ಜನತಾ ಮೀನು ಸಂಸ್ಕರಣ ಘಟಕ:

ಮಾರ್ಗ:  ಕೋಟ – ಪಡುಕೆರೆ
ದೂರ: ೨ ಕಿ.ಮೀ.
(೦೮೨೦-೨೫೬೪೪೫೧)

ಅತ್ಯಂತ ದೊಡ್ಡ ಸಾಗರೋತ್ಪನ್ನ ರಪ್ತು ಕೈಗಾರಿಕೆಯಾಗಿದೆ. ಇಲ್ಲಿ ಮೀನಿನಿಂದ ಮೀನೆಣ್ಣೆ, ಮೀನಿನ ಆಹಾರಗಳನ್ನು ತಯಾರಿಸಿ ದೇಶ-ವಿದೇಶಗಳಿಗೆ ಕಳುಹಿಸಲಾಗುತ್ತದೆ. ಅತ್ಯಾಧುನಿಕ ತಮತ್ರಜ್ಞಾನವಿದೆ. ಅತ್ಯಾಧುನಿಕ ಮಾದರಿಗಳಿವೆ. ಸ್ಥಳೀಯ ಸಂಪನ್ಮೂಲ ಮತ್ತು ಕೈಗಾರಿಕೆ ಇದರ ಮೂಲೋದ್ಧೇಶವಾಗಿದೆ.

 

ಮಂಜುಗಡ್ಡೆ ಸ್ತಾವರ:

ಸಮೀಪದ ಪಡುಕೆರೆಯಲ್ಲಿ ಮಂಜುಗಡ್ಡೆ ಸ್ಥಾವರವಿದೆ. ಮಂಜುಗಡ್ಡೆ ತಯಾರಿ ಹಾಗೂ ಶೀತಲೀಕರಣ ಘಟಕಗಳನ್ನು ನೋಡಬಹುದು.

 

ಸಾಲಿಗ್ರಾಮ – ಕಾರಂತ ಸ್ಮಾರಕ

ಮಾರ್ಗ:  ಬ್ರಹ್ಮಾವರ – ಸಾಲಿಗ್ರಾಮ
ದೂರ: ೨೧ ಕಿ.ಮೀ.

ಕಾರಂತ ಕೇಂದ್ರ: ಇಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ನಡೆದಾಡುವ ವಿಶ್ವಕೋಶ ಖ್ಯಾತಿಯ ಕಡಲತಡಿಯ ಭಾರ್ಗವ ದಿ.ಶಿವರಾಮ ಕಾರಂತ ಸ್ಮಾರಕ “ಮಾನಸ”, ವಸ್ತು ಸಂಗ್ರಹಾಲಯ, ಸ್ಮೃತಿ ಚಿತ್ರಶಾಲೆ, ಕಾರಂತ ರಂಗರಥ, ಯಕ್ಷಗಾನ ಕೇಂದ್ರಗಳಿವೆ.

 

ಡಿವೈನ್ ಪಾರ್ಕ:

ಸ್ವಾಮಿ ವಿವೇಕಾನಂದರ ಶ್ರದ್ಧಾ ಕೇಂದ್ರ. ಇಲ್ಲಿ ಯೋಗ, ಏಕಾಗ್ರತೆ, ವಿವೇಕಾನಂದರ ತತ್ತ್ವಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗುತ್ತದೆ. ಇಲ್ಲಿಂದ ವಿವೇಕ ಸಂಪದ ಎಂಬ ಪತ್ರಿಕೆ ಪ್ರಕಟಗೊಳ್ಳುತ್ತಿದೆ.

 

ಶ್ರೀ ಗುರುನರಸಿಂಹ ದೇವಸ್ಥಾನ:

ದೇವಾಲಯದಲ್ಲಿ ನರಸಿಂಹ ಹಾಗೂ ಅಂಜನೇಯ ದೇವಸ್ಥಾನವಿದೆ. ೧೯೧೦ ರಲ್ಲಿ ಸ್ಥಾಪನೆಗೊಂಡು ೮ನೇ ಶತಮಾನದ ಕದಂಬ ವಂಶದ ಮುಯೂರವರ್ಮನ ಮೊಮ್ಮಗ ಲೋಕಾದಿತ್ಯ ರಾಜನ ಕಾಲವಾಗಿರುವ ಇತಿಹಾಸ ಇದೆ.

ದೇವರ ವಿಗ್ರಹವು ಸಂಪೂರ್ಣವಾಗಿ ಸಾಲಿಗ್ರಾಮ ಶಿಲಾಮಯವಾಗಿರುವುದರಿಂದ ಸಾಲಿಗ್ರಾಮ ಹೆಸರು ಬಂದಿರುವ ಹಿನ್ನೆಲೆ ಇದೆ. ವಿಗ್ರಹದ ಒಂದು ಕಡೆ ಆನೆ ಮತ್ತು ಇನ್ನೊಂದು ಕಡೆ ಸಿಂಹದ ಮುಖ ಇದೆ. ನರಸಿಂಹ ಉಗ್ರತೆಯನ್ನು ತಡೆದು ಊರಿನ ರಕ್ಷಣೆಗಾಗಿದ ಇದರ ಎದುರಿನಲ್ಲಿ ಶ್ರೀ ಅಂಜನೇಯನ ದೇವಾಲಯವಿದೆ. ಇದು ಶಿಲಾಮಯವಾಗಿದೆ.

 

ಹಂಗಾರ ಕಟ್ಟೆ – ಶ್ರೀ ಮಠ ಬಾಳ್ಕುದ್ರು

ಮಾರ್ಗ:  ಬ್ರಹ್ಮಾವರ – ಮಾಬುಕಳ – ಹಂಗಾರಕಟ್ಟೆ
ದೂರ: ೩ ಕಿ.ಮೀ.

ಶ್ರೀ ಮಠ ಬಳ್ಕುದ್ರು: ೧೨೦೦ ವರ್ಷಗಳ ಇತಿಹಾಸದ ಶ್ರೀ ಶಂಕರಾಚಾರ್ಯರ ಪಾದ ಸ್ಪರ್ಶವಾದ ಮಠ. ಶ್ರೀ ನರಸಿಂಹ ಸ್ವಾಮಿಗಳು ಮಠಾದೀಶರಾಗಿದ್ದು ವೇದ ಪಾಠಶಾಲೆ ಮತ್ತು ನಿರಂತರ ಅನ್ನದಾನ ನಡೆಯುತ್ತದೆ.

 

ಟೆಬ್ಮಾ ಹಡಗು ಉದ್ಯಮ (೦೮೨೦-೨೫೭೧೯೨೨)

ಮಾರ್ಗ:  ಉಡುಪಿ – ಮಣಿಪಾಲ
ದೂರ : ೬ ಕಿ.ಮೀ.

ಟೆಬ್ಮಾ: ವಿಶ್ವವಿಖ್ಯಾತ ಹಡಗು ನಿರ್ಮಾಣ ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ ನೆದರ್ ಲ್ಯಾಂಡ್ ಮೂಲದ ಬಹುರಾಷ್ಟ್ರೀಯ ಕಂಪೆನಿಯು ವಿದೇಶಿ ಬಂಡಮಾಳ ಹೂಡಿಕೆಯಿಂದ ಹಡಗು ನಿರ್ಮಾಣಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಸಿ.ಎಸ್. ಇಂಡಸ್ಟ್ರೀಯಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಇರುತ್ತದೆ. ಇದು ಹಂಗಾರಕಟ್ಟೆಯಲ್ಲಿದೆ.

 

ಮಣಿಪಾಲ:

ತಾರಾ ವೀಕ್ಷಣಾಲಯ

ಸೌರವ್ಯೂಹದ ಬಗ್ಗೆ ಪರಿಪಕ್ವ ಮಾಹಿತಿಯನ್ನು ತಾರಾ ವೀಕ್ಷಣಾಲಯದಲ್ಲಿ ಪಡೆಯಬಹುದು.

 

ಅನಾಟಮಿ ಮ್ಯೂಸಿಯಂ

ಮಾನವ ದೇಹದ ಅಂಗಾಂಗ ಶಾಸ್ತ್ರದ ಬಗ್ಗೆ ಅಧಿಕೃತವಾದ ಸಚಿತ್ರ ಮಾಹಿತಿ ಅನಾಟಮಿ ಮ್ಯೂಸಿಯಂ ನಲ್ಲಿ ಸಿಗುತ್ತದೆ.

 

ಹಾಲು ಡೈರಿ :

ಹಾಲಿನ ಸಂಸ್ಕರಣಾ ಘಟಕವಾದ ಇದು ಮಕ್ಕಳೆಲ್ಲರೂ ಮೋಡಲೇಬೇಕಾದ ಶೈಕ್ಷಣಿಕ ಸ್ಥಳವಾಗಿದೆ. ಹಾಲಿನ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ನೋಡುವುದು ಮನೋಲ್ಲಾಸ ನೀಡುವ ವಿಷಯ ವಾಗಿದೆ.

 

ಮಣಿಪಾಲ ಪ್ರಿಂಟಿಂಗ್ ಪ್ರೆಸ್ :

ಇಲ್ಲಿ ಉದಯವಾಣಿ, ತುಷಾರ, ತುಂತುರು, ತರಂಗ, ರೂಪತಾರ ಇತ್ಯಾದಿ ದಿನಪತ್ರಿಕೆ ಹಾಗೂ ಮಾಸ ಪತ್ರಿಕೆಗಳನ್ನು ಪ್ರಕಟಿಸಲಾಗುತ್ತದೆ.

 

ಹೆರಿಟಿಜ್ ವಿಲೇಜ್ :

ಮಣಿಪಾಲ ನಗರದಿಂದ ೦.೫ ಕಿ.ಮೀ. ದಕ್ಷಿಣಕ್ಕೆ ನಡೆದರೆ ಈ ಹೆರಿಟೆಜ್ ವಿಲೇಜ್ ಸಿಗುತ್ತದೆ. ಇಲ್ಲಿ ಹಿಂದಿನಕಾಲದ ಪರಂಪರಾಗತವಾದ ಕಟ್ಟಿದ ೧೭ ಮನೆಗಳು ಮರದ ಕಲಾ ಕೃತಿಗಳಿಂದ ಕೂಡಿದ್ದು ಮನಸ್ಸಿಗೆ ಮುದ ನೀಡುತ್ತವೆ.

 

ಜಲಗುಂಡಿ

ಇಂದ್ರಾಳಿ ಗುಳ್ಮೆಯಿಂದ ಪೂರ್ವಕ್ಕೆ ಚಾರಣ ಮಾಡಿದರೆ ಸುಮಾರು ೧೩ ಸಣ್ಣ ಸಣ್ಣ ಜಲಪಾತಗಳು ಕಣ್ಮನ ಸೆಳೆಯುತ್ತವೆ.

ಮಾರ್ಗ: ಉಡುಪಿ – ಮಣಿಪಾಲ – ಲಕ್ಷ್ಮೀಂದ್ರನಗರ ಬಸ್ ನಿಲ್ದಾಣದಿಂದ ದಕ್ಷಿಣಕ್ಕೆ ೨ ಕಿ.ಮೀ. ಪಯಣ.

 

ಕುಂಭಾಶಿ ಆನೆಗಡ್ಡೆ ವಿನಾಯಕ

ಮಾರ್ಗ:  ಕುಂದಾಪುರ-ಕೋಟೆಶ್ವರ-ಕುಂಭಾಶಿ
ದೂರ : ೬ ಕಿ.ಮೀ.

ಗಣಪತಿ ದೇವಾಲಯ ಹಾಗೂ ಹರಿಹರ ದೇವಾಲಯಗಳು. ಕುಂಭಾಸುರ ಎಂಬ ಅಸುರನಿಂದ ಕುಂಭಾಶಿಯಾಗಿತ್ತೆಂದು ಹಾಗೂ ಪಾಂಡವರು ವನವಾಸದ ವೇಳೆ ಇತ್ತ ಆಗಮಿಸಿದರೆಂದು ಹೇಳಲಾಗುತ್ತಿದೆ.