ಉಡುಪಿ ಶ್ರೀ ಕೃಷ್ಣ ಕ್ಷೇತ್ರ

ಕೇಂದ್ರ: ಉಡುಪಿ
ಮಾರ್ಗ: ರಥಬೀದಿ
ದೂರ: ೦.೫ ಕಿ.ಮೀ.

ಐತಿಹಾಸಿಕ ಮಹತ್ವವುಳ್ಳ ಧಾರ್ಮಿಕ ಕ್ಷೇತ್ರ ಇದಾಗಿದೆ. ದ್ವೈತ ಮತ ಸ್ಥಾಪಕ ಶ್ರೀ ಮಧ್ವಾಚಾರ್ಯರಿಂದ ಪ್ರತಿಸ್ಥಾಪಿಸಲ್ಪಟ್ಟ ಕ್ಷೇತ್ರ. ಅಷ್ಟ ಮಠಗಳು ಇಲ್ಲಿವೆ (ಕಾಣಿಯೂರ, ಶಿರೂರು, ಪುತ್ತಿಗೆ, ಕೃಷ್ಣಾಪುರ, ಸೋದೆ, ಅದಮಾರು, ಪಲಿಮಾರು. ಪೇಜಾವರ) ಇಲ್ಲಿ ನೋಡತಕ್ಕ ಸ್ಥಳಗಳು: ಅನಂತೇಶ್ವರ ದೇವಸ್ಥಾನ, ಚಂದ್ರಮೌಳೀಶ್ವರ ದೇವಸ್ಥಾನ, ಮಧ್ವ ಸರೋವರ, ಕನಕನ ಕಿಂಡಿ, ಗೀತಾಮಂದಿರ, ನವಗ್ರಹ ದೇವಸ್ಥಾನ, ಗೋಶಾಲೆ, ಕಟ್ಟಿಗೆ ರಥ, ಪ್ರತೀ ೨ ವರ್ಷಕ್ಕೊಮ್ಮೆ ಪರ್ಯಾಯ ಉತ್ಸವ ಹಾಗೂ ವರ್ಷಂಪ್ರತಿ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷವಾಗಿದೆ. ಪ್ರತೀ ದಿನ ಅನ್ನಸಂತರ್ಪಣೆ ಇದೆ.

 

ಅಂಬಾಲಪಾಡಿ

ಕೇಂದ್ರ: ಉಡುಪಿ
ಮಾರ್ಗ: ರಾ.ಹೆ. ಪಶ್ಚಿಮ
ದೂರ: ೦.೯ ಕಿ.ಮೀ.

ಶ್ರೀ ಜನಾರ್ದನ ಮತ್ತು ಮಹಾಂಕಾಳಿ ದೇವಾಲಯವು ಪುರಾತನವಾದುದು. ಇದೀಗ ಶಿಲಾಮಯಮಾಗಿ ಪರಿವರ್ತನೆ ಹೊಂದಿದ್ದು ಪ್ರಸಿದ್ಧಿಯನ್ನು ಪಡೆದಿದೆ. ಪ್ರತೀ ಶುಕ್ರವಾರ ಅನ್ನ ಸಂತರ್ಪಣೆ ಇದೆ. ಮಹಿಳೆಯರು ಬಹಳವಾಗಿ ಆಗಮಿಸುತ್ತಾರೆ. ಪ್ರತೀ ಸಂಕ್ರಾಂತಿಗೆ ದರ್ಶನ ಸೇವೆ ಇದೆ.

 

ಮಲ್ಪೆ

ಮಾರ್ಗ: ಉಡುಪಿ-ಮಲ್ಪೆ
ದೂರ: ೫ ಕಿ.ಮೀ.

ಇದು ದೊಡ್ಡ ಮೀನುಗಾರಿಕಾ ಬಂದರು. ಪಕ್ಕದಲ್ಲೇ ವಡಭಾಂಡೇಶ್ವರ ಸಮುದ್ರ ಕಿನಾರೆ ಮತ್ತು ಬಲರಾಮ ದೇವಾಲಯವಿದೆ. ಟೆಬ್ಮಾ ಹಡಗು ನಿರ್ಮಾಣ ಕೇಂದ್ರವಿದೆ. ಪ್ರವಾಸೋದ್ಯಮ ಕೇಂದ್ರ ಸ್ಥಾನ. ಎಳ್ಳಮವಾಸ್ಯೆ ದಿನ ಲಕ್ಷಾಂತರ ಜನ ಸಮುದ್ರ ಸ್ನಾನ ಮಾಡುತ್ತಾರೆ. ಪ್ರತೀ ದಿನ ಸಂಜೆ ಸೂರ್ಯಾಸ್ತಮಾನ ವೀಕ್ಷಿಸಲು ಬರುವವರ ಸಂಖ್ಯೆ ಅಪಾರ. ವೀನುಗಾರಿಕೆಗೆ ಸಂಬಂಧಿಸಿದ ದೋಣಿ, ಬಲೆ ಇನ್ನಿತರ ಪರಿಕರಗಳನ್ನು ಕಾಣಬಹುದು. ಇದು ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಭಾಗದಲ್ಲಿದೆ. ಉತ್ತಮ ಕಡಲ ತೀರವಿದೆ.

 

ಸೈಂಟ್ ಮೇರಿಸ್ ದ್ವೀಪ ಮಲ್ಪೆ (ತೋನ್ಸೆ ಪಾರ್)

ಮಾರ್ಗ: ಉಡುಪಿ-ಮಲ್ಪೆ
ದೂರ: ೧೦ ಕಿ.ಮೀ.

 

ಟೆಬ್ಮಾ ಶಿಪ್‌ಯಾರ್ಡ, ಮಲ್ಪೆ

ಮಾರ್ಗ: ಉಡುಪಿ-ಮಲ್ಪೆ
ದೂರ: ೫ ಕಿ.ಮೀ.

ಭಾರತದ ಅತಿ ದೊಡ್ಡ ಶಿಪ್‌ಯಾರ್ಡ್ ಕಂಪೆನಿಯಾಗಿದೆ. ನೂರು ಬಗೆಯ ಹಡಗುಗಳನ್ನು ತಯಾರಿಸಿ ರವಾನಿಸಲಾಗುತ್ತದೆ. ಹೂಳೆತ್ತುವ ಯಂತ್ರಗಳನ್ನು ಒದಗಿಸುತ್ತದೆ.

 

ಉದ್ಯಾವರ

ಮಾರ್ಗ: ಉಡುಪಿ-ಉದ್ಯಾವರ
ದೂರ: ೪ ಕಿ.ಮೀ.

ಉದ್ಯಾವರದಲ್ಲಿ ಆಳುಪರ ಕೋಟೆಯ ಅವಶೇಷಗಳನ್ನು ನೋಡಬಹುದು. ಶಂಭುಕಲ್ಲು ದೇವಸ್ಥಾನ ಅತ್ಯಂತ ಪ್ರಾಚೀನ ದೇವಸ್ಥಾನವಾಗಿದಲದು. ಪ್ರಾಚೀನ ವಾಸ್ತು ಶಿಲ್ಪಕ್ಕೆ ಪ್ರಸಿದ್ಧವಾಗಿದೆ. ಹತ್ತಿರದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜು ಇದೆ. ಅನೇಕ ಔಷಧೀಯ ಸಸ್ಯಗಳನ್ನು ಕಾಣಬಹುದು. ಸಂಧ್ಯಾ ವೀಕ್ಷಣೆಗೂ ಅವಕಾಶವಿದೆ.

 

ಕಾಪು ದೀಪಸ್ತಂಭ

ಮಾರ್ಗ: ಉಡುಪಿ-ಕಟಪಾಡಿ-ಕಾಪು
ದೂರ: ೧೨ ಕಿ.ಮೀ.

ಶತಮಾನದಷ್ಟು ಹಳೆಯ ಕಾಪು ದೀಪಸ್ತಂಭ ಕಡಲ ತೀರಕ್ಕೆ ವಿಶೇಷ ಮೆರಗು. ಹೆಬ್ಬಂಡೆಗಳಿಗೆ ಅಬ್ಬರಿಸುವ ಕಡಲ ಅಲೆಗಳ ಮೋಹಕ ದೃಶ್ಯ ರುದ್ರ ರಮಣೀಯವಾಗಿದೆ. ಸೂರ್ಯಾಸ್ಥ ನೋಡಲು ಸಾವಿರಾರು ಜನ ಬರುತ್ತಾರೆ. ಕಾಪು ಪೇಟೆಯಲ್ಲಿರುವ ಮಾರಿಯಮ್ಮನ ಗುಡಿ ಬಹಳ ಪ್ರಸಿದ್ಧಿ ಪಡೆದಿರುತ್ತದೆ. ಇದರಲ್ಲಿ ಹಳೆ ಮಾರಿ ಗುಡಿ ಮತ್ತು ಹೊಸ ಮಾರಿ ಗುಡಿ ಇದ್ದು, ವರ್ಷಂಪ್ರತಿ ಮಾರಿ ಜಾತ್ತೆ ಜರಗುತ್ತದೆ.

 

ಕುಂಜಾರು ಗಿರಿ

ಮಾರ್ಗ: ಉಡುಪಿ-ಕಟಪಾಡಿ-ಶಿರ್ವ
ದೂರ: ೧೨ ಕಿ.ಮೀ.

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಬೆಟ್ಟದ ಮೇಲಿದೆ. ಆಧ್ಯಾತ್ಮಿಕ ಹಾಗೂ ಪರಿಸರ ಪ್ರೇಮಿಗಳಿಗೆ / ಚಾರಣ ಪ್ರಿಯರಿಗೆ ಇದು ಸಂತಸ ನೀಡುತ್ತದೆ. ಪಕ್ಕದ ಬೆಟ್ಟದ ಮೇಲೆ ಶ್ರೀ ಪರಶುರಾಮ ದೇವಸ್ಥಾನವಿದೆ. ಇಲ್ಲಿ ಆಚಾರ್ಯ ಮಧ್ವರಿಂದ ನಿರ್ಮಿತಗೊಂಡ ಬಾಣ, ಪರಶು, ಗದಾ ಮತ್ತು ಚಕ್ರತೀರ್ಥಗಳನ್ನು ನೋಡಲು ಸಾಧ್ಯ. ಜಗದ್ಗುರು ಶ್ರೀ ಮಧ್ವಾಚಾರ್ಯರ ಅವತಾರ ಕ್ಷೇತ್ರವಾದ ಪಾಜಕದಲ್ಲಿ ವಿಮಾನಗಿರಿ ಎನಿಸಿರುವ ದುರ್ಗಾ ಬೆಟ್ಟದಲ್ಲಿ ಶ್ರೀ ಪರಶುರಾಮರು

 

ಪಾಜಕ

ಶ್ರೀ ದುರ್ಗೆಯನ್ನು ಪ್ರತಿಷ್ಠಾಪಿಸಿದರು ಎಂಬುದು ನೆಹ್ಯ. ಪೂರ್ವ ದಿಕ್ಕಿನಲ್ಲಿ ಜಗದ್ಗುರು ಮಧ್ವರು ಅವತರಿಸಿದ ಮತ್ತು ಬಾಲ್ಯವನ್ನು ಕಳೆದಿರುವ ಪಾಜಕ ಕ್ಷೇತ್ರ ಮೆರೆಯುತ್ತಿದೆ. ಇಲ್ಲಿ ಶ್ರೀ ಅನಂತ ಪದ್ಮನಾಭ ದೇವಸ್ಥಾನವಿದೆ. ಕುಂಜಾರುಗಿರಿಯ ದುರ್ಗಾ ಬೆಟ್ಟವು ಸಮುದ್ರದಿಂದ ಸುಮಾರು ೧೭೫ ಅಡಿ ಎತ್ತರದಲ್ಲಿದೆ. ಆದ್ದರಿಂದ ದುರ್ಗೆಯ ಸಂದರ್ಶನಕ್ಕೆ ಬರುವವರು ಸುಮಾರು ೨೫೭ ಮೆಟ್ಟಿಲುಗಳನ್ನು ಏರಿ ಬರಬೇಕಾಗಿದೆ. ಬೆಟ್ಟದ ನಾಲ್ಕು ತುದಿಯಲ್ಲಿ ಮೇಲೇರಲು ದಾರಿಗಳಿದ್ದರೂ ದಕ್ಷಿಣದಲ್ಲಿ ಕಾಲ್ನಡಿಗೆಯಿಂದ ಪಶ್ಚಿಮದಲ್ಲಿ ವಾಹನದ ಮೂಲಕ ಬರಲು ಅವಕಾಶವಿದೆ.

 

ನಾಗಾರ್ಜುನ

ಮಾರ್ಗ: ಉಡುಪಿ-ಪಡುಬಿದ್ರೆ-ಕಾರ್ಕಳ
ದೂರ: ೨೮ ಕಿ.ಮೀ.

ಪಡುಬಿದ್ರೆಯಿಂದ ೫ ಕಿ.ಮೀ. ದೂರದ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ ರೂಪಿತಗೊಂಡಿದೆ. ಇದು ಈ ಭಾಗದ ಮಿದ್ಯುತ್ ಸಮಸ್ಯೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ವೀಕ್ಷಿಸಬಹುದಾದ ಘಟಕ. ಈ ಬಗ್ಗೆ ಮುಂಚಿತವಾಗಿ ಅನುಮತಿ ಪತ್ರ ಪಡೆಯ ಬೇಕಾಗಿರುತ್ತದೆ.

 

ಸುಜ್ಲಾನ್

ಮಾರ್ಗ: ಉಡುಪಿ-ಪಡುಬಿದ್ರೆ-ಕಾರ್ಕಳ
ದೂರ: ೨೩ ಕಿ.ಮೀ.

ಹೆಜಮಾಡಿ ಸಮೀಪ ಪವನ ವಿದ್ಯುತ್ ತಯಾರಿಕಾ ಘಟಕ ಸುಜ್ಲಾನ್ ಇದೆ. ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ವೀಕ್ಷಿಸಬಹುದಾದ ಘಟಕ. ಈ ಬಗ್ಗೆ ಮುಂಚಿತವಾಗಿದ ಅನುಮತಿ ಪತ್ರ ಪಡೆಯಬೇಕಾಗಿರುತ್ತದೆ. ಪಡುಬಿದ್ರಿಯಲ್ಲಿ ಪ್ರಾಚೀನ ಗಣಪತಿ ದೇವಸ್ಥಾನವಿದೆ.