ವಿಜಯಲಕ್ಷ್ಮಿ ಒಲಿದು ಬರಲಿ ನಮ್ಮ ಕೋವಿಗೆ.
ನುಗ್ಗಿ ನಡೆವ ಒದ್ದು ನಡೆವ ಕುಣಿವ ಕೋವಿಗೆ.
ಕೆಂಪು ಭಾಷೆಯಾಡುವೆಮ್ಮ ಕರಿಯ ಕೋವಿಗೆ.
ಗುಂಡುಮಳೆಯ ಸುರಿಸಿ ಶಾಂತಿ ಬೆಳೆವ ಕೋವಿಗೆ.

ಸಿಡಿವುದಕ್ಕೆ ತಾರೆಗಳಿಗೆ
ಹಾಡಲಿಕ್ಕೆ ಸೈರನ್ನಿಗೆ
ನಮ್ಮ ನಿಮ್ಮ ಥರದ ಜನಕೆ
ಒದೆವ ಕಾಲ ನೆಕ್ಕುವಂಥ
ನಾಯಿ ವಿದ್ಯೆ ಕಲಿಸುವ,
ಕೋವಿಗೆ ಜಯವಾಗಲೆಂದು
ಬನ್ನಿ ಬನ್ನಿ ಹೇಳುವ ||

(ಭೋಳೇಶಂಕರ)