸಿ.ಇ.ಎಸ್. ಅಧ್ಯಯನ ತಂಡ ಗುರುತಿಸಿದೆ. ಈ ಅಧ್ಯಯನ ತಂಡವು ರಾಜಸ್ಥಾನದ ರಾಜಮಂಡ್ರಿ ಜಿಲ್ಲೆಯ ಪಟ್ಲಂಕಿ ಭಾಗೆಲ್ ಎಂಬ ಹಳ್ಳಿಯಲ್ಲಿ ದಲಿತ ಸಮುದಾಯಗಳಿಗೆ ಸೇರಿದ ಮಕ್ಕಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿರುವುದು, ಬಹಿರಂಗವಾಗಿ ಜಾತಿ ತಾರತಮ್ಯಗಳು ನಡೆದಿರುವ ಘಟನೆಗಳನ್ನು ನಾವು ಗುರುತಿಸಿಲ್ಲ ಎಂದು ಸಿ.ಇ.ಎಸ್. ಅಧ್ಯಯನ ತಂಡ ವಿಶ್ಲೇಷಿಸಿದೆ (ಜೀನ್ ಡ್ರೀಜ್, ೨೦೦೩).

ಪ್ರಸ್ತುತ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ, ಒಟ್ಟು ೪೨೪ ಕುಟುಂಬಗಳಲ್ಲಿ ೯೮ ಕುಟುಂಬಗಳು ಪರಿಶಿಷ್ಟ ಜಾತಿಗೆ, ೫೫ ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಮತ್ತು ೨೭೧ ಕುಟುಂಬಗಳು ಇತರ ಜಾತಿ ಹಾಗೂ ಧರ್ಮಕ್ಕೆ ಸೇರಿದವು. ಕುಟುಂಬಗಳು ಪ್ರಾಥಮಿಕ ಶಿಕ್ಷಣ ಅಭಿವೃದ್ಧಿಗೆ ಇರುವ ಪ್ರೋತ್ಸಾಹಕ ಕಾರ್ಯಕ್ರಮಗಳ ಕಾರ್ಯಕ್ಷಮತೆಯ ಕುರಿತು ಹೊಂದಿರುವ ಅಭಿಪ್ರಾಯಗಳನ್ನು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಒಟ್ಟು ೯೮ ಕುಟುಂಬಗಳಲ್ಲಿ ಶೇಕಡ ೯೦.೮೧ರಷ್ಟು ಕುಟುಂಬಗಳು ಬಿಸಿಯೂಟ ಕಾರ್ಯಕ್ರಮ ಉತ್ತಮವಾಗಿದೆ ಎಂದು ಹೇಳಿವೆ. ಶೇಕಡ ೪ರಷ್ಟು ಕುಟುಂಬಗಳು ಈ ಕಾರ್ಯಖ್ರಮ ಸಾಧಾರಣವಾಗಿದೆ ಎಂದು ಹೇಳಿದ್ದರೆ, ಉಳಿದ ಶೇಕಡ ೫.೧೦ರಷ್ಟು ಕುಟುಂಬಗಳು ಬಿಸಿಯೂಟ ಕಾರ್ಯಕ್ರಮ ಸರಿಯಿಲ್ಲ ಎಂದು ಹೇಳಿವೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು ೫೫ ಕುಟುಂಬಗಳಲ್ಲಿ ಶೇಕಡ ೬೯.೯ರಷ್ಟು ಕುಟುಂಬಗಳು ಸಾಧಾರಣವಾಗಿದೆ ಎಂದು ಹೇಳಿವೆ. ಇತರ ಜಾತಿ ಹಾಗೂ ಧರ್ಮಗಳಿಗೆ ಸೇರಿದ ಒಟ್ಟು ೨೭೧ ಕುಟುಂಬಗಳಲ್ಲಿ ಶೇಕಡ ೮೮.೯೨ರಷ್ಟು (೨೪೧) ಕುಟುಂಬಗಳು ಶಾಲಾ ಬಿಸಿಯೂಟ ಉತ್ತಮವಾಗಿದೆ ಎಂದು ಹೇಳಿದರೆ ಶೇಕಡ ೧೧.೦೭ರಷ್ಟು ಕುಟುಂಬಗಳು ಈ ಕಾರ್ಯಕ್ರಮ ಸಾಧಾರಣವಾಗಿದೆ ಎಂದು ಹೇಳಿವೆ. ಇಲ್ಲಿ ನಮಗೆ ಸ್ಪಷ್ಟವಾಗುವ ಅಂಶವೆಂದರೆ ಸಮಾಜದ ತಳವರ್ಗದ ಜನರಿಗೆ ಶಾಲಾ ಬಿಸಿಯೂಟ ಉತ್ತಮವಾಗಿದೆ ಎಂಬುದು.

27_23_EKPSMS-KUH

ಜಾತಿ ತಾರತಮ್ಯವಿಲ್ಲದೆ ಊಟ ಮಾಡುತ್ತಿರುವ ಶಾಲಾ ಮಕ್ಕಳು

ಶಾಲಾ ಬಿಸಿಯೂಟ ಕಾರ್ಯಕ್ರಮವನ್ನು ಇತರ ಶಾಲಾ ಪ್ರೋತ್ಸಾಹ ಕಾರ್ಯಕ್ರಮಗಳಿಗೆ ಹೋಲಿಸಿ ನೋಡಬಹುದು. ಅಧ್ಯಯನಕ್ಕೆ ಒಳಪಡಿಸಿದೆ ಒಟ್ಟು ೪೨೪ ಕುಟುಂಬಗಳಲ್ಲಿ ವಿವಿಧ ಪ್ರೋತ್ಸಾಹಕ ಕಾರ್ಯಕ್ರಮಗಳು ಹೊಂದಿರುವ ಅಭಿಪ್ರಾಯಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಶಾಲಾ ಬಿಸಿಯೂಟ ಉತ್ತಮವಾಗಿದೆ ಎಂದು ಶೇಕಡ ೮೬.೭೯ರಷ್ಟು (೩೬೮) ಕುಟುಂಬಗಳು ಹೇಳಿವೆ. ಉಚಿತ ಪಠ್ಯಪುಸ್ತಕ ವಿತರಣೆ ಉತ್ತಮವಾಗಿದೆ ಎಂದು ಶೇಕಡ ೭೬.೮೮ರಷ್ಟು ಕುಟುಂಬಗಳು ಹೇಳಿವೆ. ಉಚಿತ ಸಮವಸ್ತ್ರ ವಿತರಣೆ ಉತ್ತಮವಾಗಿದೆ ಎಂದು ಶೇಕಡ ೭೦.೯೫ರಷ್ಟು ಕುಟುಂಬಗಳು ಹೇಳಿವೆ. ಶಾಲಾ ಪ್ರೋತ್ಸಾಹ ಧನ ಉತ್ತಮವಾಗಿದೆ ಎಂದು ಹೇಳಿರುವ ಕುಟುಂಬಗಳ ಸಂಖ್ಯೆ ಶೇಕಡ ೬೩.೨೦ರಷ್ಟಿದೆ. ಶಾಲಾ ಬಿಸಿಯೂಟ ಸಾಧಾರಣವಾಗಿದೆ ಎಂದು ಶೇಕಡ ೧೨.೦೨ರಷ್ಟು ಕುಟುಂಬಗಳು ಹೇಳಿವೆ. ಆದರೆ ಉಚಿತ ಪಠ್ಯಪುಸ್ತಕ, ಉಚಿತ ಶಾಲಾ ಸಮವಸ್ತ್ರ ಮತ್ತು ಶಾಲಾ ಪ್ರೋತ್ಸಾಹ ಧನ ಸರಿಯಾಗಿಲ್ಲ ಎಂದು ಹೇಳಿದ ಕುಟುಂಬಗಳ ಸಂಖ್ಯೆ ಕ್ರಮವಾಗಿ, ಶೇಕಡ ೧೭.೯೨, ಶೇಕಡ ೨೩.೮೨ ಮತ್ತು ಶೇಕಡ ೧೮.೩೯ರಷ್ಟು, ಶಾಲಾ ಬಿಸಿಯೂಟ ಕಾರ್ಯಕ್ರಮ ಸರಿಯಾಗಿಲ್ಲ ಎಂದು ಹೇಳಿದ ಕುಟುಂಬಗಳ ಸಂಕ್ಯೆ ಕೇವಲ ೫. ಆದರೆ ಉಚಿತ ಪಠ್ಯಪುಸ್ತಕ, ಉಚಿತ ಶಾಲಾ ಸಮವಸ್ತ್ರ ಮತ್ತು ಶಾಲಾ ಪ್ರೋತ್ಸಾಹಧನ ಸರಿಯಾಗಿಲ್ಲ ಎಂದು ಹೇಳಿದ ಕುಟುಂಬಗಳ ಸಂಖ್ಯೆ ಕ್ರಮವಾಗಿ ಶೇಕಡ ೫.೧೮, ಶೇಕಡ ೫.೪೨ ಮತ್ತು ಶೇಕಡ ೧೮.೩ರಷ್ಟಿದೆ. ಈ ಎಲ್ಲಾ ಅಂಕಿ – ಸಂಖ್ಯೆಗಳಿಂದ ಸ್ಪಷ್ಟವಾಗುವ ಅಂಶವೆಂದರೆ ಶಾಲಾ ಬಿಸಿಯೂಟ ಕಾರ್ಯಕ್ರಮ ಇತರ ಎಲ್ಲಾ ಶಾಲಾ ಪ್ರೋತ್ಸಾಹಕ ಕಾರ್ಯಕ್ರಮಗಳಿಗಿಂತ ಉತ್ತಮವಾಗಿದೆ ಎಂಬುದು. ಇದಕ್ಕೆ ನಾವು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಚಿಕ್ಕಪ್ರಮಾಣದ ಮಾದರಿ ಸಮೀಕ್, ಆಯ್ಕೆ ಮಾಡಿಕೊಂಡ ಪ್ರದೇಶ, ಆ ಪ್ರದೇಶದ ಭೌಗೋಲಿಕ ಲಕ್ಷಣ, ಕುಟುಂಬಗಳ – ಆರ್ಥಿಕ-ಸಾಮಾಜಿಕ – ಶೈಕ್ಷಣಿಕ ಮುಂತಾದ ಅಂಶಗಳನ್ನು ಕುರಿತು ಅತ್ಯಂತ ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡುವ ಅಧ್ಯಯನಗಳಿಗಾಗಿ ಎದುರು ನೋಡಬೇಕಾಗಿದೆ. ಆದರೆ ಒಂದು ಅಂಶವಂತೂ ಸ್ಪಷ್ಟ. ನಮ್ಮ ಅಧ್ಯಯನಗಳಿಗಾಗಿ ಎದುರು ನೋಡಬೇಕಾಗಿದೆ. ಆದರೆ ಒಂದು ಅಂಶವಂತೂ ಸ್ಪಷ್ಟ. ನಮ್ಮ ಅಧ್ಯಯನ ಸಂದರ್ಭದಲ್ಲಿ ಶಾಲಾ ಬಿಸಿಯೂಟ ಅಥವಾ ಯಾವುದೇ ಶಾಲಾ ಪ್ರೋತ್ಸಾಹಕ ಕಾರ್ಯಕ್ರಮಗಳು ಸರಿಯಾಗಿಲ್ಲ ಸಾಧಾರಣವಾಗಿದೆ ಎಂದು ಹೇಳಿದ ಕುಟುಂಬಗಳು ಬಹುತೇಕ ಮೇಲುಜಾತಿಗೆ ಮತ್ತು ಮೇಲುವರ್ಗಕ್ಕೆ ಸೇರಿದವುಗಳಾಗಿವೆ.

ಹೀಗೆ ಬಿಸಿಯೂಟ ಕಾರ್ಯಕ್ರಮದ ಬಗ್ಗೆ ಉತ್ತಮವಾದ ಅಭಿಪ್ರಾಯವಿದ್ದರೂ ಅನೇಕ ಬಗೆಯ ಅಸಮಾನತೆಯ ಆಚರಣೆಗಳು ಈಗಲೂ ಇವೆ. ಜಾತಿ ಆಧಾರಿತ ತಾರತಮ್ಯಗಳು ಮತ್ತು ಅಸಮಾನತೆಯ ಆಚರಣೆಯ ಘಟನೆಗಳು ಬಿಸಿಯೂಟದ ಸಾಮಾಜಿಕ ಪಾತ್ರವನ್ನು ಕಡೆಗಣಿಸುವ ಸಾಧ್ಯತೆ ಇದೆ. ನಾವು ಅಧ್ಯಯನ ನಡೆಸಿದ ಬಹುತೇಕ ಗ್ರಾಮಗಳಲ್ಲಿ ಜಾತಿ ಹಿನ್ನೆಲೆಯ, ಬೇಧ-ಭಾವಗಳು, ಅನಿರ್ಬಂಧಿತವಾಗಿ ಈಗಲೂ ಅಸ್ತಿತ್ವದಲ್ಲಿವೆ. ಉದಾಹರಣೆಗೆ, ಅಧ್ಯಯನಕ್ಕೆ ಒಳಪಡಿಸಿದ ಬಹುತೇಕ ಗ್ರಾಮಗಳಲ್ಲಿ ಇರುವ ಚಿಕ್ಕ ಪುಟ್ಟ ಹೋಟಲ್‌ಗಳಲ್ಲಿ ಅಸ್ಪೃಶ್ಯ ಜಾತಿಗೆ ಸೇರಿದವರಿಗೆ ಈಗಲೂ ಕೂಡ ಪ್ರತ್ಯೇಕವಾದ ತಟ್ಟೆ ಮತ್ತು ಲೋಟಗಳನ್ನು ಇಟ್ಟಿದ್ದಾರೆ. ಅವುಗಳನ್ನು ಅವರೆ ತೊಳೆದುಕೊಂಡು ಟೀ ಕುಡಿಯಲು, ಆಹಾರ ಸೇವಿಸಲು ಬಳಸುತ್ತಾರೆ. ಇನ್ನೂ ಈ ಜನ ಸಮುದಾಯಗಳಿಗೆ ಸೇರಿದ ಜನರು ಮೇಲುಜಾತಿಯ ಭೂಮಾಲೀಕರ ಎದುರು ನಿಂತು ಮಾತನಾಡಲು ಹಿಂಜರಿಯುತ್ತಾರೆ. ಯರೇಹಂಚಿನಾಳ ಗ್ರಾಮ ಪಂಚಾಯತಿಯಲ್ಲಿ ಉಪಾಧ್ಯಕ್ಷರಾದರೂ ಕೂಡ ಈ ಗ್ರಾಮದಲ್ಲಿ ಹೋಟೆಲ್‌ಗಳಿಗೆ ಹೋಗುವುದಿಲ್ಲ. ಅಲ್ಲಿ ನಮಗೆ ಸಮಾನತೆ ಇಲ್ಲ. ಹೀಗಾಗಿ ನಾವು ಅಲ್ಲಿಗೂ ಹೋಗುವುದಿಲ್ಲ. ಈ ಪದ್ಧತಿಯನ್ನು ಬದಲಿಸಲು ನಾವು ಪ್ರಯ್ತನಿಸಿದ್ದೇವೆ. ಆದರೆ ಪ್ರಯೋಜನವಾಗಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಕೆಲವು ವಿದ್ಯಾವಂತ ದಲಿತ ಯುವಕರು ವ್ಯಕ್ತಪಡಿಸುತ್ತಾರೆ.