ಕುಂಭಾಶಿ ಹರಿಹರ

ಹರಿ – ಹರ ದೇವಸ್ಥಾನವಿದ್ದು, ತೀರ್ಥ ಸರೋವರದ ಮಧ್ಯದಲ್ಲಿದೆ. ಇದು ಬೇಸಿಗೆಯಲ್ಲಿಯೂ ನೀರು ತುಂಬಿರವುದನ್ನು ಕಾಣಬಹುದು. ಹರಿಹರ ದೇವಾಲಯದ ದಕ್ಷಿಣ ಭಾಗದಲ್ಲಿ ಸೂರ್ಯ ನಾರಾಯಣ ದೇವಾಲಯವಿದೆ.

 

ಕುಂಭಾಶಿ ನಾಗಾಚಲ ಅಯ್ಯಪ್ಪ ಸ್ವಾಮಿ

ಇದು ಎತ್ತರದಲ್ಲಿದ್ದು. ಅಯ್ಯಪ್ಪ ಸ್ವಾಮಿ ದೇವರು ಹಾಗೂ ಪಕ್ಕದಲ್ಲಿ ನವಗ್ರಹ ವಿಗ್ರಹಗಳಿವೆ.

 

ಕುಂದಾಪುರ – ಕುಂದೇಶ್ವರ ತೀರ್ಥ ಸರೋವರ

ಮಾರ್ಗ:  ಕುಂದಾಪುರ
ದೂರ: ೦.೧ ಕಿ.ಮೀ.

ಕುಂದಾಪುರದ ಹೃದಯ ಭಾಗದಲ್ಲಿ ಕುಂದೇಶ್ವರ ದೇವಾಲಯವಿದ್ದು ಆಕರ್ಷಣೀಯ ಕೆರೆಯನ್ನು ಹೊಂದಿದೆ ಶಿವನ ವಿಗ್ರಹ ಹಾಗೂ ನಂದಿ ವಿಗ್ರಹವು ಇದೆ. ಕುಂದರಸನಿಂದಾಗಿ ಕುಂದಾಪುರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

 

ಅಚಲ ಭವನ

ಮಾರ್ಗ:  ಕುಂದಾಪುರ
ದೂರ: ೦.೪ ಕಿ.ಮೀ.

ಇಲ್ಲಿ ಉದ್ಯಾನವಿದೆ. ಪಕ್ಕದಲ್ಲಿ ಓಂ ಶ್ರೀ ಹಾಗೂ ಪ್ರಭಾಕರ ಟೈಲ್ಸ್ ಹೆಂಚಿನ ಕಾರ್ಖಾನೆಗಳಿವೆ. ಇಲ್ಲಿಂದ ದಕ್ಷಣ-ಉತ್ತರ-ಪೂ‌ರ್ವಾಭಿಮುಖವಾಗಿ ಕಿನಾರೆ ಭಾಗದಲ್ಲಿ ರಿಂಗ್‌ರೋಡ್ ಪುರಸಭೆ ವತಿಯಿಂದ ನಿಮಾರ್ಣಗೊಂಡಿದೆ.

 

ಕೋಟೇಶ್ವರ

ಮಾರ್ಗ : ಕುಂದಾಪುರ-ಕೋಟೇಶ್ವರ
ದೂರ: ೪ ಕಿ.ಮೀ.

ಕೋಟೇಶ್ವರ ರಥ ಹಾಗೂ ಕೋಟೇಶ್ವರ ಕರೆಯ ಸುಂದರ ದೃಶ್ಯಾವಳಿ. ಇದು ಹೊಯ್ಸಳ ಮಾದರಿಯಲ್ಲಿ ನಿರ್ಮಿತವಾದ ಕಲ್ಲಿನ ದೇವಾಲಯ. ವರ್ಷಂಪ್ರತಿ ಕೊಡಿ ಹಬ್ಬ ಎಂಬ ರಥೋತ್ಸವ ಜಾತ್ರೆ ನಡೆಯುತ್ತದೆ.

 

ಕೈಗಾರಿಕಾ ವಲಯ

ಮಾರ್ಗ : ಕೋಟೇಶ್ವರ-ಕಟ್ಗೇರಿ
ದೂರ: ೧ ಕಿ.ಮೀ.

 

ನೈಟಿಂಗೇಲ್ ನರ್ಸಿಂಗ್ ಕಾಲೇಜು

ಮಾರ್ಗ : ಕೋಟೇಶ್ವರ-ಕಟ್ಗೇರಿ
ದೂರ: ೧ ಕಿ.ಮೀ.

ಇಲ್ಲಿ ವಿವಿಧ ನರ್ಸಿಂಗ್ ಕೋರ್ಸ್ ಇರುವ ಕಾಲೇಜು ಇದ್ದು. ಉತ್ತಮ ಶಿಕ್ಷಣ ನೀಡಲಾಗುತ್ತದೆ.

 

ಹಂಗಳೂರು

ಮಾರ್ಗ : ಕುಂದಾಪುರ-ಹಂಗಳೂರು
ದೂರ: ೨ ಕಿ.ಮೀ.

ಇಲ್ಲಿ ಬೃಹದಾಕಾರದ ಆಂಜನೇಯ ವಿಗ್ರಹವನ್ನು ವೀಕ್ಷಿಸಬಹುದಾಗಿದೆ. ಇದು ಕರ್ನಾಟಕ ಬ್ಯಾಂಕಿನ ಪಶ್ಚಿಮ ಭಾಗದಲ್ಲಿದೆ.

 

ಬೀಜಾಡಿ – ಕೊಳ

ಮಾರ್ಗ : ಕೋಟೇಶ್ವರ-ಬೀಜಾಡಿ
ದೂರ: ೭ ಕಿ.ಮೀ.

ಬಹು ವಿಸ್ತಾರವಾದ ಕೊಳವಾಗಿದ್ದು ನೀರಿನ ಮೇಲ್ಬಾಗದಲ್ಲಿ ಅಂತರಗಂಗೆ ತೇಲುತ್ತಿರುವುದನ್ನು ಕಾಣಬಹುದು. ವೈಜ್ಞಾನಿಕವಾಗಿ ಜಲಸಸ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

 

ಹಲ್ಸನಾಡು ಮನೆ

ಮಾರ್ಗ : ಕುಂದಾಪುರ-ಮುಲ್ಲಿಕಟ್ಟೆ-ನೂಜಾಡಿ
ದೂರ: ೧೨ ಕಿ.ಮೀ.

ಕುಂದಾಪುರದಿಂದ ರಾಷ್ಟ್ರೀಯ ಹೆದ್ದಾರಿ ತಲ್ಲೂರಿನ ಬಳಿ ಬಲಕ್ಕೆ ೧೨ ಕಿ.ಮೀ. ದೂರದಲ್ಲಿ ಹಲ್ಸನಾಡು ಕುಟುಂಬದ ಪುರಾತನ ಮನೆಯೂ ಆಕರ್ಷಕ ಕೆತ್ತನೆಗಳಿಂದ ಕೂಡಿದ್ದು. ಅನೇಕ ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿದ್ದು. ಪ್ರವಾಸಿಗರ ಆಕಷರ್ಣೀಯ ಕೇಂದ್ರವಾಗಿದೆ.

 

ಗಂಗೊಳ್ಳಿ – ಬಂದರು

ಮಾರ್ಗ : ಕುಂದಾಪುರ-ತ್ರಾಸಿ-ಗಂಗೊಳ್ಳಿ
ದೂರ: ೧೭ ಕಿ.ಮೀ.

ಗಂಗೊಳ್ಳಿ ಬಂದರ್ ವ್ಯಾಪಾರ ಕೇಂದ್ರವಾಗಿದೆ. ಇಲ್ಲೆ ಹತ್ತಿರದಲ್ಲಿ ವ್ಯಕ್ತಿಯೊಬ್ಬರ ಖಾಸಗಿ ಪುರಾತನ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಬ್ರಿಟಿಷ್ ಕಾಲದ ಆಯುಧಗಳು, ಸುಗಂಧ ದ್ರವ್ಯಗಳನ್ನು ನೊಡಬಹುದಾಗಿದೆ. ಮೀನುಗಾರಿಕೆಗೆ ಇದು ಹೆಸರು ವಾಸಿಯಾಗಿದೆ. ಹಿಂದೆ ಇಲ್ಲಿಗೆ ಪೋರ್ಚುಗೀಸರ ಆಗಮನವಾಗಿತ್ತೆಂದು ಹೇಳಲಾಗುತ್ತಿದೆ.

 

ಹೊಸಂಗಡಿ

ವಾರಾಹಿ ಜಲ ವಿದ್ಯುತ್

ಮಾರ್ಗ : ಕುಂದಾಪುರ-ತ್ರಾಸಿ-ಗಂಗೊಳ್ಳಿ
ದೂರ: ೧೭ ಕಿ.ಮೀ.

‌ಇಲ್ಲಿ ವಾರಾಹಿ ನದಿಯ ನೀರನ್ನು ಬಳಸಿ ಜಲ ವಿದ್ಯು‌ತ್‌ ಅನ್ನು ಉತ್ಪಾದಿಸಲಾಗುತ್ತದೆ. ವೀಕ್ಷಣೆಗಾಗಿ ಅನುಮತಿ ಪತ್ರ ಮುಂಗಡವಾಗಿ ಪಡೆಯಬೇಕು.

 

ಸಂಡೂರು ಜಲವಿದ್ಯುತ್

ಮಾರ್ಗ : ಕುಂದಾಪುರ-ಹೊಸಂಗಡಿ
ದೂರ: ೨೭ ಕಿ.ಮೀ.

ವಾರಾಹಿ ನದಿಯ ಜಲ ವಿದ್ಯು‌ತ್‌ ಯೋಜನೆಯ ಹೊರಹರಿವಿನ ನೀರನ್ನು ಬಳಸಿ ಸಣ್ಣ ಪ್ರಮಾಣದ ಜಲವಿದ್ಯುತ್‌ ಅನ್ನು ತಯಾರಿಸುವ ಘಟಕವಾಗಿದೆ.

 

ತೆಕ್ಕಟ್ಟೆ

ಮಾರ್ಗ : ಕುಂದಾಪುರ-ತೆಕ್ಕಟ್ಟೆ
ದೂರ: ೯ ಕಿ.ಮೀ.

ಕುವೆಂಪು ಸರಕಾರಿ ಮಾದರಿ ಪ್ರಾಥಮಿಕ ಶಾಲೆ

ರಾಷ್ಟ್ರಕವಿ ಕುವೆಂಪು ಶತಮಾನೋತ್ಸವ ಸ್ಮಾರಕ ಶಾಲೆ, ಇಲ್ಲಿ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ೪೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು. ಸಿರಾಮಿಕ್ ಗ್ರೀನ್ ಬೊರ್ಡ್‌‌ಗಳನ್ನು ಅಳವಡಿಸಲಾಗಿದೆ. ಸುಸಜ್ಜಿತ ಕೊಠಡಿ, ಶೌಚಾಲಯ, ಸಭಾಭವನ, ರಂಗಮಂದಿರವಿದ್ದು, ಡ್ರಾಯಿಂಗ್, ವೃತ್ತಿ, ಹೊಲಿಗೆ, ಸಂಗೀತ, ಗ್ರಂಥಾಲಯ, ಕಂಪ್ಯೂಟರ್, ಯೋಗ, ಯಕ್ಷಗಾನ ಮುಂತಾದ ಪಾಠ್ಯೇತರ ಚಟುವಟಿಕೆಗಳಿವೆ. ಇದು ರಾಜ್ಯದಲ್ಲೇ ಉತ್ತಮ ಶಾಲೆಯೆಂಬ ಹೆಸರು ಪಡೆದಿದೆ.