ಮೊನ್ನೆ ತಾಯಿಯ ಹೆಸರು ಮರೆತೆ
ನಿನ್ನೆ ತಂದೆಯ ಹೆಸರು ಮರೆತೆ
ಈದಿನ ನನ್ನ ಹೇಸರೇ ಮರೆವಾಗಿ
ಹೀಗೆ ಒಂದೊಂದೇ ಮರೆಯುತ್ತ –
ಇಚಿಂಚು ಇಲ್ಲವಾಗುತ್ತ
ಗಾಳಿಯಾಗುತ್ತ ಬಯಲು ತುಂಬಿದಂತೆನಿಸಿ
ನನ್ನ ಕವಿತೆಗೆ ಕಣ್ಣು ಬಂದು
ನನ್ನ ನೋಡಿದಂತೆನಿಸಿ
ನಾಚಿಕೊಂಡೆ.