ನಿನ್ನ ಕಿವಿಯಾಗೊಂದು ತುರ್ತು ಮಾತು ಹೇಳಿರತೀನಿ
ಏನ ಮಾತು ತೆಗೆ ಅಂತ ಅನಬ್ಯಾಡಣ್ಣಾ.
ಅಂದರೂ ಅನವೊಲ್ಲ್ಯಾಕ ಕಿವಿಬಾಗಲಾ ಕಾಯತಿರಲಿ
ಬಿಟ್ಟ ಬಿಡು ಅಲ್ಲೇ ಅದನ್ನ ಅರ್ಧಾ ತಾಸ.

ಜಾಸ್ತಿ ಹೊತ್ತು ಬಿಟ್ಟಿರಬ್ಯಾಡ ತೂಕಡಿಸೀತು ಕಿವಿಯಾಗೇನೆ
ಹೋಗಿ ಸ್ವಲ್ಪ ಮಾತಾಡಿಸಣ್ಣ ಏನ ಬಂದಿರಂತ.
ಅದು ನಿನಗ ಹೇಳೋದಕ್ಕ ಏನೋ ಸುದ್ದಿ ತಂದೈತಣ್ಣ
ಕೇಳಿ ತಿಳಕೊ ಏನಸುದ್ದಿ ಹೇಳ್ರೀ ನಮಗಂತ:

ಕಚ್ಚುವಂಥಾ ಅಧಿಕಾರ ನಾಯಿಯಂಥಾ ನಾಯಿಗಿಲ್ಲ
ಮನಶೇರಿಗಂತೂ ಸಾಧ್ಯವಿಲ್ಲ ತಿಳಕೊಳ್ಳಣ್ಣಾ
ಕಸಿಯೋವಂಥಾ ಅಧಿಕಾರ ದೇವರಂಥಾ ದೇವರಿಗಿಲ್ಲ
ಕಳೆದುಕೊಳ್ಳೋ ಅಧಿಕಾರ ಮಾತ್ರ ನಮಗೇ ಐತಣ್ಣಾ||

(ನಾಟಕ)