ನೋಡು ನೋಡು ಜಾದುಗಾರ
ಓಡಿ ಓಡಿ ಬಂದ
ಜೇಬಿನಿಂದ ಕೋಗಿಲೆಗಳ
ಒಂದೊಂದೇ ತೆಗೆದ.

ಹೊಟ್ಟೆಗೆ ಕೀ ಕೊಟ್ಟು ನೋಡು
ರಾಗ ಹಾಡುತಾವೆ.
ಕಲಿತ ಹಾಡು ಗೆದ್ದಲನ್ನೆ
ವಾಂತಿ ಮಾಡುತಾವೆ.

ಹಾಡಿನಲ್ಲಿ ಸುರಿಯುತಾವೆ
ಭಾರಿ ಭಾರಿ ಮಳೆ.
ಊರಿನ ಜನ ಬೆಳೆಯುತಾರೆ
ಹಿಂಗಾರಿಯ ಬೆಳೆ.

(ನಾಟಕ)
೧೯೯೦