ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಯಾವ ರೀತಿಯ ಮನೋಪ್ರವೃತ್ತಿ ಹೊಂದದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಈ ಅಧ್ಯಾಯ ಮೂಲ ಆಶಯ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೊಂದಿರುವ ಮನೋಪ್ರವೃತ್ತಿ ಕುರಿತು ಎರಡು ವಾದಗಳು ಈಗಾಗಲೇ ಪ್ರಚಲಿತದಲ್ಲಿವೆ. ಒಂದು, ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲವು ಸಂಶೋಧನೆಗಳು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತಿ ಹೊಂದಿದ್ದಾರೆ ಎಂದು ವಾದಿಸುತ್ತಿವೆ. ಎರಡು, ಕೆಲವು ಸಂಶೋಧನೆಗಲು ಸೇರಿದಂತೆ, ದಿನಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ವಿಶೇಷ ಆಸಕ್ತಿ ತೋರಿಸುತ್ತಿಲ್ಲ ಎಂಬ ಅಭಿಪ್ರಾಯ ಆಗಿದ್ದಾಂಗೆ ಪ್ರಕಟವಾಗುತ್ತಿದೆ.

[1] ಅಲ್ಲದೆ ಪೋಷಕರು ಮಕ್ಕಳ ಶಿಕ್ಷಣಕ್ಕೆ ಆಸಕ್ತಿ ಹೊಂದಿಲ್ಲ ಎಂಬ ಬಹಳ ಸಾಮಾನ್ಯವಾದ ನಂಬಿಕೆಯು ಅಧಿಕಾರಶಾಹಿ ವರ್ಗ ಮತ್ತು ಅಧಿಕಾರಿದಲ್ಲಿ ಇರುವವರಲ್ಲಿದೆ. ಇದನ್ನು ಅವರು ನಮ್ಮಲ್ಲಿ ಸಾಕ್ಷರತೆ – ಶಾಲಾ ಭಾಗವಹಿಸುವಿಕೆ ಮಟ್ಟವು ಬಹಳ ಕಡಿಮೆ ಮಟ್ಟದಲ್ಲಿ ಇರುವುದಕ್ಕೆ ಪೂರಕವಾಗಿ ನೀಡುತ್ತಾರೆ. ಈ ಅಭಿಪ್ರಾಯಗಳು ಎಷ್ಟರ ಮಟ್ಟಿಗೆಸರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಸ್ತುತ ಅಧ್ಯಾಯದಲ್ಲಿ ಪ್ರಯತ್ನಿಸಲಾಗಿದೆ. ಅಧ್ಯಯನದ ಅನುಕೂಲಕ್ಕಾಗಿ ಅಧ್ಯಾಯವನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಭಾಗ-೧ರಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಹೊಂದಿರುವ ಮನೋಪ್ರವೃತ್ತಿ ಮತ್ತು ಆ ಪ್ರವೃತ್ತಿಯಲ್ಲಿ ಇರುವ ಲಿಂಗ ತಾರತಮ್ಯದ ದೃಷ್ಟಿಕೋನವನ್ನು ವಿಶ್ಲೇಷಣೆ ಮಾಡಲಾಗಿದೆ. ಭಾಗ-೨ರಲ್ಲಿ ಶಿಕ್ಷಣಕ್ಕೂ, ವಿವಾಹಕ್ಕೂ, ಜಾತಿಗೂ ಇರುವ ಸಂಬಂಧ, ಅದರ ಸಾಮಾಜಿಕ ಆಯಾಮಗಳು ಮತ್ತು ಪ್ರೇರಕಾಂಶಗಳು ವಾಸ್ತವಿಕವಾಗಿ ಶಿಕ್ಷಣವನ್ನು ಎಷ್ಟರಮಟ್ಟಿಗೆ ಪ್ರಬಾವಿಸುತ್ತದೆ, ಹಾಗೂ ಶಾಲಾ ವ್ಯವಸ್ಥೆ ಮತ್ತು ಶೈಕ್ಷಣಿಕ ಭರವಸೆಗಳಿಗೆ ಸಂಬಂಧಿಸಿದ ವಿಶ್ಲೇಷಣೆ ಇದೆ. ಭಾಗ-೩ರಲ್ಲಿ ಪ್ರಾಥಮಿಕ ಶಿಕ್ಷಣ ಎಷ್ಟರ ಮಟ್ಟಿಗೆ ಉಚಿತ, ಶಾಲೆಯಿಂದ ಹೊರಗಿರುವ ಮಕ್ಕಳು ಯಾವ ರೀತಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ, ಸಮಾಜದ ಎಲ್ಲಾ ಜಾತಿ ವರ್ಗಗಳ ಜನರಿಗೆ ಶಾಲೆಗಳು ದೊರಕುತ್ತಿದೆಯೇ? ಎಂಬುದನ್ನು ಕುರಿತು ಚರ್ಚಿಸಲಾಗಿದೆ.

ಭಾಗ

ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಯಾವ ರೀತಿಯ ಮನೋಪ್ರವೃತ್ತಿ ಹೊಂದಿದ್ದಾರೆ ಎಂಬುದನ್ನು ಈ ಭಾಗದಲ್ಲಿ ಚರ್ಚಿಸಲಾಗಿದೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಆಸಕ್ತಿ ಹೊಂದಿಲ್ಲ ಎಂಬ ಬಹಳ ಸಾಮಾನ್ಯವಾದ ನಂಬಿಕೆಯು ಅಧಿಕಾರಶಾಹಿ ವರ್ಗ ಮತ್ತು ಅಧಿಕಾರದಲ್ಲಿ ಇರುವವರಲ್ಲಿದೆ. ಇದನ್ನು ಅವರು ನಮ್ಮಲ್ಲಿ ಸಾಕ್ಷರತೆ-ಶಾಲಾ ಭಾಗವಹಿಸುವಿಕೆ ಮಟ್ಟವು ಬಹಳ ಕಡಿಮೆ ಮಟ್ಟದಲ್ಲಿ ಇರುವುದಕ್ಕೆ ಪೂರಕವಾಗಿ ನೀಡುತ್ತಾರೆ.

ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದಲ್ಲಿ ಭಾರತವು ತನ್ನ ಗುರಿಯನ್ನು ಸಾಧಿಸದೆ ಇರುವುದಕ್ಕೆ ಆಡಳಿತಶಾಹಿ ವರ್ಗ, ಅಧಿಕಾರದಲ್ಲಿ ಇರುವ ವರ್ಗ ಮತ್ತು ಯೋಜನಾಕಾರರ ನಂಬಿಕೆಗೆ ವಿರುದ್ಧವಾದ ಅಂಶವನ್ನು ಪ್ರಸ್ತುತ ಅಧ್ಯಯನ ಗುರುತಿಸಿದೆ. ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಹೊಂದಿರುವ ಉದಾಸಿನತೆಯು ವಿಶಾಲವಾಗಿದ್ದರೂ ಹೆಚ್ಚಿನ ಪೋಷಕರು ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಪ್ರಮುಖ ಆದ್ಯತೆಯನ್ನು ನೀಡಿದ್ದಾರೆ. ಉದಾಹರಣೆಗೆ ಶಿಕ್ಷಣ ಇಂದು ಅವಶ್ಯಕವೆ ಎಂಬ ಪ್ರಶ್ನೆಗೆ ಶೇಕಡ ೯೨.೩೬ರಷ್ಟು ಅವಶ್ಯಕ ಎಂದು ಹೇಳಿದ್ದಾರೆ, ಶೇಕಡ ೩.೨೪ರಷ್ಟು ಪೋಷಕರು ಯಾವುದೇ ಉತ್ತರ ನೀಡಲಿಲ್ಲ. ಶೇಕಡ ೪.೪೦ರಷ್ಟು ಪೋಷಕರು ನಿಖರವಾದ ಉತ್ತರವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಗಂಡು ಮಕ್ಕಳಿಗೆ ಶಿಕ್ಷಣ ಪ್ರಮುಖವೆ ಅಥವಾ ಗಂಡು ಮಕ್ಕಳು ವಿದ್ಯಾವಂತರಾಗುವುದು ಪ್ರಾಮುಖ್ಯವೆ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರ ನೀಡುವ ಪೋಷಕರ ಪ್ರಮಾಣ ಶೇಕಡ ೯೬.೯೦ರಷ್ಟಿದ್ದರೆ, ಈ ಪ್ರಶ್ನೆಗೆ ಶೇಕಡ ೩.೦೦ ಪೋಷಕರು ಯಾವುದೇ ಉತ್ತರ ನೀಡಲಿಲ್ಲ. ಆದರೆ ಶೇಕಡ ೧.೧೦ರಷ್ಟು ಪೋಷಕರು ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಅವಶ್ಯಕ ಎಂದು ಹೇಳುವ ಪೋಷಕರ ಪ್ರಮಾಣ ಶೇಕಡ ೮೮.೩೧ ಅಂಶಗಳಿಷ್ಟಿದೆ, ಈ ಪ್ರಶ್ನೆಗೆ ಶೇಕಡ ೬.೫೯ರಷ್ಟು ಪೋಷಕರು ಯಾವುದೇ ಉತ್ತರ ನೀಡಿಲ್ಲ. ಉಳಿದ ಶೇಕಡ ೫.೧೦ರಷ್ಟು ಪೋಷಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಡ ಎಂಬ ಅಭಿಪ್ರಾಯ ಹೊಂದಿದ್ದಾರೆ. ಇಲ್ಲಿ ಲಿಂಗತಾರತಮ್ಯದ ಅಂತರ ಶೇಕಡ ೦೮.೫೯ ಅಂಶಗಳಷ್ಟಿದೆ. ಬಹುತೇಕ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೋಷಕರೆ ಕೆಲವು ಆಧಾರಗಳನ್ನು ಸಹ ನೀಡುತ್ತಾರೆ. ಈ ಕಾಲದಲ್ಲಿ ವಿದ್ಯಾಭ್ಯಾಸವಿಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ. ನೌಕರಿ ಸಿಗದೆ ಇದ್ದರೂ, ದಿನನಿತ್ಯದ ಆಗು ಹೋಗುಗಳಿಗೆ ಮತ್ತು ಕುಟುಂಬದ ವ್ಯವಹಾರಕ್ಕೆ ಪ್ರಾಥಮಿಕ ಶಿಕ್ಷಣದ ಅವಶ್ಯಕೆತ ಇದೆ ಎಂದು ಹೇಳುವವರ ಸಂಖ್ಯೆ ಕಡಿಮೆ ಇಲ್ಲ. ಇದನ್ನು ಸರಳವಾಗಿ ಅಲ್ಲ ಗಳೆಯಲು ಸಾಧ್ಯವಿಲ್ಲ. ಇದು ವಾಸ್ತವ ಸಂಗತಿ.

13_23_EKPSMS-KUH

14_23_EKPSMS-KUH

ಪೋಷಕರಲ್ಲಿ ಶಿಕ್ಷಣದ ಬಗ್ಗೆ ಇರುವ ಮನೋಭಾವನೆಯ ವಿಭಿನ್ನತೆಯು, ನಿರ್ದಿಷ್ಟವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಿನ್ನವಾಗಿದೆ. ಅಲ್ಲದೇ ಗಂಡು ಮಕ್ಕಳ ಶಿಕ್ಷಣಕ್ಕಿಂತಲೂ ಅತ್ಯಂತ ಕಡಿಮೆ ಮಹತ್ವವನ್ನು ನೀಡುವ ಕುಟುಂಬಗಳನ್ನು ವಿಶೇಷವಾಗಿ ಮುಸ್ಲಿಂರಲ್ಲಿ ಕಾಣಬಹುದು (ಪ್ರೋಬ್ ೧೯೯೯). ಇದರಿಂದ ಸ್ಪಷ್ಟವಾಗುವ ಅಂಶ, ಶಿಕ್ಷಣದ ಬಗ್ಗೆ ಇರುವ ಸಾಮಾನ್ಯ ಪ್ರವೃತ್ತಿಯು ಒಂದೇ ಆಗಿರದೇ ವಿಭಿನ್ನವಾಗಿದೆ ಎಂಬುದು. ಹೀಗಾಗಿ ಪೋಷಕರಲ್ಲಿ ಇರುವ ವಿಭಿನ್ನತೆಯು ವಿಭಿನ್ನ ಕಾರಣಗಳಿಂದ ಹುಟ್ಟಿದವು ಎಂದು ಹೇಳಬಹುದು. ಈ ದ್ವಂದ್ವದ ನಡುವೆಯು ನಮ್ಮ ಅಧ್ಯಯನಕ್ಕೆ ಮಾದರಿಯಾಗಿ ಆಯ್ಕೆ ಮಾಡಿಕೊಂಡ ಬಹುತೇಕ ಕುಟುಂಬಗಳು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು ಎಂಬುದರ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ನಮ್ಮ ಗಮನಕ್ಕೆ ಬಂದ ಮತ್ತೊಂದು ಅಂಶವೆಂದರೆ ಕೆಲವು ಗ್ರಾಮಸ್ಥರು ಮತ್ತು ಪೋಷಕರು ಶಾಲೆಯಿಂದಲೇ ತಮ್ಮ ಮಕ್ಕಳಿಗೆ ಸ್ಪಷ್ಟವಾದ ಎಲ್ಲಾ ಕುಶಲತೆಯು ಬರುತ್ತದೆ ಎಂಬುದನ್ನು ಯಾವಾಗಲೂ ಹೇಳಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವಿಷಯಗಳನ್ನು ವಿಶದವಾಗಿ ಮುಂದೆ ಚರ್ಚಿಸಲಾಗಿದೆ.

15_23_EKPSMS-KUH

ಸಾಮಾನ್ಯವಾಗಿ ಮಕ್ಕಳ ಶಿಕ್ಷಣ ಕುರಿತು ಪೋಷಕರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂಬುದು ನಮಗೆ ಈಗಾಗಲೇ ತಿಳಿದಿದೆ. ಅದರಲ್ಲಿಯು ಶೈಕ್ಷಣಿಕವಾಗಿ ಬಹಳ ನಿಧಾನವಾದ ಪ್ರಗತಿ ಸಾಧಿಸುತ್ತಿರುವ ಪ್ರದೇಶ ಹಾಗೂ ರಾಜ್ಯಗಳಲ್ಲಿ ಕೂಡ ಪೋಷಕರ ಆಸಕ್ತಿ ಸ್ವಲ್ಪಮಟ್ಟಿಗೆ ಹೆಚ್ಚಾಗಿಯೇ ಇದೆ. ಶಿಕ್ಷಣವನ್ನು ಆಧುನಿಕ ಸಮಾಜದಲ್ಲಿ ಯಾರು ಕಡೆಗಣಿಸಲಾಗುವುದಿಲ್ಲ ಎಂದು ಅನೇಕ ಪೋಷಕರು ಸ್ಪಷ್ಟವಾಗಿ ಹೇಳುತ್ತಾರೆ. ನಮ್ಮ ಅಧ್ಯಯನದ ಉದಾಹರಣೆಗಳನ್ನು ಹೇಳುವುದಾದರೆ, ಅನಕ್ಷರಸ್ಥರಾಗಿದ್ದರೆ ದಿನ ನಿತ್ಯದ ಬದುಕಿನಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಓದು ಬರಹ ಬರುವ ಒಬ್ಬರು ಮನೆಯಲ್ಲಿ ಇದ್ದರ ಹೊರಗಿನ ಪ್ರಪಂಚದ ಜೊತೆ ವ್ಯವಹರಿಸುವುದು ಸರಳ. ಈ ಪ್ರಪಂಚದಲ್ಲಿ ಅನಕ್ಷರಸ್ಥರನ್ನು ನಂಬಿಸಿ, ಬೇಗನೆ ಮೋಸ ಮಾಡುವವರು ಹೆಚ್ಚಾಗಿದ್ದಾರೆ. ಅನಕ್ಷರಸ್ಥರು ಒಂದು ಪ್ರಾಣಿಗಿಂತಲೂ ಕಡೆ ಎಂದು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ನಾವು ಸಂದರ್ಶನ ನಡೆಸಿದ ಬಹುತೇಕರು ಹೇಳುತ್ತಾರೆ.

ಪೋಷಕರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಮತ್ತು ಅವರ ಶಿಕ್ಷಣ ಕುರಿತು ಹೆಚ್ಚಾಗಿರುವ ಆಸಕ್ತಿಯಿಂದ ಶಾಲೆಗೆ ದಾಖಲಾಗದ ಮಕ್ಕಳ ಸಂಖ್ಯೆಯು ಅತಿ ವೇಗವಾಗಿ ಕಡಿಮೆಯಾಗುತ್ತದೆ. ಇದು ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್.ಎಸ್.ಎಸ್)ಯ ವರದಿಗಳು, ಶೈಕ್ಷಣಿಕ ವರದಿಗಳು ಮತ್ತು ಪ್ರತಿವರ್ಷ ನಡೆಯುವ ಮಕ್ಕಳ ಜನಗಣತಿಯಿಂದ ತಿಳಿಯುತ್ತದೆ. ಬಿಮಾರು (ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಾಸ್ಥಾನ) ರಾಜ್ಯಗಳಲ್ಲಿ ೧೯೮೦-೯೦ರ ದಶಖದಲ್ಲಿ ೬-೧೪ ವಯೋಮಾನದ ಸುಮಾರು ಅರ್ಧದಷ್ಟು ಮಕ್ಕಳು ಶಾಲೆಗೆ ದಾಖಲಾಗುತ್ತಿರಲಿಲ್ಲ. (ಆರ್. ಗೋವಿಂದ, ೧೯೯೭). ೧೯೯೬ರ ಸೆಪ್ಟಂಬರ್‌ನಿಂದ ಡಿಸೆಂಬರ್ ೧೯೯೬ರವರೆಗೆ ಭೀಮಾರು ರಾಜ್ಯದ ೬-೧೪ ವಯೋಮಾನದ ಮಕ್ಕಳು ಶಾಲೆಗೆ ದಾಖಲಾಗದೆ ಇರುವ ಪ್ರಮಾಣ ಶೇಕಡ ೧೯ಕ್ಕಿಂತಲೂ ಕಡಿಮೆ (ಪ್ರೋಬ್, ೧೯೯೯) ಕರ್ನಾಟಕದಲ್ಲಿ ೧ ರಿಂದ ೪ನೇ ತರಗತಿಗೆ ೧೯೫೯-೬೦ರಲ್ಲಿ ೨-೩ ಮಿಲಿಯನ್ ಮಕ್ಕಳು ಶಾಲೆಗೆ ನೊಂದಣಿಯಾಗಿದ್ದರೆ, ೨೦೦೧-೦೨ರಲ್ಲಿ ೮.೫ ಮಿಲಿಯನ್‌ಗೆ ಏರಿಕೆಯಾಗಿದೆ. ೨೦೦೪ರ ಫೆಬ್ರವರಿಯಲ್ಲಿ ನಡೆಸಿದ ಮಕ್ಕಳ ಜನಗಣತಿ ಪ್ರಕಾರ ೬-೧೪ ವಯೋಮಾನದ ಮಕ್ಕಳು ಶಾಲೆಗೆ ದಾಖಲಾಗದೆ ಇರುವ ಮಕ್ಕಳ ಪ್ರಮಾಣಶೇಕಡ ೩.೧೨ರಷ್ಟಿದೆ. ಈ ಅಂಕಿ-ಸಂಖ್ಯೆಗಳು ೬-೧೪ ವಯೋಮಾನದ ಮಕ್ಕಳು ಶಾಲೆಗೆ ದಾಖಲಾಗದೆ ಇರುವುದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಸೂಚನೆ ನೀಡುತ್ತವೆ. ಇದನ್ನು ಹೀಗೂ ಹೇಳಬಹುದು. ಅಂದರೆ ಇಂದು ಬಹುತೇಕ ಪೋಷಕರು ಮಕ್ಕಳಿಗೆ ಶಾಲೆಗೆ ದಾಖಲಾಗುವ ಅವಕಾಶ ಕೊಡುತ್ತಿದ್ದಾರೆ.

ಹೀಗೆ ಇನ್ನು ಅನೇಕ ಸೂಚನೆಗಳು ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ನಮ್ಮ ಗಮನಕ್ಕೆ ಬರುತ್ತವೆ. ಇಲ್ಲಿ ನಮ್ಮ ಅಧ್ಯಯನದ ಉದಾಹರಣೆ ವಿವರಿಸುವುದಾದರೆ, ನಾವು ಅಧ್ಯಯನ ನಡೆಸಿದ ಶೇಕಡ ೮೭.೯೭ರಷ್ಟು ಕುಟುಂಬಗಳ ಪೋಷಕರು ಎಲ್ಲಾ ಮಕ್ಕಳಿಗೂ ಶಿಕ್ಷಣ ಉಚಿತ ಕಡ್ಡಾಯ ಮಾಡಿರುವುದು ಸರಿ ಎಂದು ಹೇಳಿದ್ದಾರೆ. ಶೇಕಡ ೧೨.೦೩ರಷ್ಟು ಪೋಷಕರು ಈ ಪ್ರಶ್ನೆಗೆ ಯಾವುದೇ ಉತ್ತರವನ್ನು ನೀಡಲಿಲ್ಲ. ಇದರ ಅರ್ಥ ಇವರು ಕಡ್ಡಾಯ ಪ್ರಾಥಮಿಕ ಶಿಕ್ಷಣ ಬೇಡ ಎಂಬ ಮನೋಭಾವನೆಯನ್ನು ಹೊಂದಿದ್ದಾರೆ ಎಂದು ಅಲ್ಲ. ಅವರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಎಂದರೆ ಏನು ಎಂಬುದು ತಿಳಿಯದ ಕಾರಣ ಅವರು ಈ ಉತ್ತರ ನೀಡಿದ್ದಾರೆ. ಆರ್ಥಿಕವಾಗಿ ಸ್ವಲ್ಪ ಉತ್ತಮ ಸ್ಥಿತಿಯಲ್ಲಿ ಇರುವವರು ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ಕೆಲವರು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವ ಆಸಕ್ತಿ ಹೊಂದಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವ ಆಸಕ್ತಿ ಹೊಂದಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅನೇಕ ರಾಜ್ಯ ಸರ್ಕಾರಗಳು ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಈ ನಿಟ್ಟಿನಲ್ಲಿ ಶಾಲಾ ಸೌಲಭ್ಯಗಳು ಇಲ್ಲದ ಜನವಸತಿ ನೆಲೆಗಳಲ್ಲಿ, ಅದರಲ್ಲಿಯೂ ಬುಡಕಟ್ಟಿನ ಜನರು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ವಿಶೇಷವಾಗಿ ಮಧ್ಯಪ್ರದೇಶ ಸರ್ಕಾರವು ಬುಡಕಟ್ಟಿನ ಜನ ವಸತಿ ನೆಲೆಗಳಿಂದ ಶಾಲಾ ಸೌಲಭ್ಯ ಒದಗಿಸಿ ಎಂಬ ಮನವಿಯನ್ನು ೧೯೯೬-೯೭ನೆಯ ಶೈಕ್ಷಣಿಕ ವರ್ಷದಲ್ಲಿ ಸುಮಾರು ೧೫,೦೦೦ಕ್ಕೂ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಿದೆ (ಪ್ರೋಬ್. ೧೯೯೯). ಇದೇ ರೀತಿಯಲ್ಲಿ ವಿವಿಧ ರಾಜ್ಯ ಸರ್ಕಾರಗಲು ಸಹ ಪ್ರಾಥಮಿಕ ಶಿಕ್ಷಣದ ಬೇಡಿಕೆ ಇರುವ ಪ್ರದೇಶದಲ್ಲಿ ಶಾಲೆಗಳನ್ನು ತೆರೆದಿವೆ. ಶಾಲೆಯನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸಾಧ್ಯವಾಗದೇ ಇರುವ ಸ್ಥಳ ಅಥವಾ ಜನವಸತಿ ನೆಲೆಗಳಲ್ಲಿ ಮೊಬೈಲ್ ಶಾಲೆಗಳನ್ನು ಹಾಗೂ ವಿವಿಧ ಔಪಚಾರಿಕ ಮತ್ತು ಅನೌಪಚಾರಿಕ ಕಾರ್ಯಗಳನ್ನು ಜಾರಿಗೆ ತಂದಿವೆ. ಆ ಮೂಲಕ ಜನರ ಶಿಕ್ಷಣದ ಬೇಡಿಕೆಯನ್ನು ಪೂರೈಸಲು ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಸರ್ಕಾರಗಳು ಪ್ರಯತ್ನಿಸುತ್ತಿವೆ.

ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರ ಆಸಕ್ತಿಯು ವಿವಿಧ ಸಾಮಾಜಿಕ ಗುಂಪುಗಳ ನಡುವೆ ಅಷ್ಟೇನು ವ್ಯತ್ಯಾಸಗಳು ಕಂಡುಬಂದಿವೆ. ಬಹುತೇಕ ಪೋಷಕರು (ತಂದೆ ಅಥವಾ ತಾಯಿ) ಗಂಡು ಮಗುವಿಗೆ ಶಿಕ್ಷಣ ನೀಡಲು ಹೆಚ್ಚಿನ ಕಾಳಜಿಯನ್ನು ಹೊಂದಿದ್ದಾರೆ. ಆದರೆಅದೇ ಆಸಕ್ತಿಯನ್ನು ಹೆಣ್ಣು ಮಗುವಿನ ಶಿಕ್ಷಣದ ಬಗ್ಗೆ ಹೊಂದಿಲ್ಲ. ಇದನ್ನು ನಮ್ಮ ಅಧ್ಯಯನದ ಅನುಭವದಿಂದ ಸ್ಪಷ್ಟಪಡಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಶೇಕಡ ೧.೦೦ ರಷ್ಟು ಪೋಷಕರು ಮಾತ್ರ ಬಾಲಕರಿಗೆ ಉನ್ನತ ಶಿಕ್ಷಣ ಪ್ರಮುಖವಲ್ಲ ಎಂದು ಹೇಳಿದರೆ, ಶೇಕಡ ೯೦.೦೦ ರಷ್ಟು ಪೋಷಕರು ಬಾಲಕಿಯರಿಗೆ ಹೆಚ್ಚಿನ ಶಿಕ್ಷಣ ಕೊಡಿಸುವುದು ಪ್ರಮುಖವಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಎಲ್ಲಿಯವರೆಗೆ ನಿಮ್ಮ ಗಂಡು ಮಗುವನ್ನು ಅಥವಾ ಹೆಣ್ಣುಮಗುವನ್ನು ವಿದ್ಯಾಭ್ಯಾಸ ಮಾಡಿಸಲು ಆಸಕ್ತಿ ಹೊಂದಿದ್ದೀರಿ ಎಂಬ ಪ್ರಶ್ನೆಗೆ, ಗಂಡು ಮಕ್ಕಳಿಗೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ನಿಮ್ಮ ಗಂಡು ಮಗುವನ್ನು ಅಥವಾ ಹೆಣ್ಣುಮಗುವನ್ನು ವಿದ್ಯಾಭ್ಯಾಸ ಮಾಡಿಸಲು ಆಸಕ್ತಿ ಹೊಂದಿದ್ದೀರಿ ಎಂಬ ಪ್ರಶ್ನೆಗೆ, ಗಂಡು ಮಕ್ಕಳಿಗೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ವಿದ್ಯಾಭ್ಯಾಸ ಕೊಡಿಸಲು ಶೇಕಡ ೮೦.೦೦ರಷ್ಟು ಪೋಷಕರು ಆಸಕ್ತಿ ಹೊಂದಿದ್ದಾರೆ. ಹೆಣ್ಣು ಮಕ್ಕಳಿಗೆ ಹತ್ತನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಕೊಡಿಸಲು ಶೇಕಡ ೬೬.೦೯ರಷ್ಟು ಪೋಷಕರು ಆಸಕ್ತಿ ಹೊಂದಿದ್ದಾರೆ. ಇನ್ನು ಉಳಿದ ಶೇಕಡ ೩೩.೯೦ರಷ್ಟು ಪೋಷಕರು ಹೆಣ್ಮು ಮಕ್ಕಳನ್ನು ತಮ್ಮ ಗ್ರಾಮದ ಶಾಲೆಯಲ್ಲಿ ತರಗತಿಗಳು ಇರುವವರೆಗೆ ವಿದ್ಯಾಭ್ಯಾಸ ಕೊಡಿಸಲು ಆಸಕ್ತರಾಗಿದ್ದಾರೆ. ಹೀಗೆ ಬಾಲಕರಿಗೆ ಮತ್ತು ಬಾಲಕಿಯರಿಗೆ ವಿದ್ಯಾಭ್ಯಾಸ ನೀಡುವಾಗ ಇರುವ ಲಿಂಗತಾರತಮ್ಯದ ಸೂಚನೆಗಳು ನಾವು ಸಂಗ್ರಹಿಸಿದ ಪರಿಣಾತ್ಮಕ ಮತ್ತು ಗುಣಾತ್ಮಕ ಮಾಹಿತಿಗಳಿಂದ ದೊರಕುತ್ತವೆ.

ಹೀಗೆ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪೋಷಕರು ಹೊಂದಿರುವ ಲಿಂಗ ತಾರತಮ್ಯ ಮನೋಭಾವನೆಯ ಉದ್ದೇಶವನ್ನು ಬಿಡಿ ಬಿಡಿಯಾಗಿ ಅವರ ದೃಷ್ಟಿಕೋನದಿಂದಲೇ ಹೇಗೆ ಬಾಲಕಿಯರ ಮತ್ತು ಬಾಲಕರ ಶಿಕ್ಷಣ ಬೇರೆ ಬೇರೆ ವಿಷಯಗಳು ಮತ್ತು ಆ ವಿಷಯಗಳು ಪ್ರೇರೇಪಿಸುವ ಅಂಶಗಳನ್ನು ಕುರಿತು ಮುಂದೆ ಚರ್ಚಿಸಲಾಗಿದೆ.

. ಗಂಡು ಮಕ್ಕಳ ಶಿಕ್ಷಣಕ್ಕೆ ಪ್ರೇರಕಾಂಶಗಳು

ಏಕೆ ಗಂಡು ಮಗುವಿನ ಶಿಕ್ಷಣಕ್ಕೆ ಹೆಚ್ಚಿನ ಒಲವು ಹೊಂದಿದ್ದಾರೆ ಎಂಬ ಪ್ರಶ್ನೆಗೆ ಬರುತೇಕ ಪೋಷಕರು ಇದಕ್ಕೆ ನೀಡುವ ಕಾರಣ ಆರ್ಥಿಕವಾದುದು. ನಾವು ಅಧ್ಯಯನ ನಡೆಸಿರುವ ಕುಟುಂಬಗಳ ಪೋಷಕರು ನಮ್ಮ ಗಂಡು ಮಗುವಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿದರೆ ನೌಕರಿ ಸಿಗುವ ಅವಕಾಶಗಳು ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಪೋಷಕರೊಬ್ಬರು ಗಂಡು ಮಗುವಿಗೆ ಶಿಕ್ಷಣ ದೊರೆತರೆ ಅವನಿಗೆ ಉದ್ಯೋಗ ಸಿಗಬಹುದು. ಇಲ್ಲವೇ ವ್ಯಾಪಾರ ಮಾಡಬಹುದು, ಅಥವಾ ಅಂಗಡಿ ನಡೆಸಬಹುದು. ಹೈನುಗಾರಿಕೆ ಹಾಗೂ ಕೃಷಿ ಸಂಬಂಧಿತ ಕಸುಬುಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳಬಹುದು. ಹೀಗೆ ಯಾವುದೋ ಒಂದು ವೃತ್ತಿಯ ಮೂಲಕ ಉತ್ತಮ ಜೀವನ ನಡೆಸಬಹುದು ಎಂದು ಹೇಳುತ್ತಾರೆ. ಶಿಕ್ಷಣಕ್ಕೆ ಉದ್ಯೋಗಾಧಾರಿತ ಪ್ರೇರಣೆ ಇರುವ ಅಂಶವನ್ನು ಈಗಾಗಲೇ ನಡೆದಿರುವ ಅನೇಕ ಅಧ್ಯಯನಗಳು ಗುರುತಿಸಿವೆ. ಕೇವಲ ಈ ರೀತಿಯ ಆರ್ಥಿಕ ಪ್ರೇರಕ ಅಂಶವು ಸಂಕುಚಿತ ಮತ್ತು ಭೌತಿಕ (ಮ್ಯೆಟೀರಿಯಲ್ಸಿಟಿಕ್) ಪ್ರೇರಣೆ. ಈ ರೀತಿಯ ಅಭಿವೃದ್ಧಿಯಾಗಲು ಇರುವ ಸಾಮಾಜಿಕ ಒತ್ತಡಕ್ಕೆ ಇರುವ ಕಾರಣವೆಂದರೆ, ಬಹುತೇಕ ಪೋಷಕರು ಶಿಕ್ಷಣಕ್ಕೆ ಇರುವ ಆರ್ಥಿಕ ಮೌಲ್ಯವೇ ಪ್ರಮುಖ ಎಂದು ತಿಳಿದಿರುವುದು. ಈ ಶಂಕೆಯನ್ನು ಸರಳವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ಶಿಕ್ಷಣಕ್ಕೆ ಇರುವ ಆರ್ಥಿಕೇತರ ಮೌಲ್ಯಗಳನ್ನು ಅರ್ಥಮಾಡಿಕೊಳ್ಳದೆ ಇರುವುದು. ಆದರೆ ಶಿಕ್ಷಣಕ್ಕೆ ಇರುವ ಆರ್ಥಿಕೇತರ ಮೌಲ್ಯಗಳನ್ನು ಅರ್ಥಮಾಡಿಕೊಳ್ಳದೆ ಇರುವುದು. ಇದೇ ಸಮಯದಲ್ಲಿ ಶಿಕ್ಷಣಕ್ಕೆ ಇರುವ ಆರ್ಥಿಕ ಆಯಾಮಗಳನ್ನು ಸರಾಸಗಟಾಗಿ ತಳ್ಳಿಹಾಕಲು ಯಾವುದೇ ಆಧಾರಗಳು ಇಲ್ಲ. ಉತ್ತಮ ಉದ್ಯೋಗಾವಕಾಶಕ್ಕೆ ಆರ್ಥಿಕವಾಗಿ ಹಿಂದುಳಿದ ಪೋಷಕರು ಹಾತೊರೆಯುವುದು ಒಳ್ಳೆಯ ಕಾರಣಕ್ಕಾಗಿ. ಇದಕ್ಕೆ ಶಿಕ್ಷಣ ಸಹಾಯಕ ಮಾಡುತ್ತದೆ ಎಂಬುದು ಅವರ ನಂಬಿಕೆ.

ಮುಂದುವರಿದು ಹೇಳುವುದಾದರೆ, ಪೋಷಕರು ಶಿಕ್ಷಣವನ್ನು ಕೇವಲ ಆರ್ಥಿಕ ಅನುಕೂಲಕ್ಕಾಗಿಯೇ ಪಡೆದುಕೊಳ್ಳುವುದು ಎಂದು ಹೇಳುವುದು ಕೂಡ ಸರಿಯಲ್ಲ. ಅವರು ಶಿಕ್ಷಣಕ್ಕೆ ಇರುವ ಅನೇಕ ಆರ್ತಿಕೇತರ ಅನುಕೂಲಗಳನ್ನು ತಿಳಿದವರಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಎಂದರೆ, ಸ್ವಾಭಿಮಾನ ಮತ್ತು ಸಾಮಾಜಿಕ ಸ್ಥಾನವನ್ನು ಹೆಚ್ಚಿಸುವಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಪ್ರಮುಖ ಎಂಬ ಅರಿವು ಆವರಿಸಿರುವುದು. ಉದಾಹರಣೆಗೆ ಮನ್ಮಥನಾಳ ಗ್ರಾಮದ ಒಬ್ಬ ವ್ಯಕ್ತಿ ಹೇಳುವಾಗ, ಶಿಕ್ಷಣದಿಂದ ಹೊರಗಿನ ಪ್ರಪಂಚದ ಎಲ್ಲಾ ವ್ಯವಹಾರಗಳು ಜೊತೆಗೆ ತೀಕ್ಷ್ಣವಾಗಿ ವ್ಯವಹರಿಸಬಹುದು. ಅಲ್ಲದೆ ವ್ಯವಹಾರಗಳನ್ನು ಧೈರ್ಯವಾಗಿ ಎದುರಿಸುವ ಮತ್ತು ಇತರರೊಡನೆ ಮಾತನಾಡುವ ಆತ್ಮಸ್ಥೆರ್ಯವನ್ನು ಶಿಕ್ಷಣ ನೀಡುತ್ತದೆ. ಇಲ್ಲಿ ನಾವು ಕೆಲವು ಸಾಮಾನ್ಯ ಅನುಭವಗಳನ್ನು ಮಾತ್ರ ಬಳಸಿಕೊಂಡು ಶಿಕ್ಷಣ ಕುರಿತು ಅವರಿಗೆ ಇರುವ ಮನೋಭಾವದ ಅಂಶಗಳನ್ನು ತಿಳಿಯಪಡಿಸಲು ಪ್ರಯತ್ನಿಸಲಾಗಿದೆ. ಇದಕ್ಕೆ ಪೂರಕವಾದಂತೆ ಶಿಕ್ಷಣವು ಪ್ರತಿಯೊಬ್ಬರ ಹಕ್ಕು ಬಾಧ್ಯತೆಗಲನ್ನು ರೂಪಿಸುವುದಲ್ಲದೆ ಹಕ್ಕುಗಳನ್ನು ರಕ್ಷಿಸುತ್ತದೆ. ಉದಾಹರಣೆಗೆ ಶಿಕ್ಷಣ ಪಡೆದರೆ ಯಾವುದೇ ಕಛೇರಿಗೆ ಹೋಗಿ ಅಧಿಕಾರಿಗಳ ಜೊತೆ ಮಾತನಾಡಲು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಗಳನ್ನು ಪಡೆಯಲು, ಅವಶ್ಯಕವೆನಿಸಿದ ಅರ್ಜಿ ನಮೂನೆಗಳನ್ನು ತುಂಬಲು ಹಿಂಜರಿಯುವುದಿಲ್ಲ. ಅಲ್ಲದೆ ಹೆಚ್ಚಿನ ಆತ್ಮ ವಿಶ್ವಾಸದಿಂದ ಕಛೇರಿಯ ವ್ಯವಹಾರಗಳನ್ನು ನಿರ್ವಹಿಸುತ್ತಾರೆ. ನಮ್ಮ ಅಧ್ಯಯನದ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಂಡುಬಂದ ಅಂಶಗಳೆಂದರೆ ಶಿಕ್ಷಣಕ್ಕೆ ಇರುವ ಇತರ ಅನುಕೂಲಗಳನ್ನು ಕುರಿತು ಉಲ್ಲೇಖಿತವಾದ ಒಳ್ಳೆಯದು ಕೆಟ್ಟದನ್ನು ಯೋಚಿಸುವ ಶಕ್ತಿ ದೊರಕುತ್ತದೆ. ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳಲು, ಕೃಷಿ ಮಾರುಕಟ್ಟೆಯಲ್ಲಿ ವ್ಯವಹರಿಸಲು, ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಗೆ ಹೋದಾಗ ಅಸಲಿ – ನಕಲಿ ಔಷಧಗಳನ್ನು ಗುರುತಿಸಲು, ಹೀಗೆ ಕ್ಷೇತ್ರಕಾರ್ಯದಲ್ಲಿ ದೊರೆತ ಎಲ್ಲಾ ಉತ್ತರ ಅಥವಾ ಮಾಹಿತಿಗಳನ್ನು ಒಂದು ಕಡೆಗೆ ಸೇರಿಸಿದಲ್ಲಿ ಅವು ಶಿಕ್ಷಣದಿಂದ ಇರುವ (ಗಂಡು ಮಕ್ಕಳ ಶಿಕ್ಷಣವೂ ಸೇರಿದಂತೆ) ಅನುಕೂಲಗಳು ವೈಯಕ್ತಿಕ ಹಾಗೂ ಸಾಮಾಜಿಕ ದೃಷ್ಟಿಕೋನಗಳನ್ನು ಹೊಂದಿದವುಗಳಾಗಿವೆ.

. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೇರಕಾಂಶಗಳು

ಮಹಿಳೆಯರ ಅಥವಾ ಹೆಣ್ಣುಮಕ್ಕಳ ಶಿಕ್ಷಣ ಕುರಿತು ಪೋಷಕರು ಹೊಂದಿರುವ ಮನೋಭಾವನೆಯನ್ನು ಅರ್ಥಮಾಡಿಕೊಳ್ಳವ ಮೊದಲು, ವಿಶೇಷವಾಗಿ ಉತ್ತರ ಭಾರತದಲ್ಲಿ ಪೋಷಕರು ಹೆಣ್ಣು ಮಕ್ಕಳು ಶಾಲೆಗೆ ಸೇರುವುದು ಕೇವಲ ಅವಳ ಮದುವೆ ದೃಷ್ಟಿಯಿಂದ ಎಂಬುದನ್ನು ಅನೇಕ ಅಧ್ಯಯನಗಳು ಗುರುತಿಸಿವೆ. (ಪ್ರೋಬ್, ೧೯೯೯; ರೇಖಾ ಕೌಲ್, ೧೯೯೩; ರೇಖಾ ವಾಜೀರ್, ೨೦೦೧; ಡ್ರೀಜ್ ಮತ್ತು ಘಜಡರ್, ೧೯೯೬; ವಾಸವಿ, ೨೦೦೦; ಬ್ಯಾನರ್ಜಿ ರುಕ್ಮಿಣಿ ೧೯೯೫; ೧೯೯೮; ಡ್ರೀಜ್ ಅಂಡ್ ಕಿಂಗ್‌ಡಂ, ೨೦೦೧). ಭಾರತದ ಬಹುತೇಕ ಹೆಣ್ಣು ಮಕ್ಕಳು ಮದುವೆಯ ನಂತರ ತಮ್ಮ ಪೋಷಕರ ಮನೆಯನ್ನು ತೊರೆದು, ಗಂಡನ ಮನೆ ಅಥವಾ ಗ್ರಾಮವನ್ನು ಸೇರುವುದು ಸಾಮಾನ್ಯ. ಅಲ್ಲದೆ ಆಕೆಯ ಸಂಬಂಧವು ತಮ್ಮ ಪೋಷಕರ ಜೊತೆ ಸ್ವಲ್ಪ ಮಟ್ಟಿಗೆ ಅಂತರದಿಂದ ಇರುತ್ತದೆ. ಹೀಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಿಂತ ಮದುವೆಯೆ ಪೋಷಕರ ಮೊದಲ ಆದ್ಯತೆಯ ಗುರಿಯಾಗಿರುತ್ತದೆ. ಆದರೆ ಗಂಡುಮಕ್ಕಳಿಗೆ ಶಿಕ್ಷಣ ಕೊಡಿಸುವ ಕುರಿತು ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ. ಗಂಡುಮಕ್ಕಳು ಮದುವೆಯ ನಂತರವು ತಮ್ಮ ಜೊತೆ (ಪೋಷಕರ) ಇರುತ್ತಾರೆ. ಅಲ್ಲದೆ ತಮ್ಮ ಇಳಿವಯಸ್ಸಿನಲ್ಲಿ ನಮ್ಮನ್ನು ಸಲಹುತ್ತಾರೆ ಎಂಬ ಭಾವನೆ ಬಹುತೇಕ ಪೋಷಕರಲ್ಲಿದೆ. ಮತ್ತೊಂದು ಬಹಳ ಸಂಕೀರ್ಣವಾದ ವಿಷಯವೆಂದರೆ ಪುರುಷರಿಗಿಂತ ಮಹಿಳೆಯರಿಗೆ ಉದ್ಯೋಗ ಅವಕಾಶಗಲು ಬಹಳ ಸೀಮತಿವಾಗಿರುವುದು. ಈ ಬಗೆಯ ಸಾಮಾಜಿಕ ಒಪ್ಪಂದಗಳಲ್ಲಿ ಅನೇಕ ಬದಲಾವಣೆ ಆಗಿರಬಹುದು (ವಿಶೇಷವಾಗಿ ನಗರ ಪ್ರದೇಶದಲ್ಲಿ). ಆದರೆ ಈ ರೀತಿಯ ಸಾಮಾಜಿಕ ನೀತಿ ಅಥವಾ ಮೌಲ್ಯಗಳು ಇನ್ನು ತಮ್ಮ ಪ್ರಾಬಲ್ಯತೆಯನ್ನು ಗ್ರಾಮೀಣ ಪ್ರದೇಶದಲ್ಲಿ ಹೊಂದಿವೆ.

16_23_EKPSMS-KUH

ಶಾಲೆಗೆ ಗಂಡುಮಕ್ಕಳು ಮನೆಗೆಲಸಕ್ಕೆ ಹೆಣ್ಣು ಮಕ್ಕಳು

ಈ ದೃಷ್ಟಿಕೋನದಲ್ಲಿ ಒಂದು ಅನುಮಾನವಿದೆ. ಅದೇನೆಂದರೆ ಕೆಲವು ಬೆರಳೆಣಿಕೆ ಪ್ರಮಾಣದಷ್ಟು ಪೋಷಕರು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಸ್ವಲ್ಪ ಭಿನ್ನವಾದ ಮನೋಭಾವನೆ ಹೊಂದಿದವರಾಗಿದ್ದಾರೆ. ಅವರ ದೃಷ್ಟಿಕೋನದಿಂದಲೇ ಹೇಳುವುದಾದರೆ, ಅದರಲ್ಲಿ ಬಹಳ ಮಟ್ಟದ ವ್ಯತ್ಯಾಸಗಳು ಕಂಡುಬರುವುದಿಲ್ಲ. ಹೇಗಿದ್ದರೂ ಅವಳು ನಮ್ಮಿಂದ ದೂರವಾಗುತ್ತಾಳೆ ಎಂಬ ದೃಷ್ಟಿಯಿಂದ ಹೆಣ್ಣುಮಗಳ ಶಿಕ್ಷಣಕ್ಕೆ ಬಂಡವಾಳ ಹಾಕುವುದು ಗಂಡು ಮಕ್ಕಳಿಗಿಂತ ಅತ್ಯಂತ ಕಡಿಮೆ. ಆದರೆ ಈ ದೃಷ್ಟಿಕೋನವು ಗಂಡು ಮಕ್ಕಳ ವಿಷಯದಲ್ಲಿ ಹೆಚ್ಚು ಪ್ರಬಲವಾಗಿದ್ದರೆ, ಹೆಣ್ಣುಮಕ್ಕಳ ವಿಷಯದಲ್ಲಿ ಬಹಳ ದುರ್ಬಲವಾಗಿದೆ. ಅದನ್ನು ಹೀಗೆ ಹೇಳಬಹುದು. ಈ ಮನೋಭಾವನೆಯನ್ನು ಹೆಣ್ಣುಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಯಾ ಪಡುವಾಗ ಪೋಷಕರು ಅನೇಕ ಭಿನ್ನತೆ ಹಾಗೂ ದ್ವಂದ್ವದಲ್ಲಿದ್ದಾರೆ. ಪೋಷಕರು ಈ ವಿಷಯವನ್ನು ಕುರಿತು ವಿವರಣೆ ನೀಡುವ ಅಂಶಗಳೆಂದರೆ : ನಾವು ಹೆಣ್ಣು ಮಕ್ಕಳನ್ನು ಬಹಳ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡುತ್ತೇವೆ. ಇದರಿಂದ ಏನು ಉಪಯೋಗ. ಅವಳು ಉದ್ಯೋಗಕ್ಕಾಗಿ ಹೊರಗೆ ಹೋಗುವುದು ಮತ್ತು ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವುದು ನಮ್ಮ ಸಮುದಾಯ ಜಾತಿಯಲ್ಲಿ ಇಲ್ಲ. ಅವಳು ಮುಂದೆ (ಮುದವೆ ನಂತರ) ಮಾಡಬೇಕಾದ ಮನೆ ಕೆಲಸ ಸೇರಿದಂತೆ ಇತರ ಕೆಲಸಗಳನ್ನು ಚೆನ್ನಾಗಿ ಮಾಡುವುದನ್ನು ಕಲಿತರೆ ಸಾಕು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಮದುವೆಯ ಕಾರಣಕ್ಕಾಗಿ. ಅಂದರೆ ವಿವಾಹಕ್ಕೆ ಉತ್ತಮ ಅವಕಾಶ ದೊರಕುತ್ತದೆ ಎಂಬುದು ಸಾಮಾನ್ಯ ಅಂಶವಾದರೂ ಅದು ಮತ್ತೊಂದು ಸಕಾರಾತ್ಮಕ ಕಾರಣವನ್ನು ಒಳಗೊಂಡಿದೆ. ಆ ಕಾರಣಕ್ಕಾಗಿಯೇ ಪೋಷಕರು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಆಸಕ್ತಿ ಹೊಂದಿದವರಾಗಿದ್ದಾರೆ. ತುಂಬಾ ಆಸಕ್ತಿಯುತವಾದ ಅಂಶವೆಂದರೆ ಕ್ಷೇತ್ರಕಾರ್ಯದಲ್ಲಿ ಆಗಿದ್ದಾಂಗೆ ಪೋಷಕರು ನೀಡಿದ ಕಾರಣಗಲೆಂದರೆ ವಿದ್ಯಾವಂತ ಹೆಣ್ಣುಮಕ್ಕಳು ಪತ್ರ ಬರೆಯುವ ಮೂಲಕ ಸಂಪರ್ಕ ಇಟ್ಟುಕೊಳ್ಳುತ್ತಾರೆ. ಮನೆಯ ಸಾಮಾನ್ಯ ಲೆಕ್ಕಪತ್ರಗಳನ್ನು ನಿರ್ವಹಿಸಬಲ್ಲ ಶಕ್ತಿಯನ್ನು ಹೊಂದಿದವರಾಗಿದ್ದಾರೆ. ಮನೆಯ ಸಾಮಾನ್ಯ ಲೆಕ್ಕಪತ್ರಗಳನ್ನು ನಿರ್ವಹಿಸಬಲ್ಲ ಶಕ್ತಿಯನ್ನು ಹೊಂದಿದವರಾಗಿದ್ದಾರೆ. ಕ್ಷೇತ್ರಕಾರ್ಯದಲ್ಲಿ ಉತ್ತರಿಸಿದ ಬಹುತೇಕ ವ್ಯಕ್ತಿಗಳು ಅದರಲ್ಲಿಯೂ ಮಹಿಳಾ ವರ್ಕೃಗಳು ಯೋಚಿಸುವ ಅಂಶವೆಂದರೆ, ವಿವಾಹಿತ ಮಗಳು ವಿದ್ಯಾವಂತಳಾಗಿದ್ದಲ್ಲಿ, ಅವಳು ತೊಂದರೆ ಒಳಗಾದ ಸಂದರ್ಭದಲ್ಲಿ (ಪೋಷಕರಿಗೆ) ನಮ್ಮನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ. ಅಲ್ಲದೇ ನಮ್ಮ ಮಗಳ ಜೊತೆಗೆ ಸ್ವಲ್ಪ ಪ್ರಮಾಣದ ಸಂಪರ್ಕವಿಟ್ಟುಕೊಳ್ಳಲು ಶಿಕ್ಷಣ ಅವಶ್ಯಕವಾಗಿದೆ. ಇದು ಮಹಿಳಾ ಶಿಕ್ಷಣಕ್ಕೆ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಪ್ರೇರಕ ಶಕ್ತಿಯಾದ್ದರೂ ಕೂಡ ಇದು ವಿವಾಹದ ಜೊತೆಗೆ ಸಹ ಸಂಬಂಧವನ್ನು ಹೊಂದಿದೆ. ಇದು ಉತ್ತಮವಾದ ಹುಡುಗನನ್ನು ಹುಡುಕಲು ಅವಕಾಶ ನೀಡುತ್ತದೆ. ಮಗಳಿಗೆ ತನ್ನ ಮಕ್ಕಳನ್ನು ಸರಿಯಾಗಿ ವಿದ್ಯಾಭ್ಯಾಸ ನೀಡಿ ಬಳಸಲು ಸಹಾಯಕವಾಗುತ್ತದೆ. ಒಂದು ವೇಳೆ ವಿವಾಹದ ನಂತರ ವಿಚ್ಛೇದನವಾದರೂ ಅಥವಾ ವಿಧವೆಯಾಗಿ ಜೀವನ ನಿಭಾಯಿಸುವ ಶಕ್ತಿಯನ್ನು ಶಿಕ್ಷಣ ನೀಡುತ್ತದೆ ಎಂದು ಹೇಳುತ್ತಾರೆ.

ಹೆಣ್ಣುಮಕ್ಕಳ ವಿದ್ಯಾಭ್ಯಾಸ ಒಮದೆರಡು ಮೆಟ್ಟಿಲು ಮಾತ್ರ

ಹೆಣ್ಣುಮಕ್ಕಳ ವಿದ್ಯಾಭ್ಯಾಸ ಒಮದೆರಡು ಮೆಟ್ಟಿಲು ಮಾತ್ರ

ಕೆಲವು ಪೋಷಕರು ಮದುವೆ ಸಂಬಂಧದ ಆಚೆಗೂ, ಉದ್ಯೋಗ ಅವಕಾಶಗಳ ಹೆಚ್ಚಳ, ಸ್ವಾವಲಂಬನೆ ಬೆಳವಣಿಗೆಗೆಯ ದೃಷ್ಟಿ.ಯಿಂದಲೂ ಶಿಕ್ಷಣದ ಮಹತ್ವವನ್ನು ಪರಿಗಣಿಸುತ್ತಾರೆ. ಅಧ್ಯಯನಕ್ಕೆ ಒಳಪಡಿಸಿದ ಶೇಕಡ ೪೦.೦೦ ರಷ್ಟು ಪೋಷಕರು ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಿದರೆ, ಗಂಡು ಮಕ್ಕಳ ಶಿಕ್ಷಣ ನೀಡುವವರು ಶೇಕಡ ೮೭.೦೦ರಷ್ಟು. ಇಲ್ಲಿ ಶೇಕಡ ೪೭.೦೦ರಷ್ಟು ಅಂತರವನ್ನು ಗುರುತಿಸಬಹುದು. ಆದರೆ ಸ್ವಲ್ಪ ಹೆಚ್ಚು ಕಡಿಮೆ, ಮಹಿಳೆಯರು ಉದ್ಯೋಗದಲ್ಲಿ ತೊಡಗುವ ಅವಕಾಶ ನೀಡುವುದನ್ನು ಹೆಚ್ಚಿಸಿದ ಪಕ್ಷದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿಯನ್ನು ಗ್ರಾಮೀಣ ಪೋಷಕರು ಬೆಳೆಸಿಕೊಳ್ಳಬಹುದಾದ ಸೂಚನೆಗಳಿವೆ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರು ಸ್ವಲ್ಪಮಟ್ಟಿನ ಅಪಾಯಕಾರಿ ಮನೋಭಾವನೆಯನ್ನು ಹೊಂದಿದ್ದಾರೆ. ಈ ರೀತಿಯ ಮನೋಭಾವನೆಗೆ ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಮತ್ತು ಅದರ ಹಿಂದಿರುವ ಪರಿಶ್ರಮವನ್ನು ಮುಂದುಮಾಡುತ್ತಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಇಂದು ಹೆಚ್ಚಿನ ಖರ್ಚು ತಗಲುತ್ತದೆ ಎಂಬುದು ಪೋಷಕರಲ್ಲಿ ಇರುವ ಪ್ರಮುಖ ವಿರೋಧವಾಗಿದೆ. ಇದರ ಜೊತೆಗೆ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಬಂಡವಾಳ ವ್ಯಯಿಸಲು ತಯಾರಿಲ್ಲ. ಸೇಬಿನಕಟ್ಟೆ ಗ್ರಾಮದ ಒಬ್ಬ ಪೋಷಕರ ಪ್ರಕಾರ ಇಂದು ಶಿಕ್ಷಣಕ್ಕೆ ಹೆಚ್ಚಿನ ಹಣ ವ್ಯಯಿಸಬೇಕು. ನನ್ನ ಆರ್ಥಿಕ ಪರಿಸ್ಥಿತಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಹಣ ಖರ್ಚು ಮಾಡುವ ಸ್ಥಿತಿಯಲ್ಲ ಎಂದು ಹೇಳುತ್ತಾರೆ. ಅದೇ ಗ್ರಾಮದ ದಲಿತ ವಿದ್ಯಾವಂತ ಮಹಿಳೆಯೊಬ್ಬರ ಪ್ರಕಾರ, ನಮ್ಮ ಹೆಣ್ಣುಮಕ್ಕಳನ್ನು ಬಹಳ ಚಿಕ್ಕವಯಸ್ಸಿಗೆ ಮದುವೆ ಮಾಡುತ್ತೇವೆ. ಮನ್ಮಥನಾಳ ಗ್ರಾಮದ ವೃದ್ಧರೊಬ್ಬರ ಪ್ರಕಾರ ಗಂಡುಮಕ್ಕಳ ಶಿಕ್ಷಣದಷ್ಟು ಪ್ರಮುಖವಾದದ್ದು ಹೆಣ್ಣುಮಕ್ಕಳ ಶಿಕ್ಷಣ, ಏಕೆಂದರೆ ಹೆಣ್ಣುಮಕ್ಕಳು ಮನೆಯ ಎಲ್ಲಾ ವ್ಯವಹಾರಗಳನ್ನ ನಿರ್ವಹಿಸಬೇಕು. ಅಲ್ಲದೆ ಇತ್ತೀಚೆಗೆ ಪ್ರತಿಯೊಬ್ಬರೂ ಕೂಡ ವಿದ್ಯಾವಂತ ಹುಡುಗಿಯರನ್ನು ಮದುವೆಯಾಗಲು ಬಯಸುತ್ತಿದ್ದಾರೆ ಎಂದು ಹೇಳುತ್ತಾರೆ.

ಹೀಗೆ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸುವವರು ಕೂಡ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಲು ಉದ್ದೇಶಿಸಿರುವ ಮಟ್ಟ ಬಹಳ ಕಡಿಮೆ. ಚಾರ್ಟ್ ಮೂರು ಸೂಚಿಸುವಂತೆ ಅತ್ಯಧಿಕ ಸಂಖ್ಯೆ ಪೋಷಕರು ತಮ್ಮ ಗಂಡುಮಗ ಓದುವ ತನಕ ಶಿಕ್ಷಣ ಕೊಡಿಸಲು ಆಸಕ್ತಿ ಹೊಂದಿದ್ದಾರೆ. ಕನಿಷ್ಟ ಪಕ್ಷ ೧೦ನೆಯ ತರಗತಿಯವರೆಗೆ ಓದಿಸಲು ಕಟ್ಟಿಬದ್ಧರಾಗಿದ್ದಾರೆ. ಆದರೆ ಬಹುತೇಕ ಪೋಷಕರು ಹೆಣ್ಣುಮಗಳ ಶಿಕ್ಷಣ ಕುರಿತು ಇಂತಹ ಮನೋಭಾವನೆಯನ್ನು ಹೊಂದಿರುವುದಿಲ್ಲ. ಸ್ವಲ್ಪ ಪ್ರಮಾಣದ ಪೋಷಕರು, ಹೆಣ್ಣುಮಕ್ಕಳು ಪ್ರಾಥಮಿಕ ಶಿಕ್ಷಣಕ್ಕಿಂತ ಹೆಚ್ಚಿನ ಶಿಕ್ಷಣ ಪಡೆಯುವುದನ್ನು ವಾಸ್ತವಿಕವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಪ್ರಮುಖ ಕಾರಣ ತಮ್ಮ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇರುವ ಮತ್ತೊಂದು ಗ್ರಾಮದ ಶಾಲೆಗೆ ಹೆಣ್ಣುಮಕ್ಕಳು ಹೋಗುವುದು ಕೆಲವು ಪೋಷಕರಿಗೆ ಮನಸಿಲ್ಲದಿರುವುದು. ಜೊತೆಗೆ ಪೋಷಕರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಸಾಮಾನ್ಯವಾಗಿ ಹೆಚ್ಚಿನ ಆಸೆ ಆಕಾಂಕ್ಷೆಗಳು ಇಲ್ಲದಿರುವುದು ಮತ್ತೊಂದು ಕಾರಣವಾಗಿದೆ. ಇದು ಗ್ರಾಮಗಳಲ್ಲಿ ಮಾಧ್ಯಮಿಕ ಶಾಲೆಗಲು ಮತ್ತು ಪ್ರೌಢ ಶಾಲೆಗಳು ದೊರೆಯದೆ ಇರುವ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಪೋಷಕರು ಉನ್ನತ ಶಿಕ್ಷಣ ಪಡೆದ ಹೆಣ್ಣು ಮಕ್ಕಳ ಮದುವೆ ಮಾಡುವುದು ಕೆಲವು ಪರಿಸ್ಥಿತಿಯಲ್ಲಿ ಸ್ವಲ್ಪ ಕಷ್ಟವಾಗುತ್ತದೆ ಎಂದು ಮತ್ತೊಂದು ಪ್ರಮುಖ ಕಾರಣ ನೀಡುತ್ತಾರೆ.

 


[1] ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆ ೧೫ ಆಗಸ್ಟ್, ೧೯೯೭ ಈ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಲೇಖಕರು ಪ್ರಾಥಮಿಕ ಶಿಕ್ಷಣ ಸಾಧ್ಯವಾಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನು ಸಮ್ಮತಿಸಬಹುದು.ಆದರೆ ಅನಕ್ಷರಸ್ಥರು ಸ್ವಲ್ಪಮಟ್ಟಿಗೆ ಅಕ್ಷರಸ್ಥ ಪೋಷಕರು ಕೂಡ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆಚ್ಚಿನ ಆಸಕ್ತಿ ಹೊಂದಿಲ್ಲ ಎಂದು ಹೇಳಿ ಇದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ಶೈಕ್ಷಣಿಕ ಸಮಾಜಶಾಸ್ತ್ರದ ತಜ್ಞರೊಬ್ಬರು ಅದೇ ದಿನ ಶಿಕ್ಷಣ ಕುರಿತು ಲೇಖನವನ್ನು ಇಂಡಿಯನ್ ಎಕ್ಸ್ ಪ್ರೆಸ್ ದಿನ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದಾರೆ ‘ಸಾಕ್ಷರತೆ ಜೀವನದ ಪ್ರಮುಖ ಮೂಲಭೂತ ಅಂಶ ಮತ್ತು ಇದನ್ನು ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು, ಇದನ್ನು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ತಿಳಿಸುವುದು ಕಷ್ಟ. ಇದೊಂದು ಸಾರ್ವತ್ರಿಕ ಅರಿವು. ಬಹಳ ಮಂದಿ ಬಡತನದ ರೇಖೆಗಿಂತ ಕೆಳಗಿರುವ ನಿರಕ್ಷರಿಗಳಿಗೆ ಶಿಕ್ಷಣದ ಬಗ್ಗೆ ನಂಬಿಕೆಯುಂಟು ಮಾಡುವುದು ಕಷ್ಟದ ಕೆಲಸ’ ಎಂದು ಆ ಲೇಖಕರು ಹೇಳಿದ್ದಾರೆ.