ಟಿಬೇಟಿಯನ್ ಕಾಲೋನಿ

ದೂರ ಎಷ್ಟು?
ತಾಲೂಕು : ಮುಂಡಗೋಡು
ತಾಲೂಕಿನಿಂದ : ೬ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೭೪ ಕಿ.ಮೀ

 

ಬಾಚಣಕಿ ಜಲಾಶಯ

ಪ್ರಶಾಂತ ವಿಶಾಲ ವಾತಾವರಣವಿರುವುದರಿಂದ ಜನಾಕರ್ಷಕವಾಗಿದೆ.ಈ ತಾಲೂಕಿನ ಜನ ಜೀವನ ಸ್ವಲ್ಪ ಪ್ರಮಾಣದಲ್ಲಿ ಟಿಬೇಟಿಯನ್ನರ ಜನ ಜೀವನದ ಪ್ರಭಾವಕ್ಕೆ ಒಳಗಾಗಿದೆ. ಇದು ಮುಂಡಗೋಡ ತಾಲೂಕಿನಲ್ಲಿ ವಿಶೇಷ ಪ್ರೇಕ್ಷಣೀಯ ಸ್ಥಳ.

೧೯೬೧ರಲ್ಲಿ ಚೀನಾದ ಟಿಬೇಟನಿಂದ ಬಂದ ಜನರು ಸುಮಾರು ೯ ಕ್ಯಾಂಪ್‌ಗಳಲ್ಲಿ ವಾಸವಾಗಿದ್ದಾರೆ. ಬೌದ್ಧರ ನಳಂದಾ ಮಾದರಿಯ ಅಧ್ಯಯನ ಕೇಂದ್ರ ಇಲ್ಲಿದೆ. ಪ್ರಾರ್ಥನೆ, ಜ್ಞಾನಗೋಷ್ಠಿ, ಜ್ಞಾನಾರ್ಜನೆ, ಅಧ್ಯಯನಗಳು ಇಲ್ಲಿ ಸದಾ ನಡೆಯುತ್ತಿರುತ್ತವೆ.

 

ಚೌಡಳ್ಳಿಯ ಆಲದಮರ

 

ಚೌಡಳ್ಳಿಯ ಆಲದಮರ

ಚೌಡಳ್ಳಿಯ ಆಲದಮರ ಸುಮಾರು ೧ ಎಕರೆ ಪ್ರದೇಶವನ್ನು ಆವರಿಸಿದೆ.  ತಾಲೂಕಿನಲ್ಲಿ ಒಂದು ಎಕರೆ ವಿಸ್ತಾರವುಳ್ಳ ಅತ್ಯಂತ ಪುರಾತನ, ಇತಿಹಾಸ ಇರುವ ಈ ಆಲದ ಮರ ಪ್ರವಾಸಿಗರಿಗೆ ಕೈ ಬೀಸಿ ಕರೆಯುತ್ತದೆ.  ಇದೊಂದು ವಿಶ್ರಾಂತಿ ಧಾಮ ಆಗಿದೆ.

 

ತಾಲೂಕಿನ ಇತರ ಪ್ರವಾಸೀ ಸ್ಥಳಗಳು :

ಡೊಳ್ಳು ಕುಣಿತ

ಚಿಗಳ್ಳಿ ದೀಪನಾಥೇಶ್ವರ, ಖಾದಲಿಂಗ ದೇವಾಲಯ ಮುಂಡಗೋಡ, ಆಂಜನೇಯ ದೇವಾಲಯ, ರಾಮಲಿಂಗೇಶ್ವರ ದೇವಾಲಯ ಬೆಡಸಗಾಂವ, ಮಳಗಿ ಜಲಾಶಯ, ಬಾಚಣಕಿ ಜಲಾಶಯ, ಮಳಗಿ ಗ್ರಾಮ ದೇವಾಲಯ.

 

ಹಳಿಯಾಳ :

ದೂರ ಎಷ್ಟು?
ತಾಲೂಕು : ಹಳಿಯಾಳ
ತಾಲೂಕಿನಿಂದ : ೧.೫ ಕಿ.ಮೀ
ಜಿಲ್ಲಾ ಕೇಂದ್ರದಿಂದ :  ೧೩೦ ಕಿ.ಮೀ.

 

ಹಳಿಯಾಳ ಕೋಟೆ

ಹಳಿಯಾಳ ಪಟ್ಟಣದ ಹತ್ತಿರ ಶಿವಾಜಿ ಮಹಾರಾಜನ ಕಾಲದ ಇತಿಹಾಸವನ್ನು ಸಾರುವ ಈ ಕೋಟೆ ಇದೆ. ಇದು ಐತಿಹಾಸಿಕ ಸ್ಮಾರಕವಾಗಿದೆ. ಆ ಕಾಲದ ರಾಜರ ಆಡಳಿತಾವಧಿಯ ಅನೇಕ ಕುರುಹುಗಳನ್ನು ಈಗಲೂ ಇಲ್ಲಿ ಕಾಣಬಹುದು.

 

ಸೈಕ್ಸ್ ಪಾಯಿಂಟ್ :

ದೂರ ಎಷ್ಟು?
ತಾಲೂಕು : ಹಳಿಯಾಳ
ತಾಲೂಕಿನಿಂದ : ೪೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ : ೧೨೦ ಕಿ.ಮೀ.

ಬ್ರಿಟಿಷ್ ಅಧಿಕಾರಿಯಾಗಿದ್ದ ಸೈಕ್ಸನಿಂದಾಗಿ ಈ ಸ್ಥಳಕ್ಕೆ ಆ ಹೆಸರು ಬಂದಿರುವುದಾಗಿ ತಿಳಿದುಬರುತ್ತದೆ. ಇಲ್ಲಿಂದ ತಳುಕು ಬಳುಕಿನೊಂದಿಗೆ ಹರಿಯುವ ಕಾಳಿ ಕಣಿವೆಯ ರಮಣೀಯ ದೃಶ್ಯವನ್ನು ಸವಿಯಬಹುದಾಗಿದೆ.  ಕಣಿವೆಯ ಬುಡದಲ್ಲಿರುವ ನಾಗಝರಿ ವಿದ್ಯುದಾಗಾರವನ್ನೂ ಕೂಡ ನೋಡಬಹುದು.

 

ದಾಂಡೇಲಿ

ದೂರ ಎಷ್ಟು?
ತಾಲೂಕು : ಹಳಿಯಾಳ
ತಾಲೂಕಿನಿಂದ :  ೨೫ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೦೫ ಕಿ.ಮೀ

ದಾಂಡೇಲಿ ಅಭಯಾರಣ್ಯವು ೧೯೫೫ರಲ್ಲಿ ಸ್ಥಾಪನೆ ಆಯಿತು. ತನ್ನ ಪ್ರಾಕೃತಿಕ ಸೌಂದರ್ಯದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಒಂದು ಅಪೂರ್ವ ಸೌಂದರ್ಯಧಾಮ ಎಂಬ ಹೆಸರು ಪಡೆದಿದೆ. ಈ ಅಭಯಾರಣ್ಯವು ವನ್ಯಮೃಗಗಳ ರಕ್ಷಣಾ ಕೇಂದ್ರವಾಗಿದೆ.

ಇಲ್ಲಿನ ನೈಸರ್ಗಿಕ ಸಂಪತ್ತು ಅನೇಕ ಉದ್ದಿಮೆಗಳ ಉಗಮಕ್ಕೆ ಕಾರಣವಾಗಿದೆ.ಇವುಗಳಲ್ಲಿ ದಾಂಡೇಲಿಯ ವೆಸ್ಟ್-ಕೋಸ್ಟ್ ಪೇಪರ್ ಮಿಲ್, ರಾಜ್ಯದ ಪ್ರಮುಖ ಕೈಗಾರಿಕೆಗಳಲ್ಲಿ ಒಂದಾಗಿದೆ. ಹಳಿಯಾಳದ ಸುತ್ತ ಮುತ್ತ ಬಿದಿರಿನ ಬೆಳೆ ಅಗಾಧವಾಗಿದೆ.

ಈ ನೈಸರ್ಗಿಕ ಸಂಪನ್ಮೂಲವು ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಒದಗಿಸುತ್ತದೆ. ದಾಂಡೇಲಿಯ ಜೀವನಾಡಿಗೆ ಬದುಕನ್ನು ಕಲ್ಪಿಸಿಕೊಡುವ ಈ ಕಾರ್ಖಾನೆ ವರವಾಗಿ ಪರಿಣಮಿಸಿದೆ.

ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆಯು ಇದ್ದು ನಗರವು ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ.

 

ಪೇಪರ್ ಮಿಲ್

ದೂರ ಎಷ್ಟು?
ತಾಲೂಕು : ಹಳಿಯಾಳ
ತಾಲೂಕಿನಿಂದ :  ೨೫ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೦೫ ಕಿ.ಮೀ


ತುಳಜಾ ಭವಾನಿ ದೇವಾಲಯ :

ದೂರ ಎಷ್ಟು?
ತಾಲೂಕು : ಹಳಿಯಾಳ
ತಾಲೂಕಿನಿಂದ : ೧.೫ ಕಿ.ಮೀ
ಜಿಲ್ಲಾ ಕೇಂದ್ರದಿಂದ :೧೩೦ ಕಿ.ಮೀ.

ಶ್ರೀ ದೇವಿಯ ನ್ನಿದಾನ ಆಸ್ತಿಕರ ಪವಿತ್ರ ಶೃದ್ಧಾ ಕೇಂದ್ರವಾಗಿದೆ.  ಈ ಸುಂದರ ದೇವಾಲಯವನ್ನು ೧೯೯೬ರಲ್ಲಿ ಪ್ರತಿಷ್ಠಾಪಿಸಲಾಯಿತು. ನಾಲ್ಕು ಅಡಿ ಎತ್ತರದ ಕಪ್ಪು ಕಲ್ಲಿನ ಭವಾನಿ ದೇವಿಯ ಮೂರ್ತಿ ಇಲ್ಲಿನ ಪ್ರಮುಖ ಆಕರ್ಷಣೆ.

ಶಿಲ್ಪಕಲೆಯ ನಾಡಾದ ಕೋಲಾರ ಜಿಲ್ಲೆಯಿಂದ ಮೂರ್ತಿಯನ್ನು ಇಲ್ಲಿಗೆ ತರಲಾಗಿದೆ. ಕರ್ನಾಟಕದಿಂದ ಅಷ್ಟೇ ಅಲ್ಲದೇ ಮಹಾರಾಷ್ಟ್ರ ಹಾಗೂ ಗೋವಾದಿಂದಲೂ ದಿನನಿತ್ಯ ಸಾವಿರಾರು ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ.

 

ಜೊಯಿಡಾ :

ದೂರ ಎಷ್ಟು ?
ತಾಲೂಕು   : ಜೊಯಿಡಾ
ತಾಲೂಕಿನಿಂದ :  ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ :  ೧೦೬ ಕಿ.ಮೀ

ಕಾನೇರಿ ನದಿಯು ಕಾಳಿಯ ಮುಖ್ಯವಾಹಿನಿಗೆ ಸೇರುವ ಮುನ್ನ ಎತ್ತರದಿಂದ ವೇಗವಾಗಿ ಧುಮ್ಮಿಕ್ಕುತ್ತದೆ. ವೇಗವಾದ ನೀರಿನ ಹರಿವು ಕಲ್ಲಿನ ಅನೇಕ ಗುಹೆಗಳನ್ನು ನಿರ್ಮಿಸಿವೆ. ಇಂತಹ ಕಲ್ಲುಗಳ ಮೂಲಕ ನೀರು ಧುಮುಕುವುದನ್ನು ನೋಡುವುದು ವಿಸ್ಮಯಕಾರಿಯಾಗಿದೆ. ಈ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಹತ್ತಿರದಲ್ಲಿ ಪುರಾಣಪ್ರಸಿದ್ಧ  ಕವಳ ಗುಹೆ ಇದೆ.

 

ದೂದ್ ಸಾಗರ್ :

ದೂರ ಎಷ್ಟು ?
ತಾಲೂಕು : ಜೊಯಿಡಾ
ತಾಲೂಕಿನಿಂದ :  ೭೦ ಕಿ.ಮೀ
ಜಿಲ್ಲಾ ಕೇಂದ್ರದಿಂದ :  ೧೫೦ ಕಿ.ಮೀ

ದೂದ್ ಸಾಗರ‍್

ಕ್ಯಾಸಲ್ರಾಕ್ ಇದು ಗೋವಾದ ಗಡಿಯಂಚಿನಲ್ಲಿರುವ ಜೋಯಿಡಾದ ಒಂದು ಪುಟ್ಟ ಊರು. ಇಲ್ಲಿಂದ ೧೦ ಕಿ.ಮೀ ಅಂತರದಲ್ಲಿ ದಟ್ಟವಾದ ಕಾಡಿನ ಮಧ್ಯದಲ್ಲಿ ಹಾಲಿನಂತೆ ನೊರೆ ನೊರೆಯಾಗಿ ಧುಮುಕುತ್ತಿರುವ ಜಲಪಾತವಿದೆ. ಅದೇ ದೂದ ಸಾಗರ ಫಾಲ್ಸ. ಇದು ಚಾರಣಿಗರ ಸ್ವರ್ಗದಂತಿದೆ.

 

ಉಳವಿ:

ದೂರ ಎಷ್ಟು?
ತಾಲೂಕು : ಜೊಯಿಡಾ
ತಾಲೂಕಿನಿಂದ : ೩೯ ಕಿ.ಮೀ.
ಜಿಲ್ಲಾ ಕೇಂದ್ರದಿಂದ : ೬೦ ಕಿ.ಮೀ.

ಚನ್ನಬಸವೇಶ್ವರ ದೇವಸ್ಥಾನ

ಉಳವಿ ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿ ಚನ್ನಬಸವಣ್ಣನ ಸಮಾಧಿಯಿದೆ. ಬಿಜ್ಜಳನ ಮರಣಾನಂತರ ಶರಣರನ್ನು ಕೊಲ್ಲಲು  ಕಳಚೂರಿ ರಾಜನು ಆಜ್ಞೆ ಮಾಡಿದಾಗ ಚನ್ನಬಸವಣ್ಣನವರು ಸುಮಾರು  ೧೧೬೭ರಲ್ಲಿ ಕಲ್ಯಾಣವನ್ನು ಬಿಟ್ಟು ಇಲ್ಲಿಗೆ ಬಂದಿದ್ದರು. ಇಲ್ಲಿನ ಗವಿಮಠ ಎಂಬಲ್ಲಿ ಅನೇಕ ಗುಹೆಗಳಿಗೆ ಚನ್ನಬಸವಣ್ಣನ ತಾಯಿಯಾದ ಅಕ್ಕ ನಾಗಮ್ಮನ ಹೆಸರನ್ನು ಇಡಲಾಗಿದೆ. ಚನ್ನಬಸವಣ್ಣನ ಸಮಾಧಿ ಇಲ್ಲಿನ ಆಕರ್ಷಕ ರಚನೆ. ಇದರ ಗರ್ಭಗುಡಿಯಲ್ಲಿ ನಂದಿವಿಗ್ರಹವನ್ನು ಸ್ಥಾಪಿಸಲಾಗಿದೆ.

ಪ್ರತಿ ಪೂರ್ಣಿಮೆಯ ದಿನದಂದು  ಜಾತ್ರೆ ನಡೆಯುತ್ತಿದ್ದು ಭಾರತ ಹುಣ್ಣಿಮೆ ದಿನದಂದು ದೊಡ್ಡ ಜಾತ್ರೆ ನಡೆಯುತ್ತದೆ.

 

ಸೂಪಾ ಆಣೆಕಟ್ಟು :

ದೂರ ಎಷ್ಟು?
ತಾಲೂಕು : ಜೊಯಿಡಾ
ತಾಲೂಕಿನಿಂದ : ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ : ೧೦೦ ಕಿ.ಮೀ

 

ಸೂಪಾ ಅಣೆಕಟ್ಟು

ಹುಬ್ಬಳ್ಳಿ-ದಾಂಡೇಲಿ-ಕಾರವಾರ ಮಾರ್ಗ ಮಧ್ಯೆ ದಾಂಡೇಲಿಯಿಂದ ೧೫ ಕಿ.ಮೀ. ದೂರದಲ್ಲಿರುವ ಇದು ಅತೀ ಸಣ್ಣ ಆಣೆಕಟ್ಟು.  ದೇಶದ ಅತಿ ದೊಡ್ಡ ಜಲಾಶಯಗಳಲಿ

 

ಜಲಸಾಹಸ ಕ್ರೀಡೆ (ರಿವರ್ ್ಯಾಪ್ಪಿಂಗ್)

ದೂರ ಎಷ್ಟು?
ತಾಲ್ಲೂಕು : ಜೊಯಿಡಾ
ತಾಲೂಕಿನಿಂದ : ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ : ೧೦೦ ಕಿ.ಮೀ.


ಅಣಸಿ ರಾಷ್ಟ್ರೀಯ ಉದ್ಯಾನವನ

ದಟ್ಟವಾದ ಕಾಡಿನಿಂದ ಆವೃತವಾದ ಜೋಯಿಡಾದ ಗಣೇಶ ಗುಡಿ ಸಮೀಪದ ಜಂಗಲ್ ರೆಸೋರ್ಟ್‌ಗಳು ಪ್ರವಾಸಿಗರನ್ನು ತಮ್ಮೆಡೆಗೆ ಕೈಬೀಸಿ ಕರೆಯುತ್ತವೆ. ಗಣೇಶಗುಡಿ ಆಣೆಕಟ್ಟಿನಿಂದ ನೀರು ಬಿಡುತ್ತಿರುವಾಗ ಅಲ್ಲಿ ನಡೆಸುವ ದೋಣಿ ವಿಹಾರ ಮೈಮನವನ್ನು ರೋಮಾಂಚನಗೊಳಿಸುತ್ತದೆ.

 

ವಿಸ್ತೀರ್ಣ

೧. ಅಂಕೋಲಾ : ೯೧೮.೭ ಚ.ಕಿ.ಮೀ.

೨. ಭಟ್ಕಳ : ೩೪೮.೯ ಚ.ಕಿ.ಮೀ

೩. ಹಳಿಯಾಳ : ೮೪೭.೪ ಚ.ಕಿ.ಮೀ

೪. ಹೊನ್ನಾವರ : ೭೫೪.೮ ಚ.ಕಿ.ಮೀ

೫. ಜೊಯಿಡಾ : ೧೯೨೬.೩ ಚ.ಕಿ.ಮೀ

೬. ಕಾರವಾರ : ೭೩೨.೧ ಚ.ಕಿ.ಮೀ

೭. ಕುಮಟಾ : ೫೮೨.೦ ಚ.ಕಿ.ಮೀ

೮. ಮುಂಡಗೋಡ : ೬೬೮.೩ ಚ.ಕಿ.ಮೀ

೯. ಸಿದ್ಧಾಪುರ : ೮೫೯.೩ ಚ.ಕಿ.ಮೀ

೧೦. ಶಿರಸಿ : ೧೩೦೧.೧ ಚ.ಕಿ.ಮೀ

ಜಿಲ್ಲೆಯ ಒಟ್ಟು ವಿಸ್ತೀರ್ಣ : ೧೦೩೨೭ ಚ.ಕಿ.ಮೀ

ದೇಶ ನೋಡು ಕೋಶ ಓದು