ಇಂತೀ ಸರ್ವ ಮಂತ್ರ ದೇವತಾ ಮಯವಾದ ಶಿವಚಕ್ರವೆಂಬುದು ಶಿವತತ್ತ್ವದ ನಿಜವಾಸವೆನಿಸಿ, ಶಿವಶರಣರಲ್ಲಿ ಅಂತರ್ಗತವಾಗಿರ್ಪುದಾ ಶಿವತತ್ತ್ವವೇ ನಾದಲಿಂಗ, ಬಿಂದುಪೀಠ, ತೋಜೋಮೂರ್ತಿಯಾಗಿ ಆದ್ಯಾಂತರಹಿತವೆನಿಸಿ, ಸ್ಥೂಲ, ಸೂಕ್ಷ್ಮ ಭರಿತನಾಗಿ ಶಿವಶರಣರಲ್ಲಿ ಕರತಳಮಳಕವಾಗಿ ಪ್ರಕಾಶಿಸುತ್ತಿರ್ಪ ಮಹಾಲಿಂಗಾಕಾರವಾಗಿರ್ಪುದು. ಆ ಲಿಂಗ ಲಕ್ಷಣವ ಉದ್ಧರಿಸುವ ಭೇದವೆಂತೆಂದೊಡೆ:

ಶಿವಾಗಮ ಪ್ರಮಾಣಂಗಳಿಂ ವಿಸ್ತರಿಸಲಾಯಿತು. ಅದೆಂತೆಂದೊಡೆ, ಪೂರ್ವೋಕ್ತ ವಿಧಾನದಂತೆ ರಾಜಾನ್ನದ ಹಿಟ್ಟಿನಲ್ಲಿ ಅದ್ದಲ್ಪಟ್ಟು ಸೂತ್ರದಿಂ ಪೂರ್ವಾಪರವಾಗಿ ಹದಿನೆಂಟು ಸೂತ್ರಂಗಳಂ. ದಕ್ಷಿನೋತ್ತರವಾಗಿ ಹದಿನೆಂಟು ಸೂತ್ರಂಗಳಂ ಮಿಡಿಯಲು ಪೂರ್ವಾಪರ ದಕ್ಷಿಣೋತ್ತರಮುಖವಾಗಿ ಹದಿನೇಳು ಪಂಕ್ತಿಗಳುಳ್ಳ ಶಿವಲಿಂಗಾಕಾರವಾಹುದು.

ಆ ಲಿಂಗದ ಷಡ್ ಕ್ರಮ: ಅಧಃ ಪೀಠಿಕೆ ಎಂದು ಅಧಃ ಕಂಜವೆಂದು, ಕಂಠವೆಂದು (ಕಂಠವೆಂಬ ಶಬ್ಧಸ್ಥಾನಕ್ಕೆ ಮತ್ತೊಂದು ವೃತ್ತವೆಂಬ ನಾಮ ಸಲ್ಲುವುದು) ಊರ್ಧ್ವಬ್ಜವೆಂದು, ಊರ್ಧ್ವಪೀಠಿಕೆಯೆಂದು, ಆಜ್ಯಪ್ರದಾರಿಕೆಯಂದು, ಶಿವಲಿಂಗದ ಪೀಠಿದ ಕೆಳಗಣ ನಾಲ್ಕು ಕೋಷ್ಠ ಸ್ಥಾನ ಮೊದಲಾಗಿ ಶಿವಲಿಂಗಾಕಾರದ ಮೊದಲ ಪಂಕ್ತಿಯ ನಾಲ್ಕು ಕೋಷ್ಠಸ್ಥಾನ ಕಡೆಯಾಗಿ ಕ್ರಮದಿಂ ಷಡಾಂಗಂಗಳು ಹೇಳಲ್ಪಟ್ಟವು. ಇಂತಿವರಲ್ಲಿ ಷಟ್ ಚಕ್ರಾಕಾರ ನ್ಯಾಸಕ್ರಮ:

ಅಧಃಕಂಜಂದಿ ಕೆಳಗಣ ಅಧಃ ಪೀಠಿಕೆಯೇ ಆಧಾರಸ್ಥಾನ, ಅಲ್ಲಿಯ ಚತುಃ ಕೋಷ್ಠಗಳೆ ಚತುಃಪತ್ರ ಅವರಲ್ಲಿ ವ,ಶ,ಷ,ಸ, ಎಂಬ ನಾಲ್ಕಕ್ಷರಂಗಳು, ಆ ಆಧಾರದಿಂ ಮೇಲಣ ಅಧಃ ಕಂಜವೇ ಸ್ವಾದಿಷ್ಟ ಸ್ಥಾನ ಅಲ್ಲಿಯ ಷಟ್ಕೋಷ್ಠಂಗಳೇ ಷಡ್ದಳ, ಅದರಲ್ಲಿ ಬ, ಭ, ಮ, ಯ, ರ, ಲ ಎಂಬ ಷಡಾಕ್ಷರಂಗಳಂ. ಅದರಿಂದಂ ಮ್ಯಾಲಣ ವೃತ್ತವೇ ಮಣಿಪೂರಕ ಸ್ಥಾನ. ಅಲ್ಲಿಯ ದಶ ಕೋಷ್ಟಂಗಳೇ ದಶದಳ. ಅವರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರಂಗಳಂ, ಅದರಿಂ ಮೇಲಣ ಊರ್ಧ್ವ ಕಂಜವೆಂಬ ನಾಮವನುಳ್ಳ ಹೃದಯ ಸ್ಥಾನದಲ್ಲಿಯ ದ್ವಾದಶ ಕೋಷ್ಠಂಗಳೇ ದ್ವಾದಶದಳ. ಅವರಲ್ಲಿ ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ, ಠ ಎಂಬ ದ್ವಾದಶಾಕ್ಷರಂಗಳಂ, ಅದರಿಂದಂ ಮೇಲಣ ಊರ್ಧ್ವ ಪೀಠಿಕೆಯೇ ಕಂಠಸ್ಥಾನ, ಅಲ್ಲಿಯ ಷೋಡಶಕೋಷ್ಟಂಗಳೇ ಷೋಡಶದಳ. ಅವರಲ್ಲಿ ಅ, ಆ, ಇ, ಈ, ಟ, ಟಾ, ರು, ರೂ, ಲು, ಲೂ, ಎ, ಐ, ಓ, ಔ, ಅಂ, ಆಃ, ಎಂಬ ಷೋಡಕ್ಷರಂಗಳಂ, ಅದರಿಂ ಮೇಲಣ, ಆಜ್ಯಪ್ರದಾರಿಕೆ ಎಂಬ ಆಜ್ಞಾಚಕ್ರದಲ್ಲಿಯ ನಾಲ್ಕು ಕೋಷ್ಠಂಗಳ ಮಧ್ಯದ ಎರಡು ದಳಂಗಳಲ್ಲಿ ಹಂ ಸಾ ಎಂಬಕ್ಷರ ದ್ವಯಂಗಳಂ. ಅಂತಲ್ಲದೆ, ಹಂ, ಕ್ಷಂ, ಎಂಬ ದ್ವವರ್ಣಂಗಳಾದಡೂ, ನ್ಯಾಸವಾ ಮಾಡಿದ ನಂತರದಲ್ಲಿ.

ಕುಟಿಲೆ, ಕುಂಡಲಿತರನಾದ ಪರಬಿಂದು, ಪರವಿದ್ಯೆ, ಶಬ್ದತತ್ತ್ವ, ಶಬ್ದಬ್ರಹ್ಮ, ಶಿವತತ್ತ್ವ, ಷಡ್ವಿಧಬೀಜ, ಶಿವಲಿಂಗಪೀಠ, ಯೋಗಪೀಠ, ಮಂತ್ರಪೀಠ, ಮ್ಯೊಮಶಕ್ತಿ, ವಿದ್ಯಾಶಕ್ತಿ, ವಾಗೀಶ್ವರಿ, ಅನಾಹತೆ, ಅಮೋಘ, ವಾಕುಳೆ – ಎಂಬಿವೇ ಬಿಂದು ಸೂತ್ರಂಗಳು. ಆ ಬಿಂದು ಸೂತ್ರಂಗಳೇ ಊರ್ಧ್ವ ಪ್ರದೇಶವಾದ ಹದಿನೆಂಟು ರೇಖೆಗಳು, ಬಳಿಕ ಕಾರಣ ಶರೀರಿ, ಸಮೇಷ್ಠ್ಯಾಭಿಮಾನಿ, ಆಜ್ಞೊಪಹಿತ, ಚೈತನ್ಯ, ಕಾರಣೋಪಾಧಿಕ, ಮಾಯೋಪಾಧಿಕ, ಮಾಯಾಭಾಸ, ಮಾಯಾವಿಜಯ ಜಗದ್ಯೋಗಿ, ಆನಂದಮಯ, ಅಕ್ಷರ, ಅವ್ಯಕ್ತ, ಅವ್ಯಾಕೃತ, ಸಬಲ ಬ್ರಹ್ಮ, ಸುಗುಣಬ್ರಹ್ಮ, ಪರಮ, ಪರದೇವತ, ತತ್ವದ ಮುಖ್ಯಾರ್ಥರೆಂಬಿವರೇ, ಆ ರೇಖೆಗಳ ಮಧ್ಯದ ಭವನ ಸ್ವರೂಪವೆಂದರಿವುದು.

ಬಳಿಕಾ ಭವನಂಗಳ ಮಧ್ಯದ ಏಕಪಂಚ ಸ್ವರ್ಣಂಗಳೇ ರುದ್ರಮೂರ್ತಿ, ಬೀಜಂಗಳೆಂಬದಕ್ಕರ್ದೊದಾಹರಣವು. ಶ್ರೀಕಂಠ ಅನಂತ, ಸೂಕ್ಷ್ಮ, ತ್ರಿಮೂರ್ತಿ, ಅಮರೇಶ್ವರ, ಅರ್ಘೇಶ, ಭಾರಭೂತಿ, ದಿತೀಶ, ಸ್ಥಾಣುಕ, ಹರ, ಚಂಡೇಶ, ಜಾತುಕ, ಸದ್ಯೋಜಾತ, ಅನುಗ್ರಹೇಶ್ವರ, ಅಕ್ರೂರ, ಮಹಸೇನ ಎಂಬ ಹದಿನಾರು ನಾಮವನುಳ್ಳ ರುದ್ರಮೂರ್ತಿಗಳು, ಕಂಠಸ್ಥಾನದ ಹದಿನಾರು ಸ್ವರಾಕ್ಷರ ಮೂರ್ತಿಗಳೆಂದರಿವುದು.

ಮರಳಿ ವಿಕಲಾಕ್ಷರಾಧಿ ದೇವತೆಗಳ ವಿವರ : ಕ್ರೋಧೀಶ, ಚಂಡೇಶ, ಪಂಚಾಂತಕ, ಶಿಮೋತ್ತಮ, ಏಕರುದ್ರ, ಕೂರ್ಮ, ಏಕನೇತ್ರ, ಚತುರಾನನ, ಅಜೇಶ, ಸರ್ವಸೋಮೇಶ, ಲಾಂಗುಲಿ ಎಂಬ ದ್ವಾದಶ ರುದ್ರಮೂರ್ತಿ, ಹನಾಹತಾಕ್ಷರ ಸ್ವರೂಪವೆಂದರಿದು ದಾರುಕ, ಅರ್ಧನಾರೀಶ್ವರ, ಉಮಾಕಾಂತ, ಆಷಾಡಿ, ದಂಡಿ ಅತ್ರಿರುದ್ರ, ಮೀನರುದ್ರ, ಮೇಷರುದ್ರ, ಲೋಹಿತ, ಶಿಬಿ, ಎಂಬ ದಶರುದ್ರು, ಮಣಿಪುರಾಕ್ಷರ ಸ್ವರೂಪವೆಂದರಿವುದು, ಸಕಲಾಂಡ, ದ್ವಿಲಂಡ, ಮಹಾಕಾಳ, ಕಪಾಲಿ, ಭುಜಂಗೇಶ ಪೀನಾಕೀಶ, ಎಂಬಾರು ರುದ್ರರು ಸ್ವಾದಿಷ್ಠಾನಕ್ಷರ ಸ್ವರೂಪವೆಂದರಿವುದು, ಖಡ್ಗೀಶ, ಬಕ, ಶ್ವೇತ, ಭೃಂಗೀಶರೆಂಬ ನಾಲ್ವರು ರುದ್ರರು, ಆಧಾರಾಕ್ಷಕ ಸ್ವರೂಪವೆಂದರಿವುದು. ಲಕುಲೀಶ ಶಿವರೆಂಬ ಈರ್ವರು ರುದ್ರರು, ಆಜ್ಞಾಚಕ್ರಾಕ್ಷರ ಸ್ವರೂಪವೆಂದರಿವುದು. ಸಂವರ್ತಕನೆಂಬಾ ರುದ್ರನೇ ಶಿವಾಕ್ಷರ ಸ್ವರೂಪನೆಂದರಿವುದು. ಇಂತಿ ಸಕಲ ವಿಕಲಾಕ್ಷರಂಗಳೆಂಬ ಏಕಪಂಚ ಸದ್ವರ್ಣಂಗಳು.

ತ್ರಿಶೂಲ ಕಪಲಾಂಗಳಂ ಧರಿಸಿ ರಕ್ತ ವರ್ಣದ ಸ್ವರೂಪವನ್ನುಳ್ಳ ಏಕಪಂಚಾ ಸದ್ರೂದ್ರ ಬೀಜಂಗಳಾದ ಕಾರಣ ಈ ವರ್ಣ ಪೂರ್ವಕವಾದ ಷಟ್ ಚಕ್ರಂಗಳು, ಶಿವ ಚಕ್ರಂಗಳೆಂದರಿವುದು. ಈ ಷಟ್ ಚಕ್ರಲಿತ್ತವಾದ ಏಕಪಂಚಾಸದ್ರುದ್ರಾಭಿದಾನವನುಳ್ಳ ವರ್ಣಂಗಳು ಶಿವಮಂತ್ರಗಳನ್ನುಚ್ಚರಿಸುವಲ್ಲಿ ಶಿವಬೀಜಂಗಳಾಗಿ, ಶಕ್ತಿ ಬೀಜಂಗಳಾಗಿರಹ ಕಾರಣ ಪೂರ್ವೊಕ್ತ ವಿಧಾನದಂತೆ ಆಧಾರಾಧಿ ಪಂಚ ಚಕ್ರಂಗಳಲ್ಲಿ ಅಕ್ಷರ ನ್ಯಾಸನ ಮಾಡಿ ಶೂನ್ಯಾಕಾರದೆಡೆ ಬಲದ ಮನೆಗಳಲ್ಲಿ ಕ್ಷಕಾರ ಳಕಾರಂಗಳಂ ಬರೆಯಲು ಏಕಪಂಚಾ ಸಚ್ಚಕ್ತಿ ಬೀಜಂಗಳೆಂಬುದಕ್ಕೆ ಅರ್ಥೋದಾಹರಣೆ, ಪೂರ್ಣೊದರಿ, ವಿರಜೆ, ಶಾಲ್ಮಲಿ, ಲೋಲಾಕ್ಷಿ, ವರ್ತುಳಾಕ್ಷಿ, ದೀರ್ಘಾಗ್ರಣಿ, ಧೀರ್ಘಮುಖಿ, ಗೋಮುಖಿ, ದೀರ್ಘಜಿಹ್ವೆ, ಕುಂಡೋಧರಿ, ಊರ್ಧ್ವಕೇಶಿ, ವಿಕೃತಮುಖಿ, ಜ್ವಾಲಾಮುಖಿ, ಉಲ್ಕಮುಖಿ, ವಿದ್ಯಾಮುಖಿ ಎಂಬ ಷೋಡಶ ರುದ್ರ ಶಕ್ತಿಯರು ಕಂಠಸ್ಥಾನದ ಸ್ವರಾಕ್ಷರ ಸ್ವರೂಪಿಯರೆಂದರಿವುದು.

ಮರಳಿ ವಿಕಲಾಕ್ಷರ ರುದ್ರ ಶಕ್ತಿಯರ ವಿವರ: ಮಹಾಕಾಳಿ, ಸರಸ್ವತಿ, ಗೌರಿ, ಮಂತ್ರಶಕ್ತಿ, ಆತ್ಮಶಕ್ತಿ, ಭೂತಮಾತೆ, ಲಂಬೋದರಿ, ದ್ರಾವಿಣಿ, ನಗರಿ, ಖೇಚರಿ, ಮಂಜರಿ, ರೂಪಿಣಿ – ಎಂಬ ದ್ವಾದಶ ಶಕ್ತಿಯರು ಅನಾಹತಾಕ್ಷರ ಸ್ವರೂಪಿಯರೆಂದರಿವುದು. ವಿರಜೆ, ಕಾಲೋಧರಿ, ಪೂತನೆ, ಭದ್ರಕಾಳಿ, ಯೋಗಿಣಿ, ಶಂಕಿನಿ, ಘರ್ಜನಿ, ಕಾಳಾರಾತ್ರಿ, ಕೂರ್ಧನಿ, ಕಪರ್ಧನಿ, ಎಂಬಾ ದಶ ಶಕ್ತಿಯರು, ಮಣಿಪೂರಕಾಕ್ಷರ ಸ್ವರೂಪಿಯರೆಂದರಿವುದು. ವಾಗ್ಮೆಯೆ, ಜಯೆ, ಸುಮುಖಿ, ಈಶ್ವರಿ, ರೇವತಿ, ಮಾಧವಿ, ಎಂಬಾ ಷಟ್ ಶಕ್ತಿಯರು ಸ್ವಾಧಿಷ್ಠಾನಕ್ಷರ ಸ್ವರೂಪಿಯರೆಂದರಿವುದು. ವಾರುಣೀ, ವಾಯಾವಿ, ರಕ್ಷೊವಧಾರಿಣಿ, ಸಹಜೆ ಎಂಬಾ ನಾಲ್ವರು ಶಕ್ತಿಯರು ಆಧಾರಕ್ಷರ ಸ್ವರೂಪಿಯರೆಂದರಿವುದು. ಲಕ್ಷ್ಮಿ, ವ್ಯಾಪಿ ನಿಯರೆಂಬುಭಯ ಶಕ್ತಿಯರು ಆಜ್ಞಾಚಕ್ರಾಕ್ಷರ ಸ್ವರೂಪಿಯರೆಂದರಿವುದು. ಮಾಯಾನ್ವಿತೆಯೆಂಬಾ ಶಕ್ತಿಯೇ ವಿದ್ಯಾಬೀಜ ಸ್ವರೂಪಿಯಂದರಿವುದು. ಸಿಂಧೂರದೋಪಾಧಿಯ ಕೆಂಪು ವರ್ಣದ ಶರೀರವನುಳ್ಳ ಕನೈದಿಲು ಕಪಾಳಂಗಳಿಂದಲಕರಿಸಲ್ಪಟ್ಟ ಹಸ್ತಂಗಳುಳ್ಳ ಐವತ್ತೊಂದು ಶಕ್ತಿದೇವತೆಯರು ಐವತ್ತೊಂದು ರುದ್ರಾಂಗ ಬೀಜಂಗಳ ಪೀಠದಲ್ಲಿ ಇರುತ್ತಿಹರು. ಮತ್ತಂ|| ಹಿಂದಣ ಚಕ್ರೋದ್ಧಾರಣೆ ಪಟಲದಲ್ಲಿ ಹ್ಯಾಂಗೆ ಕಲ್ಪಿಸಿಹವು ಹಾಂಗೆ ರುದ್ರರಂ, ರುದ್ರ ಶಕ್ತಿಯರಂ ಕಲ್ಪಿಸಿಹುದು.

ಇನ್ನು ಮಂತ್ರಂನ್ಯಾಸಃ ಓಂಕಾರ ಊರ್ಧೈ ತ್ರಿಕೋಷ್ಠದೊಳು ಅ.ಟ,ಮ, ಎಂಬ ಮಂತ್ರವನು, ಅದರೂರ್ಧ್ವ ತ್ರಿಕೋಷ್ಠದೊಳು ಬಸವ ಎಂಬ ಮಂತ್ರವನು, ಅದರ ಮ್ಯಾಲಣ ಕೋಷ್ಠದೊಳು ಕ್ಷಕಾರ ಮಂತ್ರವನು, ಅದರೊರ್ಧ್ವ ಕೋಷ್ಠದೊಳು ಹ ಕಾರ ಮಂತ್ರವನು, ಸಾಯಂಬುದಂ ಬರೆದಿರ್ದದರ ಊರ್ಧ್ವ ತ್ರಿಕೋಷ್ಠದೊಳು ಕ್ರಮದಿಂ ಹ್ರಾಂ, ಹ್ರಿಂ, ಹ್ರೂಂ, ಎಂಬ ತ್ರಿಮಂತ್ರಗಳನು ಹಂ ಎಂಬುದಂ ಬರೆದಿರ್ದದರ ಊರ್ಧ್ವತ್ರಿಕೋಷ್ಠದೊಳು ಹ್ರೃಂ ಹ್ರಾಂ, ಹ್ರಃ ಎಂಬಾ ತ್ರಿಮಂತ್ರಗಳಂ ನ್ಯಾಸವ ಮಾಡಲಿವು ಶಿವಾಂಗ ಮಂತ್ರಗಳೆನಿಸುವುವು. ಬಳಿಕಾ ಶೂನ್ಯ ತ್ರಯಂಗಳೇ ನೇತ್ರ ಜಿಹ್ವೆಗಳು, ದ್ವಿ ಶೂನ್ಯವೇ ಕರ್ಣಗಳೆಂದರಿವುದು.

ಇನ್ನು ಷಡಾಂಗಗಳಲ್ಲಿ ಷಡಾಂಗಮಂತ್ರಗಳಂ ನ್ಯಾಸಃ ಅಧಃಪೀಠಿಕೆಯಲ್ಲಿ ಓಂ ಹ್ರಾಂ ಹೃದಯಾಯನಮಃ ಎಂಬ ಹೃದಯ ಮಂತ್ರವನು, ಅಧಃ ಕಂಜದಲ್ಲಿ ಓಂ, ಹ್ರಿಂ ಸಿರಸೇ ಸ್ವಹ ಎಂಬ ಶಿರೋಮಂತ್ರವನು, ಕಂಠನ್ಯಾಸದಲ್ಲಿ, ಓಂ, ಹ್ರೂಂ, ಶಿಖಾಯವೌಷಟೇ ಎಂಬ ಶಿಖಾಮಂತ್ರವನ್ನೂ, ಊರ್ಧ್ವಕಂಜದಲ್ಲಿ ಓಂ, ಹ್ರೈಂ ಕವಾಚಾಯ ಹೂಂ ಎಂಬ ಕವಚ ಮಂತ್ರವನ್ನು, ಊರ್ಧ್ವ ಪೀಠಿಕೆಯಲ್ಲಿ ಓಂ, ಹ್ರಾಂ, ನೇತ್ರತ್ರಯಾಯ ವೌಷಟೀ ಎಂಬ ನೇತ್ರಮಂತ್ರವನು, ಆಜ್ಯ ಪ್ರದಾರಿಕೆಯಲ್ಲಿ ಓಂ ಹ್ರಂ ಅಸ್ತ್ರಾಯ ಪಟ ಎಂಬ ಅಸ್ತ್ರಯ ಮಂತ್ರವನು, ನ್ಯಾಸವ ಮಾಡುವುದು. ಇನ್ನು ಹಕಾರವನು ಆಜ್ಯ ಪ್ರದಾರಿಕೆಯ ಮೇಲಣಲಿಂಗದಲ್ಲಿ ಓಂಕಾರವ ಆಜ್ಯಪ್ರದಾರಿಕೆಯಲ್ಲಿ ಊರ್ಧ್ವ ಪೀಠಿಕೆಯಿಂದಲು, ಊರ್ಧ್ವಕಂಜ ಮುಟ್ಟಲು ಕ್ರಮದಿಂ ಮಕಾರವನು ವೃತ್ತದಲ್ಲಿ ಉಕಾರವನು ಅಧಃಕಂಜ, ಅಧಃ ಪೀಠಿಕೆಯಲ್ಲಿ ಆಕಾರವನು.

ಇನ್ನು ಷಡಕ್ಷರ ಮಂತ್ರಂನ್ಯಾಸ ಶಿವಲಿಂಗದಲ್ಲಿ ಓಂಕಾರವನು ಶಕ್ತಿಪೀಠದ ಊರ್ಧ್ವ ಪೀಠಿಕೆಯಲ್ಲಿ ಯಕಾರವನು. ಊರ್ಧ್ವ ಕಂಜದಲ್ಲಿ ವಕಾರವನು, ವೃತ್ತಮಧ್ಯದಲ್ಲಿ ಶಿಕಾರವನು, ಅಧಃಕಂಜದಲ್ಲಿ ಮಕಾರವನು, ಅಧಃ ಪೀಠಿಕೆಯಲ್ಲಿ ನಕಾರವನು ನ್ಯಾಸ ಮಾಡುವುದು.

ಇನ್ನು ನಮಃ ಶಿವಾಯನೆಂಬ ಸ್ಥೂಲ ಪಂಚಾಕ್ಷರಿ ಮಂತ್ರವನು, ಕ್ರಮದಿಂ ಆಧಾರಾದಿ ಪಂಚ ಚಕ್ರಂಗಳಲ್ಲಿ ನ್ಯಾಸ ಮಾಡುವುದು. ಇನ್ನು ಮಂತ್ರ ಮೂರ್ತಿ ಬೀಜಾಕ್ಷರಂಗಳಿಗೆ, ಅರ್ಥೋದಾಹರಣೆ ಸುರ್ವಜ್ಞಾತ್ವಾದಿ, ಷಡಂಗ ಶಕ್ತಿಗಳೇ ಅ, ಟ, ಮ, ಬ, ಸ, ವ ಎಂಬ ಮಂತ್ರಾಕ್ಷರ ಸ್ವರೂಪವೆಂದರಿವುದು. ಶಿವಾದಿ ಶಕ್ತಿಗಳೇ ಕ್ಷಕಾರ, ಹಕಾರ, ಮಂತ್ರಾಕ್ಷರ ಸ್ವರೂಪವೆಂದರಿವುದು, ಷಡ್ಬ್ರಹ್ಮವೇ ಷಡಂಗ ಮಂತ್ರ ಸ್ವರೂಪವೆಂದರಿವುದು, ಸರ್ವಜ್ಞತ್ವ, ಸರ್ವೇಶ್ವರತ್ವ, ಸರ್ವಾಣಿಯಂತ್ರತ್ವ, ಸರ್ವಾಂತರ್ಯಾಮಿತ್ವ, ಸರ್ವಾತ್ಮಕತ್ವ, ಸರ್ವಶಕ್ತಿತ್ವ ಎಂಬಾರು ಷಡಾಕ್ಷರ ಮಂತ್ರಸ್ವರೂಪವೆಂದರಿವುದು. ಉಪಾದಾನತ್ವ, ಅನುಪ್ರವೇಶತ್ವ, ನಿಯಮತತ್ತ್ವ, ರುದ್ರತ್ವ, ಶೃತ್ಯಾಚಾರ್ಯತ್ವ ಎಂಬ ಪಂಚಕವು ಸ್ಥೂಲ ಪಂಚಾಕ್ಷರಿ ಸ್ವರೂಪವೆಂದರಿವುದು. ಚಿತ್ಪ್ರಕಾಶತ್ವವೇ ಕ್ಷಳಾಕ್ಷರ ಸ್ವರೂಪವೆಂದರಿವುದು.

ಇನ್ನು ಷಡ್ವಿಧನ್ಯಾಸ ಚತುರ್ವಣವನುಳ್ಳ ಅಧಃ ಪೀಠಿಕೆಯಲ್ಲಿ ಕಾಲಾಗ್ನಿ ರುದ್ರ ಭುವನ ಮೊದಲಾದ ಅನಾಶ್ರಿತ, ಭುವನಕಡೆಯಾದ ಇನ್ನು ಇಪ್ಪತ್ನಾಲ್ಕು ಭುವನಧ್ವವನು ಷಡುವರ್ಣವನುಳ್ಳ ಅಧಃ ಕಂಜದಲ್ಲಿ ವ್ಯೋಮಾದಾಪಿಯೆಂಬ ಪದಾದಿಯಾದ ಎಂಭತ್ತೆಂಟು ಪದಧ್ವವನು ದಶವರ್ಣವನುಳ್ಳ ವೃತ್ತದಲ್ಲಿ ಅಕಾರಾದಿ ಕ್ಷಕಾರಾಂತ್ಯವಾದ ಐವತ್ತೆರಡು ವರ್ಣಧ್ವವನ್ನು ದ್ವಾದಶವರ್ಣವನುಳ್ಳ ಊರ್ಧ್ವ ಕಂಜದಲ್ಲಿ ಈಶಾನ್ಯಾದಿ ಸದ್ಯೋಜಾತ ಕಡೆಯಾದ ಮೂವತ್ತೆಂಟು ಕಲಾಧ್ವವನು, ಷೋಡಶ ವರ್ಣವನುಳ್ಳ ಊರ್ಧ್ವ ಪೀಠಿಕೆಯಲ್ಲಿ ಶಿವಾದಿ ಪೃಥ್ಯಾಂತಮಾದ ಮೂವತ್ತಾರು ತತ್ತ್ವಧ್ವವನು, ವರ್ಣದ್ವಯವನುಳ್ಳ ಆಜ್ಯಪ್ರದಾರಿಕೆಯಲ್ಲಿ ಸದ್ಯೋಜಾತಾದಿ ಪಂಚಬ್ರಹ್ಮ ಮಂತ್ರವೈದು, ಹೃದಯಾದಿ ಷಡಂಗ ಮಂತ್ರವಾರು, ಇಂತೀ ಏಕಾದಶ ಮಂತ್ರವಾದಿಯಾದ ಮಂತ್ರಧ್ವವನು ನ್ಯಾಸ ಮಾಡುವುದು.

ಇನ್ನು ಏಳು ಕೋಟಿ ಮಹಾಮಂತ್ರಗಳಿಂ ಮಂತ್ರಿಸಲ್ಪಟ್ಟ ಶಿವಲಿಂಗ ಮುಖ, ಕಲಾಶೇಷ, ಕ್ರಮ, ಶಶಿನಿ, ಅಗವ, ಜೇಷ್ಠ, ಮರೀಚಿ, ಜ್ವಾಲಿನಿ ಈ ಐದು ಈಶಾನ್ಯ ಮುಖದ ಕಲೆಗಳು. ತಮ ಮೋಹ, ಜಯ, ನಿದ್ರ, ಮೃತ್ಯು, ಮಾಯೆ, ಭಯೆ, ಜರೆ, ಈ ಎಂಟು ಅಘೋರ ಮುಖದ ಕಲೆಗಳು, ರಾಜ, ರಕ್ಷರತಿ, ಪಾಲ್ಯ, ಕಾಮಿನಿ, ಸಂಜೀವಿನಿ, ಕ್ರಿಯೆ, ವೃದ್ಧಿ, ಛಾಯೆ, ಧಾತ್ರಿ, ಬ್ರಹ್ಮಿಣಿ, ಮೋಹಿನಿ, ಅಭಯೆ, ಈ ಹನ್ನೆರಡು ವಾಮದೇವ ಮುಖದ ಕಲೆಗಳು, ಸಿದ್ಧಿ, ವೃದ್ಧಿ, ಧೃತಿ, ಲಕ್ಷ್ಮೀ, ಮೇದ, ಕಾಂತಿ, ಸ್ವಾದ, ಮತಿ ಈ ಎಂಟು ಸದ್ಯೋಜಾತ ಮುಖದ ಕಲೆಗಳೆಂದು ಅರಿವುದು.

ಇನ್ನೊಂದು ಪ್ರಕಾರ ಶ್ರೀ ಪರಮೇಶ್ವರಂಗೆ ಓಂಕಾರವೇ ಚರ್ಮ, ಏಕಾರವೇ ರಕ್ತ, ಲೂಕಾರವೇ ಮಾಂಸ, ರುಕಾರವೇ ಮೆದಸ್ಸು, ಟಕಾರವೇ ಮಜ್ಜೆ, ಞಕಾರವೇ ಅಸ್ತಿ, ಅಕಾರವೇ ಶುಕ್ಲ, ವಾಯುರಂದ್ರವೇ ಆಕಾರ, ಗುಹ್ಯಾರಂದ್ರವೇ ಅಂ ಕಾರ, ರಸನರಂಧ್ರವೇ ಔಕಾರ, ಪಿಂಗಳನಾದವೇ ಐಕಾರ, ಈಡ ನಾಳವೇ ಲುಕಾರ, ದಕ್ಷಿಣ ನೇತ್ರದ್ವಾರವೇ ರೂಕಾರ, ವಾಮನೇತ್ರದ್ವಾರವೇ ಟಾಕಾರ, ದಕ್ಷಿಣಶ್ರೋತ್ರ ದ್ವಾರವೇ ಈಕಾರ, ವಾಮ ಶ್ರೋತ್ರದ್ವಾರವೇ ಪಕಾರ, ಭಾಳನೇತ್ರದ್ವಾರವೇ ಹ್ರೂಂಕಾರ, ಸುಷುಮ್ನನಾಳವೆ ಹಕಾರ, ಅಪರಾರ್ಧ ಮೂರುವರೆ ಕೋಟಿ ಮಂತ್ರಗಳೇ ಸರ್ವಾಂಗದ ರೋಮಾವಳಿ, ಪೂರ್ವದ ಮೂರುವರೆ ಕೋಟಿ ಮಂತ್ರಗಳೇ ಸ್ಥೂಲದೇಹ, ಏಕಾದಶ ಮಂತ್ರಗಳೇ ಸೂಕ್ಷ್ಮದೇಹ, ಪಂಚಪ್ರಸಾದ ಮಂತ್ರಗಳೇ ಕಾರಣದೇಹ.

ಬಳಿಕಿನ್ನೊಂದು ಪ್ರಕಾರ! ಅಕಾರ ಆ ಕಾರಂಗಳೇ ಮೂರ್ಧ್ನಿ ಲಲಾಂಟಂಗಳು, ಇ ಕಾರ ಈ ಕಾರಂಗಳೆ ದಕ್ಷಿಣ ವಾಮನೇತ್ರಂಗಳು, ಟಕಾರ ಟಾಕರಂಗಳೇ, ದಕ್ಷಿಣ ವಾಮ ಶ್ರೋತ್ರಂಗಳು, ರುರೂಕಾರಂಗಳೇ ದಕ್ಷಿಣ ವಾಮ ನಾಸಪುಟಂಗಳು, ಲುಕಾರ ಲೂಕಾರಂಗಳೇ ದಕ್ಷಿಣ ವಾಮ ಕಪಾಲಂಗಳು, ಎ ಐ ಕಾರಂಗಳೇ ಮೇಲು ಕೆಳಗಣ ದಂತಪಂಕ್ತಿಗಳು, ಓಕಾರ ಔಕಾರಗಳೇ, ಮೇಲು ಕೆಳಗಣ ಓಷ್ಠಂಗಳು, ಅಂಕಾರ ಆಃ ಕಾರಂಗಳೇ ಮೇಲು ಕೆಳಗಣ ವಸಡುಗಳು.

ಇನ್ನೊಂದು ಪ್ರಕಾರ: ಕಾದಿ ಪಂಚಾಕ್ಷರಗಂಳೇ ದಕ್ಷಿಣ ಪಂಚ ಹಸ್ತಂಗಳು, ಚಾದಿ ಪಂಚಾಕ್ಷರಂಗಳೇ ವಾಮ ಪಂಚಹಸ್ತಂಗಳು, ಟಾದಿ ಪಂಚಾಕ್ಷರಂಗಳೇ ದಕ್ಷಿಣ ಪಾದಂಗಳು, ತಾದಿ ಪಂಚಾಕ್ಷರಂಗಳೇ ವಾಮಪಾದಂಗಳು ಪಕಾರವೇ ಉದರ ಫಕಾರವೇ ಬಲದ ಪಾರ್ಶ್ವ, ಬಕಾರವೇ ಎಡದ ಪಾರ್ಶ್ವ, ಭಕಾರವೇ ಸ್ಕಂದ, ಮಕಾರವೇ ಹೃದಯ, ಯಕಾರವಾದಿ ಸಂಕಾರಾಂತ್ಯ ಮಾದಕ್ಷರಂಗಳೇ ತ್ವಗಾದಿ ಸಪ್ತಧಾತುಗಳು, ಹಕಾರವೇ ಆತ್ಮನು, ಳಕಾರವೇ ಶಕ್ತಿ, ಕ್ಷಕಾರವೇ ಪೂಜಕರ ಜನ್ಮಾದಿ ರಿಪು ವಿಷಯವಾದ ಕ್ರೋಧ ರೂಪ ಮಾಗಿರ್ಕ್ಕಂ|

ಇನ್ನು ಅಷ್ಠ ವರ್ಗಾಕ್ಷರ ಲಿಂಗತ್ರಯದ ಸಂಬಂಧ. ಟ, ಇ, ಟ, ಎ, ಒ, ಅಂ, ಈ ಆರು ಪುಲ್ಲಿಂಗ ಸಂಬಂಧ, ಆ, ಈ ಟಾ, ಐ, ಔ, ಆಃ ಈ ಆರು ಸ್ತ್ರೀಲಿಂಗ ಸಂಬಂಧ. ರು ರೂ ಲು ಲೂ ಈ ನಾಲ್ಕು ನಪುಂಸಕ ಲಿಂಗ ಸಂಬಂಧ. ಕ, ಗ, ಜ, ಜ, ಟ, ಡ, ತ, ದ, ಪ, ಬ, ಚ, ಕ್ಷ – ಈ ಹನ್ನೆರಡು ಪುಲ್ಲಿಂಗ ಸಂಬಂಧ. ಖ, ಘ, ಛ ಝ, ಠ, ಢ, ಢ, ಧ, ಫ, ಭ, ತ, ಹ, – ಈ ಹನ್ನೆರಡು ಸ್ತ್ರೀಲಿಂಗ ಸಂಬಂಧ. ಉಳಿದೆಲ್ಲವು ನಪುಂಸಕ ಲಿಂಗ ಸಂಬಂಧ. ಇಂತೀ ಸ್ವರ ವಿಕಲ ವ್ಯಾಪಕವೆಂಬ ತ್ರಿವಿಧ ರೂಪಮಾದಕ್ಷರಂಗಳು, ನಾದಬಿಂದು ಕಲೆ ತ್ರಯ, ಪದತ್ರಯ ತತ್ತ್ವತ್ರಯ ಸಂಬಂಧವಾಗಿರ್ಪುವೆಂದರಿವುದು.

ಇನ್ನು ಅ. ಆ. ಇ – ಈ ಮೂರು ಪೃಥ್ವಿ ಸಂಬಂಧ. ಈ, ಟ, ತಾ ಇವು ಮೂರು ಅಷ್ಟ ಸಂಬಂಧ. ರುರೂಲು ಈ ಮೂರು ಅನ್ನ ಸಂಬಂಧ. ಲೂ ಎ ಙ ಇವು ಮೂರು ವಾಯು ಸಂಬಂಧ. ಒಔಅಂ ಇವು ಮೂರು ಆಕಾಶ ಸಂಬಂಧ ಆಹ ಒಂದೇ ಆತ್ಮ ಸಂಬಂಧ.

ಇನ್ನು ಅವರ್ಗ ಆಕಾಶ ಸಂಬಂಧ, ಶ ವರ್ಗ ಮಾರುತ ಸಂಬಂಧ. ಚವರ್ಗ, ಟ ವರ್ಗಗಳೆರಡು ಅಗ್ನಿ ಸಂಬಂಧ. ತ ವರ್ಗ ಪ ವರ್ಗಂಗಳೆರಡು ಅಪ್ಪು ಸಂಬಂಧ. ಯ ವರ್ಗ, ಶವರ್ಗಂಗಳೆರಡು ಪೃಥ್ವಿ ಸಂಬಂಧವೆಂದರಿವುದು. ಇನ್ನು ಊರ್ಧ್ವ ಪೀಠಿಕೆಯಲ್ಲಿ ನಾಲ್ವತೆಂಟು ಹಂಸ ವೆಂಬೆರಡು, ಹಳಕ್ಷ ಎಂಬವು ಮೂರು ಓಂಕಾರದ ಷಟ್ ಕೃತಿಯಲ್ಲಿ ಐವತ್ತು ಪಂಚಾಕ್ಷರಿ ಅಂತು ಕೂಡಿ ನೂರೆಂಟು ಪ್ರಣವ, ಸೂಸುವವು ಐವತ್ಮೂರು ತುಂಬುವವು ಐವತ್ತೈದು, ಅಂತು ಕೂಡಿ ನೂರೆಂಟು ಪ್ರಣವ ಊರ್ಧ್ವ ಪೀಠಿಕೆಯಲ್ಲಿ ಐವತ್ತೆರಡು ಷಡಾಧಾರವಾರು, ಅಧಃ ಪೀಠಿಕೆಯಲ್ಲಿ ಐವತ್ತು, ಅಂತುಕೊಡಿ ನೂರೆಂಟು ಪ್ರಣವ ಷಡಕ್ಷರಿಯಲ್ಲಿ ಐವತ್ತು ಪಂಚಾಕ್ಷರಿಯಲ್ಲಿ ನಲ್ವತ್ತೆಂಟು, ಷಡಾಕ್ಷರಿ ಪಂಚಾಕ್ಷರಿ ಅಂತು ಕೂಡಿ ನೂರೆಂಟು ಪ್ರಣವ ಇನ್ನು ಬ, ಸ, ವ, ಅ, ಟ, ವ, ಹ, ಕ್ಷ ಎಂಬವು ಅಷ್ಠಾವರಣ ಪ್ರಣವ ಈ ಮಂತ್ರ ಸಂಬಂಧವನ್ನರಿವುದು.

ಇಂತೀ ಸರ್ವ ಕಾರವಣವಪ್ಪ ಮಹಾಲಿಂಗವೇ ಕರಸ್ಥಲದ ಇಷ್ಠಲಿಂಗವೆಂದರಿವುದು ಆ ಶಿವಲಿಂಗ ಷಡ್ಸ್ಥಾನಂಗಳಲ್ಲಿ ಸರ್ವಾಚಾರ ಸಂಪತ್ತಿನ ಸ್ಥಳ, ಕುಳ ಸಂಬಂಧವನರಿವಡೆ ಶೂನ್ಯಲಿಂಗೋದ್ಧರಣೆಯಲ್ಲಿ ನೋಡಿಕೊಂಬುವದು.

ಇನ್ನು ಪೀಠ, ವೃತ್ತ, ಮಧ್ಯ, ಗೋಮುಖ, ವರ್ತುಳ, ನಾಳ, ಗೋಳಕ, ಶಿಖಿ, ಪಶ್ಚಿಮವೆಂಬ ನವಸ್ಥಾನಂಗಳಲ್ಲಿ ಸ್ಥಳ ಕುಳ ಮಂತ್ರ ಸಂಬಂಧವರನರಿವಡೆ ಮುಂದೆ ನವಚಕ್ರದಲ್ಲಿ ವಿಚಾರಿಸಿಕೊಳ್ಳುವುದು.

ಇನ್ನು ಸೃಷ್ಟಿಯ ಕ್ರಮ: ಮತ್ತಂ, ಅನಂತಮೂರ್ತಿಗಳನು, ಅನಂತ ತತ್ವಂಗಳನು ಅನಂತರ ಮಂತ್ರಗಳನು, ಅಖಿಲ ಬ್ರಹ್ಮಾಂಡ ಭುವನ ಭವನಾಶ್ರಿತ ಚರಾಚರಾದಿ ಸಮಸ್ತ ಪ್ರಪಂಚಮಮ ಸೃಜಿಸಿ ಗರ್ಭೀಕರಿಸಿಕೊಂಡು ಅವರ ಲಯಗಮನ ಸ್ಥಿತಿ ಕಾರಣವೆನಿಸಿ, ಅಖಂಡ ಪರಿಪೂರ್ಣ ಗೋಳಾಕಾಕಾರ ತೇಜೋಮೂರ್ತಿಯಾಗಿ ಭಕ್ತಿಲೀಲಾ ವಿನೋದ ಕಾರಣ, ಸುಗುಣ ನಿರ್ಗುಣಾನಂದ ಲೀಲೆಯ ನಟಿಸುತ್ತಿರ್ಪ.

 

ಮಹಾಲಿಂಗೋದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ