ಸೂರ್ಯನೆಂಬ ಮರಕ್ಕೆ
ನೀಲಾಂಬರದ ತುಂಬ ಬೇರು ಬಿಳಲು
ಹಗಲೆಂಬ ರೆಂಬೆಕೊಂಬೆ
ಗೆ ಬಿಸಿಲೆಂಬ ಚಿಗುರುಹೂವು.

ಹೂಹೂವರಳಿ
ಬೆಳಕಿನ ಹಣ್ಣುದುರಿ
ಕೆಳಕ್ಕೆ ಬಿದ್ದರೆ
ತಿನ್ನಲಿಕ್ಕೆ

ನಾನೂ ಇಲ್ಲ
ನೀನೂ ಇಲ್ಲ.

೧೯೯೩