ಏನು ಹೇಳುತ್ತಿ ಆ ಸೂರ್ಯಾಂದು, ಚಂದ್ರ್ಯಾಂದು?
ಕ್ಯಾಲೆಂಡರಿನ ಎರಡು ಅಚ್ಚಿನ ಮೊಳೆ.
ದೀಡುಕಾಲಿನ ಕುಂಟ ಕಾಲ, ಕಂಪೋಜಿಟರು;
ಇರುಳರಿಯದನಿಮಿಷರು, ಹುಚ್ಚೀ ಬಿಡು.
ತಿರುಗಿ ನೀ ಕೇಳಿದರೆ ಅವರೆಮ್ಮ ಪಹರೆ ಜನ;
ನಮ್ಮ ಮಾಂಸದ ಬೆಳಕು ಏನು ಕಮ್ಮಿ?
ಟುಕ್ಕಿಡುವ ನಾಯಕಿವಿ ಹಿಂಡುತ್ತ ಕೇಳು; ‘ಮಾಂ-
ಸಕೆ ಹಸಿವು ನಿದ್ರೆಯಿವೆ, ನಿನಗೇನಿದೆ?’
೧೯೬೧
Leave A Comment