ಈ ಆಳೋ ನನ್ನ ಮಕ್ಕಳಿಗಿ ಏನಾಗೇತಿ?
ಏನಾಗೇತಿ?
ತಿಳಕೋಬೇಕಂತೀನಿ ಯಾರು ತಿಳಸ್ತೀರಿ?
ಯಾರು ತಿಳಸ್ತೀರಿ?
ಅವರ ತಲೀಮ್ಯಾಲೊಂದು ಟೊಪ್ಪಿಗೈತಿ
ಟೊಪ್ಪಿಗೈತಿ
ಅದನ್ನ ಕಂಡರ ನನಗ ಆಗಾಣಿಲ್ಲ ತಗಿ
ಆಗಾಣಿಲ್ಲ ತಗಿ
ಅದನ್ನ ಎಲ್ಲರೂ ನೋಡಲೆಂತ ತಲೀ ಕಡೆ ನೋಡತಾರ
ತಲೀ ಕಡೆ ನೋಡತಾರ
ಮುಂದ ಇದ್ದವರಿಗಿ ಡಿಕ್ಕೀ ಹೊಡೀತಾರ
ಡಿಕ್ಕೀ ಹೊಡೀತಾರ
ಸುಳ್ಳಲ್ಲ ಟೊಪ್ಪಿಗಿ ಚಂದ ಐತೀ ಖರೆ!
ಚಂದ ಐತೀ ಖರೆ!
ಅದರ ಕಂಡವರಿಗೆಲ್ಲಾ ಡಿಕ್ಕೀ ಯಾಕ ಹೊಡೀಬೇಕು?
ಡಿಕ್ಕೀ ಯಾಕ ಹೊಡೀಬೇಕು?

ಹೊಡಿಸಿಕೊಂಡಿವಿ ಡಿಕ್ಕೀ ಹೊಡಿಸಿಕೊಂಡಿವಿ
ಅಥವಾ ಇನ್ನೇನ ಹೊಡಿಸಿಕೊಬೇಕಂತ ನಿಂತೀವಿ?
ತಿಳೀಧಾಂಗ ಆಗೇತಿ ಯಾರು ತಿಳಸ್ತೀರಿ?
ಯಾರು ತಿಳಸ್ತೀರಿ?

(ಜೈಸಿದನಾಯಕಾ)