ಕೇಳೆನ್ನ ದೇಶವೆ ಶ್ರೀಮಂತರನು ಮಾತ್ರ
ಕಣ್ಣಲ್ಲಿ ಕಣ್ಣಿಟ್ಟು ನೋಡದಿರು.
ನಿನಗೆ ಮಾಟಾ ಮಾಡಿ ಮೈಮರೆಸಿ ಬಡವರ
ಕಡೆಗೆ ನೋಡದ ಹಾಗೆ ಮಾಡುವರು.

ದಿನ ನಿತ್ಯ ನಿನ್ನನ್ನ ಉನ್ಮಾದದಲ್ಲಿರಿಸಿ
ಸುತ್ತ ಹುಚ್ಚಾಸ್ಪತ್ರೆ ಮಾಡುವರು.
ನೀ ಉಣ್ಣುವನ್ನವನು ಹಸಿರು ಕಾಗದ ಮಾಡಿ
ತುರುಕಿ ಬಾಯಿಗೆ ಉಸಿರುಗಟ್ಟಿಸುವರು.

ಕೇಳೆನ್ನ ದೇಶವೆ ಉನ್ಮಾದ ಬದುಕಲ್ಲ
ಮಾಯಾಬಜಾರಿನಲಿ ಬೆಳೆಯಲಾರೆ.
ಆಸ್ಪತ್ರೆಯಿಂದೋಡಿ ಹೊರಗೆ ಬಾ, ಗಾಳಿಯಿದೆ
ಬೆಳಕು ಇದೆ – ತುಕ್ರನೂ ಇಲ್ಲೆ ಇರುವೆ.

೧೯೯೧