ಕನ್ನಡ ಅಧ್ಯಯನ ಸಂಸ್ಥೆ ಕಳೆದ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದ ಈ ಅಪೂರ‍್ವವಾದ ಸಮ್ಮೇಳನ. ೧೬ನೆಯ ವರ್ಷಕ್ಕೆ ಕಾಲಿಟ್ಟಿರುವುದು ಒಂದು ದೊಡ್ಡ ದಸಾಧನೆಯೆಂದು ನನ್ನ ಅಭಿಪ್ರಾಯ. ಯಾವುದೇ ಒಂದು ಸಂಸ್ಥೆ ಇಂತಹ ಕಾರ‍್ಯಕ್ರಮವನ್ನು ಹಮ್ಮಿಕೊಂಡಾಗ ಸತತವಾಗಿ ಮುಂದುವರಿಸಿಕೊಂಡು ಹೋಗಲು ಅನೇಕ ಅಡ್ಡಿಗಳು ಬರುತ್ತವೆ. ಆದರೆ ಇಂದಿನ ವಿದ್ವಾಮಸರು ನನಗೆ ಗೊತ್ತಿದ್ದ ಮಟ್ಟಿಗೆ. ಅನೇಕ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಿಕೊಂಡು ಬಂದಿದ್ದರೂ ಕೂಡ ನಿಷ್ಠೆಯಿಂದ ಈ ಜಾನಪದ ಸಮ್ಮೇಳನಗಳನ್ನು ನಡೆಸಿಕೊಂಡು ಬಂದಿರುವುದರಿಂದ, ಕರ್ನಾಟಕದಲ್ಲಿ ಜಾನಪದ ಜಾಗ್ರತೆಗೆ ಇದರಿಂದ ಸಹಾಯಕವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ವಿಶ್ವವಿದ್ಯಾಲಯದ ಈ ಸಂಸ್ಥೆ ಶೈಕ್ಷಣಿಕ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ನಡೆಸುವಾಗ ಕೇವಲ ವಿಚಾರ ಸಂಕಿರಣಕ್ಕೆ ಮಾತ್ರ ಸೀಮಿತಮಾಡಬಹುದಾಗಿತ್ತು. ಜಾನಪದಕ್ಕೆ ಸಂಬಂಧವಾದ ವಿಚಾರ ಸಂಕಿರಣವನ್ನು ನಡೆಸಬಹುದಿತ್ತು. ಒಂದು ಸಭಾಂಗಣದಲ್ಲಿ ಕೇವಲ ವಿದ್ವಾಂಸರಿಗೆ ಮಾತ್ರ ಮೀಸಲಾದ ಕಾರ‍್ಯಕ್ರಮವನ್ನು ನಡೆಸಿಕೊಂಡು ಬರಬಹುದಾಗಿತ್ತು. ಆದರೆ ಇದಕ್ಕೆ ವಿಶೇಷವಾದ ಸಮ್ಮೇಳನದ ಸ್ವರೂಪವನ್ನು ಕೊಟ್ಟು, ಒಂದು ಕಡೆ ಜಾನಪದ ಕಲೆಯ ಸಂವರ್ಧನೆ, ಮತ್ತೊಂದು ಕಡೆ ಜಾನಪದ ವಿದ್ವತ್ತಿನ ಬೆಳವಣಿಗೆ ಎರಡನ್ನೂ ನಡೆಯುವಂತೆ ನಡೆಸಿಕೊಂಡು ಬಂದುದನ್ನು ನನಗೆ ಯಾವ ವಿಶ್ವವಿದ್ಯಾಲಯದಲ್ಲಿಯೂ ಇದುವರೆಗೆ ನೋಡಲುಸಾಧ್ಯವಾಗಿಲ್ಲ. ಜಾನಪದ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಅನೇಕ ಚಟುವಟಿಕೆಗಳು ನಾಡಿನ ಬೇರೆ ಬೇರೆ ಭಾಗಗಳಲ್ಲಿ ನಡೆಯುತ್ತಾ ಇವೆ. ಅಖಿಲ ಭಾರತ ಮಟ್ಟದ ಅನೇಕ ಜಾನಪದ ಸಮ್ಮೇಳನವನ್ನು ನಾನು ನೋಡುತ್ತಿದ್ದೇನೆ. ರಾಷ್ಟ್ರಮಟ್ಟದ ಕಾರ‍್ಯಕ್ರಮಗಳು ಇಷ್ಟು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎನ್ನುವುದು ಒಂದು ಹೆಮ್ಮೆಯ ಸಂಗತಿ. ಅಷ್ಟಕ್ಕೆ ಸೀಮಿತವಾಗಿರದೇ ಈ ಅಧ್ಯಯನ ಸಂಸ್ಥೆ ಕೈಗೊಂಡ ಇಂತಹ ಸಮ್ಮೇಳನಗಳು ಮತ್ತೊಂದು ರೀತಿಯಲ್ಲಿ ಒಂದು ದಾಖಲೆಯನ್ನು ಸ್ಥಾಪಿಸಿವೆ. ಪ್ರಬಂದಗಳನ್ನು ಒಂದು ಪುಸ್ತಕ ರೂಪದಲ್ಲಿ ತರುತ್ತಿರುವುದು ಒಂದು ದೊಡ್ಡ ಸಾಧನೆ. ವಿಚಾರ ಸಂಕಿರಣವನ್ನು ನಡೆಸಬಹುದು. ಕಲಾಪ್ರದರ್ಶನವನ್ನು ನಡೆಸಬಹುದು. ಆದರೆ ಅದು ಮತ್ತೆ ಮರೆತುಹೋಗುತ್ತದೆ. ಮರೆತುಹೋಗದ ರೀತಿಯಲ್ಲಿ ಈ ಜಾನಪದ ಸಾಹಿತ್ಯದರ್ಶನ ಎಂಬ ಮಾಲೆಯನ್ನು ಆರಂಭ ಮಾಡಿ, ಈಗಾಗಲೇ ಹನ್ನೊಂದು ಸಂಪುಟಗಳನ್ನುಹೊರತಂದಿದ್ದಾರೆ. ಹನ್ನೊಂದು ಸಂಪುಟಗಳಲ್ಲಿ ನಮ್ಮ ಜಾನಪದ ಲಭ್ಯವಾಗುತ್ತದೆಯೆಂಬುದು ಜಾನಪದ ಸಂಶೋಧಕರ ದೃಷ್ಟಿಯಿಂದ ಬಹಳ ಗಮನಾರ್ಹವಾದುದು. ಈ ಗ್ರಂಥಗಳನ್ನು ಪರಿಶೀಲಿಸುತ್ತಾ ಹೋದರೆ ಒಂದೊಂದು ಸಂಪುಟ ಕೂಡಾ ಒಂದೊಂದು ಸಣ್ಣ ಸಣ್ಣ ವಿಶ್ವಕೋಶದಂತೆ ಅಮೂಲ್ಯವಾದ ಜಾನಪದ ಮಾಹಿತಿಗಳನ್ನು ಒದಗಿಸುತ್ತವೆ. ಇವು ಮುಂದೆ ಮುಖ್ಯ ದಾಖಲೆಗಳಾಗಿ ಮಾಡಿಕೊಳ್ಳುವಂತಹ ದೃಷ್ಟಿಯಿಂದ ನಾನು ಇದನ್ನು ಬಹಳ ಗಮನಾರ್ಹವಾದ ಸಾಧನೆಯೆಂದು ಭಾವಿಸಿದ್ದೇನೆ. ಹೀಗೆ ಒಂದು ಕಡೆ ವಿಚಾರ ಸಂಕಿರಣ, ಮತ್ತೊಂದು ಕಡೆ ಕಲಾ ಮಹೋತ್ಸವ, ಇನ್ನೊಂದು ಕಡೆ ಆ ಸಮ್ಮೇಳನಕ್ಕೆ ಸಂಬಂಧಪಟ್ಟ ಪ್ರಬಂಧಗಳ ಪ್ರಕಟಣೆ. ಈ ಮೂರು ಬಹಳ ಮಹತ್ವದ ವಿಷಯಗಳೆಂದು ನಾವು ಮನಗಾಣಬೇಕು. ೧೬ ಸಮ್ಮೇಳನಗಳು ಇದುವರೆಗೆ ನಡೆದಿವೆ. ೧೬ ಸಮ್ಮೇಳನಕ್ಕೆ ಒಬ್ಬೊಬ್ಬ ಅಧ್ಯಕ್ಷರನ್ನು ನಾವು ದೊರಕಿಸಿಕೊಳ್ಳುವಂತಹದ್ದು ಕನ್ನಡ ನಾಡಿನಲ್ಲಿ ಅಷ್ಟು ಜನ ವಿದ್ವಾಂಸರಿದ್ದಾರೆಂಬುದೂ ಕೂಡಾ ಒಂದು ಹೆಮ್ಮೆಯ ವಿಷಯ. ಮುಂದೆ ಇದೊಂದು ದೊಡ್ಡ ಪಟ್ಟಿಯಾಗಿ ಬೆಳೆಯುತ್ತದೆ. ಈ ಪರಂಪರೆಯನ್ನು ಬೆಳೆಸುವಂತಹ ರೀತಿ, ಒಂದೊಂದು ಅಧ್ಯಕ್ಷೀಯ ಭಾಷಣಗಳು, ಅಧ್ಯಕ್ಷರು, ಆ ಕ್ಷೇತ್ರಕ್ಕೆ ಸಲ್ಲಿಸುವಂತಹ ಸೇವೆ, ಇವುಗಳನ್ನು ಗಮನಿಸಿದಾಗ, ದಕ್ಷಿಣದಲ್ಲಿ ಮೈಸೂರು ವಿಶ್ವವಿದ್ಯಾಲಯ ಉತ್ತರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಗಳು ಪ್ರಾರಂಭದಲ್ಲಿ ಜಾನಪದ ಹಾಗೂ ಜಾನಪದ ಕಲೆಗಳಿಗೆ ನೀಡಿದ ಕೊಡುಗೆ ಬಹಳ ದೊಡ್ಡದೆಂದು ನಾನು ಈ ಸಂದರ್ಭದಲ್ಲಿ ಹೇಳಲು ಇಷ್ಟಪಡುತ್ತೇನೆ.

ಅನೇಕ ಅಜ್ಞಾತ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಅಧ್ಯಯನ ಮಾಡುವಾಗ, ಅನೇಕ ಸಂದರ್ಭಗಳಲ್ಲಿ ಕೆಲವು ಪ್ರಾತ್ಯಕ್ಷಿಕೆ ಏರ್ಪಾಡಿಸುವ ಅಗತ್ಯ ಬರುತ್ತದೆ. ನಾವು ಏನನ್ನು ವ್ಯಾಖ್ಯಾನಿಸುತ್ತೇವೆಯೋ, ಯಾವುದನ್ನು ಕುರಿತು ಚರ್ಚೆ ಮಾಡುತ್ತೇವೆಯೋ, ವಿಶ್ಲೇಷಣೆ ಮಾಡುತ್ತೇವೆಯೋ ಅದನ್ನು ಪ್ರತ್ಯೇಕವಾಗಿ ವೇದಿಕೆಯ ಮೇಲೆ ತಂದು. ಆ ಕಲೆಯನ್ನು ಕುರಿತಂತೆ, ಅಲ್ಲಿ ಸೇರಿದಂತಹ ಸಂಶೋಧಕರು, ಜಾನಪದ ವಿದ್ಯಾರ್ಥಿಗಳು, ಜಾನಪದ ಆಸಕ್ತರು ಅದನ್ನು ಕುರಿತು ಆಲೋಚನೆ ಹಾಗೂ ಅಭ್ಯಾಸ ಮಾಡುವ ಅವಕಾಶ ಲಭ್ಯವಾಗುತ್ತದೆಂಬುದನ್ನು ನಾವು ಮನಗಾಣಬೇಕು.

ಕರ್ನಾಟಕವು ಈ ದೃಷ್ಟಿಯಿಂದ ತುಂಬಾ ಹೆಮ್ಮೆ ಪಡುವಂತಹ ಅನೇಕ ಸಾಧನೆಗಳನ್ನು ಜಾನಪದಕ್ಕೆ ಸಂಬಂಧಪಟ್ಟಂತೆ ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಜಾನಪದ ಅಕಾಡೆಮಿ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ, ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿವೆ. ಈ ಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಕೂಡಾ ಸಾಕಷ್ಟು ಕೆಲಸ ಮಾಡಿದೆ. ಹೀಗೆ ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನದ ಎಲ್ಲ ವಿವರಗಳು ಇಂಗ್ಲೀಷನಲ್ಲಿ ಬಂದರೆ ದೊಡ್ಡ ಸಾಧನೆಯಾಗುತ್ತದೆ. ಭಾರತೀಯ ಜಾನಪದ ಸಂಶೋಧನ ಕ್ಷೇತ್ರಕ್ಕೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇರುವ ಜಾನಪದ ಕಲೆಗಳನ್ನು ಸಂಘಟಿಸಿ ಆ ಕಲೆಗಳಿಗೆ ಒಂದು ವಿಶೇಷವಾದ ಶಿಸ್ತನ್ನು ತಂದು ಅವುಗಳನ್ನು ಗುರುತಿಸಿದ್ದರಿಂದ ಅಖಿಲ ಭಾರತ ಮಟ್ಟದಲ್ಲಿ ಒಳ್ಳೆಯ ಕೀರ್ತಿ ಪಡೆಯುವಂತಹ ಅವಕಾಶ ಲಭ್ಯವಾಗಿದೆ. ಅಪನಾ ಉತ್ಸವದಲ್ಲಿ ಹೋಗಿ ಬಂದ ಕಲಾವಿದರ ಅಭಿಪ್ರಾಯಗಳನ್ನು ಕೇಳಿದರೆ, ಅವರು ಅಲ್ಲಿ ಎರಡು ತಂಡ ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲು ಇಪ್ಪತ್ತು ನಿಮಿಷಗಳ ಕಾಲ ಒಂದು ಕಡೆ ಪ್ರದರ್ಶನಗಳನ್ನು ನಡೆಸಿ ಬೇರೆ ಬೇರೆ ಭಾಗಗಳಲ್ಲಿ ನಡೆಸಲು ಅತ್ಯುತ್ತಮವಾದ ತಂಡಗಳ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತಹ ಅತ್ಯುತ್ತಮವಾದ ತಂಡಗಳ ಆಯ್ಕೆ ಮಾಡಿಕೊಳ್ಳುವಾಗ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ಲಭ್ಯವಾಗಿದೆ. ಅಪನಾ ಉತ್ಸವದಲ್ಲಿ ಹೋಗಿ ಬಂದ ಕಲಾವಿದರ ಅಭಿಪ್ರಾಯಗಳನ್ನು ಕೇಳಿದರೆ, ಅವರು ಅಲ್ಲಿ ಎರಡು ತಂಡ ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲು ಇಪ್ಪತ್ತು ನಿಮಿಷಗಳ ಕಾಲ ಒಂದು ಕಡೆ ಪ್ರದರ್ಶನಗಳನ್ನು ನಡೆಸಿ ಬೇರೆ ಬೇರೆ ಭಾಗಗಳಲ್ಲಿ ನಡೆಸಲು ಅತ್ಯುತ್ತಮವಾದ ತಂಡಗಳ ಆಯ್ಕೆ ಮಾಡಿಕೊಳ್ಳುವಾಗ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ಲಭ್ಯವಾಗಿದೆ. ಇದಕ್ಕೆ ಕಾರಣವೇನೆಂದರೆ , ಕಳೆದ ಎರಡೂವರೆ ದಶಕದಲ್ಲಿ ಕರ್ನಾಟಕದಲ್ಲಿ ನಡೆದಂತಹ ಒಂದು ದೊಡ್ಡ ಜಾನಪದ ಚಳುವಳಿ, ಕಲೆಗಳ ಸಂವಧನೆಗಾಗಿ ನಡೆದ ಕೆಲಸ ಗಣನೀಯವಾದುದು. ಅಪಾರವಾದ ಇನ್ನೂರಕ್ಕೂ ಹೆಚ್ಚು ಕಲೆಗಳಿಗೆ ಶಿಸ್ತನ್ನು ತಂದುಕೊಟ್ಟದ್ದು, ಮತ್ತೊಂದು ಮಹತ್ವದ ವಿಷಯ. ಆ ಶಿಸ್ತಿನ ಕಾರಣಗಳಿಂದ ಈ ಕಲೆಗಳು ಒಂದು ಒಳ್ಳೆಯ ಸ್ವರೂಪವನ್ನು ಪಡೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಕೀರ್ತಿತರಲು  ಕಾರಣವಾಗಿದೆ.

ಈ ಸಮ್ಮೇಳನದಲ್ಲಿ ಪ್ರದರ್ಶಿತವಾದ ಜಗ್ಗಲಿಗೆ ಜಾನಪದಕಲೆ ಮೇಳವನ್ನು ನಾವು ನೋಡುವಾಗ, ಈ ಕಲಾವಿದರಲ್ಲಿ ಕಂಡುಬರುವ ಅತ್ಯುತ್ಸಾಹಕ್ಕೆ ಒಂದು ಕಡಿವಾಣವನ್ನು ಹಾಕಬೇಕು. ಹೆಚ್ಚು ಆವೇಶದಿಂದ ಕುಣಿಸುವುದನ್ನು ತಪ್ಪಿಸಿ ಅದಕ್ಕೆ ಒಂದು ಕಲೆಯ ಸ್ವರೂಪವನ್ನು ಕೊಡಬೇಕು. ಅದರಿಂದ ಬಹಳ ಸೊಗಸಾದಂಥ ಪರಂಪರೆಯಿಂದ ಈ ಕಲೆಯ ಮೌಲ್ಯ ಹೆಚ್ಚು ಪ್ರಕಾಶವಾಗುವುದಕ್ಕೆ ಸಾಧ್ಯವಾಗುತ್ತದೆ. ಪ್ರತಿಯೊಂದು ಕಲೆಗೆ ಒಂದು ಶಿಸ್ತು ಬರಬೇಕಾದರೆ ಅದಕ್ಕೆ ಒಂದು ಸರಿಯಾದ ಮಾರ್ಗದರ್ಶನಬೇಕು. ಒಬ್ಬ ನಿರ್ದೇಶಕ ಬೇಕು. ಸರಿಯಾಗಿ ಅಭ್ಯಾಸಮಾಡಿಸಿ. ಅದನ್ನು ಇಂತಹ ರಂಗದಲ್ಲಿ ತಂದಾಗ ಆ ಕಲೆ ಖಂಡಿತವಾಗಿ ಜನರ ಮೆಚ್ಚುಗೆಯನ್ನು ಪಡೆಯುತ್ತದೆ. ಈ ದೃಷ್ಟಿಯಿಂದ ಕರ್ನಾಟಕದಲ್ಲಿ ಸಾಕಷ್ಟು ಕೆಲಸ ನಡೆದಿದೆ. ಪ್ರತಿಯೊಂದು ತಂಡವನ್ನು, ನಾವು ಪ್ರದರ್ಶಿಸಲು ಸಾಧ್ಯವಾಗಿಲ್ಲ. ಹೊಸ ಹೊಸ ತಂಡಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಬೆಳಕಿಗೆ ಬಂದ ತಂಡಗಳನ್ನು ನಾವು ಗಮನಿಸುವಾಗ ಅವರಿಗೆ ಇಂತಹ ಅವಕಾಶವನ್ನು ಕಲ್ಪಿಸಿ, ಯಾವುದೇ ಜಾನಪದ ಕಲೆಯನ್ನು ಪ್ರೋತ್ಸಾಹಿಸುವಾಗ ಅವರಿಗೆ ಇಂತಹ ಅವಕಾಶವನ್ನು ಕಲ್ಪಿಸಿ, ಯಾವುದೇ ಜಾನಪದ ಕಲೆಯನ್ನು ಪ್ರೋತ್ಸಾಹಿಸುವಾಗ ಅವರಿಗೆ ಇಂತಹ ಅವಕಾಶವನ್ನು ಕಲ್ಪಿಸಿ, ಯಾವುದೇ ಜಾನಪದ ಕಲೆಯನ್ನು ಪ್ರೋತ್ಸಾಹಿಸುವಾಗ ನಾವು ಸಂಪೂರ್ಣವಾಗಿ ಮೂಲವನ್ನು ಮರೆಯುತ್ತೇವೆ. ಮೂಲದಲ್ಲಿರುವ ಆ ಕಲೆಗಳ ಸ್ವರೂಪವನ್ನು ನಾವು ಗಮನಿಸಬೇಕು. ಅದನ್ನು ಬಿಟ್ಟು ಮೇಲೆ ಅಲಂಕಾರಮಾಡಿ ದೊಡ್ಡ ದೊಡ್ಡ ಉತ್ಸವಗಳನ್ನು ಮಾಡುತ್ತೇವೆ.ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತೇವೆ.

ಅಪನಾ ಉತ್ಸವಕ್ಕೆ ಕೋಟ್ಯಾಂತರ ರೂ. ಗಳನ್ನು ವೆಚ್ಚಮಾಡುತ್ತೇವೆ. ಯಾವ ರೀತಿಯಿಂದ ಕಲೆಗಳು ಅದರಿಂದ ಪ್ರಯೋಜನ ಪಡೆದುಕೊಂಡವೋ ಅದನ್ನು ನಾವು ಯಾರೂ ಗಮನಿಸುವುದಿಲ್ಲ. ಆಲೋಚನೆ ಮಾಡಿ ಹಣವನ್ನು ನಾವು ಸದುಪಯೋಗ ಮಾಡಿಕೊಂಡರೆ ಖಂಡಿತವಾಗಿ ಈ ಕಲೆಗಳು ತಮ್ಮ ತಮ್ಮ ಮೂಲ ಸಂಸ್ಕೃತಿಯ ಪರಿಸರದಲ್ಲಿ ವಿಶಿಷ್ಠವಾದ ಬೆಳವಣಿಗೆಯನ್ನು ಪಡೆದುಕೊಳ್ಳುತ್ತವೇ. ಕೇವಲ ಮೋಜಿನ ಉತ್ಸವಗಳಿಂದ ಏನೂ ಪ್ರಯೋಜನೆಯಾಗುವುದಿಲ್ಲ. ಪ್ರಚಾರಸಿಗಬಹುದಷ್ಟೇ ಆ ಜಾನಪದ ಅಧ್ಯಯನವನ್ನು ಕೈಗೆತ್ತಿಕೊಳ್ಳುವ ನಾವು ಅನೇಕ ವಿಚಾರ ಸಂಕಿರಣಗಳನ್ನು ನಡೆಸುತ್ತೇವೆ. ವಿಚಾರಣ ಸಂಕಿರಣಗಳನ್ನು ನಡೆಸುವಾಗ ನಿರ್ಧಿಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ನಿರ್ಧಿಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದಕ್ಕೆ ಸಂಬಂಧಪಟ್ಟ ವಿದ್ವಾಂಸರ ಪಟ್ಟಿ ಮಾಡುತ್ತೇವೆ. ಹಾಗೆ ಮಾಡಿಕೊಳ್ಳುವಾಗ ಅದಕ್ಕೆ ಸಂಬಂಧಪಟ್ಟ ವಿದ್ವಾಂಸರ ಪಟ್ಟಿ ಮಾಡುತ್ತೇವೆ. ಹಾಗೆ ಮಾಡಿಕೊಳ್ಳುವಾಗ ಅನೇಕ ಸಂದರ್ಭಗಳಲ್ಲಿ ನಮಗಾಗಿದ್ದಂತಹ ಕೊರತೆ ಎಂದರೆ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡದೇ, ಕ್ಷೇತ್ರ ಕಾರ‍್ಯವನ್ನು ಮಾಡದೇ, ಜನ ಸಂಪರ್ಕವನ್ನು ಮಾಡದೇ ನಿಜವಾದಂತಹ ಕ್ಷೇತ್ರಾನುಭವವನ್ನು ಪಡೆಯದೆ, ಅನೇಕ ವಿದ್ವಾಮಸರು ಯಾವ ವಿಷಯದಲ್ಲಾದರೂ, ನಾನು ಪ್ರಬಂಧವನ್ನು ಮಂಡಿಸಬಲ್ಲೆ ಎಂಬ ಛಾತಿಯನ್ನು ತೋರಿಸಿತಕ್ಕಂತಹ ಸಂದರ್ಭ ಕೂಡಾ ನಮ್ಮಲ್ಲಿ ಬರುವುದುಂಟು. ಇದರಿಂದ ಆ ವಿಷಯಕ್ಕೆ ಆಳ ಆಳವಾಗಿ ಹೋಗಿ ವಿಚಾರ ಮಾಡಲು ಸಾಧ್ಯವಾಗದೇ ಅನೇಕ ವರ್ಷಗಳ ಸಂಶೋಧನೆಯ ಫಲ ಅದರಲ್ಲಿ ಲಭ್ಯವಾಗದೇ ಆ ಪ್ರಬಂಧ ಒಂದು ದೃಷ್ಟಿಯಿಂದ ಪರಿಚಯಾತ್ಮಕವಾದ ವಿರಣಾತ್ಮಕವಾದ ಪ್ರಬಂಧವಾಗುತ್ತದೆ. ಇದರಿಂದ ಜಾನಪದ ಕ್ಷೇತ್ರದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಭಾರತೀಯ ಮಟ್ಟದ ವಿಚಾರ ಸಂಕಿರಣವನ್ನು ನಾವು ಗಮನಿಸಿದರೆ ಅಲ್ಲಿ ಅವರು ಆಹ್ವಾನ ಮಾಡುವದು ಪ್ರಬಂಧಗಳನ್ನು ಮಾತ್ರ, ವಿಷಯಗಳನ್ನು ಕೊಡುವುದಿಲ್ಲ. ಏಕಕಾಲದಲ್ಲಿ ಅನೇಕ ಗೋಷ್ಠಿಗಳು ನಡೆಯುತ್ತಾ ಇರುತ್ತವೆ. ಇದರಿಂದ ಅಲ್ಲಿ ಹೆಚ್ಚು ಸಾರ್ಥಕವಾದ ಪ್ರಬಂಧಗಳು ಬರಲು ಸಾಧ್ಯವಾಗದೇ ಇರುವುದನ್ನು ನಾವು ಗಮನಿಸಬಹುದು. ಆದರೆ ಕರ್ನಾಟಕ ವಿಶ್ವವಿದ್ಯಾಲಯದ ಈ ವಿಚಾರ ಸಂಕಿರಣದಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಪ್ರಬಂಧಗಳನ್ನು ಮಂಡಿಸಬೇಕೆಂಬ ಎಚ್ಚರಿಕೆಯಿಂದ ಬರುತ್ತಾರೆ. ಅವರು ಪ್ರಶ್ನೆಗಳನ್ನು ನಿರೀಕ್ಷೆ ಮಾಡುತ್ತಾರೆ.

ನಾವು ಕಂಡಂತೆ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ವಿಚಾರ ಸಂಕಿರಣಗಳು ನಡೆದಿವೆ. ಮೈಲಾರಲಿಂಗನಿಗೆ ಸಂಬಂಧಪಟ್ಟ ಸಮ್ಮೇಳನವಾಗಲಿ, ಎಲ್ಲಮ್ಮನಿಗೆ ಸಂಬಂಧಪಟ್ಟ ಸಮ್ಮೇಳನವಾಗಲಿ, ಇವೆಲ್ಲವೂ ಕೂಡಾ ಬಹಳ ಮಹತ್ವಪೂರ‍್ಣವಾಗಿದ್ದು, ನಮ್ಮ ಜಾನಪದ ಸಂಶೋಧನೆ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿವೆ. ಈ ಸಮ್ಮೇಳನದಲ್ಲಿ ತೊಗಲು ಗೊಂಬೆಗೆ ಸಂಬಂಧಪಟ್ಟ ವಿಷಯವನ್ನು ಆಯ್ಕೆಮಾಡಿ ಕೊಳ್ಳಲಾಗಿದೆ. ಕರ್ನಾಟಕ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಗೊಂಬೆಯಾಟಗಳಿಗೆ ಸಂಬಂಧಪಟ್ಟ ಅನೇಕ ಸಂಶೋಧನೆಗಳು ಈಗಾಗಲೇ ನಡೆದಿವೆ. ಡಾ. ಇಮ್ರಾಪೂರ ಅವರು ಹೇಳಿದಂತೆ ತೊಗಲುಗೊಂಬೆಯಾಟಕ್ಕೆ ಸಂಬಂಧಪಟ್ಟಂತೆ ಮೂರು ಕಾರ‍್ಯಗಾರ ನಡೆದಿವೆ. ಬೆಂಗಳೂರಿನಲ್ಲಿ ಒಂದು ನಡೆಯಿತು. ಬಿ.ಆರ್. ಪ್ರೊಜೆಕ್ಟನಲ್ಲಿ ಮತ್ತೊಂದು ನಡೆಯಿತು. ಇನ್ನು ಒಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ನಡೆಯಿತು. ಈಗ ಇಂತಹ ವಿಷಯ ಕುರಿತು ವಿಚಾರಸಂಕಿರಣ ನಡೆಯುತ್ತಿದೆ. ತೊಗಲು ಗೊಂಬೆಯಾಟಕ್ಕೆ ಸಂಬಂಧಪಟ್ಟಂತೆ ಮೊಟ್ಟ ಮೊದಲು ಪಾಶ್ಚಾತ್ಯ ವಿದ್ವಾಂಸರು ಸಂಶೋಧನೆಯನ್ನು ಕೈಗೊಂಡಾಗ, ೧೯೦೬ರಲ್ಲಿ ಜರ‍್ಮನಿಯ ಒಬ್ಬ ವಿದ್ವಾಂಸ ಈಜಿಪ್ತ ಮತ್ತುಪರ್ಶಿಯದೇಶಗಳ ಗೊಂಬೆಯಾಟಗಳನ್ನು ಗಮನಿಸಿ, ಇಂಡಿಯಾ ದೇಶದಲ್ಲಿ ಇಂತಹ ಕಲೆಗಳು ಇರಲೇಬೇಕು ಎಂಬ ಮಾತನ್ನು ಹೇಳುತ್ತಾನೆ. ಜಾಕೋಬ್ ಎಂಬ ಮತ್ತೊಬ್ಬ ವಿದ್ವಾಂಸ ೧೯೨೫ರಲ್ಲಿ ಆಳವಾದ ಅಧ್ಯಯನ ನಡೆಸಿ ಅವನು ಕೂಡಾ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದನು. ಸಂಸ್ಕೃತ ಸಾಹಿತ್ಯ, ಭಾರತೀಯ ಸಾಹಿತ್ಯವನ್ನು ಪರಿಚಯಮಾಡಿಕೊಂಡು ಅಭ್ಯಾಸಮಾಡಿ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡು ಭಾರತ ಗೊಂಬೆಯಾಟ ಕಲೆಯ ತವರು ಎಂಬ ತೀರ‍್ಮಾನಕ್ಕೆ ಬರುತ್ತಾನೆ. ಈದಾದ ಮೇಲೆ ಪಾಶ್ಚಾತ್ಯ ದೇಶಗಳಿಂದ ಅನೇಕ ವಿದ್ವಾಂಸರ ದೊಡ್ಡ ತಂಡ ಈ ದೇಶಕ್ಕೆ ಬಂದಿತ್ತು. ಡೆನ್ಮಾರ್ಕ್‌ದೇಶದಿಂದ ಪ್ರಾನ್ಸ್‌ಎಂಬ ವಿದ್ವಾಂಸರು ೧೯೭೦ನೇ ಇಸ್ವಿಯಲ್ಲಿ ಬಂದಿದ್ದರು. ಅದಾದ ಮೇಲೆ ಜರ‍್ಮನಿಯಿಂದ ಸೈಂಟ್‌ಮನ್ ವಿದ್ವಾಂಸರು ಬಂದಿದ್ದರು. ಅಮೇರಿಕದ ನೆಲಸ್ಟಿನ್ ಎಂಬ ವಿದ್ವಾಂಸರು ಇಲ್ಲಿ ಬಂದಿದ್ದರು. ಕರ್ನಾಟಕ ದಕ್ಷಿಣ ಭಾರತ ವರ್ಷದಲ್ಲಿ ಪೂರ‍್ವದೇಶಗಳಲ್ಲಿ ಈ ಕಲೆ ಒಂದೇ ಮೂಲದಿಂದ ಹೊರಟು ಬೇರೆ ಬೇರೆ ಪ್ರಾದೇಶಿಕ ರೂಪಗಳಲ್ಲಿ ಈಗಲೂ ಉಳಿದುಕೊಂಡು ಬಂದಿವೆ. ಭಾರತ ಇದಕ್ಕೆ ಈ ಮೂಲವನ್ನು ಒದಗಿಸಿತು ಎಂಬ ಅಧ್ಯಯನವನ್ನು ಮಾಡಿ, ಬಹಳ ಸೊಗಸಾದ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಸೆಂಟಮನ್ ಅವರು ಮೂರು ಪ್ರಬಂಧಗಳು ಭಾರತೀಯ ತೊಗಲುಗೊಂಬೆಯ ಕಲೆಯ ಬಗ್ಗೆ ಹೊಸ ಬೆಳಕನ್ನು ಚೆಲ್ಲುವ ಪ್ರಬಂಧಗಳಾಗಿ ಕಂಡುಬರುತ್ತವೆ. ಭಾರತೀಯ ಜಾನಪದ ಕಲೆಗಳನ್ನು ನಾವು ನೋಡಿದಾಗ ತೊಗಲು ಗೊಂಬೆಯಾಟದ ಪರಂಪರೆ ಬಹಳ ಅಪರೂಪವಾದದ್ದೆಂದು ಕಾಣಿಸುತ್ತದೆ. ಕ್ರೈಸ್ತ ಪೂರ‍್ವದಲ್ಲಿಯೇ ಇದರ ಪ್ರಸ್ತಾಪ ಬಂದಂತೆ ಕಾಣುತ್ತದೆ. ಸಾಮಿಪ್ಯವಾದ ಒಂದು ಮಾತನ್ನು ಹೇಳುವಾಗ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಈ ಶಬ್ದ ಉಪಯೋಗವಾಗಿದೆಯೆಂದು ಜರ‍್ಮನಿಯ ವಿದ್ವಾಂಸರು ಗುರುತಿಸಿರುತ್ತಾರೆ. ಮಹಾ ಭಾರತದಲ್ಲಿ ಇದರ ಪ್ರಸ್ತಾಪ ಬರುತ್ತದೆಯೆಂದು ವಿದ್ವಾಂಸರು ಗುರುತಿಸುತ್ತಾರೆ. ಕನ್ನಡ ಸಾಹಿತ್ಯವನ್ನು ತೆಗೆದುಕೊಂಡಾಗ ಎರಡು ಮುಖ್ಯವಾದ ಪರಂಪರೆಗಳಲ್ಲಿ ಇದು ಕಾಣುತ್ತದೆ. ಒಂದು ಕಡೆ ಚಿತ್ರ ಕಥಕರು ಮತ್ತೊಂದು ಕಡೆ ತೊಗಲು ಗೊಂಬೆಯಾಟವನ್ನು ಪ್ರದರ್ಶನ ಮಾಡುವವರು. ಈ ಎರಡು ಕಲೆಗಳಲ್ಲಿ ಚಿತ್ರಕಥಕರು ಕೇವಲ ಬಟ್ಟೆಯ ಮೇಲೆ ಬರೆದಂತಹ ಚಿತ್ರಗಳನ್ನು ಇಟ್ಟುಕೊಂಡು ಕಾವ್ಯಗಳನ್ನು ಮಾಡುತ್ತಾ ಹೋದರೆ, ಈ ತೊಗಲುಗೊಂಬೆಯನ್ನು ಆಡಿಸುವಂತಹ ಕಲಾವಿದರು ಬಿಳಿ ಪರದೆಯ ಮೇಲೆ ಇವುಗಳನ್ನು ಇಟ್ಟುಕೊಂಡು ಆಡಿಸುವಂತಹ ಪ್ರಾಚೀನಕಾಲದ ಕೆಲವು ಉಲ್ಲೇಖನಗಳನ್ನು ವಿವರಿಸುತ್ತೇವೆ. ಗುಹಾಂತರದೇವಾಲಯಗಳ ಕೆಲವು ವಿಷಯಗಳನ್ನು, ಗಹನವಾದ ವಿಚಾರಗಳನ್ನು ಒಳಗೊಂಡಿದ್ದು, ಇನ್ನೂ ಅನೇಕ ಸಮಸ್ಯೆಗಳು ಇದರ ಹಿನ್ನೆಲೆಯಲ್ಲಿಪರಿಹಾರವನ್ನು ಕಂಡುಕೊಳ್ಳಬೇಕಾದ ದೃಷ್ಟಿಯಿಂದ ನಾವು ನೋಡಬೇಕಾಗಿದೆ. ತೊಗಲುಗೊಂಬೆಯಾಟದ ಪ್ರಸ್ತಾಪವನ್ನು ಮಾಡುವಾಗ ನಮ್ಮ ಶರಣರ ವಚನಗಳಲ್ಲಿ ಅನೇಕ ಕಡೆ ಇದರ ಪ್ರಸ್ತಾಪ ಬರುತ್ತದೆ. ಚನ್ನಬಸವಣ್ಣನ ಒಂದು ವಚನದಲ್ಲಿ ಇವರ ಆಟವನ್ನು ನೇರವಾಗಿ ಪ್ರಸ್ತಾಪ ಮಾಡುತ್ತಾನೆ. ಶರಣ ಕೂಟದಲ್ಲಿ ಇದ್ದಂತಹ ಕಲಿಕೇತ ಬೊಮ್ಮಯ್ಯ ಅವನು ಕಿಳ್ಳಿಕೇತ ಆಗಿರಬಹುದೆಂಬ ಊಹೆಗಳು ಕೂಡಾ ಕಂಡು ಬರುತ್ತವೆ. ಇದನ್ನು ಗಮನಿಸಿದಾಗ ಜಾನಪದ ಕಲೆಗಳಲ್ಲಿ ತೊಗಲುಗೊಂಬೆಯಾಟ ಬಹಳ ಶ್ರೇಷ್ಟಮಟ್ಟದ ಕಲೆಯಾಗಿದೆ. ನಮ್ಮ ಪ್ರದರ್ಶಕ ಕಲೆಗಳ ಸಾಲಿನಲ್ಲಿ ಇದರ ಪ್ರದರ್ಶಕ ತಂತ್ರಗಳು ಏನಿವೆಯೇ ಇವುಗಳನ್ನು ನಾವು ಸರಿಯಾದಂತಹ ರೀತಿಯಲ್ಲಿ ಬೆಳೆಸಿಕೊಂಡು ಅನೇಕ ಆಧುನಿಕ ವಿಷಯಗಳನ್ನು ತರಲು ಸಾಧ್ಯವಿದೆ. ಬೇರೆ ಕಲೆಗಳು ಹೆಚ್ಚು ಬೆಳೆಯಲಿಲ್ಲ. ನಮ್ಮ ಯಕ್ಷಗಾನ ಕಲೆಯಾಗಲಿ, ದೊಡ್ಡಾಟವಾಗಲಿ, ಸೂತ್ರಗೊಂಬೆಯಾಟವಾಗಲಿ, ಅವು ಯಾವ ರೂಪದಲ್ಲಿ ಇದ್ದವೋ ಅವು ಅವೇ ರೂಪದಲ್ಲಿ ಇವೆ. ಆದರೆ ಈ ತೊಗಲುಗೊಂಬೆಯಾಟ ವೃತ್ತಿಯ ಕಲೆಯಾಗಿ ಬೆಳೆದು ಬಂದಿರುವುದರಿಂದ ಈ ಕಲಾವಿದರು ಯಾವ ಯಾವ ರೀತಿಯಲ್ಲಿ ಜನರ ಮನಸ್ಸನ್ನು ಗೆದ್ದುಕೊಳ್ಳಬಹುದೋ ಅಂತಹ ಎಲ್ಲಾ ತಂತ್ರಗಳನ್ನು ಮಾಡಿಕೊಂಡು ಬಂದಿವೆ. ಒಂದು ಕಾಲಕ್ಕೆ ಇದು ಸುಪ್ತಚಿತ್ರ ರೂಪದಲ್ಲಿ ಇದ್ದ ಕಲೆಯಾಗಿದ್ದು, ಅನಂತರ ಕ್ರಮೇಣ ಕೈಕಾಲುಗಳನ್ನು ಆಡಿಸುವ ಗೊಂಬೆಗಳು ಪ್ರವೇಶ ಮಾಡಿದವು. ಆ ಮೇಲೆ ಯಕ್ಷಗಾನದ ವಸ್ತು, ತಂತ್ರ, ಸಂಗೀತವನ್ನು ಬಳಸಿಕೊಂಡ ಮೇಲೆ ಇದರ ವೈವಿಧ್ಯ ಹೆಚ್ಚಾಗುತ್ತಾ ಬಂತು. ಎರಡೂ ರೂಪಗಳನ್ನು ನಾವು ಕರ್ನಾಟಕದಲ್ಲಿ ಗುರುತಿಸುತ್ತೇವೆ. ಒಂದು ಯಕ್ಷಗಾನದ ರೂಪದಲ್ಲಿ ಇರತಕ್ಕಂತಹ ಗೊಂಬೆಗಳು. ಇನ್ನೊಂದೆಡೆ ಲಾವಣಿಗಳನ್ನು, ಕಥನ ಕಾವ್ಯಗಳನ್ನು ದೀಘಕಾವ್ಯಗಳನ್ನು ರಾಮಾಯಣ, ಮಹಾಭಾರತದ ಕಾವ್ಯಗಳನ್ನು ಆಧಾರವಾಗಿಟ್ಟುಕೊಂಡು ಆಡುವಂಥ ಗೊಂಬೆಗಳು, ಇವುಗಳನ್ನು ಕುರಿತು ನಾವು ಅಧ್ಯಯನವನ್ನು ಮಾಡುವಾಗ ಯಾವುದು ಪ್ರಾಚೀನ? ಯಾವುದು ಮೂಲ? ಯಾವುದರಿಂದ ಯಾವುದು ಬೆಳೆಯಿತು? ಅಥವಾ ಎರಡು ರೂಪಗಳು ಬೇರೆ ಬೇರೆಯಾಗಿ ಬೆಳೆದುಬಂದವೋ? ಇಂತಹ ವಿಚಾರಗಳನ್ನು ಕೂಡಾ ನಾವು ವಿಚಾರಮಾಡಬೇಕಾದ ಅವಶ್ಯಕತೆ ಬರುತ್ತದೆ.

ತೊಗಲು ಗೊಂಬೆಯಾಟದ ಅತ್ಯಂತ ಅದ್ಭುತ ಸಾಧನೆ ಚಿತ್ರಗಾರಿಕೆ, ಹಳೆಯ ಕಾಲದ ಗೊಂಬೆಗಳು ಈಗ ಬಹುಮಟ್ಟಿಗೆ ಪಾಶ್ಚಾತ್ಯದೇಶಗಳನ್ನು ಸೇರಿಕೊಂಡಿವೆ. ಹೊಸ ಗುಂಪುಗಳನ್ನು ಹಾಗೂ ಹಳೆಯ ಗುಂಪುಗಳನ್ನು ನಾವು ಎರಡೂ ಹೋಲಿಸಿ ನೋಡಿದರೆ ಹಳೆಯ ಗುಂಪುಗಳಲ್ಲಿ ಕಂಡುಬರುವಂತಹ ಆ ಕಲೆಗಾರಿಕೆ ಒಂದು ಸಂಪ್ರದಾಯಕ ಶೈಲಿಯ ಚಿತ್ರಕತೆಯನ್ನು ಗುರುತಿಸಿ ಬಹುಶಃ ಈ ಗೊಂಬೆಗಳ ತಯಾರಿಕೆಯನ್ನು ಒಂದು ಪ್ರತ್ಯೇಕವಾದಂಥ ಉದ್ದಿಮೆಯನ್ನಾಗಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ನಾನು ಮನಗಂಡಿದ್ದೇನೆ. ಗೊಂಬೆಗಳನ್ನು ಮಾಡುವವರು ಕಲಾವಿದರಿರುತ್ತಾರೆ. ಆ ಕಲಾವಿದರಿಗೆ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ ಆ ಹಳೆಯ ಪರಂಪರೆಯಲ್ಲಿಯ ಆ ಮೂಲ ವರ್ಣಗಳನ್ನು ಬಳಸಿ, ಅದರ ವಿಶಿಷ್ಟವಾದ ಆಕೃತಿಗಳನ್ನು ಅಭ್ಯಾಸಮಾಡಿ ಇಂಥ ಚಿತ್ರಕಲೆಗಳು ಬೆಳೆದುಬರುವಂತಹ ಅವಕಾಶ ಮಾಡಿಕೊಡುವುದು ಕೂಡಾ ಬಹಳ ಮುಖ್ಯವಾದದ್ದು. ಅತ್ಯಂತ ಪ್ರಮುಖವಾದ ಕಲಾವಿದನ ಸ್ಥಾನವನ್ನುಕೂಡಾ ನಾವು ಮರೆಯಬಾರದು. ಹಿರಿಯ ಕಲಾವಿದರ ಪರಂಪರೆಯಲ್ಲಿ ಸೇರಿದಂತಹ ದ್ರಾವಿಡ ಪೀಳಿಗೆಯ ಕಲಾವಿದರು ದಾರಿ ತಪ್ಪಿದಂತೆ ತಮ್ಮ ಮೂಲಕಲೆಯನ್ನು ಉಳಿಸಿಕೊಳ್ಳುವ ಅವಕಾಶವನ್ನು ಕೊಡಬೇಕಾದದು ತುಂಬ ಅಗತ್ಯ. ಈ ಕಲಾವಿದರ ಹಸ್ತಪ್ರತಿಗಳನ್ನು ಸಂಗ್ರಹಮಾಡಿ, ವಿಶ್ವವಿದ್ಯಾಲಯದ ಅಧ್ಯಯನ ಪೀಠಗಳು, ನಮ್ಮ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್ತು ಈ ಬಗ್ಗೆ ಗಂಭೀರವಾಗಿ ವಿಚಾರಿಸಬೇಕು. ಯಾಕೆಂದರೆ ತಲೆಮಾರಿನಿಂದ ಬಂದಂತ ಕೃತಿಗಳಲ್ಲಿಪ್ರಾಚೀನ ಯಕ್ಷಗಾನ ಕಾವ್ಯಗಳ ಮೂಲ ರೂಪಗಳು ಅಚ್ಚಳಿಯದೇ ಉಳಿದುಕೊಂಡು ಬಂದಿವೆ. ಅವುಗಳನ್ನು ಸರಿಯಾದ ವೈಜ್ಞಾನಿಕ ರೀತಿಯಲ್ಲಿ ಶಾಸ್ತ್ರೀಯವಾಗಿ ಸಂಪಾದಿಸಿ ಸಂಗ್ರಹಿಸಿಡಬೇಕಾದ ಅವಶ್ಯಕತೆಯನ್ನು ನಾವುಈ ಸಂದರ್ಭದಲ್ಲಿ ಗಮನಿಸಬೇಕು. ಇವತ್ತು ಇಲ್ಲಿ ನಡೆದಿರುವ ಈ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳನ್ನು ಗಮನಿಸಿ, ಮುಂದಿನ ಒಂದು ಯೋಜನೆಯನ್ನು ರೂಪಿಸಿಕೊಳ್ಳುವುದರ ಮೂಲಕ ಈ ತೊಗಲುಗೊಂಬೆಯಾಟದ ಕಲೆಗೆ ನ್ಯಾಯವನ್ನು ದೊರಕಿಸಿದಂತಾಗುತ್ತದೆಂದು ಭಾವಿಸುತ್ತೇನೆ.