ಈ ಕೆಲವರಿಗೆ
ನಾಣ್ಯದ ಸದ್ದು ಘಂಟಾನಾದ
ಅವರಿವರು ತಮಗಾಗಿ ಸುರಿಸಿದ ಬೆವರು
ಪಾವನ ತೀರ್ಥ
ಬ್ಯಾಂಕಿನಲ್ಲಿ ಬೆಳೆವ ಬಡ್ಡಿಯ ಕಂಡು
ರೋಮಾಂಚನ
ಅಸಲನ್ನು ಶತಸಹಸ್ರಾರಕ್ಕೇರಿಸುವ ಚಿಂತೆಯೆ
ಜಪ-ತಪ-ಯೋಗ
ಕಾಂಚನ ರೋಗ