Categories
ಮಾಧ್ಯಮ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಈಶ್ವರ ದೈತೋಟ

ಪತ್ರಿಕೋದ್ಯಮ ಪದವೀಧರರಾದ ಈಶ್ವರ ದೈತೋಟ ೧೯೭೦ರ ದಶಕದಲ್ಲಿ ಉದಯವಾಣಿ, ರಾಜಧಾನಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿದರು. ನಂತರ ಈಶ್ವರ ದೈತೋಟ ಅವರು ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸಂಪಾದಕರಾಗಿದ್ದು, ದೂರದರ್ಶನದಲ್ಲಿ ವಾರ್ತಾ ವಾಚಕರಾಗಿ, ನಿರೂಪಕರಾಗಿ ಮಾಧ್ಯಮಗಳಲ್ಲಿ ಅನೇಕ ನವೀನ ಪ್ರಯೋಗಗಳನ್ನು ಕೈಗೊಂಡವರು. ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೊಸದೊಂದು ಆಯಾಮ ಒದಗಿಸಿದ ದೈತೋಟ ಅವರು ಅನೇಕ ಪತ್ರಿಕೋದ್ಯಮ ಕುರಿತ ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದಾರೆ. ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ.
ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಈಶ್ವರ ದೈತೋಟ ಅವರು ೨೦ಕ್ಕೂ ಅಧಿಕ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ರಂಗದ ಅಧಿಕೃತ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಇವರು ಹಲವಾರು ಮಾಧ್ಯಮ ಕಾರ್ಯಾಗಾರಗಳನ್ನು