.. ಅಧ್ಯಯನದ ಉದ್ದೇಶ

೧. ಶಿಕ್ಷಣ ಸಾಕ್ಷರತೆಯಲ್ಲಿ ಇರುವ ಪ್ರಾದೇಶಿಕ ಅಸಮಾನತೆಯ ಸ್ವರೂಪವನ್ನು ಗುರುತಿಸುವುದು.

೨. ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರ ಮನೋಭಾವನೆಯನ್ನು ಹಿಡಿದಿಡುವುದು.

೩. ಪ್ರಾಥಮಿಕ ಶಿಕ್ಷಣಕ್ಕೆ ತಗುಲಬಹುದಾದ ಖಾಸಗಿ ವೆಚ್ಚವನ್ನು ಗುರುತಿಸುವುದು.

೪. ಶಾಲೆಗಳಲ್ಲಿನ ಭೌತಿಕ ಬೌದ್ಧಿಕ ಬೋಧನಾ ಸೌಲಭ್ಯ ಸಲಕರಣೆಗಳನ್ನು ಪರೀಕ್ಷಿಸುವುದು.

೫. ಮಧ್ಯಾಹ್ನದ ಶಾಲಾ ಬಿಸಿಯೂಟ ಕಾರ್ಯಕ್ರಮದ ಮೌಲ್ಯಮಾಪನ.

೬. ಶಾಲಾ ಬಿಸಿಯೂಟ ಕಾರ್ಯಕ್ರಮದಿಂದ ಉಂಟಾಗಿರುವ ಶಾಲಾ ದಾಖಲಾತಿ ಹಾಜರಾತಿಯ ಸ್ವರೂಪವನ್ನು ವಿಶ್ಲೇಷಿಸುವುದು.

೭. ಸ್ಥಳೀಯ ಮಟ್ಟದಲ್ಲಿ ಶಿಕ್ಷಣದ ಆಡಳಿತ ವಿಸ್ತರಣೆಗೆ ಇರುವ ಸವಾಲುಗಳನ್ನು ಗುರುತಿಸುವುದು.

.. ಅಧ್ಯಯನ ವಿಧಾನ

ಪ್ರಸ್ತುತ ಅಧ್ಯಯನವು ಮೂಲತಃ ದೃಷ್ಟಾಂತವಾದಿ (ಎಂಪಿರಿಕಲ್) ಅಧ್ಯಯನವಾಗಿದೆ. ಇದು ದೃಷ್ಟಾಂತವಾದಿ ಅಧ್ಯಯನವಾಗಿದ್ದರೂ ವಿಶ್ಲೇಷಣೆಗೆ ಒಳಪಡಿಸುವ ಸಂದರ್ಭಗಳಲ್ಲಿ ಸೈದ್ಧಾಂತಿಕ ಸಂಗತಿಗಳನ್ನು ಪರಿಗಣಿಸಲಾಗಿದೆ. ಪ್ರಾಥಮಿಕ ಮತ್ತು ಅನುಷಂಗಿಕ ಮೂಲಗಳಿಂದ ಸಂಗ್ರಹಿಸಿದ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಮಾಹಿತಿಯನ್ನು ವಿಶ್ಲೇಷಣೆ ಮಾಡಲು ಮೌಲ್ಯಮಾಪನ ಮಾದರಿಯನ್ನು ಅಧ್ಯಯನ ಅಳವಡಿಸಿಕೊಂಡಿದೆ. ಪ್ರಸ್ತುತ ಅಧ್ಯಯನವು ಮಾದರಿ ಆಯ್ಕೆಗೆ ಬಹುಹಂತದ ಶ್ರೇಣೀಕೃತ ಮಾದೃಚ್ಫಿಕ (ಸ್ಟ್ರಾಟಿಫಾಯ್‌ಡ್ ರಾಂಡಮ್) ನಮೂನೆ ಉಪಯೋಗಿಸಿಕೊಂಡಿದೆ. ಇದನ್ನು ನಾಲ್ಕು ಹಂತಗಳಲ್ಲಿ ವಿನ್ಯಾಸ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಶಿಕ್ಷಣದ ಪ್ರಾದೇಶಿಕ ಸ್ವರೂಪವನ್ನು ಹಿಡಿದಿಡುವ ದೃಷ್ಟಿಯಿಂದ ಮೊದಲ ಹಂತದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಎರಡು ಮತ್ತು ಬಾಂಬೆ ಕರ್ನಾಟಕ ಪ್ರದೇಶದ ಒಂದು ಜಿಲ್ಲೆಯನ್ನು ಒಟ್ಟು ಮೂರು ಜಿಲ್ಲೆಗಳನ್ನು ಯಾದೃಚ್ಫಿಕ ನಮೂನೆಯಲ್ಲಿ ಆಯ್ಕೆ ಮಾಡಲಾಗಿದೆ.

ಎರಡನೆಯ ಹಂತದಲ್ಲಿ ಯಾದೃಚ್ಫಿಕ ನಮೂನೆಯಲ್ಲಿ ಆಯ್ಕೆ ಮಾಡಿಕೊಂಡ ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ತಾಲ್ಲೂಕುಗಳನ್ನು ಆಯ್ಕೆ ಮಾಡಲಾಯಿತು. ಮೂರನೆಯ ಹಂತದಲ್ಲಿ, ಎರಡನೆಯ ಹಂತದಲ್ಲಿ ಆಯ್ಕೆ ಮಾಡಿಕೊಂಡ ತಾಲ್ಲೂಕುಗಳಲ್ಲಿ ದೊರೆತ ಅನುಷಂಗಿಕ ಮಾಹಿತಿಯನ್ನು ಬಳಸಿ ಪ್ರತಿ ತಾಲ್ಲೂಕಿನಿಂದ ಒಂದು ಗ್ರಾಮ ಪಂಚಾಯತಿಯನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ನಾಲ್ಕನೆಯ ಹಂತದಲ್ಲಿ ಆಯ್ಕೆ ಮಾಡಿಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಒಟ್ಟು ಕುಟುಂಬಗಳ ಸಂಖ್ಯೆಯನ್ನು ಆಯಾ ಗ್ರಾಮಪಂಚಾಯತಿ ಮತ್ತು ಜನಗಣತಿಗಳಿಂದ (ಒಟ್ಟು ಕುಟುಂಬಗಳ ಸಂಖ್ಯೆ ೪೨೧೫) ಪಡೆದುಕೊಂಡ ಅದರಲ್ಲಿ ಶೇಕಡ ೧೦ರಷ್ಟು ಕುಟುಂಬಗಳನ್ನು (೪೨೪) ಶ್ರೇಣೀಕೃತ ಯಾದೃಚ್ಫಿಕ ನಮೂನೆಯಲ್ಲಿ ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದೆ. ಹೀಗೆ ಒಟ್ಟು ನಾಲ್ಕು ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ೧೮ ಗ್ರಾಮಗಳು, ೨೦ ಶಾಲೆಗಳು ಮತ್ತು ಒಟ್ಟು ೪೨೪ ಕುಟುಂಬಗಳನ್ನು (ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ೯೮ ಕುಟುಂಬಗಳು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ೫೫ ಕುಟುಂಬಗಳು) ಕೊನೆಯ ಹಂತ ಮಾದರಿ ಸಮೀಕ್ಷೆಗೆ ಒಳಪಡಿಸಲಾಗಿದೆ. ಪ್ರಾಥಮಿಕ ಮಾಹಿತಿಯನ್ನು, ಕುಟುಂಬಗಳು, ಶಿಕ್ಷಕರು, ವಿವಿಧ ಸಮಿತಿಗಳ ಸದಸ್ಯರುಗಳ ನೇರ ಸಂದರ್ಶನ, ಚರ್ಚೆ ಮತ್ತು ಕ್ಷೇತ್ರಕಾರ್ಯದ ಟಿಪ್ಪಣಿಗಳಿಂದ ಸಂಗ್ರಹಿಸಲಾಗಿದೆ. ಅನುಷಂಗಿಕ ಮಾಹಿತಿಯನ್ನು ಶಾಲೆಗಳ ದಾಖಲೆಗಳು, ಶಿಕ್ಷಣ ಇಲಾಕೆಯ ಪ್ರಕಟಣೆಗಳು, ಶಿಕ್ಷಣ ಆಯೋಗಗಳು, ವರದಿಗಳು ಮತ್ತು ಇದುವರೆಗೂ ನಡೆದಿರುವ ಅಧ್ಯಯನಗಳ ಸಾಹಿತ್ಯಗಳಿಂದ ಪಡೆದುಕೊಳ್ಳಲಾಗಿದೆ.

ಅಧ್ಯಯನವು ನಿಗದಿಪಡಿಸಿದ ಉದ್ದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಗ್ರಾಮಗಳ ಕುಟುಂಬಗಳಿಂದ ಮತ್ತು ಶಾಲೆಗಳಿಂದ ಪಡೆದುಕೊಳ್ಳಲಾಗಿದೆ. ಸ್ಥಳೀಯ ಜನರು ನಿರ್ದಿಷ್ಟವಾಗಿ ಶಾಲೆಯಲ್ಲಿ ಇರುವ ಮಕ್ಕಳ ಪೋಷಕರು, ಶಿಕ್ಷಣ ವ್ಯವಸ್ಥೆ ಮತ್ತು ಅದರ ಕ್ರಿಯಾಯೋಜನೆ ಬಗ್ಗೆ ಹೊಂದಿರುವ ಮನೋಭಾವನೆಯನ್ನು ನೇರವಾಗಿ ಸಂದರ್ಶಿಸುವ ಮೂಲಕ ಪಡೆದುಕೊಳ್ಳಲಾಗಿದೆ. ಜೊತೆಗೆ ಸ್ಥಳೀಯ ಚುನಾಯಿತ ಸಂಸ್ಥೆಗಳ ಜನಪ್ರತಿನಿಧಿಗಳು, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಾವಳಿಯ ಮೂಲಕ ಸಂದರ್ಶಿಸಿ ಮತ್ತು ಅನೌಪಚಾರಿಕವಾಗಿ ಚರ್ಚಿಸಿ ಶಾಲೆಯ ಒಟ್ಟಾರೆ ಕಾರ್ಯ ಕ್ಷಮತೆಯ ಬಗ್ಗೆ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಬಿಸಿಯೂಟ ವಿತರಣೆಯಾಗುವ ಸಂದರ್ಭದಲ್ಲಿ ಶಾಲೆಗಳಿಗೆ ಭೇಟಿನೀಡಿ ಇಲ್ಲಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ದಾಖಲಿಸಲಾಗಿದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ತುಲನಾತ್ಮಕವಾಗಿ ವಿಮರ್ಶಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮ ಮತ್ತು ಅದಕ್ಕೆ ಪೂರಕವಾದ ಮಾಹಿತಿಯನ್ನು ಶಾಲೆಗಳಿಂದ ಮತ್ತು ಶಿಕ್ಷಣ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ. ಹೀಗೆ ಪಡೆದುಕೊಂಡ ಮಾಹಿತಿಯು ಮಾದರಿಗೆ ಆಯ್ಕೆ ಮಾಡಿಕೊಂಡ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳು, ಕಾರ್ಯಚಟುವಟಿಕೆಗಳು, ಸರ್ಕಾರ ಮತ್ತು ಡಿ.ಎಸ್.ಇ.ಆರ್.ಟಿ ಯು ರೂಪಿಸಿರುವ ಮಾನದಂಡದ ಮಾದರಿಯಲ್ಲಿ ಆಚರಣೆಗೆ ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸಲಾಗಿದೆ. ಇದಕ್ಕೆ ಸರ್ಕಾರವೇ ನಿಗದಿಪಡಿಸಿದ ಮಾನದಂಡವನ್ನು ಆಧಾರವಾಗಿ ಇಟ್ಟುಕೊಂಡು, ನಿಗದಿಪಡಿಸಿದ ಮಟ್ಟಕ್ಕೆ ಸಮ ಅಥವಾ ಅದಕ್ಕಿಂತ ಉತ್ತಮ ಅಥವಾ ಕಡಿಮೆ ಎಂದು ವಿಶ್ಲೇಷಿಸಿ ಕೆಲವು ನಿರ್ಧಾರಗಳಿಗೆ ಬರಲಾಗಿದೆ. ಉದಾಹರಣೆಗೆ ಅಧ್ಯಯನಕ್ಕೆ ಒಳಪಡಿಸಿರುವ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮಕ್ಕೆ ಇರುವ ಸೌಲಭ್ಯ, ತೊಂದರೆಗಳು, ಅಗತ್ಯವಾಗಿ ಬೇಕಾಗುವ ಸೌಲಭ್ಯ ಇತ್ಯಾದಿ ಮಾಹಿತಿಯನ್ನು ಶಾಲೆಗೆ ಭೇಟಿ ನೀಡಿ ಪಡೆದುಕೊಳ್ಳಲಾಗಿದೆ. ಬಿಸಿಯೂಟ ಕಾರ್ಯಕ್ರಮಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸರಕಾರವು ತನ್ನ ಅಧಿಸೂಚನೆಯಲ್ಲಿ ಈಗಾಗಲೇ ನಿಗದಿಪಡಿಸಿದೆ (ಕರ್ನಾಟಕ ಸರ್ಕಾರ, ೨೦೦೨). ಹಾಗೆಯೇ ಶಾಲೆಯಲ್ಲಿ ಇರುವ ಭೌತಿಕ ಬೌದ್ಧಿಕ ಬೋಧನಾ ಸೌಲಭ್ಯ ಸಲಕರಣಗಳನ್ನು ಪರಿಶೀಲಿಸಿ ತಾಳೆ ನೋಡಲಾಗಿದೆ. ಹೀಗೆ ನಿಗದಿಪಡಿಸಿದ ಸೌಲಭ್ಯಗಳನ್ನು, ಅಸ್ತಿತ್ವದಲ್ಲಿ ಇರುವ ಸೌಲಭ್ಯಗಳ ಜೊತೆ ತಾಳೆ ನೋಡಿ ಇರುವ ವ್ಯತ್ಯಾಸ ಮತ್ತು ಅಂತರವನ್ನು ಕಂಡುಕೊಳ್ಳಲಾಗಿದೆ. ಇದರ ಜೊತೆಗೆ ಮಧ್ಯಾಹ್ನದ ಶಾಲಾ ಬಿಸಿಯೂಟ ಕಾರ್ಯಕ್ರಮದ ಬಗ್ಗೆ ಸ್ಥಳೀಯ ಜನರ ಅಭಿಪ್ರಾಯ ವಿಶ್ಲೇಷಣೆ ಅತ್ಯಂತ ಅವಶ್ಯಕ. ಹೀಗಾಗಿ ಸ್ಥಳೀಯ ವಾಸ್ತವಿಕ ಅಂಶಗಳ ಒಟ್ಟಿಗೆ ವಿವಿಧ ಜಾತಿ ವರ್ಗಗಳ ಜನರು ಬಿಸಿಯೂಟ ಕಾರ್ಯಕ್ರಮದ ಬಗ್ಗೆ ಹೊಂದಿರುವ ತಿಳುವಳಿಕೆ ನಂಬಿಕೆ ಅಭಿಪ್ರಾಯ, ಜನರು ಬಿಸಿಯೂಟ ಕಾರ್ಯಕ್ರಮವನ್ನು ಹೇಗೆ ಪರಿಭಾವಿಸಿಕೊಂಡಿದ್ದಾರೆ, ಇನ್ನು ಮುಂತಾದ ಮಾಹಿತಿಯನ್ನು ವಿವರಣಾತ್ಮಕವಾಗಿ ವಿಶ್ಲೇಷಿಲಾಗಿದೆ.

ಮೇಲಿನ ವಿಧಾನದಲ್ಲಿ ಮಾಹಿತಿ ಸಂಗ್ರಹಿಸಿದರೂ ಕ್ಷೇತ್ರಕಾರ್ಯಕ್ಕೆ ಆಯ್ಕೆ ಮಾಡಿಕೊಂಡ ಗ್ರಾಮಗಳ ಆರ್ಥಿಕ ಚಟುವಟಿಕೆಗಳು, ಭೌಗೋಳಿಕ ಪರಿಸರ, ಸಾಮಾಜಿಕ ಪರಿಸ್ಥಿತಿ, ಸಾಕ್ಷರತೆಯ ಮಟ್ಟ ಇನ್ನೂ ಮುಂತಾದ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಲಾಗಿದೆ. ಸ್ಥಳೀಯ ಸಮುದಾಯಗಳು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಭಾಗವಹಿಸದೇ ಇರುವುದು ಮತ್ತು ಭಾಗವಹಿಸುತ್ತಿರುವುದು ಯಾವ ಹಿನ್ನೆಲೆಯಿಂದ ಎಂಬುದನ್ನು ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ವಿಶ್ಲೇಷಣೆ ಮಾಡಿ ಕೆಲವು ನಿರ್ಧಾರಗಳಿಗೆ ಬರಲಾಗಿದೆ. ಇದೇ ಮಾಹಿತಿಗಳನ್ನು ಆಧಾರವಾಗಿ ಇಟ್ಟುಕೊಂಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಬೆಂಬಲಿಸುವವರ ಮತ್ತು ವಿರೋಧಿಸುವವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ವರೂಪವನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಇದರ ಜೊತೆಗೆ ಕ್ಷೇತ್ರಕಾರ್ಯದಲ್ಲಿ ದೊರಕುವ ಸ್ಥಳೀಯ ವಾಸ್ತವಿಕ ಅಂಶಗಳನ್ನು ವಿವಿಧ ಜಾತಿ ವರ್ಗಗಳ ಜನರು ಶಿಕ್ಷಣದ ಬಗ್ಗೆ ಹೊಂದಿರುವ ಮನೋಭಾವನೆ, ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳಿಂದ ಉಂಟಾಗಿರುವ ಅನುಕೂಲ ಹಾಗೂ ಅನಾನುಕೂಲಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಲಾಗಿದೆ.

ಹೀಗೆ ಸಂಗ್ರಹಿಸಿದ ಮಾಹಿತಿಗಳನ್ನು ವಿವರಣಾತ್ಮಕ ವಿಧಾನದಲ್ಲಿ ವಿಶ್ಲೇಷಿಸಿದರೂ ಗುಣಾತ್ಮಕ ವಿಶ್ಲೇಷಣೆಗೂ ಆದ್ಯತೆ ನೀಡಲಾಗಿದೆ. ಶಾಲೆಯ ಒಟ್ಟಾರೆ ಕಾರ್ಯಕ್ಷಮತೆ ಶೈಕ್ಷಣಿಕ ಅಭಿವೃದ್ಧಿಗೆ ಎಷ್ಟರಮಟ್ಟಿಗೆ ಪೂರಕವಾಗಿದೆ ಎಂಬುದನ್ನು ವಿಶ್ಲೇಷಿಸಿ ಕೆಲವು ನಿರ್ಧಾರಗಳಿಗೆ ಬರಲಾಗಿದೆ. ಮಾಹಿತಿಯನ್ನು ವಿಶ್ಲೇಷಿಸುವಾಗ ಸಾಧ್ಯವಾದ ಮತ್ತು ಸೂಕ್ತವಾದ ಸಂದರ್ಭಗಳಲ್ಲೆಲ್ಲಾ ಮಾಹಿತಿಯನ್ನು ಕೋಷ್ಟಕಗಳ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ. ಕೋಷ್ಟಕಗಳನ್ನು ಉಪಯೋಗಿಸದೆ ಇರುವ ಭಾಗಗಳಲ್ಲಿ ಶೇಕಡವಾರು ಪ್ರಮಾಣದಲ್ಲಿ ಮಾಹಿತಿಯನ್ನು ವಿಶ್ಲೇಷಿಸಲಾಗಿದೆ.

.. ಅಧ್ಯಯನ ಕ್ಷೇತ್ರ

ಪ್ರಾದೇಶಿಕ ಅಸಮಾನತೆ ಅಧ್ಯಯನ ಸಮಿತಿಯು ರಾಜ್ಯದ ತಾಲ್ಲೂಕುಗಳನ್ನು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ, ಹಿಂದುಳಿದ, ಸ್ವಲ್ಪ ಹಿಂದುಳಿದ ಅತ್ಯಂತ ಹಿಂದುಳಿದ ತಾಲ್ಲೂಕುಗಳು ಎಂದು ಗುರುತಿಸಲು ಆರ್ಥಿಕ, ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು ೩೪ ಸೂಚ್ಯಾಂಕಗಳನ್ನು ಬಳಸಿಕೊಂಡಿದೆ. ಅದರಲ್ಲಿ ಶಿಕ್ಷಣವು ಒಂದು, ಶೈಕ್ಷಣಿಕವಾಗಿ ಮುಂದುವರಿದ ಅಥವಾ ಹಿಂದುಳಿದ ಪ್ರದೇಶವನ್ನು ಗುರುತಿಸಲು ಆ ಪ್ರದೇಶದ, ಒಟ್ಟು ಸಾಕ್ಷರತೆ (ಮಹಿಳೆ ಮತ್ತು ಪುರುಷರು ಬೇರೆ ಬೇರೆ), ಮಕ್ಕಳು ಶಿಕ್ಷಕರ ಪರಿಮಾಣ, ಮಧ್ಯದಲ್ಲಿ ಶಾಲೆ ಬಿಟ್ಟ ೭-೧೪ ವಯೋಮಾನದ ಮಕ್ಕಳ ಸಂಖ್ಯೆ, ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಖ್ಯೆ, ಶಾಲಾ ದಾಖಲಾತಿಯ ಪ್ರಮಾಣ ಇತ್ಯಾದಿ ಸೂಚ್ಯಂಕಗಳನ್ನು ಬಳಸಿಕೊಂಡಿದೆ. ಇದನ್ನು ಶಿಕ್ಷಣದ ಮೂಲ ಸೌಲಭ್ಯ ಸೂಚ್ಯಂಕ (Education Infrastucture Index) ಎಂದು ಕರೆಯಲಾಗಿದೆ (ಎಚ್.ಪಿ.ಸಿ ಎಫ್. ಆರ್. ಆರ್. ಐ., ೨೦೦೨) ಇದನ್ನು ಬಳಸಿಕೊಂಡು ಕರ್ನಾಟಕದ ಉತ್ತರ ಭಾಗ ಹಾಗೂ ದಕ್ಷಿಣ ಭಾಗಗಳನ್ನು ಒಳಗೊಂಡಿರುವ ನಾಲ್ಕು ಕಂದಾಯ ವಿಭಾಗದಲ್ಲಿ ಬರುವ ೧೭೫ ತಾಲ್ಲೂಕುಗಳನ್ನು ಸಾಪೇಕ್ಷವಾಗಿ ಮುಂದುವರಿದ, ಹಿಂದುಳಿದ, ಸ್ವಲ್ಪ ಹಿಂದುಳಿದ, ಅತ್ಯಂತ ಹಿಂದುಳಿದ ವಿಭಾಗಗಳೆಂದು ಗುರುತಿಸಿದೆ.

ಶೈಕ್ಷಣಿಕ ಮೂಲ ಸೌಲಭ್ಯ ಸೂಚ್ಯಂಕದ ಪ್ರಕಾರ ೯೦ ತಾಲ್ಲೂಕುಗಳು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಮತ್ತು ೫೩ ತಾಲ್ಲೂಕುಗಳು ಉತ್ತರ ಕರ್ನಾಟಕ ಪ್ರದೇಶದಲ್ಲಿ ಸಾಪೇಕ್ಷವಾಗಿ ಮುಂದುವರಿದಿವೆ. ಇವುಗಳ ಸಂಖ್ಯೆ ಒಟ್ಟು ೧೫೩. ದಕ್ಷಿಣ ಕರ್ನಾಟಕ ಪ್ರದೇಶಗಳಲ್ಲಿ, ಮೂರು ತಾಲ್ಲೂಕು, ಉತ್ತರ ಕರ್ನಾಟಕ ಪ್ರದೇಶದಲ್ಲಿ ೮ ತಾಲ್ಲೂಕು ಹಿಂದುಳಿದ ತಾಲ್ಲೂಕುಗಳಾಗಿವೆ. ಇವುಗಳ ಒಟ್ಟು ಸಂಕ್ಯೆ ೧೧. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಸ್ವಲ್ಪ ಹಿಂದುಳಿದಿರುವ ತಾಲ್ಲೂಕುಗಳ ಸಂಖ್ಯೆ ೨ ಇದ್ದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಇವುಗಳ ಸಂಖ್ಯೆ ೯ ಒಟ್ಟು ಸ್ವಲ್ಪ ಹಿಂದುಳಿದಿರುವ ತಾಲ್ಲೂಕುಗಳ ಸಂಖ್ಯೆ ಒಟ್ಟು ೧೧. ವಿಶೇಷವೆಂದರೆ ಅತ್ಯಂತ ಹಿಂದುಳಿದ ತಾಲ್ಲೂಕುಗಳು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಇಲ್ಲವಾದರೆ, ಉತ್ತರ ಕರ್ನಾಟಕ ಪ್ರದೇಶದಲ್ಲಿ ಇವುಗಳ ಸಂಖ್ಯೆ ೧೦.

ಇಲ್ಲಿ ಸ್ವಷ್ಟವಾಗುವ ಅಂಶವೆಂದರೆ ದಕ್ಷಿಣ ಕರ್ನಾಟಕ ಪ್ರದೇಶವು ಉತ್ತರ ಕರ್ನಾಟಕ ಪ್ರದೇಶಕ್ಕಿಂತ ಸಾಪೇಕ್ಷವಾಗಿ ಅಭಿವೃದ್ಧಿ ಸಾಧಿಸಿದ ತಾಲ್ಲೂಕುಗಳನ್ನು ಹೆಚ್ಚಾಗಿ ಹೊಂದಿದೆ ಎಂಬುದು. ಉತ್ತರ ಕರ್ನಾಟಕ ಪ್ರದೇಶದಲ್ಲಿ ಇರುವ ೨ ವಿಭಾಗಗಳನ್ನು ತುಲನಾತ್ಮಕವಾಗಿ ನೋಡಿದಾಗ ಬೆಳಗಾವಿ ವಿಭಾಗಕ್ಕಿಂತ ಗುಲ್ಬರ್ಗಾ ವಿಭಾಗದಲ್ಲಿ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ತಾಲ್ಲೂಕುಗಳು ಹೆಚ್ಚಾಗಿರುವುದು ಕಂಡುಬರುತ್ತದೆ. ಅಲ್ಲದೆ ಸಾಪೇಕ್ಷ ಅಭಿವೃದ್ಧಿ ಸಾಧಿಸಿರುವ ತಾಲ್ಲೂಕುಗಳ ಸಂಖ್ಯೆ ಬೆಳಗಾವಿ ವಿಭಾಗದಲ್ಲಿ ೪೦ ಇದ್ದರೆ, ಗುಲಬರ್ಗಾ ವಿಭಾಗದಲ್ಲಿ ಅವುಗಳ ಸಂಖ್ಯೆ ಕೇವಲ ೧೩. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಬರುವ ೨ ಕಂದಾಯ ವಿಭಾಗಗಳಲ್ಲಿ ಗುಲಬರ್ಗಾ ವಿಭಾಗವು ಬೆಳಗಾವಿ ವಿಭಾಗಕ್ಕಿಂತ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ಹೆಚ್ಚಾಗಿ ಹೊಂದಿರುವುದು.

ಶಿಕ್ಷಣ ಮೂಲ ಸೌಲಭ್ಯ ಸೂಚ್ಯಂಕದ ದೃಷ್ಟಿಯಿಂದ ನೋಡಿದಾಗ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕನ್ನು ಹೊರತುಪಡಿಸಿ ಉಳಿದ ೫ ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿ ತಾಲ್ಲೂಕುಗಳಾಗಿವೆ. ಆದರೆ ಬೀಳಗಿ ತಾಲ್ಲೂಕಿನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಸಂಪೂರ್ಣ ನೀರಾವರಿ ಆಧಾರಿತ ಕೃಷಿ ಚಟುವಟಿಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆ ತಾಲ್ಲೂಕಿಗೆ ಬದಲಾಗಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ್ದು, ಆಗಿಂದ್ದಾಗೆ ಬರಪೀಡಿತಕ್ಕೆ ಒಳಪಡುವ ಹುನಗುಂದ ತಾಲ್ಲೂಕಿಗೆ ಮೊದಲ ಆದ್ಯತೆ ನೀಡಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಕೊಪ್ಪಳ ಜಿಲ್ಲೆಯ ಯಲಬುರ್ಗಾವು ಶಿಕ್ಷಣ ಮೂಲಸೌಲಭ್ಯ ಸೂಚ್ಯಂಕದ ಪ್ರಕಾರ ಅತ್ಯಮತ ಹಿಂದುಳಿದಿರುವ ತಾಲ್ಲೂಕು. ಸ್ವಲ್ಪ ಹಿಂದುಳಿದ ತಾಲ್ಲೂಕುಗಳು ಎಂದರೆ ಗಂಗಾವತಿ ಮತ್ತು ಕುಷ್ಟಗಿ. ಗಂಗಾವತಿ ತಾಲ್ಲೂಕು ಸಂಪೂರ್ಣವಾಗಿ ನೀರಾವರಿ ಪ್ರದೇಶವಾದ್ದರಿಂದ ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕಿಗೆ ಕ್ರಮವಾಗಿ ಮೊದಲನೆಯ ಮತ್ತು ಎರಡನೆಯ ಆದ್ಯತೆ ನೀಡಿ ಆಯ್ಕೆ ಮಾಡಲಾಯಿತು. ಬಳ್ಳಾರಿ ಜಿಲ್ಲೆಯಲ್ಲಿ ಇರುವ ಒಟ್ಟು ಏಳು ತಾಲ್ಲೂಕುಗಳಲ್ಲಿ ಶಿಕ್ಷಣ ಮೂಲಸೌಲಭ್ಯ ಸೂಚ್ಯಂಕದ ಪ್ರಕಾರ ಐದು ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದವು. ಉಳಿದ ಎರಡು ತಾಲ್ಲೂಕುಗಳಲ್ಲಿ ಸಿರಗುಪ್ಪ ಅತ್ಯಮತ ಹಿಂದುಳಿದಿದ್ದರೆ, ಸಂಡೂರು ಸ್ವಲ್ಪ ಹಿಂದುಳಿದ ತಾಲ್ಲೂಕಾಗಿದೆ. ಸಿರಗುಪ್ಪ ತಾಲ್ಲೂಕು ಕೂಡ ನೀರಾವರಿ ಪ್ರದೇಶವಾದ್ದರಿಂದ ಸಂಡೂರು ತಾಲ್ಲೂಕನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಹೀಗೆ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಹುನಗುಂದ ತಾಲ್ಲೂಕಿನಿಂದ ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯನ್ನು, ಯಲಬುರ್ಗ ತಾಲ್ಲೂಕಿನಿಂದ ಯರೇಹಂಚಿನಾಳ ಗ್ರಾಮಪಂಚಾಯತಿಯನ್ನು, ಕುಷ್ಟಗಿ ತಾಲ್ಲೂಕಿನಿಂದ ಕಬ್ಬರಗಿ ಗ್ರಾಮಪಂಚಾಯತಿಯನ್ನು ಮತ್ತು ಸಂಡೂರು ತಾಲ್ಲೂಕಿನಿಂದ ಕೃಷ್ಣನಗರ ಗ್ರಾಮಪಂಚಾಯತಿಗಳನ್ನು ಅಧ್ಯಯನ ಮಾಡಲಾಯಿತು. ಒಟ್ಟು ನಾಲ್ಕು ಗ್ರಾಮಪಂಚಾಯತಿಗಳನ್ನು ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ೧೮ ಗ್ರಾಮಗಳು ಮತ್ತು ಆ ಗ್ರಾಮಗಳಲ್ಲಿ ಇರುವ ೨೦ ಶಾಲೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಹೀಗೆ ಆಯ್ಕೆ ಮಾಡಿಕೊಳ್ಳುವಾಗ ಎಚ್.ಪಿ.ಸಿ.ಸಿ. ಎಫ್.ಆರ್.ಆರ್.ಐ ೨೦೦೨ ಈ ಸಮಿತಿ ಬಳಸಿರುವ ಶಿಕ್ಷಣ ಮೂಲಸೌಲಭ್ಯ ಸೂಚ್ಯಂಕವನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ, ಸ್ವಲ್ಪ ಹಿಂದುಳಿದ ತಾಲ್ಲೂಕುಗಳನ್ನು ಮೊದಲಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ನಂತರ ಇದೇ ಸೂಚ್ಯಾಂಕ ಬಳಸಿ ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮಪಂಚಾಯತಿಯನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಇದರ ಜೊತೆಗೆ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಯ ವಿವಿಧ ಇಲಾಖೆಗಳಲ್ಲಿ ಸಿಗಬಹುದಾದ ಅನುಷಂಗಿಕ ಮಾದರಿಗಳನ್ನು ಆಧರಿಸಿ ಅತ್ಯಂತ ಹಿಂದುಳಿದ ಗ್ರಾಮಪಂಚಾಯತಿಗೆ ಆದ್ಯತೆ ನೀಡಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅತ್ಯಂತ ಕಡಿಮೆ ನೀರಾವರಿ ಕೃಷಿ ಭೂಮಿ ಹೊಂದಿರುವ, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಇತರ ಹಿಂದುಳಿದ ಜಾತಿ ಮತ್ತು ವರ್ಗಗಳು ಹೆಚ್ಚಾಗಿರುವ, ಬಿ.ಪಿ.ಎಲ್ ಕುಟುಂಬಗಳ ಸಂಖ್ಯೆ ಹೆಚ್ಚಾಗಿರುವ, ಭೂರಹಿತ ಕೃಷಿ ಕೂಲಿಗಳು ಹೆಚ್ಚಾಗಿರುವ, ಗ್ರಾಮಗಳ ಸಂಖ್ಯೆ ಮತ್ತು ಜನಸಂಖ್ಯೆ ಆದಷ್ಟು ಕಡಿಮೆ ಇರುವ, ಇನ್ನು ಮುಂತಾದ ಅಂಶಗಳಿಗೆ ಮೊದಲ ಆದ್ಯತೆ ನೀಡಿ ಗ್ರಾಮಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

.. ಅಧ್ಯಯನ ಕ್ಷೇತ್ರದ ಪರಿಚಯ

ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿದೆ. ಈ ಪಂಚಾಯತಿಯು ನಾರಾಯಣಪುರ ಅಣೆಕಟ್ಟೆಯ ಹಿನ್ನೆಲೆಗೆ (ಬ್ಯಾಕ್‌ವಾಟರ್) ಸುಮಾರು ೧೨ ಕಿ.ಮೀ. ದೂರದಲ್ಲಿದೆ. ಹುನಗುಂದದಿಂದ ಲಿಂಗಸೂರಿಗೆ ಹೋಗುವ ಮಾರ್ಗದಲ್ಲಿ ಇಳಕಲ್ಲು ಹಳ್ಳದ ನಂತರ ಎಡಕ್ಕೆ ತಿರುಗಿ ಸುಮಾರು ೪ ೧/೨ ಕಿ.ಮೀ ಹೋದರೆ ಬೂದಿಹಾಳ ಎಸ್.ಕೆ. ಗ್ರಾಮ ಸಿಗುತ್ತದೆ. ಇಲ್ಲಿಗೆ ಇಳಕಲ್ಲಿನಿಂದ ದಿನಕ್ಕೆ ನಾಲ್ಕು ಬಾರಿ ಎನ್. ಇ.ಕೆ.ಆರ್.ಟಿ.ಸಿಯ ಬಸ್ಸುಗಳು ಹೋಗಿ ಬರುತ್ತವೆ. ಬೂದಿಹಾಳ ಎಸ್.ಕೆ. ಸೇರಿದಂತೆ ಈ ಗ್ರಾಮಪಂಚಾಯತಿಗೆ ಒಟ್ಟು ೯ ಗ್ರಾಮಗಳು ಸೇರುತ್ತವೆ. ಅವೆಂದರೆ ಬೂದಿಹಾಳ್ ಎಸ್.ಕೆ., ಬೆನಕನದೋಣಿ, ನಿಡಸನೂರ, ಮನ್ಮಥನಾಳ, ಪಾಲಥಿ, ಕೂಣ್ಣೂರು, ತಾರಿವಾಳ, ಹೇಮವಾಡಗಿ ಮತ್ತು ತೂರಮರಿ. ಈ ಎಲ್ಲಾ ಗ್ರಾಮಗಳು ಇಳಕಲ್ ಹಳ್ಳದ ಆಚೆಬದಿ ಮತ್ತು ಈಚೆಬದಿಗೆ ಇವೆ. ಬೆನಕನದೋಣಿ ಗ್ರಾಮದಿಂದ ಸುಮಾರು ೫ ಕಿ.ಮೀ ಹೋದರೆ ರಾಯಚೂರು ಜಿಲ್ಲೆಯ ಗಡಿ ಸಿಗುತ್ತದೆ. ಹೇಮವಾಡಗಿ, ಕೊಣ್ಣೂರು, ಪಾಲಥಿ ಮತ್ತು ತೊರಮರಿ ಗ್ರಾಮಗಳಿಗೆ ಯಾವುದೇ ರೀತಿಯ ಸಾರಿಗೆ ಸೌಲಭ್ಯಗಳು ಇರುವುದಿಲ್ಲ. ಅದರಲ್ಲಿಯೂ ಹೇಮವಾಡಗಿ ಗ್ರಾಮಕ್ಕೆ ಸರಿಯಾಗಿ ನಡೆದುಕೊಂಡು ಹೋಗಿ ಬರಲು ರಸ್ತೆ ಇರುವುದಿಲ್ಲ. ಈ ಗ್ರಾಮಗಳ ಜನರು ಪ್ರಮುಖ ರಸ್ತೆ ತಲುಪಲು ಒಂದರಿಂದ ಎರಡು ಕಿ.ಮೀ. ದೂರ ನಡೆದುಕೊಂಡು ಬರಬೇಕು.

ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಲಿಂಗಾಯತ (ಪಂಚಶಾಲಿ, ಬಣಜಿಗ, ಪಾಕನಕ, ಜಂಗಮ, ರೆಡ್ಡಿಲಿಂಗಾಯತ ಇತ್ಯಾದಿ) ಕುರುಬ, ಅಗಸ, ವಾಲ್ಮೀಕಿ, ಮಾದರು, ತಳವಾರ, ಮರಾಠ, ಬೇಗಾರ್, ಚಲವಾದಿ, ಗಾಣಿಗ, ಕ್ಷೌರಿಕ, ಉಪ್ಪಾರ ಇತ್ಯಾದಿ ಜನಸಮುದಾಯಗಳಿವೆ. ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿಯಲ್ಲಿ ಒಟ್ಟು ೮೬೪ ಕುಟುಂಬಗಳಿವೆ. ಇಲ್ಲಿನ ಒಟ್ಟು ಜನಸಂಖ್ಯೆ ೪೯೪೪. ಇದರಲ್ಲಿ ಪುರುಷರ ಸಂಖ್ಯೆ ೨೪೮೭ ಮತ್ತು ಮಹಿಳೆಯರ ಸಂಖ್ಯೆ ೨೪೫೭. ಇಲ್ಲಿನ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ ೮೬೨. ಇದರಲ್ಲಿ ಪುರುಷರ ಸಂಖ್ಯೆ ೪೦೫ ಮತ್ತು ಮಹಿಳೆಯರ ಸಂಖ್ಯೆ ೪೮೭. ಪರಿಶಿಷ್ಟ ಪಂಗಡಕ್ಕೆ ಸೇರಿದವರ ಒಟ್ಟು ಜನಸಂಖ್ಯೆ ೨೦೨. ಇದರಲ್ಲಿ ಪುರುಷರ ಜನಸಂಖ್ಯೆ ೯೬ ಮತ್ತು ಮಹಿಳೆಯರ ಸಂಖ್ಯೆ ೧೦೬. ಬೂದಿಹಾಳ ಗ್ರಾಮಪಂಚಾಯತಿಯ ಸರಾಸರಿ ಒಟ್ಟು ಸಾಕ್ಷರತಾ ಪ್ರಮಾಣ ಶೇಕಡ ೫೮,೨೧ ರಷ್ಟಿದೆ. ಮಹಿಳೆಯರ ಸಾಕ್ಷರತೆಯು ಶೇಕಡ ೩೬.೫೭ ಮತ್ತು ಪುರುಷರ ಸಾಕ್ಷರತಾ ಪ್ರಮಾಣ ಶೇಕಡ ೭೯.೫೯ ರಷ್ಟಿದೆ. ಇಲ್ಲಿನ ಒಟ್ಟು ಅನಕ್ಷರಸ್ಥರ ಸಂಖ್ಯೆ ೨೫೦೧. ಇದರಲ್ಲಿ ೭೭೯ ಪುರುಷರು ಮತ್ತು ೧೭೨೨ ಜನ ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ.

ಬೂದಿಹಾಳ ಎಸ್.ಕೆ. ಗ್ರಾಮಪಂಚಾಯತಿ ಪ್ರದೇಶದಲ್ಲಿ ಭೂಮಿಯು ಯರೇಮಣ್ಣಿನ ಲಕ್ಷಣ ಹೊಂದಿದೆ. ಈ ಪಂಚಾಯತಿಯ ಗ್ರಾಮಗಳಲ್ಲಿ ಬಹುತೇಕ ಜನರ ದುಡಿಮೆಯೆ ಮೂಲ ಕೃಷಿ ಮತ್ತು ಕೃಷಿ ಕೂಲಿ. ಹೇಮವಾಡಗಿ ಹಾಗೂ ತೂರಮರಿ ಗ್ರಾಮಗಳಲ್ಲಿ ಕ್ರಮವಾಗಿ ನಾಲ್ಕು ಮತ್ತು ಮೂರು ಕುಟುಂಬಗಳು ಬೋರ್‌ವೇಲ್ ಆಧಾರಿತ ಸಣ್ಣ ನೀರಾವರಿಯಿಂದ ಕೃಷಿ ಮಾಡುತ್ತಿವೆ. ಈ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಜನರು ಕೃಷಿಗೆ ಮಳೆಯನ್ನೆ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಇಲ್ಲಿನ ಮುಖ್ಯ ಬೆಳೆಗಳೆಂದರೆ, ಹತ್ತಿ, ಸೂರ್ಯಕಾಂತಿ, ಜೋಳ, ಗೋಧಿ, ಶೇಂಗಾ, ತೊಗರಿ, ಕಡ್ಲೆ ಇತ್ಯಾದಿ.

ಯರೇಹಂಚಿನಾಳ ಗ್ರಾಮಪಂಚಾಯತಿಯು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಬರುತ್ತದೆ. ಯಲಬುರ್ಗಾದಿಂದ ಕೂಕನೂರು, ಚಿಕ್ಕನಕೊಪ್ಪ ಮಾರ್ಗವಾಗಿ ಗದಗಕ್ಕೆ ಹೋಗುವ ಮಾರ್ಗದಲ್ಲಿ ಯರೇಹಂಚಿನಾಳ ಸಿಗುತ್ತದೆ. ಈ ಪಂಚಾಯತಿಗೆ ಯರೇಹಂಚಿನಾಳವು ಸೇರಿದಂತೆ ಮೂರು ಹಳ್ಳಿಗಳು ಸೇರುತ್ತವೆ. ಅವೆಂದರೆ ಯರೇಹಂಚಿನಾಳ, ಭಿನ್ನಾಳ ಮತ್ತು ಶಿದ್ನೇಕೊಪ್ಪ, ಯರೇಹಂಚಿನಾಳ ಕೊಪ್ಪಳ ಜಿಲ್ಲೆಯ ಗಡಿಮಾತ್ರವಾಗದೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕೊನೆಯ ಗ್ರಾಮವೂ ಆಗಿದೆ. ಯರೇಹಂಚಿನಾಳದಿಂದ ಪಶ್ಚಿಮಕ್ಕೆ ಮೂರು ಕಿ.ಮೀ ಹೋದರೆ ಬಾಂಬೆ ಕರ್ನಾಟಕ ಪ್ರದೇಶದ ಗದಗ ಜಿಲ್ಲೆ ಗಡಿ ಸಿಗುತ್ತದೆ. ಈ ಭಾಗದಲ್ಲಿ ಯರೇಹಂಚಿನಾಳ ಗ್ರಾಮ ಸ್ವತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದು ಮತ್ತು ರಜಾಕರ ದಾಳಿಗೆ ಒಳಪಟ್ಟಿದ್ದು ಈಗ ಚರಿತ್ರೆಯ ಭಾಗ. ಈ ಹಳ್ಳಿಗಳಲ್ಲಿ ವಿಶೇಷವೆಂದರೆ ಅಗೇವುಗಳು. ಇವು ಯರೇಹಂಚಿನಾಳ ಮತ್ತು ಭಿನ್ನಾಳದಲ್ಲಿ ಶಾಲೆಯ ಆವರಣದಲ್ಲಿ ಅಥವಾ ಮುಂಭಾಗದಲ್ಲಿ ಇದ್ದರೆ, ಶಿದ್ನೇಕೊಪ್ಪದಲ್ಲಿ ಗ್ರಾಮದ ಮುಂಭಾಗದಲ್ಲಿ ಇವೆ. ಸ್ಥಳೀಯರ ಪ್ರಕಾರ ಒಂದು ಅಗೇವುನಲ್ಲಿ ಕನಿಷ್ಟ ೧೦೦ ಚೀಲದಿಂದ ೩೦೦ ಚೀಲದವರೆಗೆ ಜೋಳವನ್ನು ತುಂಬಬಹುದು. ಹೀಗೆ ತುಂಬಿದ ಜೋಳ ನಾಲ್ಕು, ಐದು ವರ್ಷಗಳವರೆಗೆ ಕೆಡದಂತೆ ಇಡಬಹುದು.

ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಲಿಂಗಾಯತ (ಪಂಚಮಸಾಲಿ, ರೆಡ್ಡಿ ಲಿಂಗಾಯತ, ಬಣಜಿಗ, ಜಂಗಮ, ಪಾಕನಕ ಇತ್ಯಾದಿ) ಕುರುಬ, ವಾಲ್ಮೀಕಿ, ಮಾದರು, ಚಲವಾದಿ, ಬಾರ್‌ಕೇರ್, ಬೇಗಾರ್, ಉಪ್ಪಾರ, ಮರಾಠಿ, ವಿಶ್ವಕರ್ಮ, ಕ್ಷೌರಿಕ, ಗಾಣಿಗ, ಕೊರವರು, ಮುಸ್ಲಿಮರು, ಬಜಂತ್ರಿ ಮುಂತಾದ ಜನ ಸಮುದಾಯಗಳಿವೆ. ಈ ಪಂಚಾಯತಿಯಲ್ಲಿ ಒಟ್ಟು ೧೧೫೯ ಕುಟುಂಬಗಳಿವೆ. ಇಲ್ಲಿನ ಒಟ್ಟು ಜನಸಂಖ್ಯೆ ೬೫೦೮. ಇದರಲ್ಲಿ ಪುರುಷರ ಸಂಖ್ಯೆ ೩೩೨೮ ಮತ್ತು ಮಹಿಳೆಯರ ಸಂಖ್ಯೆ ೩೧೮೦. ಯರೇಹಂಚಿನಾಳ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೭೨೫ ಜನರು ಪರಿಶಿಷ್ಟ ಜಾತಿಗೆ ಸೇರಿದ್ದರೆ, ಇವರಲ್ಲಿ ಪುರುಷರ ಸಂಖ್ಯೆ ೩೭೦ ಮತ್ತು ಮಹಿಳೆಯರ ಸಂಖ್ಯೆ ೩೫೫. ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು ಜನಸಂಖ್ಯೆ ೪೮೮. ಇದರಲ್ಲಿ ಪುರುಷರ ಜನಸಂಖ್ಯೆ ೨೫೦ ಮತ್ತು ಮಹಿಳೆಯರ ಜನಸಂಖ್ಯೆ ೨೩೮ ಆಗಿದೆ. ಈ ಗ್ರಾಮಪಂಚಾಯತಿಯ ಸರಾಸರಿ ಒಟ್ಟು ಸಾಕ್ಷರತೆ ಶೇಕಡ ೫೬.೯೧ ರಷ್ಟಿದೆ. ಪುರುಷರ ಸಾಕ್ಷರತೆ ಶೇಕಡ ೭೪.೧೬ ಮತ್ತು ಮಹಿಳಾ ಸಾಕ್ಷರತಾ ಪ್ರಮಾಣ ಶೇಕಡ ೩೮.೮೯ ರಷ್ಟಿದೆ. ಇಲ್ಲಿ ಇರುವ ಒಟ್ಟು ಅನಕ್ಷರಸ್ಥರ ಸಂಖ್ಯೆ ೩೩೬೪ ಅನಕ್ಷರಸ್ಥ ಪುರುಷರ ಸಂಖ್ಯೆ ೧೨೩೫ ಮತ್ತು ಮಹಿಳಾ ಅನಕ್ಷರಸ್ಥರ ಸಂಖ್ಯೆ ೨೧೨೯. ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಬಹುತೇಕ ಜನರು ಕೃಷಿ ಮತ್ತು ಕೃಷಿ ಕೂಲಿಯನ್ನು ಅವಲಂಬಿಸಿದ್ದಾರೆ. ಈ ಭಾಗದ ಭೂಮಿ ಕೂಡ ಯರೇಮಣ್ಣಿನ ಲಕ್ಷಣ ಹೊಂದಿದೆ. ಈ ಭಾಗದಲ್ಲಿ ಯಾವುದೇ ಬಗೆಯ ನೀರಾವರಿ ಕೃಷಿ ಇಲ್ಲ. ಇಲ್ಲಿನ ಕೃಷಿ ಚಟುವಟಿಕೆಯು ಸಂಪೂರ್ಣವಾಗಿ ಮಳೆಯನ್ನು ಅವಲಂಬಿಸಿದೆ. ಪ್ರಮುಖ ಕೃಷಿ ಬೆಳೆಯೆಂದರೆ ಜೋಳ, ಸೂರ್ಯಕಾಂತಿ, ಹತ್ತಿ, ಕುಸುಬೆ, ಕಡ್ಲೆ ಇತ್ಯಾದಿ.

ಕೋಷ್ಟಕ .೨ – ಬೂದಿಹಾಳ ಎಸ್.ಕೆ. ಗ್ರಾಮ ಪಂ.ಯಲ್ಲಿ ಇರುವ ಕುಟುಂಬಗಳ ಸಂಖ್ಯೆ, ಜನಸಂಖ್ಯೆ ಮತ್ತು ಸಾಕ್ಷರತೆ

ಕ್ರ.
ಸಂ

ಗ್ರಾಮಗಳ ಹೆಸರು

ಒಟ್ಟು ಕುಟುಂಬಗಳ ಸಂಖ್ಯೆ

ಜನಸಂಖ್ಯೆ ೨೦೦೧

೦-೬ ವಯೋಮಾನದ ಜನಸಂಖ್ಯೆ

ಪರಿಸಿಷ್ಟ ಜಾತಿಯ ಜನಸಂಖ್ಯೆ

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಬುದಿಹಾಳ ಎಸ್.ಕೆ.

೧೩೯

೪೨೯

೪೧೪

೮೪೩

೭೫

೬೫

೧೪೦

೦೮

೮೩

೧೯೧

ಬೆನಕನ ದೋಣಿ

೧೫೪

೪೦೯

೪೨೭

೮೩೬

೫೫

೪೯

೧೦೪

೧೨೩

೧೩೨

೨೫೫

ನಿಡಸನೂರ

೮೩

೨೪೩

೨೨೦

೪೬೩

೩೧

೩೯

೭೦

೫೭

೪೦

೯೭

ತೂರಮರಿ

೮೦

೨೨೩

೨೩೭

೪೬೦

೩೮

೪೮

೮೬

೧೧

೧೯

೩೦

ತಾರಿವಾಳ

೧೦೨

೩೨೧

೩೩೧

೬೫೨

೪೪

೫೫

೯೯

೬೫

೫೪

೧೧೯

ಕೊಣ್ಣೂರು

೪೮

೧೨೫

೧೦೫

೨೩೦

೧೮

೧೪

೩೨

೨೪

೨೦

೪೪

ಹೇಮವಾಡಗಿ

೮೨

೨೩೫

೨೨೫

೪೬೦

೪೫

೫೦

೯೫

೫೧

೫೪

೧೦೫

ಮನ್ಮಥನಾಳ

೯೦

೨೩೫

೨೩೫

೪೭೦

೨೩

೨೭

೫೦

೩೧

೪೨

೭೩

ಪಾಲಥಿ

೮೬

೨೪೯

೨೬೩

೫೧೨

೫೫

೫೧

೧೦೬

೩೫

೪೩

೭೮

  ಒಟ್ಟು ಗ್ರಾಮಪಂಚಾಯತಿ

೮೬೪

೨೪೮೭

೨೪೫೭

೪೯೪೪

೩೮೪

೩೯೮

೭೮೨

೪೦೫

೪೮೭

೮೯೨

ಕೋಷ್ಟಕ ಮುಂದುವರಿದಿದೆ

ಕ್ರ.
ಸಂ

ಪರಿಶಿಷ್ಟ ಪಂಗಡದ ಜನಸಂಖ್ಯೆ

ಒಟ್ಟು ಅಕ್ಷರಸ್ಥರು

ಒಟ್ಟು ಅನಕ್ಷರಸ್ಥರು

ಸಾಕ್ಷರತೆಯ ಪ್ರಮಾಣ ೨೦೦೧

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

೦೪

೦೪

೦೮

೨೭೧

೧೪೬

೪೧೭

೧೩೮

೨೮೧

೪೧೯

೭೬.೫೫

೪೧.೮೩

೫೯.೩೧

೧೯

೧೬

೩೫

೨೭೧

೧೪೬

೪೧೭

೧೩೮

೨೮೬

೪೨೪

೭೬.೫೫

೩೮.೬೨

೫೬.೯೨

೦೪

೦೪

೦೮

೧೬೬

೬೩

೨೨೯

೭೭

೧೫೭

೨೩೪

೭೮.೩೦

೩೪.೮೦

೫೮.೨೬

೦೬

೦೬

೧೨

೧೭೧

೮೩

೨೫೪

೫೨

೧೫೪

೨೦೬

೯೨.೪೩

೪೩.೯೧

೬೭.೯೧

೧೬

೨೭

೪೩

೨೪೦

೧೦೧

೩೪೧

೮೧

೨೩೦

೩೧೧

೮೬.೬೪

೩೬.೫೯

೬೧.೬೬

೧೫

೧೭

೩೨

೯೭

೨೭

೧೨೪

೨೮

೭೮

೧೦೬

೯೦.೬೫

೨೯.೬೭

೬೨.೬೨

೧೪೬

೬೨

೨೦೮

೮೯

೧೬೩

೨೫೨

೭೬.೮೪

೩೫.೪೨

೫೬.೯೮

೩೨

೩೨

೬೪

೧೬೪

೫೮

೨೨೨

೭೧

೧೭೭

೨೪೮

೭೭.೩೫

೨೭.೮೮

೫೨.೮೫

೧೪೪

೬೭

೨೧೧

೧೦೫

೧೯೬

೩೦೧

೭೪.೨೨

೩೧.೬೦

೫೧.೯೭

೯೬

೧೦೬

೨೦೨

೧೬೭೦

೭೫೩

೨೪೨೩

೭೭೯

೧೭೨೨

೨೫೦೧

೭೯.೫೯

೩೬.೫೭

೫೮.೨೧

ಕೋಷ್ಟಕ . – ಯರೇಹಂಚಿನಾಳ, ಕಬ್ಬರಗಿ ಮತ್ತು ಕೃಷ್ಣನಗರ ಗ್ರಾಮ ಪಂ.ಯಲ್ಲಿ ಇರುವ ಕುಟುಂಬಗಳ ಸಂಖ್ಯೆ, ಜನಸಂಖ್ಯೆ ಮತ್ತು ಸಾಕ್ಷರತೆ

ಕ್ರ.
ಸಂ

ಗ್ರಾಮಗಳ ಹೆಸರು

ಒಟ್ಟು ಕುಟುಂಬಗಳ ಸಂಖ್ಯೆ

ಜನಸಂಖ್ಯೆ ೨೦೦೧

೦-೬ ವಯೋಮಾನದ ಜನಸಂಖ್ಯೆ

ಪರಿಸಿಷ್ಟ ಜಾತಿಯ ಜನಸಂಖ್ಯೆ

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಯರೇಹಂಚಿನಾಳ

೫೫೮

೧೫೪೨

೧೪೮೪

೩೦೨೬

೧೯೪

೨೧೬

೪೧೦

೨೦೨

೧೯೨

೩೯೪

ಭಿನ್ನಾಳ

೩೯೨

೧೧೩೯

೧೦೭೫

೨೨೧೪

೨೦೦

೧೫೯

೩೫೯

೧೦೦

೯೦

೧೯೦

ಸಿದ್ನೇಕೊಪ್ಪ

೨೦೯

೬೪೭

೬೨೧

೧೨೬೮

೧೧೨

೧೦೩

೨೧೫

೬೮

೭೩

೧೪೧

  ಒಟ್ಟು ಗ್ರಾಮಪಂಚಾಯತಿ

೧೧೫೯

೩೩೨೮

೩೧೮೦

೬೫೦೮

೫೦೬

೪೭೮

೯೮೪

೩೭೦

೩೫೫

೭೨೫

ಕಬ್ಬರಗಿ

೪೬೪

೧೪೧೦

೧೩೫೨

೨೭೬೨

೩೨೬

೨೮೭

೬೧೩

೮೬

೮೮

೧೭೪

ಸೇಬಿನಕಟ್ಟೆ

೧೯೯

೫೬೭

೫೯೯

೧೧೬೬

೧೧೬

೧೨೭

೨೪೩

೮೮

೮೩

೧೭೧

ಮನ್ನೇರಾಳ

೩೬೫

೧೦೦೧

೯೫೯

೧೯೬೦

೧೯೬

೧೩೩

೩೨೯

೫೫

೫೧

೧೦೬

ಬೀಳಗಿ

೧೧೩

೩೨೨

೩೦೭

೬೨೯

೬೧

೫೬

೧೧೭

೫೪

೪೪

೯೮

  ಒಟ್ಟು ಗ್ರಾಮಪಂಚಾಯತಿ

೧೧೪೧

೩೩೦೦

೩೨೧೭

೬೫೧೭

೬೯೯

೬೦೩

೧೩೦೨

೨೮೩

೨೬೬

೫೪೯

ಕೃಷ್ಣನಗರ

೬೯೩

೨೧೫೭

೨೦೦೩

೪೧೬೦

೪೨೯

೩೬೩

೭೯೨

೧೧೪

೧೨೬

೨೪೦

ದೌಲತ್‌ಪುರ

೩೫೮

೧೧೨೭

೧೦೫೧

೨೧೭೮

೨೧೦

೧೯೮

೪೦೮

೧೮೧

೧೬೨

೩೪೩

  ಒಟ್ಟು ಗ್ರಾಮಪಂಚಾಯತಿ

೧೦೫೧

೩೨೮೪

೩೦೫೪

೬೩೩೮

೬೩೯

೫೬೧

೧೨೦೦

೨೯೫

೨೮೮

೫೮೩

ಕೋಷ್ಟಕ ಮುಂದುವರಿದಿದೆ

ಕ್ರ.
ಸಂ

ಪರಿಶಿಷ್ಟ ಪಂಗಡದ ಜನಸಂಖ್ಯೆ

ಒಟ್ಟು ಅಕ್ಷರಸ್ಥರು

ಒಟ್ಟು ಅನಕ್ಷರಸ್ಥರು

ಸಾಕ್ಷರತೆಯ ಪ್ರಮಾಣ ೨೦೦೧

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

೧೫೯

೧೫೩

೩೧೨

೧೦೨೮

೫೧೨

೧೫೪೦

೫೧೪

೯೭೨

೧೪೮೬

೭೬.೨೬

೪೦.೩೭

೫೯.೦೯

೪೫

೩೯

೮೪

೬೭೩

೩೩೦

೧೦೦೩

೪೬೬

೭೪೫

೧೨೧೧

೭೧.೬೭

೩೬.೦೨

೫೪.೦೭

೪೬

೪೬

೯೨

೩೯೨

೨೦೯

೬೦೧

೨೫೫

೪೧೨

೬೬೭

೭೩.೨೭

೪೦.೩೪

೫೭.೦೭

೨೫೦

೨೩೮

೪೮೮

೨೦೯೩

೧೦೫೧

೩೧೪೪

೧೨೩೫

೨೧೨೯

೩೩೬೪

೭೪.೧೬

೩೮.೩೯

೫೬.೯೧

೩೮೮

೩೬೪

೭೫೨

೬೧೬

೨೨೧

೮೩೭

೭೯೪

೧೧೩೧

೧೯೨೫

೫೬.೮೨

೨೦.೭೫

೩೮.೯೪

೨೧

೨೫

೪೬

೨೫೧

೯೪

೩೪೫

೩೧೬

೫೦೫

೮೨೧

೫೫.೬೫

೧೯.೯೧

೩೭.೩೭

೯೩

೮೬

೧೭೯

೫೮೮

೨೧೯

೮೦೭

೪೧೩

೭೪೦

೧೧೫೩

೭೩.೦೪

೨೬.೫೧

೪೯.೩೮

೨೯

೩೮

೬೭

೨೩೩

೧೨೫

೩೫೮

೮೯

೧೮೨

೨೭೧

೮೯.೨೭

೪೯.೮೦

೬೯.೯೨

೫೩೧

೫೬೩

೧೦೪೪

೧೬೮೮

೬೫೯

೨೩೪೭

೧೬೧೨

೨೫೫೮

೪೧೭೦

೬೪.೮೬

೨೫.೨೧

೪೫.೦೦

೦೮

೦೬

೧೪

೮೫೧

೪೬೫

೧೩೧೬

೧೩೦೬

೧೫೩೮

೨೮೪೪

೪೯.೨೪

೨೮.೩೫

೩೯.೦೭

೨೫

೨೧

೪೬

೫೮೨

೩೨೨

೯೦೪

೫೪೫

೭೨೯

೧೨೭೪

೬೨.೮೫

೩೭.೭೪

೫೧.೦೭

೩೩

೨೭

೬೦

೧೪೩೩

೭೮೭

೨೨೨೦

೧೮೫೧

೨೨೬೭

೪೧೧೮

೫೪.೮೫

೩೧.೫೦

೪೩.೨೦

 

ಕಬ್ಬರಗಿ ಗ್ರಾಮಪಂಚಾಯತಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿದೆ. ಕುಷ್ಟಗಿಯಿಂದ ಹನುಮಸಾಗರ, ಗುಡೂರು ಮಾರ್ಗವಾಗಿ ಬಾದಾಮಿಗೆ ಹೋಗುವ ಮಾರ್ಗದಲ್ಲಿ ಕಬ್ಬರಗಿ ಗ್ರಾಮಪಂಚಾಯತಿ ಇದೆ. ಈ ಗ್ರಾಮಪಂಚಾಯತಿಗೆ ಕಬ್ಬರಗಿಯೂ ಸೇರಿದಂತೆ ಒಟ್ಟು ನಾಲ್ಕು ಗ್ರಾಮಗಳು ಬರುತ್ತವೆ. ಅವೆಂದರೆ ಕಬ್ಬರಗಿ, ಬೀಳಗಿ, ಮನ್ನೇರಾಳ ಮತ್ತು ಸೇಬಿನಕಟ್ಟೆ, ಬೀಳಗಿ ಮತ್ತು ಕಬ್ಬರಗಿ ಗ್ರಾಮಗಳಿಗೆ ಹೊಂದಿಕೊಂಡಂತೆ ಒಂದು ಬೆಟ್ಟದ ಸಾಲಿದೆ. ಇದನ್ನು ಬಿಳಿಕಲ್ಲಿನ ಬೆಟ್ಟ ಎಂದು ಕರೆಯುತ್ತಾರೆ. ಈ ಬೆಟ್ಟದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಬೇಕಾಗುವ ಬಿಳೀಕಲ್ಲು ಸಿಗುತ್ತದೆ. ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ ಇರುವ ದೇವಸ್ಥಾನಗಳಿಗೆ ಬಳಸಿರುವ ಕಲ್ಲು ಈ ಬೆಟ್ಟದೇ ಎಂದು ಸ್ಥಳೀಯರು ಹೇಳುತ್ತಾರೆ. ಸೇಬಿನಕಟ್ಟೆ ಗ್ರಾಮದ ಸುತ್ತಮುತ್ತ ಕೆಂಪು ಗ್ರಾನೈಟ್ ಸಿಗುತ್ತದೆ. ಈ ಗ್ರಾನೈಟ್ ಇಳಕಲ್ ಪಿಂಕ್‌ನಲ್ಲಿ ಅತ್ಯಂತ ಉತ್ತಮ ಮತ್ತು ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಚಟುವಟಿಕೆಯಿಂದ ಸ್ಥಳೀಯರಿಗೆ ಸ್ವಲ್ಪಮಟ್ಟಿನ ಕೂಲಿ ದೊರೆಯುವುದು ಬಿಟ್ಟರೆ ಹೆಚ್ಚಿನ ಅನುಕೂಲವಿಲ್ಲ.

ಕಬ್ಬರಗಿ ಗ್ರಾಮಪಂಚಾಯತಿಯಲ್ಲಿ ಕುರುಬ, ಲಿಂಗಾಯತ, (ಜಂಗಮ, ರೆಡ್ಡಿ ಲಿಂಗಾಯತ, ಪಂಚಮಶಾಲಿ ಇತ್ಯಾದಿ) ಉಪ್ಪಾರ, ಬಜಂತ್ರಿ, ವಾಲ್ಮೀಕಿ, ಅಂಬಿಗೇರ್, ಗಾಣಿಗ, ಮಾದರ, ಕೊರವ, ಕೋಳಿ, ಕ್ಷತ್ರಿಯ, ಗೊಂದಳಿ, ಗೊಲ್ಲ, ಪಾಂಚಾಳ ಇನ್ನು ಮುಂತಾದ ಜನಸಮುದಾಯಗಳಿವೆ. ಇಲ್ಲಿ ಇರುವ ಒಟ್ಟು ಕುಟುಂಬಗಳ ಸಂಖ್ಯೆ ೧೧೪೧. ಇಲ್ಲಿನ ಒಟ್ಟು ಜನಸಂಖ್ಯೆ ೬೫೧೭ ಇದೆ. ಇವರಲ್ಲಿ ಪುರುಷರ ಜನಸಂಖ್ಯೆ ೩೩೦೦ ಮತ್ತು ಮಹಿಳೆಯರ ಜನಸಂಖ್ಯೆ ೩೨೧೭. ಕಬ್ಬರಗಿ ಗ್ರಾಮಪಂಚಾಯತಿಯಲ್ಲಿ ಒಟ್ಟು ೫೪೯ ಜನರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಇವರಲ್ಲಿ ಪುರುಷರ ಸಂಖ್ಯೆ ೨೮೩ ಮತ್ತು ಮಹಿಳೆಯರ ಸಂಖ್ಯೆ ೨೬೬. ಪರಿಶಿಷ್ಟ ಪಂಗಡಕ್ಕೆ ಸೇರಿದವರ ಒಟ್ಟು ಸಂಖ್ಯೆ ೧೦೪೪. ಇವರಲ್ಲಿ ೫೩೧ ಜನ ಪುರುಷರಿದ್ದರೆ, ೫೬೩ ಜನ ಮಹಿಳೆಯರಿದ್ದಾರೆ. ಈ ಗ್ರಾಮಪಂಚಾಯತಿಯ ಸರಾಸರಿ ಒಟ್ಟು ಸಾಕ್ಷರತೆ ಶೇಕಡ ೪೫.೦೦ ಪುರುಷರ ಸಾಕ್ಷರತೆ ೬೪.೮೬ ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣ ಶೇಕಡ ೨೫.೨೧ ಆಗಿದೆ. ಈ ಗ್ರಾಮಪಂಚಾಯತಿಯಲ್ಲಿ ಇರುವ ಒಟ್ಟು ಅನಕ್ಷರಸ್ಥರ ಸಂಖ್ಯೆ ೪೧೭೦. ಇದರಲ್ಲಿ ಪುರುಷರ ಅನಕ್ಷರಸ್ಥರ ಸಂಖ್ಯೆ ೧೬೧೨ ಮತ್ತು ಮಹಿಳಾ ಅನಕ್ಷರಸ್ಥರ ಸಂಖ್ಯೆ ೨,೫೫೮.

ಕಬ್ಬರಗಿ ಗ್ರಾಮಪಂಚಾಯತಿಯ ಭಾಗದಲ್ಲಿ ಮಣ್ಣು ಸ್ವಲ್ಪಮಟ್ಟಿಗೆ ಕೆಂಪು ಮಿಶ್ರಿತವಾಗಿದೆ. ಇಲ್ಲಿನ ಬಹುತೇಕ ಜನರ ಪ್ರಮುಖ ಆರ್ಥಿಕ ಚಟುವಟಿಕೆ ಕೃಷಿ. ಕೃಷಿಗೆ ಪೂರಕವಾದ ಆರ್ಥಿಕ ಚಟುವಟಿಕೆಗಳು ಮತ್ತು ಕೂಲಿ. ಕಬ್ಬರಗಿ, ಬೀಳಗಿ ಮತ್ತು ಮನ್ನೇರಾಳ ಗ್ರಾಮಗಳ ಸುತ್ತಮುತ್ತ ಕೆಲವರು ಬೋರ್‌ವೆಲ್ ಆಧಾರಿತ ನೀರಾವರಿಯಿಂದ ಕೃಷಿ ಮಾಡುತ್ತಿದ್ದಾರೆ. ಬಹುತೇಕ ಜನರು ಕೃಷಿಗೆ ಮಳೆಯನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಕೆಲವರು ಗ್ರಾನೈಟ್ ಗಣಿಗಳಲ್ಲಿ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಆದರೆ ಇವರ ಸಂಖ್ಯೆ ಬಹಳ ಕಡಿಮೆ. ಇಲ್ಲಿನ ಪ್ರಮುಖ ಕೃಷಿ ಬೆಳೆಗಳೆಂದರೆ ಸೂರ್ಯಕಾಂತಿ, ಜೋಳ, ಗೋಧಿ, ನವಣೆ, ಕಡ್ಲೆ, ಶೇಂಗಾ, ಕುಸುಬೆ, ಹತ್ತಿ ಇತ್ಯಾದಿ.

ಕೃಷ್ಣನಗರ ಗ್ರಾಮಪಂಚಾಯತಿಯು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿದೆ. ಈ ಗ್ರಾಮಪಂಚಾಯತಿಯಲ್ಲಿ ಕೃಷ್ಣನಗರವು ಸೇರಿದಂತೆ ಎರಡು ಗ್ರಾಮಗಳಿವೆ. ಒಂದು ಕೃಷ್ಣಾನಗರ ಮತ್ತೊಂದು ದೌಲತ್‌ಪುರ, ಸಂಡೂರು ಪಟ್ಟಣದಿಂದ ಒಂದು ಕಿ.ಮೀ ದೂರದಲ್ಲಿ ಮತ್ತು ದೌಲತ್‌ಪುರ ಎರಡು ಕಿ.ಮೀ ದೂರದಲ್ಲಿದೆ. ಸಂಡೂರು ಕಬ್ಬಿಣ ಮತ್ತು ಮ್ಯಾಗನೀಸ್ ಅದಿರಿನಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಗಣಿಗಾರಿಕೆಯಿಂದ ಕೃಷ್ಣನಗರ ಮತ್ತು ದೌಲತ್‌ಪುರದ ಸಾಮಾನ್ಯ ಜನರಿಗೆ ಆಗಿರುವ ಅನುಕೂಲವೆಂದರೆ ಕೂಲಿ ದೊರಕುವುದು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಅನುಕೂಲಗಳು ಈ ಗ್ರಾಮಸ್ಥರಿಗೆ ಆಗಿಲ್ಲ. ಕೃಷ್ಣನಗರ ಘೋರ್ಪಡೆ ಸಂಸ್ಥಾನದ ಹಳೇಕೋಟೆಯ ಒಳಗಿದೆ. ಕೋಟೆಯ ವಿಸ್ತೀರ್ಣ ಸುಮಾರು ಎರಡು ಕಿ.ಮೀ ಇದೆ. ಈಗಾಗಲೇ ಕೃಷ್ಣನಗರ ಮನೆಗಳಿಂದ ತುಂಬಿದೆ. ದೌಲತ್‌ಪುರ ಸಂಡೂರಿನಿಂದ ಸುಮಾರು ಎರಡು ಕಿ.ಮೀ ದೂರದಲ್ಲಿದೆ. ಈ ಗ್ರಾಮಕ್ಕೆ ಕೃಷ್ಣನಗರದಂತೆ ಕೋಟೆ ಇಲ್ಲ. ಅದುದರಿಂದ ಕೃಷ್ಣನಗರದಂತೆ ಮನೆಗಳು ಮತ್ತು ಜನಗಳು ತುಂಬಿ ಉಸಿರುಗಟ್ಟಿದ ವಾತಾವರಣವಿಲ್ಲ.

ಕೃಷ್ಣನಗರ ಗ್ರಾಮಪಂಚಾಯತಿಯಲ್ಲಿ ಒಟ್ಟು ೧೦೫೧ ಕುಟುಂಬಗಳಿವೆ. ಈ ಗ್ರಾಮಪಂಚಾಯತಿಯಲ್ಲಿ ಒಟ್ಟು ೬೩೩೮ ಜನಸಂಖ್ಯೆ ಇದೆ. ಇದರಲ್ಲಿ ಪುರುಷರ ಜನಸಂಖ್ಯೆ ೩೨೮೪ ಮತ್ತು ಮಹಿಳೆಯರ ಜನಸಂಖ್ಯೆ ೩೦೫೮ ಇದೆ. ಇಲ್ಲಿ ಇರುವ ಒಟ್ಟು ಕುಟುಂಬಗಳಲ್ಲಿ ಶೇಕಡ ೬೦ರಷ್ಟು ಮುಸ್ಲಿಂ ಕುಟುಂಬಗಳು. ಇನ್ನು ಉಳಿದ ಜನಸಮುದಾಯಗಳೆಂದರೆ, ಕುರುಬ, ಲಿಂಗಾಯತ (ಜಂಗಮ, ರೆಡ್ಡಿ ಲಿಂಗಾಯತ ಇತ್ಯಾದಿ) ವಾಲ್ಮೀಕಿ, ಮರಾಠಿ, ಮಾದರು, ಚಲವಾದಿ ಇತ್ಯಾದಿ. ಪರಿಶಿಷ್ಟ ಜಾತಿಗೆ ಒಟ್ಟು ೫೮೩ ಜನರು ಸೇರುತ್ತಾರೆ. ಇವರಲ್ಲಿ ೨೯೫ ಜನ ಪುರುಷರು ಮತ್ತು ೨೮೮ ಜನ ಮಹಿಳೆಯರು ಇದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದವರ ಒಟ್ಟು ಸಂಖ್ಯೆ ೬೦ ಇವರಲ್ಲಿ ೩೩ ಜನ ಪುರುಷರು ಮತ್ತು ೨೭ ಜನ ಮಹಿಳೆಯರಾಗಿದ್ದಾರೆ. ಇಲ್ಲಿನ ಸರಾಸರಿ ಒಟ್ಟು ಸಾಕ್ಷರತೆ ಶೇಕಡ ೪೩.೨೦ ಇದರಲ್ಲಿ ಪುರುಷರ ಸಾಕ್ಷರತಾ ಪ್ರಮಾಣ ಶೇಕಡ ೫೪.೧೭ ಮತ್ತು ಮಹಿಳೆಯ ಸಾಕ್ಷರತಾ ಪ್ರಮಾಣ ಶೇಕಡ ೩೧.೨೦ ರಷ್ಟಿದೆ. ಈ ಗ್ರಾಮಪಂಚಾಯತಿಯಲ್ಲಿ ಇರುವ ಒಟ್ಟು ಅನಕ್ಷರಸ್ಥರ ಸಂಖ್ಯೆ ೪೧೧೮, ಇದರಲ್ಲಿ ಪುರುಷ ಅನಕ್ಷರಸ್ಥರ ಸಂಖ್ಯೆ ೧೮೫೧ ಮತ್ತು ಮಹಿಳಾ ಅನಕ್ಷರಸ್ಥರ ಸಂಖ್ಯೆ ೨೨೬೭ ಜನ ಇದ್ದಾರೆ.

ಕೃಷ್ಣನಗರ ಗ್ರಾಮಪಂಚಾಯತಿ ವ್ಯಾಪ್ತಿ ಪ್ರದೇಶದ ಭೂಮಿಯು ಅಥವಾ ಮಣ್ಣು ಸ್ವಲ್ಪ ಕೆಂಪು ಮಿಶ್ರಿತವಾಗಿದೆ. ಇಲ್ಲಿ ಕೆಲವು ಕುಟುಂಬಗಳು ಬೋರ್‌ವೇಲ್ ಆಧಾರಿತ ನೀರಾವರಿ ಕೃಷಿ ನಡೆಸುತ್ತಿದ್ದಾರೆ. ಆದರೆ ಬಹುತೇಕ ಜನರು ಕೃಷಿಗೆ ಮಳೆಯನ್ನೆ ಅವಲಂಬಿಸಿದ್ದಾರೆ. ಕೃಷಿ ಚಟುವಟಿಕೆಗಳು ಹೆಚ್ಚಾಗಿ ನಡೆಯುವ ಸಂದರ್ಭದಲ್ಲಿ ಕೃಷಿ ಕೂಲಿಯನ್ನು, ಕೃಷಿ ಚಟುವಟಿಕೆಯು ಕಡಿಮೆ ಇದ್ದ ಸಮಯದಲ್ಲಿ ಗಣಿಗಳಲ್ಲಿ ಕೂಲಿ ಕೆಲಸವನ್ನು ಇಲ್ಲಿನ ಭೂರಹಿತರು ಅವಲಂಬಿಸಿದ್ದಾರೆ. ಈ ಎರಡು ಹಳ್ಳಿಗಳ ಗಣಿಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಗ್ರಾಮಗಳ ಜನರು ಗಣಿಗಳಲ್ಲಿ ಡ್ರೈವರ್, ಲೋಡರ್, ವಾಚಮಾನ್ ಇತ್ಯಾದಿ ಶ್ರಮದಾಯಕ ದುಡಿಮೆಯಲ್ಲಿ ತೊಡಗಿದ್ದಾರೆ. ಇಲ್ಲಿ ಗಣಿಗಾರಿಕೆಯು ಬಹಳ ಹೆಚ್ಚಾಗಿ ನಡೆಯುತ್ತಿರುವುದರಿಂದ ವಾಹನಗಳ ರೀಪೇರಿ ಮಾಡುವ ವರ್ಕ್‌ಶಾಪ್‌ಗಳು ಹೆಚ್ಚಾಗಿವೆ. ಕೆಲವರು ವರ್ಕ್‌ಶಾಪ್‌ಗಳಲ್ಲಿ ಮತ್ತು ಕೆಲವರು ಗಣಿಗಳಲ್ಲಿ ಮೆಕ್ಯಾನಿಕ್‌ಗಳಾಗಿ ದುಡಿಯುತ್ತಿದ್ದಾರೆ. ಒಟ್ಟಾರೆ ಕೃಷ್ಣನಗರ ಗ್ರಾಮಪಂಚಾಯತಿಯಲ್ಲಿ ಕೃಷಿ ಚಟುವಟಿಕೆಯಷ್ಟೇ ಪ್ರಾಮುಖ್ಯತೆಯನ್ನು ಗಣಿಗಾರಿಕೆ ಪೂರಕ ಚಟುವಟಿಕೆಗಳು ಪಡೆದುಕೊಂಡಿವೆ. ಇದರಿಂದ ಈ ಗ್ರಾಮಗಳ ಜನರು ಈ ಎರಡು ಕ್ಷೇತ್ರಗಳನ್ನು ದುಡಿಮೆಗಾಗಿ ಅವಲಂಬಿಸಿದ್ದಾರೆ.

ಕೃಷ್ಣನಗರ ಗ್ರಾಮಪಂಚಾಯತಿಯನ್ನು ಹೊರತುಪಡಿಸಿ, ಅಧ್ಯಯನಕ್ಕೆ ಒಳಪಡಿಸಿದ ಇತರ ಮೂರು ಗ್ರಾಮಪಂಚಾಯತಿ ಪ್ರದೇಶದಲ್ಲಿ ಕೃಷಿ ಭೂಮಿಯು ಯರೇಮಣ್ಣಿನ ಲಕ್ಷಣ ಹೊಂದಿದೆ. ವೈಜ್ಞಾನಿಕವಾಗಿ ಈ ಭೂಮಿಯಲ್ಲಿ ಬೆಳಯಬಹುದಾದ ಬೆಳೆಗಳಿಗೆ ಕನಿಷ್ಟ ೪೫ ದಿನಗಳಿಗೆ ಒಂದು ಮಳೆ ಬಂದರೆ ಬೆಳೆ ಉತ್ತಮವಾಗಿ ಬರುತ್ತದೆ. ಹೀಗಾಗಿ ಮುಂಗಾರಿನಲ್ಲಿ ೨ ರಿಂದ ೩ ಉತ್ತಮ ಮಳೆ ಮತ್ತು ಹಿಂಗಾರಿನಲ್ಲಿ ೩ ರಿಂದ ೪ ಉತ್ತಮ ಮಳೆಯಾದರೆ ಈ ಭೂಮಿಯಲ್ಲಿ ಕೃಷಿಗೆ ಯಾವುದೇ ತೊಂದರೆ ಇಲ್ಲ. ಇದು ಕೃಷಿಯನ್ನು ಅವಲಂಬಿಸಿರುವವರಿಗೆ, ಭೂರಹಿತ ಕೃಷಿ ಕಾರ್ಮಿಕರಿಗೆ ಸಾಕಷ್ಟು ಕೂಲಿ ಮತ್ತು ವರ್ಷದ ಜೀವನಕ್ಕೆ ಬೇಕಾಗುವ ಆಹಾರ ಧಾನ್ಯಗಳನ್ನು ಒದಗಿಸುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ. ನಿರಂತರ ೩ ವರ್ಷಗಳಿಂದ (೨೦೦೧, ೨೦೦೨ ಮತ್ತು ೨೦೦೩) ಬರ ಈ ಗ್ರಾಮದ ಜನರನ್ನು ಬಹಳ ಗಂಭೀರವಾಗಿ ಕಾಡುತ್ತಿದೆ. ಬರದಿಂದ ಸ್ಥಳೀಯವಾಗಿ ದೊರಕುವ ಕೃಷಿ ಕೂಲಿ ಕೆಲಸ ನಿಂತು ಹೋಗಿದೆ. ಹೀಗಾಗಿ ಇಲ್ಲಿಯ ಜನರು ಬೇರೆ ಸ್ಥಳಗಳಿಗೆ ದುಡಿಮೆಯನ್ನು ಅರಸಿ ಗುಳೆ ಹೋಗುತ್ತಾರೆ.

ಕೃಷ್ಣನಗರ ಗ್ರಾಮಪಂಚಾಯತಿಯನ್ನು ಹೊರತು ಪಡಿಸಿ ಅಧ್ಯಯನಕ್ಕೆ ಒಳಪಡಿಸಿದ ಎಲ್ಲಾ ಗ್ರಾಮಗಳಲ್ಲಿ ತಳವರ್ಗಕ್ಕೆ ಹಾಗೂ ತಳಜಾತಿಗೆ ಸೇರಿದ ಅದರಲ್ಲಿಯೂ ವಿಶೇಷವಾಗಿ ಭೂರಹಿತರು ಮತ್ತು ಅತ್ಯಂತ ಸಣ್ಣ ಹಿಡುವಳಿದಾರರು, ದುಡಿಮೆಯನ್ನು ಅರಸಿ ಜನವರಿಯಿಂದ ಮೇ ಜೂನ್‌ವರೆಗೆ ರತ್ನಗಿರಿ, ಹುಬ್ಬಳ್ಳಿ, ಮಂಗಳೂರು, ಉಡುಪಿ, ಗೋವಾ, ಬಾಂಬೆ, ಪೂನಾ, ಚಿಕ್ಕಮಗಳೂರು, ಬೆಂಗಳೂರು, ಹಾಸನ, ಮಡಿಕೇರಿ ಮುಂತಾದ ಭಾಗಗಳಿಗೆ ಗುಳೆ ಹೋಗುತ್ತಾರೆ. ದೂರದ ಸ್ಥಳಗಳಿಗೆ ಹೋಗಲು ಕನಿಷ್ಠ ವ್ಯವಸ್ಥೆಯೂ ಇಲ್ಲದವರು ಹತ್ತಿರವಿರುವ ಪಟ್ಟಣ ಹಾಗೂ ನೀರಾವರಿ ಪ್ರದೇಶಕ್ಕೆ ಗುಳೆ ಹೋಗುತ್ತಾರೆ. ಒಂದು ಗ್ರಾಮದಿಂದ ಕನಿಷ್ಠ ೫೦ ರಿಂದ ೧೫ಕ್ಕೂ ಹೆಚ್ಚಿನ ಜನರು ಮೇಲೆ ತಿಳಿಸಿದ ಸ್ಥಳಗಳಿಗೆ ಗುಳೆ ಹೋಗಿದ್ದಾರೆ. ಇದನ್ನು ಸ್ಥಳೀಯರು ‘ಸುಗ್ಗಿ ಮಾಡಲಿಕ್ಕೆ’ ಹೋಗಿದ್ದಾರೆ ಎಂದು ಕರೆಯುತ್ತಾರೆ. ಹೀಗೆ ಹೋಗಿರುವವರು ಹೆಚ್ಚಾಗಿ ದುಡಿಯುವ ವಯೋಮಾನದವರೆ ಆಗಿರುತ್ತಾರೆ (ಇದು ೦೯-೧೦ ವರ್ಷದ ಮಕ್ಕಳಿಂದ ಪ್ರಾರಂಭವಾಗಿ ೪೫-೫೦ ವರ್ಷದವರು).

ಒಂದು ಕುಟುಂಬದಲ್ಲಿ ಒಬ್ಬರಿಂದ ೪-೫ ಮಂದಿ, ಕೆಲವು ಸಂದರ್ಭದಲ್ಲಿ ಇಡೀ ಕುಟುಂಬ ಗುಳೆ ಹೋಗಿರುವುದು ತಿಳಿಯುತ್ತದೆ. ದುಡಿಯಲು ಶಕ್ತಿ ಇಲ್ಲದವರು (ವೃದ್ಧರು) ಅವಕಾಶ ವಂಚಿತರು (ಅಂಗವಿಕಲರು) ಅತ್ಯಂತ ಚಿಕ್ಕ ವಯೋಮಾನಕ್ಕೆ ಸೇರಿದವರು ಅನೇಕ ಕಾರಣಗಳಿಂದ ಮೂಲಸ್ಥಳದಲ್ಲಿ ಉಳಿಯುತ್ತಾರೆ. ಗುಳೆ ಹೋಗುವಾಗ ಸ್ವಲ್ಪ ಹೆಚ್ಚು ಕಡಿಮೆ ಅವಲಂಬಿತರನ್ನು ಬಿಟ್ಟು, ಸ್ವಲ್ಪ ಮಟ್ಟಿಗೆ ಸಹಾಯ ಮಾಡಬಲ್ಲರು ಎಂಬ ಕಾರಣದಿಂದ ಮಕ್ಕಳನ್ನು ಶಾಲೆ ಬಿಡಿಸಿ ಕರೆದುಕೊಂಡು ಹೋಗಿರುವ ನಿದರ್ಶನಗಳಿವೆ. ಕೆಲವರು ಮಾತ್ರ ತಮ್ಮ ಮಕ್ಕಳನ್ನು ಸಂಬಂಧಿತರ ಬಳಿ ಬಿಟ್ಟು ಹೋಗಿರುತ್ತಾರೆ. ಗುಳೆ ಹೋಗಿರುವ ಬಹಳಷ್ಟು ಮಂದಿ ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕರೆದುಕೊಂಡು ಹೋಗುತ್ತಾರೆ. ಇದು ಹೈದ್ರಾಬಾದ್ ಕರ್ನಾಟಕದ (ನೀರಾವರಿಯಾಗಿರುವ ಪ್ರದೇಶವನ್ನು ಹೊರತುಪಡಿಸಿ) ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣ. ನಿರಂತರವಾಗಿ ಮೂರು ವರ್ಷಗಳಿಂದ ಹೆಚ್ಚಾಗಿ ಕಾಡಿದ ಭೀಕರ ಬರದಿಂದ ಈ ಭಾಗದ ಜನ ಬಸವಳಿದಿದ್ದಾರೆ. ಅದರಲ್ಲಿಯೂ ತಳವರ್ಗದ ಮತ್ತು ತಳಜಾತಿಗೆ ಸೇರಿದ ಗ್ರಾಮೀಣ ಜನರ ಜೀವನ ಅತ್ಯಂತ ಶೋಚನೀಯ.

. ಅಧ್ಯಯನದ ಮಿತಿ

ಪ್ರಸ್ತುತ ಅಧ್ಯಯನಕ್ಕೆ ಕೆಲವು ಮಿತಿಗಳಿವೆ. ಅಧ್ಯಯನದಲ್ಲಿ ಅಂಕಿ ಅಂಶಗಳು ಮತ್ತು ಮಾಹಿತಿ ಸಂಗ್ರಹಣೆಯ ಮೂಲಕ ಫಲಿತಗಳನ್ನು ಕಂಡುಕೊಳ್ಳಬೇಕಾಗಿದೆ. ಹೀಗೆ ಮಾಡುವಾಗ ವಿವರಣಾತ್ಮಕ ವಿಶ್ಲೇಷಣೆಗೆ ಹೆಚ್ಚಿನ ಮಹತ್ವ ದೊರಕುವ ಸಾಧ್ಯತೆಗಳಿವೆ. ಗ್ರಾಮಪಂಚಾಯತಿ ಮಟ್ಟದಲ್ಲಿ ಬರುವ ಶಾಲೆಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಹೆಚ್ಚಾಗಿ ಅವಲಂಬಿಸಲಾಗಿದೆ. ಇದ್ದರಿಂದ ಕೆಲವು ಅಂಕಿ-ಅಂಶಗಳ ಕೊರತೆಯು ಎದುರಾಗಬಹುದು. ಜೊತೆಗೆ ಅಧ್ಯಯನದ ವ್ಯಾಪ್ತಿ ಕೂಡ ಅಧ್ಯಯನದ ಮಿತಿಯಾಗಿದೆ.

.. ಅಧ್ಯಯನದ ಮಹತ್ವ

ಪ್ರಸ್ತುತ ಅಧ್ಯಯನವು ಎಂಪಿರಿಕಲ್ ಮಾದರಿಯ ಮೌಲ್ಯಮಾಪನ ಅಧ್ಯಯನವಾಗಿದೆ. ಈ ಅಧ್ಯಯನದಿಂದ ಕಂಡುಕೊಮಡ ಫಲಿತಗಳ ಆಧಾರದ ಮೇಲೆ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚು ಸುಧಾರಿಸಬಹುದಾಗಿದೆ. ಅಲ್ಲದೇ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮದಿಂದ ಉಂಟಾಗುತ್ತಿರುವ ಉತ್ತಮ ಪರಿಣಾಮಗಳನ್ನು ಈ ಅಧ್ಯಯನವು ಎತ್ತಿತೋರಿಸುತ್ತದೆ.

ಸರ್ಕಾರಕ್ಕೆ ವಿಶೇಷವಾಗಿ ಶಿಕ್ಷಣ ಇಲಾಖೆಗೆ ಪ್ರಸ್ತುತ ಅಧ್ಯಯನ ತುಂಬಾ ಉಪಯುಕ್ತವಾಗಿದೆ. ಶಿಕ್ಷಣ ಇಲಾಖೆಯು ಸದರಿ ಅಧ್ಯಯನದ ಆಧಾರದ ಮೇಲೆ ಅನೇಕ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಜೊತೆಗೆ ಗ್ರಾಮ ಪಂಚಾಯತಿ ಮತ್ತು ಗ್ರಾಮ ಮಟ್ಟದಲ್ಲಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇರುವ ಸ್ಥಳೀಯ ಮಟ್ಟದಲ್ಲಿನ ತೊಡಕುಗಳನ್ನು ಗುರುತಿಸುವುದರಿಂದ ಅಂತಹ ತೊಡಕುಗಳಿಗೆ ಪರಿಹಾರವನ್ನು ಸ್ಥಳೀಯವಾಗಿಯೇ ಕಂಡುಕೊಳ್ಳಬಹುದಾಗಿದೆ. ಅಲ್ಲದೇ ಸ್ಥಳೀಯ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಿದೆ.

ಸೈದ್ಧಾಂತಿಕವಾಗಿ ನಮ್ಮ ಸಮಾಜವು ಇನ್ನೂ ಏಕೆ ಜಾತಿ ಬೇಧಗಳಿಂದ ನರಳುತ್ತಿದೆ ಎಂಬುದನ್ನು ಈ ಅಧ್ಯಯನದಲ್ಲಿ ತೋರಿಸಲಾಗಿದೆ. ಇದರಿಂದ ಶಿಕ್ಷಣದ ಅಭಿವೃದ್ಧಿಗೆ ಸ್ಥಳೀಯವಾಗಿ ಇರುವ ಸಾಮಾಜಿಕ ಆಯಾಮಗಳನ್ನು ಅರ್ಥಮಾಡಿಕೊಳ್ಳಬಹುದು. ಅಲ್ಲದೇ ಬಿಸಿಯೂಟ ಕಾರ್ಯಕ್ರಮದ ಸಾಧಕ ಬಾಧಕಗಳನ್ನು ಸ್ಥಳೀಯ ಜನರೊಂದಿಗೆ ಚರ್ಚಿಸುವ ಮೂಲಕ ಪರಿಹಾರಗಳಣ್ನು ಕಂಡುಕೊಳ್ಳಬಹುದಾಗಿದೆ. ಹೀಗೆ ಪ್ರಸ್ತುತ ಅಧ್ಯಯನವು ತನ್ನದೇ ಆದ ಕಾಣಿಕೆಯನ್ನು ಶೈಕ್ಷಣಿಕ ಅಭಿವೃದ್ಧಿಗೆ ನೀಡುವುದರಲ್ಲಿ ಸಂದೇಹವಿಲ್ಲ.