ಜನನ : ೧೯೪೭ ಬಳ್ಳಾರಿ

ಗುರುಪರಂಪರೆ : ಮೊದಲಿಗೆ ಜಿ.ಎಂ. ಗುರುಸಿದ್ದಯ್ಯನವರಲ್ಲಿ ಪಿಟೀಲು ವಾದನ ಕಲಿಕೆ. ಅನಂತರದಲ್ಲಿ ಶ್ರೀ ಪುಟ್ಟರಾಜ ಗವಾಯಿಗಳಲ್ಲಿ ಪಿಟೀಲಿನ ಜೊತೆಗೆ ಹಾರ್ಮೋನಿಯಂ ವಾದನದಲ್ಲೂ ಶಿಕ್ಷಣ ಪಡೆದಿದ್ದಾರೆ.

ಸಾಧನೆ : ರಾಜ್ಯಾದ್ಯಂತ, ರಾಷ್ಟ್ರಾದ್ಯಂತ ಅನೇಕ ಕಡೆ ಪಿಟೀಲು ತನಿ ಕಚೇರಿಯನ್ನು ನೀಡುತ್ತ ಪಿಟೀಲು ನುಡಿಸುವುದರಲ್ಲಿ ಸಾಕಷ್ಟು ಅನುಭವ ಗಳಿಸಿದರು. ಮುಂದೆ ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಮೇರು ಗಳೆನಿಸಿದ ಪಂ. ಜಸ್‌ರಾಜ್, ಪಂ. ರಾಜನ್-ಮಿಶ್ರಾ-ಸಾಜನ್ ಮಿಶ್ರಾ; ಬಸವರಾಜ ರಾಜಗುರು, ಲಕ್ಷ್ಮೀಶಂಕರ್, ಸಿದ್ದೇಶ್ವರಿದೇವಿ ಮುಂತಾದವರ ಕಚೇರಿಗಳಿಗೆ ಪಕ್ಕವಾದ್ಯ ನುಡಿಸಿರುತ್ತಾರೆ. ಅಲ್ಲದೆ ಸಿತಾರ್ ಹಾಗೂ ಶಹನಾಯ್ ವಾದನದಲ್ಲೂ ಪರಿಣತಿ ಹೊಂದಿದ್ದು ಕೆಲವು ಕಡೆ ಕಾರ್ಯಕ್ರಮಗಳನ್ನೂ ನೀಡಿದ್ದಾರೆ.

ಸಂಗೀತ ನಿರ್ದೇಶಕರಾಗಿ ಚಲನಚಿತ್ರ ಕಲಾವಿದರಾಗಿ ತಮ್ಮ ಕಾರ್ಯ  ಕ್ಷೇತ್ರವನ್ನು ವಿಸ್ತರಿಸಿಕೊಂಡಿರುವ ಈಶ್ವರ ಮೊರಗೇರಿ ಅವರದು ಹಲವು ಮುಖಗಳ ಪ್ರತಿಭೆ.

ಪ್ರಶಸ್ತಿ – ಸನ್ಮಾನ : ಇವರ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೧-೦೧ ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.