ಭಾಗ – ೨

. ಶಿಕ್ಷಣ ವಿವಾಹ ಜಾತಿ

ವಿದ್ಯಾವಂತ ಹೆಣ್ಣುಮಗಳನ್ನು ವಿವಾಹ ಮಾಡುವುದು ಸರಳವೇ ಅಥವಾ ಹೆಚ್ಚಿನ ಕಷ್ಟವೇ ಎಂಬ ಪ್ರಶ್ನೆಯನ್ನು ಕೇಳಿದಾಗ, ಶೇಕಡ ೬೨.೮೪ರಷ್ಟು ಸರಳ ಎಂದು ಶೇಕಡ ೩೭.೧೯ರಷ್ಟು ಪೋಷಕರು ಹೆಚ್ಚು ಕಷ್ಟವಾಗುತ್ತದೆ ಎಂದು ಉತ್ತರಿಸಿದ್ದಾರೆ. ಈ ರೀತಿಯ ಉತ್ತರಗಳನ್ನು ಸಮನ್ವಯಗೊಳಿಸಿದಾಗ ನಮಗೆ ವಿವಾಹದ ನಿರೀಕ್ಷೆಗಳು ಮತ್ತು ವಿವಾಹದ ವೆಚ್ಚದ ನಡುವೆ ಇರುವ ಭಿನ್ನತೆಯನ್ನು ಅಥವಾ ಇವೆರಡರನ್ನು ಬೇರೆ ಬೇರೆಯಾಗಿ ನೋಡಬಹುದು. ಶಿಕ್ಷಣ ಪಡೆದ ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಉತ್ತಮ ವಿದ್ಯಾವಂತ ಗಂಡನ ನಿರೀಕ್ಷೆ ಇರುತ್ದತದೆ. ಆ ಸಮಯದಲ್ಲಿ ಅವಳ ಮದುವೆಯ ವೆಚ್ಚವು ಕೂಡ ಹೆಚ್ಚಳವಾಗುತ್ತದೆ. ಏಕೆಂದರೆ ಕೆಲವು ಸಾಮಾಜಿಕ ನಿಯಮಗಳು ಅವಳಿಗೆ ಉತ್ತಮ ಸುಶಿಕ್ಷಿತ ಹುಡುಗನನ್ನು ಹುಡುಕುವಂತೆ ಒತ್ತಾಯಿಸುತ್ತವೆ. ಈ ದ್ವಂದ್ವವನ್ನು ಪೋಷಕರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಅವರ ಹಣಕಾಸಿನ ಸಂಪನ್ಮೂಲ ಮತ್ತು ಹೆಣ್ಣುಮಗಳ ಭವಿಷ್ಯದ ಯೋಗಕ್ಷೇಮವನ್ನು ಅವಲಂಬಿಸಿರುತ್ತದೆ. ಇದು ವಿವಾಹ ಜವಾಬ್ದಾರಿಗಳು ಮತ್ತು ವಿವಾಹ ವೆಚ್ಚ, ಈ ಎರಡು ಅಂಶಗಳ ಜೊತೆಗೆ ಹೆಣ್ಣುಮಕ್ಕಳ ಶಿಕ್ಷಣದ ಮಟ್ಟವನ್ನು ಅವಲಂಬಿಸಿರುತ್ತದೆ. ಪೋಷಕರು ವಿವಾಹದ ವೆಚ್ಚವು ಹೆಣ್ಣುಮಕ್ಕಳ ಶಿಕ್ಷಣದ ಮಟ್ಟವನ್ನು ಅವಲಂಬಿಸಿರುತ್ತದೆ. ಪೋಷಕರು ವಿವಾಹದ ವೆಚ್ಚವು ಹೆಣ್ಣುಮಕ್ಕಳ ಶಿಕ್ಷಣದ ಜೊತೆಗೆ ಹೆಚ್ಚಳವಾಗುತ್ತದೆ ಎಂದು ನಿರೀಕ್ಷಿಸಿದ್ದಾರೆ.ಇದು ಬಹುಶಃ ತನ್ನ ನಿರೀಕ್ಷೆಯ ನಿಯಮ ಪಾಲಿಸುವಂತೆ ನಿರ್ದೇಶಿಸುತ್ತದೆ. ಈ ರೀತಿಯ ದೃಷ್ಟಿಕೋನವು ಒಂದು ಪ್ರಮುಖ ಅಂಶವನ್ನು ಅವಲಂಬಿಸಿದೆ. ಇದು ಆಯಾ ಜಾತಿ ಅಥವಾ ಜನ ಸಮುದಾಯದ ಸಾಮಾನ್ಯ ಶಿಕ್ಷಣದ ಮಟ್ಟವನ್ನು ಅದರಲ್ಲಿಯೂ ಪುರುಷರ ಶಿಕ್ಷಣವನ್ನು ಅವಲಂಬಿಸಿರುತ್ತದೆ.

ಇದನ್ನು ಹೀಗೂ ವಿಶ್ಲೇಷಿಸಬಹುದು. ಒಂದು ಜನಸಮುದಾಯದಲ್ಲಿ ಪುರುಷರ ಶಿಕ್ಷಣದ ಪ್ರಮಾಣ ಹೆಚ್ಚಳವಾಗಿದ್ದರೆ, ಆ ಜನಸಮುದಾಯದಲ್ಲಿ ವಿದ್ಯಾವಂತ ಹುಡುಗರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಹೆಣ್ಣುಮಕ್ಕಳನ್ನು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಹಂತದವರೆಗೆ ಓದಿಸುವುದು, ಅವಳ ವಿವಾಹದ ವೆಚ್ಚವನ್ನು ಬಹಳ ಪ್ರಮಾಣದಲ್ಲಿ ಹೆಚ್ಚಿಸುವುದಿಲ್ಲ. ಪುರುಷರ ಶಿಕ್ಷಣದ ಮಟ್ಟ ಅತಿಕಡಿಮೆ ಇರುವ ಜನಸಮುದಾಯಗಳಲ್ಲಿ, ಪೋಷಕರು ತಮ್ಮ ಹೆಣ್ಣುಮಗಳಿಗೆ ಹೆಚ್ಚಿನ ಶಿಕ್ಷಣ ನೀಡಲು ಭಯಪಡುತ್ತಾರೆ. ಏಕೆಂದರೆ ತಮ್ಮ ಹೆಣ್ಣುಮಕ್ಕಳಿಗೆ ಸಮಂಜಸವಾದ ಹಾಗೂ ತಮ್ಮ ಖರ್ಚುವೆಚ್ಚಗಳಿಗೆ ಹೊಂದಿಕೊಳ್ಳುವವರು ಸಿಗುವುದು ಬಹಳ ಕಷ್ಟವಾಗುತ್ತದೆ ಎಂಬ ಆತಂಕದ ವಾತಾವರಣ ಆ ಪೋಷಕರಿಗೆ ಇರುತ್ತದೆ. ತಮ್ಮ ಆದಾಯದ ಮಿತಿಯಲ್ಲಿ, ವಿದ್ಯಾವಂತ ಮಗಳಿಗೆ ಸಮಂಜಸವಾದ ವರ ಸಿಗುವುದಿಲ್ಲವೆಂದು ಅವರು ಭಯ ಪಡುತ್ತಾರೆ. ಅತಿ ಬಡತನದ ಕುಟುಂಬಗಳಿಂದ ಬಂದ ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುವುದು ಬಹಳ ಕಷ್ಟ. ಏಕೆಂದರೆ, ಅದು ಬಹಳ ವೆಚ್ಚದಾಯಕ. ಜೊತೆಗೆ ವಿದ್ಯಾವಂತ ಹೆಣ್ಣುಮಕ್ಕಳನ್ನು ವಿವಾಹ ಮಾಡಬೇಕಾದರೆ ವರದಕ್ಷಿಣೆಯನ್ನು ಯಾರಾದರೂ ನೀಡಬೇಕು.

ಈ ಕಾರಣಗಳು ಪ್ರಸ್ತುತ ಅಧ್ಯಯನದ ಸಮೀಕ್ಷೆಗೆ ಆಯ್ಕೆ ಮಾಡಿಕೊಂಡ ಗ್ರಾಮಗಳ ಪೋಷಕರಲ್ಲಿ ಅಧ್ಯಯನದ ಉದ್ದಕ್ಕೂ ಅತ್ಯಂತ ಪ್ರಖರವಾಗಿ ಕಂಡುಬರುತ್ತವೆ. ಉತ್ತಮ ಶಿಕ್ಷಣ ಪಡೆದಿರುವ ಜಾತಿ ವರ್ಗಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡುವುದರಿಂದ ಅವರ ವಿವಾಹ ಸ್ವಲ್ಪಮಟ್ಟಿಗೆ ಸರಳವಾಗುತ್ತದೆ ಎಂಬ ಪ್ರವೃತ್ತಿ ಇದೆ. ಅವಕಾಶುವಂಚಿತ ಜಾತಿ ಜನಸಮುದಾಯಕ್ಕೆ ಸೇರಿದ, ಅದರಲ್ಲಿಯೂ ನಿರ್ದಿಷ್ಟವಾಗಿ ದಲಿತ ಜನಸಮುದಾಯಕ್ಕೆ ಸೇರಿದ ಕೆಲವು ಪೋಷಕರ ಪ್ರಕಾರ ವಿದ್ಯಾವಂತ ಹೆಣ್ಣುಮಕ್ಕಳ ಮದುವೆಗೆ ಹೆಚ್ಚಿನ ಬೇಡಿಕೆ ಇದೆ. ಏಕೆಂದರೆ ಅವಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳಿವೆ. ಇತ್ತೀಚಿನ ದಿನಮಾನದಲ್ಲಿ ಸರ್ಕಾರಿ ಕೆಲಸಗಳು ನಮ್ಮ ಸಮುದಾಯದ ವಿದ್ಯಾವಂತ ಹೆಣ್ಣುಮಕ್ಕಳಿಗೆ ಹೆಚ್ಚಾಗಿ ದೊರಕುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಆದರೆ ವಿದ್ಯಾವಂತ ಹೆಣ್ಣುಮಕ್ಕಳನ್ನು ವಿವಾಹ ಮಾಡುವುದು ಕಷ್ಟ, ಎಂದು ಅವಕಾಶ ವಂಚಿತ ಜನಸಮುದಾಯಕ್ಕೆ ಸೇರಿದ ಬಹುತೇಕ ಪೋಷಕರ ದೃಷ್ಟಿಕೋನವಾಗಿದೆ. ನಾವು ನಮ್ಮ ಹೆಣ್ಣುಮಕ್ಕಳನ್ನು ವಿವಾಹ ಮಾಡುವುದು ಕಷ್ಟ, ಎಂದು ಅವಕಾಶ ವಂಚಿತ ಜನಸಮುದಾಯಕ್ಕೆ ಸೇರಿದ ಬಹುತೇಕ ಪೋಷಕರ ದೃಷ್ಟಿಕೋನವಾಗಿದೆ. ನಾವು ನಮ್ಮ ಹೆಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿದರೆ, ಅವರಿಗೆ ವಿದ್ಯಾವಂತ ವರನನ್ನು ಹುಡುಕಬೇಕು. ಆ ಸಮಯದಲ್ಲಿ ವಿದ್ಯಾವಂತ ವರನ ಕುಟುಂಬದವರು ಹೆಚ್ಚಿನ ಪ್ರಮಾಣದ ವರದಕ್ಷಿಣೆ ಕೇಳುತ್ತಾರೆ ಎಂದು ಬಾರ್‌ಕೇರ್ ಜನ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಹೇಳುತ್ತಾರೆ. ಕ್ಷೌರಿಕ ಜನಸಮುದಾಯಕ್ಕೆ ಸೇರಿದ ವ್ಯಕ್ತಿಯ ಪ್ರಕಾರ ಉತ್ತಮ ಮತ್ತು ವಿದ್ಯಾವಂತ ಒಳ್ಳೆಯ ಹುಡುಗರ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕೆ ಮರಾಠಿ ಜನ ಸಮುದಾಯಕ್ಕೆ ಸೇರಿದ ಮತ್ತೊಬ್ಬರು ನೀಡುವ ವಿವರಣೆ ಎಂದರೆ, ವಿದ್ಯಾವಂತ ವರನನ್ನು ಹುಡುಕಲು ದೂರದ ಸ್ಥಳಗಳಿಗೆ ಹೋಗಬೇಕು ಈ ಪ್ರದೇಶದಲ್ಲಿ ನಮ್ಮ ಜಾತಿಗೆ ಸೇರಿದ ವರಸಿಗುವುದು ಬಹಳ ಕಡಿಮೆ ಎಂದು ಹೇಳುತ್ತಾರೆ. ವಿದ್ಯಾವಂತ ವರನ ಕುಟುಂಬದ ಸದಸ್ಯರು ಅಥವಾ ಕೆಲವು ಪೋಷಕರು ವಿದ್ಯಾವಂತ ಹೆಣ್ಣುಮಕ್ಕಳನ್ನು ಮನೆಯ ಸೊಸೆ ಮಾಡಿಕೊಳ್ಳುವ ಆಸಕ್ತಿಯನ್ನು ಹೊಂದಿಲ್ಲದಿರುವವರಾಗಿದ್ದಾರೆ. ಸೊಸೆಯಾಗಿ ಬರುವ ಹುಡುಗಿ ಕೇವಲ ಮನೆ ಕೆಲಸ ಮಾಡಬೇಕು. ಸಂಬಂಧಿಕರ ಮನೆಗಳಿಗೆ ಹೋಗಿ ಬರಬೇಕು ಎಂಬ ಮನೋಭಾವನೆ ಹೊಂದಿರುವವರು, ವಿದ್ಯಾಭ್ಯಾಸ ಹೆಚ್ಚು ಮಾಡಿರುವ ಹುಡುಗಿಯನ್ನು ಮನೆಯ ಸೊಸೆ ಮಾಡಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸದಿರುವುದು ಕಂಡುಬರುತ್ತದೆ (ಪ್ರಶಾಂತ್ ಎಚ್.ಡಿ. ೨೦೦೩).

.. ಪ್ರೇರಕಾಂಶಗಳ ಸಾಮಾಜಿಕ ಆಯಾಮಗಳು

ಇಲ್ಲಿಯವರೆಗೆ ಪೋಷಕರ ಶಿಕ್ಷಣದ ದೃಷ್ಟಿಕೋನ ಮತ್ತು ಪೋಷಕರ ಇನ್ನಿತರ ದೃಷ್ಟಿಕೋನ ಕುರಿತು ಚರ್ಚಿಸಲಾಗಿದೆ. ಈವರೆಗೆ ಚರ್ಚಿಸಿದ ವಿಷಯವೇನಿದ್ದರೂ ವಾಸ್ತವದಲ್ಲಿ ಪೋಷಕರ ಮನೋಭಾವನೆಯು ಹೆಚ್ಚಾಗಿ (ಇಂಟರ್ ಡಿಪೆಂಡೆಂಟ್) ಒಂದು ಮತ್ತೊಂದನ್ನು ಅವಲಂಬಿಸಿರುವ ಸಾಧ್ಯತೆಗಳೇ ಹೆಚ್ಚು ಎಂದು ತೋರಿಸುತ್ತದೆ. ಶಿಕ್ಷಣ ಮೌಲ್ಯ ಕುರಿತು ಒಬ್ಬ ವ್ಯಕ್ತಿಗೆ ಇರುವ ಚಿಂತನೆ ಅಥವಾ ಮನೋಭಾವನೆಯು ಮತ್ತೊಬ್ಬರಿಂದ ಪ್ರಬಾವಿತವಾದದ್ದು ದಾಗಿರಬಹುದು. ಈ ರೀತಿಯ ಪ್ರಬಾವಗಳು ಒಂದೇ ಕುಟುಂಬದಲ್ಲಿ ಅವನ/ಅವಳ ಮೇಲೆ ಬೀರಬಹುದಾದ ಪ್ರಬಾವಗಳು ಸಮುದಾಯದಿಂದಲೆ ಉಟಾಗಿರಬಹುದು ಅಥವಾ ನೆರೆ ಹೊರೆಯವರ ಪ್ರಭಾವಕ್ಕೆ ಒಳಗಾಗಿರಬಹುದು. ಈ ದೃಷ್ಟಿಯಿಂದ ಶಿಕ್ಷಣಕ್ಕೆ ಇರುವ ಪ್ರೇರಣಾ ಶಕ್ತಿಯು ಪ್ರಮುಖವಾಗಿ ಸಾಮಾಜಿಕ ಆಯಾಮ ಹೊಂದಿದೆ ಎಂದು ಹೇಳಬಹುದು.

ಇದನ್ನು ಉದಾಹರಣೆಗಳ ಜೊತೆಗೆ ವಿವರಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಕೆಲವು ಪೋಷಕರು ನಮ್ಮ ಜಾತಿಯಲ್ಲಿ ಹೆಣ್ಣುಮಕ್ಕಳನ್ನು ಓದಿಸುವ ಪರಿಪಾಠವಿಲ್ಲ ಎಂದು ಬಹಳ ಸರಳವಾಗಿ ಹೇಳುತ್ತಾರೆ. ಇದನ್ನು ಹೀಗೂ ಹೇಳಬಹುದು. ಅವರು ಇದನ್ನು ಒಂದು ಸಾಮಾಜಿಕ ನೀತಿ ಎಂದು ನೋಡಲು ಮತ್ತು ಅದನ್ನು ಪಾಲಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಇತರ ಎಲ್ಲರ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ನಾವು ನಮ್ಮ ಹೆಣ್ಣು ಮಕ್ಕಳನ್ನು ಕೂಡ ಶಾಲೆಗೆ ಕಳುಹಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಈ ಎಲ್ಲಾ ಹೇಳಿಕೆಗಳಲ್ಲಿ ಕಂಡುಬರುವ ಅಂಶವೆಂದರೆ ಶಿಕ್ಷಣದ ಬಗ್ಗೆ ಇರುವ ಸಾಮಾಜಿಕ ಆಯಾಮಗಳು ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವವನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ. ಈ ಎರಡು ಅಂಶಗಳು ಶಿಕ್ಷಣದ ಮೇಲೆ ತಮ್ಮದೇ ಪ್ರಭಾವವನ್ನು ಬೀರುವ ಮತ್ತು ಅದನ್ನು ಹೊರಹಾಕುವ ಸಾಧ್ಯತೆ ಇದೆ ಎಂಬುದನ್ನು ಒತ್ತಿ ಹೇಳುತ್ತವೆ.

ಹೆಣ್ಣುಮಗುವಿನ ಶಿಕ್ಷಣ ಪ್ರಮುಖವೇ ಎಂಬ ಪ್ರಶ್ನೆಗೆ, ಒಬ್ಬ ದಲಿತ ಮಹಿಳೆಯು ಮತ್ತೊಂದು ಆಸಕ್ತಿಯುತ ವಿಷಯವನ್ನು ನಮ್ಮ ಮುಂದೆ ವಿವರಿಸಿದರು. ಅದು ನನಗೆ ಹೇಗೆ ಗೊತ್ತಾಗಬೇಕು? ನಾನು ನನ್ನ ಜೀವನದಲ್ಲಿ ಇದುವರೆಗೆ ವಿದ್ಯಾವಂತರನ್ನು ನೋಡಿಯೇ ಇಲ್ಲ! ಎಂದು ಹೇಳುತ್ತಾರೆ. ಇವರ ಅಭಿಪ್ರಾಯವು ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡು ಅಂಶಗಳನ್ನು ಒಳಗೊಂಡಿದೆ. ಇದು ಜನರು ಶಿಕ್ಷಣದ ಮೌಲ್ಯವನ್ನು ಅರ್ಥಮಾಡಿಕೊಂಡಿರುವ ರೀತಿಯನ್ನು ತಿಳಿಸುವ ಕ್ರಮವಾಗಿದೆ. ವಿದ್ಯಾವಂತರು ಮತ್ತು ಅವಿದ್ಯಾವಂತರ ನಡವಳಿಕೆಯ ಪ್ರವೃತ್ತಿಯಲ್ಲಿ ಯಾವುದೇ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿಸುತ್ತದೆ. ರೋಲ್ ಮಾಡಲ್‌ನ್ನು ಉಪೇಕ್ಷೆ ಮಾಡಿ ಹೇಳುವುದು ಕೂಡ ರೋಲ್ ಮಾಡಲ್‌ನ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಅಧ್ಯಯನ ಸಂದರ್ಭದಲ್ಲಿ ನಾವು ಕೆಲವು ಗ್ರಾಮಗಳಲ್ಲಿ ಗಮನಿಸಿರುವಂತೆ, ಅಂಗನವಾಡಿಗಳನ್ನು ನಡೆಸುತ್ತಿರುವ ಮಹಿಳೆಯರನ್ನು ನೋಡಿ, ಕೆಲವು ಗ್ರಾಮಗಳಲ್ಲಿ ಗಮನಿಸಿರುವಂತೆ, ಅಂಗನವಾಡಿಗಳನ್ನು ನಡೆಸುತ್ತಿರುವ ಮಹಿಳೆಯರನ್ನು ನೋಡಿ, ಕೆಲವು ಮಹಿಳೆಯರಿಗೆ ಅದರಲ್ಲಿಯೂ ವಿದ್ಯಾವಂತ ಮಹಿಳೆಯರಿಗೆ ಉದ್ಯೋಗ ಅವಕಾಶಗಳು ದೊರಕುತ್ತವೆ ಎಂಬುದು ಕೂಡ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಸ್ವಲ್ಪಮಟ್ಟಿನ ಪರಿಣಾಮ ಬೀರಿದೆ. ಈ ರೀತಿ ಸಾಮಾಜಿಕ ಪ್ರಭಾವಗಳು ಕೂಡ ಯಾವ ಬಗೆಯ ಪಾತ್ರವನ್ನು ವಹಿಸುತ್ತವೆ ಎಂಬುದು ಜನರು ಅದನ್ನು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಹೀಗೆ ಊಹಿಸಿಕೊಳ್ಳೋಣ. ಒಂದು ಕುಗ್ ಗ್ರಾಮದಿಂದ ಬಂದ ಮೇಲುಜಾತಿಗೆ ಸೇರಿದ ಹುಡುಗನಿಗೆ ವಿದ್ಯಾಭ್ಯಾಸದ ನಂತರ ಉತ್ತಮವಾದ ಉದ್ಯೋಗ ದೊರೆಯುತ್ತದೆ ಎಂದು ಇಟ್ಟು ಕೊಳ್ಳೋಣ. ಇದು ಮೇಲುಜಾತಿಗೆ ಸೇರಿದ ಹುಡುಗರಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಹೆಚ್ಚು ಮಾಡಬಹುದಾದ ಒಂದು ಘಟನೆ ಎಂದು ಗ್ರಹಿಸಬಹುದು. ಇದೇ ಘಟನೆ ತಳಜಾತಿಗೆ ಸೇರಿದ ಕುಟುಂಬಗಳ ಮೇಲೆ ಯಾವ ತರಹದ ಪರಿಣಾಮ ಬೀರಬಲ್ಲದಾಗಿದೆ ಎಂಬುದು, ಅವರು ಅದೇ ರೀತಿಯ ಉದ್ಯೋಗ ಅವಕಾಶ ನಮಗೆ ದೊರಕುತ್ತದೆ ಎಂಬುದನ್ನು ಹೇಗೆ ಪರಿಭಾವಿಸಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ. ಹಾಗೆಯೇ ಸಮಾಜದಿಂದ ಪಡೆದುಕೊಂಡ ಮೌಲ್ಯಗಳ ಪ್ರಬಾವಕ್ಕೆ ಒಳಪಟ್ಟು ಹೆಣ್ಣುಮಕ್ಕಳ ಶಿಕ್ಷಣ ಪ್ರಮುಖ ಅಥವಾ ಪ್ರಮುಖವಲ್ಲ ಎಂದು ಪರಿಗಣಿಸುವುದು ಕೂಡ ಲಿಂಗಾಧಾರಿತ ಶ್ರಮವಿಭಜನೆಯನ್ನು ಅವಲಂಬಿಸಿದೆ. ಇಂತಹ ಪ್ರಭಾವಗಳು ಯಾವುದೇ ಸಮಾಜದಲ್ಲಿ ಸಣ್ಣ ಸಣ್ಣ ಜಾತಿ ವರ್ಗ ಮತ್ತು ಲಿಂಗಧಾರಿತವಾಗಿ ವಿಂಗಡಿಸಿ ನೋಡಿದಾಗ ರೋಲ್ ಮಾಡಲ್‌ನ ಪ್ರಭಾವಗಳು ಕೂಡ ಹೆಚ್ಚು ನಿರ್ದಿಷ್ಟವಾಗಿರುತ್ತದೆ.

ಶಿಕ್ಷಣ ಕುರಿತಂತೆ ಇರುವ ಸಾಮಾಜಿಕ ಆಯಾಮಗಳಿಗೆ ಇರುವ ಮತ್ತೊಂದು ಸಾಕ್ಷಿ ಎಂದರೆಕಡ್ಡಾಯ ಶಿಕ್ಷಣಕ್ಕೆ ಕುರಿತು ಸಮೀಕ್ಷೆಗೆ ಒಳಪಬಡಿಸಿದ ಪೋಷಕರು ನೀಡಿದ ಅಭಿಪ್ರಾಯಗಳು. ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ನೀವು ಒಪ್ಪುತ್ತೀರ ಎಂಬ ಪ್ರಶ್ನೆಗೆ ಅಥ್ಯಧಿಕ ಪ್ರಮಾಣದಲ್ಲಿ ಶೇಕಡ ೮೭.೦೦ರಷ್ಟು ಹೌದು ಎಂದು ಉತ್ತರಿಸಿದ್ದಾರೆ. ಉಳಿದ ಶೇಕಡ ೧೩.೦೦ರಷ್ಟು ಪೋಷಕರು ಇಲ್ಲ ಎಂದು ವಿರೋಧಿಸದೇ ಇದ್ದರೂ ಅದರ ಬಗ್ಗೆ ಯಾವ ನಿರ್ಧಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಹೀಗೆ ಇದನ್ನು ವಿರೋಧಿಸುವವರು ಕೂಡ ಕೆಲವು ಸಣ್ಣ ಪುಟ್ಟ ಕಾರಣಗಳಿಗೆ ಸೀಮಿತಗೊಳಿಸಿದ್ದಾರೆ. ಈ ವಿರೋಧವು ಯಾವುದೇ ಬಗೆಯ ತತ್ವ ಆಧಾರಿತವಾದುದ್ದಲ್ಲ. ಕೆಲವರು ನಿರ್ದಿಷ್ಟ ವರ್ಷಗಳವರೆಗೆ ಕಡ್ಡಾಯ ಶಿಕ್ಷಣ ಎಂಬುದನ್ನು ಕಾನೂನು ಮಾಡಿದರೂ ಅದನ್ನು ಆಚರಣೆಗೆ ತರಲು ವಿಫಲವಾಗಿರುವುದರಿಂದ, ಮಕ್ಕಳನ್ನು ಕ್ರಮಬದ್ಧವಾಗಿ ಕೆಲಸ ಮಾಡದೆ ಇರುವ ಶಾಲೆಗಳಿಗೆ ಸುಮ್ಮನೆ ಕಳುಹಿಸುವುದು ನಿರರ್ಥಕ ಎಂದು ಹೇಳಿದ್ದಾರೆ. ಒಟ್ಟಾರೆ ಕಡ್ಡಾಯ ಶಿಕ್ಷಣದ ಕಡೆಗೆ ಪೋಷಕರ ಮನೋಭಾವನೆ ಅಧಿಕ ಪ್ರಮಾಣದಲ್ಲಿ ಸಕಾರಾತ್ಮಕವಾಗಿದೆ. ಒಂದು ನಿರ್ದಿಷ್ಟವಾದ ಕಾರಣಕ್ಕಾಗಿಯೆ ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿದೆ ಎಂಬುದಕ್ಕೆ ಬಹುದೊಡ್ಡದಾದ ಸಾಮಾಜಿಕ ಆಯಾಮ ನೀಡಿ, ಅನೇಕ ಪೋಷಕರು ಅದನ್ನು ಸಮರ್ಥಿಸಿ, ಸ್ವಯಂ ಇಚ್ಛೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸತೊಡಗಿದ್ದಾರೆ. ಇತರರು ಕೂಡ ಇದನ್ನು ಅನುಸರಿಸಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಕಡ್ಡಾಯ ಶಿಕ್ಷಣವು ಮಕ್ಕಳ ಶಿಕ್ಷಣದ ಬಗ್ಗೆ ಉದಾಸೀನ ಹೊಂದಿರುವ ಪೋಷಕರಿಂದ ಮಕ್ಕಳನ್ನು ರಕ್ಷಿಸಬಹುದಾದ ಶಕ್ತಿಯನ್ನು ಹೊಂದಿದೆ ಎಂದು ಇನ್ನು ಕೆಲವು ಸಂದರ್ಭಗಳಲ್ಲಿ ಕೆಲವು ಪೋಷಕರು ಹೇಳುತ್ತಾರೆ.

ಪ್ರತಿಯೊಂದು ಮಗುವು ೬-೧೪ ವಯೋಮಾನದವರೆಗೆ ತಪ್ಪದೆ ಶಾಲೆಗೆ ಹೋಗಲು ಮತ್ತು ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಬಗ್ಗೆ ಹೊಂದಿರುವ ಮನೋಪ್ರವೃತ್ತಿಯು ಶಿಕ್ಷಣದ ಸಾಮಾಜಿಕ ಆಯಾಮವನ್ನು ಸೂಚಿಸುವ ಪ್ರಮುಖ ಅಂಶವಾಗಿದೆ. ಒಂದು ರೀತಿಯ ಸಾಮಾಜಿಕ ಒಪ್ಪಿಗೆ ಹಾಗೂ ಒಮ್ಮತವನ್ನು ಮೂಡಿಸಬೇಕು ಎಂಬುದನ್ನು ಪೋಷಕರ ಮನೋಪ್ರವೃತ್ತಿ ಮತ್ತು ಸಾಮಾಜಿಕ ಆಯಾಮ ತಿಳಿಸುತ್ತದೆ. ಇಂತಹ ಸಾಮಾಜಿಕ ಒಪ್ಪಿಗೆಯನ್ನು ಈಗಾಗಲೇ ಕೇರಳದಲ್ಲಿ ಸಾಧಿಸಿರುವುದು ಕಂಡುಬಂದಿದೆ. ಒಂದು ಸಂಶೋಧನೆಯು ಗುರುತಿಸಿರುವಂತೆ ಕೇರಳದಲ್ಲಿ ಮಕ್ಕಳು ಯಾಕೆ ಶಾಲೆಗೆ ಹೋಗುತ್ತಾರೆ ಎಂದು ಪೋಷಕರನ್ನು ಕೇಳಿದ್ದಾರೆ. ಕೆಲವರು ಈ ಪ್ರಶ್ನೆಗೆ ಏನು ಉತ್ತರ ಹೇಳಬೇಕು ಎಂಬುದು ತಿಳಿಯದೆ ಸುಮ್ಮನೆ ನಕ್ಕಿದ್ದಾರೆ. ಮುಂದುವರಿದು ಸ್ವಯಂ ಪ್ರೇರಣೆಯಿಂದ ಮಕ್ಕಳು ಶಾಲೆಗೆ ಹೋಗುತ್ತಾರೆ. ಬಹುತೇಕ ಮಕ್ಕಳು ಇದನ್ನೆ ಅನುಸರಿಸುತ್ತಾರೆ. ಅಲ್ಲದೆ ಶಿಕ್ಷಣದಿಂದ ಇರುವ ಅನುಕೂಲಗಳನ್ನು ನಾವು ಪೋಷಕರು ನಿರ್ದಿಷ್ಟವಾಗಿ ಇದೇ ಎಂದು ಹೇಳುವುದು ತಪ್ಪು. ಏಕೆಂದರೆ ಹೀಗೆ ಮಾಡುವುದರಿಂದ ಶಿಕ್ಷಣಕ್ಕೆ ಇರುವ ಉಪಯೋಗವನ್ನು ನಿರ್ದಿಷ್ಟಗೊಳಿಸಿದಂತೆ ಆಗುತ್ತದೆ ಎಂದು ಹೇಳುತ್ತಾರೆ. ಸ್ವಲ್ಪಮಟ್ಟಿಗೆ ಇದೇ ಬಗೆಯ ಮನೋಪ್ರವೃತ್ತಿಯು ಹಿಮಾಚಲ ಪ್ರದೇಶದಲ್ಲಿ ಬೆಳವಣಿಗೆಯಾಗಿರುವುದು ಪ್ರೋಬ್ ತಂಡ ಗುರುತಿಸಿದೆ.

. ಪ್ರೇರಕಾಂಶಗಳು ಪ್ರಭಾವಿಸಬಲ್ಲವೇ?

ಮಕ್ಕಳ ಶಿಕ್ಷಣ ಕುರಿತು ಪೋಷಕರ ಮನೋಪ್ರವೃತ್ತಿಯಲ್ಲಿ ಬದಲಾವಣೆ ಗಳಾಗಿರುವುದನ್ನು ನಾವು ಈಗಾಗಲೇ ಚರ್ಚಿಸಿದ್ದೇವೆ. ಕಳೆದ ಹತ್ತು ಹದಿನೈದು ವರ್ಷಗಳ ಹಿಂದಕ್ಕೆ ಹೋಲಿಸಿ ನೋಡಿದರೆ ಪೋಷಕರು ಇಂದು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಜವಾಬ್ದಾರಿ ಮತ್ತು ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಪೋಷಕರ ಪ್ರವೃತ್ತಿಯಲ್ಲಿ ಉಂಟಾಗಿರುವ ಬದಲಾವಣೆಯನ್ನನ ನಾವು ಬೆಂಬಲಿಸಬಹುದಾಗಿದೆ. ಮಹಿಳೆಯರ ಶಿಕ್ಷಣದ ಬಗ್ಗೆ ಪೋಷಕರು ಬಹಳ ಹಿಂದಕ್ಕೆ ಹೋಗುವ ಅವಶ್ಯಕತೆ ಇಲ್ಲ. ವಿಶೇಷವಾಗಿ ಉತ್ರ ಭಾರತದ ಪೋಷಕರು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೊಂದಿರುವ ನಕಾರಾತ್ಮಕ ಮನೋಭಾವನೆ ಒಂದು ರೀತಿ ಜ್ಯಾಡ್ಯವಾಗಿದೆ. ಇಂತಹ ಒಂದು ದೃಷ್ಟಿಕೋನ ಪ್ರೋಬ್ ವರದಿಯಲ್ಲಿದೆ “among the more extreme ones, was that an educated women was likely to become a widow” (ಪ್ರೋಬ್, ೧೯೯೯, ಪುಟ. ೨೫). ಈ ರೀತಿಯ ಮನೋಬಾವನೆಯನ್ನು ನಮ್ಮ ಅಧ್ಯಯನ ಸಂದರ್ಭದಲ್ಲಿ ನಾವು ಗುರುತಿಸಲಾಗಲಿಲ್ಲ. ಇಂದು ಬಹುತೇಕ ಪೋಷಕರು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಸ್ವಲ್ಪ ಮಟ್ಟಿನ ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ಪ್ರಮುಖವಾಗಿ ನವನಾಗರಿಕತೆಯ ವಿಷಯಗಳನ್ನು ಬೆಳೆಸಿಕೊಳ್ಳುವಮಟ್ಟಿಗಾದರೂ ಹೆಣ್ಣುಮಕ್ಕಳಿಗೆ ಶಿಕ್ಷಣ ಪ್ರಮುಖವಾಗಿ ಬೇಕು ಎಂಬ ಆಸೆಯನ್ನು ಹೊಂದಿದವರಾಗಿದ್ದಾರೆ. ಪೋಷಕರಲ್ಲಿ ಇರುವ ಈ ರೀತಿಯ ಪ್ರವೃತ್ತಿಯು ಭವಿಷ್ಯದ ದೀನಮಾನಗಳಲ್ಲಿ ಅಭಿವೃದ್ಧಿಯಾಗುವ ಸಾಧ್ಯತೆ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಪ್ರಾಯಶಃ ಕೆಲವು ಬದಲಾವಣೆಗಳು ಇಂದು ಉಂಟಾಗುತ್ತಿರುವುದನ್ನು ಗುರುತಿಸಬಹುದು. ಇಂತಹ ಪ್ರವೃತ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚಳಗೊಳಿಸಬೇಕಾದರೆ, ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವೆ ಎಂಬುದಕ್ಕೆ ನಮ್ಮ ಉತ್ತರ ಹೌದು ಎಂದಾಗಿದೆ.

ಈ ಹಿನ್ನೆಲೆಯಲ್ಲಿ ಅನೇಕ ಅಧ್ಯಯನಗಳು ಈಗಾಗಲೇ ಕೆಲವು ಸಕಾರಾತ್ಮಕ ಸಲಹೆಗಳನ್ನು ನೀಡಿವೆ. ವಿಶೇಷವಾಗಿ ಮಹಿಳಾ ಉದ್ಯೋಗದ ಮೀಸಲಾತಿ ಪಾಲನೆಯು ಅವಕಾಶವಂಚಿತ ಸಮುದಾಯಗಳ ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತೊರಿಸುವ ಆಸಕ್ತಿಯನ್ನು ಸ್ಪಷ್ಟವಾಗಿ ಇಮ್ಮಡಿಗೊಳಿಸಬಲ್ಲ ಶಕ್ತಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮಹಿಳಾ ಉದ್ಯೋಗದ ಮೀಸಲಾತಿ ಪ್ರಮುಖ ಪಾತ್ರವಹಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಹಾಗೆಯೇ ಶಾಲಾ ಬಿಸಿಯೂಟ, ಉಚಿತ ಪಠ್ಯ ಪುಸ್ತಕ, ಉಚಿತ ಸಮವಸ್ತ್ರ ಹಾಗೂ ಇತರ ಪ್ರೋತ್ಸಾಹಕ ಕಾರ್ಯಕ್ರಮಗಳು ತಮ್ಮದೆ ಪ್ರಭಾವ ಮತ್ತು ಪರಿಣಾಮವನ್ನು ಪೋಷಕರು ಮಕ್ಕಳನ್ನು ಶಾಲೆಗೆ ಕಲುಹಿಸುವಂತೆ ಒಪ್ಪಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿವೆ. ಯಾವುದೆ ಬಗೆಯ ಭೌತಿಕ ಆಕರ್ಷಣೆ ಇಲ್ಲದೆಯೂ ಕೂಡ ಪೋಷಕರಲ್ಲಿ ಶೈಕ್ಷಣಿಕ ಆಸಕ್ತಿಯನ್ನು ಹೆಚ್ಚಿಸುವ ಪ್ರಬಲವಾದ ಅಂಶವನ್ನು ಶಿಕ್ಷಣವೆ ಹೊಂದಿದೆ. ಇದನ್ನು ಸಂಪೂರ್ಣ ಸಾಕ್ಷರತೆ ನಡೆದಿರುವ ಜಿಲ್ಲೆಗಳಲ್ಲಿ ಈಗಾಗಲೇ ಬೀದಿ ನಾಟಕಗಳ ಮೂಲಕ ಪ್ರದರ್ಶಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಮತ್ತು ಸ್ಥಳೀಯ ನಾಯಕರ ಸಂಪೂರ್ಣ ಬೆಂಬಲ ವ್ಯಕ್ತವಾಗಿರುವ ಜಿಲ್ಲೆಗಳಲ್ಲಿ ಇದರ ಪ್ರಬಾವ ಅತ್ಯಂತ ಮಹತ್ವದಾಗಿದೆ.

ಪೋಷಕರು ಮಕ್ಕಳ ಶಿಕ್ಷಣ ಕುರಿತು ಹೊಂದಿರುವ ಮನೋಪ್ರವೃತ್ತಿ ಬಗೆಗಿನ ಚರ್ಚೆಯನ್ನು ಅಂತ್ಯಗೊಳಿಸುವ ಮೊದಲು, ಮಕ್ಕಳ ಶಿಕ್ಷಣದ ಬಗ್ಗೆ ಅತ್ಯಧಿಕ ಕಾಳಜಿ ಹೊಂದಿರುವ ಕೆಲವು ಪೋಷಕರು ಶಾಲಾ ಚಟುವಟಿಕೆ ಕುರಿತು ಯಾವ ಪ್ರಮಾಣದಲ್ಲಿಲೆಕ್ಕಾಚಾರಗಳನ್ನು ಹೊಂದಿದ್ದಾರೆ ಎಂಬುದನ್ನು ತಿಳಿಸಬೇಕು. ಬಹಳ ವಿರಳವಾಗಿ ಕೆಲವು ಪೋಷಕರು ತಮ್ಮ ಅಭಿಪ್ರಾಯ ಹೇಳುವಾಗ ಸ್ಥರ್ಳಯ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಮಕ್ಕಳಲ್ಲಿ ಇರುವ ಕ್ರಿಯಾಶೀಲತೆಯನ್ನು ರಚನಾತ್ಮಕವಾಗಿ ನಿರ್ಮಾಣ ಮಾಡುವ ಮಾದರಿಯಲ್ಲಿ ಇಲ್ಲ ಎಂದು ಹೇಳುತ್ತಾರೆ. ಇದರಜೊತೆಗೆ ಶಿಕ್ಷಕರ ಮತ್ತು ಶಾಲಾ ಆಡಳಿತದ ಅನಾಸ್ಕಿತ, ಶಾಲಾ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳುತ್ತಾರೆ. ಇದು ನಮಗೆ ಏನನ್ನು ಸೂಚಿಸುತ್ತದೆ ಎಂದರೆ ಸ್ಥಳೀಯ ಪೋಷಕರಿಗೆ ಇರುವ ಅಧಿಕಾರದ ಆಸಕ್ತಿಯನ್ನು ತಿಳಿಸುತ್ತದೆ. ಮತ್ತು ಗ್ರಾಮಗಳಲ್ಲಿ ಸಮುದಾಯವನ್ನು ತಿಳಿಸುತ್ತದೆ. ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನಗಳನ್ನು ಎದುರು ನೋಡಬೇಕಾಗಿದೆ.

. ಶಾಲಾ ವ್ಯವಸ್ಥೆ ಮತ್ತು ಶೈಕ್ಷಣಿಕ ಭರವಸೆಗಳು

ಶಿಕ್ಷಣದ ಬಗ್ಗೆ ಪೋಷಕರಲ್ಲಿ ಹೆಚ್ಚಾಗಿರುವ ಆಸಕ್ತಿಯು ಶಾಲೆಯ ಪ್ರತಿದಿನದ ಹಾಜರಾತಿಯನ್ನು ಮತ್ತು ದಾಖಲಾತಿಯನ್ನು ಹೆಚ್ಚಿಸುತ್ತದೆ. ಎಂದು ಹೇಳಲು ಬರುವುದಿಲ್ಲ. ಶಿಕ್ಷಣ ಕುರಿತು ಇರುವ ಮನೋಭಾವನೆ ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸುವ ಮನೋಪ್ರವೃತ್ತಿ ಒಂದೇ ಇರಲು ಸಾಧ್ಯವಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ ಪೋಷಕರು ಶಿಕ್ಷಣಕ್ಕೆ ಇರುವ ಬಹು ಉಪಯೋಗಿ ಆಯಾಮವನ್ನು ಅರ್ಥಮಾಡಿಕೊಂಡಿರಬಹುದು. ಆದರೆ ಸ್ಥಳೀಯ ಶಾಲಾ ವ್ಯವಸ್ಥೆಯು ಉತ್ತಮವಾದ ಶಿಕ್ಷಣವನ್ನು ನೀಡುವಲ್ಲಿ ವಿಫಲವಾಗಿದೆ ಎಂದು, ಶಾಲೆಯಲ್ಲಿ ಪೋಷಕರು ಎದುರು ನಡುತ್ತಿರುವ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತಿ ಹೊಂದಿಲ್ಲದಿರುವುದಕ್ಕೆ ಅನೇಕ ಕಾರಣಗಲಿರಬಹುದು. ಉದಾಹರಣೆಗೆ, ಉತ್ತಮ ಸೌಲಭ್ಯವಿಲ್ಲದಿರುವುದು, ಶಾಲೆಯ ಖಾಸಗಿ ವೆಚ್ಚ ಹೆಚ್ಚಾಗಿರುವುದು, ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಮಕ್ಕಳು ಅಗತ್ಯವಿರುವುದು, ಇತ್ಯಾದಿ.

ಗುಣಮಟ್ಟದ ಶಿಕ್ಷಣ ಬೇಕಾಗಿದೆ

ಶಿಕ್ಷಣದ ಬಗ್ಗೆ ಇರುವ ಆಸಕ್ತಿ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವ ಆಸಕ್ತಿಯ ನಡುವಿನ ಅಂತರವನ್ನು ಒಂದು ಚಿಕ್ಕ ಪ್ರಶ್ನೆಯ ಮೂಲಕ ಪ್ರಾರಂಭಿಸಬಹುದು. ಪೋಷಕರು ಯಾವರ ರೀತಿಯ ಅಥವಾ ಯಾವ ವಿಧಾನದ ಶಿಕ್ಷಣ ಬೇಕು ಎಂದು ಕೇಳುತ್ತಿದ್ದಾರೆ? ಸಮೀಕ್ಷೆಗೆ ಒಳಪಡಿಸಿದ ಪೋಷಕರು ಬಹಳ ಭಿನ್ನವಾಗಿ ಏನಿಲ್ಲಾ ‘ಗುಣಮಟ್ಟದ ಶಿಕ್ಷಣ’ ಬೇಕು ಎಂದು ಅವರತಿಳಿವಳಿಕೆಯ ಮಟ್ಟದಲ್ಲಿಯೇ ಹೇಳುತ್ತಾರೆ. ಈ ರೀತಿಯ ಉತ್ತರ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡು ಅಂಶಗಳನ್ನು ಒಳಗೊಂಡಿದೆ. ಸಕಾರಾತ್ಮಕ ಅಂಶದಲ್ಲಿ ಹಿಂದುಳಿದ ಮತ್ತು ಬಡತನದಲ್ಲಿ ಇರುವ ಪೋಷಕರು ಉತ್ತಮ ಗುಣಮಟ್ಟದ ಶಿಕ್ಷಣ ಬಗ್ಗೆ ಕಾಳಜಿ ಹೊಂದಿದ್ದಾರೆ. ಇದರ ಬಗ್ಗೆ ವಿವಿಧ ಸಾಮಾಜಿಕ ಗುಂಪುಗಳ ನಡುವೆ ಮೂಲಭೂತ ವ್ಯತ್ಯಾಸ ಕಾಣಿಸದೆ ಇದ್ದರೂ ಈ ವಿಷಯದಲ್ಲಿ ಸ್ವಲ್ಪ ಪ್ರಮಾಣದ ಭಿನ್ನ ಭಾವನೆ ಮೇಲುಜಾತಿ ವರ್ಗಕ್ಕೆ ಸೇರಿದವರಲ್ಲಿದೆ. ಸ್ಥಿತಿವಂತ (ಎಲೈಟಿಸ್) ಕುಟುಂಬಗಳು ಒಂದು ಬಗೆ ಗುಣಾತ್ಮಕ ಶಿಕ್ಷಣವನ್ನು ಬಯಸಿದ್ದರೆ, ಬಡ ಕುಟುಂಬಗಳ ಪೋಷಕರು ಮತ್ತೊಂದು ವಿಧಾನದಲ್ಲಿ ಗುಣಮಟ್ಟದ ಶಿಕ್ಷಣ ಕೇಳುತ್ತಾರೆ. ಹೀಗೆ ಎರಡು ಬಗೆಯ ಮತ್ತು ಎರಡು ವಿಧಾನದ ಶಿಕ್ಷಣವನ್ನು ನಿರ್ದಿಷ್ಟವಾಗಿ ಒಂದು ಉದಾಹರಣೆಯೆ ಮೂಲಕ ವಿವರಿಸಬಹುದು. ಬಡತನದಲ್ಲಿ ಇರುವ ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಬುದ್ಧಿವಂತಿಕೆ ಆಧಾರಿತ ಜ್ಞಾನಕ್ಕಿಂತ ಕೈಕುಶಲತೆಯನ್ನು ಕಲಿಯಬೇಕು ಎಂದು ಬಯಸುತ್ತಾರೆ. ಬಹುಶ ಈ ದೃಷ್ಟಿಕೋನವನ್ನು ಅವರು ಹೊಂದಿರುವುದಕ್ಕೆ ಅವರ ಮಕ್ಕಳಿಗೆ ಓದುಬರಹ, ಗಣಿತ ಇತ್ಯಾದಿ ಪಠ್ಯಪುಸ್ತಕಕ್ಕೆ ಸಂಬಂಧಪಟ್ಟ ಜ್ಞಾನಕ್ಕಿಂತ ಕುಶಲತೆ ಆಧಾರಿತ ತಿಳಿವಳಿಕೆ ಅತ್ಯಂತಉಪಯೋಗವಾಗುತ್ತದೆ ಎಂದು ನಂಬಿರುವುದು. ನಮ್ಮ ಅಧ್ಯಯನದಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಬರುತೇಕ ಪೋಷಕರು ಈ ದೃಷ್ಟಿಕೋನಕ್ಕೆ ಸ್ವಲ್ಪ ಮಟ್ಟಿನ ಬೆಂಬಲ ಸೂಚಿಸುತ್ತಾರೆ.

ಅದೇನೆ ಇದ್ದರೂ ಪೋಷಕರಿಗೆ ತಮ್ಮ ಮಕ್ಕಳು ಶಾಲೆಯಲ್ಲಿ ಶ್ರಮದಾಯಕ ಕುಶಲ ಕೆಲಸ ಮಾಡುವ ಬಗ್ಗೆ ವಿರೋಧವಿದೆ. ಬಹುತೇಕ ಪೋಷಕರ ಆಸಕ್ತಿ ಮಕ್ಕಳು ಶಾಲೆಯಲ್ಲಿ ಜ್ಞಾನ ಆಧಾರಿತ ಬುದ್ಧಿವಂತಿಕೆಯು ಅಭಿವೃದ್ಧಿಯಾಗಬೇಕು ಎಂಬುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅಲ್ಲದೆ ಅವರು ಶಾಲೆಯಲ್ಲಿ ಶ್ರಮದಾಯಕ ಕುಶಲ ಕೆಲಸವು ಜ್ಞಾನ ಆಧಾರಿತ ಬುದ್ಧಿವಂತಿಕೆಯನ್ನು ವಿಮುಖವಾಗಿಸುತ್ತದೆ ಎಂದು ಪ್ರಬಲವಾಗಿ ನಂಬಿದ್ದಾರೆ. ಇದರ ಅರ್ಥ ಶಾಲೆಯ ಪಠ್ಯಕ್ರಮದಲ್ಲಿ ಶ್ರಮ ಆಧಾರಿತ ಕುಶಲತೆಯನ್ನು ಸೇರಿಸುವುದು ಸರಿಯಲ್ಲ ಎಂದು ಅಲ್ಲ. ಪಠ್ಯಕ್ರಮದ ರಚನೆಯ ಸಂದರ್ಭದಲ್ಲಿ ವಿಶಾಲವಾಗಿ ಚರ್ಚಿಸಿ ಇದನ್ನು ಸೇರಿಸಬೇಕು ಎಂದು ಪ್ರಬಲವಾದ ಚರ್ಚೆಗಳು ಅಲ್ಲಲ್ಲಿ ನಡೆಯುತ್ತಿವೆ. ಅವೆಂದರೆ, ಎ. ಕುಶಲತೆ ಅಭಿವೃದ್ಧಿ ಪಡಿಸುವ ಶಿಕ್ಷಣ ಶಾಲೆಯಲ್ಲಿ ನೀಡುವುದನ್ನು ಮುಂದಕ್ಕೆ ತಳ್ಳಬೇಕು ಎಂಬುದು ಪೋಷಕರ ಬೇಡಿಕೆಯಲ್ಲ. ಒಂದು ವೇಳೆ ಹಾಗೂ ಇದ್ದರೂ ಅದರ ಪ್ರಮಾಣ ಬಹಳ ಕಡಿಮೆ ಮಟ್ಟದ್ದಾಗಿದೆ. ಬಿ. ಪಠ್ಯಕ್ರಮ ಕುರಿತ ಚರ್ಚೆಯು ಎಲ್ಲಾ ಮಕ್ಕಳಿಗೂ ಅನ್ವ್ಯಿಸ್‌ತದೆ. ಅದು ಕೇವಲ ಆರ್ಥಿಖವಾಗಿ ಅತ್ಯಂತ ಹಿಂದುಳಿದ ದುಡಿಮೆಗಾರ ವರ್ಗಖ್ಕೆ ಮಾತ್ರ ಸೀಮಿತವಾಗಿಲ್ಲ.

ನಾವು ಈಗಾಗಲೇ ಹೇಳಿರುವ ವಿಷಯದ ನಕಾರಾತ್ಮಕ ಅಂಶದ ಕಡೆಗೆ ಒಂದು ಬಾರಿ ನೋಡೋಣ. ಪೋಷಕರು ತಮ್ಮ ಸಾಮಾನ್ಯ ತಿಳಿವಳಿಕೆಯ ಹಿನ್ನೆಲೆಯಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ದುರ್ದೈವ ಸಂಗತಿ ಎಂದರೆ, ಸಾಮಾನ್ಯ ದೃಷ್ಟಿಕೋನದಲ್ಲಿ ಗುಣಮಟ್ಟದ ಶಿಕ್ಷಣ ಎಂಬುದು ಏನನ್ನು ಒಳಗೊಂಡಿರುತ್ತದೆ ಎಂದರೆ, ಸಮಾಜದಲ್ಲಿ ಈಗಾಗಲೇ ಇರುವ ಪ್ರಬಲ ಮೌಲ್ಯ ವ್ಯವಸ್ಥೆಯಿಂದ ಅದು ಹೆಚ್ಚು ಪ್ರಭಾವಿತವಾಗಿರುತ್ತದೆ. ಇದನ್ನು ಸ್ವಲ್ಪ ವಿಸ್ತೃತವಾಗಿ ನೋಡಿದರೆ ಬಡತನದಲ್ಲಿ ಇರುವ ಪೋಷಕರಿಗೆ ಶಿಕ್ಷಣವು ತಮ್ಮ ಮಕ್ಕಳನ್ನು ವಿಸ್ತೃತವಾಗಿ ನೋಡಿದರೆ ಬಡತನದಲ್ಲಿ ಇರುವ ಪೋಷಕರಿಗೆ ಶಿಕ್ಷಣವು ತಮ್ಮ ಮಕ್ಕಳನ್ನು ಸರ್ಕಾೞ ನೌಕರರನ್ನಾಗಿಸುವ ಒಂದು ಸಾಧನವಾಗಿ ಅಥವಾ ನೌಕರಿಗೆ ಅವಕಾಶ ಒದಗಿಸುವ ಅಂಶವಾಗಿದೆ. ಇದು ನಗರಗಳಲ್ಲಿರುವ ಮಧ್ಯಮ ವರ್ಗ ರೂಪಿಸಿರುವ ಪ್ರಮುಖ ಅಂಶವಾಗಿದೆ. ಈ ರೀತಿಯ ರೋಲ್ ಮಾಡಲ್ ಬಹುಶಃ ಠಾಗೂರ್ ಅವರ ಅರ್ಥದಲ್ಲಿ ಬಹಳ ಸೀಮಿತ ಅರ್ಥದ ಶಿಕ್ಷಣವಾಗಿದೆ.ಅಂದರೆ ಶಾಲೆಗೆ ಹೋಗುವ ಪ್ರಮುಖ ಉದ್ದೇಶವನ್ನು ವಿಶಾಲವಾದ ಅರ್ಥದಲ್ಲಿ ನೋಡಬೇಕಾಗಿದೆ.

ಈರೀತಿಯ ದೃಷ್ಟಿಕೋನದಲ್ಲಿ ಇರುವ ಒಂದು ನಿರ್ದಿಷ್ಟ ಅಂಶವೆಂದರೆ, ಪಠ್ಯಕ್ರಮಕ್ಕೆ ಸಂಬಂಧಿಸಿದ ಬದಲಾವಣೆಯನ್ನು ಪ್ರಬಲ ಮೌಲ್ಯಗಳಿಂದ ಕೂಡಿದ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯು ಸ್ವಲ್ಪಮಟ್ಟಿಗೆ ಪ್ರತಿರೋಧಿಸುತ್ತದೆ. ನಾವು ಗಮನಿಸಿದಂತೆ ಗ್ರಾಮೀಣ ಪ್ರದೇಶಧ ಬಹುತೇಕ ಪೋಷಕರು ಶಾಲಾ ವ್ಯವಸ್ಥೆಯ ಬಗ್ಗೆ ಸ್ವಲ್ಪಮಟ್ಟಿಗೆ ಸಾಂಪ್ರದಾಯಪಾಲಕರಾಗಿದ್ದಾರೆ. ಅಲ್ಲದೆ ಅವರು ಸಾಂಪ್ರದಾಯಿಕ ಮಾದರಿಯ ಬೋಧನಾ ವಿಧಾನವನ್ನು ಮನೆಯಲ್ಲಿ ಬಿಟ್ಟು ಬಿಟ್ಟಿದ್ದಾರೆ. ಶಾಲಾ ಸಮವಸ್ತ್ರ, ಔಪಚಾರಿಕ ಪರೀಕ್ಷಾ ವಿಧಾನ ಮತ್ತು ಸ್ವಲ್ಪಮಟ್ಟಿಗೆ ದೈಹಿಕ ಶಿಕ್ಷೆ ಇವುಗಳಲ್ಲಿ ಅವರಿಗೆ ಹೆಚ್ಚಿನ ನಂಬಿಕೆ ಇರುವುದರಿಂದ ಬಹಳ ಹಿಂದಿನಿಂದಲೂ ಪರ್ಯಾಯ ಪಠ್ಯಕ್ರಮದ ರಚನೆಯ ಕುರಿತು ಅವರಿಗೆ ತಗಾದೆ ಇದೆ. ಇತ್ತೀಚಿನ ‘ಕಲಿ-ನಲಿ’ ಬೋಧನಾ ವಿಧಾನದ ಪ್ರಯತ್ನಗಳನ್ನು ಅವರು ಬಹಳಸ ಂದೇಹದಿಂದಲೇ ನೋಡುತ್ತಾರೆ. ಈಬೋಧನಾ ವಿಧಾನದ ಬಗ್ಗೆ ಕೆಲವು ಪೋಷಕರ ಆರೋಪ ಕಾನ್ವೆಂಟ್ ಶಾಲೆಗೆ ಕಳುಹಿಸುತ್ತಾರೆ. ಆದರೆ ನಮ್ಮ ಮಕ್ಕಳನ್ನು ಕೋತಿಯಂತೆ ಕುಣಿಯಲು ಹೇಳುತ್ತಾರೆ. ಇವರಿಗೆ ಬಹುಶಃ ಕಲಿ-ನಲಿ ಬೋಧನಾ ವಿಧಾನವು ಮಕ್ಕಳಲ್ಲಿ ಕಲಿಕಾ ಆಸಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬಹಳ ಮಟ್ಟಿಗೆ ಉಪಯುಕ್ತವಾಗಿದೆ ಎಂಬುದು ತಿಳಿದಿಲ್ಲ. ಆದರೆ ಕಲಿ-ನಲಿ ಯಿಂದ ಬೋಧನೆ ಮತ್ತು ಕಲಿಕೆಯಲ್ಲಿ ಹಾಗಿರುವ ಪ್ರಯೋಜನವನ್ನು ಯಾವುದೇ ಕಾರಣದಿಂದಲೂ ನಿರಾಕರಿಸುವಂತಿಲ್ಲ ಅಥವಾ ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ವಿಷಯದಲ್ಲಿ ಪೋಷಕರ ಸಂದೇಹ ಬದಲಾಗದ ಸ್ಥಿತಿಯನ್ನು ಅವರ ಹಕ್ಕು ಎಂದು ಹೇಳಲು ಬರುವುದಿಲ್ಲ.

ಆಸ್ಪರೇಶನ್ ಹ್ಯಾವ್ ಬಿಕಂ ಸೋ ಯುನಿವರ್ಸಲೈಜಡ್ ದಟ್ ಟುಡೇ. ಇಟ್ ಈಸ್ ಪ್ರಾಕ್ಟಿಕಲಿ ಇಂಪಾಸಿಬಲ್ ಟು ಡಿಸ್ಟಿಂಗ್ವಿಶ್ ಇನ್ ಕಂಟ್ರಿ ಫಾರ್ ದೇರ್ ಚಿಲ್ಡ್ರನ್ಸ್ ಫ್ಯೂಚರ್, ದೇ ಬೋತ್ ಗೌರ್ನಮೆಂಟ್ ಸೆಂಟ್ರಲೈಸ್ಡ್ ಸಿಸ್ಟಮ್, ಬೋರ್ಡ್ ಎಕ್ಸಾಮ್ಸ್, ಇಂಗ್ಲಿಷ್ ಮೀಡಿಯಂ ಯುನಿಫಾರಂಸ್, ಪ್ಲೆಂಟಿ ಆಫ್ ಬುಕ್ಸ್ ಅಂಡ್ ಹೋಂವರ್ಕ್, ಪೈಯೋನೀರಿಂಗ್ ಆಂಡ್ ಇನ್ನೋವೇಟಿವ್ ಆಟೆಮ್ಟೆಸ್ ಅಟ್ ಮಾಡಿಫೈಯಿಂಗ್ ಕರಿಕ್ಯುಲಂ ಟು ಮೇಕ್ ಇಟ್ ಮೋರ್ ಕಾಂಪ್ಲೆಕ್ಚುಯಲ್ ಅಂಡ್ ರಿವೆಲವೆಂಟ್ ರೆಡ್ಯೂಸಿಂಗ್ ದಿ ಬರ್ಡನ್ ಆಫ್ ದಿ ಬುಕ್ಸ್, ಟೀಚಿಂಗ್ ಇನ್ ಲೋಕಲ್ ಡೈಯಲೆಕ್ಟ್ಸ್ ಆಂಡ್ ಲೋವರಿಂಗ್ ಕಾಸ್ಟ್ ಬೈ ಎಂಪ್ಲಾಯಿಂಗ್ ನಾನ್ ಡಿಗ್ರಿ ಹೋಲ್ಡರ್ಸ್ಆರ್ ಆಲ್ ಪರ್ಸೀವ್ಡ್ ಆಸ್ ಡಿಸ್ಕ್ರಿಮಿನೇಟರಿ ಆಂಡ್ ಎಗನೆಸ್ಟ್ ದೇರ್ ಇಂಟರೆಸ್ಟ್ ಬೈದ ಕಾಮನ್ ಮ್ಯಾನ್ ಗೀವನ್ ದಿ ಆಪರ್ಚುನಿಟಿ ದೇ ವುಡ್ ್ಯಾದರ್ ಪುಟ್ ದೇರ್ ಚಿಲ್ಡ್ರನ್ ಇನ್ ಮೋಸ್ಟ್ ಎಲೈಟಿಸ್ಟ್ ಸ್ಕೋಲ್ ವಿಥಿನ್ ದೇರ್ ಮೀನ್ಸ್, ಜಸ್ಟ್ ಆಸ್ ವ್ಹೀ ವುಡ್ (ಪ್ರೋಬ್. ೧೯೯೯)

ಹೀಗೆ ಸಾಮಾಜಿಕ ದೃಷ್ಟಿಕೋನಗಳು ವ್ಯಾಖ್ಯಾನಿಸುತ್ತಿರುವ, ಗುಣಮಟ್ಟದ ಶಿಕ್ಷಣದ ಪರಿಕಲ್ಪನೆ ಮುಂದಿನ ದಿನಮಾನಗಳಲ್ಲಿ ಬದಲಾಗಬಹುದು ಮತ್ತು ಇದು ಶೈಕ್ಷಣಿಕ ವ್ಯವಸ್ಥೆಯನ್ನು ಬದಲಾವಣೆಯತ್ತ ಕೊಂಡೊಯ್ಯುವ ಒಂದು ಲಾಂಗ್‌ಟರ್ಮ್ ಕಾರ್ಯ ಸೂಚಿಯನ್ನಾಗಿ ಇದನ್ನು ನೋಡಬೇಕು. ನಮಗೆ ತಕ್ಷಣವೇ ಕಾಣುವ ಸಮಸ್ಯೆ ಎಂದರೆ ಉತ್ತಮ ಗುಣಮಟ್ಟದ ಶಿಕ್ಷಣ, ಇದನ್ನು ಪುನರ್ ವ್ಯಾಖ್ಯಾನಿಸಿಕೊಳ್ಳುವಾಗ ಕೆಲವು ಸಾಮಾನ್ಯ ಅಗತ್ಯಗಳನ್ನು (ಅವೆಂದರೆ, ಶಾಲೆಗಳಲ್ಲಿ ಮೂಲ ಸೌಲಭ್ಯಗಳು ಅಗತ್ಯ ಪ್ರಮಾಣದಲ್ಲಿ ಇಲ್ಲದಿರುವುದು, ಶಿಕ್ಷಕರು ಜವಾಬ್ದಾರಿಯಿಂದ ಕಲಿಕೆ ಹಾಗೂ ಪಠ್ಯಕ್ರಮ ಚಟುವಟಿಕೆಯಲ್ಲಿ ಭಾಗವಹಿಸದಿರುವದು ಇತ್ಯಾದಿ) ಇನ್ನೂ ಪೂರೈಸಲು ಸಾಧ್ಯವಾಗದ ಸ್ಥಿತಿ ಇದೆ (ನೋಡಿ: ಅಧ್ಯಾಯ ೫) ಹೀಗೆ ಶಾಲೆಗಳಲ್ಲಿ ಇರುವ ನಿರುತ್ಸಾಹದಾಯಕ ಪರಿಸ್ಥಿತಿಯು ಯಾವುದೇ ರೀತಿಯಲ್ಲಾದರೂ ಗುಣಮಟ್ಟದ ಶಿಕ್ಷಣವನ್ನು ಹೊರಹಾಕುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಪೋಷಕರ ಮನೋಭಾವನೆಯಲ್ಲಿ ಈಗಾಗಲೇ ಇರುವ ಶಾಲಾ ವ್ಯವಸ್ಥೆ ಕುರಿತು ತಾತ್ಸಾಹ ಭಾವನೆ ಹೆಚ್ಚಿನ ಪ್ರಮಾಣದಲ್ಲಿ ಇರುವುದು.

ಬೂದಿಹಾಳ ಎಸ್.ಕೆ. ಗ್ರಾಮದಲ್ಲಿ, ಮೂರು ಮಕ್ಕಳಿರುವ ಒಂದು ಕುಟುಂಬದಲ್ಲಿ ಯಲ್ಲಮ್ಮ ಒಬ್ಬಳೆ ಹೆಣ್ಣುಮಗಳು. ಅವಲು ಎಂದೂ ಶಾಲೆಗೆ ಹೋದವಳಲ್ಲ. ಅವಳ ತಾಯಿ ಲಕ್ಷ್ಮೀ ದೇiಮ (೫೧ ವಯಸ್ಸು) ತಮ್ಮ ಊರಿನ ಶಾಲೆಯ ಬಗ್ಗೆ ಸ್ವಲ್ಪ ಒರಟಾಗಿಯೆ ಉತ್ತರಿಸಿದ್ದರು. ನಮ್ಮ ಮಗಳನ್ನು ಶಾಲೆಗೆ ಕಳುಹಿಸಿದ್ದರೆ, ಮನೆ ಕೆಲಸಕ್ಕೆ ಹೊರಗಿನವರನ್ನು ಕರೆಯಬೇಕು ಮತ್ತು ಅವರಿಗೆ ಕೂಲಿಯನ್ನು ಕೊಡಬೇಕು.ಒಂದು ಪಕ್ಷ ಅವಳನ್ನು ಶಾಲೆಗೆ ಕಳುಹಿಸಿದ್ದರೆ, ಮನೆ ಕೆಲಸಕ್ಕೆ ಹೊರಗಿನವರನ್ನು ಕರೆಯಬೇಕು ಮತ್ತು ಅವರಿಗೆ ಕೂಲಿಯನ್ನು ಕೊಡಬೇಕು. ಒಂದು ಪಕ್ಷ ಅವಳನ್ನು ಶಾಲೆಗೆ ಕಳುಹಿಸಿದ್ದರೂ ಅಲ್ಲಿ ಅವಳು ಏನನ್ನು ಕಲಿಯುವುದಿಲ್ಲ ಎಂದರು. ಆದರೆ ಇವಳ (ಯಲ್ಲಮ್ಮನ) ಇಬ್ಬರೂ ಸಹೋದರರಲ್ಲಿ ಒಬ್ಬ ಏಳನೆಯ ತರಗತಿಯವರೆಗೆ ಕಲಿತಿದ್ದಾನೆ. ಮತ್ತೊಬ್ಬ ಐದನೆಯ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಏಳನೆಯ ತರಗತಿಯವರೆಗೆ ಓದಿದ ಮಗನಿಗೆ ಓದಲು – ಬರೆಯಲು ಬರುವುದಿಲ್ಲ ಎಂದು ಲಕ್ಷ್ಮೀದೇವಮ್ಮ ಹೇಳಿದ್ದರು.

ಅದೇ ರೀತಿ ದೌಲತ್ ಪುರ ಗ್ರಾಮದ ಅಹಮದ್ ಪಾಷನ ತಂದೆ, ಜಮೀಲ್ ಪಾಷ (೪೮ ವಯಸ್ಸು) ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ಪ್ರಕ್ರಿಯೆಯೆ ನಿರಂತರವಾಗಿ ನಡೆಯುತ್ತಿಲ್ಲ, ಹೀಗಾಗಿ ಮಕ್ಕಳು ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದಾರೆ. ಸರಿಯಾಗಿ ಕಲಿಯದಿದ್ದರೆ ಮಕ್ಕಲು ಶಾಲೆಗೆ ಹೋದರೂ ಏನು ಪ್ರಯೋಜನವಿಲ್ಲ. ಆದುದರಿಂದ ನನ್ನ ಇಬ್ಬರೂ ಮಕ್ಕಳನ್ನು ಶಾಲೆಯಿಂದ ಬಿಡಿಸಿ ವರ್ಕ್‌ಶಾಪ್‌ನ ಕೆಲಸಕ್ಕೆ ಕಳುಹಿಸುತ್ತಿದ್ದೇನೆ ಎಂದರು.

ಕಬ್ಬರಗಿ ಗ್ರಾಮದ ಒಬ್ಬ ಪೋಷಕರು ಶಾಲಾ ವ್ಯವಸ್ಥೆಯನ್ನು ಕುರಿತು ಬಹಳ ಕೋಪ ಗೊಂಡಿದ್ದರೂ. ಅವರೇ ಹೇಳುವಂತೆ ಅವರ ಮಗ ಆರನೆಯ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಅವನಿಗೆ ಸರಿಯಾಗಿ ಏನನ್ನು ಓದಲು ಬರೆಯಲು, ಲೆಕ್ಕ ಮಾಡಲು ಬರುವುದಿಲ್ಲ. ಶಾಲೆಗೆ ಕಳುಹಿಸಿ ಏನು ಮಾಡುವುದು ಎಂದು ನಮ್ಮನ್ನೆ ಪ್ರಶ್ನಿಸಿದರು.

ಮೇಲಿನ ಈ ಎಲ್ಲಾ ಕಥೆಗಳ ವಿಶಾದಗೊಳಿಸುವ ಅಂಶವೆಂದರೆ ಪೋಷಕರು ಬಯಸುತ್ತಿರುವ ಸಾಮಾನ್ಯ ಗುಣಮಟ್ಟದ ಶಿಕ್ಷಣವನ್ನು ನೀಡಲು ಶಾಲೆಗಳಿಗೆ ಸಾಧ್ಯವಾದದಿರುವುದು. ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ದಿನನಿತ್ಯ ಕಳುಹಿಸಿ ಶಿಕ್ಷಣ ಕೊಡಿಸಬೇಕು ಎಂಬ ಆಸಕ್ತಿ ನಿಜವಾಗಿ ಇದ್ದರೂ ಕೂಡ ಮೇಲೆ ತಿಳಿಸಿದ ಅಂಶಗಳಿಂದ ಅವರನ್ನು ಎದೆಗುಂದಿಸುವ ಸಾಧ್ಯತೆಯೇ ಹೆಚ್ಚು.

ನಾವು ಈಗಾಗಲೇ ತಿಳಿದಂತೆ ಪೋಷಕರ ಅಭಿಪ್ರಾಯಗಳು ಪ್ರತ್ಯೇಕ ಅಥವಾ ವಿಶೇಷವಾದವು (ಐಸೊಲೇಟ್)ಗಳಲ್ಲ. ಇಲ್ಲಿ ನಾವು ಪೋಷಕರ ಉತ್ಸಾಹ ಕುಗ್ಗಿಸುವಂತಹಅನುಭವ ವಿಸ್ತೀರ್ಣವಾಗಿರುವುದನ್ನು ಗುರುತಿಸಬಹುದು. ಆದರೆ ಅನುಭವದ ಪ್ರಮಾಣದಲ್ಲಿ ಪೋಷಕರಿಂದ ಪೋಷಕರಿಗೆ ವ್ಯತ್ಯಾಸಗಳಿವೆ. ಶಾಲಾ ವ್ಯವಸ್ಥೆಯನ್ನು ಕುರಿತು ಪೋಷಕರ ಆರೋಪಗಳು ಒಂದು ರೀತಿಯಲ್ಲಿ ಮುಗಿಯದ ಕಥೆಯಾಗಿದೆ.ಆದರೆ ಶಾಲಾ ವ್ಯವಸ್ಥೆಯಲ್ಲಿ ಅತ್ಯಂತ ನಿಧಾನಗತಿಯ ಪ್ರಗತಿಗೆ ಪೋಷಕರ ನಿಷ್ಪಲತೆಯೂ ಒಂದು ಕಾರಣವಾಗಿದೆ.

ನಮ್ಮ ಅಧ್ಯಯನದಲ್ಲಿ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಔಪಚಾರಿಕವಾಗಿ ಒರೆಗೆ ಹಚ್ಚುವ ಪ್ರಯತ್ನವನ್ನು ಮಾಡಿಲ್ಲ. ಆದರೆ ಶಾಲೆಗಳಿಗೆ ಬೇಟಿ ಮಾಡಿದಾಗ ಮಕ್ಕಳೊಂದಿಗೆ ನಡೆಸಿದ ಮಾತುಕತೆಯಿಂದ ಅವರು ಶಾಲೆಯಲ್ಲಿ ಕಲಿತಿರುವುದು ಬಹಳ ಕಡಿಮೆ ಎಂದು ತಿಳಿದುಬಂದಿದೆ. ಉದಾಹರಣೆಗೆ ನಾವು ಗುರುತಿಸಿದಂತೆ ಹಲವಾರು ಮಕ್ಕಳು ಶಾಲೆಯಲ್ಲಿ ನಾಲ್ಕು, ಐದು ವರ್ಷಗಳು ಕಲಿತಿದ್ದರೂ ಅವರಿಗೆ ಓದಲು ಬರೆಯಲು ಬರುವುದಿಲ್ಲ. ಇದನ್ನು ಹೀಗೂ ಹೇಳಬಹುದು, ಆ ಮಕ್ಕಳಿಗೆ ಎರಡು, ಮೂರು ಅಕ್ಷರಗಳಿರುವ ಸರಳ ವಾಕ್ಯಗಳನ್ನು ಹೇಳಲು ಸಾಧ್ಯವಾಗದ ಸ್ಥಿತಿ ಇದೆ. ಮಕ್ಕಳು ಕಲಿಕೆಯಲ್ಲಿ ಬಹಳ ಹಿಂದುಳಿದಿರುವುದನ್ನು ನೋಡಿದರೆ ವಿಶಾದವಾಗುತ್ತದೆ.

ಹೀಗಿದ್ದರೂ ಪೋಷಕರು ಇನ್ನೂ ಯಾಕೆ ಶಾಲೆ ವ್ಯವಸ್ಥೆಯ ಬಗ್ಗೆ ಸ್ವಲ್ಪಮಟ್ಟಿನ ಆಸಕ್ತಿ ಹೊಂದಿದ್ದಾರೆ ಎಂದರೆ, ಶಿಕ್ಷಣಕ್ಕೆ ಇರುವ ವಿಶೇಷ ಮೌಲ್ಯ ಮತ್ತು ಅದರ ಬಗೆಗಿನ ಗೌರವದಿಂದ ಎಂದು ಹೇಳಬಹುದು. ಉದಾಹರಣೆಗೆ ಅವರು ಶಿಕ್ಷಣವನ್ನು ಪಡೆದುಕೊಳ್ಳುವುದು ಬಹಳ ಉತ್ತಮವಾದುದು ಎಂದು ತಿಳಿದಿರುವುದು.ಆದರೆ ಅವರು ಶಿಕ್ಷಣ ಪಡೆದುಕೊಳ್ಳುವುದೇ ಸಾಧನೆ ಎಂದು ಭಾವಿಸಿಲ್ಲ ಅಥವಾ ಬಹುಶಃ ಅವರು ಶಿಕ್ಷಣದಿಂದ ಇರುವ ಅನುಕೂಲಗಳಿಗೆ ಮತ್ತು ಅದರಪ್ರಾಮುಖ್ಯತೆಗೆ ಒಂದು ಹಂತದವರೆಗೆ ಮಾತ್ರ ಆದ್ಯತೆ ನೀಡಲು ಬಯಸುತ್ತಾರ ಹೀಗೆ ಇನ್ನೂ ಮುಂತಾದ ವೈವಿಧ್ಯಮಯ ಅಂಶಗಳ ಪರಿಣಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ಶಾಲಾವ್ಯವಸ್ಥೆಯನ್ನು ವಿಶ್ಲೇಷಿಸಬೇಕು. ಅವಕಾಶ ವಂಚಿತ ಕುಟುಂಬಗಳನ್ನು ಕುರಿತು ಚರ್ಚಿಸುವಾಗ ಈ ಅಂಶಗಳಿಗೆ ವಿಶೇಷ ಒತ್ತು ನೀಡಬೇಕು.

ಶಾಲಾ ವ್ಯವಸ್ಥೆಯನ್ನು ಕುರಿತು ಇರುವ ನಿರುತ್ಸಾಹಕ ಅಂಶಗಳುಕೇವಲ ಪೋಷಕರಿಗೆ ಮಾತ್ರ ಸೇರಿದವುಗಳಲ್ಲ. ಇದು ಮಕ್ಕಳಲ್ಲಿಯೂ ಕಂಡುಬರುತ್ತದೆ. ಪ್ರಾರಂಭದಲ್ಲಿ ಮಕ್ಕಳು ಶಾಲೆಗೆ ಸಜ್ಜುಗೊಳ್ಳುವುದು ಸಾಮಾನ್ಯವಾಗಿ ಸಕಾರಾತ್ಮಕವಾಗಿರುತ್ತದೆ. ಇದು ಯಾವಾಗ ಎಂದರೆ ಶಾಲೆಯ ಕಾರ್ಯಚಟುವಟಿಕೆಗಳು ಮಕ್ಕಳ ಮನೋಭಾವನೆಯನ್ನು ಸರಳವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ. ಉತ್ತಮ ಶಾಲೆಯಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಕಲಿಕೆಯಲ್ಲಿ ತೊಡಗಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ಅಲ್ಲದೆ ತರಗತಿಗಳು ಕ್ರಮಬದ್ಧವಾಗಿ ನಡೆಯದೇ ಇರುವ ಶಾಲೆಗಳಿಗೂ ಮಕ್ಕಳು ಹೋಗುವ ಆಸಕ್ತಿಯನ್ನು ಹೊಂದಿದ್ದಾರೆ. ಏಕೆಂದರೆ ಇದು ಅವರಿಗೆ ಇತರ ಮಕ್ಕಳೊಂದಿಗೆ ಕಲಿತು ಆಟವಾಡಲು ಒಂದು ಅವಕಾಶವನ್ನು ಒದಗಿಸುತ್ತದೆ. ಇದನ್ನು ಸ್ವಾಗತಿಸಬಹುದು. ಕಾರಣ ಇದು ತಮ್ಮ ದೈಹಿಕ ಬೆಳವಣಿಗೆಯ ಮೊದಲೇ ಕುಟುಂಬದ ಕೆಲಸದಲ್ಲಿನ ದುಡಿಮೆಯಿಂದ ವಿಮೋಚನೆಯನ್ನು ಒದಗಿಸುತ್ತದೆ.

ಆದರೆ ಕೆಲವು ಮಕ್ಕಳು ನಿಧಾನವಾಗಿ ಶಾಲೆಗೆ ಹಾಜರಾಗುವಲ್ಲಿ ಅನಾಸಕ್ತಿ ತೋರಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಬಹಳಸಾಮಾನ್ಯ ಕಾರಣ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದು ಅಥವಾ ಶಿಕ್ಷಕರು ಮಕ್ಕಳನ್ನು ತೇಜೋವಧೆ ಮಾಡುವುದು. ಈ ರೀತಿಯ ಭಾವನೆಯನ್ನು ಒಂದು ಮಗು ವ್ಯಕ್ತಪಡಿಸಿದ್ದರೆ, ಇದನ್ನ ಇನ್ನೂ ಹಲವು ಮಕ್ಕಳು ಸಮ್ಮತಿಸುತ್ತಾರೆ. ಆದರೆ ಶಾಲೆಯಲ್ಲಿ ಕಲಿಯುಗ ಶಿಕ್ಷಕರು ಹೊಡೆದು ಬುದ್ದಿಹೇಳಿ, ಶಿಕ್ಷೆ ನೀಡದಿದ್ದರೆ ನಾವು ಕಲಿತು ಈ ಮಟ್ಟಕ್ಕೆ ಬರುತ್ತಿರಲಿಲ್ಲ ಎಂದು ಹೇಳುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. ಹೀಗಾಗಿ ಮಕ್ಕಳು ಶಾಲೆಯನ್ನು ಮಧ್ಯದಲ್ಲಿ ಬಿಡಲು, ಶಾಲೆಯಲ್ಲಿ ಶಿಕ್ಷಕರು ನೀಡುವ ಶಿಕ್ಷೆ ಪ್ರಮುಖ ಕಾರಣ ಎಂದು ಹೇಳುವುದು ಅಸಾಮಾನ್ಯ. ಅಲ್ಲದೆ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಎಲ್ಲಾ ಮಕ್ಕಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ. ತರಗತಿಯಲ್ಲಿ ಮೇಸ್ಟ್ರ ಹೊಡೆಯುವುದರಿಂದ, ಪಾಠ ಸರಿಯಾಗಿ ಅರ್ಥವಾಗದೇ ಇದ್ದಾಗ, ಕಲಿಕೆಯಲ್ಲಿ ಬೇಸರ ಇತ್ಯಾದಿ ಕಾರಣಗಳಿಂದ ಮಕ್ಕಳಿಗೆ ಶಾಲೆಯ ಬಗ್ಗೆ ನಿರುತ್ಸಾಹ ಉಂಟಾಗಬಹುದು. ಶಾಲೆಯಲ್ಲಿ ಇರಬಹುದಾದ ಸಾಮಾಜಿಕ ಬೇಧ ಭಾವನೆ (ಮೇಲುಜಾತಿಗೆ ಸೇರಿದ ಶಿಕ್ಷಕರು ದಲಿತ ಮಕ್ಕಳನ್ನು ತಾತ್ಸಾರದಿಂದ ನೋಡುವುದು) ಕೂಡ ಮಕ್ಕಳಿಗೆ ಶಾಲೆಯ ಬಗ್ಗೆ ಅನಾಸಕ್ತಿ ಉಂಟು ಮಾಡಲು ಕಾರಣವಾಗಿದೆ. ವಿಶೇಷವಾಗಿ ಅವಕಾಶ ವಂಚಿತ ಕುಟುಬಗಳಿಂದ ಬಂದ ಮಕ್ಕಳ ಮೇಲೆ ಇದು ತನ್ನದೇ ಪರಿಣಾಮವನ್ನು ಬೀರುವುದರಲ್ಲಿ ಸಂದೇಹವಿಲ್ಲ.

ಹೀಗೆ ನಿರುತ್ಸಾಹಕ ಅಂಶವು ಪೋಷಕರಲ್ಲಿ ಅಥವಾ ಮಕ್ಕಳ ಮೇಲೆ ತನ್ನ ಪ್ರಭಾವವನ್ನು ಬೀರಬಹುದು. ಆದರೆ ಇದರ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ. ನಿರ್ದಿಷ್ಟ ಪ್ರಮಾಣದ ಕಲಿಕಾ ಚಟುವಟಿಕೆಗಳು ನಡೆಯದೇ ಇರುವ ಶಾಲೆಗಳಿರುವ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಉದಾಹರಣೆಗೆ ಖಾಸಗಿಯಾಗಿ ಮಕ್ಕಳನ್ನು ಮನೆ ಪಾಠಕ್ಕೆ ಕಳುಹಿಸಿಸಲಾಗದ ಮತ್ತು ಮನೆಯಲ್ಲಿಯೇ ಮಕ್ಕಳ ಕಲಿಕೆಗೆ ಪೂರಕವಾದ ಪರಿಸರವನ್ನು ಒದಗಿಸಲಾಗದ ಪರಿಸ್ಥಿತಿ ಇರುವ ಕುಟುಂಬಗಳಲ್ಲಿ ಶಾಲೆ ಶಿಕ್ಷಣ ಸಾಕ್ಷರತೆಯನ್ನು ಕುರಿತು ಅನಾಸಕ್ತಿ ಅಥವಾ ತಾತ್ಸಾರ ಹೆಚ್ಚಾಗಿದೆ. ಅದೇ ರೀತಿ ಮನೆಯಲ್ಲಿ ಕಲಿತ ಮೊದಲ ತಲೆಮಾರಿನವರು ಮತ್ತು ಅವರ ಪೋಷಕರ ನಿರುತ್ಸಾಹದ ಮಾತುಗಳು ಜನರನ್ನು ಇನ್ನಷ್ಟು ಘಾಸಿಗೊಳಿಸುತ್ತಿದೆ.

ಶಾಲೆಯ ತರಗತಿಗಳಲ್ಲಿ ಯಾವ ರೀತಿಯ ಪ್ರಕ್ರಿಯೆ ನಡೆಯುತ್ತಿದೆ ಎಂಬುದನ್ನು ಅನಕ್ಷರಸ್ಥ ಪೋಷಕರು ಆಗಿದ್ದಾಂಗೆ ಅವರು ಶಿಕ್ಷಕರಿಂದ ವಿವರ ಪಡೆಯುವುದು ಅಥವಾ ಅದನ್ನು ಪುನರ್ ಪರಿಶೀಲನೆ ಮಾಡಿ ನಿರ್ಧಾರಗಳನ್ನು ವ್ಯಕ್ತಪಡಿಸುವುದು ಬಹಳ ಕಷ್ಟ. ಅಲ್ಲದೇ ತಮ್ಮ ಮಕ್ಕಳ ಕಲಿಕೆಗೆ ಸಹಕರಿಸುವುದು ಕೂಡ ಅವರಿಗೆ ಕಷ್ಟ. ಹೀಗಾಗಿ ಅವರು ತಮ್ಮನ್ನು ತಾವೇ ಆಗಿದ್ದಾಂಗೆ ದೂಷಿಸಿಕೊಳ್ಳುವುದು ಅಥವಾ ಅವರ ಮಕ್ಕಳನ್ನು ದೂಷಿಸುವುದರ ಮೂಲಕ ಶಾಲಾ ವ್ಯವಸ್ಥೆಯಲ್ಲಿ ಇರುವ ನ್ಯೂನತೆಗಳನ್ನು ಗುರುತಿಸುತ್ತಾರೆ.