ಜಯಜಯಾ ಶಿವಪೂರಿಗೆ ||ಪ||
ಹಸಿರಿನ ತವರೂರಿಗೆ
ಹಾಡು ಬೆಳೆವ ಕಾಡಿಗೆ
ನಮ್ಮ ಛಳಿಗೆ ಬಿಸಿಯಾಗುವ
ಕಣ್ಣುಗಳಿಗೆ ಕನಸು ಕೊಡುವ
ಯೌವನವನು ಕಾಪಾಡುವ
ಮುಳ್ಳಿನಲ್ಲು ಹೂಹೂಗಳ ನಗೆಯ ನಗುವ ಸೀಮೆಗೆ
ಜಯಜಯಾ ಶಿವಪೂರಿಗೆ ||
ನೀರಿಗಿಂತ ಆಳವಾದ
ಒಲವ ಬಲ್ಲ ಸೀಮೆಗೆ,
ಆಳದಲ್ಲಿ ಲಾವಣಿಗಳ –
ನುಳ್ಳ ನದಿಯ ಊರಿಗೆ
ಸುಕ್ಕಿನ ಗೆರೆ ಸಾಣೆ ಹಿಡಿವ
ಜಾಣ ಮುದುಕರೂರಿಗೆ
ಹಕ್ಕಿಯ ಸಖೀಗೀತಗಳಿಗೆ
ರಾಗ ತಾಳ ಹಾಕಿ ಕುಣಿವ
ಎಳೆಯರಿರುವ ಊರಿಗೆ
ಜಯಜಯಾ ಶಿವಪೂರಿಗೆ ||
ಋತುಮಾನದ ಪೈರು ಬೆಳೆವ
ದಂಟಿಗೆಂಟು ತೆನೆಗಳಿರುವ
ತೆನೆಗೆ ಒಂದು ಹಾಡುವಂಥ
ಹಕ್ಕಿಯಿರುವ ಊರಿಗೆ
ಜಯಜಯಾ ಶಿವಪೂರಿಗೆ.
(ಭೋಳೇಶಂಕರ)
Leave A Comment