ತುಕ್ರ: ಅವನು ಇದ್ದಾನಲ್ಲಾ.
ಅಂಥವನು ನಾನಲ್ಲಾ
ನಾನಲ್ಲ ಕ್ಷುದ್ರ ಪಾಟೀಲ.
ನಂಬದಿರು ಅವನ
ಅವನೊಬ್ಬ ಹೆಗ್ಗಣ
ಹಾಳು ಮಣ್ಣನು ಕೊಡದ ಜಿಪುಣ.

ಕಾಮದೇವರ ಬಿಟ್ಟು
ಬೇರೆ ದೇವರ ಕಾಣೆ
ಪ್ರೇಮದಲಿ ನಾ ಸಿದ್ಧಿ ಸಾಧಿಸಿರುವೆ
ಯಾವುದಕ್ಕೂ ಸಿದ್ಧ
ಯಾವುದಕ್ಕೂ ಬದ್ಧ
ನೋಡು ಈಗಳೆ ಒರೆಗೆ ಹಚ್ಚಿ

ಇಳಿವು || ನನ್ನೆದೆಯ ಬಲ್ಬನ್ನು
ಬೆಳಗೋ ಕರಂಟಿ
ಮದನ ಕದನಕೆ ಬಾರೆ
ಓ ಜಗಳಗಂಟಿ
ಬೇಡುವೆ ನಿನ್ನನು ಕಾಡಬ್ಯಾಡೆನ್ನನು
ಕಾಮಿಸು ಎಲೆ ಕಾಂತೆಯೆ
ಸ್ಮರಶರ ಘಾತಕೆ ಗುರಿಯಾಗಿ ಮರುಗುವೆ
ಕರುಣಿಸಿ ಮಾತಾಡೆಲೆ

ತಾರಾ: ಹ್ಯಾಗೆ ಬಂದಿರಿ ನೀವು
ಹಾಗೆ ನುಗ್ಗಿರಿ ಒಳಗೆ
ಹೊರಗೆ ಅಂಗಳದಲ್ಲಿ ನಿಲ್ಲಬ್ಯಾಡ್ರಿ
ನಿರ್ದಯೀ ಮನ್ಮಥನು
ಮರ್ದಿಪನು ಸಂತತ
ನನ ಮ್ಯಾಲೆ ಕೂಡಲೇ ದಯಮಾಡಿರಿ.
ದೀನಳಾದೆನ್ನಯ ಮಾನಸವನು ಕದ್ದು
ಅನುರಾಗವನು ತೋರುತ
ಮಾರನಾಟವನಾಡಿ ಸಾರಸುಖ ತೋರಿಸಿರಿ
ದಶವಿಧ ಚುಂಬಿಸುತ.

ತುಕ್ರ: ಬಾರೆ ಬಾರೆಲೆ ತರುಣಿ
ಮೊಲೆ ಚಿನ್ನದಾ ಭರಣಿ
ಪರಿಣಯಕೆ ತಡವ್ಯಾತಕೆ?

೧೯೯೧