ಮಲ್ಯಾಡಿ ಪಕ್ಷಿಧಾಮ

ಮಾರ್ಗ : ಕುಂದಾಪುರ-ತೆಕ್ಕಟ್ಟೆ-ಮಲ್ಯಾಡಿ
ದೂರ: ೧೦ ಕಿ.ಮೀ.

ವಿವಿಧ ಜಾತಿಯ, ವಿವಿಧ ಬಣ್ಣದ ದೇಶಗಳ ಹಲವು ಬಗೆಯ ಪಕ್ಷಿಗಳನ್ನು ಕಾಣಬಹುದು. ಈ ಪಕ್ಷಿಧಾಮದಲ್ಲಿ ದೊಡ್ಡ ಬೆಳ್ಳಕ್ಕಿ, ಮಧ್ಯಮ ಬೆಳ್ಳಕ್ಕಿ, ಕೊಳದ ಬಕ, ಬತ್ತಕ್ಕಿ, ಹಸುಬೆಳ್ಳಕ್ಕಿ, ಜಾನುಬೆಳ್ಳಕ್ಕಿ, ಜೌಗು ಹಕ್ಕಿ, ರಾತ್ರಿ ಬಕ, ಬಂಡೆ ಬಕ, ಬೂದು ಬಕ, ನೀರು ಕಾಗೆ, ಜೌಡಮೂಲಿ ಗಿಡುಗ, ಬಿಳಿ ತಲೆ ಗಿಡುಗ, ಕತ್ತರಿ ಬಾಲದ ಕಾಜಾಣ, ತಂತು ಬಾಲದ ಕಾಜಾಣ, ನೀಲಿ ಬಣ್ಣದ ಮಿಂಚುಳ್ಳಿ, ಬಿಳಿ ಎದೆ ಮಿಂಚುಳ್ಳಿ, ಸೀಳು ಕೂಗಿನ ನೀರು ಗುಟುಕ ಶಿಖೆಬಾತು, ತುರಾಯಿ ನೆಲಗುಬ್ಬಿ, ಕೆನ್ನೀಲಿ ನಾಮ ಕೋಳಿ, ಗೊರವಂಕ, ಗುಳುಮುಳಕ್, ಬಿಳಿಬಾತು, ಕಪ್ಪು ಬಿಳಿ ಸಿಪೆಲ್, ಕೆಂಪು ದ್ವಾರದ ಪಿಕಳಾರ, ಕೆಂಪು ಕಪಾಳದ ಪಿಕಳಾರ ಸೇರಿದಂತೆ ಹಲವು ಬಗೆಯ ಪಕ್ಷಿಗಳಿವೆ. ಕುಂದಾಪುರದ ಫ್ಲೋರಾ & ಫೌನಾ ಕ್ಲಬ್ ಇವುಗಳನ್ನು ದಾಖಲಿಸಿದೆ. ಪಕ್ಷಿ ಪ್ರಿಯರು ಪರಿವೀಕ್ಷಣೆಗಾಗಿ ಆಗಮಿಸುತ್ತಾರೆ.

 

ಜಪ್ತಿ – ಪುರಸಭಾ ಕುಡಿಯುವ ಯೋಜನಾಗಾರ

ಮಾರ್ಗ : ಕುಂದಾಪುರ-ಬಸ್ರೂರು-ಜಪ್ತಿ
ದೂರ: ೧೨ ಕಿ.ಮೀ.


ಕುಡ್ಸೆಂಪ್ ಯೋಜನೆಯಡಿ ಕುಂದಾಪುರ ಪುಸಭೆಗೆ ನೀರೆತ್ತುವ ಪಂಪ್ ಮೂಲಕ ನೀರನ್ನು ಶುದ್ಧೀಕರಿಸಿ ಉತ್ತಮ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಯಾಗಿದೆ. ಇದರ ಮಾದರಿ ಹಾಗೂ ವೈಜ್ಞಾನಿಕ ತಂತ್ರಜ್ಞಾನಗಳನ್ನು ನೋಡಿ ಆನಂದಿಸಬಹುದಾಗಿದೆ.

 

ವಕ್ವಾಡಿ – ಶ್ರೀ ವಾದಿರಾಜ ಮಠ ಹೂವಿನ ಕೆರೆ

ಮಾರ್ಗ : ಕುಂದಾಪುರ-ಕೋಟೇಶ್ವರ-ವಕ್ವಾಡಿ
ದೂರ: ೫ ಕಿ.ಮೀ.

ಶ್ರೀ ವಾದಿರಾಜ ಗುರು ಸಾರ್ವಭೌಮರ ಜನ್ಮ ಸ್ಥಳ ಹಾಗೂ ದೇವಾಲಯವಿದೆ. ಪ್ರಕೃತಿದತ್ತವಾದ ಸ್ಥಳವಾಗಿದೆ.

 

ಗುಡ್ಡಟ್ಟು – ವಿನಾಯಕ

ಮಾರ್ಗ : ಕುಂದಾಪುರ-ಕೋಟೇಶ್ವರ-ಹುಣ್ಸೆಮಕ್ಕಿ
ದೂರ: ೧೩ ಕಿ.ಮೀ.

ಹುಣ್ಸೆಮಕ್ಕಿ ಸಮೀಪ, ಮುಂದೆ ದಕ್ಷಿಣಾಭಿಮುಖವಾಗಿ ಶಿರಿಯಾರದತ್ತ ಹಾದುಹೋಗುವ ಈ ರಸ್ತೆಯಲ್ಲಿ ಕಾಣಸಿಗುವುದು. ಬಾವಿಯಾಕಾರದಲ್ಲಿ ತುಂಬಿದ ನೀರಿನ ತಳಭಾಗದಲ್ಲಿ ಗಣಪತಿ ವಿಗ್ರಹವಿದೆ. ಇಲ್ಲಿ ನಡೆಯುವ “ಐರಕೊಡ” ನೀರಿನ ಸೇವೆ ಪವಿತ್ರವಾಗಿದೆ. ನೀರು ಹೊರ ತೆಗೆದ ನಂತರ ಅಷ್ಟೇ ಪ್ರಮಾಣದಲ್ಲಿ ನೀರು ಬಾವಿಯಲ್ಲಿ ತುಂಬಿರುತ್ತದೆ.

 

ಬಸ್ರೂರು – ಮಹಾಲಿಂಗೇಶ್ವರ

ಮಾರ್ಗ : ಕುಂದಾಪುರ-ಬಸ್ರೂರು

ದೂರ: ೬ ಕಿ.ಮೀ.

ಬಸ್ರೂರು ಡಚ್ಚರ ವ್ಯಾಪಾರ ಕೇಂದ್ರ. ಇಲ್ಲಿ ೭ ಕೇರಿಗಳು ೭ ಕೆರೆಗಳು ಹಾಗೂ ಮಹಾಲಿಂಗೇಶ್ವರ ದೇವಸ್ಥಾನವಿದೆ. ಸನಿಹದಲ್ಲಿ ಶಾರದ ಕಾಲೇಜು ಇದೆ. ಹಿಂದೆ ಕರ್ನಾಟಕ ಅರಸರ ಅಧೀನದಲ್ಲಿದ್ದ ರೇವು ಪಟ್ಟಣ ಎಂದು ಹೇಳಲಾಗುತ್ತದೆ.

 

ಕೊಲ್ಲೂರು -ಕೊಲ್ಲೂರು ಮೂಕಾಂಬಿಕ ದೇವಸ್ಥಾನ

ಮಾರ್ಗ : ಉಡುಪಿ – ಕುಂದಾಪುರ
ದೂರ: ೭೬ ಕಿ.ಮೀ.

ಶಂಕರಾಚಾರ್ಯರಿಂದ ಸ್ಥಾಪಿಸಲಾದ ಶಕ್ತಿ ಪೀಠಗಳಲ್ಲಿ ಒಂದಾದ ಮೂಕಾಂಬಿಕ ದೇವಸ್ಥಾನ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಹೊಂದಿದೆ. ಕೇರಳ, ತಮಿಳು ನಾಡು, ಆಂದ್ರ ಹಾಗೂ ದೇಶದ ವಿವಿಧ ಭಾಗಗಳಿಂದ ದಿನವೂ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸಿ, ಸೌರ್ಪಣಿಕ ನದಿಯಲ್ಲಿ ಸ್ನಾನ ಮಾಡಿ ದೇವಿಯ ದರ್ಶನ ಮಾಡುತ್ತಾರೆ. ದಿನವೂ ಇಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ. ಶಂಕರಾಚಾರ್ಯರ ಶಿಲಾಮೂರ್ತಿ ಹಾಗೂ ಶ್ರೀ ಚಕ್ರಪೀಠ ನೋಡಲು ಸುಂದರ. ಈ ದೇವಾಲಯಕ್ಕೆ ಅಪಾರವಾದ ಆಭರಣ ಸಂಪದವನ್ನು ಕಾಣಿಕೆಯಾಗಿ ನೀಡುತ್ತಾರೆ.

 

ಕೊಲ್ಲೂರು – ಅರಿಸಿನ ಗುಂಡಿ

ಮಾರ್ಗ : ಉಡುಪಿ-ಕುಂದಾಪುರ-ಬೈಂದೂರು
ದೂರ: ೮೪ ಕಿ.ಮೀ.

ಇದು ಕೊಲ್ಲೂರು ಮೂಕಾಂಬಿಕ ಅಭಯಾರಣ್ಯದ ಮಧ್ಯದಲ್ಲಿ ಬಹಳ ಸುಂದರವಾಗಿ ಕಾಣುತ್ತದೆ. ಕಾಡಿನ ಮಧ್ಯೆ ಹಾದು ಹೋಗಬೇಕಾಗಿದೆ. ಇಲ್ಲಿಯ ವಿಶೇಷವೆಂದರೆ ಮಧ್ಯಾಹ್ನ ೧೨ ಗಂಟೆಗೆ ಇಡೀ ಪಾಲ್ಸ್ ಅರಸಿನ ಬಣ್ಣ ಪಡೆಯುತ್ತದೆ. ಇದು ಎಲ್ಲಾ ಕಾಲದಲ್ಲೂ ಹೀಗೆ ಇರುತ್ತದೆ ಎನ್ನಲಾಗಿದೆ.

 

ಕೊಲ್ಲೂರು – ಬೆಳ್ಕಲ್ ತೀರ್ಥ

ಮಾರ್ಗ : ಕುಂದಾಪುರ-ಬೈಂದೂರು
ದೂರ: ೮೭ ಕಿ.ಮೀ.

ಯಾವುದೇ ವಾಹನ ಸಂಚಾರವಿಲ್ಲ. ವರ್ಷವಿಡೀ ನೀರು ಬೀಳುತ್ತದೆ. ಇದಕ್ಕೆ ಹೋವಿಂದ ತೀರ್ಥ ಎಂದೂ ಕರೆಯುತ್ತಾರೆ. ಎಳ್ಳು ಅಮವಾಸ್ಯೆ ದಿನ ವರ್ಷಕ್ಕೊಮ್ಮೆ ಪೂಜೆ ನಡೆಯುತ್ತದೆ.

 

ಕೊಲ್ಲೂರು – ಆನೆ ಝರಿ

ಮಾರ್ಗ : ಕುಂದಾಪುರ-ಕೊಲ್ಲೂರು
ದೂರ: ೮೫ ಕಿ.ಮೀ.

ಕೊಳದ ರೂಪದಲ್ಲಿ ಕಾಣುವ ಈ ತಾಣ ಹಿಂದೆ ಮೂಕಾಂಬಿಕ ಸನ್ನಿಧಿಯಲ್ಲಿ ಆನೆ ಪೋಷಿಸಲು ಆರ್ಥಿಕ ಬವಣೆ ಉಂಟಾಗಿ ಆನೆಯಲ್ಲಿ ಮೋರೆಯಿಟ್ಟಾಗ ಸನ್ನಿಧಿಯ ಆನೆ ಕಾಡಿನ ಮಧ್ಯೆ ಹೋಗಿ ಪ್ರಾಣ ಬಿಟ್ಟಿತು ಎಂಬ ಪ್ರತೀತಿ ಇದೆ. ಇದರೆಂದಾಗಿದಯೆ ಇದು ಆನೆ ಝರಿ. ಇಲ್ಲಿ ರೋಪ್ ವೇ, ದೋಣಿ ವಿಹಾರ, ಔಷಧಿ ಗಿಡಗಳಿವೆ.

 

ಬೈಂದೂರು ಸೇನೇಶ್ವರ ದೇವಾಲಯ

ಮಾರ್ಗ : ಉಡುಪಿ-ಕುಂದಾಪುರ-ಬೈಂದೂರು
ದೂರ: ೭೦ ಕಿ.ಮೀ.

ಬಿಂದು ಮುನಿಯ ಹೆಸರಿನಿಂದಾಗಿ ಬಿಂದುಪುರವಾಗಿ ಬಳಿಕ ಬೈಂದೂರು ಎಂಬ ಹೆಸರು ಬಂದಿದೆ. ಇದು ಹಳೇಬೀಡು ಮಾದರಿಯ ಚಾಲುಕ್ಯ ಶೈಲಿಯ ಶಿಲ್ಪ ಕಲೆಯುಳ್ಳ ದೇವಾಲಯ. ಇಲ್ಲಿ ನಂದಿ ವಿಗ್ರಹವಿದೆ. ಇದು ಪುರಾತನ ಶೈಲಿಯ ದೇವಾಲಯ.

 

ಬೈಂದೂರು – ಸೋಮೇಶ್ವರ ಕಡಲ ತೀರ, ಒತ್ತಿನೆಣೆ

ಮಾರ್ಗ : ಉಡುಪಿ-ಕುಂದಾಪುರ-ಬೈಂದೂರು-ಶಿರೂರು
ದೂರ: ೭೪ ಕಿ.ಮೀ.

ಬೈಂದೂರಿನಿಂದ ಮುಂದೆ ಹೋದರೆ ಕರಾವಳಿ ತೀರದಲ್ಲಿ ನದಿ ಮತ್ತು ಸಮುದ್ರ ಸೇರುವ ಅಳಿವೆ ಇದೆ. ಇದು ಇತಿಹಾಸ ಪ್ರಸಿದ್ಧ ಸೋಮೇಶ್ವರ ಸನ್ನದಿ ಇದೆ. ವಿಶಾಲವಾದ ಸಮುದ್ರ ತೀರ ಪಶ್ಚಿಮ ಘಟ್ಟದ ಪಾದ ತೊಳೆಯುವ ಅರಬ್ಬೀ ಸಮುದ್ರ, ದೇವಸ್ಥನದ ಆವರಣದಲ್ಲಿ ಕಾಶೀತೀರ್ಥ/ನಾಗತೀರ್ಥ ಇದೆ.

ಸುತ್ತಲೂ ಉಪ್ಪು ನೀರು ಇರುವಾಗ ಮಧ್ಯದಲ್ಲಿ ಮಾತ್ರ ಸಿಹಿ ನೀರು ಸಿಗುವುದು ಇಲ್ಲಿನ ವಿಶೇಷ. ಇಲ್ಲಿಂದ ಮೇಲೆ ಒತ್ತನೆಣೆ, ಕ್ಷಿತಿಜಧಾಮಕ್ಕೆ ಹೋಗಲು ಸುಂದರವಾದ ಚಿತ್ರದಲ್ಲಿ ಮೆಟ್ಟಿಲುಗಳನ್ನು ಮಾಡಲಾಗಿದ್ದು ಇಲ್ಲಿ ಪ್ರಕೃತಿ ವೀಕ್ಷಣೆ ಹಾಗೂ ಸೂರ್ಯಾಸ್ತಮಾನ ನೋಡಬಹುದು. ಚಾರಣ ಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಬಹು ಸುಂದರವಾಗಿದೆ. ಒತ್ತಿನೆಣೆ ಸಮೀಪ ಮ್ಯಾಂಗನೀಸ್/ಬಾಕ್ಸೈಟ್ ಗನಿ ಭೂಭಾಗ ನೋಡಬಹುದು.

 

ಯಡ್ತರೆ – ಅಬ್ಬೀಫಾಲ್ಸ್

ಮಾರ್ಗ: ಉಡುಪಿ- ಕುಂದಾಪುರ- ಬೈಂದೂರು- ತೂದಳ್ಳಿ
ದೂರ: ೯೫ ಕಿ.ಮೀ.


ಬೈಂದೂರಿನ ಯಡ್ತರೆ ಗ್ರಾಮದಲ್ಲಿರುವ ತೂದಳ್ಳಿ ಹತ್ತಿರವಿರುವ ಫಾಲ್ಸ್. ವರ್ಷವಿಡೀ ಬಹಳ ಸುಂದರವಾಗಿ ನೀರನ್ನು ದುಮುಕಿಸುತ್ತದೆ. ಈ ಫಾಲ್ಸ್ ಅನ್ನು ಬೇಸಿಗೆಯಲ್ಲಿ ಮಕ್ಕಳು ಹಾಗೂ ಹಿರಿಯರು ಸ್ನಾನ ಮಾಡುವುದಲ್ಲದೇ ಸುಂದರವಾಗಿ ವೀಕ್ಷಿಸಲು ಅನುಕೂಲವಾಗುತ್ತಿದೆ.

 

ಹಟ್ಟಿಯಂಗಡಿ – ವಿನಾಯಕ

ಮಾರ್ಗ : ಕುಂದಾಪುರ – ತಲ್ಲೂರು
ದೂರ: ೧೨ ಕಿ.ಮೀ.

ಸಂಕಷ್ಟಿಯ ದಿನದಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜಗತ್ಪ್ರಸಿದ್ಧ ದೇವಾಲಯಗಳಲ್ಲಿ ಇದು ಒಂದಾಗಿದೆ. ಇದು ಸಂಪೂರ್ಣ ಶಿಲಾಮಯವಾಗಿದೆ. ದಿನವು ಉಚಿತ ಊಟದ ವ್ಯವಸ್ಥೆ ಇರುತ್ತದೆ. ಇತಿಹಾಸ ಪ್ರಸಿದ್ಧ ಅವಶೇಷಗಳಿವೆ.

 

ಕಮಲ ಶಿಲೆ – ಬ್ರಾಹ್ಮಿ ದುರ್ಗಾ ಹಾಗೂ ಗುಹಾಲಯ

ಮಾರ್ಗ : ಕುಂದಾಪುರ-ಸಿದ್ಧಾಪುರ -ಕಮಲ ಶಿಲೆ
ದೂರ: ೩೦ ಕಿ.ಮೀ.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇದು ಪುರಾತನ ಶೈಲಿಯದ್ದಾಗಿದೆ. ಇಲ್ಲಿನ ಮತ್ತೊಂದು ವಿಶೇಷತೆಯೆಂದರೆ ಗುಹಾಲಯವಿದೆ. ಈ ಗುಹೆಗೆ ಪೂಜೆ ನಡೆಯುತ್ತದೆ. ಅನ್ನ ಸಂತರ್ಪಣೆ ವ್ಯವಸ್ಥೆ ಇದೆ.