ಹೈದರಾಬಾದ್ ಕರ್ನಾಟಕ ಅಧ್ಯಯನ ಪೀಠದಲ್ಲಿ ‘ಈಶಾನ್ಯ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ’ ಎಂಬ ಯೋಜನೆಗೆ ಧನಸಹಾಯ ನೀಡಿ ಪ್ರೋತ್ಸಾಹಿಸಿದ ಹಿಂದಿನ ಕುಲಪತಿಗಳಾದ ಡಾ. ಎಚ್. ಜೆ. ಲಕ್ಕಪ್ಪಗೌಡ ಅವರಿಗೆ, ಆಗ ಕುಲಸಚಿವರಾಗಿದ್ದ ಡಾ. ಕೆ.ವಿ. ನಾರಾಯಣ ಅವರಿಗೆ ಕೃತಜ್ಞತೆಗಳು. ಈ ಅಧ್ಯಯನ ಯೋಜನೆಗೆ ಮುನ್ನುಡಿ ಬರೆದು ಹರಸಿದ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ ಹಾಗೂ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ ಕೃತಜ್ಞತೆಗಳು.

ಈ ಅಧ್ಯಯನ ಹೆಚ್ಚು ಉಪಯುಕ್ತವಾಗುವಂತೆ ಚರ್ಚಿಸಿ ಉತ್ತಮ ಸಲಹೆಗಳನ್ನು ಸೂಚಿಸಿದ ಹಿರಿಯ ವಿದ್ವಾಂಸರಾದ ಡಾ. ಟಿ.ಆರ್. ಚಂದ್ರಶೇಖರ ಹಾಗೂ ಡಾ. ಎಂ. ಚಂದ್ರಪೂಜಾರಿ ಅವರಿಗೆ ಕೃತಜ್ಞತೆಗಳು. ಅಭಿವೃದ್ಧಿ ಅಧ್ಯಯನ ವಿಭಾಗದ ಅಧ್ಯಾಪಕರಾದ ಶ್ರೀ ಎ. ಶ್ರೀಧರ, ಶ್ರೀಮತಿ ಸಿದ್ಧಗಂಗಮ್ಮ ಮತ್ತು ಶ್ರೀ ಜನಾರ್ಧನ ಅವರು ಕ್ಷೇತ್ರಕಾರ್ಯ ಹಾಗೂ ಬರವಣಿಗೆಯ ಸಂದರ್ಭದಲ್ಲಿ ಅನೇಕ ಮಾಹಿತಿಗಳನ್ನು ನೀಡಿ ಈ ಅಧ್ಯಯನವನ್ನು ಪರಿಷ್ಕರಿಸಲು ಸಹಕರಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.

ಈ ಅಧ್ಯಯನದ ಹಲವು ಹಂತಗಳಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕರಿಸಿದ್ದಾರೆ. ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ಈ ಅಧ್ಯಯನಕ್ಕೆ ಆರಿಸಿಕೊಂಡ ಎಸ್. ಕೆ. ಬೂದಿಹಾಳ, ಕಬ್ಬರಗಿ, ಯರೇಹಂಚಿನಾಳ ಮತ್ತು ಕೃಷ್ಣನಗರ ಈ ನಾಲ್ಕು ಪಂಚಾಯಿತಿಗಳ ಹಳ್ಳಿಗಳಿಗೆ ಭೇಟಿ ನೀಡಿದಾಗ ಅಲ್ಲಿನ ಗ್ರಾಮ ಪಂಚಾಯಿತು ಸದಸ್ಯರು, ಶಾಲಾ ಶಿಕ್ಷಕರು, ಶಾಲಾ ಮುಖ್ಯಸ್ಥರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಬೇಸರಗೊಳ್ಳದೆ ಮಾಹಿತಿ ನೀಡಿ, ಅನುಕೂಲಗಳನ್ನು ಒದಗಿಸಿ ಸಹಕರಿಸಿದ್ದಾರೆ. ಅವರಿಗೆ ವಿಶೇಷ ಕೃತಜ್ಞತೆಗಳು.

ಈ ಪ್ರಕಟಣೆಯನ್ನು ಚೆನ್ನಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರಿಗೆ, ಪುಸ್ತಕದ ಪುಟವಿನ್ಯಾಸಗೊಳಿಸಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ, ಕರಡು ತಿದ್ದಿಕೊಟ್ಟ ಡಾ. ಶ್ರೀಧರರಾವ್ ಪಿಸ್ಸೆ ಅವರಿಗೆ ಡಿ.ಟಿ.ಪಿ ಮಾಡಿ ಜೆ. ಶಿವಕುಮಾರ್ ಕಂಪ್ಯೂಟರ್‌ನಲ್ಲಿ ಡಯಾಗ್ರಾಂ ಅಳವಡಿಸಿದ ಶ್ರೀನಿವಾದ ಕೆ. ಕಲಾಲ್ ಮತ್ತು ರೇಖಾಚಿತ್ರ ಬರೆದುಕೊಟ್ಟು ಶ್ರೀ ಶಶಿಕಾಂತ ಬಸರಿಕಟ್ಟಿ ಅವರಿಗೆ ಕೃತಜ್ಞತೆಗಳು.

ಡಾ. ಎಚ್. ಡಿ. ಪ್ರಶಾಂತ್