ಅಕ್ಕಕ್ಕು ಹಾಡುಗಳೇ
ಹಾಡಿನ | ಅಚ್ಚಚ್ಚ ಕನಸುಗಳೇ ||ಪ||
ಬನ್ನಿರಿ ಇನ್ನಿಲ್ಲಿಗೆ ||ಪ||

ಬರಗಾಲ ಬಂತೆಂದು ಬರವೇನೊ ಹಾಡಿಗೆ
ಮನಸಿಗೆ ನಿನ್ನ ಕನಸಿಗೆ|
ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ
ಬಿಡಬೇಕೋ ತಮ್ಮಾ ಬಯಲಿಗೆ|
ಆಕಾಶದಲಿ ಕೊನೆ ನಕ್ಷತ್ರ ಇರುವತನಕ
ಕನಸು ಇರತಾವಂತ ಹಾಡಬೇಕೋ||

ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ
ಹಾದಬೇಕೋ ತಮ್ಮಾ ಹಾಡಬೇಕು|
ಕಲ್ಲಿನ ಎದೆಯಲ್ಲಿ ಜೀವಜಲ ಚಿಲ್ಲೆಂದು
ಚಿಮುವಂಥಾ ಹಾಡ ಹಾಡಬೇಕು|
ಆಕಾಶದಂಗಳ ಬೆಳದಿಂಗಳೂ ಕೂಡಾ
ಕಂಗಾಲಾಗುವ ಹಾಡು ಹಾಡಬೆಕೋ||

ತಂಗಾಳಿ ಪರಿಮಳಿಸಿ ತವಕಗೊಳ್ಳುವ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕೋ|
ಚಿಗುರುವಾಸೆಯ ಬಿಟ್ಟ ಹಸಿರು ಕೆರಳುವ ಹಾಂಗ
ಹಾಡಬೇಕೋ ತಮ್ಮಾ ಹಾದಬೇಕೋ|
ನಾದಮಯ ಶಬ್ದದಲಿ ಹೂಬಿಡುವ ಕನಸುಗಳ
ಹಾಡಬೇಕೋ ತಮ್ಮಾ ಹಾಡಬೇಕೋ||