ಏನ ಹೋಗಿ ಏನ ಬಂತೋ ಎಂಥಾ ಕಾಲ ಬಂದೀತಣ್ಣ
ದೇಶದಲ್ಲಿ ವಿಷದ ಗಾಳಿ ಬೀಸೀತಲ್ಲ
ಆಹಾ | ಗುಂಡು ತೇಲಿ ಬೆಂಡು ಮುಳುಗಿ ಹೋದೀತಲ್ಲ
ಬುದ್ಧ ಬಸವ ಎಂಕ ನಾಣಿ ಯಾರ್ಯಾರಿಲ್ಲ
ಇಲ್ಲಿ | ಜಾರಿದಷ್ಟು ದಾರಿ ದೂರ ಬೆಳೆದೀತಲ್ಲ
ಉಘೆ ಉಘೆ ಎಂದೇವೋ ಸ್ವಾಮಿ
ಡಿಂಗ್ ಡಾಂಗೆಂದೇವೋ ||

ಹೆಣ್ಣು ಗಂಡು ಕೈಕಾಲೂರಿ ಕತ್ತೀಹಾಂಗ ಕುಣೀತಾರ
ಬಾಡಿಗೆ ಮುಖ ಧರಿಸ್ಯಾರಲ್ಲ ಬುದ್ಧಿವಂತರ
ಬಾಲ | ಮೂಡೇತಿಲ್ಲೊ ಅಂತ ಮುಟ್ಟಿ ನೋಡ್ಯಾರಲ್ಲ
ಕತ್ತೆ ಬಾಲಕ್ಕೆಲ್ಲಾ ದೇವರ ಕಟ್ಯಾರಲ್ಲಾ
ತಾಜಾ | ಚಳ್ಳೆಹಣ್ಣು ತಿಂದು ತಿಂದು ತೇಗ್ಯಾರಲ್ಲ
ಉಘೆ ಉಘೆ ಎಂದೇವೋ ಸ್ವಾಮಿ
ಡಿಂಗ್ ಡಾಂಗೆಂದೇವೋ ||

(ಸಾಂಬಶಿವ ಪ್ರಹಸನ)