ಕಂಡ ಮಾರಿ ಖಬರ ಹಾರಿ
ನಿಂತೇನವ್ವ ಸೆರಗ ಜಾರಿ
ಚಿಗರ ಮೀಸಿ ಚೆಲುವ ಎದುರ ಬಂದಾನಲ್ಲಾ
ನಮ್ಮ | ಚಿತ್ತದಾಗ ಆದಾನಲ್ಲಾ ದಾಖಲಾ
ಇಂಥಾ ಹುಡುಗನ ಮ್ಯಾಲ ಬಿದ್ದಿದಾವ ನಮ್ಮ ಖ್ಯಾಲಾ
ಸುತ್ತ | ಮುತ್ತ ಯಾರ್ಯಾರಿಲ್ಲ ಹಾದಿ ಬಿಲ್ ಕುಲ್ಲಾ
ಹೆಂಗಾರೆ ಬಾರೋ ಹುಡುಗಾ
ಕಂಗಾಲಾದೀವೊ ||

ನಿನ್ನ ರೂಪ ನೋಡಿ ನಮ್ಮ
ತಾಪ ಏರಿದಾವೊ ಮ್ಯಾಲ
ಮೈಯಾಗಿನ ಸೊಕ್ಕು ಉಕ್ಕಿ ಕುದ್ದಾವಲ್ಲ
ನಮ್ಮ | ಕೊರತಿಯೆಲ್ಲಾ ಬಾಯಿ ತೆರೆದ ನಿಂತಾವಲ್ಲಾ
ಹಾ | ತಗ್ಗಿನಾಗಿನ ಜೀವರಸ ಹಿಗ್ಗ್ಯಾವಲ್ಲ
ಹಿಗ್ಗಿ | ಬುಗ್ಗಿ ಒಡೆದು ಆಜುಬಾಜು ಹರಿದಾವಲ್ಲಾ
ಹೆಂಗಾರೆ ಬಾರೊ ಹುಡುಗಾ
ಕಂಗಾಲಾದೀವೊ ||

(ನಾಟಕ)