ಯಾರವ್ವ ಈ ಚೆಲುವ
ತಂತಾನೆ ರಂಜಿಸುವ
ಸೂರ್ಯನ ಥರ ಹೊಳೆಯುವ ||
ಅಂಬೆಗಾಲಿಡುವಂಥ ಆನೆಯ ಮರಿಯೇನೆ
ಜೊಲ್ಲು ಸುರಿದಲ್ಲೆಲ್ಲ ಮಲ್ಲಿಗೆ ಹೂವೇನೆ
ನಕ್ಕರೀತನ ಮುಂದೆ ಚಂದ್ರ ಕಳೆಗುಂದುವನೆ
ಬಾರೋ ಭಾಗ್ಯದ ಒಡೆಯನೆ ||
ಬೇರೆ ಸೀಮೆಯ ದೈವ ತಪ್ಪಿ ಬಂದಾನೇನೆ
ತೂಗೊ ಜಡೆಗಳ ನೋಡೆ ನಾಗರ ಮಿಡಿಯೇನೆ
ಒಡಲ ಮಣ್ಣಿನ ಒಳಗ ಮೂಡಿದ ಶಿವನೇನೆ
ಮುಸುಗುಡುವ ನಂದಿಯೇನೆ ||
ಏನುಕೊಟ್ಟರು ಒಲ್ಲ ಸೊಲ್ಲು ಅಚ್ಚಿನ ಬೆಲ್ಲ
ಒಳಹೊರಗೆ ಆಡಿದರ ಸಲಕೊಂದು ಅವತಾರ
ಅವ್ವಾ ಈತನ ರೂಪ ನಮ್ಮ ಕಣ್ಣಿನ ದೀಪ
ಬಾರೋ ಭಾಗ್ಯದ ಒಡೆಯನೆ ||
(ನಾಟಕ)
Leave A Comment