ಚಕಮಕಿ ಬೆಂಕಿ ಶಾಶ್ವತವಲ್ಲವಯ್ಯಾ.
ಅದ ಹಿಡಿದು ಹತ್ತಿಯಲಿಟ್ಟು ತೊಟ್ಟಿಲ ತೂಗಿ
ಸಾಕಬೇಕು ಮಗುವಿನಂತ.
ಗಾಳಿಯ ಹಾಕಿ ಮಾಡಬೇಕು ಪಾಲನೆ ಪೋಷಣೆ.
ವರುಷದ ಬೆಳವಣಿಗೆಯ ಒಂಡೇ ನಿಮಿಷದಲ್ಲಿ ಬೆಳೆದು
ಎದುರೆದುರೆ ಎದ್ದು ನಿಲ್ಲುತ್ತದೆ ನೋಡು –
ಅಗೊ ಅಗೊ ಈಗ ನೀನೆ ಮಗು ಅವನಿಗೆ!
ಮಗು ನಿನ್ನ ಹಡೆದವನನ್ನ ಚೆನ್ನಾಗಿ
ಅವನ ಮೈಕೈ ಸುಡದ ಹಾಗೆ ನೋಡಿಕೋಪ್ಪಾ!